Tag: Salar

  • ‘ಸಲಾರ್ 2’ ಚಿತ್ರಕ್ಕೂ ಮುನ್ನ ಖಾಕಿ ಧರಿಸಲಿದ್ದಾರೆ ಪ್ರಭಾಸ್

    ‘ಸಲಾರ್ 2’ ಚಿತ್ರಕ್ಕೂ ಮುನ್ನ ಖಾಕಿ ಧರಿಸಲಿದ್ದಾರೆ ಪ್ರಭಾಸ್

    ಗತ್ತಿನಾದ್ಯಂತ ಸಲಾರ್ (Salaar) ಸಿನಿಮಾ ತನ್ನ ಯಶಸ್ಸಿನ ಯಶೋಗಾಥೆಯನ್ನು ಮುಂದುವರೆಸಿದೆ. ಆರು ದಿನಕ್ಕೆ ಅಂದಾಜು ಐನೂರು ಕೋಟಿ ಕಲೆಕ್ಷನ್ ಮಾಡಿದೆ ಎಂದು ಸಿನಿ ಪಂಡಿತರ ಲೆಕ್ಕಾಚಾರ. ಒಂದು ಕಡೆದ ದಕ್ಷಿಣದ ಈ ಸಿನಿಮಾ ಜಗತ್ತನ್ನೇ ಗೆಲ್ಲಲು ಹೊರಟಿದ್ದರೆ, ಮತ್ತೊಂದು ಹಿಂದಿ ಸಿನಿಮಾ ಎನಿಮಲ್ ಕೂಡ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿದೆ. ಹೀಗಾಗಿ ಪ್ರಭಾಸ್ (Prabhas) ಮೇಲೆ ಒತ್ತಡ ಹೆಚ್ಚಾಗಿದೆ.

    ಸಲಾರ್ ಭಾರೀ ಗೆಲುವಿನ ನಂತರ ಸಲಾರ್ 2 ಬಗ್ಗೆ ಈಗಾಗಲೇ ಅಭಿಮಾನಿಗಳು ಅಪ್ ಡೇಟ್ ಕೇಳುತ್ತಿದ್ದಾರೆ. ಆದರೆ, ಸಲಾರ್ ಮಧ್ಯಯೂ ಪ್ರಭಾಸ್ ಅನಿಮಲ್ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy) ಅವರಿಗೆ ಡೇಟ್ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಸ್ಪಿರಿಟ್ (Spirit) ಎಂದು ಹೆಸರಿಡಲಾಗಿದೆ. ಒಂದು ಕಡೆ ಯಶಸ್ಸಿನ ಪ್ರಶಾಂತ್ ನೀಲ್ (Prashant Neel). ಮತ್ತೊಂದು ಕಡೆ ಎನಿಮಲ್ ಗೆಲ್ಲಿಸಿದ ಸಂದೀಪ್ ರೆಡ್ಡಿ. ಪ್ರಭಾಸ್ ಡೇಟ್ ಕೊಡೋದು ಯಾರಿಗೆ ಅನ್ನುವ ಚರ್ಚೆ ಕೂಡ ನಡೆದಿದೆ.

    ಈ ನಡುವೆ ಸಂದೀಪ್ ರೆಡ್ಡಿ ತಮ್ಮ ಸ್ಪಿರಿಟ್ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಹೊಸ ಅಪ್ ಡೇಟ್ ನೀಡಿದ್ದಾರೆ. ತಮ್ಮ ಸಿನಿಮಾದಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ ಪೊಲೀಸ್ ವೇಷದಲ್ಲಿ ತಮ್ಮ ನೆಚ್ಚಿನ ನಟನ ಪಾತ್ರವನ್ನು ನೋಡಲು ಪ್ರಭಾಸ್ ಅಭಿಮಾನಿ ತುದಿಗಾಲಲ್ಲಿ ನಿಂತಿದ್ದಾರೆ.

     

    ಈ ವರ್ಷದ ಗೆಲುವಿನ ಸಿನಿಮಾಗಳಲ್ಲಿ ಅನಿಮಲ್ ಮತ್ತು ಸಲಾರ್ ಸಿನಿಮಾ ಸೇರಿವೆ. ಎರಡೂ ಸಿನಿಮಾಗಳು ಭರ್ಜರಿ ಗೆಲುವನ್ನೇ ಸಾಧಿಸಿವೆ. ಹೀಗಾಗಿ ಪ್ರಭಾಸ್ ಯಾರಿಗೆ ತಮ್ಮ ಮುಂದಿನ ಡೇಟ್ಸ್ ಕೊಡ್ತಾರೆ ಎನ್ನುವ ಕುತೂಹಲ ಮೂಡಿದೆ. ಮುಂದಿನ ದಿನಗಳಲ್ಲಿ ಈ ಎಲ್ಲದಕ್ಕೂ ಉತ್ತರ ಸಿಗಬಹುದು.

  • ‘ಸಲಾರ್’ ಸಿನಿಮಾದ ಟ್ರೈಲರ್ ಅವಧಿ ಎಷ್ಟು ಗೊತ್ತಾ?: ರಿಲೀಸ್ ಗೆ ಕ್ಷಣಗಣನೆ

    ‘ಸಲಾರ್’ ಸಿನಿಮಾದ ಟ್ರೈಲರ್ ಅವಧಿ ಎಷ್ಟು ಗೊತ್ತಾ?: ರಿಲೀಸ್ ಗೆ ಕ್ಷಣಗಣನೆ

    ಹೊಂಬಾಳೆ ಫಿಲ್ಮ್ಸ್ (Hombale Films) ಲಾಂಛನದಲ್ಲಿ ಮೂಡಿ ಬಂದಿರುವ ಸಲಾರ್ (Salaar) ಸಿನಿಮಾದ ಬಹುನಿರೀಕ್ಷಿತ ಟ್ರೈಲರ್ ಇಂದು ಸಂಜೆ 7.19ಕ್ಕೆ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಟ್ರೈಲರ್ ಅವಧಿ ಎಷ್ಟಿರಬಹುದು ಎನ್ನುವ ಚರ್ಚೆ ಕೂಡ ನಡೆದಿದೆ. ಬಲ್ಲ ಮೂಲಗಳ ಮಾಹಿತಿ ಪ್ರಕಾರ, ಎರಡೂವರೆ ನಿಮಿಷದಿಂದ ಮೂರು ನಿಮಿಷದ ಒಳಗೆ ಟ್ರೈಲರ್ ಅವಧಿ ಇದೆ ಎಂದು ಹೇಳಲಾಗುತ್ತಿದೆ. ಈ ಟ್ರೈಲರ್ ನಲ್ಲಿ ಸಾಕಷ್ಟು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕ ಪ್ರಶಾಂತ್ ನೀಲ್.

    ಸಲಾರ್ ಸಿನಿಮಾದ ಕಥೆಯ (Story) ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಪ್ರಶಾಂತ್ ನೀಲ್ (Prashant Neel) ಈ ಹಿಂದೆ ಕನ್ನಡದಲ್ಲಿ ಮಾಡಿದ್ದ ಉಗ್ರಂ ಸಿನಿಮಾವನ್ನೇ ಕೊಂಚ ಬದಲಿಸಿಕೊಂಡು ಚಿತ್ರ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಂತೆ ಪ್ರಶಾಂತ್ ನೀಲ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಕಥೆಯ ಬಗ್ಗೆ ಪ್ರಶಾಂತ್ ಮಾತನಾಡಿದ್ದಾರೆ.

    ಇದು ರಿಮೇಕ್ ಸಿನಿಮಾವಲ್ಲ ಎಂದು ಸ್ಪಷ್ಟ ಪಡಿಸಿದರುವ ಅವರು, ಸ್ನೇಹಿತರಿಬ್ಬರು ದೊಡ್ಡ ಶತ್ರುಗಳಾಗಿ ಬದಲಾಗುವ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗುತ್ತಿದೆ ಎಂದಿದ್ದಾರೆ. ಈ ಇಬ್ಬರ ಜರ್ನಿಯನ್ನು ಎರಡು ಭಾಗವಾಗಿ ತೋರಿಸಲಾಗುವುದು ಎಂದು ಇದೇ ಮೊದಲ ಬಾರಿಗೆ ಕಥೆಯ ಬಗ್ಗೆ ಬಾಯ್ಬಿಟ್ಟಿದ್ದಾರೆ.

    ಸದ್ಯ ಚಿತ್ರೋದ್ಯಮದಲ್ಲಿ ಇವೆಂಟ್ ಟ್ರೆಂಡ್ ಹೆಚ್ಚಾಗಿದೆ. ಪೋಸ್ಟ್ ರಿಲೀಸ್ ಇವೆಂಟ್, ಪ್ರಿರಿಲೀಸ್ (Event) ಇವೆಂಟ್ ಹೀಗೆ ಜನರನ್ನು ಸೇರಿಸುವುದಕ್ಕಾಗಿ ನಾನಾ ರೀತಿಯ ಕಸರತ್ತುಗಳನ್ನು ಮಾಡಲಾಗುತ್ತದೆ. ಇಂಥದ್ದೊಂದು ಯಾವುದೇ ಇವೆಂಟ್ ಸಲಾರ್ ಚಿತ್ರಕ್ಕಾಗಿ ಮಾಡುತ್ತಿಲ್ಲ ಎನ್ನುವ ವಿಷಯ ಗಾಂಧಿನಗರದಲ್ಲಿ ಓಡಾಡುತ್ತಿದೆ. ಯಾವುದೇ ಇವೆಂಟ್ ಮಾಡದೇ, ಟ್ರೈಲರ್ ಬಿಡುಗಡೆ ನಂತರ ನೇರವಾಗಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿದೆಯಂತೆ ಹೊಂಬಾಳೆ ಸಂಸ್ಥೆ.

