Tag: Sakshee Malikkh

  • ಬ್ರಿಜ್‌ ಭೂಷಣ್‌ ವಿರುದ್ಧ ಸಾಕ್ಷಿ ಹೇಳಲು ಹೊರಟಿದ್ದ ಮಹಿಳಾ ಕುಸ್ತಿಪಟುಗಳ ಭದ್ರತೆ ಹಿಂಪಡೆಯಲಾಗಿದೆ: ವಿನೇಶ್‌

    ಬ್ರಿಜ್‌ ಭೂಷಣ್‌ ವಿರುದ್ಧ ಸಾಕ್ಷಿ ಹೇಳಲು ಹೊರಟಿದ್ದ ಮಹಿಳಾ ಕುಸ್ತಿಪಟುಗಳ ಭದ್ರತೆ ಹಿಂಪಡೆಯಲಾಗಿದೆ: ವಿನೇಶ್‌

    ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಸಾಕ್ಷಿ ಹೇಳಲಿರುವ ಮಹಿಳಾ ಕುಸ್ತಿಪಟುಗಳ (Women Wrestlers) ಭದ್ರತೆಯನ್ನು ದೆಹಲಿ ಪೊಲೀಸರು ಹಿಂಪಡೆದಿದ್ದಾರೆ ಎಂದು ಒಲಿಂಪಿಯನ್‌ ವಿನೇಶ್ ಫೋಗಟ್ (Vinesh Phogat) ಗಂಭೀರ ಆರೋಪ ಮಾಡಿದ್ದಾರೆ.

    ಹೌದು.. ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ಹೇಳಲು ಹೊರಟಿದ್ದ ಮಹಿಳಾ ಕುಸ್ತಿಪಟುಗಳ ಭದ್ರತೆಯನ್ನು ದೆಹಲಿ ಪೊಲೀಸರು (Delhi Police) ಹಿಂಪಡೆದಿದ್ದಾರೆ ಎಂದು ವಿನೇಶ್ ಆರೋಪಿಸಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಭದ್ರತೆಯನ್ನು ಹಿಂತೆಗೆದುಕೊಂಡಿರುದರಿಂದ ಕುಸ್ತಿಪಟುಗಳು ಸುರಕ್ಷಿತವಾಗಿ ನ್ಯಾಯಾಲಯದಲ್ಲಿ ಹಾಜರಾಗಲು ಹಾಗೂ ಸಾಕ್ಷ್ಯಗಳನ್ನು ನೀಡುವ ಅವರ ಸಾಮರ್ಥ್ಯದ ಮೇಲೆ ಪ್ರಭಾವ ಬೀರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಆದ್ರೆ ವಿನೇಶ್‌ ಆರೋಪವನ್ನು ದೆಹಲಿ ಪೊಲೀಸರು ಅಲ್ಲಗಳೆದಿದ್ದಾರೆ.

    ಇದಕ್ಕೂ ಮುನ್ನ ಕುಸ್ತಿಪಟುಗಳು ದೆಹಲಿ ನ್ಯಾಯಾಲಯ ಸಂಪರ್ಕಿಸಿದ್ದರು. ಬಳಿಕ ಕೋರ್ಟ್‌ ತಕ್ಷಣವೇ ಭದ್ರತಾ ಕವಚ ಮರುಸ್ಥಾಪಿಸುವಂತೆ ನಗರ ಪೊಲೀಸರಿಗೆ ಸೂಚಿಸಿತ್ತು. ಬಳಿಕ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು, ಕುಸ್ತಿಪಟುಗಳಿಗೆ ಒದಗಿಸಲಾದ ಭದ್ರತೆಯನ್ನು ಹಿಂತೆಗೆದುಕೊಂಡಿಲ್ಲ. ಭವಿಷ್ಯದಲ್ಲಿ ಜವಾಬ್ದಾರಿ ವಹಿಸಿಕೊಳ್ಳುವಂತೆ ಹರಿಯಾಣ ಪೊಲೀಸರಿಗೆ ವಿನಂತಿಸಲು ನಿರ್ಧರಿಸಲಾಗಿದೆ. ಆದ್ರೆ ನಿಯೋಜಿತ ದೆಹಲಿ ಪೊಲೀಸ್ ಪಿಎಸ್‌ಒಗಳು ಈ ನಿರ್ಧಾರವನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ಈ ಕಾರಣದಿಂದಾಗಿ ಗುರುವಾರ ವರದಿ ಮಾಡಲು ತಡಮಾಡಿದ್ದಾರೆ, ಗೊಂದಲವನ್ನು ಸರಿಪಡಿಸಿದ್ದೇವೆ ಎಂದು ತಿಳಿಸಿದರು.

