Tag: Saket Gokhale

  • ವಲಸಿಗರ ಆಧಾರ್‌ ನಿಷ್ಕ್ರಿಯ – ಏನಿದು ಪಶ್ಚಿಮ ಬಂಗಾಳ, ಕೇಂದ್ರದ ನಡುವಿನ ಕಿತ್ತಾಟ?

    ವಲಸಿಗರ ಆಧಾರ್‌ ನಿಷ್ಕ್ರಿಯ – ಏನಿದು ಪಶ್ಚಿಮ ಬಂಗಾಳ, ಕೇಂದ್ರದ ನಡುವಿನ ಕಿತ್ತಾಟ?

    ಶ್ಚಿಮ ಬಂಗಾಳದಲ್ಲಿ  (West Bengal) ರಾಜಕೀಯ ಉದ್ದೇಶಕ್ಕೆ ಬಾಂಗ್ಲಾ ವಲಸಿಗರಿಗೆ ಆಧಾರ್ ಕಾರ್ಡ್ (Aadhaar Card) ನೀಡಿರುವ ಆರೋಪದ ಮೇಲೆ ಕೇಂದ್ರ ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಹಲವರ ಆಧಾರ್ ನಿಷ್ಕ್ರಿಯಗೊಳಿಸಲಾಗಿದ್ದು, ಕೇಂದ್ರ ಸರ್ಕಾರ ಹಾಗೂ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಸರ್ಕಾರದ ನಡುವಿನ ರಾಜಕೀಯ ಕೆಸರೆರಚಾಟಕ್ಕೆ ರಾಜ್ಯ ಸಾಕ್ಷಿಯಾಗಿದೆ.  

    ಕೇಂದ್ರದ ನಿರ್ಧಾರದ ವಿರುದ್ಧ ಗುಡುಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ಆಧಾರ್ ನಿಷ್ಕ್ರಿಯಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಈಗ ಅಗತ್ಯ ಸೇವೆಗಳಿಗೆ ಆಧಾರ್ ಕಡ್ಡಾಯವಾಗಿ ಬೇಕಾಗಿದ್ದು, ನಿಷ್ಕ್ರಿಯಗೊಳಿಸಲಾದ ಆಧಾರ್ ಕಾರ್ಡ್‍ಗಳ ವಿಚಾರವಾಗಿ ಮಮತಾ ಬ್ಯಾನರ್ಜಿ ಕೇಂದ್ರಕ್ಕೆ ಪತ್ರ ಸಹ ಬರೆದಿದ್ದಾರೆ. ಇದರೊಂದಿಗೆ, ನಮಗೆ ಆಧಾರ್ ಅಗತ್ಯವಿಲ್ಲ, ನಾವು ಪ್ರತ್ಯೇಕ ಗುರುತಿನ ಚೀಟಿ ಜಾರಿಗೆ ತರುತ್ತೇವೆ ಎಂಬ ಸವಾಲನ್ನು ಸಹ ಕೆಂದ್ರಕ್ಕೆ ಹಾಕಿದ್ದಾರೆ.

    ಟಿಎಂಸಿ (TMC) ಸಂಸದ ಸಾಕೇತ್ ಗೋಕಲೆ (Saket Gokhale) ಕೂಡ ಈ ವಿಚಾರವಾಗಿ ಮೋದಿ (Narendra Modi) ಸರ್ಕಾರ ಜನಸಾಮಾನ್ಯರ ಹಕ್ಕನ್ನು ಕಸಿಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ನೀವು ಭಾರತದಲ್ಲಿ ಎಲ್ಲಿಯೇ ವಾಸಿಸುತ್ತಿರಲಿ, ಬಿಜೆಪಿಯನ್ನು ವಿರೋಧಿಸುವ ಕಾರಣಕ್ಕಾಗಿ ಮೋದಿ ಸರ್ಕಾರ ನಿಮ್ಮ ಆಧಾರ್ ಅನ್ನು ನಿಷ್ಕ್ರಿಯಗೊಳಿಸಿದರೆ ಹಲವಾರು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು.

