Tag: Salaga

  • ಯಶ್ ಫ್ಯಾನ್ಸ್ ದುರಂತ ಸಾವಿನ ಬಳಿಕ ದುನಿಯಾ ವಿಜಯ್ ವಿಶೇಷ ಮನವಿ

    ಯಶ್ ಫ್ಯಾನ್ಸ್ ದುರಂತ ಸಾವಿನ ಬಳಿಕ ದುನಿಯಾ ವಿಜಯ್ ವಿಶೇಷ ಮನವಿ

    ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಯ್ (Duniya Vijay) ಅವರು ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಯಶ್ (Yash) ಫ್ಯಾನ್ಸ್ ದುರಂತ ಸಾವಿನ ಬಳಿಕ ವಿಜಯ್ ಅಭಿಮಾನಿಗಳಿಗೆ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದ (Birthday) ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಶನಿ’ ಕಂಟಕ‌ ವರ್ತೂರು ಸಂತೋಷ್ ತಲೆಗೆ ಕಟ್ಟಿದ ಕಾರ್ತಿಕ್‌- ಚಳಿ ಬಿಡಿಸಿದ ಸುದೀಪ್

    ಇದೇ ಜನವರಿ 20ರಂದು ದುನಿಯಾ ವಿಜಯ್ (Duniya Vijay) ಹುಟ್ಟುಹಬ್ಬವಿದೆ. ಹೀಗಾಗಿ ಪ್ರತಿ ಬಾರಿಯಂತೆ ಈ ಬಾರಿಯೂ ವಿಜಯ್ ತಮ್ಮ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ಹುಟ್ಟೂರಾದ ಕುಂಬಾರನಹಳ್ಳಿಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

    ಕುಂಬಾರನಹಳ್ಳಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಅಲ್ಲಿಯೇ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ನಟ ಯಶ್ ಬರ್ತಡೇ ದಿನ ನಡೆದ ದುರಂತಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಚಾರ ತಿಳಿಸಿದ್ದಾರೆ. ಇನ್ನೂ ಕಳೆದ ಬಾರಿ ಅಭಿಮಾನಿಯೊಬ್ಬರು ನಡೆದುಕೊಂಡೇ ವಿಜಯ್ ಹುಟ್ಟುಹಬ್ಬಕ್ಕೆ ಬಂದಿದ್ದರು. ಹಾಗಾಗಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಯಾವ ಅಭಿಮಾನಿಗಳು ಸಹ ಈ ಬಾರಿ ನಡೆದುಕೊಂಡು ಬರಬೇಡಿ, ಯಾರು ಕೇಕ್ ಮತ್ತು ಹೂವಿನ ಹಾರ ತರಬೇಡಿ. ನನಗೆ ನಿಮ್ಮ ಜೊತೆಗೆ ಕುಳಿತು ಪ್ರೀತಿಯಿಂದ ಊಟ ಮಾಡುವ ಆಸೆಯಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಬೆಂಗಳೂರಿನ ಬೆಡಗಿಗೆ ಖುಲಾಯಿಸಿದ ಅದೃಷ್ಟ- ಮುಂದೇನು ಮಾಡ್ತಾರೆ ಶ್ರೀಲೀಲಾ?

    ಜನವರಿ 20ರಂದು ಬೆಳಿಗ್ಗೆ ಎಲ್ಲರೂ ಸೇಫಾಗಿ ಬನ್ನಿ. ಜನವರಿ 19ರವರೆಗೂ ನಮಗೆ ಸಿನಿಮಾ ಕೆಲಸ ಇದೆ. ಹೀಗಾಗಿ ಜ.20ರಂದು ಎಲ್ಲರೂ ಬನ್ನಿ ಜೊತೆಯಲ್ಲಿ ಕುಳಿತು ಊಟ ಮಾಡೋಣ. ಯಾರು ನನ್ನ ಹುಟ್ಟುಹಬ್ಬದ ದಿನ ಫ್ಲೆಕ್ಸ್ ಬ್ಯಾನರ್ ಹಾಕಬೇಡಿ ಎಂದು ದುನಿಯಾ ವಿಜಯ್ ಹೇಳಿದ್ದಾರೆ.

    ಅಂದಹಾಗೆ ಯಶ್ ಹುಟ್ಟುಹಬ್ಬದಂದು (ಜ.8) ಮೂವರು ಯುವಕರು ಮೃತಪಟ್ಟಿದ್ದರು. ಗದಗದ ಸೊರಣಗಿಯಲ್ಲಿ ಈ ಘಟನೆ ಸಂಭವಿಸಿತ್ತು. ಬಳಿಕ ಯಶ್ ಸೊರಣಗಿ ಗ್ರಾಮಕ್ಕೆ ಭೇಟಿ ನೀಡಿ, ಮೃತರಾಗಿರೋ ಯುವಕರ ಕುಟುಂಬಸ್ಥರನ್ನು ಸಂತೈಸಿ ಧೈರ್ಯ ಹೇಳಿ ಬಂದಿದ್ದರು.

  • ‘ಭೀಮ’ ಸಾಂಗ್ ಔಟ್- ‘ನೂರು ರೂಪಾಯಿ ಮಿಕ್ಸ್’ ಹಾಡಿಗೆ ಭರ್ಜರಿ ರೆಸ್ಪಾನ್ಸ್

    ‘ಭೀಮ’ ಸಾಂಗ್ ಔಟ್- ‘ನೂರು ರೂಪಾಯಿ ಮಿಕ್ಸ್’ ಹಾಡಿಗೆ ಭರ್ಜರಿ ರೆಸ್ಪಾನ್ಸ್

    ನ್ಯೂ ಇಯರ್ ಆರಂಭದಲ್ಲಿ ದುನಿಯಾ ವಿಜಯ್ (Duniya Vijay) ಮಾಸ್ ಅಭಿಮಾನಿಗಳಿಗೆ ಹಾಡೊಂದನ್ನ ಉಡುಗೊರೆಯಾಗಿ ಕೊಟ್ಟಿದ್ದಾರೆ. ‘ಭೀಮ’ ಸಿನಿಮಾದ ‘ನೂರು ರೂಪಾಯಿ ಮಿಕ್ಸ್’ (Nooru Rupai Mix) ಎಂಬ ಸುಕ್ಕಾ ಸಾಂಗ್ ರಿಲೀಸ್ ಆಗಿದೆ. ಈ ಹಾಡಿನ ವಿಶೇಷತೆ ಏನು? ಇಲ್ಲಿದೆ ಮಾಹಿತಿ.

