Tag: salary

  • ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ – ಎರಡನೇ ಮನೆಗೂ ತೆರಿಗೆ ಪಾವತಿಯಿಂದ ವಿನಾಯಿತಿ

    ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ – ಎರಡನೇ ಮನೆಗೂ ತೆರಿಗೆ ಪಾವತಿಯಿಂದ ವಿನಾಯಿತಿ

    ನವದೆಹಲಿ: ವೇತನ ಪಡೆಯುವ ತೆರಿಗೆದಾರರಿಗೆ 12 ಲಕ್ಷ ರೂ.ವರೆಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಈಗ ತೆರಿಗೆದಾರರು ಹೊಂದಿರುವ ಎರಡನೇ ಮನೆಗೂ (Second Self-Occupied House) ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿದ್ದಾರೆ.

    ಇಲ್ಲಿಯವರೆಗೆ ಒಂದು ಮನೆಗೆ ಮಾತ್ರ ತೆರಿಗೆ (Tax) ವಿನಾಯಿತಿ ಇತ್ತು. ಎರಡನೇ ಮನೆ ಹೊಂದಿದ್ದರೆ ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಎರಡನೇ ಮನೆಗೂ ತೆರಿಗೆ ವಿನಾಯಿತಿ ನೀಡುವ ಮೂಲಕ ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ ಸುದ್ದಿ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಪ್ರವಾಸೋದ್ಯಮಕ್ಕೆ ಉತ್ತೇಜನ – ಹೋಂಸ್ಟೇ ನಿರ್ಮಾಣಕ್ಕೆ ಮುದ್ರಾ ಲೋನ್‌ ವಿಸ್ತರಣೆ

    ಈ ಸೌಲಭ್ಯದಿಂದ ಎರಡು ಮನೆ ಹೊಂದಿರುವವರು ಒಂದನ್ನು ವಾಸಕ್ಕೆ ಮತ್ತೊಂದು ಆಗಾಗ್ಗೆ ಬಂದು ಹೋಗುವ ಪ್ರವಾಸದ ಮನೆಯಾಗಿ ಹೊಂದಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಮಧ್ಯಮ ವರ್ಗಕ್ಕೆ ಬಂಪರ್‌ – 12 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ

    ಹೆಚ್ಚುವರಿಯಾಗಿ ಬಾಡಿಗೆಯ ಮೇಲಿನ ವಾರ್ಷಿಕ ಟಿಡಿಎಸ್ ಮೊತ್ತವನ್ನು 2.40 ಲಕ್ಷ ರೂ.ನಿಂದ 6 ಲಕ್ಷ ರೂ.ಗೆ ಏರಿಸಲಾಗುತ್ತದೆ.

     

  • ಸಂಬಳ ಬೇಕೇ, ಹಾಗಾದ್ರೆ ಕಮೀಷನ್‌ ಕೊಡಿ – ಇಂಧನ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಗೆ ಗುತ್ತಿಗೆದಾರರ ಕಾಟ

    ಸಂಬಳ ಬೇಕೇ, ಹಾಗಾದ್ರೆ ಕಮೀಷನ್‌ ಕೊಡಿ – ಇಂಧನ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಗೆ ಗುತ್ತಿಗೆದಾರರ ಕಾಟ

    ಬೆಂಗಳೂರು: ಇಂಧನ ಇಲಾಖೆಯ (Energy Department) ಹೊರ ಗುತ್ತಿಗೆ ಸಿಬ್ಬಂದಿಗೆ ಏಜೆನ್ಸಿ ಗುತ್ತಿಗೆದಾರರು ಕಿರುಕುಳ ನೀಡುತ್ತಿದ್ದಾರೆ. ತಿಂಗಳ ವೇತನದಲ್ಲಿಯೂ (Salary) ಕಮೀಷನ್‌ (Commission) ಕೇಳುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಇಂಧನ ಇಲಾಖೆಯ ಕೆಪಿಟಿಸಿಎಲ್, ಎಸ್ಕಾಂನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ತಿಂಗಳಿಗೆ ಸಿಗುವುದು 15 ಸಾವಿರ ರೂ. ಅಲ್ಪ ಸಂಬಳದಲ್ಲಿಯೇ ಜೀವನ ಸಾಗಿಸೋದು ಕಷ್ಟ. ಹೀಗಿರುವಾಗ ದುಡ್ಡಿನಲ್ಲಿ ತಿಂಗಳು ತಿಂಗಳು 2 ಸಾವಿರ ರೂ. ನಿಂದ ಹಿಡಿದು 5 ಸಾವಿರದವರೆಗೂ ಕಮೀಷನ್ ಕೇಳುತ್ತಿದ್ದಾರೆ.

    ಸಾಮಾನ್ಯವಾಗಿ ಏಜೆನ್ಸಿ ಅಥವಾ ಗುತ್ತಿಗೆದಾರರಿಗೆ ಸಿಬ್ಬಂದಿಯನ್ನು ನೀಡಿದ್ದಕ್ಕೆ ಸರ್ಕಾರದಿಂದ ಹಣ ಪಾವತಿಯಾಗಿರುತ್ತದೆ. ಆದರೆ ಕೆಲ ಏಜೆನ್ಸಿಯವರು ಸರ್ಕಾರದ ದುಡ್ಡು ಪಡೆದು ನಮ್ಮ ಬಳಿಯೂ ವಸೂಲಿ ಮಾಡುತ್ತಿದ್ದಾರೆ ಎನ್ನುವುದು ಸಿಬ್ಬಂದಿ ಆರೋಪ. ಇದನ್ನೂ ಓದಿ: ಬೆಂಗ್ಳೂರಿಂದ ಕುಂಭಮೇಳಕ್ಕೆ ಹೋಗ್ಬೇಕಾ? – ನಿಮಗಾಗಿಯೇ ಹೊರಡಲಿದೆ ವಿಶೇಷ ರೈಲು

     

    ವಿಚಿತ್ರ ಅಂದರೆ ಈ ಹೊರಗುತ್ತಿಗೆ ನೌಕರರನ್ನು ಒಳಗುತ್ತಿಗೆ ಮಾಡಿಕೊಂಡರೆ ಸರ್ಕಾರದ ಬೊಕ್ಕಸಕ್ಕೆ ಉಳಿತಾಯವಾಗುತ್ತೆ ಎಂದು ಇಲಾಖೆಯೇ ವರದಿ ಕೊಟ್ಟಿದೆ. ಆದರೆ ಸರ್ಕಾರ ಮಾತ್ರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಕಾರ್ಮಿಕ ಸಂಘದ ಬೆಟ್ಟೇಗೌಡ ಪಬ್ಲಿಕ್‌ ಟಿವಿಗೆ ತಿಳಿಸಿದ್ದಾರೆ.

    ಗುತ್ತಿಗೆದಾರರು, ಏಜೆನ್ಸಿ ಪರ ನಿಲ್ಲದೇ ಇಂಧನ ಇಲಾಖೆ ಈ ವಿಚಾರ ದಲ್ಲಿ ಸಿಬ್ಬಂದಿ ಪರ ನಿಲ್ಲಬೇಕಾಗಿದೆ.