    ಹಿಂದೆ ಏನಾಗಿತ್ತು?
    ಈ ಹಿಂದೆ ಕುಸ್ತಿ ಫೆಡರೇಷನ್‌ (Wrestling Federation of India) ಅಧ್ಯಕ್ಷರಾಗಿದ್ದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಬಂದಿದ್ದರಿಂದ ದೂರು ದಾಖಲಾಗಿತ್ತು. ನಂತರ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಭಾರೀ ಪ್ರತಿಭಟನೆ ನಡೆದಿದ್ದವು. ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್‌, ವಿನೇಶ್‌ ಫೋಗಟ್‌, ಬಜರಂಗ್‌ ಪುನಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದವು. ಕೊನೆಗೆ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಮಧ್ಯಪ್ರವೇಶಿಸಿ ಸಾಂಧಾನ ನಡೆಸಿದ ಬಳಿಕ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ವಾಪಸ್‌ ಪಡೆದಿದ್ದರು. ಈ ವರ್ಷಾರಂಭದಲ್ಲಿ ಬ್ರಿಜ್‌ ಭೂಷಣ್‌ ಅಧ್ಯಕ್ಷಗಿರಿಯಿಂದ ಕೆಳಗಿಳಿದಿದ್ದರು

    ಇತ್ತೀಚೆಗೆ ಒಲಿಂಪಿಕ್ಸ್‌ ಫೈನಲ್‌ ತಲುಪಿ ವಿನೇಶ್‌ ಅನರ್ಹಗೊಂಡರು. ಭಾರತಕ್ಕೆ ಮರಳಿದ ಬಳಿಕ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ. ಸತ್ಯವೇ ಮೇಲುಗೈ ಸಾಧಿಸುತ್ತದೆ ಎಂದು ಹೇಳಿದ್ದರು.

  • ಕುಸ್ತಿ ಬಿಟ್ಟರೂ ಚಿಂತೆ ಶುರುವಾಗಿದೆ, ಕಿರಿಯರಿಗೆ ಏನು ಹೇಳ್ಬೇಕು ತಿಳಿಯುತ್ತಿಲ್ಲ: ಸಾಕ್ಷಿ ಮಲಿಕ್‌ ಭಾವುಕ

    ಕುಸ್ತಿ ಬಿಟ್ಟರೂ ಚಿಂತೆ ಶುರುವಾಗಿದೆ, ಕಿರಿಯರಿಗೆ ಏನು ಹೇಳ್ಬೇಕು ತಿಳಿಯುತ್ತಿಲ್ಲ: ಸಾಕ್ಷಿ ಮಲಿಕ್‌ ಭಾವುಕ

    ನವದೆಹಲಿ: ನಾನು ಕುಸ್ತಿ (Wrestling) ಬಿಟ್ಟಿದ್ದರೂ ಚಿಂತಿತಳಾಗಿದ್ದೇನೆ. ನನ್ನ ಕಿರಿಯ ಮಹಿಳಾ ಕುಸ್ತಿಪಟುಗಳಿಗೆ ಏನು ಹೇಳಬೇಕು ಅನ್ನೋದೇ ಗೊತ್ತಾಗುತ್ತಿಲ್ಲ ಎಂದು ಕುಸ್ತಿಪಟು ಸಾಕ್ಷಿ ಮಲಿಕ್‌ (Sakshee Malikkh) ಬೇಸರ ವ್ಯಕ್ತಪಡಿಸಿದ್ದಾರೆ.

    2024ರ ಜೂನಿಯರ್‌ ನಾಷನಲ್‌ ಗೇಮ್ಸ್‌ ಕುರಿತು ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಸಾಕ್ಷಿ, ನಾನು ಕುಸ್ತಿಯನ್ನು ಬಿಟ್ಟಿದ್ದೇನೆ, ಆದರೂ ನಾನು ಚಿಂತಿತಳಾಗಿದ್ದೇನೆ. ಏಕೆಂದರೆ, ಏಪ್ರಿಲ್‌ 28 ರಿಂದ ಜೂನಿಯರ್‌ ನ್ಯಾಷನಲ್‌ ಲೆವೆಲ್‌ ಪಂದ್ಯಗಳು ನಡೆಯಲಿವೆ. ಉತ್ತರ ಪ್ರದೇಶದ ನಂದನಿನಗರ ಗೊಂಡಾದಲ್ಲಿ ಕುಸ್ತಿ ನಡೆಸಲು ನೂತನ ಕುಸ್ತಿ ಒಕ್ಕೂಟ ನಿರ್ಧರಿಸಿದೆ. ಈ ಬಗ್ಗೆ ನನ್ನ ಕಿರಿಯ ಮಹಿಳಾ ಕುಸ್ತಿಪಟುಗಳು ಕರೆ ಮಾಡಿ ತಿಳಿಸಿದ್ದಾರೆ. ಅವರಿಗೆ ಏನು ಹೇಳಬೇಕು ಅನ್ನೋದೆ ತಿಳಿಯುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