    ಆಧಾರ್ ನಿಷ್ಕ್ರಿಯದಿಂದ ಎದುರಿಸಬೇಕಾದ ಸಮಸ್ಯೆಗಳು: ಆಧಾರ್ ಅಗತ್ಯವಿರುವ ಎಲ್ಲಾ ಸೇವೆಗಳು ಲಭ್ಯವಾಗುವುದಿಲ್ಲ. ವಿಶೇಷವಾಗಿ  ಸರ್ಕಾರದಿಂದ ಸಿಗುವ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು ಲಭ್ಯವಿರುವುದಿಲ್ಲ.

    ಕೇಂದ್ರ ಹೇಳಿದ್ದೇನು?: ಕೇಂದ್ರ ಸಚಿವ ಶಾಂತನು ಠಾಕೂರ್ ಅವರು ತಾಂತ್ರಿಕ ದೋಷದಿಂದ ಪಶ್ಚಿಮ ಬಂಗಾಳದ ನಿವಾಸಿಗಳ ಆಧಾರ್ ಕಾರ್ಡ್‍ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಟಿಎಂಸಿ ಸಂಸದರ ತಾಜಾ ಆರೋಪಗಳು ಆಧಾರ್ ಕಾರ್ಡ್‍ಗಳ ಮೂಲಕ ಸಾಮಾನ್ಯ ಜನರ ವೈಯಕ್ತಿಕ ಡೇಟಾದ ಆಪಾದನೆಯ ಉಲ್ಲಂಘನೆಯ ಸುತ್ತ ಚರ್ಚೆಗೆ ಮತ್ತೆ ಮರುಜೀವ ಬಂದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಮೆರಿಕ ಮೂಲದ `ರೆಸೆಕ್ಯುರಿಟಿ’ ಸಂಸ್ಥೆಯು ಡಾರ್ಕ್ ವೆಬ್‍ನಲ್ಲಿ ಆಧಾರ್ ಸಂಖ್ಯೆಗಳು ಮತ್ತು ಪಾಸ್‍ಪೋರ್ಟ್ ವಿವರಗಳು ಸೇರಿದಂತೆ ಸುಮಾರು 81.5 ಕೋಟಿ ಭಾರತೀಯರ ವೈಯಕ್ತಿಕ ಡೇಟಾ ಸೋರಿಕೆಯಾಗಿದೆ ಎಂದು ವರದಿ ಮಾಡಿತ್ತು. ವರದಿಯ ನಂತರ, ದೆಹಲಿ ಪೊಲೀಸರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಡಾರ್ಕ್ ವೆಬ್‍ನಲ್ಲಿ ಜನರ ವೈಯಕ್ತಿಕ ಡೇಟಾವನ್ನು ಸೋರಿಕೆ ಮಾಡಿದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.

    ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಅಕ್ರಮ ಆಧಾರ್‌ನ್ನು ನಿಷ್ಕ್ರಿಯಗೊಳಿಸಿದ್ದರೆ ಅಥವಾ ರದ್ದುಗೊಳಿಸದಿದ್ದರೆ ಆಗುವ ಸಮಸ್ಯೆಗಳೇನು? ಇದರ ಪರಿಣಾಮಗಳೇನು? ಅಲ್ಲದೇ ಪ್ರತ್ಯೇಕ ಐಡಿ ಕಾರ್ಡ್ ದೇಶದ ಭದ್ರತೆಗೆ ಹೇಗೆ ತೊಡಕಾಗಬಹುದು ಎಂಬ ಪ್ರಶ್ನೆ ಈಗ ದೇಶದೆಲ್ಲೆಡೆ ಸಂಚಲನ ಮೂಡಿಸಿದೆ. 