  • ಮಂಡ್ಯ| ಎರಡು ತಿಂಗಳಿಂದ ಮೈಶುಗರ್ ನೌಕರರಿಗಿಲ್ಲ ಸಂಬಳ

    ಮಂಡ್ಯ| ಎರಡು ತಿಂಗಳಿಂದ ಮೈಶುಗರ್ ನೌಕರರಿಗಿಲ್ಲ ಸಂಬಳ

    – ವೇತನಕ್ಕಾಗಿ ಹೋರಾಟಕ್ಕಿಳಿದ ನೌಕರರು

    ಮಂಡ್ಯ: ಮೈಶುಗರ್ ಕಾರ್ಖಾನೆ (Mysugar Factory) ಸಕ್ಕರೆ ನಾಡು ಮಂಡ್ಯ ಜನರಿಗೆ ಪ್ರತಿಷ್ಠೆ ಸಂಕೇತ. ಯಾವುದೇ ಚುನಾವಣೆ ಎದುರಾಗಲಿ ರಾಜಕೀಯ ಪಕ್ಷಗಳು ಮೈಶುಗರ್ ಅಸ್ತ್ರ ಪ್ರಯೋಗ ಮಾಡೋದನ್ನು ಮಾತ್ರ ಮರೆಯೋದಿಲ್ಲ. ಕಳೆದ ಎರಡು ದಶಕದಿಂದ ರಾಜ್ಯ ಸರ್ಕಾರ ಕಾರ್ಖಾನೆ ಪುನಶ್ಚೇತನಕ್ಕೆಂದು ನೂರಾರು ಕೋಟಿ ಅನುದಾನ ನೀಡಿದೆ. ಆದರೆ ಇಂದಿಗೂ ರೋಗಗ್ರಸ್ತ ಹಣೆಪಟ್ಟಿಯಿಂದ ಹೊರ ಬಂದಿಲ್ಲ. ಒಂದಲ್ಲೊಂದು ಸಮಸ್ಯೆಗಳಿಂದಲೇ ಸುದ್ದಿಯಾಗುತ್ತಿದ್ದು, ಇದೀಗ ಕಾರ್ಖಾನೆಯ ನೌಕರರು ತಮ್ಮ ಸಂಬಳ ನೀಡುವಂತೆ ಆಗ್ರಹಿಸಿ ಬೀದಿಗೆ ಇಳಿದಿದ್ದಾರೆ.

    ಮೈಶುಗರ್ ಕಾರ್ಖಾನೆಯಲ್ಲಿ 250ಕ್ಕೂ ಹೆಚ್ಚು ನೌಕರರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಡ್ಯ ಮಾತ್ರವಲ್ಲ ಬಿಹಾರ ಸೇರಿದಂತೆ ಹೊರ ರಾಜ್ಯದ ಕಾರ್ಮಿಕರೂ ಕಡಿಮೆ ಸಂಬಳಕ್ಕೆ ಹಗಲಿರುಳು ದುಡಿಯುತ್ತಿದ್ದಾರೆ. ಈ ನೌಕರರಿಗೆ ಕಳೆದ ಎರಡು ತಿಂಗಳಿಂದ ವೇತನ ನೀಡಿಲ್ಲ. ಸಂಬಳ (Salary) ನೀಡುವಂತೆ ಹಲವು ಭಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಮೊದಲೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಾರ್ಮಿಕರು ಇದೀಗ ದಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಆಕ್ರೋಶಗೊಂಡು ಪ್ರತಿಭಟನೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿ ಪುತ್ಥಳಿ ವಿರೂಪಗೊಳಿಸಿದ್ದ ಆರೋಪಿ ಬಂಧನ

    ಇನ್ನು ಮೈಶುಗರ್ ವ್ಯಾಪ್ತಿಯ ಕಬ್ಬು ಸಂಪೂರ್ಣ ಖಾಲಿಯಾಗುವ ಮೊದಲೇ ಕಬ್ಬು ಅರೆಯುವ ಕಾರ್ಯ ಬಂದ್ ಮಾಡಿದ್ದರಿಂದ ಇತ್ತೀಚೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ನೌಕರರು ಆಡಳಿತ ಮಂಡಳಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಗುತ್ತಿಗೆ ಪಡೆದಿರುವ ಆರ್.ಬಿ.ಟೆಕ್ ಏಜೆನ್ಸಿ ಅಧಿಕಾರಿಗಳನ್ನು ಕೇಳಿದರೆ ಕಾರ್ಖಾನೆಯಿಂದ ಹಣ ಬಿಡುಗಡೆಯಾಗಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಮತ್ತೊಂದೆಡೆ ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸೂಚನೆ ನೀಡಿದರೂ ಕೆಲವು ಅಧಿಕಾರಿಗಳು ಸಂಬಳದ ಹಣ ಪಾವತಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಹಾಯುತಿ 2.0 ಸರ್ಕಾರ – ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಇಂದು ಪ್ರಮಾಣವಚನ

  • 6 ತಿಂಗಳಿನಿಂದ ಸಿಕ್ಕಿಲ್ಲ ವೇತನ – ಹಲವು ಇಂದಿರಾ ಕ್ಯಾಂಟೀನ್‌ಗಳಿಗೆ ಬಿತ್ತು ಬೀಗ!

    6 ತಿಂಗಳಿನಿಂದ ಸಿಕ್ಕಿಲ್ಲ ವೇತನ – ಹಲವು ಇಂದಿರಾ ಕ್ಯಾಂಟೀನ್‌ಗಳಿಗೆ ಬಿತ್ತು ಬೀಗ!

    ಬೆಂಗಳೂರು: ಸಿಬ್ಬಂದಿಗೆ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ನಗರದ ಕೆಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ (Indira Canteen) ಊಟ ಸ್ಥಗಿತವಾಗಿದೆ. ಬಡವರ ಹಸಿವು ನೀಗಿಸುವ ಕೆಲ ಇಂದಿರಾ ಕ್ಯಾಂಟೀನ್‌ಗಳು ಮುಚ್ಚಿವೆ.

    ಬುಧವಾರದಿಂದ ಬೆಳಗ್ಗೆ ಉಪಹಾರ, ಮಧ್ಯಾಹ್ನ, ರಾತ್ರಿ ಊಟ ಪೂರೈಕೆ ಸ್ಥಗಿತವಾಗಿದೆ. ಬಡವರ ಹಸಿವು ನೀಗಿಸುವ ಕೆಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಪೂರೈಕೆಯಾಗುತ್ತಿಲ್ಲ. ಇದರಿಂದ ಊಟ ಸಿಗದೇ ಜನ ಹಸಿದ ಹೊಟ್ಟೆಯಲ್ಲಿಯೇ ವಾಪಸ್ ಆಗುತ್ತಿದ್ದಾರೆ. ಕ್ಯಾಂಟೀನ್ ಸಿಬ್ಬಂದಿಗೆ ಆರು ತಿಂಗಳ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರಾಗಿದ್ದಾರೆ. ಇದರಿಂದ ಊಟ ಕೂಡ ಪೂರೈಕೆಯಾಗುತ್ತಿಲ್ಲ. ಇದನ್ನೂ ಓದಿ: ಮತ್ತೆ ಕೋಟ್ಯಧೀಶನಾದ ಮಲೆ ಮಾದಪ್ಪ – 2.43 ಕೋಟಿ ರೂ. ಕಾಣಿಕೆ ಹಣ ಸಂಗ್ರಹ

