Tag: Salaar

  • ಸಲಾರ್ : ಬಾಕ್ಸಾಫಿಸಿಗೆ ಹರಿದು ಬಂತು 500 ಕೋಟಿ ರೂಪಾಯಿ

    ಸಲಾರ್ : ಬಾಕ್ಸಾಫಿಸಿಗೆ ಹರಿದು ಬಂತು 500 ಕೋಟಿ ರೂಪಾಯಿ

    ನ್ನಡದ ಹೆಮ್ಮೆಯ ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದ ಮತ್ತೊಂದು ಸಲಾರ್ (Salaar) ಸಿನಿಮಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಕಳೆದ ಶುಕ್ರವಾರ ರಿಲೀಸ್ ಆಗಿರುವ ಈ ಸಿನಿಮಾ ಬಿಡುಗಡೆಯಾದ ಆರೇ ದಿನಕ್ಕೆ ವಿಶ್ವದಾದ್ಯಂತ 500 ಕೋಟಿಗೂ ಅಧಿಕ ಹಣವನ್ನು ಗಳಿಸಿದೆ. ಬಾಕ್ಸ್ ಆಫೀಸಿಗೆ ಕೋಟಿ ಕೋಟಿ ಹಣ ಹರಿದು ಬರುತ್ತಿದೆ.

    ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿರುವ ಚಿತ್ರವು ಮೊದಲ ದಿನವೇ 178.7 ಕೋಟಿ ರೂ ಸಂಪಾದಿಸಿದರೆ, ಎರಡನೇ ದಿನಕ್ಕೆ 295.7 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೂರನೇ ದಿನಕ್ಕೆ 350 ಕೋಟಿಗೂ ಅಧಿಕ ಗಳಿಕೆ ಆಗಿತ್ತು. ನಾಲ್ಕು, ಐದು ಮತ್ತು ಆರನೇ ದಿನದ ಒಟ್ಟು ಗಳಿಕೆ 500 ಕೋಟಿಗೂ ಅಧಿಕ ಎಂದು ಅಂದಾಜು ಮಾಡಲಾಗಿದೆ. ಸಲಾರ್ ಎನ್ನುವ ಅಧಿಕೃತ ಸೋಷಿಯಲ್ ಮೀಡಿಯಾ ಪುಟದಲ್ಲಿ ಪೋಸ್ಟರ್ ಕೂಡ ಹಾಕಲಾಗಿದೆ.

    ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ, ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೊಸ ದಾಖಲೆಯನ್ನು ಮಾಡಿದೆ. ಕನ್ನಡದ ನಿರ್ಮಾಣದ ಸಂಸ್ಥೆಯೊಂದು ರಾಷ್ಟ್ರೀಯ ಮಟ್ಟದಲ್ಲಿ ಇಂಥದ್ದೊಂದು ದಾಖಲೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

    ಕನ್ನಡದಲ್ಲಿ ‘ಮಾಸ್ಟರ್ ಪೀಸ್‍’, ‘ರಾಜಕುಮಾರ’, ‘ಯುವರತ್ನ’, ‘ಕೆಜಿಎಫ್‍ 1 ಮತ್ತು 2’, ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್, ತನ್ನ ನಿರ್ಮಾಣದ ಚಿತ್ರಗಳ ಮೂಲಕ ಜಗತ್ತಿನ ಗಮನ ಸೆಳೆದಿರುವುದಷ್ಟೇ ಅಲ್ಲ, ಕನ್ನಡ ಚಿತ್ರಗಳನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಮೂಲಕ ಎಲ್ಲರ ಗಮನ ಸೆಳೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

    ‘ಸಲಾರ್’ ಪ್ಯಾನ್‍ ಇಂಡಿಯಾ ಚಿತ್ರವಾದರೂ, ಈ ಚಿತ್ರದ ಹಿಂದಿರುವ ತಾಂತ್ರಿಕ ತಂಡದವರೆಲ್ಲರೂ ಕನ್ನಡದವರಾಗಿದ್ದಾರೆ. ನಿರ್ಮಾಪಕರಾದ ವಿಜಯ್‍ ಕಿರಗಂದೂರು, ನಿರ್ದೇಶಕ ಪ್ರಶಾಂತ್‍ ನೀಲ್‍ (Prashant Neel), ಛಾಯಾಗ್ರಾಹಕ ಭುವನ್‍ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಚಿತ್ರದಲ್ಲಿ ಕೆಲಸ ಮಾಡಿರುವ ಹಲವು ತಂತ್ರಜ್ಞರು ಹಾಗೂ ಕಲಾವಿದರು  ಈ ನೆಲದ ಮಣ್ಣಿನವರಾಗಿದ್ದು, ಇದು ಕನ್ನಡದ ಪ್ರತಿಭಾ ಸಂಪತ್ತಿನ ಒಂದು ಉದಾಹರಣೆಯಷ್ಟೇ.

    ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದಲ್ಲಿ ಪ್ರಭಾಸ್‍ (Prabhas) ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

  • ‘ಸಲಾರ್’ ಬಾಕ್ಸಾಫೀಸ್ ಕಲೆಕ್ಷನ್ ಭರ್ಜರಿ : 3 ದಿನಕ್ಕೆ 300ಕೋಟಿಗೂ ಅಧಿಕ

    ‘ಸಲಾರ್’ ಬಾಕ್ಸಾಫೀಸ್ ಕಲೆಕ್ಷನ್ ಭರ್ಜರಿ : 3 ದಿನಕ್ಕೆ 300ಕೋಟಿಗೂ ಅಧಿಕ

    ಹೊಂಬಾಳೆ ಫಿಲಂಸ್‍ (Hombale Films) ನಿರ್ಮಾಣದ ಪ್ಯಾನ್‍ ಇಂಡಿಯಾ ಚಿತ್ರ ‘ಸಲಾರ್’ (Salaar), ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಚಿತ್ರವು ಮೊದಲ ದಿನವೇ 178.7 ಕೋಟಿ ರೂ ಸಂಪಾದಿಸಿದರೆ, ಎರಡನೇ ದಿನಕ್ಕೆ 295.7 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೂರನೇ ದಿನಕ್ಕೆ 350 ಕೋಟಿಗೂ ಅಧಿಕ ಗಳಿಕೆ ಆಗಿದೆ ಎನ್ನುವ ಮಾಹಿತಿ ಇದೆ.

    ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ, ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೊಸ ದಾಖಲೆಯನ್ನು ಮಾಡಿದೆ. ಕನ್ನಡದ ನಿರ್ಮಾಣದ ಸಂಸ್ಥೆಯೊಂದು ರಾಷ್ಟ್ರೀಯ ಮಟ್ಟದಲ್ಲಿ ಇಂಥದ್ದೊಂದು ದಾಖಲೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

    ಕನ್ನಡದಲ್ಲಿ ‘ಮಾಸ್ಟರ್ ಪೀಸ್‍’, ‘ರಾಜಕುಮಾರ’, ‘ಯುವರತ್ನ’, ‘ಕೆಜಿಎಫ್‍ 1 ಮತ್ತು 2’, ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್, ತನ್ನ ನಿರ್ಮಾಣದ ಚಿತ್ರಗಳ ಮೂಲಕ ಜಗತ್ತಿನ ಗಮನ ಸೆಳೆದಿರುವುದಷ್ಟೇ ಅಲ್ಲ, ಕನ್ನಡ ಚಿತ್ರಗಳನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಮೂಲಕ ಎಲ್ಲರ ಗಮನ ಸೆಳೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

    ‘ಸಲಾರ್’ ಪ್ಯಾನ್‍ ಇಂಡಿಯಾ ಚಿತ್ರವಾದರೂ, ಈ ಚಿತ್ರದ ಹಿಂದಿರುವ ತಾಂತ್ರಿಕ ತಂಡದವರೆಲ್ಲರೂ ಕನ್ನಡದವರಾಗಿದ್ದಾರೆ. ನಿರ್ಮಾಪಕರಾದ ವಿಜಯ್‍ ಕಿರಗಂದೂರು, ನಿರ್ದೇಶಕ ಪ್ರಶಾಂತ್‍ ನೀಲ್‍ (Prashant Neel), ಛಾಯಾಗ್ರಾಹಕ ಭುವನ್‍ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಚಿತ್ರದಲ್ಲಿ ಕೆಲಸ ಮಾಡಿರುವ ಹಲವು ತಂತ್ರಜ್ಞರು ಹಾಗೂ ಕಲಾವಿದರು  ಈ ನೆಲದ ಮಣ್ಣಿನವರಾಗಿದ್ದು, ಇದು ಕನ್ನಡದ ಪ್ರತಿಭಾ ಸಂಪತ್ತಿನ ಒಂದು ಉದಾಹರಣೆಯಷ್ಟೇ.

    ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದಲ್ಲಿ ಪ್ರಭಾಸ್‍ (Prabhas) ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

  • ‘ಸಲಾರ್’ ಮೊದಲ ದಿನದ ಗಳಿಕೆ 178 ಕೋಟಿ ರೂಪಾಯಿ

    ‘ಸಲಾರ್’ ಮೊದಲ ದಿನದ ಗಳಿಕೆ 178 ಕೋಟಿ ರೂಪಾಯಿ

    ಪ್ರಭಾಸ್ (Prabhas) ಮತ್ತು ಪ್ರಶಾಂತ್ ನೀಲ್ (Prashant Neel)ಕಾಂಬಿನೇಷನ್ ನ ಸಲಾರ್ (Salaar) ಸಿನಿಮಾ ನಿನ್ನೆಯಷ್ಟೇ ವಿಶ್ವದಾದ್ಯಂತ ರಿಲೀಸ್ ಆಗಿದೆ. ಜೊತೆ ಶಾರುಖ್ ಖಾನ್ ನಟನೆ ಡಂಕಿ ಕೂಡ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಹಾಗಾಗಿ ಈ ಎರಡೂ ಚಿತ್ರಗಳ ಬಾಕ್ಸ್ ಆಫೀಸ್ (Box Office) ಕಲೆಕ್ಷನ್ ಬಗ್ಗೆ ಸಹಜವಾಗಿಯೇ ಎಲ್ಲರಿಗೂ ಕುತೂಹಲವಿತ್ತು. ಇದೀಗ ಸಲಾರ್ ಅಧಿಕೃತ ಎಕ್ಸ್ ಖಾತೆಯಲ್ಲಿ ಒಂದು ದಿನದ ವಿಶ್ವದ ಗಳಿಕೆಯನ್ನು ಪೋಸ್ಟ್ ಮಾಡಲಾಗಿದೆ. ಮೊದಲ ದಿನ ಸಲಾರ್ ಚಿತ್ರ 178.7 ಕೋಟಿ ಗಳಿಸಿದೆ ಎಂದು ಘೋಷಿಸಿದೆ.

    ವಿಶ್ವದ್ದು 178.7 ಕೋಟಿ ರೂಪಾಯಿ ಗಳಿಕೆಯಾದರೆ, ಇಂಡಿಯನ್ ಬಾಕ್ಸ್ ಆಫೀಸಿನಲ್ಲಿ ಅಂದಾಜು 95 ಕೋಟಿ ರೂಪಾಯಿ ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ಡಂಕಿಗೆ ಹೋಲಿಸಿದರೆ, ಮೊದಲ ದಿನದ ಬಾಕ್ಸ್ ಆಫೀಸ್ ಗಳಿಗೆ ಸಲಾರದ್ದೇ ಹೆಚ್ಚಿದೆ. ಮತ್ತೆ ದಕ್ಷಿಣ ಭಾರತದ ಸಿನಿಮಾವೊಂದು ಬಾಲಿವುಡ್ ಚಿತ್ರಕ್ಕೆ ಸೆಡ್ಡು ಹೊಡೆದು, ಬಾಕ್ಸ್ ಆಫೀಸಿನಲ್ಲಿ ಮುನ್ನುಗ್ಗುತ್ತಿದೆ.

    ತಮ್ಮ ನೆಚ್ಚಿನ ನಟನ ಸಿನಿಮಾಗೆ ಭಾರೀ ಮೊತ್ತ ಕೊಟ್ಟು ಟಿಕೆಟ್ ಖರೀದಿಸಿದ್ದರು ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ (Rajamouli). ಬಾಹುಬಲಿ ಸಿನಿಮಾದಲ್ಲಿ ನಟಿಸಿದ್ದ ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಟಕೆಟ್ ಅನ್ನು ಬರೋಬ್ಬರಿ ಹತ್ತು ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದರಂತೆ ರಾಜಮೌಳಿ. ಬಿಡುಗಡೆ ದಿನ ಹೈದರಾಬಾದ್ ನ ಸಂಧ್ಯಾ ಚಿತ್ರಮಂದಿರದಲ್ಲಿ ಸಲಾರ್ ಸಿನಿಮಾ ವೀಕ್ಷಿಸಿದ್ದಾರೆ.