     

    ಸಲಾರ್ ಪ್ರಭಾಸ್ (Prabhas) ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ ಇದು ಕೆಜಿಎಫ್ (KGF) ನಿರ್ದೇಶಕನ ಸಿನಿಮಾ ಎನ್ನುವ ನಿರೀಕ್ಷೆ. ಕೆಜಿಎಫ್ ಅನ್ನೋ ದೃಶ್ಯಕಾವ್ಯ ಕೊಟ್ಟು ಸಿನಿಮಾ ಮೇಕಿಂಗ್ ಸ್ಟೈಲ್‌ಗೆ ಹೊಸ ಭಾಷ್ಯ ಬರೆದ ನಿರ್ದೇಶಕನ ಇನ್ನೊಂದು ಸಿನಿಮಾ ಕೊನೆಗೂ ಬರ್ತಿದೆ. ಕೆಜಿಎಫ್ ಹೇಗೆ ವಿಶ್ವದಗಲ ಬಾಹು ಹಸ್ತ ಚಾಚಿತ್ತೋ ಅದಕ್ಕಿಂತ ಹೆಚ್ಚಾಗಿ ಸಲಾರ್ ಅಜಾನುಬಾಹುವಾಗಿ ಹೊರಹೊಮ್ಮಲಿದೆ. ಹೊಂಬಾಳೆ ಸಂಸ್ಥೆ ಈಗಿನಿಂದಲೇ ಸಕಲ ಸಿದ್ಧತೆ ಮಾಡಿಕೊಂಡ ಪರಿಣಾಮ ಅಮೆರಿಕಾದಲ್ಲೂ ಮುಂಗಡ ಟಿಕೆಟ್ ಬುಕಿಂಗ್ ನಡೆಯುತ್ತಿದೆ.

  • ‘ಸಲಾರ್’ ಪ್ರಿರಿಲೀಸ್ ಇವೆಂಟ್ ಅನುಮಾನ: ದೊಡ್ಡ ಮಟ್ಟದಲ್ಲೇ ರಿಲೀಸ್

    ‘ಸಲಾರ್’ ಪ್ರಿರಿಲೀಸ್ ಇವೆಂಟ್ ಅನುಮಾನ: ದೊಡ್ಡ ಮಟ್ಟದಲ್ಲೇ ರಿಲೀಸ್

    ದ್ಯ ಚಿತ್ರೋದ್ಯಮದಲ್ಲಿ ಇವೆಂಟ್ ಟ್ರೆಂಡ್ ಹೆಚ್ಚಾಗಿದೆ. ಪೋಸ್ಟ್ ರಿಲೀಸ್ ಇವೆಂಟ್, ಪ್ರಿರಿಲೀಸ್ (Event) ಇವೆಂಟ್ ಹೀಗೆ ಜನರನ್ನು ಸೇರಿಸುವುದಕ್ಕಾಗಿ ನಾನಾ ರೀತಿಯ ಕಸರತ್ತುಗಳನ್ನು ಮಾಡಲಾಗುತ್ತದೆ. ಇಂಥದ್ದೊಂದು ಯಾವುದೇ ಇವೆಂಟ್ ಸಲಾರ್ ಚಿತ್ರಕ್ಕಾಗಿ ಮಾಡುತ್ತಿಲ್ಲ ಎನ್ನುವ ವಿಷಯ ಗಾಂಧಿನಗರದಲ್ಲಿ ಓಡಾಡುತ್ತಿದೆ. ಯಾವುದೇ ಇವೆಂಟ್ ಮಾಡದೇ, ಟ್ರೈಲರ್ ಬಿಡುಗಡೆ ನಂತರ ನೇರವಾಗಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿದೆಯಂತೆ ಹೊಂಬಾಳೆ ಸಂಸ್ಥೆ.

    ಸಲಾರ್ ಪ್ರಭಾಸ್ (Prabhas) ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ ಇದು ಕೆಜಿಎಫ್ (KGF) ನಿರ್ದೇಶಕನ ಸಿನಿಮಾ ಎನ್ನುವ ನಿರೀಕ್ಷೆ. ಕೆಜಿಎಫ್ ಅನ್ನೋ ದೃಶ್ಯಕಾವ್ಯ ಕೊಟ್ಟು ಸಿನಿಮಾ ಮೇಕಿಂಗ್ ಸ್ಟೈಲ್‌ಗೆ ಹೊಸ ಭಾಷ್ಯ ಬರೆದ ನಿರ್ದೇಶಕನ ಇನ್ನೊಂದು ಸಿನಿಮಾ ಕೊನೆಗೂ ಬರ್ತಿದೆ. ಕೆಜಿಎಫ್ ಹೇಗೆ ವಿಶ್ವದಗಲ ಬಾಹು ಹಸ್ತ ಚಾಚಿತ್ತೋ ಅದಕ್ಕಿಂತ ಹೆಚ್ಚಾಗಿ ಸಲಾರ್ ಅಜಾನುಬಾಹುವಾಗಿ ಹೊರಹೊಮ್ಮಲಿದೆ. ಹೊಂಬಾಳೆ ಸಂಸ್ಥೆ ಈಗಿನಿಂದಲೇ ಸಕಲ ಸಿದ್ಧತೆ ಮಾಡಿಕೊಂಡ ಪರಿಣಾಮ ಅಮೆರಿಕಾದಲ್ಲೂ ಮುಂಗಡ ಟಿಕೆಟ್ ಬುಕಿಂಗ್ ನಡೆಯುತ್ತಿದೆ.

    ಸಲಾರ್ (Salaar) ಮೇಲಿನ ನಿರೀಕ್ಷೆ ಎಷ್ಟಿದೆ ಅಂದ್ರೆ ಈಗಾಗಲೇ ಅಮೆರಿಕಾದಲ್ಲಿ ಈಗಾಗಲೇ ಲಕ್ಷ ಡಾಲರ್ ಕಲೆಕ್ಷನ್ ಟಿಕೆಟ್‌ನಿಂದ ಬಂದಿದೆ. ಅದ್ಹೇಗೆ ಅನ್ನೋದು ನಿಮ್ಮ ಅನುಮಾನವೇ? ಅನೇಕ ದೇಶಗಳಲ್ಲಿ ಸಲಾರ್ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಅಮೆರಿಕಾ ಸಮೇತ. ಅದರಲ್ಲೂ ನಾರ್ಥ್ ಅಮೆರಿಕಾದಲ್ಲಿ ಹೆಚ್ಚಿನ ಭಾರತೀಯರಿದ್ದಾರೆ. ಆ ಭಾಗದಲ್ಲಿ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರವನ್ನ ನೋಡುವ ಕುತೂಹಲ. ಇದೇ ಕಾರಣಕ್ಕೆ ಸಲಾರ್ ತಿಂಗಳಿಗೂ ಅಡ್ವಾನ್ಸ್ ಬುಕಿಂಗ್ ಸ್ಟಾರ್ಟ್ ಆಗಿದ್ದು ಮೊದಲ ದಿನವೇ ಲಕ್ಷ ಡಾಲರ್ ಮೊತ್ತದ ಟಿಕೆಟ್ ಸೇಲ್ ಆಗಿದೆ.

    ಪ್ರಶಾಂತ್ ನೀಲ್ (Prashanth Neel) ಸ್ಟೈಲ್ ಆಫ್ ಮೇಕಿಂಗ್ ಅಂದ್ಮೇಲೆ ರಹಸ್ಯಗಳ ಜಾಸ್ತಿ. ಸಲಾರ್ ಪ್ರಭಾಸ್ ಲುಕ್‌ನ ಕೆಲವೇ ಕೆಲವು ಪೋಸ್ರ‍್ಗಗಳು ಬಿಟ್ಟರೆ ಟೀಸರ್‌ನಲ್ಲೂ ಪ್ರಭಾಸ್‌ರ ಲುಕ್ ರಹಸ್ಯವಾಗೇ ಇಟ್ಟಿದ್ದಾರೆ. ಸಾಮಾನ್ಯವಾಗಿ ಟ್ರೈಲರ್ ರಿಲೀಸ್ ಆದ್ಮೇಲೆ ಕ್ರೇಜ಼್ ಹುಟ್ಟಿಕೊಳ್ಳುತ್ತೆ. ಆದರೆ ಪ್ರಶಾಂತ್ ನೀಲ್ ಸಿನಿಮಾದಲ್ಲಿ ಇದ್ಯಾವ್ದೂ ಲೆಕ್ಕಕ್ಕೆ ಬರೋದೇ ಇಲ್ಲ. ಶುರುವಿನಿಂದ ಹಿಡಿದು ರಿಲೀಸ್‌ವರೆಗೂ ಕುತೂಹಲ ಕುತೂಹಲ ಕುತೂಹಲ.

     

    ಅಂದಹಾಗೆ ಸರಿಯಾಗಿ ಸಲಾರ್ ತೆರಗಪ್ಪಳಿಸೋದನ್ನ ನೋಡಲು ಇನ್ನೊಂದು ತಿಂಗಳಷ್ಟೇ ಬಾಕಿ ಇದೆ. ಡಿಸೆಂಬರ್ 1 ಟ್ರೈಲರ್ ರಿಲೀಸ್. ಬಳಿಕ ಪ್ರಭಾಸ್ ಅಖಾಡಕ್ಕಿಳಿಯುತ್ತಾರೆ. ಪ್ರಶಾಂತ್ ನೀಲ್ ಹಗಲು ರಾತ್ರಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತಗಾಗಿದ್ದಾರೆ. ಹೊಂಬಾಳೆ ಈ ಚಿತ್ರವನ್ನ ವಿಶ್ವವ್ಯಾಪಿ ಏಕಕಾಲದಲ್ಲಿ 5 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಬೆನ್ನುಮೂಳೆ ಸಮಸ್ಯೆಯಿಂದಾಗಿ ಪ್ರಭಾಸ್ ಟ್ರೀಟ್‌ಮೆಂಟ್ ಪಡೆದು ವಿಶ್ರಾಂತಿಯಲ್ಲಿದ್ದಾರೆ. ಟ್ರೈಲರ್ ರಿಲೀಸ್ ಆದ ಬಳಿಕವೇ ಪ್ರಚಾರದ ಅಖಾಡಕ್ಕೆ ಎಂಟ್ರಿ ಕೊಡ್ತಾರೆ ಪ್ರಭಾಸ್. ಸೋ.. ಇದಿಷ್ಟು ಸಲಾರ್ ಅಖಾಡದ ಬಿಸಿ ಬಿಸಿ ಸುದ್ದಿ.