    ಪಶ್ಚಿಮ ವಲಯದ ಮಲ್ಲೇಶ್ವರಂ (Malleshwaram), ನಂದಿನಿಲೇಔಟ್ ಇಂದಿರಾ ಕಿಚನ್‌ಗಳ ವ್ಯಾಪ್ತಿಯಲ್ಲಿ ಬರುವ ಇಂದಿರಾ ಕ್ಯಾಂಟೀನ್‌ಗಳಿಗೆ ಊಟ ಪೂರೈಕೆಯಾಗುತ್ತಿಲ್ಲ. ನೂರಾರು ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಬಳ ನೀಡಿಲ್ಲ. ಈ ಕಿಚನ್‌ಗಳನ್ನು ಚೆಫ್ ಟಾಕ್ ಕಂಪನಿ ನಿರ್ವಹಣೆ ಮಾಡುತ್ತಿದೆ. ಈ ಕಂಪನಿಗೆ ಬಿಬಿಎಂಪಿ ಹಣ ಪಾವತಿ ಮಾಡಲಿಲ್ಲ. ಪಾಲಿಕೆ, ಚೆಫ್ ಟಾಕ್ ಕಂಪನಿಗೆ ಹಣ ನೀಡದ ಕಾರಣ ಸಿಬ್ಬಂದಿಗೂ ಸಂಬಳ ಸಿಗದೇ ಕಂಗಾಲಾಗಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಮನೋಹರ್‌ ತಹಶೀಲ್ದಾರ್‌ ವಿಧಿವಶ

    ನಗರದ ಯಾವ್ಯಾವ ಇಂದಿರಾ ಕ್ಯಾಂಟೀನ್‌ಗಳಿಗೆ ಬೀಗ?
    ಮಂತ್ರಿ ಮಾಲ್ ರಸ್ತೆ, ಸುಭಾಶ್ ನಗರ, ಮೆಜೆಸ್ಟಿಕ್ (Mejestic) ಮೆಟ್ರೋ ನಿಲ್ದಾಣ ಸಮೀಪ, ಗಾಂಧಿನಗರ, ಅರಮನೆ ನಗರ, ಸರ್ಕಲ್ ಮಾರಮ್ಮ ದೇವಸ್ಥಾನ ಯಶವಂತಪುರ ರಸ್ತೆ, ಮಲ್ಲೇಶ್ವರಂ ಇಂದಿರಾ ಕಿಚನ್‌ಗಳಿಗೆ ಬೀಗ ಬಿದ್ದಿದೆ. ಇದನ್ನೂ ಓದಿ: ಧಾರವಾಡದಲ್ಲಿ ತಾಯಂದಿರಿಂದಲೇ ಮಕ್ಕಳ ಕಿಡ್ನ್ಯಾಪ್‌ – ತಾಯಂದಿರು, ಅವರ ಪ್ರೇಮಿಗಳು ಅರೆಸ್ಟ್‌

    ಉತ್ತರ ಪ್ರದೇಶದ (Uttar Pradesh )ಕೆಲ ಯುವಕರು ಇಂದಿರಾ ಕ್ಯಾಂಟೀನ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೂ ವೇತನ ಆಗಿಲ್ಲ. ಮನೆ ನಿರ್ವಹಣೆ ಕಷ್ಟ ಆಗಿದೆ. ಸಂಬಳ ಕೊಟ್ಟರೆ ನಾವು ಊರಿಗೆ ಹೋಗುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಡವರ ಹಸಿವು ನೀಗಿಸಬೇಕಿದ್ದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಈಗ ಊಟ ಸಿಗದೇ ಜನ ಪರದಾಡುತ್ತಿರುವುದು ವಿಪರ್ಯಾಸ. ಮುಂದಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನ ಸ್ಥಗಿತಗೊಳಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಇದನ್ನೂ ಓದಿ: ತಾಯಿಯಿಂದ ಬೇರ್ಪಟ್ಟು ಒಂಟಿಯಾಗಿ ಅಲೆದಾಡುತ್ತಿದ್ದ ಮರಿ ಕರಡಿ ಸಾವು

  • 3 ತಿಂಗಳ ಸಂಬಳ ಕೊಡಿ – ಹೋರಾಟಕ್ಕೆ ಮುಂದಾದ 108 ಅಂಬುಲೆನ್ಸ್‌ ಸಿಬ್ಬಂದಿ

    3 ತಿಂಗಳ ಸಂಬಳ ಕೊಡಿ – ಹೋರಾಟಕ್ಕೆ ಮುಂದಾದ 108 ಅಂಬುಲೆನ್ಸ್‌ ಸಿಬ್ಬಂದಿ

    ಬೆಂಗಳೂರು: ಕರ್ನಾಟಕ ಸರ್ಕಾರದ (Karnataka Government) ವಿರುದ್ಧ ಹೋರಾಟ ನಡೆಸಲು 108 ಅಂಬುಲೆನ್ಸ್‌ ಸಿಬ್ಬಂದಿ (Ambulance Smployees) ಮುಂದಾಗಿದ್ದಾರೆ.

    3 ತಿಂಗಳಿನಿಂದ ನಮಗೆ ಸಂಬಳ (Salary) ಸಿಕ್ಕಿಲ್ಲ. ಹೀಗಾಗಿ ನ.16ರ ರಾತ್ರಿ 8 ಗಂಟೆಯ ಒಳಗಡೆ ಸಂಬಳವನ್ನು ಬಿಡುಗಡೆ ಮಾಡಬೇಕು. ಅಂದು ಸಂಬಳ ಪಾವತಿಯಾಗದೇ ಇದ್ದರೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ(108) ನೌಕರರ ಸಂಘ, ಅಖಿಲ ಕರ್ನಾಟಕ 108 ಅಂಬುಲೆನ್ಸ್‌ ನೌಕರರ ಹಿತರಕ್ಷಣಾ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಕವಚ(108) ಅಂಬುಲೆನ್ಸ್‌ ನೌಕರರರ ಸಂಘ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಹಾಸನ| ರೀಲ್ಸ್‌ಗಾಗಿ ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿ ಹುಚ್ಚಾಟ – ವಿದ್ಯಾರ್ಥಿಗಳ ವಿರುದ್ಧ ಕೇಸ್‌

    ಆರೋಗ್ಯ ಕವಚ ಯೋಜನೆಯಲ್ಲಿ 2 ವರ್ಷಗಳಿಂದ ವೇತನದಲ್ಲಿ ಅನೇಕ ಸಮಸ್ಯಗಳಿವೆ. ಸರ್ಕಾರ, ಸಂಸ್ಥೆ ಮತ್ತು ಸಂಘಟನೆಗಳು ಸಭೆ ನಡೆಸಿದರೂ ವೇತನದ ಸಮಸ್ಯೆ ಬಗೆಹರಿದಿಲ್ಲ. ಸಂಘಟನೆಯ ವತಿಯಿಂದ ನ್ಯಾಯಾಲಯದ ಮೊರೆ ಹೋಗಲಾಗಿತ್ತು.