    ಕೆಜಿಎಫ್ (KGF) ಚಿತ್ರಕ್ಕಿಂತ ಐದು ಪಟ್ಟು ದೊಡ್ಡದು ಸಲಾರ್. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇನ್ನೊಂದು ಫಿಲ್ಮ್ ಸಿಟಿ ನಿರ್ಮಿಸಿದಂತಾಗಿತ್ತು ನಾವು ಹಾಕಿದ ಸೆಟ್ಟುಗಳು. ನೂರು ಎಕರೆ ಪ್ರದೇಶದಲ್ಲಿ ಸೆಟ್ ನಿರ್ಮಿಸಲಾಗಿತ್ತು. ಇಂಡಿಯಾದ ಇತಿಹಾಸದಲ್ಲಿ ಇಷ್ಟು ದೊಡ್ಡ ಸೆಟ್ ನಿರ್ಮಿಸಿದ್ದು ಇಲ್ಲವೇ ಇಲ್ಲ. ಕೆಜಿಎಫ್ ಶೂಟ್ ಮಾಡಿದ್ದ ಸ್ಥಳದಲ್ಲಿ ಸಲಾರ್ ಶೂಟಿಂಗ್ ಮಾಡಿಲ್ಲ. ಅದು ಸುಳ್ಳು. ಶಿವಕುಮಾರ್ ಕಲಾ ನಿರ್ದೇಶನದಲ್ಲಿ ಹಿಂದೆಂದೂ ನೋಡದ ಕಾಣದ ಲೋಕ ತೋರಿಸಿದ್ದೇವೆ. ಕೋಟಿ ಕೋಟಿ ಸುರಿಯಲಾಗಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಲಾರ್ ಅದ್ಭುತ ಅಪರೂಪದ ಜಗತ್ತು ತೋರಿಸಲಿದೆ.

  • ‘ಸಲಾರ್’ ಫ್ಲೆಕ್ಸ್ ಹಾಕುತ್ತಿದ್ದ ಪ್ರಭಾಸ್ ಅಭಿಮಾನಿ ಸಾವು

    ‘ಸಲಾರ್’ ಫ್ಲೆಕ್ಸ್ ಹಾಕುತ್ತಿದ್ದ ಪ್ರಭಾಸ್ ಅಭಿಮಾನಿ ಸಾವು

    ಪ್ರಭಾಸ್ (Prabhas) ನಟನೆಯ ಸಲಾರ್ (Salaar) ಸಿನಿಮಾ ಇಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಸಲಾರ್ ಸಿನಿಮಾದ ಫ್ಲೆಕ್ಸ್ ಹಾಕುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟಿರುವ ಅಭಿಮಾನಿ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಪಟ್ಟಣದ ಬಾಲರಾಜು (Balaraju) ಎಂದು ಗುರುತಿಸಲಾಗಿದೆ.

    ಧರ್ಮಾವರಂ ಪಟ್ಟಣದ ರಂಗ ಚಿತ್ರಮಂದಿರ ಮುಂದೆ ತನ್ನ ನೆಚ್ಚಿನ ನಾಯಕ ಪ್ರಭಾಸ್ ಅವರ ಫ್ಲೆಕ್ಸ್ ಹಾಕುತ್ತಿದ್ದ ಬಾಲರಾಜು ಮತ್ತು ಗೆಳೆಯರಿಗೆ ವಿದ್ಯುತ್ ಶಾಕ್ ತಗುಲಿದೆ. ಬಾಲರಾಜು ಮೃತಪಟ್ಟಿದ್ದರೆ, ಗಜೇಂದ್ರ ಎಂಬ ಯುವಕನಿಗೆ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬಾಲರಾಜುಗೆ 27 ವರ್ಷ ವಯಸ್ಸಾಗಿದ್ದು ಪತ್ನಿ ಸಿರಿಶಾ ಮತ್ತು ಇಬ್ಬರು ಪುತ್ರರನ್ನು ಅಗಲಿಸಿದ್ದಾರೆ. ಘಟನಾ ಸ್ಥಳಕ್ಕೆ ಧರ್ಮವರಂ ಪೊಲೀಸರು ಆಗಮಿಸಿ, ಪರಿಶೀಲನೆ ಮಾಡಿದ್ದಾರೆ. ಪ್ರಕರಣ ಕೂಡ ದಾಖಲಾಗಿದೆ. ನಿನ್ನೆ ರಾತ್ರಿಯೇ ಈ ಅವ‍ಘಡ ನಡೆದಿದ್ದು, ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಿ ಎಂದು ಕುಟುಂಬಸ್ಥರು ಪ್ರತಿಭಟನೆ ಕೂಡ ನಡೆಸಿದ್ದಾರೆ.

  • ಸಲಾರ್: ತಡರಾತ್ರಿ ಫ್ಯಾನ್ಸ್ ಶೋ ಹೌಸ್ ಫುಲ್

    ಸಲಾರ್: ತಡರಾತ್ರಿ ಫ್ಯಾನ್ಸ್ ಶೋ ಹೌಸ್ ಫುಲ್

    ಪ್ರಭಾಸ್ (Prabhas) ನಟನೆಯ ಸಲಾರ್ ಸಿನಿಮಾ ಇಂದಿನಿಂದ ವಿಶ್ವದ್ಯಾದ್ಯಂತ ರಿಲೀಸ್ ಆಗಿದೆ. ನಿನ್ನೆ ತಡರಾತ್ರಿಯಿಂದಲೇ ಅಭಿಮಾನಿಗಳ ಅಬ್ಬರ ಶುರುವಾಗಿದೆ. ಬೆಂಗಳೂರಿನ ಮಡಿವಾಳದ ಸಂಧ್ಯಾ ಚಿತ್ರಮಂದಿರದಲ್ಲಿ ಫ್ಯಾನ್ಸ್ ಗಾಗಿ ಫ್ಯಾನ್ಸ್ ಶೋ (Fans Show) ಆಯೋಜನೆ ಮಾಡಲಾಗಿದೆ. ಅಭಿಮಾನಿಗಳು ಮುಗಿಬಿದ್ದು ಚಿತ್ರ ವೀಕ್ಷಿಸಿದ್ದಾರೆ. ತಡರಾತ್ರಿ 12.20ಕ್ಕೆ ಶೋ ಇದ್ದರೂ, ಅದಕ್ಕೂ ಮುನ್ನ ಗಂಟೆಗಟ್ಟಲೆ ಟಿಕೆಟ್ ಗಾಗಿ ಕಾದಿದ್ದಾರೆ. ಕೆಲವರಿಗೆ ಟಿಕೆಟ್ ಸಿಗದೇ ನಿರಾಸೆಯನ್ನೂ ವ್ಯಕ್ತ ಪಡಿಸಿದ್ದಾರೆ. ಥಿಯೇಟರ್ ಮುಂಭಾಗ ಪಟಾಕಿ ಸಿಡಿಸಿ ಅಭಿಮಾನಿಗ ಸಂಭ್ರಮಿಸಿದ್ದಾರೆ.