  • ‘ಸಲಾರ್’ ಚಿತ್ರದ ಹಾಟ್ ಹಾಡಿಗೆ ಕುಣಿದ ಸಿಮ್ರನ್ ಕೌರ್

    ‘ಸಲಾರ್’ ಚಿತ್ರದ ಹಾಟ್ ಹಾಡಿಗೆ ಕುಣಿದ ಸಿಮ್ರನ್ ಕೌರ್

    ಹಾಟ್ ತಾರೆ ಸಿಮ್ರನ್ ಕೌರ್ ಸಲಾರ್ ಸಿನಿಮಾದ ಮಾದಕ ಗೀತೆಗೆ ಹೆಜ್ಜೆ ಹಾಕಿದ್ದಾರೆ ಎನ್ನುವ ಮಾಹಿತಿ ತೆಲುಗು ಚಿತ್ರೋದ್ಯಮದಲ್ಲಿ ಹರಿದಾಡುತ್ತಿದೆ. ಅದ್ಧೂರಿ ಸೆಟ್ ನಲ್ಲಿ ಸಿಮ್ರನ್ ಮತ್ತು ಪ್ರಭಾಸ್ ಹಾಟ್ ಹಾಡಿಗೆ ಹೆಜ್ಜೆ ಹಾಕಿದ್ದಾರಂತೆ. ಸಲಾರ್ ಸಿನಿಮಾದ ಹುಕ್ ಸಾಂಗ್ ಇದಾಗಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಚಿತ್ರತಂಡ ಮಾಹಿತಿ ನೀಡದೇ ಇದ್ದರೂ, ತೆಲುಗಿನಲ್ಲಂತೂ ಭಾರೀ ಸುದ್ದಿ ಆಗಿದೆ.

    ಸಲಾರ್ (Salaar) ಸಿನಿಮಾದ ರಿಲೀಸ್ ಗೆ ದೊಡ್ಡಮಟ್ಟದಲ್ಲೇ ಪ್ಲ್ಯಾನ್ ಮಾಡಲಾಗುತ್ತಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹೀಗೆ ನಾನಾ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಮಲಯಾಳಂ ಭಾಷೆಯ ಸಲಾರ್ ಸಿನಿಮಾಗೆ ಪೃಥ್ವಿರಾಜ್  (Prithviraj Sukumaran) ಸಾಥ್ ನೀಡುತ್ತಿದ್ದಾರೆ. ನಿನ್ನೆಯಷ್ಟೇ ಸಿನಿಮಾದ ಪೋಸ್ಟರ್ ವೊಂದನ್ನು ಅವರು ರಿಲೀಸ್ ಮಾಡಿದ್ದಾರೆ.

    ಭಾರತೀಯ ಸಿನಿಮಾ ರಂಗ ಡಿಸೆಂಬರ್ ನಲ್ಲಿ ಮೆಗಾ ಕಾಳಗಕ್ಕೆ ಸಾಕ್ಷಿಯಾಗಲಿದೆ. ಚಿತ್ರೋದ್ಯಮದ ಮೂವರು ಭಾರೀ ಬಜೆಟ್ ಚಿತ್ರಗಳು ಬಿಡುಗಡೆ ಆಗುತ್ತಿವೆ. ತೆಲುಗಿನ ಪ್ರಭಾಸ್, ಬಾಲಿವುಡ್ ಶಾರುಖ್ ಖಾನ್ ಮತ್ತು ಮಲಯಾಳಂ ಸಿನಿಮಾ ರಂಗದ ದಿಗ್ಗಜ ಮೋಹನ್ ಲಾಲ್ (Mohanlal) ನಟನೆಯ ಚಿತ್ರಗಳು ಒಂದೇ ದಿನದಲ್ಲಿ ರಿಲೀಸ್ ಆಗುವ ಮೂಲಕ ಭರ್ಜರಿ ಪೈಪೋಟಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೋಹನ್ ಲಾಲ್ ನಟನೆಯ ನೆರು ಸಿನಿಮಾ ಡಿಸೆಂಬರ್ 21ಕ್ಕೆ ಬಿಡುಗಡೆ ಆಗುತ್ತಿದೆ.

    ಡಂಕಿ ವರ್ಸಸ್ ಸಲಾರ್

    ಅಂದುಕೊಂಡಂತೆ ಆಗಿದ್ದರೆ ನಿನ್ನೆಯೇ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ರಿಲೀಸ್ ಆಗಬೇಕಿತ್ತು. ನಾನಾ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಆದರೆ, ಸಲಾರ್ ಯಾವಾಗ ರಿಲೀಸ್ ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಸ್ವತಃ ನಿರ್ಮಾಣ ಸಂಸ್ಥೆಯೇ (Hombale Films)  ಹೊಸ ದಿನಾಂಕವನ್ನು ಘೋಷಣೆ ಮಾಡಿದ್ದು, ಡಿಸೆಂಬರ್ 22 ರಂದು ವಿಶ್ವದಾದ್ಯಂತ ಸಲಾರ್ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.

    ಭಾರತೀಯ ಸಿನಿಮಾ ರಂಗದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಇದೇ ಮೊದಲ ಬಾರಿಗೆ ಶಾರುಖ್ (Shah Rukh Khan) ಚಿತ್ರದ ಎದುರು ವಿಶ್ವಮಟ್ಟದಲ್ಲಿ ಪ್ರಭಾಸ್ ಸಿನಿಮಾ ಎದುರಾಗಿದೆ. ಇಂಥದ್ದೊಂದು ಮಾಹಿತಿಯನ್ನು ಅಧಿಕೃತವಾಗಿ ಚಿತ್ರತಂಡಗಳೇ ಹೇಳಿಕೊಂಡಿವೆ.

    ಈಗಾಗಲೇ ಶಾರುಖ್ ಖಾನ್ ನಟನೆಯ ಡಂಕಿ (Dunki) ಸಿನಿಮಾವನ್ನು  ಕ್ರಿಸ್ ಮಸ್ ಹಬ್ಬಕ್ಕಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧ ಮಾಡಿಕೊಂಡಿದೆ. 22 ಡಿಸೆಂಬರ್ 2023ರಂದು ಡಂಕಿ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಅಂದೇ ಪ್ರಭಾಸ್ (Prabhas) ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಸಲಾರ್’ ಚಿತ್ರವನ್ನೂ ಬಿಡುಗಡೆ ಮಾಡಲು ಹೊಂಬಾಳೆ ಫಿಲ್ಮ್ಸ್ ರೆಡಿಯಾಗಿದೆ.

     

    ಈಗಾಗಲೇ ಒಂದರ ಹಿಂದೆ ಒಂದು ಸಿನಿಮಾವನ್ನು ಗೆಲ್ಲಿಸಿಕೊಂಡಿದ್ದಾರೆ ಶಾರುಖ್ ಖಾನ್, ಪಠಾಣ್ ಮತ್ತು ಜವಾನ್ ಸಾವಿರಾರು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿವೆ. ಈ ಗೆಲುವಿನ ನಂತರ ಡಂಕಿ ಕೂಡ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಹೊತ್ತಲ್ಲಿ ಸಲಾರ್ ಸಿನಿಮಾ ಕೂಡ ರಿಲೀಸ್ ( Release) ಆಗುತ್ತಿದೆ. ಎರಡೂ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಹೇಗೆ ಕಮಾಯಿ ಮಾಡಲಿವೆ ಎಂದು ಕಾದು ನೋಡಬೇಕು.

  • ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಮುಂದಿನ ಚಿತ್ರಗಳು ಯಾವುವು?: ಲಿಸ್ಟ್ ಇಲ್ಲಿದೆ

    ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಮುಂದಿನ ಚಿತ್ರಗಳು ಯಾವುವು?: ಲಿಸ್ಟ್ ಇಲ್ಲಿದೆ

    ಭಾರತೀಯ ಸಿನಿಮಾ ರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್  (Hombale Films) ಐದು ವರ್ಷದಲ್ಲಿ ಬರೋಬ್ಬರಿ ಮೂರು ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡುವುದಾಗಿ ಈ ಹಿಂದೆಯೇ ತಿಳಿಸಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ಅದು ಭಾರತೀಯ ನಾನಾ ಭಾಷೆಗಳ ಚಿತ್ರಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. ಕಾಂತಾರ, ಕೆಜಿಎಫ್ ರೀತಿಯ ಹಿಟ್ ಚಿತ್ರಗಳನ್ನು ನೀಡಿರುವ ಈ ಸಂಸ್ಥೆ ಹಲವಾರು ಚಿತ್ರಗಳಿಗೆ ಈಗಾಗಲೇ ಹಣ ಹೂಡಿದೆ.

    ಕನ್ನಡ, ಮಲಯಾಳಂ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡಲು ಹೊಂಬಾಳೆ ಫಿಲ್ಮ್ಸ್ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಕನ್ನಡದ ಕಾಂತಾರ ಮತ್ತು ಕೆಜಿಎಫ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿವೆ. ಈ ಸಂಸ್ಥೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ (Salar) ಸದ್ಯದಲ್ಲೇ ಬಿಡುಗಡೆ ಆಗಲಿದೆ.

    ಪ್ರಭಾಸ್‍ ಅಭಿನಯದ ‘ಸಲಾರ್’ ಚಿತ್ರದ ಬಿಡುಗಡೆ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹೊಂಬಾಳೆ ಫಿಲಂಸ್‍ ನಿರ್ಮಾಣದ, ಪ್ರಶಾಂತ್‍ ನೀಲ್‍ ನಿರ್ದೇ‍ಶನದ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರವಾದ ‘ಸಲಾರ್ ಪಾರ್ಟ್ 1 – ಸೀಸ್‍ಫೈರ್’, ಡಿ. 22 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

    ಪ್ರೇಕ್ಷಕರಿಗೆ ಗುಣಮಟ್ಟದ ಚಿತ್ರಗಳನ್ನು ನೀಡಬೇಕೆನ್ನುವ ಹೆಬ್ಬಯಕೆಯೊಂದಿಗೆ ಹಲವು ಚಿತ್ರಗಳ ನಿರ್ಮಾಣದಲ್ಲಿ ಹೊಂಬಾಳೆ ಫಿಲಂಸ್‍ ತೊಡಗಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ‘ಯುವ’, ‘ಕಾಂತಾರ 2’ (Kantara 2), ‘ರಘು ತಥಾ’, ‘ಬಘೀರ’, ‘ಸಲಾರ್ ಪಾರ್ಟ್‍ 2’, ‘ಕೆಜಿಎಫ್‍ 3’ (KGF 3), ‘ರಿಚರ್ಡ್‍ ಆಂಟೋನಿ’, ‘ಟೈಸನ್‍’ ಮುಂತಾದ ಚಿತ್ರಗಳನ್ನು ನಿರ್ಮಿಸುತ್ತಿದೆ. ಈಗ ‘ಸಲಾರ್ 1’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗುವ ಮೂಲಕ ಈ ಸಂಭ್ರಮ ಇನ್ನಷ್ಟು ಹೆಚ್ಚಾಗಿದೆ.

