Tag: salam

  • ಮೇಲುಕೋಟೆಯಲ್ಲಿ ದೀವಟಿಗೆ ರದ್ದುಗೊಳಿಸುವಂತೆ ಡಿಸಿಗೆ ಮನವಿ ಸಲ್ಲಿಸಲು ಸಿದ್ಧತೆ

    ಮೇಲುಕೋಟೆಯಲ್ಲಿ ದೀವಟಿಗೆ ರದ್ದುಗೊಳಿಸುವಂತೆ ಡಿಸಿಗೆ ಮನವಿ ಸಲ್ಲಿಸಲು ಸಿದ್ಧತೆ

    ಮಂಡ್ಯ: ಕೊಲ್ಲೂರಿನಲ್ಲಿ ಸಲಾಂ ಆರತಿಯ ವಿರುದ್ಧದ ಕೂಗಿನ ಬಳಿಕ ಇದೀಗ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಚಲುವರಾಯಸ್ವಾಮಿಗೆ ಸಲ್ಲುವ ದೀವಟಿಗೆ ಸಲಾಂ ಆರತಿ ವಿರುದ್ಧ ಕೂಗು ಕೇಳಿ ಬರುತ್ತಿದೆ.

    ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನದಲ್ಲಿ ಪ್ರತಿನಿತ್ಯ ಸಂಜೆ 7 ಗಂಟೆಯ ವೇಳೆಯಲ್ಲಿ ದೀವಟಿಗೆ ಸಲಾಂ ಆರತಿ ಮಾಡಲಾಗುತ್ತದೆ. ಇದು ಟಿಪ್ಪು ಸುಲ್ತಾನ್ ಆದೇಶದ ಮೇರೆಗೆ ಮಾಡುತ್ತಿರುವ ಆರತಿ ಹೀಗಾಗಿ ಈ ಆಚರಣೆಯನ್ನು ನಿಲ್ಲಿಸಬೇಕೆಂದು ಇದೀಗ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ನವೀನ್ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಿದ್ದಾರೆ. ಇದನ್ನೂ ಓದಿ: ಟಿಪ್ಪು ಹೆಸರಿನಲ್ಲಿ ಪೂಜೆ ಮಾಡಿದ್ರೆ ದೇವರ ಶಕ್ತಿ ಕಡಿಮೆಯಾಗುತ್ತದೆ: ಕಲ್ಲಡ್ಕ ಕಿಡಿ

    ಹೇಗೆ ಬಂತು ದೀವಟಿಗೆ ಸಲಾಂ?:
    ಟಿಪ್ಪು ಸುಲ್ತಾನ್ ಆಡಳಿತದ ವೇಳೆ ಆಸ್ಥಾನದಲ್ಲಿ ಆನೆಗಳ ಸರಣಿ ಸಾವು ಆಗುತ್ತಿತ್ತು. ಈ ವೇಳೆ ಟಿಪ್ಪು ಗುರುಗಳು ಚಲುವರಾಯಸ್ವಾಮಿಗೆ ಕೊಡುಗೆ ನೀಡುವುದಾಗಿ ತಿಳಿಸುತ್ತಾರೆ. ನಂತರ ಟಿಪ್ಪು ಚಲುವರಾಯಸ್ವಾಮಿಗೆ ಚಿನ್ನದ ಆಭರಣಗಳು ಹಾಗೂ ಪಾತ್ರೆಗಳನ್ನು ಉಡುಗೊರೆಯ ರೂಪದಲ್ಲಿ ನೀಡುತ್ತಾರೆ. ಈ ವೇಳೆ ಇದರ ನೆನಪಾರ್ಥ ಇಲ್ಲಿ ದೀವಟಿಗೆ ಸಲಾಂ ಆರತಿ ಮಾಡಬೇಕೆಂಬ ಸೂಚಣೆಯನ್ನು ಟಿಪ್ಪು ನೀಡಿದ್ದಾರೆ.

    tippu

    ಆ ಕಾರಣದಿಂದ ಸಂಧ್ಯಾರತಿಯನ್ನಾ ದೀವಟಿಗೆ ಸಲಾಂ ಆರತಿ ಎಂದು ಬದಲಾಯಿಸಿದೆ ಎಂದು ಹೇಳಾಗುತ್ತಿದೆ. ಇದಕ್ಕೆ ಯಾವುದೇ ಪುರಾವೆಗಳು ಇಲ್ಲ, ಕೇವಲ ಇತಿಹಾಸ ತಜ್ಞರು ಹಾಗೂ ಕೆಲವರು ಮಾತ್ರ ಹೇಳುತ್ತಿದ್ದಾರೆ. ಇದನ್ನೂ ಓದಿ: ಟಿಪ್ಪು ಹೆಸರಿನಲ್ಲಿ ನಿತ್ಯ ಸಲಾಂ ಮಂಗಳಾರತಿ ಬೇಡ – ಹೆಸರು ಬದಲಾಯಿಸುವಂತೆ ಕೊಲ್ಲೂರು ದೇವಾಲಯಕ್ಕೆ ಮನವಿ