    ನ್ಯಾಯಾಲಯವು ಸೆಪ್ಟೆಂಬರ್ 12ರಂದು ಮಧ್ಯಂತರ ಆದೇಶ ನೀಡಿತ್ತು. ನ್ಯಾಯಾಲಯ ಆದೇಶ ನೀಡಿದರೂ ಆರೋಗ್ಯ ಇಲಾಖೆ ಅಂಬುಲೆನ್ಸ್‌ ಸಿಬ್ಬಂದಿಯ ಸಂಬಳದ ಬಗ್ಗೆ ನಿರ್ಲಕ್ಷ್ಯ ತೋರಿದೆ. ಈ ಕಾರಣಕ್ಕೆ ಅನಿವಾರ್ಯವಾಗಿ ನಾವು ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘಗಳು ತಮ್ಮ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿವೆ.

    ನ.16 ಸಂಬಳವಾಗದೇ ಇದ್ದರೆ ರಾತ್ರಿಯಿಂದಲೇ ಕೆಲಸ ಸ್ಥಗಿತಗೊಳಿಸಲಾಗುವುದು ಎಂದು ಸಂಘ ಹೇಳಿದೆ. ಅಷ್ಟೇ ಅಲ್ಲದೇ ಕೋರ್ಟ್‌ ಆದೇಶದ ಅನ್ವಯ ಪ್ರತಿ ತಿಂಗಳ 7 ರಂದು ವೇತನ ಪಾವತಿಯಾಗಬೇಕು. ಮುಂದೆ ವೇತನ ವಿಳಂಬವಾದರೆ 7ರ ರಾತ್ರಿಯಿಂದಲೇ ಅಂಬುಲೆನ್ಸ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

  • ಹಾವೇರಿ| 3 ತಿಂಗಳಿನಿಂದ ಪಾವತಿಯಾಗಿಲ್ಲ ಅಂಗನವಾಡಿ ಟೀಚರ್‌ಗಳ ಸಂಬಳ

    ಹಾವೇರಿ| 3 ತಿಂಗಳಿನಿಂದ ಪಾವತಿಯಾಗಿಲ್ಲ ಅಂಗನವಾಡಿ ಟೀಚರ್‌ಗಳ ಸಂಬಳ

    – ಗೌರವ ಧನ, ಮೊಟ್ಟೆ ಬಾಕಿ ಪಾವತಿಸದಿದ್ದರೆ ಅಂಗನವಾಡಿ ಬಂದ್

    ಹಾವೇರಿ: ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ ಅಂಗನವಾಡಿ (Anganwadi) ಕಾರ್ಯಕರ್ತೆಯರಿಗೆ ಮತ್ತು ಸಹಾಯಕರಿಗೆ ವೇತನವೇ ಪಾವತಿಯಾಗಿಲ್ಲ. ಸರ್ಕಾರ ಸುಮಾರು 1.30 ಕೋಟಿ ರೂ. ಮೊಟ್ಟೆ ಖರೀದಿ ಬಾಕಿ ಹಣ ಉಳಿಸಿಕೊಂಡಿದೆ. ಇತ್ತ ಮೊಟ್ಟೆ ಖರೀದಿ ಮಾಡಿದ ಬಾಕಿಯನ್ನೂ ಸರ್ಕಾರ ಕೊಡದೇ ಸತಾಯಿಸುತ್ತಿದೆ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಹೈರಾಣಾಗಿ ಹೋಗಿದ್ದಾರೆ.

    ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಕೊಡುವ ಅಲ್ಪ ವೇತನವೂ ಬಾರದೇ ಕಾರ್ಯಕರ್ತೆಯರು, ಸಹಾಯಕರು ಹೈರಾಣಾಗಿದ್ದಾರೆ. ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ವೃದ್ಧರ ಆರೈಕೆ ಮುಂತಾದವುಗಳ ನಿರ್ವಹಣೆಗೆ ಇದೇ ವೇತನ ನಂಬಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ವಿಳಂಬ ನೀತಿಯಿಂದ ನಲುಗಿ ಹೋಗಿದ್ದಾರೆ. ಹಾವೇರಿ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ಗೌರವ ಧನ, ಮೊಟ್ಟೆ ಬಾಕಿ ಪಾವತಿಸದಿದ್ದರೆ ಅಂಗನವಾಡಿ ಬಂದ್ ಎಚ್ಚರಿಕೆ ನೀಡಲಾಗಿದೆ. ಮಕ್ಕಳಿಗೆ ಮೊಟ್ಟೆ ವಿತರಣೆ ಸ್ಥಗಿತಗೊಳಿಸಬೇಕಾಗುತ್ತೆ ಎಂದು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಫೆಡರೇಶನ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಕೆಲವು ರಾಜಕೀಯ ಮುಖಂಡರು ಲೈನ್‌ನಲ್ಲಿ ನಿಲ್ಲುವ ಕಾಲ ಬರುತ್ತೆ – ಸಿಎಂ ವಿರುದ್ಧ ರೇವಣ್ಣ ಕಿಡಿ

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ (Lakshmi Hebbalkar) ಪತ್ರ ಬರೆದ ಎಐಟಿಯುಸಿ, ಅಂಗನವಾಡಿ ಬಂದ್‌ಗೆ ಎಚ್ಚರಿಕೆ ನೀಡಿದೆ. ಅ.5 ರಂದೇ ಪತ್ರ ಬರೆಯಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನವೂ ಇಲ್ಲ, ಮೊಟ್ಟೆ ಹಣ ಬಾಕಿನೂ ಪಾವತಿಸಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ 2 ತಿಂಗಳಿಂದ ಮೊಟ್ಟೆ ಹಣವನ್ನೇ ನೀಡಿಲ್ಲ. ಸರ್ಕಾರ ಅನುದಾನದ ಕೊರತೆ ಹಿನ್ನೆಲೆಯಲ್ಲಿ 2 ತಿಂಗಳಿಂದ ಮೊಟ್ಟೆ ಹಣ ನೀಡಲಿಲ್ಲ. ಸ್ವಂತ ಹಣದಲ್ಲಿ ಮೊಟ್ಟೆ ಖರೀದಿಸಿ ಮಕ್ಕಳು, ಗರ್ಭಿಣಿ ಬಾಣಂತಿಯರಿಗೆ ನೀಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ವಿನಯ್ ಕುಲಕರ್ಣಿ ವರ್ಚಸ್ಸಿಗೆ ಧಕ್ಕೆ ತರುವ ಹುನ್ನಾರ ನಡೆದಿದೆ: ಏಗನಗೌಡರ