    ಗೊಂಡಾ ಬ್ರಿಜ್‌ಭೂಷಣ್‌ನ (Brij Bhushan Sharan Singh) ಭದ್ರಕೋಟೆ. ಈಗ ಜೂನಿಯರ್ ಮಹಿಳಾ ಕುಸ್ತಿಪಟುಗಳು ಯಾವ ಪರಿಸರದಲ್ಲಿ ಕುಸ್ತಿ ಮಾಡಲು ಹೋಗುತ್ತಾರೆ? ಅನ್ನೋದನ್ನ ಊಹಿಸಿ. ನಂದನಿನಗರ ಬಿಟ್ಟು ಬೇರೆಲ್ಲೂ ಆಯೋಜನೆ ಮಾಡಲು ಈ ದೇಶದಲ್ಲಿ ಜಾಗವಿಲ್ಲವೇ? ಏನು ಮಾಡಬೇಕೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಈಗಲೂ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದೇವೆ, ನಮ್ಮ ದುಃಖ ಯಾರಿಗೆ ಹೇಳೋಣ? – ನಿಲ್ಲದ ಕುಸ್ತಿಪಟುಗಳ ವೇದನೆ

    ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಆಪ್ತ ಸಂಜಯ್‌ ಸಿಂಗ್‌ (Sanjay Singh) ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಕುಸ್ತಿಪಟು ಸಾಕ್ಷಿ ಮಲಿಕ್‌ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದರು.

    ಏನಾಗಿತ್ತು?:
    ಈ ಹಿಂದೆ ಕುಸ್ತಿ ಫೆಡರೇಷನ್‌ (Wrestling Federation of India) ಅಧ್ಯಕ್ಷರಾಗಿದ್ದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಬಂದಿದ್ದರಿಂದ ದೂರು ದಾಖಲಾಗಿತ್ತು. ನಂತರ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಭಾರೀ ಪ್ರತಿಭಟನೆ ನಡೆದಿದ್ದವು. ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್‌, ವಿನೇಶ್‌ ಫೋಗಟ್‌, ಬಜರಂಗ್‌ ಪುನಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದವು.

    ಕೊನೆಗೆ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಮಧ್ಯಪ್ರವೇಶಿಸಿ ಸಾಂಧಾನ ನಡೆಸಿದ ಬಳಿಕ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ವಾಪಸ್‌ ಪಡೆದಿದ್ದರು. ಈ ವರ್ಷಾರಂಭದಲ್ಲಿ ಬ್ರಿಜ್‌ ಭೂಷಣ್‌ ಅಧ್ಯಕ್ಷಗಿರಿಯಿಂದ ಕೆಳಗಿಳಿದಿದ್ದರು. ನಂತರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬ್ರಿಜ್‌ ಭೂಷಣ್‌ ಆಪ್ತ ಸಂಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕುಸ್ತಿಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ.

    ವಾರಣಾಸಿ ಮೂಲದ ಸಂಜಯ್‌ ಸಿಂಗ್‌, ಬ್ರಿಜ್ ಭೂಷಣ್ ಅವರ ನಿಕಟ ಸಹವರ್ತಿಯಾಗಿದ್ದಾರೆ. ಸಂಜಯ್ ಸಿಂಗ್ ಅವರು ಕಾಮನ್‍ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆರಾನ್ ಅವರ ವಿರುದ್ಧ ಒಟ್ಟು 47 ಮತಗಳ ಪೈಕಿ 40 ಮತಗಳನ್ನು ಪಡೆದು ಗೆದ್ದಿದ್ದಾರೆ.  ಇದನ್ನೂ ಓದಿ: ಟೆಕ್ವಾಂಡೋ: ರಾಷ್ಟ್ರಮಟ್ಟಕ್ಕೆ ಕಾಸರಗೋಡಿನ ಗಣ್ಯ – ಕೇರಳದಲ್ಲಿ ಅಗ್ರʻಗಣ್ಯʼಚಿನ್ನದ ಪದಕ..!

  • ಈಗಲೂ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದೇವೆ, ನಮ್ಮ ದುಃಖ ಯಾರಿಗೆ ಹೇಳೋಣ? – ನಿಲ್ಲದ ಕುಸ್ತಿಪಟುಗಳ ವೇದನೆ

    ಈಗಲೂ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದೇವೆ, ನಮ್ಮ ದುಃಖ ಯಾರಿಗೆ ಹೇಳೋಣ? – ನಿಲ್ಲದ ಕುಸ್ತಿಪಟುಗಳ ವೇದನೆ

    ನವದೆಹಲಿ: ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ (Brij Bhushan Sharan Singh) ಆಪ್ತ ಸಂಜಯ್‌ ಸಿಂಗ್‌ ಭಾರತ ಕುಸ್ತಿ ಫೆಡರೇಷನ್‌ (WFI) ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಭಾರತದ ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ಅಸಮಾಧಾನ ಹೊರಹಾಕಿದ್ದಾರೆ.