    ‘ಸಲಗ’ (Salaga) ಸಕ್ಸಸ್ ನಂತರ ದುನಿಯಾ ವಿಜಯ್ ಫುಲ್ ಜೋಶ್‌ನಲ್ಲಿದ್ದಾರೆ. ಜನಸಾಮಾನ್ಯರ ನಡುವಿನ ಕತೆ ಕಂಟೆಂಟ್ ಇಟ್ಟುಕೊಂಡು, ಮನರಂಜನೆ ಜೊತೆ ನಿಮ್ಮ ಮಡಿಲಿಗೆ ಅರ್ಪಿಸಲು ಸಜ್ಜಾಗಿದ್ದಾರೆ. ಈಗಾಗೇ ರಿಲೀಸ್ ಆಗಿರುವ ಹಾಡುಗಳು ಮತ್ತು `ಭೀಮ’ ಕಂಟೆಂಟ್ ಅದ್ಭುತ ಸೌಂಡ್ ಮಾಡ್ತಿದೆ.

    ಮೊನ್ನೆ ಮೊನ್ನೆ ಬೆಂಗಳೂರು ಲಾಲ್‌ಬಾಗ್ ಸಿದ್ದಾಪುರದ ಸಂದಿ-ಗೊಂದಿಗಳಲ್ಲಿ ‘ಭೀಮ’ನ ಫೈನಲ್ ಹಂತದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಈಗ ಹೊಸ ವರ್ಷಕ್ಕೆ ನೂರು ರೂಪಾಯಿ ಮಿಕ್ಸ್ ಹಾಡನ್ನು ಬಜಾರ್‌ಗೆ ಬಿಟ್ಟಿದ್ದಾರೆ. ಈ ಹಾಡಿಗೆ ಫಿದಾ ಆಗಿದ್ದಾರೆ. ಇದನ್ನೂ ಓದಿ:ದಳಪತಿ ವಿಜಯ್ ನಟನೆಯ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್

    `ನೂರು ರೂಪಾಯಿ ಮಿಕ್ಸ್’ ಈ ಹಾಡನ್ನು ಕಲಾಸಿಪಾಳ್ಯದ ಲೋಕೇಶನ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ಎಂ.ಸಿ.ಬಿಜ್ಜು ಸಾಹಿತ್ಯ ಬರೆದಿದ್ದು, ಚರಣ್‌ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನೂರು ರೂಪಾಯಿ ಹಾಡು ಭರ್ಜರಿ ಸದ್ದು ಮಾಡ್ತಿದೆ. ನಿರ್ಮಾಪಕ ಜಗದೀಶ್ ಮತ್ತು ಕೃಷ್ಣ ಸಾರ್ಥಕ್ ‘ಭೀಮ’ನಿಗೆ ಸಿಗ್ತಿರುವ ರೆಸ್ಪಾನ್ಸ್ ನೋಡಿ ಖುಷಿಯಾಗಿದ್ದಾರೆ. ‘ಭೀಮ’ ಈ ಚಿತ್ರವನ್ನು ಅದ್ದೂರಿಯಾಗಿ ತೆರೆಯ ಮೇಲೆ ತೋರಿಸಲು ಕೋಟಿ ಕೋಟಿ ಸುರಿದಿದ್ದಾರೆ.

    ಸಲಗ ಸಿನಿಮಾದಲ್ಲಿ ನಟನೆ ಜೊತೆ ನಿರ್ದೇಶನ ಮಾಡಿ ಗೆದ್ದು ತೋರಿಸಿದ್ದರು. ಭೀಮ ಸಿನಿಮಾಗೂ ದುನಿಯಾ ವಿಜಯ್ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ನಿರೀಕ್ಷೆ ಡಬಲ್ ಆಗಿದೆ. ಈಗಾಗಲೇ ಹಾಡುಗಳು ಸದ್ದು ಮಾಡ್ತಿರೋ ಹಾಗೆಯೇ ಸಿನಿಮಾ ಕೂಡ ಚಿತ್ರಮಂದಿರದಲ್ಲಿ ಸೌಂಡ್ ಮಾಡುತ್ತಾ ಕಾದುನೋಡಬೇಕಿದೆ.

  • ಕಿರುತೆರೆ ನಟನಿಗೆ ವಂಚಿಸಿದ್ದ ಸ್ಯಾಂಡಲ್ ವುಡ್ ನಟಿ ಉಷಾ ಬಂಧನ

    ಕಿರುತೆರೆ ನಟನಿಗೆ ವಂಚಿಸಿದ್ದ ಸ್ಯಾಂಡಲ್ ವುಡ್ ನಟಿ ಉಷಾ ಬಂಧನ

    ದುನಿಯಾ ವಿಜಯ್ ನಟನೆಯ ಸಲಗ (Salaga) ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಮತ್ತು ಕಿರುತೆರೆ ಹಾಗೂ ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದ ಬೆಂಗಳೂರಿನ ನಟಿ ಉಷಾ ಆರ್ (Usha Ravi Shankar) ಬಂಧನಕ್ಕೆ ಒಳಗಾಗಿದ್ದಾರೆ. ವಂಚನೆಯ (Cheating) ಆರೋಪದ ಹಿನ್ನೆಲೆಯಲ್ಲಿ ಶಿವಮೊಗ್ಗದ ಪೊಲೀಸರು ನಟಿಯನ್ನು ಬಂಧಿಸಿದ್ದು (Arrest), ವೈದ್ಯಕೀಯ ಪರೀಕ್ಷೆಗೆ ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿದ್ದಾರೆ.

    ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ನಟರೊಬ್ಬರನ್ನು ಮದುವೆಯಾಗುವುದಾಗಿ ಉಷಾ ನಂಬಿಸಿದ್ದರಂತೆ. ಪ್ರೀತಿ, ಮದುವೆಯ ನಂಬಿಕೆಯಲ್ಲೇ ಆ ನಟನಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾರೆ. ನಂತರ ಮದುವೆ ಮಾಡಿಕೊಳ್ಳಲು ತಕರಾರು ತಗೆದಿದ್ದಾರೆ ಎಂದು ಹೇಳಲಾಗುತ್ತಿದೆ.

    ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ನಟನಿಗೆ ಅರಿವಾಗುತ್ತಿದ್ದಂತೆಯೇ ವಂಚಿತನಾದ ನಟ ಕೋರ್ಟ್‌ ನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆ ಉಷಾಗೆ ವಾರಂಟ್ ಕೂಡ ಜಾರಿಯಾಗಿತ್ತು.  ಈ ಹಿನ್ನೆಲೆ ಚಿತ್ರನಟಿಯನ್ನು (Actress) ಬಂಧಿಸಿ ಪೊಲೀಸರು ಶಿವಮೊಗ್ಗಕ್ಕೆ ಕರೆತಂದಿದ್ದರು. ಉಷಾ ‘ಒಂದಲ್ಲ ಎರಡು’, ‘ಸಲಗ’ ಚಿತ್ರಗಳಲ್ಲಿ ಸಹ ನಟಿಯಾಗಿ ನಟಿಸಿದ್ದಾರೆ.

  • Exclusive:`ಭೀಮ’ ಬಳಿಕ ದುನಿಯಾ ವಿಜಯ್ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್

    Exclusive:`ಭೀಮ’ ಬಳಿಕ ದುನಿಯಾ ವಿಜಯ್ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್

    ಸ್ಯಾಂಡಲ್‌ವುಡ್ (Sandalwood)  `ಸಲಗ’ (Salaga) ದುನಿಯಾ ವಿಜಯ್ (Duniya Vijay) ಪ್ರತಿಭಾನ್ವಿತ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡ ಮತ್ತು ತೆಲುಗಿನಲ್ಲಿ ದುನಿಯಾ ವಿಜಯ್ ತಮ್ಮ ನಟನೆಯ ಮೂಲಕ ಕಿಡಿ ಹಚ್ಚಿದ್ದಾರೆ. ಸದ್ಯ `ಭೀಮ’ (Bheema) ಚಿತ್ರದ ನಂತರ ದುನಿಯಾ ವಿಜಯ್ ಏನ್ಮಾಡ್ತಾರೆ, ಅವರ ಮುಂದಿನ ಸಿನಿಮಾ ಯಾವುದು? ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. `ಸಲಗ’ನ ಮುಂದಿನ ಹೆಜ್ಜೆ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.

    `ಸಲಗ’ ಸಕ್ಸಸ್ ನಂತರ ದುನಿಯಾ ವಿಜಯ್ ಪಾತ್ರಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿಯಾಗಿದ್ದಾರೆ. ಅದರಲ್ಲೂ ಬಾಲಯ್ಯ ಮುಂದೆ `ವೀರ ಸಿಂಹ ರೆಡ್ಡಿ’ (Veera Simha Reddy) ಚಿತ್ರದಲ್ಲಿ ಅಬ್ಬರಿಸದ ಮೇಲೆ ದುನಿಯಾ ವಿಜಯ್ ಮೇಲಿನ ಕ್ರೇಜ್ ಡಬಲ್ ಆಗಿದೆ. `ಭೀಮ’ ಚಿತ್ರದ ಲುಕ್‌ನಿಂದಲೇ ವಿಜಯ್ ಈಗಾಗಲೇ ಕ್ರೇಜ್ ಹುಟ್ಟು ಹಾಕಿದ್ದಾರೆ. ಹೀಗಿರುವಾಗ `ಭೀಮ’ ಬಳಿಕ `ಗುರು ಶಿಷ್ಯರು’ ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಜೊತೆ ಸಿನಿಮಾ ಮಾಡಲು ವಿಜಯ್ ಕೈಜೋಡಿಸಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಜಡೇಶ್ ಕುಮಾರ್ (Jadesh Kumar) ಮಾಹಿತಿ ನೀಡಿದ್ದಾರೆ.

    ನಿರ್ದೇಶಕ ಜಡೇಶ್-ದುನಿಯಾ ವಿಜಯ್ ಕಾಂಬಿನೇಷನ್‌ನಲ್ಲಿ 1950ರ ಕಾಲಘಟ್ಟದ ಕಥೆ ಮೂಡಿ ಬರಲಿದೆ. ಸ್ವಾತಂತ್ರ್ಯ ಸಿಕ್ಕಿದ ಬಳಿಕ ಜನರ ಮನಸ್ಥಿತಿ ಹೇಗಿತ್ತು. ಅವರ ಮುಗ್ಧತೆ ಮತ್ತು ಆಲೋಚನೆ ಹೇಗಿತ್ತು ಎಂಬುದನ್ನ ಈ ಸಿನಿಮಾ ತೆರೆಯ ಮೇಲೆ ತೋರಿಸಿಕೊಡಲಿದೆ. ದುನಿಯಾ (Duniya Film) ಚಿತ್ರದಲ್ಲಿ ವಿಜಯ್ ಮುಗ್ಧನಾಗಿ ಅದ್ಭುತವಾಗಿ ನಟಿಸಿದ್ದರು. ಕೊಂಚ ಅದೇ ಶೇಡ್‌ನಲ್ಲಿ ಇಲ್ಲಿ ವಿಜಯ್ ನಟಿಸಲಿದ್ದಾರೆ.

     

    View this post on Instagram

     

    A post shared by Duniya Vijay (@duniyavijayofficial)

    1950ರ ಕಾಲಘಟ್ಟದ ಕಥೆಯಾಗಿರುವ ಕಾರಣ, ಹಳ್ಳಿ ಸೊಗಡಿನ ಅದ್ದೂರಿ ಸೆಟ್ ಅನ್ನೇ ಹಾಕಲಾಗುತ್ತದೆ. ಖಡಕ್ ಪಾತ್ರಗಳಲ್ಲಿ ದುನಿಯಾ ವಿಜಯ್ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ವಿಭಿನ್ನ ಪಾತ್ರದ ಮೂಲಕ ರಂಜಿಸಲು ಸಜ್ಜಾಗುತ್ತಿದ್ದಾರೆ. `ಭೀಮ’ ಚಿತ್ರದ ಶೂಟಿಂಗ್ ಪೂರ್ಣಗೊಂಡ ಬಳಿಕ ಮೇ ಅಂತ್ಯದಲ್ಲಿ ಹೊಸ ಚಿತ್ರವನ್ನು ವಿಜಯ್ ಕೈಗೆತ್ತಿಕೊಳ್ಳಲಿದ್ದಾರೆ. ಜೊತೆಗೆ ಈ ಚಿತ್ರವನ್ನ ʻಭೀಮʼ ಸಿನಿಮಾದ ನಿರ್ದೇಶಕರಾದ ಕೃಷ್ಣ ಸಾರ್ಥಕ್- ಜಗದೀಶ್ ಗೌಡ ಅವರು ನಿರ್ಮಾಣ ಮಾಡಲಿದ್ದಾರೆ ಎಂದು ನಿರ್ದೇಶಕ ಜಡೇಶ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ

    ಇನ್ನೂ ದುನಿಯಾ ವಿಜಯ್‌ಗೆ ನಾಯಕಿಯಾಗಿ ಕನ್ನಡದ ನಟಿಯೇ ಬರುವ ಸಾಧ್ಯತೆಯಿದೆ. ನಾಯಕಿ ಸೆಲೆಕ್ಷನ್ ಬಗ್ಗೆ ಇನ್ನೂ ಅಂತಿಮ ಆಗಿಲ್ಲ ಎಂದು ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ. ಇನ್ನೂ ರಾಜಹಂಸ, ಜೆಂಟಲ್‌ಮೆನ್, ಗುರು ಶಿಷ್ಯರು ಖ್ಯಾತಿಯ ನಿರ್ದೇಶಕ ಜಡೇಶ್ ಕುಮಾರ್ ಮತ್ತು ದುನಿಯಾ ವಿಜಯ್ ಅವರ ಕಾಂಬಿನೇಷನ್ ಸಿನಿಮಾ ಮುಂದಿನ ದಿನಗಳಲ್ಲಿ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

    ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌ 

  • ತಂದೆ-ತಾಯಿ ಸಮಾಧಿ ಬಳಿ ಬರ್ತ್‌ಡೇ ಆಚರಿಸಿಕೊಂಡ ದುನಿಯಾ ವಿಜಯ್‌

    ತಂದೆ-ತಾಯಿ ಸಮಾಧಿ ಬಳಿ ಬರ್ತ್‌ಡೇ ಆಚರಿಸಿಕೊಂಡ ದುನಿಯಾ ವಿಜಯ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಂದೆ- ತಾಯಿ ಸಮಾಧಿ ಬಳಿ ಬರ್ತ್‌ಡೇ ಆಚರಿಸಿಕೊಂಡ ದುನಿಯಾ ವಿಜಯ್

    ತಂದೆ- ತಾಯಿ ಸಮಾಧಿ ಬಳಿ ಬರ್ತ್‌ಡೇ ಆಚರಿಸಿಕೊಂಡ ದುನಿಯಾ ವಿಜಯ್

    `ವೀರ ಸಿಂಹ ರೆಡ್ಡಿ’ (Veera Simha Reddy) ಗೆಲುವಿನ ಖುಷಿಯಲ್ಲಿರುವ `ಸಲಗ’ ಖ್ಯಾತಿಯ ದುನಿಯಾ ವಿಜಯ್ (Duniya Vijay)  ಇಂದು ತಮ್ಮ 49 ವರ್ಷದ ಹುಟ್ಟುಹಬ್ಬವನ್ನು (Birthday) ಮೊದಲ ಬಾರಿಗೆ ಹುಟ್ಟೂರಿನಲ್ಲಿ, ತಮ್ಮ ತಂದೆ- ತಾಯಿ ಸಮಾಧಿ ಬಳಿ ಅಭಿಮಾನಿಗಳ ಜೊತೆ ಆಚರಿಸಿದ್ದಾರೆ.

    ನಟ ದುನಿಯಾ ಇಂದು ತಮ್ಮ ಹುಟ್ಟೂರು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕುಂಬಾರನಹಳ್ಳಿಯಲ್ಲಿ ತಮ್ಮ ಹೆತ್ತವರ ಸಮಾಧಿ ಬಳಿ ಭರ್ಜರಿಯಾಗಿ ಅಭಿಮಾನಿಗಳ ಜೊತೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹೊರ ರಾಜ್ಯ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ್ದ ಅಭಿಮಾನಿಗಳು ದುನಿಯಾ ವಿಜಿಗೆ ಜೈಕಾರ ಹಾಕಿ, ನೆಚ್ಚಿನ ನಟನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ತಂದೆ ತಾಯಿಯ ಸಮಾಧಿಗೆ ದುನಿಯಾ ವಿಜಿ ಪೂಜೆ ಸಲ್ಲಿಸಿ ಸಾಧು ಸಂತರು ಹಾಗೂ ಸ್ವಾಮೀಜಿಗಳಿಂದ ಆಶೀರ್ವಾದವನ್ನ ಪಡೆದರು. ಹೆತ್ತವರ ಸಮಾಧಿಯ ಬಳಿಯ ನಿರ್ಮಾಣ ಮಾಡಲಾಗಿದ್ದ ವೇದಿಕೆ ದುನಿಯಾ ವಿಜಿ ಎಂಟ್ರಿ ಕೊಡುತ್ತಿದ್ದಂತೆ ನೆಚ್ಚಿನ ನಟನನ್ನು ಕಂಡ ಅಭಿಮಾನಿಗಳ ಆನಂದಕ್ಕೆ ಪಾರವೇ ಇರಲಿಲ್ಲ. ಅಭಿಮಾನಿಗಳು ಭೀಮ ಚಿತ್ರದ ಪೋಸ್ಟರ್ ಇರುವ ಕೇಕ್ ತರಿಸಿದ್ದು ಚಿತ್ರದ ನಿರ್ಮಾಪಕರ ಹಾಗೂ ಅಭಿಮಾನಿಗಳ ಜೊತೆಗೂಡಿ ವಿಜಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ:ಪತಿ ಜೊತೆಗಿನ ಲಿಪ್‌ಲಾಕ್ ಫೋಟೋ ಹಂಚಿಕೊಂಡ ʻಕಾಂಚನಾ 2ʼ ನಟಿ ಪೂಜಾ