    ಹಾವೇರಿ ಜಿಲ್ಲೆಯಲ್ಲಿ 1.55 ಲಕ್ಷ ಫಲಾನುಭವಿಗಳಿದ್ದಾರೆ. 3 ರಿಂದ 6 ವರ್ಷದ ಮಕ್ಕಳು, ಗರ್ಭಿಣಿ ಮಹಿಳೆಯರು, ಬಾಣಂತಿಯರು ಸೇರಿ 1.55 ಲಕ್ಷ ಫಲಾನುಭವಿಗಳಿದ್ದಾರೆ. ತಿಂಗಳಿಗೆ ಮೊಟ್ಟೆ ಖರೀದಿಸಲು ಸುಮಾರು 66 ಲಕ್ಷ ರೂ ಅನುದಾನ ಬೇಕು. ಈಗ 2 ತಿಂಗಳಿಂದ ಮೊಟ್ಟೆ ಬಾಕಿ ಬಂದೇ ಇಲ್ಲ. ಹಾವೇರಿ ಜಿಲ್ಲೆಯಲ್ಲೇ ಸುಮಾರು 1.30 ಕೋಟಿ ರೂ. ಮೌಲ್ಯದ ಮೊಟ್ಟೆ ಖರೀದಿ ಬಾಕಿ ನೀಡಬೇಕಿದೆ. ಸರ್ಕಾರ ಕೂಡಲೇ ಬಿಡಗಡೆ ಮಾಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: Valmiki Scam | ನಾಗೇಂದ್ರಗೆ ಬಿಗ್‌ ರಿಲೀಫ್‌ – ಜಾಮೀನು ಮಂಜೂರು

    ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರಿಗೆ ಗೌರವ ಧನವೂ ಸಿಗಲಿಲ್ಲ. ಹಾವೇರಿ ಜಿಲ್ಲೆಯಲ್ಲಿ 1921 ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. 1835 ಅಂಗನವಾಡಿ ಸಹಾಯಕರಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ 11,500 ರೂ. ಗೌರವ ಧನ ನೀಡಲಾಗ್ತಿದೆ. ಅಂಗನವಾಡಿ ಸಹಾಯಕಿಯರಿಗೆ ತಿಂಗಳಿಗೆ 5000 ರೂ. ಗೌರವ ಧನ ನೀಡಲಾಗುತ್ತಿದೆ. ಮೂರು ತಿಂಗಳ ಗೌರವ ಧನ ಬಾಕಿ ಇದೆ. ಸರ್ಕಾರದ ಗಮನಕ್ಕೆ ತರಲಾಗಿದೆ. ಕೂಡಲೇ ಒಂದು ವಾರದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಯ ಉಪನಿರ್ದೇಶಕರು ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ದೆಹಲಿ ಸಿಎಂ ಅತಿಶಿ

  • ಬಿಗ್‌ ಬಾಸ್‌ ಶೋಗೆ ಸುದೀಪ್ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು?- ನಟ ಹೇಳೋದೇನು?

    ಬಿಗ್‌ ಬಾಸ್‌ ಶೋಗೆ ಸುದೀಪ್ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು?- ನಟ ಹೇಳೋದೇನು?

    ನ್ನಡದ ಸ್ಟಾರ್ ನಟ ಸುದೀಪ್‌ ಬೇಡಿಕೆ ನಟನಾಗಿ ಬಹುಭಾಷೆಗಳಲ್ಲಿ ಸದ್ದು ಮಾಡುತ್ತಿದ್ದಾರೆ.  ಇಂದಿಗೂ ಸುದೀಪ್ ನಟನೆ ಮತ್ತು ನಿರೂಪಣೆಗೆ ದೊಡ್ಡ ಮಟ್ಟದ ಅಭಿಮಾನಿಗಳ ಬಳಗವಿದೆ. ಇದರ ನಡುವೆ ನಟ ಇಂಟರೆಸ್ಟಿಂಗ್‌ ವಿಚಾರವೊಂದನ್ನು ರಿವೀಲ್‌ ಮಾಡಿದ್ದಾರೆ. ಬಿಗ್ ಬಾಸ್ 10 ಸೀಸನ್ ಮುಗಿಸಿ 11ನೇ (Bigg Boss Kannada 11) ಸೀಸನ್‌ಗೆ ಲಗ್ಗೆ ಇಡುತ್ತಿರುವ ಕಾರ್ಯಕ್ರಮಕ್ಕೆ ಸುದೀಪ್ ಪಡೆದುಕೊಳ್ಳುತ್ತಿರುವ ಸಂಭಾವನೆ (Salary) ಎಷ್ಟು? ಎಂಬುದರ ಬಗ್ಗೆ ನಟ ತಿಳಿಸಿದ್ದಾರೆ. ಇದನ್ನೂ ಓದಿ:ಆ ದೊಡ್ಡ ಸ್ಟಾರ್ ಜೊತೆ ನಟಿಸುತ್ತಿಲ್ಲ: ಸಿಮ್ರಾನ್ ಫುಲ್ ಗರಂ..!

    ಬಿಗ್ ಬಾಸ್ ಸುದ್ದಿಗೋಷ್ಠಿಯಲ್ಲಿ ಈ ಶೋಗೆ ಪಡೆದುಕೊಳ್ಳುತ್ತಿರುವ ಸಂಭಾವನೆ ಕುರಿತು ನಟನಿಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ನಟ ಪ್ರತಿಕ್ರಿಯಿಸಿ, ನನ್ನ ತಟ್ಟೆ ಎಷ್ಟು ಅಗಲ ಇದೆಯೋ ನಾನಷ್ಟು ಊಟ ಮಾಡುತ್ತೇನೆ. ನನಗೆ ಯೋಗ್ಯತೆ ಎಷ್ಟು ಇದೆಯೋ ನಾನಷ್ಟೇ ದುಡಿಯೋದು ಎಂದಿದ್ದಾರೆ. ಇದು ನನ್ನ ಹೊಸ ಅಧ್ಯಾಯ ಎಂದು ಸುದೀಪ್ ನಕ್ಕಿದ್ದಾರೆ.

    ಈ ಸೀಸನ್ ನಾನು ಮಾಡಲ್ಲ ಅಂತ ಹೇಳಿದ್ದು ಸಂಭಾವನೆ ಕಾರಣಕ್ಕೆ ಅಲ್ಲ. ನಾನು ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇನೆ. ನನಗೆ ತುಂಬಾ ಸುಸ್ತು ಆಗ್ತಾ ಇತ್ತು. ತುಂಬಾ ಟ್ರಾವೆಲ್ ಆಗುತ್ತಿತ್ತು. ಅದನ್ನು ನಾನು ತಂಡಕ್ಕೆ ತಿಳಿಸಿದ್ದೆ, ಆದರೆ ಅವರೇ ನಾನು ಈ ಶೋ ಮಾಡುವಂತೆ ಕೇಳಿಕೊಂಡರು. 10 ವರ್ಷ ಬಿಗ್ ಬಾಸ್‌ಗೆ ಕೆಲಸ ಮಾಡಿದ್ದೇನೆ. 28 ವರ್ಷ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದೀನಿ ಅಂದ್ಮೇಲೆ ಒಳ್ಳೆಯ ಸಂಭಾವನೆಯೇ ಪಡೆದುಕೊಳ್ಳುತ್ತಿರುತ್ತೇನೆ ಅಲ್ವಾ? ಎಂದು ನಗುತ್ತಾ ಸುದೀಪ್ ಉತ್ತರಿಸಿದ್ದಾರೆ. ಆದರೆ ಪಡೆದುಕೊಳ್ಳುತ್ತಿರುವ ಸಂಭಾವನೆ ಬಗ್ಗೆ ಮಾತ್ರ ಯಾವುದೇ ಮಾಹಿತಿ ಅವರು ಬಿಟ್ಟು ಕೊಟ್ಟಿಲ್ಲ.