    ಲಾರ್ (Salaar) ಸಿನಿಮಾದಲ್ಲಿ ಯಶ್ (Yash) ನಟಿಸಿದ್ದಾರೆ ಎಂದೆಲ್ಲ ಸುದ್ದಿ ಹರಿಬಿಡಲಾಗಿತ್ತು. ಕೆಜಿಎಫ್ ಸಿನಿಮಾದ ಪಾತ್ರವೊಂದು ಸಲಾರ್ ನಲ್ಲಿ ಎಂಟ್ರಿ ಕೊಡಲಾಗಿದೆ. ಅದು ಯಶ್ ಪಾತ್ರವಾಗಿದೆ ಎಂದು ಹೇಳಲಾಗಿತ್ತು. ಅದಕ್ಕೀಗ ಸ್ಪಷ್ಟನೆ ನೀಡಿದ್ದಾರೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ (Prashant Neel). ಸಲಾರ್ ಸಿನಿಮಾದಲ್ಲಿ ಯಶ್ ಇದ್ದಾರೆ ಅಂತ ಹೇಳೋಕೆ ನನಗೇಕೆ ಅಳುಕು. ಅವರು ಇದ್ದಾರೆ ಅಂದಿದ್ದರೆ, ಅದನ್ನೂ ಪ್ರಚಾರ ಮಾಡುತ್ತಿದ್ದೆವು. ಪ್ರಚಾರಕ್ಕೆ ಅದು ಪ್ಲಸ್ ಆಗಿರೋದು. ಆದರೆ, ಈ ಸಿನಿಮಾದಲ್ಲಿ ಅವರು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಸಲಾರ್ ಸಿನಿಮಾದ ಕುರಿತಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಯಶ್ ಬಗ್ಗೆಯೂ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೀವನ ಪರ್ಯಂತ ಯಶ್ ನನ್ನ ಜೊತೆಯಾಗಿಯೇ ಇರುತ್ತಾರೆ ಎಂದು ಹೇಳುವ ಮೂಲಕ, ಯಶ್ ಮತ್ತು ಪ್ರಶಾಂತ್ ನೀಲ್ ಮಧ್ಯ ಯಾವುದೂ ಸರಿ ಇಲ್ಲ ಎನ್ನುವುದಕ್ಕೂ ಅವರು ಉತ್ತರ ನೀಡಿದ್ದಾರೆ.

    ಇಂದು ವಿಶ್ವದಾದ್ಯಂತ ಸಲಾರ್ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಬಿಡುಗಡೆ ಆಗುವ ಒಂದು ದಿನ ಮುನ್ನ ಚಿತ್ರದ ಮತ್ತೊಂದು ಹಾಡು ಬಿಡುಗಡೆ ಮಾಡಿದ ಹೊಂಬಾಳೆ ಫಿಲ್ಮ್ಸ್. ಪ್ರತಿಕಥೆಯ ಹೆಸರಿನಲ್ಲಿ ರಿಲೀಸ್ ಆಗಿರುವ ಹಾಡಿನಲ್ಲಿ ಶಾಂತಿಯ ಮಂತ್ರವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ನಾಯಕನ ತಾಯಿಯು ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಗನಿಗೆ ಕ್ಷಮೆಯಿಂದ ಗೆಲ್ಲುವ ಮಾತುಗಳನ್ನು ಹೇಳಲಿಸಲಾಗಿದೆ.

    ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದಲ್ಲಿ ಪ್ರಭಾಸ್‍ ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲಂಸ್‍ನಡಿ ವಿಜಯ್‍ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

  • ಇಂದಿನಿಂದ ಸಾವಿರಾರು ಚಿತ್ರಮಂದಿರಗಳಲ್ಲಿ ‘ಸಲಾರ್’ ಅಬ್ಬರ

    ಇಂದಿನಿಂದ ಸಾವಿರಾರು ಚಿತ್ರಮಂದಿರಗಳಲ್ಲಿ ‘ಸಲಾರ್’ ಅಬ್ಬರ

    ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ಸಲಾರ್ ಸಿನಿಮಾ ಇಂದಿನಿಂದ ಸಾವಿರಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ (release) ಕಾಣುತ್ತಿದೆ. ಬೆಳಗ್ಗೆಯಿಂದಲೇ ಸಲಾರ್ ಅಭಿಮಾನಿಗಳು ಚಿತ್ರವನ್ನು ನೋಡಲು ಸಾಲುಗಟ್ಟಿ ನಿಂತಿದ್ದಾರೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಸಲಾರ್ ಸಿನಿಮಾ ರಿಲೀಸ್ ಆಗಿದೆ.

    ಲಾರ್ (Salaar) ಸಿನಿಮಾದಲ್ಲಿ ಯಶ್ (Yash) ನಟಿಸಿದ್ದಾರೆ ಎಂದೆಲ್ಲ ಸುದ್ದಿ ಹರಿಬಿಡಲಾಗಿತ್ತು. ಕೆಜಿಎಫ್ ಸಿನಿಮಾದ ಪಾತ್ರವೊಂದು ಸಲಾರ್ ನಲ್ಲಿ ಎಂಟ್ರಿ ಕೊಡಲಾಗಿದೆ. ಅದು ಯಶ್ ಪಾತ್ರವಾಗಿದೆ ಎಂದು ಹೇಳಲಾಗಿತ್ತು. ಅದಕ್ಕೀಗ ಸ್ಪಷ್ಟನೆ ನೀಡಿದ್ದಾರೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ (Prashant Neel). ಸಲಾರ್ ಸಿನಿಮಾದಲ್ಲಿ ಯಶ್ ಇದ್ದಾರೆ ಅಂತ ಹೇಳೋಕೆ ನನಗೇಕೆ ಅಳುಕು. ಅವರು ಇದ್ದಾರೆ ಅಂದಿದ್ದರೆ, ಅದನ್ನೂ ಪ್ರಚಾರ ಮಾಡುತ್ತಿದ್ದೆವು. ಪ್ರಚಾರಕ್ಕೆ ಅದು ಪ್ಲಸ್ ಆಗಿರೋದು. ಆದರೆ, ಈ ಸಿನಿಮಾದಲ್ಲಿ ಅವರು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಸಲಾರ್ ಸಿನಿಮಾದ ಕುರಿತಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಯಶ್ ಬಗ್ಗೆಯೂ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೀವನ ಪರ್ಯಂತ ಯಶ್ ನನ್ನ ಜೊತೆಯಾಗಿಯೇ ಇರುತ್ತಾರೆ ಎಂದು ಹೇಳುವ ಮೂಲಕ, ಯಶ್ ಮತ್ತು ಪ್ರಶಾಂತ್ ನೀಲ್ ಮಧ್ಯ ಯಾವುದೂ ಸರಿ ಇಲ್ಲ ಎನ್ನುವುದಕ್ಕೂ ಅವರು ಉತ್ತರ ನೀಡಿದ್ದಾರೆ.