    ‘ಸಲಾರ್ ಪಾರ್ಟ್ 1 – ಸೀಸ್‍ಫೈರ್’ ಚಿತ್ರದ ಬಿಡುಗಡೆ ದಿನಾಂಕದ ಜೊತೆಗೆ ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ‘ಬಾಹುಬಲಿ’ ಖ್ಯಾತಿಯ ಪ್ರಭಾಸ್‍, ‘ಕೆಜಿಎಫ್‍ 1’ ಮತ್ತು ‘ಕೆಜಿಎಫ್‍ 2’ ಚಿತ್ರದ ನಿರ್ಮಾಪಕ ವಿಜಯ್‍ ಕಿರಗಂದೂರು ಮತ್ತು ನಿರ್ದೇಶಕ ಪ್ರಶಾಂತ್‍ ನೀಲ್‍ ಮೊದಲ ಬಾರಿಗೆ ಜೊತೆಯಾಗಿ ಕೆಲಸ ಮಾಡಿದ್ದು, ಆಕ್ಷನ್‍ ಚಿತ್ರಗಳಲ್ಲಿ ನಟನೆ, ನಿರ್ಮಾಣ ಮತ್ತು ನಿರ್ದೇಶನದಲ್ಲಿ ಜನಪ್ರಿಯವಾದ ಮೂವರು ಒಟ್ಟಿಗೆ ಕೆಲಸ ಮಾಡುತ್ತಿರುವುದು ವಿಶೇಷ. ಭಾರತದ ಅತೀ ದೊಡ್ಡ ಆಕ್ಷನ್‍ ಚಿತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದ್ದು, ಇದುವರೆಗೂ ಕಂಡು ಕೇಳರಿಯದ ಬೃಹತ್ ಆಕ್ಷನ್‍ ದೃಶ್ಯಗಳು ಈ ಚಿತ್ರದ ಹೈಲೈಟ್‍ ಆಗಲಿದೆ ಎಂದು ಹೇಳಲಾಗಿದೆ.

     

    ಈ ಚಿತ್ರದಲ್ಲಿ ಪ್ರಭಾಸ್‍ ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸುತ್ತಿದ್ದು, ಕ್ರಿಸ್ಮಸ್‍ ಅಂಗವಾಗಿ ಡಿಸೆಂಬರ್ 22ರಂದು ಹಲವು ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾರುಖ್ ಸಿನಿಮಾ ಎದುರೇ ಸಲಾರ್ ರಿಲೀಸ್ : ಡೇಟ್ ಘೋಷಿಸಿದ ಹೊಂಬಾಳೆ ಫಿಲ್ಮ್ಸ್

    ಶಾರುಖ್ ಸಿನಿಮಾ ಎದುರೇ ಸಲಾರ್ ರಿಲೀಸ್ : ಡೇಟ್ ಘೋಷಿಸಿದ ಹೊಂಬಾಳೆ ಫಿಲ್ಮ್ಸ್

    ಅಂದುಕೊಂಡಂತೆ ಆಗಿದ್ದರೆ ನಿನ್ನೆಯೇ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ರಿಲೀಸ್ ಆಗಬೇಕಿತ್ತು. ನಾನಾ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಆದರೆ, ಸಲಾರ್ ಯಾವಾಗ ರಿಲೀಸ್ ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಸ್ವತಃ ನಿರ್ಮಾಣ ಸಂಸ್ಥೆಯೇ (Hombale Films)  ಹೊಸ ದಿನಾಂಕವನ್ನು ಘೋಷಣೆ ಮಾಡಿದ್ದು, ಡಿಸೆಂಬರ್ 22 ರಂದು ವಿಶ್ವದಾದ್ಯಂತ ಸಲಾರ್ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.

    ಭಾರತೀಯ ಸಿನಿಮಾ ರಂಗದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಇದೇ ಮೊದಲ ಬಾರಿಗೆ ಶಾರುಖ್ (Shah Rukh Khan) ಚಿತ್ರದ ಎದುರು ವಿಶ್ವಮಟ್ಟದಲ್ಲಿ ಪ್ರಭಾಸ್ ಸಿನಿಮಾ ಎದುರಾಗಿದೆ. ಇಂಥದ್ದೊಂದು ಮಾಹಿತಿಯನ್ನು ಅಧಿಕೃತವಾಗಿ ಚಿತ್ರತಂಡಗಳೇ ಹೇಳಿಕೊಂಡಿವೆ. ಇದನ್ನೂ ಓದಿ:ರಜನಿಕಾಂತ್ ವಿರುದ್ಧ ಮತ್ತೆ ಗುಡುಗಿದ ವಾಟಾಳ್ ನಾಗರಾಜ್

    ಈಗಾಗಲೇ ಶಾರುಖ್ ಖಾನ್ ನಟನೆಯ ಡಂಕಿ (Dunki) ಸಿನಿಮಾವನ್ನು  ಕ್ರಿಸ್ ಮಸ್ ಹಬ್ಬಕ್ಕಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧ ಮಾಡಿಕೊಂಡಿದೆ. 22 ಡಿಸೆಂಬರ್ 2023ರಂದು ಡಂಕಿ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಅಂದೇ ಪ್ರಭಾಸ್ (Prabhas) ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಸಲಾರ್’ ಚಿತ್ರವನ್ನೂ ಬಿಡುಗಡೆ ಮಾಡಲು ಹೊಂಬಾಳೆ ಫಿಲ್ಮ್ಸ್ ರೆಡಿಯಾಗಿದೆ.

    ಅಂದುಕೊಂಡಂತೆ ಆಗಿದ್ದರೆ, ಸೆಪ್ಟೆಂಬರ್ 28ರಂದು ಸಲಾರ್ (Salaar) ಸಿನಿಮಾ ರಿಲೀಸ್ ಆಗಬೇಕಿತ್ತು. ಈ ದಿನಾಂಕವನ್ನು ಘೋಷಿಸಿಯೂ ಆಗಿತ್ತು. ಆದರೆ, ಕೆಲ ತಾಂತ್ರಿಕ ಕಾರಣಗಳಿಂದಾಗಿ ರಿಲೀಸ್ ಆಗಲಿಲ್ಲ. ಮುಂದಿನ ದಿನಾಂಕವನ್ನೂ ಹೊಂಬಾಳೆ ಫಿಲ್ಮ್ಸ್ ಘೋಷಿಸುವುದಾಗಿ ತಿಳಿಸಿತ್ತು ಅದರಂತೆ ಇಂದು ದಿನಾಂಕ ಘೋಷಣೆ ಮಾಡಿದೆ.

     

    ಈಗಾಗಲೇ ಒಂದರ ಹಿಂದೆ ಒಂದು ಸಿನಿಮಾವನ್ನು ಗೆಲ್ಲಿಸಿಕೊಂಡಿದ್ದಾರೆ ಶಾರುಖ್ ಖಾನ್, ಪಠಾಣ್ ಮತ್ತು ಜವಾನ್ ಸಾವಿರಾರು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿವೆ. ಈ ಗೆಲುವಿನ ನಂತರ ಡಂಕಿ ಕೂಡ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಹೊತ್ತಲ್ಲಿ ಸಲಾರ್ ಸಿನಿಮಾ ಕೂಡ ರಿಲೀಸ್ ( Release) ಆಗುತ್ತಿದೆ. ಎರಡೂ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಹೇಗೆ ಕಮಾಯಿ ಮಾಡಲಿವೆ ಎಂದು ಕಾದು ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸಲಾರ್’ ಸೆಟ್‌ನಿಂದ ಮ್ಯಾಟರ್ ಲೀಕ್- ಪ್ರಭಾಸ್ ಚಿತ್ರದ ಬಿಗ್ ಅಪ್‌ಡೇಟ್

    ‘ಸಲಾರ್’ ಸೆಟ್‌ನಿಂದ ಮ್ಯಾಟರ್ ಲೀಕ್- ಪ್ರಭಾಸ್ ಚಿತ್ರದ ಬಿಗ್ ಅಪ್‌ಡೇಟ್

    ‘ಸಲಾರ್’ (Salaar) ಅಖಾಡದಿಂದ ಹೊಸ ವಿಚಾರವೊಂದು ಹೊರಬಂದಿದೆ. ಆದರೆ ಇದು ಅಧಿಕೃತವಲ್ಲ. ಏನಾದರೂ ಈ ಸುದ್ದಿ ಕೇಳಿ ಪ್ರಭಾಸ್ ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇದು ನಿಜವೇ ಆಗಿದ್ದರೆ ಸರಪಟಾಕಿ ಅಂಗಡಿಯನ್ನೇ ಚಿತ್ರಮಂದಿರ ಮುಂದೆ ತರುವುದಾಗಿ ಘೋಷಿಸಿದ್ದಾರೆ. ಹಾಗಿದ್ದರೆ ಪ್ರಶಾಂತ್ ನೀಲ್- ಪ್ರಭಾಸ್ (Prabhas) ಅದ್ಯಾವ ಕಿಡಿಯನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಜನರಿಗಾಗಿ ತೋರಿಸಲು ಕಾದಿದ್ದಾರೆ? ಪ್ರಭಾಸ್ ಅಪ್ಪ- ಮಗನಾಗಿ ಕಾಣಿಸುತ್ತಿರುವುದು ಸತ್ಯವಾ? ಸಾವಿರ ಜನರನ್ನು ಹೊಡೆದುರುಳಿಸುವ ಅದ್ಭುತ ಸಿಕ್ವೇನ್ಸ್ ಇರೋದು ಪಕ್ಕಾನಾ? ಈ ಬಗ್ಗೆ ಇಲ್ಲಿದೆ ಮಾಹಿತಿ.