    ಸಂಜಯ್‌ ಸಿಂಗ್‌ ಆಯ್ಕೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ವಿನೇಶ್‌, ಈಗಲೂ ನಮಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ಕನಿಷ್ಠ ನಿರೀಕ್ಷೆಯಲ್ಲಿದ್ದೇವೆ. ಭಾರತದ ಕುಸ್ತಿ ಭವಿಷ್ಯವು ಕತ್ತಲೆಯಲ್ಲಿದೆ ಎಂಬುದು ದುಃಖಕರವಾದ ಸಂಗತಿ. ನಮ್ಮ ದುಃಖವನ್ನು ಯಾರಿಗೆ ಹೇಳೋಣ? ಹಾಗಾಗಿಯೇ ನಾವಿನ್ನೂ ಹೋರಾಡುತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಸಂಜಯ್‌ ಸಿಂಗ್‌ (Sanjay Singh) ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್‌, ಬಜರಂಗ್‌ ಪೂನಿಯಾ, ವಿನೇಶ್‌ ಫೋಗಟ್‌ ಸುದ್ದಿಗೋಷ್ಠಿ ನಡೆಸಿದ್ದರು. ಈ ಸಂದರ್ಭದಲ್ಲಿಯೇ ಸಾಕ್ಷಿ ಮಲಿಕ್‌ ಕುಸ್ತಿಗೆ ವಿದಾಯ ಹೇಳಿದರು. ಇದನ್ನೂ ಓದಿ: ಬ್ರಿಜ್‌ ಭೂಷಣ್‌ ಆಪ್ತ ಕುಸ್ತಿ ಅಧ್ಯಕ್ಷ: ಶೂ ಬಿಚ್ಚಿಟ್ಟು‌, ಕಣ್ಣೀರಿಡುತ್ತಾ ಕುಸ್ತಿಗೆ ವಿದಾಯ ಹೇಳಿದ ಸಾಕ್ಷಿ ಮಲಿಕ್!

    ಏನಾಗಿತ್ತು?:
    ಈ ಹಿಂದೆ ಕುಸ್ತಿ ಫೆಡರೇಷನ್‌ (Wrestling Federation of India) ಅಧ್ಯಕ್ಷರಾಗಿದ್ದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಬಂದಿದ್ದರಿಂದ ದೂರು ದಾಖಲಾಗಿತ್ತು. ನಂತರ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಭಾರೀ ಪ್ರತಿಭಟನೆ ನಡೆದಿದ್ದವು. ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್‌, ವಿನೇಶ್‌ ಫೋಗಟ್‌, ಬಜರಂಗ್‌ ಪುನಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದವು. ಇದನ್ನೂ ಓದಿ: ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷಗಿರಿಗೆ ಬ್ರಿಜ್ ಭೂಷಣ್ ಬೆಂಬಲಿತ ಅಭ್ಯರ್ಥಿ ಆಯ್ಕೆ

    ಕೊನೆಗೆ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಮಧ್ಯಪ್ರವೇಶಿಸಿ ಸಾಂಧಾನ ನಡೆಸಿದ ಬಳಿಕ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ವಾಪಸ್‌ ಪಡೆದಿದ್ದರು. ಈ ವರ್ಷಾರಂಭದಲ್ಲಿ ಬ್ರಿಜ್‌ ಭೂಷಣ್‌ ಅಧ್ಯಕ್ಷಗಿರಿಯಿಂದ ಕೆಳಗಿಳಿದಿದ್ದರು. ನಂತರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬ್ರಿಜ್‌ ಭೂಷಣ್‌ ಆಪ್ತ ಸಂಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕುಸ್ತಿಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ.

    ವಾರಣಾಸಿ ಮೂಲದ ಸಂಜಯ್‌ ಸಿಂಗ್‌, ಬ್ರಿಜ್ ಭೂಷಣ್ ಅವರ ನಿಕಟ ಸಹವರ್ತಿಯಾಗಿದ್ದಾರೆ. ಸಂಜಯ್ ಸಿಂಗ್ ಅವರು ಕಾಮನ್‍ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆರಾನ್ ಅವರ ವಿರುದ್ಧ ಒಟ್ಟು 47 ಮತಗಳ ಪೈಕಿ 40 ಮತಗಳನ್ನು ಪಡೆದು ಗೆದ್ದಿದ್ದಾರೆ. ಇದನ್ನೂ ಓದಿ: ಸಂಸದರಿಗೇ ರಕ್ಷಣೆ ಇಲ್ಲ, ಬೇರೆಯವ್ರಿಗೆ ಹೇಗೆ ಎಂದು ಪ್ರಶ್ನಿಸಿದ ನಮ್ಮನ್ನೂ ಅಮಾನತು ಮಾಡಿದ್ರು: ಡಿಕೆ‌ ಸುರೇಶ್

  • ಬ್ರಿಜ್‌ ಭೂಷಣ್‌ ಆಪ್ತ ಕುಸ್ತಿ ಅಧ್ಯಕ್ಷ: ಶೂ ಬಿಚ್ಚಿಟ್ಟು‌, ಕಣ್ಣೀರಿಡುತ್ತಾ ಕುಸ್ತಿಗೆ ವಿದಾಯ ಹೇಳಿದ ಸಾಕ್ಷಿ ಮಲಿಕ್!

    ಬ್ರಿಜ್‌ ಭೂಷಣ್‌ ಆಪ್ತ ಕುಸ್ತಿ ಅಧ್ಯಕ್ಷ: ಶೂ ಬಿಚ್ಚಿಟ್ಟು‌, ಕಣ್ಣೀರಿಡುತ್ತಾ ಕುಸ್ತಿಗೆ ವಿದಾಯ ಹೇಳಿದ ಸಾಕ್ಷಿ ಮಲಿಕ್!