    ಅಭಿಮಾನಿಗಳಿಗೆ ಭರ್ಜರಿ ಬಾಡೂಟದ ವ್ಯವಸ್ಥೆಯನ್ನ ಮಾಡಿದ್ದರು. ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಫ್ಯಾನ್ಸ್‌ಗೆ ಚಿಕಿನ್ ಬಿರಿಯಾನಿ, ಚಿಕನ್ ಫ್ರೈ ಮಾಡಿ ತಾವೇ ಕೈಯಾರೆ ಅಭಿಮಾನಿಗಳಿಗೆ ಬಡಿಸಿ ಕೈತುತ್ತು ತಿಂದರು. ಅಭಿಮಾನಿಗಳ ನಟ ದುನಿಯಾ ವಿಜಯ್‌ಗೆ ಕೈತುತ್ತು ತಿನ್ನಿಸಿ ನಟನ ಸಿಂಪ್ಲಿಸಿಟಿ ಕಂಡು ಮತ್ತಷ್ಟು ಖುಷಿಯಾದ್ರು. ವೇದಿಕೆ ನಿರ್ಮಾಣ ಮಾಡಿದ್ದ ಸುತ್ತಲೂ ಭೀಮ ಸಿನಿಮಾ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ದುನಿಯಾ ವಿಜಿ ಸಿನಿಮಾ ಹಾಡುಗಳಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದಾಡಿದ್ರು. ಪ್ರತಿವರ್ಷವು ಸಹ ಹುಟ್ಟೂರಿನಲ್ಲಿಯೇ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡು ಅನ್ನಕೊಟ್ಟ ಅಭಿಮಾನಿಗಳು ಊಟವನ್ನ ಹಾಕುವ ಮೂಲಕ ಅವರ ಜೊತೆ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳಬೇಕು ಎಂದು ತಿರ್ಮಾನಿಸಿದ್ದೇನೆ. ಇದು ತಂದೆತಾಯಿ ಇರುವಂತ ಪುಣ್ಯ ಸ್ಥಳ ಹಾಗಾಗಿ ಮುಂದಿನ ದಿನಗಳಲ್ಲಿ ಬರ್ತಡೇ ಸೆಲೆಬ್ರೇಷನ್ ಹುಟ್ಟೂರು ಕುಂಬಾರನಹಳ್ಳಿಯಲ್ಲಿ ಆಗುತ್ತದೆ ಎಂದು ದುನಿಯಾ ವಿಜಿ ಸಂತಸ ಹಂಚಿಕೊಂಡರು.

    ಹನುಮ ವೇಷ ಧರಿಸಿ ಬಂದ ಅಭಿಮಾನಿಯನ್ನ ಕಂಡ ವಿಜಿ ಹತ್ತಿರಕ್ಕೆ ಕರೆದು ಬ್ಯಾರಿಕೇಡ್ ಮೇಲೆ ಕೂರಿಸಿಕೊಂಡು ಹಾರ ಹಾಕಿ ಸನ್ಮಾನ ಮಾಡಿದ್ರು. ಅದೇ ರೀತಿ ವಿಕಲಚೇತನ ಅಭಿಮಾನಿಯೋರ್ವ ಕೈನಲ್ಲಿ ಹಾರ ಹಿಡಿದುಕೊಂಡು ವಿಜಿಗೆ ಹಾಕಲು ಬಂದಾಗ ತಡೆದು ಅದೇ ಹಾರವನ್ನ ಹಾಕಿದ್ರು. ಇನ್ನೂ ಆನೇಕಲ್ ಪಟ್ಟಣದ ಮಣಿ ಎಂಬ ಅಭಿಮಾನಿ ಮೈತುಂಬ ದುನಿಯಾ ವಿಜಿ ಟ್ಯಾಟೂ ಹಾಕಿಸಿಕೊಂಡು ಬಂದು ನೆಚ್ಚಿನ ನಟನಿಗೆ ಬರ್ತಡೇ ವಿಶ್ ಮಾಡಿದ್ರು.

    ಎಕರೆಗಟ್ಟಲೇ ಪೆಂಡಲ್ ಹಾಕಿ ಅಭಿಮಾನಿಗಳಿಗೆ ಚಿಕನ್ ಬಿರಿಯಾನಿ ಚಿಲ್ಲಿ ಚಿಕನ್ ಸಿದ್ದಪಡಿಸಿದ್ದ ವಿಜಿ, ತಾನೇ ಅಭಿಮಾನಿಗಳಿಗೆ ಉಣಬಡಿಸುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಸಹ ನೆಚ್ಚಿನ ನಟನ ಕಣ್ತುಂಬಿಕೊಳ್ಳಲು ಸರದಿ ಸಾಲಿನಲ್ಲಿ ಮುಗಿ ಬಿದ್ದು ಶುಭಹಾರೈಸಿ ಖುಷಿಪಟ್ಟಿದ್ದಾರೆ. ಒಟ್ನಲ್ಲಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುವ ಮೂಲಕ ದುನಿಯಾ ವಿಜಯ್ ಗಮನ ಸೆಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತೆಲುಗಿಗೆ ಎಂಟ್ರಿ ಕೊಟ್ಟ ಸಲಗನ ಸಂಗಾತಿ ಸಂಜನಾ ಆನಂದ್

    ತೆಲುಗಿಗೆ ಎಂಟ್ರಿ ಕೊಟ್ಟ ಸಲಗನ ಸಂಗಾತಿ ಸಂಜನಾ ಆನಂದ್

    ದುನಿಯಾ ವಿಜಿ ನಟಿಸಿ, ನಿರ್ದೇಶನ ಮಾಡಿದ್ದ ‘ಸಲಗ’ ಸಿನಿಮಾ ಮೂಲಕ ಸಿನಿಮಾ ದುನಿಯಾಗೆ ಮತ್ತಷ್ಟು ಹತ್ತಿರ ಆದವರು. ಸಂಜನಾ ಆನಂದ್. ಈ ಸಿನಿಮಾದಲ್ಲಿ ಬೋಲ್ಡ್ ಮಾತುಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆದವರು. ಈ ಚಿತ್ರದ ನಟನೆಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಈ ಸಿನಿಮಾ ಇವರಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದು, ತೆಲುಗು ಸಿನಿಮಾಗಳಲ್ಲಿಯೂ ಭರ್ಜರಿ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