    ಕೇಂದ್ರ ಸರ್ಕಾರ ಹಾಗೂ ಸ್ವಯತ್ತ ಸಂಸ್ಥೆಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಗುರುತಿನ ಚೀಟಿ ನೀಡಲು ಅಧಿಕಾರ ಇಲ್ಲ. ಇದೀಗ ಮಮತಾ ಸರ್ಕಾರ ಗುರುತಿನ ಚೀಟಿ ನೀಡಲು ಮುಂದಾಗಿದ್ದು, ರಾಜಕೀಯ ಕಾರಣ, ಮತದ ಆಸರೆಗೆ ಎಂಬ ಆರೋಪಗಳು ಸಹ ಕೇಳಿಬರುತ್ತಿದೆ. ದೇಶಕ್ಕೆ ಅಕ್ರಮವಾಗಿ ನುಸುಳಿ ಬಂದ ಬಾಂಗ್ಲಾ ಇನ್ನಿತರ ದೇಶಗಳ ಜನರಿಗೆ ಆಧಾರ್ ಅಥವಾ ಗುರುತಿನ ಚೀಟಿ ನೀಡುವುದು ಮುಂದೆ ದೇಶಕ್ಕೆ ಮಾರಕವಾಗಿ ಪರಿಣಮಿಸಲಿದೆ.  ಮೂಲ ನಿವಾಸಿಗಳು ಪರಕೀಯರಾಗಿ ಬದುಕಬೇಕಾದ ಸಮಯ ದೂರ ಇಲ್ಲ ಎಂಬ ಚರ್ಚೆ ಕೂಡ ಜನರಲ್ಲಿ ಆರಂಭವಾಗಿದೆ. 

    ಕೆಲವೆಡೆ ಆಧಾರ್ ನಿಷ್ಕ್ರಿಯಗೊಳಿಸುತ್ತಿರುವುದು ಎನ್‍ಆರ್‌ಸಿ (NRC) ಜಾರಿಯ ಮೊದಲ ಹೆಜ್ಜೆ ಎಂಬ ಮಾತಗಳು ಕೇಳಿಬಂದಿದ್ದು, ಕೇಂದ್ರ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ಸೂಕ್ತ ನಿರ್ಧಾರ ಹಾಗೂ ಮಾತುಕತೆ ಮೂಲಕ ಚರ್ಚೆಗೆ ಗ್ರಾಸವಾದ ವಿಚಾರಕ್ಕೆ ಅಂತ್ಯ ಹಾಡಬೇಕಿದೆ. 

  • G20 ಶೃಂಗಸಭೆಗೆ ನಿಗದಿಗಿಂತ 300 ಪಟ್ಟು ಅಧಿಕ ಹಣ ಖರ್ಚು- ಆರೋಪ ತಳ್ಳಿ ಹಾಕಿದ ಕೇಂದ್ರ ಸರ್ಕಾರ

    G20 ಶೃಂಗಸಭೆಗೆ ನಿಗದಿಗಿಂತ 300 ಪಟ್ಟು ಅಧಿಕ ಹಣ ಖರ್ಚು- ಆರೋಪ ತಳ್ಳಿ ಹಾಕಿದ ಕೇಂದ್ರ ಸರ್ಕಾರ

    ನವದೆಹಲಿ: ಜಿ20 ಶೃಂಗಸಭೆಗೆ (G20 Summit) ನಿಗಧಿಗಿಂತ 300 ಪಟ್ಟು ಅಧಿಕ ಹಣ ಖರ್ಚು ಮಾಡಿರುವ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ಪಿಐಬಿ ಮೂಲಕ ಸ್ಪಷ್ಟನೆ ನೀಡಿರುವ ಸರ್ಕಾರ ಜಿ20 ಶೃಂಗಸಭೆಯನ್ನು ಆಯೋಜಿಸುವುದಕ್ಕೆ ಖರ್ಚು ಸೀಮಿತವಾಗಿರದೇ ಮುಖ್ಯವಾಗಿ ಶಾಶ್ವತ ಆಸ್ತಿ ನಿರ್ಮಾಣಕ್ಕೆ ಖರ್ಚು ಮಾಡಲಾಗಿದೆ ಎಂದು ಹೇಳಿದೆ.