    ಇಂದು ವಿಶ್ವದಾದ್ಯಂತ ಸಲಾರ್ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಬಿಡುಗಡೆ ಆಗುವ ಒಂದು ದಿನ ಮುನ್ನ ಚಿತ್ರದ ಮತ್ತೊಂದು ಹಾಡು ಬಿಡುಗಡೆ ಮಾಡಿದ ಹೊಂಬಾಳೆ ಫಿಲ್ಮ್ಸ್. ಪ್ರತಿಕಥೆಯ ಹೆಸರಿನಲ್ಲಿ ರಿಲೀಸ್ ಆಗಿರುವ ಹಾಡಿನಲ್ಲಿ ಶಾಂತಿಯ ಮಂತ್ರವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ನಾಯಕನ ತಾಯಿಯು ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಗನಿಗೆ ಕ್ಷಮೆಯಿಂದ ಗೆಲ್ಲುವ ಮಾತುಗಳನ್ನು ಹೇಳಲಿಸಲಾಗಿದೆ.

    ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದಲ್ಲಿ ಪ್ರಭಾಸ್‍ ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲಂಸ್‍ನಡಿ ವಿಜಯ್‍ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

  • ‘ಸಲಾರ್’ ಸಿನಿಮಾದಲ್ಲಿ ರಾಕಿಭಾಯ್ ಇಲ್ಲ: ಪ್ರಶಾಂತ್ ನೀಲ್ ಸ್ಪಷ್ಟನೆ

    ‘ಸಲಾರ್’ ಸಿನಿಮಾದಲ್ಲಿ ರಾಕಿಭಾಯ್ ಇಲ್ಲ: ಪ್ರಶಾಂತ್ ನೀಲ್ ಸ್ಪಷ್ಟನೆ

    ಲಾರ್ (Salaar) ಸಿನಿಮಾದಲ್ಲಿ ಯಶ್ (Yash) ನಟಿಸಿದ್ದಾರೆ ಎಂದೆಲ್ಲ ಸುದ್ದಿ ಹರಿಬಿಡಲಾಗಿತ್ತು. ಕೆಜಿಎಫ್ ಸಿನಿಮಾದ ಪಾತ್ರವೊಂದು ಸಲಾರ್ ನಲ್ಲಿ ಎಂಟ್ರಿ ಕೊಡಲಾಗಿದೆ. ಅದು ಯಶ್ ಪಾತ್ರವಾಗಿದೆ ಎಂದು ಹೇಳಲಾಗಿತ್ತು. ಅದಕ್ಕೀಗ ಸ್ಪಷ್ಟನೆ ನೀಡಿದ್ದಾರೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ (Prashant Neel). ಸಲಾರ್ ಸಿನಿಮಾದಲ್ಲಿ ಯಶ್ ಇದ್ದಾರೆ ಅಂತ ಹೇಳೋಕೆ ನನಗೇಕೆ ಅಳುಕು. ಅವರು ಇದ್ದಾರೆ ಅಂದಿದ್ದರೆ, ಅದನ್ನೂ ಪ್ರಚಾರ ಮಾಡುತ್ತಿದ್ದೆವು. ಪ್ರಚಾರಕ್ಕೆ ಅದು ಪ್ಲಸ್ ಆಗಿರೋದು. ಆದರೆ, ಈ ಸಿನಿಮಾದಲ್ಲಿ ಅವರು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಸಲಾರ್ ಸಿನಿಮಾದ ಕುರಿತಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಯಶ್ ಬಗ್ಗೆಯೂ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೀವನ ಪರ್ಯಂತ ಯಶ್ ನನ್ನ ಜೊತೆಯಾಗಿಯೇ ಇರುತ್ತಾರೆ ಎಂದು ಹೇಳುವ ಮೂಲಕ, ಯಶ್ ಮತ್ತು ಪ್ರಶಾಂತ್ ನೀಲ್ ಮಧ್ಯ ಯಾವುದೂ ಸರಿ ಇಲ್ಲ ಎನ್ನುವುದಕ್ಕೂ ಅವರು ಉತ್ತರ ನೀಡಿದ್ದಾರೆ.

    ನಾಳೆ ವಿಶ್ವದಾದ್ಯಂತ ಸಲಾರ್ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾ ಬಿಡುಗಡೆ ಆಗುವ ಒಂದು ದಿನ ಮುನ್ನ ಚಿತ್ರದ ಮತ್ತೊಂದು ಹಾಡು ಬಿಡುಗಡೆ ಮಾಡಿದ ಹೊಂಬಾಳೆ ಫಿಲ್ಮ್ಸ್. ಪ್ರತಿಕಥೆಯ ಹೆಸರಿನಲ್ಲಿ ರಿಲೀಸ್ ಆಗಿರುವ ಹಾಡಿನಲ್ಲಿ ಶಾಂತಿಯ ಮಂತ್ರವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ನಾಯಕನ ತಾಯಿಯು ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಗನಿಗೆ ಕ್ಷಮೆಯಿಂದ ಗೆಲ್ಲುವ ಮಾತುಗಳನ್ನು ಹೇಳಲಿಸಲಾಗಿದೆ.

    ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದಲ್ಲಿ ಪ್ರಭಾಸ್‍ ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲಂಸ್‍ನಡಿ ವಿಜಯ್‍ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

  • ನಾಳೆ ‘ಸಲಾರ್’ ಸಿನಿಮಾ ರಿಲೀಸ್ : ಇಂದು ಮತ್ತೊಂದು ಸಾಂಗ್ ಬಿಡುಗಡೆ

    ನಾಳೆ ‘ಸಲಾರ್’ ಸಿನಿಮಾ ರಿಲೀಸ್ : ಇಂದು ಮತ್ತೊಂದು ಸಾಂಗ್ ಬಿಡುಗಡೆ

    ನಾಳೆ ವಿಶ್ವದಾದ್ಯಂತ ಸಲಾರ್ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾ ಬಿಡುಗಡೆ ಆಗುವ ಒಂದು ದಿನ ಮುನ್ನ ಚಿತ್ರದ ಮತ್ತೊಂದು ಹಾಡು (Song) ಬಿಡುಗಡೆ ಮಾಡಿದ ಹೊಂಬಾಳೆ ಫಿಲ್ಮ್ಸ್. ಪ್ರತಿಕಥೆಯ (Pratikathaya) ಹೆಸರಿನಲ್ಲಿ ರಿಲೀಸ್ ಆಗಿರುವ ಹಾಡಿನಲ್ಲಿ ಶಾಂತಿಯ ಮಂತ್ರವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ನಾಯಕನ ತಾಯಿಯು ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಗನಿಗೆ ಕ್ಷಮೆಯಿಂದ ಗೆಲ್ಲುವ ಮಾತುಗಳನ್ನು ಹೇಳಲಿಸಲಾಗಿದೆ.