    ದುನಿಯಾ ವಿಜಯ್ ಕೂಡ ತೆಲುಗಿಗೆ ಹಾರಿದ ಬೆನ್ನಲ್ಲೇ ಸಂಜನಾ ಕೂಡ ಅದೇ ಹಾದಿ ಹಿಡಿದಿದ್ದು, ಚಿತ್ರ ಪ್ರೇಮಿಗಳಲ್ಲಿ ಡಬಲ್ ಸಂಭ್ರಮ ತಂದಿದೆ. ದುನಿಯಾ ವಿಜಯ್ ತೆಲುಗಿನ ಸೂಪರ್ ಸ್ಟಾರ್ ಬಾಲಯ್ಯ ಜತೆ ಸಿನಿಮಾ ಮಾಡುತ್ತಿದ್ದರೆ, ಸಂಜನಾ ‘ನೇನು ಮೀಕು ಬಾಗಾ ಕಾವಾಲ್ಸಿ ನಿವಾಡಿನಿ’ ಸಿನಿಮಾದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ಇವರು ‘ತೇಜು’ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಪಾತ್ರದ ಫಸ್ಟ್ ಲುಕ್ ಇದೀಗ ರಿಲೀಸಾಗಿದೆ. ಇದನ್ನೂ ಓದಿ: ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾದ ರಾಬರ್ಟ್ ರಾಣಿ!

    ಶೀತಲ್ ಶೆಟ್ಟಿ ನಿದೇಶನದ ‘ವಿಂಡೋಸೀಟ್’ ಸಿನಿಮಾದಲ್ಲಿಯೂ ಸಂಜನಾ ನಟಿಸಿದ್ದು, ಈ ಸಿನಿಮಾ ರಿಲೀಸ್ಗೆ ರೆಡಿ ಇದೆ. ಅಲ್ಲದೆ ಸಂಜನಾ, ಅಜಯ್ ರಾವ್ ಜೊತೆ ‘ಶೋಕಿವಾಲ’ ಚಿತ್ರದಲ್ಲೂ ನಟಿಸಿದ್ದು, ಈ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

    Sanjana Anand Ultra HD Images

    ತಬಲಾ ನಾಣಿ ಜೊತೆಗೆ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಮೂಲಕ ಸಿನಿರಂಗಕ್ಕೆ ಪ್ರವೇಶ ಮಾಡಿದವರು ಸಂಜನಾ, ನಂತರ ನಿವೇದಿತಾ ಶಿವರಾಜ್‍ಕುಮಾರ್ ನಿರ್ಮಾಣದ ‘ಹನಿಮೂನ್’ ವೆಬ್ ಸಿರೀಸ್‍ನಲ್ಲಿಯೂ ನಟಿಸಿದ್ದರು. ಈ ವೆಬ್ ವರ್ಷನ್ ತೆಲುಗಿನಲ್ಲೂ ತೆರೆಕಂಡಿರುವುದು ವಿಶೇಷ.

  • ದುನಿಯಾ ವಿಜಯ್ ಹೊಸ  ಚಿತ್ರಕ್ಕೆ ಟೈಟಲ್ ಫಿಕ್ಸ್

    ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

    ಲಗ ಸಿನಿಮಾದ ನಂತರ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಸಿನಿಮಾದ ಟೈಟಲ್ ಇಂದು ಲಾಂಚ್ ಆಗಿದೆ. ತಮ್ಮ ನಿರ್ದೇಶನದ ಎರಡನೇ ಚಿತ್ರಕ್ಕೆ ವಿಜಯ್ “ಭೀಮ” ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ : ಸಿಂಪಲ್ ಸುನಿ ನಿರ್ದೇಶನದ ಸಿನಿಮಾದಲ್ಲಿ ವಾಸ್ಕೋಡಿಗಾಮನ ಕಥೆ

    ಈ ಸಿನಿಮಾದಲ್ಲಿ ವಿಜಯ್, ಕೇವಲ ನಟನೆಯನ್ನು ಮಾಡುತ್ತಾರಾ ಅಥವಾ ನಿರ್ದೇಶನದ ಜೊತೆ ಜೊತೆಗೆ ನಟಿಸುತ್ತಾರೆ ಎನ್ನುವ ಪ್ರಶ್ನೆ ಇತ್ತು. ಅದಕ್ಕೂ ಇದೀಗ ಉತ್ತರ ಸಿಕ್ಕಿದೆ. ನಟನೆಯ ಜತೆಗೆ ನಿರ್ದೇಶನವನ್ನೂ ಅವರು ಮಾಡಲಿದ್ದಾರೆ. ಸದ್ಯಕ್ಕೆ ಶೀರ್ಷಿಕೆ ಮಾತ್ರ ಅನಾವರಣಗೊಂಡಿದೆ. ನಿರ್ಮಾಪಕರ ಹೊರತಾಗಿ ಉಳಿದಂತೆ ಯಾವುದೇ ಮಾಹಿತಿಯನ್ನೂ ಅವರು ಹೊರಹಾಕಿಲ್ಲ. ಇದನ್ನೂ ಓದಿ : ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಜತೆ ನಟಿಸಲ್ಲ ಅಂದ ಕನ್ನಡತಿ

    ಸದ್ಯ ತೆಲುಗಿನ ಬಾಲಯ್ಯ ನಟನೆಯ ಹೊಸ ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದಾರೆ. ಈ ಮಧ್ಯೆಯೇ ಅವರು ಹೊಸ ಸಿನಿಮಾದ ಸ್ಕ್ರೀಪ್ಟ್ ಕೆಲಸದಲ್ಲೂ ತೊಡಗಿದ್ದಾರೆ. ತಾಂತ್ರಿಕ ತಂಡದಲ್ಲಿ ಬಹುತೇಕ ಸಲಗ ಟೀಮ್ ಇರಲಿದೆಯಂತೆ. ಇದನ್ನೂ ಓದಿ : ಮಹಾಶಿವರಾತ್ರಿಗೆ ಶಿವಾಜಿ ಸುರತ್ಕಲ್ ಪೋಸ್ಟರ್

    ದುನಿಯಾ ವಿಜಯ್ ಅಂದಾಕ್ಷಣ ಸಾಮಾನ್ಯವಾಗಿ ಸಾಹಸ ಪ್ರಧಾನ ಅಥವಾ ಭೂಗತ ಜಗತ್ತಿನ ಕಥೆಗಳ ಸಿನಿಮಾಗಳೇ ನೆನಪಿಗೆ ಬರುತ್ತವೆ. ಹೊಸ ಸಿನಿಮಾದಲ್ಲೂ ಅದೇ ಇದೆ. ಮೊನ್ನೆಯಷ್ಟೇ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ರಕ್ತ, ಲಾಂಗ್ ಮಚ್ಚುಗಳ ಆರ್ಭಟವೇ ಇದೆ. ಅಲ್ಲದೇ, 80ರ ದಶಕದ ಪಾಪ್ಯುಲರ್ ಬೈಕ್ ಇರುವುದರಿಂದ, ಆ ಕಾಲದ ಕಥೆಯನ್ನು ಅವರು ಹೇಳಲಿದ್ದಾರಾ ಎಂದು ಕಾದು ನೋಡಬೇಕಿದೆ.