    ಜಿ20 ಸಭೆಗೆ ಬಜೆಟ್‌ನಲ್ಲಿ (Budget) 990 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ಸರ್ಕಾರ 300% ಅಧಿಕ ಅಂದರೆ 4,100 ಕೋಟಿ ರೂ.ವರೆಗೆ ಖರ್ಚು ಮಾಡಿದೆ ಎಂದು ಮಮತಾ ಬ್ಯಾನರ್ಜಿ (Mamata Banerjee) ಪಕ್ಷದ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ (Saket Gokhale) ಪ್ರತಿಪಾದಿಸಿದ್ದರು. 2024ರ ಚುನಾವಣೆಗೂ ಮುನ್ನ ಮೋದಿಯವರ (Narendra Modi) ಸ್ವಯಂ ಜಾಹೀರಾತಿಗಾಗಿ 3,110 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಇದನ್ನು ಬಿಜೆಪಿ ಯಾಕೆ ಭರಿಸಬಾರದು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸನಾತನ ಧರ್ಮದ ತತ್ವಗಳ ವಿರುದ್ಧ ಹೋರಾಡಲು INDIA ಒಕ್ಕೂಟ ರಚಿಸಿದೆ: ಡಿಎಂಕೆ ನಾಯಕ ಪೊನ್ಮುಡಿ ವಿವಾದಾತ್ಮಕ ಹೇಳಿಕೆ

    ಇದಕ್ಕೆ ಸ್ಪಷ್ಟನೆ ನೀಡಿದ ಸರ್ಕಾರ, ಇಂತಹ ಹೇಳಿಕೆಗಳು ತಪ್ಪುದಾರಿಗೆಳೆಯುವಂತಿವೆ ಎಂದು ಹೇಳಿದೆ. ಪ್ರಗತಿ ಮೈದಾನದಲ್ಲಿ ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ (ITPO) ಮತ್ತು ಇತರ ಮೂಲಸೌಕರ್ಯ ಅಭಿವೃದ್ಧಿಯಿಂದ ಶಾಶ್ವತ ಆಸ್ತಿ ಸೃಷ್ಟಿಗೆ ಈ ಮೊತ್ತವನ್ನು ಖರ್ಚು ಮಾಡಲಾಗಿದೆ. ಇದು ಕೇವಲ ಜಿ20 ಶೃಂಗಸಭೆಯನ್ನು ಆಯೋಜಿಸಲು ಸೀಮಿತವಾಗಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ ಸಿಬ್ಬಂದಿಗೆ ನೂತನ ಡ್ರೆಸ್ ಕೋಡ್

    ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆಯು ನವದೆಹಲಿಯ ಭಾರತ್ ಮಂಟಪದಲ್ಲಿ ಅಂತಾರಾಷ್ಟ್ರೀಯ ಪ್ರದರ್ಶನ-ಕನ್ವೆನ್ಷನ್ ಸೆಂಟರ್ (IECC) ಪ್ರಗತಿ ಮೈದಾನದಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆಯಿತು. 20 ಸದಸ್ಯ ರಾಷ್ಟ್ರಗಳು, ಒಂಭತ್ತು ಅತಿಥಿ ದೇಶಗಳು ಮತ್ತು ಹಲವು ಅಂತರಾಷ್ಟ್ರೀಯ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವು. ಇದನ್ನೂ ಓದಿ: ಔತಣಕೂಟಕ್ಕೆ ದೀದಿ ಹೋಗಿದ್ದಕ್ಕೆ ಕಾಂಗ್ರೆಸ್ ತಗಾದೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋರ್ಬಿ ಸೇತುವೆ ದುರಂತದ ಬಗ್ಗೆ ಟ್ವೀಟ್ ಮಾಡಿದ TMC ವಕ್ತಾರ ಅರೆಸ್ಟ್ – ಮೋದಿ ವಿರುದ್ಧ ಮಮತಾ ಗರಂ