    ಪ್ರಭಾಸ್ ಅಭಿಮಾನಿಗಳಿಗೆ ಶಾಕ್

    ಹೊಂಬಾಳೆ ಫಿಲಂಸ್‍ನ (Hombale Films) ಮಹತ್ವಾಕಾಂಕ್ಷೆಯ ಚಿತ್ರವಾದ ‘ಸಲಾರ್ ಪಾರ್ಟ್ 1: ಸೀಸ್‍ಫೈರ್’, ಡಿ. 22ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಈ ಮಧ್ಯೆ, ಚಿತ್ರವನ್ನು ದಕ್ಷಿಣ ಭಾರತದ ಪಿವಿಆರ್- ಐನಾಕ್ಸ್ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ ಮಾಡದಿರುವುದಕ್ಕೆ ಹೊಂಬಾಳೆ ಫಿಲಂಸ್‍ ತೀರ್ಮಾನಿಸಿದೆ. ಇಂಥದ್ದೊಂದು ನಿರ್ಧಾರಕ್ಕೆ ಕಾರಣವಾಗಿರುವುದು ಶಾರುಖ್‍ ಖಾನ್‍ ಅಭಿನಯದ ‘ಡಂಕಿ’. ಈ ಚಿತ್ರವು ಡಿ. 21ರ ಗುರುವಾರ ಬಿಡುಗಡೆಯಾಗುತ್ತಿದ್ದು, ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಜೊತೆಗೆ ಕ್ಲಾಶ್‍ ಆಗುತ್ತಿದೆ. ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ಏಕಪರದೆಯ ಚಿತ್ರಮಂದಿರಗಳು ಎರಡೂ ಚಿತ್ರಗಳನ್ನು ಎರಡೆರೆಡು ಪ್ರದರ್ಶನ ಮಾಡಬೇಕು ಎಂದು ತೀರ್ಮಾನಿಸಿದ್ದರು. ಆದರೆ, ‘ಡಂಕಿ’ ವಿತರಕರು ಮಾತ್ರ ತಮಗೆ ನಾಲ್ಕೂ ಪ್ರದರ್ಶನಗಳನ್ನು ಕೊಡುವುದಾದರೆ ಮಾತ್ರ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಅನುಮತಿ ನೀಡಲಾಗುವುದು ಎಂದಿದ್ದರು.

    ಯಾವಾಗ ಏಕಪರದೆಯ ಚಿತ್ರಮಂದಿರಗಳ ಸಂಘಗಳು ಎರಡೂ ಚಿತ್ರಗಳನ್ನು ಪ್ರದರ್ಶಿಸುವ ತೀರ್ಮಾನ ತೆಗೆದುಕೊಂಡಿತೋ, ಆಗ ‘ಡಂಕಿ’ ಚಿತ್ರದ ವಿತರಕರು ಮಲ್ಟಿಪ್ಲೆಕ್ಸ್ ನತ್ತ ವಾಲಿದರು. ಅಲ್ಲಿ ಹೆಚ್ಚು ಪ್ರದರ್ಶನಗಳನ್ನು ಗಿಟ್ಟಿಸಿದರು. ಪಿವಿಆರ್ – ಐನಾಕ್ಸ್ ಮತ್ತು ಮಿರಾಜ್‍ ಮಲ್ಟಿಪ್ಲೆಕ್ಸ್ ಗಳಲ್ಲಿ ‘ಸಲಾರ್’ಗಿಂತ ‘ಡಂಕಿ’ ಚಿತ್ರಕ್ಕೆ ಹೆಚ್ಚಿನ ಪ್ರದರ್ಶನಗಳನ್ನು ಕೊಡುವುದಕ್ಕೆ ಮಲ್ಟಿಪ್ಲೆಕ್ಸ್ ಗಳು ಸಹ ಒಪ್ಪಿವೆ.

    ತಮ್ಮ ಚಿತ್ರಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿರುವ ಹೊಂಬಾಳೆ ಫಿಲಂಸ್‍, ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರವನ್ನು ದಕ್ಷಿಣ ಭಾರತದ ಪಿವಿಆರ್-ಇನಾಕ್ಸ್ ಮತ್ತು ಮಿರಾಜ್‍ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ ಮಾಡದಿರುವುದಕ್ಕೆ ತೀರ್ಮಾನಿಸಿದೆ. ಮಿಕ್ಕಂತೆ ಬೇರೆ ಮಲ್ಟಿಪ್ಲೆಕ್ಸ್ ಚೈನ್‍ಗಳಾದ ಸಿನಿಪೊಲಿಸ್‍ ಮತ್ತು ಏಕಪರದೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.

    ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದಲ್ಲಿ ಪ್ರಭಾಸ್‍ ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲಂಸ್‍ನಡಿ ವಿಜಯ್‍ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