  • ಸಲಗದ ನಂತರ ಮತ್ತೆ ನಿರ್ದೇಶನಕ್ಕೆ ದುನಿಯಾ ವಿಜಯ್

    ಸಲಗದ ನಂತರ ಮತ್ತೆ ನಿರ್ದೇಶನಕ್ಕೆ ದುನಿಯಾ ವಿಜಯ್

    ದುನಿಯಾ ವಿಜಯ್ ನಿರ್ದೇಶನ ಮಾಡುತ್ತಾರಾ ಎನ್ನುವ ಪ್ರಶ್ನೆಯೊಂದಿಗೆ ಶುರುವಾದ ‘ಸಲಗ’ ಸಿನಿಮಾ, ಇದೀಗ ಯಶಸ್ಸಿನ ಕಿರೀಟ ತೊಟ್ಟುಕೊಂಡಿದೆ. ನಿರ್ದೇಶನದ ಮೊದಲ ಸಿನಿಮಾದಲ್ಲಿಯೇ ಗೆದ್ದು ಬೀಗುತ್ತಿರುವ ದುನಿಯಾ ವಿಜಯ್, ಸದ್ಯದಲ್ಲೇ ಮತ್ತೊಂದು ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ದುನಿಯಾ ಅಂಗಳದಿಂದ ಬಂದಿದೆ. ಇದನ್ನು ಓದಿ : ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?


    ಸಲಗ ಸೋತರೂ, ಗೆದ್ದರೂ ತಾವು ನಟನೆಯ ಜತೆಗೆ ನಿರ್ದೇಶನದಲ್ಲೂ ಮುಂದುವರೆಯುವುದಾಗಿ ದುನಿಯಾ ವಿಜಯ್ ಈ ಹಿಂದೆಯೇ ಹೇಳಿದ್ದರು. ಅಂದುಕೊಂಡ ಕನಸು ಅವರನ್ನು ಕೈ ಬಿಡಲಿಲ್ಲ. ಪ್ರೇಕ್ಷಕ ಸಲಗ ಗೆಲ್ಲಿಸಿಬಿಟ್ಟ. ಹಾಗಾಗಿ ನಿರ್ದೇಶಕನಾಗುವ ಹುರುಪು ಇಮ್ಮಡಿಯಾಗಿದೆ.  ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ


    ಸದ್ಯ ಹೊಸ ಸಿನಿಮಾದ ಕಥೆ ಬರೆಯುವುದರಲ್ಲಿ ವಿಜಯ್ ತೊಡಗಿಕೊಂಡಿದ್ದಾರೆ. ಈ ಬಾರಿಯೂ ಅವರು ರಾ ಆಗಿರುವಂತಹ ಕಥೆಯನ್ನೇ ಸಿನಿಮಾ ಮಾಡಲಿದ್ದಾರಂತೆ. ಪಕ್ಕಾ ಮಾಸ್ ಸಿನಿಮಾ ಅದಾಗಿದ್ದು, ನಿರ್ದೇಶನದ ಜತೆಗೆ ನಟನೆಯನ್ನೂ ಮಾಡುತ್ತಾರಾ ಅಥವಾ ಬೇರೆ ಕಲಾವಿದರಿಗೆ ಹೊಸ ಸಿನಿಮಾ ಮಾಡುತ್ತಾರೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಇದನ್ನೂ ಓದಿ : ಭಟ್ಟರ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದ ಅಸಲಿ ಕಾರಣ?


    ಅಂದುಕೊಂಡಂತೆ ಆದರೆ, ಶಿವರಾತ್ರಿ ಹೊತ್ತಿಗೆ ಈ ಸಿನಿಮಾದ ಮುಹೂರ್ತ ನಡೆಯಲಿದೆ. ಅಲ್ಲಿಯವರೆಗೂ ಸಂಭಾಷಣೆಕಾರ ಮಾಸ್ತಿ ಮತ್ತು ದುನಿಯಾ ವಿಜಯ್ ಸ್ಕ್ರಿಪ್ಟ್ ಬರೆಯುವುದರಲ್ಲಿ ಮಗ್ನರಾಗಿರುತ್ತಾರೆ. ಜತೆ ಜತೆಗೆ ಕಲಾವಿದರ ಆಯ್ಕೆ ಕೂಡ ನಡೆಯಲಿದೆಯಂತೆ. ಎರಡನೇ ಸಿನಿಮಾಗೆ ನಿರ್ದೇಶನ ಮಾಡುವುದು ಪಕ್ಕಾ ಆಗಿದ್ದು, ಕಲಾವಿದರು ಮತ್ತು ತಂತ್ರಜ್ಞರ ಕುರಿತು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

  • ನಮ್ಮಲ್ಲೇ ಒಳ್ಳೊಳ್ಳೆಯ ನಟಿಯರಿದ್ದಾರೆ, ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ: ಶಿವಣ್ಣ

    ನಮ್ಮಲ್ಲೇ ಒಳ್ಳೊಳ್ಳೆಯ ನಟಿಯರಿದ್ದಾರೆ, ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ: ಶಿವಣ್ಣ

    – ವೇದಿಕೆಯಲ್ಲೇ ಕಣ್ಣೀರಿಟ್ಟ ದುನಿಯಾ ವಿಜಿ

    ಬೆಂಗಳೂರು: ನಮ್ಮಲ್ಲೇ ಒಳ್ಳೊಳ್ಳೆಯ ನಟಿಯರಿದ್ದಾರೆ. ಹೀಗಾಗಿ ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.