    ಸೆಪ್ಟೆಂಬರ್ 28 ಇದೊಂದು ದಿನಕ್ಕಾಗಿ ಇಡೀ ವಿಶ್ವದ ಸಿನಿ ಪ್ರೇಮಿಗಳು ಕಾಯುತ್ತಿದ್ದಾರೆ. ಒಂದೊಂದು ದಿನವನ್ನು ಒಂದೊಂದು ಯುಗದಂತೆ ಕಳೆಯುತ್ತಿದ್ದಾರೆ. ಅದ್ಯಾವ ರೀತಿ ‘ಸಲಾರ್’ ಗೆದ್ದು ಬೀಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಹಿಂದೆ ನೋಡಿರಬಾರದು ಮುಂದೆ ನೋಡಬಾರದು ಅಂಥ ಮಿರಾಕಲ್ ನಡೆಯುತ್ತದಾ? ಪ್ರಶಾಂತ್ ನೀಲ್ ಆ ಕ್ಷಣವನ್ನು ನಮಗೆ ಒದಗಿಸುತ್ತಾರಾ? ಸತತ ಮೂರು ಸೋಲಿನಿಂದ ತತ್ತರಿಸಿರುವುದು ಪ್ರಭಾಸ್ ಒಂದೇ ದಿನ ದೀಪಾವಳಿ ಹಾಗೂ ಗಣೇಶ ಹಬ್ಬವನ್ನು ಮಾಡಲಿದ್ದಾರಾ? ಇಂಥ ಪ್ರಶ್ನೆಗಳನ್ನು ಇಟ್ಟುಕೊಂಡು ದಿನ ತಳ್ಳುತ್ತಿದೆ ಡಾರ್ಲಿಂಗ್ ಭಕ್ತಗಣ.

    ‘ಸಲಾರ್’ ಆರಂಭವಾದಾಗ ಇದನ್ನು ಕನ್ನಡದ ಉಗ್ರಂ ರಿಮೇಕ್ ಎಂದವರಿದ್ದರು. ಆ ಕತೆಯನ್ನೇ ದೊಡ್ಡ ಕ್ಯಾನ್ವಾಸ್‌ನಲ್ಲಿ ಮಾಡಲು ನೀಲ್ ಸಜ್ಜಾಗಿದ್ದಾರೆ. ಈ ಮಾತು ಕೇಳಿತ್ತು. ಯಾವಾಗ ಪೃಥ್ವಿರಾಜ್ ಸುಕುಮಾರ್ ಇನ್ನೊಂದು ಪಾತ್ರದಲ್ಲಿ ಕಾಣಿಸಿದರೋ ಗಾಳಿ ಮಾತಿಗೆ ಹೊಸ ಹುರುಪು ಬಂತು. ಅಣ್ಣ ಹಾಗೂ ತಮ್ಮನ ಬಾಂಧವ್ಯ ಜೊತೆಗೆ ಸೇಡಿನ ಕತೆ ಎನ್ನುವುದು ಹಾರಾಡಿತು. ಎಲ್ಲವೂ ಬರೀ ಪಟಗಳೇ. ಯಾವುದಕ್ಕೂ ಸೂತ್ರ ಇರಲಿಲ್ಲ. ಇದ್ದದ್ದು ಕೇವಲ ಬಣ್ಣ ಮಾತ್ರ. ಈಗ ಅದೆಲ್ಲವನ್ನು ಬಿಟ್ಟು ಇನ್ನೊಂದು ಹಾದಿಯಲ್ಲಿ ಕತೆ ಲಿಂಕ್ ಬಿಚ್ಚಿಕೊಂಡಿದೆ. ಇದು ಅಪ್ಪ ಹಾಗೂ ಮಗನ ಕತೆ. ಅಪ್ಪನ ಪಾತ್ರಕ್ಕೆ ಸಲಾರ್ ಹಾಗೂ ಮಗನ ಪಾತ್ರಕ್ಕೆ ದೇವ್ ಭಾಯ್ ಹೆಸರು ಇಡಲಾಗಿದೆ. ಸತ್ಯವಾ ಸುಳ್ಳಾ? ಇದನ್ನೂ ಓದಿ:ತಂದೆ ಸ್ಥಾನವನ್ನೂ ತುಂಬಿ ಮಗಳಿಗೆ ಹೆಸರಿಟ್ಟ ನಟಿ ದಿವ್ಯಾ ಶ್ರೀಧರ್

    ಅಷ್ಟೊಂದು ಜತನದಿಂದ ನಿಗೂಢವಾಗಿ ಯಾರಿಗೂ ಗೊತ್ತಾಗದಂತೆ. ಶೂಟಿಂಗ್ ಸೆಟ್‌ನಿಂದ ಒಂದೇ ಒಂದು ಸುದ್ದಿಯ ನೊಣ ಆಚೆ ಹೋಗದಂತೆ ನೀಲ್ ಎಚ್ಚರಿಕೆ ವಹಿಸಿದ್ದಾರೆ. ಹೀಗಿದ್ದರೂ ಅದೊಂದು ವಿಡಿಯೋ ವೈರಲ್ ಆಗಿದೆ. ಅಭಿಮಾನಿ ಎಂದು ಹೇಳಿಕೊಂಡಿರುವ ವ್ಯಕ್ತಿ ಇದರಲ್ಲಿ ಮಾತಾಡಿದ್ದಾನೆ. ಶೂಟಿಂಗ್ ಸೆಟ್‌ಗೆ ಹೋಗಿದ್ದು, ಅಲ್ಲಿ ಏನು ನಡೆಯುತ್ತಿದೆ. ಯಾರ‍್ಯಾರು ಇದ್ದರು ಎಷ್ಟು ಜನರಿದ್ದರು ಅದ್ಯಾವ ಮಹಾ ದೃಶ್ಯಕ್ಕೆ ಕ್ಯಾಮೆರಾ ಸುತ್ತುತ್ತಿತ್ತು. ಹೀಗೆ ಒಂದೊಂದನ್ನೇ ಬಿಚ್ಚಿಟ್ಟಿದ್ದಾನೆ. ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೆಲ್ಲ ನಿಜವಾ ಎಂದು ಕೇಳುವಂತಿಲ್ಲ. ಆದರೆ ಫ್ಯಾನ್ಸ್ ಮಾತ್ರ ಬಾಯಿ ಚಪ್ಪರಿಸಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

    ಇದರಲ್ಲಿ ಪ್ರಭಾಸ್ ಎರಡು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಪ್ಪನಾಗಿ ಸಲಾರ್ ಮಗನಾಗಿ ದೇವ್ ಭಾಯ್ ನಟಿಸುತ್ತಿದ್ದಾರೆ. ಅದೊಂದು ದೃಶ್ಯದಲ್ಲಿ ಸುಮಾರು ಸಾವಿರ ಜನರಿದ್ದರು. ಮಗ ಪ್ರಾಣಾಪಾಯದಲ್ಲಿ ಸಿಕ್ಕಿರುತ್ತಾನೆ. ಆಗ ಮಗನನ್ನು ಕಾಪಾಡಲು ಅಪ್ಪ ಸಲಾರ್ ಬರುತ್ತಾನೆ. ಸಾವಿರ ಜನರನ್ನು ಅಪ್ಪ ಮಗ ಇಬ್ಬರೂ ನಾಶ ಮಾಡುತ್ತಾರೆ. ಬಹುಶಃ ಇದೊಂದು ಎರಡು ತಲೆಮಾರಿನ ಕತೆ. ಜಗಪತಿ ಬಾಬು ಹಾಗೂ ಪೃಥ್ವಿರಾಜ್ ಅಪ್ಪ ಮಗ. ಇನ್ನೊಂದು ಕಡೆ ಸಲಾರ್ ಹಾಗೂ ದೇವ್ ಭಾಯ್. ಎರಡು ತಲೆಮಾರಿನ ಕತೆ ಎರಡು ಭಾಗದಲ್ಲಿ ಬರಲಿದೆಯೇನೋ.

    ಇದು ಆ ಅಭಿಮಾನಿ ಹೇಳಿದ ಮಾತು. ಆದರೆ ಈಗಾಗಲೇ ಶೂಟಿಂಗ್ ಮುಗಿದು ಹೋಗಿದೆ. ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಇನ್ನೇನು ಸಿನಿಮಾ ರಿಲೀಸ್ ಆಗುವ ಸಮಯದಲ್ಲಿ ಈ ಅಭಿಮಾನಿ ಹೀಗೆ ಹೇಳಿದ್ದಾನೆ. ಇದನ್ನು ಆತ ಯಾವಾಗ ಎಲ್ಲಿ ನೋಡಿದ? ನಿಜಕ್ಕೂ ಇದೇ ಕತೆಯಾ? ಈ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ ಉತ್ತರ ಹೇಳಬೇಕಾದವರು ಯಾರು? ಪ್ರಶಾಂತ್ ನೀಲ್ ಮಾತ್ರ. ಅವರು ಹೈದ್ರಾಬಾದ್‌ನಿಂದ ನೇರವಾಗಿ ರವಿ ಬಸ್ರೂರ್ ಸ್ಟುಡಿಯೋಕ್ಕೆ ಬಂದಿದ್ದಾರೆ. ಬಸ್ರೂರಿನಲ್ಲಿ ರೀ- ರೆಕಾರ್ಡಿಂಗ್ ಸೇರಿದಂತೆ ಎಲ್ಲ ಕಾರ್ಯ ನಡೆಯುತ್ತಿವೆ. ಹೈದ್ರಾಬಾದ್‌ನಲ್ಲಿ ಕತೆ ಲೀಕ್ ಆಗುವ ಸಾಧ್ಯತೆ ಇದೆ ಎನ್ನುವುದಕ್ಕಾಗಿ ಈ ಏರ್ಪಾಡು ಮಾಡಿಕೊಂಡಿದ್ದಾರೆ. ಆದರೆ ಈಗ ಹೀಗಾಗಿದೆ.