    ಅಂದಹಾಗೆ, ಸೆ.29ರಂದು ಸಂಜೆ 6ಕ್ಕೆ ಗ್ರ‍್ಯಾಂಡ್ ಆಗಿ ಲಾಂಚ್ ಆಗುತ್ತಿದ್ದು, ಪ್ರತಿದಿನ ರಾತ್ರಿ 9.30ಕ್ಕೆ ಶೋ ಪ್ರಸಾರವಾಗಲಿದೆ ಎಂದು ವಾಹಿನಿ ತಿಳಿಸಿದೆ. ಕಿಚ್ಚನ ನಯಾ ಖದರ್ ನೋಡೋಕೆ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.

    ಬಿಗ್ ಬಾಸ್ ಬರಲಿರುವ ಕೆಲ ಸ್ಪರ್ಧಿಗಳ ಹೆಸರು ಸದ್ದು ಮಾಡುತ್ತಿದೆ. ಮೋಕ್ಷಿತಾ ಪೈ, ಹುಲಿ ಕಾರ್ತಿಕ್, ಸುಕೃತಾ ನಾಗ್, ಕಿರುತೆರೆ ನಟಿ ಅಮೂಲ್ಯ, ಭವ್ಯಾ ಗೌಡ, ವರ್ಷಾ ಕಾವೇರಿ ಸೇರಿದಂತೆ ಅನೇಕರು ಹೆಸರು ಚಾಲ್ತಿಯಲ್ಲಿದೆ. ಯಾರೆಲ್ಲಾ ದೊಡ್ಮನೆ ಬರುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

  • ವಿಜಯ್ ಪಡೆದ ಸಂಭಾವನೆ 275 ಕೋಟಿ: ವೈರಲ್ ಆಯ್ತು ವಿಡಿಯೋ

    ವಿಜಯ್ ಪಡೆದ ಸಂಭಾವನೆ 275 ಕೋಟಿ: ವೈರಲ್ ಆಯ್ತು ವಿಡಿಯೋ

    ಳಪತಿ ವಿಜಯ್ (Dalpati Vijay) ಕೊನೆಯ ಚಿತ್ರ ಎನ್ನಲಾದ `ದಳಪತಿ 69′ ಘೋಷಣೆಯ ವೀಡಿಯೋ ವೈರಲ್ ಆಗಿದೆ. ಹೆಚ್ ವಿನೋದ್ ನಿರ್ದೇಶನದ ಈ ಚಿತ್ರವನ್ನ ವಿಜಯ್ ಸಿನಿಮಾ ಕರಿಯರ್‌ನ ಕೊನೆಯ ಚಿತ್ರ ಎನ್ನಲಾಗುತ್ತೆ. ಯಾಕೆಂದರೆ ರಾಜಕೀಯ ಪ್ರವೇಶಿಸಿರುವ ವಿಜಯ್ ಮುಂದಿನ ದಿನಗಳಲ್ಲಿ ಅದರತ್ತ ಸಂಪೂರ್ಣ ಗಮನ ಕೊಡಲಿದ್ದಾರಂತೆ. ಇದೀಗ ದಳಪತಿ 69 ಚಿತ್ರ ಸ್ಯಾಂಡಲ್‌ವುಡ್‌ಗೂ ಕನೆಕ್ಟ್ ಆಗಿದ್ದು ಈ ಚಿತ್ರವನ್ನ ಕನ್ನಡದ `ಕೆವಿಎನ್ ಸಂಸ್ಥೆ’ ನಿರ್ಮಿಸಲಿದೆ.

    `ದಳಪತಿ 69′ ಮೇಲೆ ಬಲು ನಿರೀಕ್ಷೆ ಇರೋದ್ರಿಂದ ಭರ್ತಿ 500 ಕೋಟಿಯಲ್ಲಿ ಚಿತ್ರ ತಯಾರಾಗುತ್ತಿದೆ. ತಮಿಳು ಚಿತ್ರಪ್ರೇಮಿಗಳ ಪಾಲಿನ ಮಾಸ್‌ಮ್ಯಾನ್ ಇನ್ಮುಂದೆ ಬಣ್ಣ ಹಚ್ಚೋದಿಲ್ಲ ಅನ್ನುವ ಕೊರಗಿನ ಮಧ್ಯೆ ದಳಪತಿ 69 ಮೇಲೆ ನಿರೀಕ್ಷೆಯಂತೂ ದುಪ್ಪಟ್ಟಾಗಿದೆ. ಈ ನಡುವೆ ಇನ್ನೊಂದು ವಿಷಯ ಭಾರೀ ಆಶ್ಚರ್ಯ ಹುಟ್ಟಿಸಿದೆ. ಅದುವೇ ವಿಜಯ್ ರೆಮನ್ಯುರೇಶನ್.

    ದಳಪತಿ 69 ಚಿತ್ರಕ್ಕೆ ವಿಜಯ್ ಭರ್ತಿ 275 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾಂತೆ. ಚಿತ್ರದ ಬಜೆಟ್‌ನ ಅರ್ಧ ಭಾಗದಷ್ಟು ವಿಜಯ್ ಸಂಭಾವನೆ ಇರುತ್ತದೆ ಎಂದು ಸುದ್ದಿಯಾಗಿದೆ. ಹಿಂದಿನ `ದಿ ಗೋಟ್’ ಚಿತ್ರಕ್ಕೆ ವಿಜಯ್ ಬರೋಬ್ಬರಿ 200 ಕೋಟಿ ಸಂಭಾವನೆ ಪಡೆದಿದ್ದರು ಎಂಬ ವದಂತಿ ಇದೆ. ಈ ಬೆನ್ನಲ್ಲೇ ಅದಕ್ಕಿಂತಲೂ ಹೆಚ್ಚು 275 ಕೋಟಿ ಹಣ ಸಂಭಾವನೆ ರೂಪದಲ್ಲಿ ವಿಜಯ್ ಪಡೆಯಲಿದ್ದಾರೆ ಎಂಬುದೇ ಕುತೂಹಲದ ಸಂಗತಿ.

     