  • ಸಲಾರ್-ಮಲ್ಟಿಪ್ಲೆಕ್ಸ್ ಸಮರ: ಐನಾಕ್ಸ್ ಸಿಇಓ ಪ್ರತಿಕ್ರಿಯೆ

    ಸಲಾರ್-ಮಲ್ಟಿಪ್ಲೆಕ್ಸ್ ಸಮರ: ಐನಾಕ್ಸ್ ಸಿಇಓ ಪ್ರತಿಕ್ರಿಯೆ

    ಸಲಾರ್ (Salaar) ಸಿನಿಮಾವನ್ನು ದಕ್ಷಿಣದ ಪಿವಿಆರ್- ಐನಾಕ್ಸ್ (PVR- Inox) ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವುದಿಲ್ಲವೆಂದು ನಿರ್ಮಾಣ ಸಂಸ್ಥೆ ಘೋಷಣೆ ಮಾಡುತ್ತಿದ್ದಂತೆಯೇ ಐನಾಕ್ಸ್ ಸಿಇಓ ಜ್ಞಾನ ಚಂದಾನಿ ಸರಣಿಯ ಎಕ್ಸ್ (ಟ್ವೀಟ್) ಮಾಡಿದ್ದಾರೆ. ಎರಡು ದೊಡ್ಡ ಸಿನಿಮಾಗಳು ರಿಲೀಸ್ ವೇಳೆ ಇದೆಲ್ಲವೂ ಸಹಜ ಎಂದು ಬರೆದುಕೊಂಡಿದ್ದಾರೆ. ಈ ಹಠವನ್ನು ಬಿಟ್ಟು ಮಾತುಕತೆಗೆ ಬನ್ನಿ ಎಂದು ಅವರು ಕೇಳಿಕೊಂಡಿದ್ದಾರೆ. ಸಲಾರ್ ಮಲ್ಟಿಪ್ಲಕ್ಸ್ ನಲ್ಲಿ ರಿಲೀಸ್ ಆಗಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಮಲ್ಟಿಪ್ಲೆಕ್ಸ್ ವಿರುದ್ಧ ನಿನ್ನೆ ಸಲಾರ್ ಅಭಿಮಾನಿಗಳು ಸಿಡಿದೆದ್ದಿದ್ದರು. ಅದು ಟ್ರೆಂಡ್ ಕೂಡ ಆಗಿತ್ತು.

    ಏನಿದು ವಿವಾದ 

    ಹೊಂಬಾಳೆ ಫಿಲಂಸ್‍ನ (Hombale Films) ಮಹತ್ವಾಕಾಂಕ್ಷೆಯ ಚಿತ್ರವಾದ ‘ಸಲಾರ್ ಪಾರ್ಟ್ 1: ಸೀಸ್‍ಫೈರ್’, ಡಿ. 22ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಈ ಮಧ್ಯೆ, ಚಿತ್ರವನ್ನು ದಕ್ಷಿಣ ಭಾರತದ ಪಿವಿಆರ್- ಐನಾಕ್ಸ್ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ ಮಾಡದಿರುವುದಕ್ಕೆ ಹೊಂಬಾಳೆ ಫಿಲಂಸ್‍ ತೀರ್ಮಾನಿಸಿದೆ. ಇಂಥದ್ದೊಂದು ನಿರ್ಧಾರಕ್ಕೆ ಕಾರಣವಾಗಿರುವುದು ಶಾರುಖ್‍ ಖಾನ್‍ ಅಭಿನಯದ ‘ಡಂಕಿ’. ಈ ಚಿತ್ರವು ಡಿ. 21ರ ಗುರುವಾರ ಬಿಡುಗಡೆಯಾಗುತ್ತಿದ್ದು, ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಜೊತೆಗೆ ಕ್ಲಾಶ್‍ ಆಗುತ್ತಿದೆ. ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ಏಕಪರದೆಯ ಚಿತ್ರಮಂದಿರಗಳು ಎರಡೂ ಚಿತ್ರಗಳನ್ನು ಎರಡೆರೆಡು ಪ್ರದರ್ಶನ ಮಾಡಬೇಕು ಎಂದು ತೀರ್ಮಾನಿಸಿದ್ದರು. ಆದರೆ, ‘ಡಂಕಿ’ ವಿತರಕರು ಮಾತ್ರ ತಮಗೆ ನಾಲ್ಕೂ ಪ್ರದರ್ಶನಗಳನ್ನು ಕೊಡುವುದಾದರೆ ಮಾತ್ರ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಅನುಮತಿ ನೀಡಲಾಗುವುದು ಎಂದಿದ್ದರು.

    ಯಾವಾಗ ಏಕಪರದೆಯ ಚಿತ್ರಮಂದಿರಗಳ ಸಂಘಗಳು ಎರಡೂ ಚಿತ್ರಗಳನ್ನು ಪ್ರದರ್ಶಿಸುವ ತೀರ್ಮಾನ ತೆಗೆದುಕೊಂಡಿತೋ, ಆಗ ‘ಡಂಕಿ’ ಚಿತ್ರದ ವಿತರಕರು ಮಲ್ಟಿಪ್ಲೆಕ್ಸ್ ನತ್ತ ವಾಲಿದರು. ಅಲ್ಲಿ ಹೆಚ್ಚು ಪ್ರದರ್ಶನಗಳನ್ನು ಗಿಟ್ಟಿಸಿದರು. ಪಿವಿಆರ್ – ಐನಾಕ್ಸ್ ಮತ್ತು ಮಿರಾಜ್‍ ಮಲ್ಟಿಪ್ಲೆಕ್ಸ್ ಗಳಲ್ಲಿ ‘ಸಲಾರ್’ಗಿಂತ ‘ಡಂಕಿ’ ಚಿತ್ರಕ್ಕೆ ಹೆಚ್ಚಿನ ಪ್ರದರ್ಶನಗಳನ್ನು ಕೊಡುವುದಕ್ಕೆ ಮಲ್ಟಿಪ್ಲೆಕ್ಸ್ ಗಳು ಸಹ ಒಪ್ಪಿವೆ.

    ತಮ್ಮ ಚಿತ್ರಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿರುವ ಹೊಂಬಾಳೆ ಫಿಲಂಸ್‍, ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರವನ್ನು ದಕ್ಷಿಣ ಭಾರತದ ಪಿವಿಆರ್-ಇನಾಕ್ಸ್ ಮತ್ತು ಮಿರಾಜ್‍ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ ಮಾಡದಿರುವುದಕ್ಕೆ ತೀರ್ಮಾನಿಸಿದೆ. ಮಿಕ್ಕಂತೆ ಬೇರೆ ಮಲ್ಟಿಪ್ಲೆಕ್ಸ್ ಚೈನ್‍ಗಳಾದ ಸಿನಿಪೊಲಿಸ್‍ ಮತ್ತು ಏಕಪರದೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.

    ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದಲ್ಲಿ ಪ್ರಭಾಸ್‍ ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲಂಸ್‍ನಡಿ ವಿಜಯ್‍ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

  • ಯಶ್ ಜೊತೆಗಿನ ಸ್ನೇಹ, ಜೀವನ ಪೂರ್ತಿ ಮುಂದುವರೆಯಲಿದೆ: ಪ್ರಶಾಂತ್ ನೀಲ್

    ಯಶ್ ಜೊತೆಗಿನ ಸ್ನೇಹ, ಜೀವನ ಪೂರ್ತಿ ಮುಂದುವರೆಯಲಿದೆ: ಪ್ರಶಾಂತ್ ನೀಲ್

    ಪ್ರಭಾಸ್-ಪ್ರಶಾಂತ್ ನೀಲ್ (Prashanth Neel) ಕಾಂಬಿನೇಷನ್ ಸಿನಿಮಾ ‘ಸಲಾರ್’ (Salaar) ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಸಲಾರ್ ಸಿನಿಮಾ ಪ್ರಚಾರ ಕೂಡ ಭರದಿಂದ ಸಾಗುತ್ತಿದೆ. ಹೀಗಿರುವಾಗ ಸಂದರ್ಶನವೊಂದರಲ್ಲಿ ಪ್ರಶಾಂತ್ ನೀಲ್, ಯಶ್ (Yash) ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.