    ದೊಡ್ಡ ಸಿನಿಮಾ ಯಾವಾಗಲೂ ದೊಡ್ಡ ಸಿನಿಮಾನೇ. ಹೀಗಾಗಿಯೇ ಅದರ ಒಂದೊಂದು ಪೋಸ್ಟರ್, ವಿಡಿಯೋ, ಕತೆ. ಪ್ರತಿಯೊಂದೂ ಹೊರ ಬಿದ್ದರೆ ಬೆಂಕಿ ಹಚ್ಚುತ್ತದೆ. ಹೀಗಿದೆಯಾ ಹಾಗಿದೆಯಾ ಎನ್ನುವ ಚರ್ಚೆ ನಡೆಯುತ್ತದೆ. ಇನ್ನು ಪ್ಯಾನ್ ಇಂಡಿಯಾ ಡೈರೆಕ್ಟರ್ ಅಂಡ್ ಸ್ಟಾರ್ ಅಕ್ಕ ಪಕ್ಕ ನಿಂತಾಗ. ಈ ಸುದ್ದಿಗಳು ಸಾಮಾನ್ಯ. ಅದೇನೆ ಇರಲಿ, ಈಗಾಗಲೇ ಸಲಾರ್‌ಗೆ ಕ್ಷಣಗಣನೆ ಆರಂಭವಾಗಿದೆ. ಸದ್ಯದಲ್ಲೇ ಟ್ರೈಲರ್ ಹೊರ ಬೀಳಲಿದೆ. ಅದಾದ ನಂತರ ಹಾಡು, ಮೇಕಿಂಗ್ ವಿಡಿಯೋ ನೋಡುತ್ತೀರಿ. ಕೊನೆಗೆ ಪ್ರಭಾಸ್ ಬೆಳ್ಳಿ ತೆರೆ ಮೇಲೆ ದಿಬ್ಬಣ ಹೊರಡಲಿದ್ದಾರೆ. ಅಫ್‌ಕೋರ್ಸ್ ಜೊತೆಗೆ ಪ್ರಶಾಂತ್ ನೀಲ್ ಕೂಡ ರಣಕಹಳೆ ಊದಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪದೇ ಪದೇ ಪ್ರಭಾಸ್ ವಿರುದ್ದ ಕಿಡಿಕಾರುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ

    ಪದೇ ಪದೇ ಪ್ರಭಾಸ್ ವಿರುದ್ದ ಕಿಡಿಕಾರುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ

    ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಸುಖಾಸುಮ್ಮನೆ ಪ್ರಭಾಸ್ (Prabhas) ವಿರುದ್ಧ ಕುಟುಕುತ್ತಿದ್ದಾರೆ. ಸಲಾರ್ ಸಿನಿಮಾದ ಟೀಸರ್ ವೇಳೆ ‘ಪ್ರಭಾಸ್ ಒಬ್ಬ ನಟನೆ ಅಲ್ಲ’ ಎನ್ನುವ ಅರ್ಥದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದೀಗ ಮತ್ತೆ ಪ್ರಭಾಸ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.

    ಆದಿಪುರುಷ (Adipurusha) ವಿಚಾರವಾಗಿ ಮಾತನಾಡಿರುವ ವಿವೇಕ್ ಅಗ್ನಿಹೋತ್ರಿ, ‘ಮಹಾಭಾರತ, ರಾಮಾಯಣದಂತಹ ಕಥೆಗಳನ್ನು ಸಿನಿಮಾ ಮಾಡುವಾಗ ಅವುಗಳಿಗೆ ಸ್ಟಾರ್ ನಟರ ಅವಶ್ಯಕತೆ ಇರುವುದಿಲ್ಲ. ಅವರೇ ಜನರಿಗೆ ಸ್ಟಾರ್ ಆಗಬೇಕು. ನಟರು ರಾತ್ರಿಯೆಲ್ಲ ಕುಡಿದು ಬೆಳಗ್ಗೆ ದೇವರು ಆಗು ಅಂದರೆ ಅದು ಹೇಗೆ ಸಾಧ್ಯ?’ ಎಂದು ಪರೋಕ್ಷವಾಗಿ ಪ್ರಭಾಸ್ ಅವರನ್ನು ಟೀಕಿಸಿದ್ದಾರೆ. ಇದನ್ನೂ ಓದಿ:ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಬಾಲಿಗೆ ಹಾರಿದ ಹರ್ಷಿಕಾ ಪೂಣಚ್ಚ

    ಪದೇ ಪದೇ ತಮ್ಮ ನೆಚ್ಚಿನ ನಟನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಬರೆಯುತ್ತಿರುವ ವಿವೇಕ್ ಅಗ್ನಿಹೋತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಪ್ರಭಾಸ್ ಅಭಿಮಾನಿಗಳು. ವಿವೇಕ್ ಬಗ್ಗೆ ಸಾಕಷ್ಟು ಕೆಟ್ಟ ಕೆಟ್ಟ ಕಾಮೆಂಟ್ ಗಳನ್ನೂ ಬರೆದು ಹಾಕಿದ್ದಾರೆ. ಅಲ್ಲದೇ, ಎಂತಹ ಸಿನಿಮಾಗಳನ್ನು ವಿವೇಕ್ ಮಾಡಬೇಕು ಎನ್ನುವ ಸಲಹೆಯನ್ನೂ ಕೆಲವರು ಕೊಟ್ಟಿದ್ದಾರೆ.

     

    ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾಗೆ ನೂರೆಂಟು ವಿಘ್ನಗಳು ಎದುರಾದವು. ಆದರೂ, ಬಾಕ್ಸ್ ಆಫೀಸಿನಲ್ಲಿ ಗೆಲ್ಲುವಲ್ಲಿ ಆದಿಪುರುಷ ವಿಫಲನಾದ. ಇದೀಗ ಪ್ರಭಾಸ್ ನಟನೆಯ ಸಲಾರ್ (Salar) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಆ ಸಿನಿಮಾ ಬಗ್ಗೆ ನಿರೀಕ್ಷೆ ಇಮ್ಮಡಿಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆದಿ ಪುರುಷನಿಗೆ ನೂರೆಂಟು ವಿಘ್ನ: ಪ್ರಶಾಂತ್ ನೀಲ್ ಮೇಲೆ ಹೆಚ್ಚಿದ ಒತ್ತಡ

    ಆದಿ ಪುರುಷನಿಗೆ ನೂರೆಂಟು ವಿಘ್ನ: ಪ್ರಶಾಂತ್ ನೀಲ್ ಮೇಲೆ ಹೆಚ್ಚಿದ ಒತ್ತಡ

    ಪ್ರಭಾಸ್ ಫ್ಯಾನ್ಸ್ ಕೆಂಡ ಕೆಂಡವಾಗಿದ್ದಾರೆ. ಎರಡು ಸೋಲು ನೋಡಿದ್ದರು. ಆದಿಪುರುಷ (Adipurush) ಹ್ಯಾಟ್ರಿಕ್ ಫೇಲ್ಯೂವರ್. ಭಕ್ತಗಣ ಇನ್ನೇನು ಮಾಡಬೇಕು? ಹೈರಾಣಾಗಿದ್ದಾರೆ. ಈ ಹೊತ್ತಿಗೆ ಹೊಂಬಾಳೆ ಸಂಸ್ಥೆ ಮಹಾ ಘೋಷಣೆ ಮಾಡಿದೆ. `ಜಗತ್ತಿಗೆ ಹೊಸ ಉಸಿರು ನೀಡಲು ಸಲಾರ್ ಬರುತ್ತಿದೆ. ಇನ್ನೇನು ನೂರು ದಿನ ಬಾಕಿ.’ ಇದೊಂದು ಸಾಲು ಡಾರ್ಲಿಂಗ್ ಫ್ಯಾನ್ಸ್ಗೆ ಹೊಸ ಹುಮ್ಮಸ್ಸು ನೀಡಿದೆ. ಹಾಗಿದ್ದರೆ ನೂರು ದಿನದಲ್ಲಿ ಏನೇನಾಗಲಿದೆ? ಪ್ರಶಾಂತ್ ನೀಲ್ (Prashant Neel) ಮೇಲೆ ಒತ್ತಡ ಯಾವ ಪರಿ ಇದೆ? ಅಸಲಿಗೆ ಸಲಾರ್ ಕತೆ ಇದೇನಾ? ಆದಿಪುರುಷ ಸೋಲನ್ನು ಪ್ರಭಾಸ್ (Prabhas) ಸಲಾರ್‌ನಲ್ಲಿ ತೀರಿಸಿಕೊಳ್ಳುತ್ತಾರಾ? ಇಂತಹ ನೂರಾರು ಪ್ರಶ್ನೆಗಳು ಅಭಿಮಾನಿಗಳಲ್ಲಿವೆ.  ಸಲಾರ್ ಇನ್ನೇನು ನೂರೇ ನೂರು ದಿನ ಬಾಕಿ. ಸೆಪ್ಟೆಂಬರ್ 28 ಜಗತ್ತಿನ ತುಂಬಾ ಮೆರವಣಿಗೆ ಹೊರಡಲಿದೆ. ಬರೀ ಪ್ರಭಾಸ್ ಫ್ಯಾನ್ಸ್ ಮಾತ್ರ ಅಲ್ಲ, ಇಡೀ ಜಗತ್ತೇ ಇದರತ್ತ ನೋಡುತ್ತಿದೆ. ಬರೀ ನೋಡುತ್ತಿಲ್ಲ ಎರಡೂ ಕಣ್ಣನ್ನು ಇಷ್ಟಗಲ ಬಿಟ್ಟಿದೆ. ಕಿವಿಯನ್ನು ಊರಗಲ ಅಗಲಿಸಿದೆ. ಮೈ ತುಂಬಾ ಬರೀ ಸಲಾರ್ (Salar) ಗುಂಗು. ಕೆಜಿಎಫ್ ಎರಡು ಸೂಪರ್ ಹಿಟ್ ಕೊಟ್ಟಿರುವ ಪ್ರಶಾಂತ್ ಈ ಬಾರಿ ಇನ್ಯಾವ ಲೋಕ ತೋರಿಸಲಿದ್ದಾರೆ? ಅದ್ಯಾವ ಹೊಸ ಜಗತ್ತಿಗೆ ನಮ್ಮನ್ನು ಕರೆದುಕೊಂಡು ಹೋಗಲಿದ್ದಾರೆ? ಎರಡು ಸೋಲಿನಿಂದ ಕಂಗೆಟ್ಟಿರುವ ಪ್ರಭಾಸ್‌ಗೆ ಜೀವದಾನ ನೀಡಲಿದೆಯಾ ಸಲಾರ್? ಇಂತಹ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿವೆ.