    ನವದೆಹಲಿ: ಬ್ರಿಜ್‌ ಭೂಷಣ್‌ ಸಿಂಗ್‌ ಆಪ್ತ ಸಂಜಯ್‌ ಸಿಂಗ್‌ (Sanjay Singh) ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಭಾರತದ ಕುಸ್ತಿಪಟು ಸಾಕ್ಷಿ ಮಲಿಕ್‌ (Sakshee Malikkh) ಕುಸ್ತಿಗೆ ವಿದಾಯ ಘೋಷಿಸಿದ್ದಾರೆ.

    ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ, ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌‌ (Brij Bhushan Sharan Singh) ಬ್ಯುಸಿನೆಸ್‌ ಪಾರ್ಟನರ್‌ ಹಾಗೂ ಆಪ್ತರಾಗಿರುವ ಸಂಜಯ್‌ ಸಿಂಗ್‌ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ನಾನು ಕುಸ್ತಿ ಪಂದ್ಯಗಳಿಂದ ದೂರವಾಗುತ್ತಿದ್ದೇನೆ ಎಂದು ಕಣ್ಣೀರು ಹಾಕುತ್ತಾ ಘೋಷಿಸಿದರು. ಅಲ್ಲದೇ ಇದೇ ವೇಳೆ ಅವರು ತಮ್ಮ ಶೂ ಕಳಚಿ ಸುದ್ದಿಗೋಷ್ಠಿ ನಡೆಯುತ್ತಿದ್ದ ಟೇಬಲ್‌ ಮೇಲೆ ಇರಿಸಿ, ಕಣ್ಣೀರು ಸುರಿಸಿದರು. ಇದನ್ನೂ ಓದಿ: ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷಗಿರಿಗೆ ಬ್ರಿಜ್ ಭೂಷಣ್ ಬೆಂಬಲಿತ ಅಭ್ಯರ್ಥಿ ಆಯ್ಕೆ

    2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಮಲಿಕ್‌ ಕಂಚಿನ ಪದಕ ವಿಜೇತರಾಗಿದ್ದರು.

    ಕಾಮನ್‌ವೆಲ್ತ್‌, ಏಷ್ಯನ್‌ ಗೇಮ್ಸ್‌ ಪದಕ ವಿಜೇತೆ ವಿನೇಷ್‌ ಫೋಗಟ್‌ ಕೂಡಾ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟರು. ಸಂಜಯ್‌ ಸಿಂಗ್‌ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಮಹಿಳಾ ಕುಸ್ತಿ ಪಟುಗಳ ಮೇಲೆ ದೌರ್ಜನ್ಯ ಮುಂದುವರಿಯಲಿದೆ. ನಮಗೆ ನ್ಯಾಯ ಸಿಗುವುದು ಹೇಗೆ ಎಂದು ನಮಗೆ ಗೊತ್ತಾಗುತ್ತಿಲ್ಲ. ನಮ್ಮ ಕುಸ್ತಿ ಭವಿಷ್ಯ ಹೇಗೆ ಎಂಬ ಚಿಂತೆ ಶುರುವಾಗಿದೆ. ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ಫೋಗಟ್‌ ಹೇಳಿದರು.

    ಕೇಂದ್ರ ಸರ್ಕಾರವು ನಮಗೆ ನೀಡಿದ ಭರವಸೆಯನ್ನು ಈಡೇರಿಸದೇ ಇರುವುದು ದೌರ್ಭಾಗ್ತ ಎಂದು ಬಜರಂಗ್‌ ಪುನಿಯಾ ಹೇಳಿದ್ರು. ನಮಗೆ ಯಾವುದೇ ಪಕ್ಷದ ಜೊತೆ ಸಂಬಂಧವಿಲ್ಲ. ನಾವು ರಾಜಕೀಯಕ್ಕಾಗಿ ಇಲ್ಲಿಗೆ ಬಂದಿಲ್ಲ. ನಾವು ಸತ್ಯಕ್ಕಾಗಿ ಹೋರಾಡುತ್ತಿದ್ದೆವು. ಆದರೆ ಇಂದು ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಆಪ್ತ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾದರು ಎಂದು ಪುನಿಯಾ ಹೇಳಿದರು. ಇದನ್ನೂ ಓದಿ: ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಸ್ – ಬ್ರಿಜ್ ಭೂಷಣ್‌ಗೆ ಬಿಗ್ ರಿಲೀಫ್

    ಏನಾಗಿತ್ತು?: ಈ ಹಿಂದೆ ಕುಸ್ತಿ ಫೆಡರೇಷನ್‌ (Wrestling Federation of India) ಅಧ್ಯಕ್ಷರಾಗಿದ್ದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಬಂದು ದೂರು ದಾಖಲಾಗಿತ್ತು. ನಂತರ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಭಾರೀ ಪ್ರತಿಭಟನೆ ನಡೆದಿದ್ದವು. ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್‌, ವಿನೇಶ್‌ ಫೋಗಟ್‌, ಬಜರಂಗ್‌ ಪುನಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದವು.