    2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ವಿಜಯ್ ಅಣಿಯಾಗುತ್ತಿದ್ದಾರೆ. ಸ್ವಂತ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಎಂಟ್ರಿಯಾಗಿದ್ದಾರೆ. ಲೋಗೋ ಮತ್ತಿತರ ಕೆಲಸಗಳನ್ನ ಮಾಡಿಕೊಂಡು ಬಂದಿದ್ದಾರೆ. ಈ ನಡುವೆ ವರ್ಷ ಕಳೆಯುವದರೊಳಗೆ ವಿಜಯ್ ಒಪ್ಪಿಕೊಂಡ 69ನೇ ಚಿತ್ರ ಮುಗಿಸ ಕೊಡಬೇಕಾಗಿದೆ. ಹೀಗಾಗಿ ಶೀಘ್ರದಲ್ಲೇ ದಳಪತಿ 69 ಚಿತ್ರೀಕರಣ ಶುರುವಾಗಲಿದೆ ಎಂಬ ಮಾಹಿತಿ ಇದೆ. ಇನ್ನು ವಿಜಯ್ ಪಡೆದುಕೊಳ್ತಿರುವ 275ಕೋಟಿ ಸಂಭಾವನೆ ಸುದ್ದಿಯಂತೂ ಇನ್ನುಳಿದ ಸ್ಟಾರ್ ನಟರಿಗೆ ಆಶ್ಚರ್ಯ ಮೂಡಿಸಿದೆ. ಇಲ್ಲಿವರೆಗೆ 200 ಕೋಟಿ ಸಂಭಾವನೆಯನ್ನ ಭಾರತದಲ್ಲಿ ಸ್ಟಾರ್ ನಟರು ನೇರವಾಗಿ ಪಡೆದಿರಲಿಲ್ಲ. ಶೇರ್ ರೂಪದಲ್ಲಿ ಬಂದಿರೋ ಆದಾಯದಲ್ಲಿ ಲೆಕ್ಕ ಚುಕ್ತಾ ಮಾಡಿಕೊಳ್ತಿದ್ದರು. ಅದನ್ನೇ ಸಂಭಾವನೆಯಾಗಿ ಲಾಭ ಗಳಿಸಿಸುತ್ತಿದ್ದ ಹಲವರು ನಟರ ಉದಾಹರಣೆ ಇದೆ. ಆದರೆ ಈಗ ವಿಜಯ್ ಭರ್ತಿ 275 ಕೋಟಿ ಮೊತ್ತದ ರೂಪದಲ್ಲೇ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ವಿಷಯ ಭಾರೀ ಚರ್ಚೆಗೀಡುಮಾಡಿದೆ.

  • ಕಳ್ಳತನದ ಕೆಲಸಕ್ಕೆ 20 ಸಾವಿರ ಸಂಬಳ- ಆರೋಪಿಗಳ ಬಂಧನ

    ಕಳ್ಳತನದ ಕೆಲಸಕ್ಕೆ 20 ಸಾವಿರ ಸಂಬಳ- ಆರೋಪಿಗಳ ಬಂಧನ

    – ಕಳ್ಳತನಕ್ಕೆಂದೇ ನೇಮಕ ಮಾಡಿಕೊಂಡಿದ್ದ ಮಾಲೀಕ

    ತುಮಕೂರು: ನಾವು ಸಂಬಳಕ್ಕೆ ಕೆಲಸ ಮಾಡುವ ಶಿಕ್ಷಕ, ವೈದ್ಯ, ಎಂಜಿನಿಯರ್ ಈ ರೀತಿಯ ವೃತ್ತಿಗಳನ್ನ ಕೇಳಿರ್ತೀವಿ, ಕಂಪನಿಗಳು ಸಂಬಳಕ್ಕೆ ಸಿಬ್ಬಂದಿ ಅನ್ನು ನೇಮಕ ಮಾಡುತ್ತವೆ ಎಂದು ನೋಡ್ತೀರ್ತಿವಿ. ಆದರೆ ತುಮಕೂರಿನಲ್ಲಿ (Tumakuru) ಕಳ್ಳತನಕ್ಕೆಂದೇ ಸಂಬಳಕ್ಕೆ ನೇಮಕ ಮಾಡಿಕೊಂಡ ಅಪರೂಪದ ಕೆಲಸವೊಂದನ್ನು ಪತ್ತೆ ಹಚ್ಚಿದ್ದಾರೆ.

    ಇಂತಹ ಅಪರೂಪದ ಪ್ರಕರಣ ನೋಡಿ ಗೃಹ ಸಚಿವರ ತವರು ಕ್ಷೇತ್ರ ಕೊರಟಗೆರೆ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಬೆಂಗಳೂರು ಮೂಲದ ರಾಘವೇಂದ್ರ ಎಂಬಾತ ವೆಂಕಟೇಶ್ ಎಂಬಾತನನ್ನ ಕಳ್ಳತನಕ್ಕಾಗಿ ಕೆಲಸಕ್ಕೆ ಇಟ್ಟುಕೊಂಡಿದ್ದಾನೆ. ವೆಂಕಟೇಶನಿಗೆ 20 ಸಾವಿರ ರೂ. ಸಂಬಳ ಕೂಡ ಫಿಕ್ಸ್ ಮಾಡಿದ್ದಾನೆ. 20 ಸಾವಿರ ಸಂಬಳ ಪಡೆದ ಮೇಲೆ ಸುಮ್ನೆ ಕುಳಿತ್ತುಕೊಳ್ಳೊಕ್ಕೆ ಆಗುತ್ತಾ?. ಅದಕ್ಕೆ ಕಳ್ಳ ವೆಂಕಟೇಶ್ ಕೊರಟಗೆರೆ ಸುತ್ತಮುತ್ತ ರಾತ್ರಿ ಹೊತ್ತು ಕೊಳವೆ ಬಾವಿಯಲ್ಲಿದ್ದ ವೈರ್ ಗಳನ್ನ ಕದ್ದು ರಾಘವೇಂದ್ರನಿಗೆ ಕೊಡ್ತಿದ್ನಂತೆ. ಈ ಕದ್ದ ಕೇಬಲ್ ವೈರ್ ಗಳನ್ನ ರಾಘವೇಂದ್ರನು ವಿನೇಶ್ ಪಟೇಲ್ ಎಂಬಾತನಿಗೆ ಮಾರಾಟ ಮಾಡ್ತಿದ್ನಂತೆ. ಸರಣಿ ಕಳ್ಳತನದ ಮೇಲೆ ಕಣ್ಣಿಟ್ಟು ಕಾದು ಕುಳಿತಿದ್ದ ಪೊಲೀಸರಿಗೆ ವಡ್ಡಗೆರೆಯಲ್ಲಿ ಈ ಐನಾತಿ ಖದೀಮರು ತೋರಿದ ಕಳ್ಳತನದ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

    ಇದನ್ನೇ ಆಧಾರವಾಗಿ ಇಟ್ಟುಕೊಂಡು ತನಿಖೆ ನಡೆಸಿದ ಪೊಲೀಸರು ವೆಂಕಟೇಶ್, ರಾಘವೇಂದ್ರ, ವಿನೇಶ್ ಪಟೇಲ್‍ನನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವಿಚಾರಣೆಯಲ್ಲಿ ಸಂಬಳ ಪಡೆದು ಕಳ್ಳತನ ಮಾಡುತ್ತಿರುವ ವಿಚಾರವನ್ನ ವೆಂಕಟೇಶ್ ಬಾಯ್ಬಿಟ್ಟಿದ್ದಾನೆ. ಕೊರಟಗೆರೆ ಪೊಲೀಸರು ಈ ಮೂವರನ್ನ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಸಾಲ ಮರುಪಾವತಿಸುವಂತೆ ಪತ್ನಿ, ಪುತ್ರನಿಗೆ 2 ದಿನ ಗೃಹ ಬಂಧನ- ಮನನೊಂದು ರೈತ ಆತ್ಮಹತ್ಯೆ

    ಒಟ್ಟಾರೆ ವಿಚಿತ್ರ ಮತ್ತು ಅಪರೂಪದ ಪ್ರಕರಣಕ್ಕೆ ಕೊರಟಗೆರೆ ಠಾಣೆ ಸಾಕ್ಷಿಯಾಗಿದೆ. ಗೃಹ ಸಚಿವರ ತವರು ಕ್ಷೇತ್ರದಲ್ಲೇ ಈ ಪ್ರಕರಣ ಬಯಲಿಗೆ ಬಂದಿರೋದು ಇನ್ನಷ್ಟು ಕುತೂಹಲ ಕೆರಳಿಸಿದೆ.