    ನಿಜ ಹೇಳಬೇಕೆಂದರೆ ನೀಲ್‌ಗೆ ಇಷ್ಟೊಂದು ಒತ್ತಡ ಇರಲಿಲ್ಲ. `ಸಾಹೋ’ ಸೋತಿತ್ತು ನಿಜ. ಆದರೆ ಇನ್ನೊಂದು ಇತ್ತಲ್ಲ`ರಾಧೇ ಶ್ಯಾಮ್’. ಅದು ಬಿಡುಗಡೆಯಾಗಿರಲಿಲ್ಲ. ಅಷ್ಟರಲ್ಲಿ ಸಲಾರ್ ಘೋಷಣೆಯಾಯಿತು. ರಾಧೇ ಶ್ಯಾಮ್ ಗೆದ್ದೇ ಗೆಲ್ಲುತ್ತೆ ಎನ್ನುವ ನಂಬಿಕೆಯಲ್ಲಿದ್ದರು ಎಲ್ಲರೂ. ಆದರೆ ನೋಡನೋಡುತ್ತಲೇ ರಾಧೇ ಶ್ಯಾಮ್ ಅಡ್ಡಡ್ಡ ಉದ್ದುದ್ದ ಮಲಗಿತು. ಬಾಹುಬಲಿಯಂಥ ಸೂಪರ್ ಹಿಟ್ ಕೊಟ್ಟ ಹೀರೋಗೆ ಸತತ ಎರಡು ಬಾರಿ ಸೀದು ಹೋದ ತೆಂಗಿನ ಕಾಯಿ ಚಿಪ್ಪು. ಭಕ್ತಗಣ ಉರಿದುಕೊಂಡಿತು. `ಅಯ್ಯೋ…ರಾಜಮೌಳಿ ಇದ್ದಿದ್ದಕ್ಕೆ ಪ್ರಭಾಸ್ ಗೆದ್ದಿದ್ದು…’ ಎಂದರು ಜನ ಸಾಮಾನ್ಯರು. ಮುಂದೇನು? ಆಗಲೇ ಅಖಾಡಕ್ಕೆ ಇಳಿಯಲು ಸಜ್ಜಾಯಿತು ಓಂ ರಾವುತ್ ನಿರ್ದೇಶನದ ಆದಿಪುರುಷ.  ಐದು ನೂರು ಕೋಟಿ ಬಜೆಟ್. ಟೀಸರ್ ಮಾಡಿದ ಹಳವಂಡ. ಜನರು ಕೆಂಡ ಕೆಂಡ. ರಿಲೀಸ್ ಡೇಟ್ ಮುಂದಕ್ಕೆ ಹೀಗೆ ಏನೇನೊ ತೆಗ್ಗು ದಿನ್ನೆಗಳನ್ನು ದಾಟಿ ಉಸ್ಸಪ್ಪಾ ಅನ್ನುತ್ತಾ ಮೊನ್ನೆ ಮೊನ್ನೆ ಸಿನಿಮಾ ರಿಲೀಸ್ ಆಯಿತು. ಮೂರು ದಿನಕ್ಕೆ ಮುನ್ನೂರು ಕೋಟಿ ಗಳಿಸಿತು. ಸೋಮವಾರದ ಹೊತ್ತಿಗೆ ಖಾಲಿ ಜೋಳಿಗೆ ಹಾಕಿಕೊಂಡು ನಿರ್ಮಾಪಕರು ಗುಳೆ ಮಾತ್ರ ಹೊರಡುವುದು ಬಾಕಿ ಉಳಿಯಿತು. ಪ್ರಭಾಸ್ ಎಲ್ಲಿದ್ದಾರೆಂದು ಪತ್ತೆ ಇಲ್ಲ. ಬಹುತೇಕ ಭಾರತೀಯರು ಸಿನಿಮಾ ವಿರುದ್ಧ ಕೇಸು ಜಡಿಯುತ್ತಿದ್ದಾರೆ. ಒಂದು ಕಡೆ ಮೂರು ಸೋಲು. ಇನ್ನೊಂದು ಕಡೆ ಜನರು ಹುಟ್ಟಿಸಿದ ದಿಗಿಲು. ಡಾರ್ಲಿಂಗ್ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾರೆ.

    ಈಗ ಮತ್ತೆ ಸಲಾರ್ ಕಡೆ ಎಲ್ಲರೂ ತಿರುಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಭಾಸ್ ಫ್ಯಾನ್ಸ್ ಬೇಡಿಕೊಳ್ಳುತ್ತಿರುವುದು ಒಂದೇ ಒಂದು ಮಾತು. `ಸಲಾರ್ ಪಕ್ಕಾ ಸೂಪರ್ ಹಿಟ್ ಆಗುತ್ತದೆ. ಪ್ರಭಾಸ್ ಮತ್ತೆ ಮೈ ಕೊಡವಿ ಎದ್ದು ನಿಲ್ಲುತ್ತಾರೆ. ಪ್ರಶಾಂತ್ ನೀಲ್ ನಮ್ಮ ನಂಬಿಕೆಗೆ ಮೋಸ ಮಾಡುವುದಿಲ್ಲ’ ಇದನ್ನೇ ಮಣಮಣಿಸುತ್ತಿದ್ದಾರೆ. ಯಾವ ಹೀರೋ ಫ್ಯಾನ್ಸ್ಗಾದರೂ ಹೀಗಾಗೋದು ಸಹಜ. ಅದನ್ನೇ ಅವರು ಮಾಡುತ್ತಿದ್ದಾರೆ. ಇದೇ ಹೊತ್ತಿಗೆ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಹೊಸ ಘೋಷಣೆ ಮಾಡಿದೆ. ಪ್ರಭಾಸ್ ಫ್ಯಾನ್ಸ್ಗೆ ಹೊಸ ಹುರುಪು ನೀಡಿದೆ.  ಸಲಾರ್ ಸಿನಿಮಾ ಬಿಡುಗಡೆಗೆ ಇನ್ನು ನೂರು ದಿನ ಬಾಕಿ. ಜಗತ್ತಿನ ಸಿನಿ ಪ್ರೇಮಿಗಳಿಗೆ ಹೊಸ ಉಸಿರು ನೀಡಲು ಬರಲಿದೆ. ನೀವೆಲ್ಲ ಹಬ್ಬಕ್ಕೆ ಸಜ್ಜಾಗಿ.  ಇದೊಂದು ಸಾಲು ಎಲ್ಲರ ನಿದ್ದೆ ಕೆಡಿಸಿದೆ. ನೂರು ದಿನ ಎಷ್ಟು ಹೊತ್ತು ಬಿಡು ಬಂದು ಬಿಡುತ್ತದೆ. ಹೀಗಂತ ಅಂದುಕೊಂಡು ಈಗಿನಿಂದಲೇ ಸಲಾರ್ ಸಂಭ್ರಮಕ್ಕೆ ಸಜ್ಜಾಗುತ್ತಿದ್ದಾರೆ ಜನರು. ಹೀಗಾಗಿ ಪ್ರಶಾಂತ್ ನೀಲ್ ಈ ಐದು ಅಕ್ಷರದತ್ತ ಎಲ್ಲರ ಚಿತ್ತ ನೆಟ್ಟಿದೆ. ಮೊದಲಿನ ಎರಡು ಸಿನಿಮಾ ಇಡೀ ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ದು ಸತ್ಯ. ಅದಕ್ಕಿಂತ ಭಿನ್ನವಾಗಿ ಇನ್ನೇನು ಕೊಡಲಿದ್ದಾರೆ ನೀಲ್? ಪ್ರಭಾಸ್‌ಗೆ ಈಗಾಗಲೇ ನ್ಯಾಷನಲ್ ಸ್ಟಾರ್ ಪಟ್ಟ ದಕ್ಕಿದೆ. ಅದರ ಜೊತೆಗೆ ಎರಡು ಸೋಲಿನ ಸಿಂಹಾಸನವೂ ಬೇಡ ಎಂದರೂ ಜನ ಕೊಟ್ಟಿದ್ದಾರೆ. ಕೆಜಿಎಫ್ ಗೆಲುವಿನ ಸರಣಿ ಮುಂದುವರೆಯಬೇಕು. ಪ್ರಭಾಸ್ ಸೋಲಿನ ಸರಪಳಿ ತುಂಡಾಗಬೇಕು. ಎರಡು ಗುಡ್ಡಗಳನ್ನು ಒಂದೊಂದು ಹೆಗಲ ಮೇಲೆ ಹೊತ್ತಿದ್ದಾರೆ ನೀಲ್. ಉತ್ತರ ಸಲಾರ್ ಕೊಡಲೇಬೇಕು.