  • ಅಂಗಾಂಗ ದಾನ ಮಾಡಿ ಇಬ್ಬರು ರೋಗಿಗಳ ಪ್ರಾಣ ಉಳಿಸಿದ 27ರ ಯುವಕ

    ಅಂಗಾಂಗ ದಾನ ಮಾಡಿ ಇಬ್ಬರು ರೋಗಿಗಳ ಪ್ರಾಣ ಉಳಿಸಿದ 27ರ ಯುವಕ

    ಚೆನ್ನೈ: ಇತ್ತೀಚೆಗೆ ಕರ್ನಾಟಕದಲ್ಲಿ ಸ್ಯಾಂಡಲ್‍ವುಡ್ ನಟ ಸಂಚಾರಿ ವಿಜಯ್ ಅವರು ಅಪಘಾತಕ್ಕೀಡಾಗಿ ತಮ್ಮ ಅಂಗಾಂಗಳನ್ನು ದಾನ ಮಾಡುವ ಮೂಲಕ 4 ಜನರ ಪ್ರಾಣ ಉಳಿಸಿದ್ದರು. ಇದೀಗ ಇಂತದ್ದೇ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.

    ಹೌದು. ಬ್ರೈನ್ ಡೆಡ್ ಆಗಿರುವ ಯುವಕನೋರ್ವ ತನ್ನ ಅಂಗಾಂಗಳನ್ನು ದಾನ ಮಾಡುವ ಮೂಲಕ ಇಬ್ಬರು ರೋಗಿಗಳ ಪ್ರಾಣ ಉಳಿಸುವ ಮೂಲಕ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾನೆ. ಯುವಕನನ್ನು ಸಲೀಂ ಎಂದು ಗುರುತಿಸಲಾಗಿದೆ. ರಸ್ತೆ ಅಪಘಾತಕ್ಕೀಡಾಗಿ ಸಲೀಂ ತಲೆಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲೇ ಅವರ ಬ್ರೈನ್ ಡೆಟ್ ಆಗಿರುವುದಾಗಿ ವೈದ್ಯರು ತಿಳಿಸಿದ್ದರು.

    ಇತ್ತ ಸಲೀಂ ಬ್ರೈನ್ ಡೆಡ್ ಆದ ವಿಚಾರ ತಿಳಿಯುತ್ತಿದ್ದಂತೆಯೇ ವೈದ್ಯರು ಆತನ ಕುಟುಂಬಕ್ಕೆ ಹೇಳಿದ್ದಾರೆ. ಈ ವೇಳೆ ಸಲೀಂ ಕುಟುಂಬಸ್ಥರು ಆತನ ಅಂಗಾಂಗಗಳನ್ನು ದಾನ ಮಾಡುವುದಕ್ಕೆ ಅನುಮತಿ ನೀಡಿದ್ದಾರೆ. ಈ ಮೂಲಕ ಬೇರೆಯವರ ಜೀವ ಉಳಿಸುವ ಕಾರ್ಯ ಮಾಡಿದ್ದಾರೆ. ಕುಟುಂಬಸ್ಥರು ಒಪ್ಪಿಗೆ ನೀಡಿದ ಬಳಿಕ ಸೇಲಂನ ತಜ್ಞರ ತಂಡ ಸಲೀಂ ಹೃದಯ ಹಾಗೂ ಶ್ವಾಸಕೋಶವನ್ನು ತೆಗೆದಿದ್ದಾರೆ. ಬಳಿಕ ಅಂಗಾಂಗಳನ್ನು ಅಗತ್ಯ ಇರುವವರಿಗೆಂದು ಸೇಲಂ ವಿಮಾನ ನಿಲ್ದಾಣದಿಂದ ಸಾಗಿಸಲಾಯಿತು. ಹೆಲಿಕಾಪ್ಟರ್ ಮೂಲಕ ಚೆನ್ನೈಗೆ ಸಾಗಿಸಲಾಯಿತು ಎಂದು ಎಂಜಿಎಂ ಹೆಲ್ತ್ ಕೇರ್ ಸೆಂಟರ್ ಮುಖ್ಯಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಇಬ್ಬರು ಯುವಕರಿಗೆ ಸಂಚಾರಿ ವಿಜಯ್ ಕಣ್ಣು ಜೋಡಣೆ

    ಇತ್ತ ಇಬ್ಬರು ರೋಗಿಗಳಿಗೆ ಅಂಗಾಂಗಗಳನ್ನು ಕಸಿ ಮಾಡುವ ಮೂಲಕ ಅವರ ಜೀವ ಉಳಿಸುವ ಕಾರ್ಯದಲ್ಲಿ ತಜ್ಞರ ತಂಡ ಯಶಸ್ವಿಯಾಯಿತು. ಕೋವಿಡ್ -19 ಪ್ರೋಟೋಕಾಲ್‍ಗಳನ್ನು ಅನುಸರಿಸಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಸಲೀಂನ ಉಳಿದ ಅಂಂಗಗಳನ್ನು ಇತರ ಆಸ್ಪತ್ರೆಗಳಿಗೆ ರವಾನಿಸಲಾಯಿತು. ಇದನ್ನೂ ಓದಿ:  ಶಂಕರ್ ನಾಗ್, ಸುನಿಲ್, ಈಗ ಸಂಚಾರಿ ವಿಜಯ್ -ಅಪಘಾತದಲ್ಲೇ ಬದುಕು ಮುಗಿಸಿದ ಕನ್ನಡ ನಟರು