    ಕೊನೆಗೆ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಮಧ್ಯಪ್ರವೇಶಿಸಿ ಸಾಂಧಾನ ನಡೆಸಿದ ಬಳಿಕ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ವಾಪಸ್‌ ಪಡೆದಿದ್ದರು. ಇದನ್ನೂ ಓದಿ: ನಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ – ಕುಸ್ತಿಪಟುಗಳ ಸ್ಪಷ್ಟನೆ

  • ನಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ – ಕುಸ್ತಿಪಟುಗಳ ಸ್ಪಷ್ಟನೆ

    ನಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ – ಕುಸ್ತಿಪಟುಗಳ ಸ್ಪಷ್ಟನೆ

    ನವದೆಹಲಿ: ನಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ. ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧವೂ ಅಲ್ಲ, ಬ್ರಿಜ್‌ ಭೂಷಣ್‌ ವಿರುದ್ಧ ಮಾತ್ರ ನಮ್ಮ ಪ್ರತಿಭಟನೆ (Wrestler Protest) ಎಂದು ಒಲಿಂಪಿಕ್ಸ್‌ (Olympic) ಪದಕ ವಿಜೇತೆ ಸಾಕ್ಷಿ ಮಲಿಕ್‌ ಹಾಗೂ ಪತಿ ಸತ್ಯವರ್ತ್‌ ಕಡಿಯಾನ್‌ ಹೇಳಿದ್ದಾರೆ.

    ರಾಜಕೀಯ ಪ್ರೇರಿತವೆಂಬ (Politically Motivated) ಟೀಕೆಗಳಿಗೆ ಗುರಿಯಾಗಿದ್ದ ತಮ್ಮ ಹೋರಾಟದ ಬಗ್ಗೆ ಕುಸ್ತಿಪಟುಗಳು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಬ್ರಿಜ್ ಭೂಷಣ್ ವಿರುದ್ಧ 1,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ – ಪೋಕ್ಸೊ ಕೇಸ್‌ ರದ್ದಿಗೆ ದೆಹಲಿ ಪೊಲೀಸರ ಶಿಫಾರಸ್ಸು

    WFI ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ (Brij Bhushan Sharan Singh) ವಿರುದ್ಧ ಲೈಂಗಿಕ ಆರೋಪ ಹೊರಿಸಿ ಹಲವು ದಿನಗಳಿಂದ ಕುಸ್ತಿಪಟುಗಳು ಹೋರಾಟ ನಡೆಸುತ್ತಿದ್ದರು. ದೆಹಲಿ ಜಂತರ್‌ ಮಂತರ್‌ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಸೇರಿದಂತೆ ಹಲವು ರಾಜಕೀಯ ನಾಯಕರು ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಹಾಗಾಗಿ ಕುಸ್ತಿಪಟುಗಳ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಆರೋಪಿಸಲಾಗಿತ್ತು. ಈ ಕುರಿತು 11 ನಿಮಿಷಗಳ ಸುದೀರ್ಘ ವೀಡಿಯೋ ಹಂಚಿಕೊಂಡಿರುವ ಸಾಕ್ಷಿ ಮಲಿಕ್‌ ತಮ್ಮ ಹೋರಾಟದ ಕುರಿತು ಸ್ಪಷ್ಟನೆ ನೀಡಿದ್ದಾರೆ.

    ನಮ್ಮ ಹೋರಾಟದ ಬಗ್ಗೆ ವದಂತಿಗಳನ್ನ ಹರಡಲಾಗುತ್ತಿದೆ, ನಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ. ಕಳೆದ ಜನವರಿಯಲ್ಲಿ ನಾವು ಜಂತರ್‌ ಮಂತರ್‌ ನಲ್ಲಿ ಪ್ರತಿಭಟನೆಗೆ ಇಳಿದಾಗಿ ಇಬ್ಬರು ಬಿಜೆಪಿ ನಾಯಕರನ್ನೇ ಕೋರಿ ಪೊಲೀಸರಿಂದ ಅನುಮತಿ ಪಡೆದುಕೊಂಡಿದ್ದೆವು. ಕಳೆದ 10-12 ವರ್ಷಗಳಿಂದ ಕುಸ್ತಿಪಟುಗಳ ಮೇಲೆ ಕಿರುಕುಳ ನಡೆಯುತ್ತಲೇ ಬಂದಿದೆ. 90 ಪ್ರತಿಶಕ್ಕೂ ಹೆಚ್ಚು ಕುಸ್ತಿಪಟುಗಳಿಗೆ ತೊಂದರೆ ಅನುಭವಿಸುತ್ತಿರುವುದು ತಿಳಿದಿತ್ತು. ಆದರೆ ಒಗ್ಗಟ್ಟಿನ ಕೊರತೆಯಿಂದಾಗಿ ಸುಮ್ಮನಿದ್ದೆವು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹೋರಾಟದಿಂದ ಹಿಂದೆ ಸರಿದಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ – ಸಾಕ್ಷಿ ಮಲಿಕ್