    ಇಂದು ಖಾಸಗಿ ಹೊಟೇಲ್ ನಲ್ಲಿ ನಡೆದ ‘ಸಲಗ’ ಚಿತ್ರದ ಸಕ್ಸಸ್ ಮೀಟ್‍ನಲ್ಲಿ ಮಾತನಾಡಿದ ಅವರು, ನಾವು ಒಟ್ಟಿಗೆ ಇದ್ದಾಗೆಲ್ಲಾ ನಮಗೆ ವಯಸ್ಸಾಗಿದೆ ಅನ್ಕೋಳ್ಳೋದಿಲ್ಲ. ನಾವು ಪಾಸಿಟಿವ್ ಥಿಂಕ್ ಮಾಡಬೇಕು, ಅದೇ ಒಳ್ಳೆಯದು. ವಿಜಿ ಮೊದಲ ಸಿನಿಮಾ ದುನಿಯಾ ಮುಹೂರ್ತಕ್ಕೂ ಬಂದಿದ್ದೆ, ಈಗಲೂ ಜೊತೆ ಇರ್ತೀನಿ. ಕನ್ನಡದ ನಟಿ ಸಂಜನಾ ಅವರು ಚಿತ್ರದಲ್ಲಿ ಒಳ್ಳೆಯ ರೀತಿ ನಟಿಸಿದ್ದಾರೆ. ನಮ್ಮಲ್ಲೇ ಒಳ್ಳೊಳ್ಳೆ ನಟಿಯರಿದ್ದಾರೆ. ಎಲ್ಲರಿಗೂ ಹೇಳೋದೇನು ಅಂದ್ರೆ ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ದೀಪಿಕಾ ಪಡುಕೋಣೆಯನ್ನು ಸಮರ್ಥಿಸಲು ಬಂದಿಲ್ಲ: ಕಂಗನಾ ರಣಾವತ್

    ಇದೇ ವೇಳೆ ವೇದಿಕೆಯಲ್ಲಿ ಅಪ್ಪು ನೆನೆದು ಶಿವಣ್ಣ ಭಾವುಕರಾದರು. ‘ಸಲಗ’ ಪ್ರೀ-ರಿಲೀಸ್ ಇವೆಂಟ್ ಯಾವಾಗ್ಲೂ ನೆನಪಿರುತ್ತೆ. ಅಪ್ಪು ನಾನು ಇದ್ವಿ. ಹಲವು ನೆನಪುಗಳಿವೆ. ಈಗಿಲ್ಲ ಅಂತ ಅನ್ಕೊಂಡ್ರೆ ತುಂಬಾ ಕಷ್ಟ ಆಗುತ್ತೆ. ಆದರೆ ಅವರು ಇಲ್ಲೇ ಇದ್ದಾರೆ, ಅವರ ಬೆಸ್ಲಿಂಗ್ಸ್ ಇರುತ್ತೆ ಎಂದರು. ನೀವು ಬಂದಿದ್ದೀರಿ, ನಿಮ್ಮ ಮೂಲಕ ಅಪ್ಪು ಬ್ಲೆಸ್ಲಿಂಗ್ಸ್ ನೋಡಬಹುದಾ ಎಂಬ ಪ್ರಶ್ನೆಗೆ ಇಲ್ಲ ಖಂಡಿತಾ ಇಲ್ಲ. ಅವರು ಇಲ್ಲ ಅಂತ ಅನ್ಕೊಳ್ಳೋ ಹಾಗಿಲ್ಲ. ಇಲ್ಲೇ ಇದ್ದಾರೆ ಎಂದು ಶಿವಣ್ಣ ಗದ್ಗದಿತರಾದರು.

    ನಟ ದುನಿಯಾ ವಿಜಯ್ ಮಾತನಾಡಿ, ಸಲಗ ಚಿತ್ರ ಸಕ್ಸಸ್ ತಂದುಕೊಟ್ಟಿದೆ ಎಂದು ಹೇಳಿ ಕಣ್ಣೀರು ಹಾಕಿದರು. ಕೆಲ ಕ್ಷಣ ಮೌನ ತಾಳಿದ ಬಳಿಕ ದುನಿಯಾ ವಿಜಯ್ ದುಃಖದ ಕೋಡಿ ಒಡೆಯಿತು. ಈ ನಡುವೆ ತಾಯಿ – ತಂದೆ ಕಳೆದುಕೊಂಡರು. ಈ ಸಕ್ಸಸ್ ಅನ್ನು ಅಪ್ಪು, ಅಮ್ಮ-ಅಪ್ಪ ಅಭಿಮಾನಿಗಳಿಗೆ ಸಲ್ಲಿಸ್ತೀನಿ. ಶಿವಣ್ಣ ಯಾವಾಗಲೂ ಜೊತೆಯಲ್ಲಿದ್ದಾರೆ, ಖುಷಿಯಾಗುತ್ತೆ. ಸಿನಿಮಾ ಪ್ರೊಡ್ಯೂಸ್ ಮಾಡೋವಾಗ ಮುಂಚೆ 40 ರೂ. ನನ್ನ ಜೇಬಲ್ಲಿತ್ತು. ಈಗ 40 ಲಕ್ಷ ಆಗಿದೆ ಎಂದು ಭಾವುಕರಾದರು.

    ಸಲಗ ಸಂಭ್ರಮದಲ್ಲಿ ನೆನಪಿರಲಿ ಪ್ರೇಮ್, ಶ್ರೀನಗರ ಕಿಟ್ಟಿ, ಗಣೇಶ್, ಡಾಲಿ ಧನಂಜಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಲ್ಲದೆ ನಟ ಡಾಲಿ ಧನಂಜಯ್, ಸಂಜನಾ ಆನಂದ್ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಸಲಗ ಚಿತ್ರಕ್ಕೆ ಅಪ್ಪು ಚಾಲನೆ ಕೊಟ್ಟಿದ್ರು. ಚಿತ್ರ ಬಿಡುಗಡೆಗೂ ಮುಂಚೆ ಪ್ರಿ-ರಿಲೀಸ್ ಇವೆಂಟ್ ನಲ್ಲೂ ಅಪ್ಪು ಇದ್ದರು. ಇದೀಗ ಸಲಗ ಸಕ್ಸಸ್ ನಲ್ಲಿ ಅಪ್ಪು ಇಲ್ಲ ಅನ್ನೋದು ಕೊರಗು ಚಿತ್ರತಂಡಕ್ಕಿದೆ.