  • ಸಂಬಳ ಪಾವತಿ ಮಾಡದ್ದಕ್ಕೆ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರಿಂದ ದಿಢೀರ್‌ ಪ್ರತಿಭಟನೆ

    ಸಂಬಳ ಪಾವತಿ ಮಾಡದ್ದಕ್ಕೆ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರಿಂದ ದಿಢೀರ್‌ ಪ್ರತಿಭಟನೆ

    – ಶಾಂತಿನಗರ ಡಿಪೋ ಮುಂದೆ ಚಾಲಕರಿಂದ ಪ್ರೊಟೆಸ್ಟ್‌
    – ಅಧಿಕಾರಿಗಳ ಸಂಧಾನ ಯಶಸ್ವಿ, ಕರ್ತವ್ಯಕ್ಕೆ ಹಾಜರ್‌

    ಬೆಂಗಳೂರು: ಸಂಬಳ (Salary) ಪಾವತಿ ಮಾಡದ್ದಕ್ಕೆ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ (BMTC Electric Bus) ಚಾಲಕರು ದಿಢೀರ್‌ ಪ್ರತಿಭಟನೆ ನಡೆಸಿದ್ದಾರೆ. ಸರಿಯಾಗಿ ಸಂಬಳ ಪಾವತಿ ಮಾಡದ್ದಕ್ಕೆ ಪ್ರತಿಭಟಿಸಿದ ನೌಕರರು ಮಂಗಳವಾರ ಬೆಳಗ್ಗೆಯಿಂದ ಗಾಡಿಯನ್ನು ಹೊರಗಡೆ ತೆಗೆದಿರಲಿಲ್ಲ. ಕೊನೆಗೆ ಬಿಎಂಟಿಸಿ ಅಧಿಕಾರಿಗಳ ಸಂಧಾನ ಯಶಸ್ವಿಯಾದ ಬಳಿಕ ಚಾಲಕರು (Drivers) ಡಿಪೋದಿಂದ ಬಸ್ಸುಗಳನ್ನು ಹೊರಗಡೆ ತೆಗೆದಿದ್ದಾರೆ.

    ಶಾಂತಿನಗರ ಡಿಪೋ- 3 ರ (Shanti Nagar Depot) ಮುಂದೆ ಬಸ್ಸನ್ನು ಹೊರ ತೆಗೆಯದೇ ಪ್ರತಿಭಟಿಸಿದರು. ಶೀಘ್ರವೇ ಬಿಎಂಟಿಸಿ ಅಧಿಕಾರಿಗಳು ವೇತನ ನೀಡುವ ಭರವಸೆ ನೀಡಿದ ಬಳಿಕ ಮಧ್ಯಾಹ್ನ ಮುಷ್ಕರವನ್ನು ಹಿಂದಕ್ಕೆ ಪಡೆದು ಚಾಲಕರು ಕರ್ತವ್ಯಕ್ಕೆ ಹಾಜರಾದರು. ಇದನ್ನೂ ಓದಿ: ಬುರ್ಖಾ ತೆಗೆದು ವೋಟರ್‌ ಐಡಿ ತೋರಿಸಲು ಹೇಳಿದ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲು

     

    ಮುಷ್ಕರಕ್ಕೆ ಕಾರಣ ಏನು?
    ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೌಕರರನ್ನಾಗಿ ತೆಗೆದುಕೊಳ್ಳಲಾಗಿದೆ. ಉದ್ಯೋಗ ನೀಡುವಾಗ ಪ್ರತಿ ತಿಂಗಳು 26,000 ರೂ. ಸಂಬಳ ನೀಡುವುದಾಗಿ ಕಂಪನಿ ಹೇಳಿತ್ತು. ಆದರೆ ಕೇವಲ 18,000 ರೂ. ಸಂಬಳ ನೀಡುತ್ತಿದೆ. ಆರಂಭದಲ್ಲಿ ಪಿಎಫ್‌ಗೆ ಹಣ ಕಡಿತ ಮಾಡಲಾಗುತ್ತದೆ ಎಂದು ಹೇಳಿತ್ತು. ಆದರೆ ಪಿಎಫ್‌ಗೆ ನಮ್ಮ ಹಣ ಕಡಿತವಾಗಿಲ್ಲ.

    ಮೊದಲ ಎರಡು ತಿಂಗಳು 2,000 ರೂ. ಕಡಿತ ಮಾಡಿದ್ದರೆ ಈಗ ಈ ತಿಂಗಳ ಸಂಬಳದಲ್ಲಿ 5,000 ರೂ. ಕಡಿತ ಮಾಡಲಾಗಿದೆ. ಈ ತಿಂಗಳು ಕೆಲವರಿಗೆ ಮಾತ್ರ ಸಂಬಳ ನೀಡಿದ್ದರೆ ಉಳಿದ ನೌಕರರಿಗೆ ಸಂಬಳವೇ ಆಗಿಲ್ಲ. ಆರಂಭದಲ್ಲಿ ಟಾಟಾ ಕಂಪನಿಯಲ್ಲಿ ಚಾಲಕರಾಗಿ ನೇಮಕ ಮಾಡಲಾಗುವುದು ಎಂದು ಹೇಳಿತ್ತು. ಆದರೆ ಈಗ ಆರ್ಯ ಹೆಸರಿನ ಕಂಪನಿಯಲ್ಲಿ ಕೆಲಸ ನೀಡಲಾಗಿದೆ. ವಸತಿ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ನಮಗೆ ವಸತಿ ನೀಡಿಲ್ಲ ಎಂದು ಚಾಲಕರು ಆರೋಪಿಸಿದ್ದಾರೆ.

     

    ಬಿಎಂಟಿಸಿ ವ್ಯಾಪ್ತಿಗೆ ಬರಲ್ಲ
    ಡಿಪೋ- 3 ರಲ್ಲಿ 136 ಎಲೆಕ್ಟ್ರಿಕ್ ಬಸ್ಸುಗಳಿವೆ. ಮೂರು ಶಿಫ್ಟ್ ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರು ಕೆಲಸ ಮಾಡುತ್ತಿದ್ದಾರೆ. ಈ ಎಲೆಕ್ಟ್ರಿಕ್ ಬಸ್ ಚಾಲಕರು ಬಿಎಂಟಿಸಿ ಸಂಸ್ಥೆಯ ಅಧೀನಕ್ಕೆ ಒಳಪಡುವುದಿಲ್ಲ. ಎಲೆಕ್ಟ್ರಿಕ್ ಬಸ್ ನೋಡಿಕೊಳ್ಳುವ ಕಂಪನಿಯೇ ಚಾಲಕರನ್ನು ನೇಮಕ ಮಾಡಿಕೊಳ್ಳಬೇಕೆಂಬ ನಿಯಮವಿದೆ. ಈ ಕಾರಣಕ್ಕೆ ಖಾಸಗಿ ಕಂಪನಿಯ ಮಾನಂದಂಡಕ್ಕೆ ಅನುಗುಣವಾಗಿ ಸಂಬಳ ನಿಗದಿ ಮಾಡಿದೆ.