    ಈ ಸಮಯಕ್ಕೆ ಮತ್ತೊಂದು ಖಬರ್ ಸಲಾರ್ ಅಖಾಡದಿಂದ ಬಂದಿದೆ. ಕೆಜಿಎಫ್‌ನಲ್ಲಿ ಚಿನ್ನದ ಗಣಿ ಹಾಗೂ ಅಮ್ಮನ ಸೆಂಟಿಮೆಂಟ್ ಬಳಸಿದ್ದರು ನೀಲ್. ಎರಡೂ ಅದ್ಭುತವಾಗಿ ಸೇರಿಕೊಂಡು ಕಿಚ್ಚು ಹಚ್ಚಿದ್ದವು. ಈಗ ಇನ್ನ್ಯಾವ ಕತೆ ಹೆಣೆದಿದ್ದಾರೆ? ಪ್ರಭಾಸ್ ಇಮೇಜ್‌ಗೆ ಧಕ್ಕೆಯಾಗದಂತೆ ಅದ್ಯಾವ ಹೊಸ ಹೊಳಪನ್ನು ನೀಡಲಿದ್ದಾರೆ? ಈ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ ಜನರು. ಒಂದು ಮೂಲದ ಪ್ರಕಾರ ಇದು ಇಬ್ಬರು ಸ್ನೇಹಿತರ ಕತೆ ಹೊಂದಿದೆಯಂತೆ. ಗೆಳೆತನದ ಪ್ರೀತಿ, ಕೋಪ, ಮುನಿಸು, ಹಠ, ಗೌರವ ಇದರ ಸುತ್ತ ಚಿತ್ರಕತೆ ಹೊಸೆದಿದ್ದಾರಂತೆ ನೀಲ್. ಮಜಾ ಅಂದರೆ ಪ್ರಶಾಂತ್ ನಿರ್ದೇಶನದ ಉಗ್ರಂ ಕೂಡ ಸ್ವಲ್ಪ ಇದೇ ಹಾದಿಯಲ್ಲಿತ್ತು. ಅಲ್ಲವೆ? ಇದನ್ನೂ ಓದಿ:ಮದುವೆಯಾದ್ಮೇಲೆ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಳ್ತಿರೋ ಕಿಯಾರಾ

    ಸ್ನೇಹ ಹೀಗಂದಾಕ್ಷಣ ನಮಗೆ ನೆನಪಾದೋಗು ಮಣಿರತ್ನಂ ನಿರ್ದೇಶನದ ದಳಪತಿ ಸಿನಿಮಾ. ರಜನಿಕಾಂತ್ ಹಾಗೂ ಮುಮ್ಮಟಿ ಅಭಿನಯದ ಇದು ಮಹಾಭಾರತದ ದುರ್ಯೋಧನ ಹಾಗೂ ಕರ್ಣನ ಸ್ನೇಹವನ್ನು ಆಧುನೀಕರಣಗೊಳಿಸಿತ್ತು. ಇದೆಲ್ಲ ಹಿಂದೆ ನಡೆದಿದೆ. ಈಗ ಅದೇ ಎಳೆಯನ್ನು ಪ್ರಶಾಂತ್ ಬೇರೊಂದು ರೀತಿ ಹೇಳಲಿದ್ದಾರಾ? ಅಥವಾ ಇದನ್ನೆಲ್ಲ ಬಿಟ್ಟು ಬೇರೊಂದು ಕತೆಗೆ ಜೀವ ಕೊಟ್ಟಿದ್ದಾರಾ? ಸದ್ಯಕ್ಕೆ ಎಲ್ಲವೂ ಉತ್ತರ ಇಲ್ಲದ ಪ್ರಶ್ನೆಗಳು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ `ನೀನು ಏನೇ ಮಾಡು ಗುರು ಒಟ್ಟಿನಲ್ಲಿ ನಮ್ಮ ಪ್ರಭಾಸ್‌ಗೆ ಸೂಪರ್ ಡ್ಯೂಪರ್ ಕೊಡು…’ ಇದೊಂದೇ ಭಕ್ತಗಣದ ಸಿಂಗಲ್ ಬೇಡಿಕೆ. ಕೋರಿಕೆ.

    ಸಲಾರ್ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಬರೀ ಗೆದ್ದರಷ್ಟೇ ಸಾಲದು. ಒಂದು ಕಡೆ ಹೊಂಬಾಳೆ (Hombale Films) ಸಂಸ್ಥೆಯ ಗೌರವ ಕಾಪಾಡಬೇಕು. ಇನ್ನೊಂದು ಕಡೆ ಕೆಜಿಎಫ್ ಮಾತ್ರ ನನ್ನ ಸರಕಲ್ಲ, ಅದನ್ನು ಬಿಟ್ಟು ಇನ್ನೊಂದು ಲೋಕವನ್ನೂ ನಾನು ತೋರಿಸಬಲ್ಲೆ. ಹೀಗಂತ ಖುದ್ದು ನೀಲ್ ಸಾಬೀತು ಪಡಿಸಿಕೊಳ್ಳಬೇಕಿದೆ. ಮೊನ್ನೆ ಮೊನ್ನೆವರೆಗೆ ಇಷ್ಟೇ ಇತ್ತು. ಅದಕ್ಕೆ ಹೊಸ ಸೇರ್ಪಡೆ ಆದಿಪುರುಷ್ ಸೋಲು. ಪ್ರಭಾಸ್ ಫ್ಯಾನ್ಸ್ ಕಂಗಾಲು. ಇವರನ್ನು ದಂಡೆ ಮುಟ್ಟಿಸುವ ಜವಾಬ್ದಾರಿಯೂ ನೀಲ್‌ಗೆ ಅಕಾಲಿಕವಾಗಿ ಬಂದಿದೆ. ಸವಾಲ ಕಣ್ಣ ಮುಂದಿದೆ. ಸಲಾರ್ ಬರಲು ನೂರು ದಿನ ಉಳಿದಿದೆ. ಮಹಾ ಜಾತ್ರೆ ನಡೆಯಲಿ ಎನ್ನುವುದು ಆಶಯ. ನಡೆಯುತ್ತದಾ ಎನ್ನುವುದು ಪ್ರಶ್ನೆ. ಉತ್ತರ ಸೆಪ್ಟೆಂಬರ್ 28ಕ್ಕೆ.

  • ತೆಲುಗು ಸಿನಿಮಾ ರಂಗದಲ್ಲೇ ಇನ್ನೂ ಹತ್ತು ವರ್ಷ  ಪ್ರಶಾಂತ್ ನೀಲ್ ಲಾಕ್?

    ತೆಲುಗು ಸಿನಿಮಾ ರಂಗದಲ್ಲೇ ಇನ್ನೂ ಹತ್ತು ವರ್ಷ ಪ್ರಶಾಂತ್ ನೀಲ್ ಲಾಕ್?

    ನ್ನಡದ ಹೆಮ್ಮೆಯ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ (Prashant Neel) ಇನ್ನೂ ಹತ್ತು ವರ್ಷ ಕನ್ನಡದ ಸಿನಿಮಾಗಳನ್ನೇ ಮಾಡಲ್ಲವಾ? ಇಂಥದ್ದೊಂದು ಚರ್ಚೆ ಗಾಂಧಿನಗರದಲ್ಲಿ ಶುರುವಾಗಿದೆ. ಸದ್ಯ ಅವರು ಒಪ್ಪಿಕೊಂಡಿರುವ ಸಿನಿಮಾಗಳ ಪ್ರಕಾರ ಯಾವುದೇ ಕಾರಣಕ್ಕೂ ಹತ್ತು ವರ್ಷ ಸ್ಯಾಂಡಲ್ ವುಡ್ ನತ್ತ ಅವರು ಮುಖ ನೋಡುವುದಿಲ್ಲ ಎಂದು ಹೇಳಲಾಗುತ್ತಿದೆ.

    ಈಗಾಗಲೇ ಸಲಾರ್ (Salar) ಸಿನಿಮಾದಲ್ಲಿ ಅವರು ಬ್ಯುಸಿಯಾಗಿದ್ದಾರೆ. ನಂತರ ಜ್ಯೂನಿಯರ್ ಎನ್.ಟಿ.ಆರ್ (Jr.NTR) ಸಿನಿಮಾವನ್ನು ನಿರ್ದೇಶನ ಮಾಡಬೇಕು. ಅಲ್ಲಿಂದ ಮತ್ತೆ ಸಲಾರ್ 2 ಚಿತ್ರ ಮಾಡುತ್ತಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಈ ನಡುವೆ ದಿಲ್ ರಾಜುಗಾಗಿ ಮತ್ತೊಂದು ಸಿನಿಮಾವನ್ನು ಪ್ರಶಾಂತ್ ತಯಾರಿಸಿ ಕೊಡಬೇಕಿದೆ. ಇವೆಲ್ಲವೂ ಮುಗಿಯುವುದಕ್ಕೆ ಕನಿಷ್ಠ ಹತ್ತು ವರ್ಷವಾದರೂ ಬೇಕು ಎನ್ನುತ್ತಾರೆ ಸಿನಿ ಪಂಡಿತರು. ಇದನ್ನೂ ಓದಿ:ಸೂರ್ಯನಿಗೆ ನಾಯಕಿಯಾದ ಬಾಲಿವುಡ್ ನಟಿ ದಿಶಾ ಪಟಾನಿ

    ಈವರೆಗೂ ಒಂದೇ ವರ್ಷದಲ್ಲಿ ಯಾವ ಸಿನಿಮಾವನ್ನೂ ಪ್ರಶಾಂತ್ ಮುಗಿಸಿಲ್ಲ. ಕನಿಷ್ಠ ಒಂದೂವರೆ ಎರಡು ವರ್ಷಗಳ ಕಾಲ ತಗೆದುಕೊಂಡಿದ್ದಾರೆ ಈ ಲೆಕ್ಕದಲ್ಲಿ ಅವರ ಕೈಯಲ್ಲಿ ಸಲಾರ್, ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾ, ಸಲಾರ್ 2, ದಿಲ್ ರಾಜು (Dil Raju) ನಿರ್ಮಾಣದ ಚಿತ್ರಗಳಿವೆ.  ಹಾಗಾಗಿ ಅವರು ತೆಲುಗು ಚಿತ್ರೋದ್ಯಮದಲ್ಲೇ ಅಷ್ಟು ವರ್ಷಗಳ ಕಾಲ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಪ್ರಶಾಂತ್ ನೀಲ್ ಯಾವುದೇ ಸಿನಿಮಾ ಮಾಡಿದರೂ, ಅದು ಪ್ಯಾನ್ ಇಂಡಿಯಾ ಮಟ್ಟದಲ್ಲೇ ಇರುತ್ತದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಿಗೆ ಡಬ್ ಆಗಲಿದೆ. ಹಾಗಾಗಿ ಒಂದೇ ಭಾಷೆಗೆ ಅವರನ್ನು ಸೀಮಿತ ಮಾಡುವುದು ಬೇಡ ಎನ್ನುವ ಮಾತುಗಳನ್ನೂ ಕೆಲವರು ಆಡುತ್ತಿದ್ದಾರೆ. ಅಷ್ಟಕ್ಕೂ ಕನ್ನಡದಲ್ಲೂ ಪ್ರಶಾಂತ್ ನೀಲ್ ನೇರವಾಗಿ ಒಂದು ಸಿನಿಮಾ ಮಾಡಬೇಕಿತ್ತು. ಅದು ಶ್ರೀಮುರಳಿಗೆ ಎಂದೂ ಫಿಕ್ಸ್ ಆಗಿತ್ತು. ಆ ಸಿನಿಮಾ ಯಾವಾಗ ಶುರುವಾಗತ್ತೋ ಕಾದು ನೋಡಬೇಕಿದೆ.