    ಸಂಸತ್‌ ಮುತ್ತಿಗೆ ನಿರ್ಧಾರ ನಮ್ಮದಲ್ಲ:
    ನೂತನ ಸಂಸತ್‌ ಭವನಕ್ಕೆ ಮುತ್ತಿಗೆ ಹಾಕುವ ನಿರ್ಧಾರ ನಮ್ಮದಾಗಿರಲಿಲ್ಲ. ʻಮಹಿಳಾ ಪಂಚಾಯತ್‌ʼನಡೆಸಲು ಉದ್ದೇಶಿಸಿದ್ದು ನಾವಲ್ಲ ಎಂದು ಸ್ಪಷ್ಟಪಡಿಸಿದ ಸತ್ಯವರ್ತ್‌, ಮಹಿಳಾ ಸಮ್ಮಾನ್‌ ಪಂಚಾಯತ್‌ ನಡೆಸಲು ಕೆಲ ಪಂಚಾಯುತ್‌ ಸದಸ್ಯರು ನಿರ್ಧರಿಸಿದ್ದರು. ನಾವು ಅವರ ನಿರ್ಧಾರದಂತೆ ನಡೆದುಕೊಂಡೆವು, ಆದ್ರೆ ಅದು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತು, ಹೋರಾಟದಲ್ಲಿ ನಮ್ಮನ್ನ ಸಂಪೂರ್ಣ ಕುಗ್ಗುವಂತೆ ಮಾಡಿತು. ಇದನ್ನೂ ಓದಿ: ಬೇಕಂತಲೇ ಹೆಣ್ಮಕ್ಕಳ ಮೈ ಮುಟ್ಟುತ್ತಿದ್ದ, ಹಿಂಬಾಲಿಸುತ್ತಿದ್ದ – ಬ್ರಿಜ್‌ ಭೂಷಣ್‌ ವಿರುದ್ಧ 10 ಕಂಪ್ಲೆಂಟ್‌, 2 FIR

    ಕುತಂತ್ರ ಅರ್ಥ ಮಾಡಿಕೊಳ್ಳಲಿಲ್ಲ:
    ಗಂಗಾ ನದಿಗೆ ಪದಕಗಳನ್ನ ಎಸೆಯಲು ಮುಂದಾದಾಗ ನಮ್ಮನ್ನ ತಡೆದರು. ಒಂದು ವೇಳೆ ಪದಕ ಎಸೆದಿದ್ದರೆ ಅದು ಹಿಂಸಾಚಾರಕ್ಕೆ ಕಾರಣವಾಗುತ್ತಿತ್ತು. ಅದಕ್ಕಾಗಿಯೇ ನಮ್ಮ ನಿರ್ಧಾರದಿಂದ ಹಿಂದೆ ಸರಿದೆವು. ನಾವು ಯಾರದ್ದೋ ಕುತಂತ್ರಕ್ಕೆ ಬಲಿಯಾಗುತ್ತಿದ್ದೇವೆ ಎಂಬುದನ್ನ ಅರ್ಥಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಒತ್ತಡದಿಂದಲೇ ತೀರ್ಮಾನ ಕೈಗೊಳ್ಳುತ್ತಿದ್ದೆವು. ಜೀವನಪೂರ್ತಿ ಕುಸ್ತಿ ಆಡಿದರೂ, ಕೆಲ ಸಂದರ್ಭಗಳನ್ನ ನಿಭಾಯಿಸಲು ಸಾಧ್ಯವಾಗಲಿಲ್ಲ. ಹರಿಧ್ವಾರದ ಘಟನೆಯ ಬಳಿಕ ನಮ್ಮ ಬೆಂಬಲಕ್ಕೆ ಇರುವವರು ಯಾರು, ಸರ್ಕಾರದ ಪರವಾಗಿ ಇರುವವರು ಯಾರು ಅನ್ನೋದು ತಿಳಿಯಿತು ಎಂದು ಹೇಳಿಕೊಂಡಿದ್ದಾರೆ.

    ನಾವು ಏನಾದರೂ ತಪ್ಪು ಮಾಡಿದ್ರೆ ಕ್ಷಮೆ ಯಾಚಿಸುತ್ತೇವೆ. ನಮ್ಮ ಪ್ರತಿಭಟನೆಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ ಸತ್ಯವರ್ತ್‌, ಕೊನೆಯಲ್ಲಿ ಯಾವುದೇ ಸಂದರ್ಭದಲ್ಲಿ ನಾವು ಒಗ್ಗಟ್ಟಾಗಿ ಇಲ್ಲದಿದ್ದಾಗ ವ್ಯವಸ್ಥೆಯು ಅದರ ಪ್ರಯೋಜನ ಪಡೆದುಕೊಳ್ಳುತ್ತದೆ. ಆದ್ದರಿಂದ ಯಾವುದೇ ವ್ಯವಸ್ಥೆಯ ವಿರುದ್ಧ ಅನ್ಯಾಯ ಮೆಟ್ಟಿ ನಿಲ್ಲಬೇಕಾದರೆ ಮೊದಲು ಒಗ್ಗಟ್ಟಾಗಿರಿ ಎಂದು ಸಲಹೆ ನೀಡಿದ್ದಾರೆ.