    ಇತ್ತೀಚೆಗೆ ಯಶ್‌ ಜೊತೆ ‘ಕೆಜಿಎಫ್ 3’ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ಪ್ರಶಾಂತ್ ನೀಲ್ ಅನುಮಾನ ವ್ಯಕ್ತಪಡಿಸಿದ್ದರು. ಆಗಲೇ ಯಶ್ ಜೊತೆ ಪ್ರಶಾಂತ್ ಬಾಂಧವ್ಯ ಸರಿಯಿಲ್ಲ ಎಂದು ಅಂತೆ ಕಂತೆ ಸುದ್ದಿಗಳು ಸೃಷ್ಟಿಯಾಗಿತ್ತು. ಇದೀಗ ಯಶ್ ಜೊತೆಗಿನ ಒಡನಾಟದ ಬಗ್ಗೆ ಪ್ರಶಾಂತ್ ನೀಲ್ ಮಾತನಾಡುವ ಮೂಲಕ ಗಾಸಿಪ್‌ಗೆ ತೆರೆ ಎಳೆದಿದ್ದಾರೆ. ಇದನ್ನೂ ಓದಿ:ದುಡುಕಿದ ‘ಚಾರ್ಲಿ’ ನಟಿ- ಮತ್ತೆ ಸ್ಪರ್ಧಿಗಳ ಕೆಂಗಣ್ಣಿಗೆ ಸಂಗೀತಾ ಗುರಿ

    ಯಶ್ ಕುರಿತು ‘ಸಲಾರ್’ (Salaar) ಡೈರೆಕ್ಟರ್ ಪ್ರತಿಕ್ರಿಯಿಸಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇಲ್ಲದಿದ್ದರೆ ತೆರೆಮೇಲೆ ಒಳ್ಳೆಯ ಸಿನಿಮಾ ನೋಡಲು ಸಾಧ್ಯವಿಲ್ಲ. ಇಬ್ಬರ ಕೆಮಿಸ್ಟ್ರಿ ತೆರೆಮೇಲೆ ಮಿಸ್ ಆಗುತ್ತದೆ. ನನ್ನ ಹಾಗೂ ಯಶ್ ಸ್ನೇಹ ಜೀವನ ಪೂರ್ತಿ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

    ಯಶ್ (Yash) ಜೊತೆ ಎರಡು ಸಿನಿಮಾ ಮಾಡಿದ್ದೀರಿ. ನಟ ಪ್ರಭಾಸ್ ಜೊತೆ ಈ ‘ಸಲಾರ್’ ಚಿತ್ರದಲ್ಲಿ ಕೆಲಸ ಮಾಡಿದ್ದೀರಿ. ಇಬ್ಬರ ನಡುವಿನ ವ್ಯತ್ಯಾಸ ಏನು ಎಂದು ಪ್ರಶಾಂತ್ ನೀಲ್‌ಗೆ ಸಂದರ್ಶನದಲ್ಲಿ ಕೇಳಲಾಗಿದೆ. ಇಬ್ಬರ ನಡುವೆ ಸಾಕಷ್ಟು ಸಾಮ್ಯತೆಯಿದೆ. ಇಬ್ಬರಿಗೂ ತಮ್ಮನ್ನ ಪ್ರೀತಿಸುವ ಫ್ಯಾನ್ಸ್ ವಿಚಾರದಲ್ಲಿ ಬಹಳ ಜವಾಬ್ದಾರಿಯಿದೆ. ಇಬ್ಬರಿಗೂ ಉತ್ತಮ ಸಿನಿಮಾ ಮಾಡಬೇಕು ಎನ್ನುವ ಹಸಿವಿದೆ. ನಿರ್ದೇಶಕರು ಯಾರು ಎನ್ನುವುದನ್ನು ನೋಡದೇ ಒಳ್ಳೆಯ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಲು ಬಯಸುತ್ತಾರೆ. ಅವರ ವೃತ್ತಿಪರತೆ ಹಾಗೂ ಬದ್ಧತೆ ಸಿನಿಮಾ ನಿರ್ಮಾಣದ ಪ್ರತಿ ಹಂತದಲ್ಲೂ ಗೊತ್ತಾಗುತ್ತದೆ ಎಂದಿದ್ದಾರೆ.

    ಅವರಿಬ್ಬರ ಸಿನಿಮಾಗಳು ಅವರ ಸ್ಟಾರ್‌ಡಮ್‌ನಿಂದಲೇ ಮಾರಾಟವಾಗುತ್ತವೆ. ಪ್ರೇಕ್ಷಕರು ನಮ್ಮ ಕೆಲಸವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಬಗ್ಗೆ ಹೆಚ್ಚಿನ ಜವಾಬ್ದಾರಿ ವಹಿಸುತ್ತಾರೆ. ಕೆಲಸಕ್ಕೆ ಇಬ್ಬರೂ ಕೆಲಸಕ್ಕೆ ನೀಡುವ ಮೌಲ್ಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

    ‘ಸಲಾರ್’ ಬಳಿಕ ಪ್ರಶಾಂತ್ ನೀಲ್ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರಕ್ಕೆ ಕೈ ಹಾಕುತ್ತಿದ್ದಾರೆ. ಜ್ಯೂ.ಎನ್‌ಟಿಆರ್ ನಟನೆಯ 31ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಮುಂದಿನ ವರ್ಷವೇ ಸಿನಿಮಾ ಶುರುವಾಗಲಿದೆ. ಬಳಿಕ ‘ಸಲಾರ್’ ಸೀಕ್ವೆಲ್ ಕೆಲಸ ಕೂಡ ಇದೆ. ರಾಮ್‌ಚರಣ್ ಜೊತೆಗೂ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆದಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ 25ನೇ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಬೇಕಿದೆ. ಇದೇ ಕಾರಣಕ್ಕೆ ಪ್ರಶಾಂತ್ ನೀಲ್ ‘ಕೆಜಿಎಫ್- 3’ (KGF 3) ಸಿನಿಮಾ ನಿರ್ದೇಶನದ ಬಗ್ಗೆ ಗೊಂದಲದಲ್ಲಿದ್ದಾರೆ. ಆದರೆ ಚಿತ್ರದ ಕಥೆ ಸಿದ್ಧವಾಗಿದೆ ಎಂದು ಪ್ರಶಾಂತ್ ನೀಲ್ ಮಾಹಿತಿ ನೀಡಿದ್ದಾರೆ.