  • ಬ್ರಿಜ್ ಭೂಷಣ್ ವಿರುದ್ಧ 1,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ – ಪೋಕ್ಸೊ ಕೇಸ್‌ ರದ್ದಿಗೆ ದೆಹಲಿ ಪೊಲೀಸರ ಶಿಫಾರಸ್ಸು

    ಬ್ರಿಜ್ ಭೂಷಣ್ ವಿರುದ್ಧ 1,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ – ಪೋಕ್ಸೊ ಕೇಸ್‌ ರದ್ದಿಗೆ ದೆಹಲಿ ಪೊಲೀಸರ ಶಿಫಾರಸ್ಸು

    ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಶನ್ (WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Bhushan Sharan Singh) ವಿರುದ್ಧ ದೆಹಲಿ ಪೊಲೀಸರು ಗುರುವಾರ 1,000 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ರೋಸ್ ಅವೆನ್ಯೂ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಕೆಯಾಗಿದ್ದು ಜುಲೈ 4 ರಂದು ವಿಚಾರಣೆ ನಡೆಯಲಿದೆ.

    ಚಾರ್ಜ್‌ಶೀಟ್ ನಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಫೋಕ್ಸೊ ಪ್ರಕರಣ ರದ್ದು ಮಾಡುವಂತೆ ಪೋಲೀಸರು ಶಿಫಾರಸ್ಸು ಮಾಡಿದ್ದಾರೆ. ಈ ಬಗ್ಗೆ 500 ಪುಟಗಳ ವರದಿ ನೀಡಿರುವ ಪೊಲೀಸರು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಕ್ಕೆ ಯಾವುದೇ ಸಾಕ್ಷ್ಯ – ಪುರಾವೆಗಳು ಲಭ್ಯವಾಗಿಲ್ಲ ಎಂದು ನ್ಯಾಯಾಲಯಕ್ಕೆ (Court) ತಿಳಿಸಿದ್ದಾರೆ. ಇದನ್ನೂ ಓದಿ: ಹೋರಾಟದಿಂದ ಹಿಂದೆ ಸರಿದಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ – ಸಾಕ್ಷಿ ಮಲಿಕ್

    ಕುಸ್ತಿಪಟುಗಳ ದೂರಿನ ಮೇರೆಗೆ ದಾಖಲಿಸಿದ FIR ಆಧರಿಸಿ ನಡೆಸಿದ ತನಿಖೆ ಬಳಿಕ ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 354, 354 A, 354 D ಮತ್ತು IPC ಸೆಕ್ಷನ್ 109/ 354/354 A/506ರ ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಸಂತ್ರಸ್ತೆಯ ಮತ್ತು ಆಕೆಯ ತಂದೆಯ ಹೇಳಿಕೆ ಆಧಾರದ ಮೇಲೆ ನಾವು ಪೋಕ್ಸೊ (POCSO) ರದ್ದತಿ ವರದಿ ಸಲ್ಲಿಸಿದ್ದೇವೆ ಎಂದು ದೆಹಲಿ ಪೊಲೀಸ್ ವಕ್ತಾರೆ ಸುಮನ್ ನಲ್ವಾ ಹೇಳಿದ್ದಾರೆ. ಇದನ್ನೂ ಓದಿ: ಬೇಕಂತಲೇ ಹೆಣ್ಮಕ್ಕಳ ಮೈ ಮುಟ್ಟುತ್ತಿದ್ದ, ಹಿಂಬಾಲಿಸುತ್ತಿದ್ದ – ಬ್ರಿಜ್‌ ಭೂಷಣ್‌ ವಿರುದ್ಧ 10 ಕಂಪ್ಲೆಂಟ್‌, 2 FIR

    ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ನೂತನ ಸಂಸತ್‌ ಭವನದ ಎದುರು ಪ್ರತಿಭಟನೆ ನಡೆಸಲು ತೆರಳುತ್ತಿದ್ದಾಗ ಪೊಲೀಸರಿಂದ ಹಲ್ಲೆಗೊಳಗಾಗಿದ್ದರು. ಮಾತ್ರವಲ್ಲದೇ ದೆಹಲಿ ಪೊಲೀಸರು ಕುಸ್ತಿಪಟುಗಳ ವಿರುದ್ಧವೂ ಪ್ರಕರಣ ದಾಖಲಿಸಿದ್ದರು. ಇದರಿಂದ ಮನನೊಂದ ಕುಸ್ತಿಪಟುಗಳು ತಮ್ಮ ಒಲಿಂಪಿಕ್ಸ್‌ ಪದಕಗಳನ್ನ ಹರಿದ್ವಾರದಲ್ಲಿರುವ ಗಂಗಾನದಿಯಲ್ಲಿ ವಿರ್ಸಜನೆಗೆ ಮುಂದಾಗಿದ್ದರು.

    ಈ ವೇಳೆ ರೈತ ಮುಖಂಡ ರಾಕೇಶ್ ಟಿಕಾಯತ್ ಸಹೋದರ ಕುಸ್ತಿಪಟುಗಳನ್ನು ತಡೆದು ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಆ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭೇಟಿಯಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಸ್ತಿಪಟುಗಳು ಚರ್ಚೆ ನಡೆಸಿದ್ದರು.