    ಮೋರ್ಬಿ ಸೇತುವೆ ದುರಂತದ ಬಗ್ಗೆ ಟ್ವೀಟ್ ಮಾಡಿದ TMC ವಕ್ತಾರ ಅರೆಸ್ಟ್ – ಮೋದಿ ವಿರುದ್ಧ ಮಮತಾ ಗರಂ

    ಅಹಮದಾಬಾದ್: ಗುಜರಾತಿನ ಮೋರ್ಬಿ ಸೇತುವೆ ದುರಂತದ (Morbi Bridge Collapse) ಕುರಿತು ಟ್ವೀಟ್ ಮಾಡಿದ ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ (Saket Gokhale) ಅವರನ್ನ ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಮಮತಾ ಬ್ಯಾನರ್ಜಿ (Saket Gokhale) ಅವರು ಬಿಜೆಪಿ (BJP) ಹಾಗೂ ಪ್ರಧಾನಿ ಮೋದಿ (Narendra Modi) ವಿರುದ್ಧ ಆಕ್ರೋಶ ಹೊರಹಾಕಿದ್ದು, ಇದು ರಾಜಕೀಯ ಸೇಡು ಎಂದು ಕಿಡಿ ಕಾರಿದ್ದಾರೆ.

    ಗೋಖಲೆ ಅವರನ್ನು ಬಂಧಿಸಲು ಕಾರಣವಾದ ಟ್ವೀಟ್ ಯಾವುದೆಂದು ನಿರ್ದಿಷ್ಟಪಡಿಸಿಲ್ಲ. ಆದರೆ ಗುಜರಾತ್ ಸರ್ಕಾರದ ಸತ್ಯ ಪರಿಶೀಲನಾ ಘಟಕವು ಗೋಖಲೆ ಅವರ ಇತ್ತೀಚಿನ ಟ್ವೀಟ್ ವೊಂದನ್ನು ಗುರುತಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

    ಇತ್ತೀಚಿನ ಟ್ವೀಟ್‌ನಲ್ಲಿ ಸಾಕೇತ್ ಗೋಖಲೆ `ಆರ್‌ಟಿಐ (ಮಾಹಿತಿ ಹಕ್ಕು ಕಾಯ್ದೆ) ಮಾಹಿತಿ ಪ್ರಕಾರ ಪ್ರಧಾನಿ ಅವರು ಮೋರ್ಬಿಗೆ ಭೇಟಿ ನೀಡಲು ಖರ್ಚಾಗಿದ್ದು 30 ಕೋಟಿ ರೂ.’ ಎಂದು ಉಲ್ಲೇಖಿಸಿದ್ದರು. ಈ ಕುರಿತು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಸತ್ಯ ಪರಿಶೀಲನೆ ನಡೆಸಿ ಆರ್‌ಟಿಐ ಮಾಹಿತಿ ಸುಳ್ಳು ಎಂದು ಹೇಳಿತ್ತು. ಇದನ್ನೂ ಓದಿ: ಮೋರ್ಬಿ ದುರಂತ: 1 ಲಕ್ಷ ರೂ. ದಂಡ ಪಾವತಿಸಿ – ಪುರಸಭೆ ವಿರುದ್ಧ ಹೈಕೋರ್ಟ್ ಗರಂ

    ಸಾಕೇತ್ ಗೋಖಲೆ ಅವರು ನಿನ್ನೆ ರಾತ್ರಿ ದೆಹಲಿಯಿಂದ ರಾಜಸ್ಥಾನದ ಜೈಪುರಕ್ಕೆ ವಿಮಾನದಲ್ಲಿ ತೆರಳಿದ್ದರು. ಅಲ್ಲಿಂದ ಗುಜರಾತ್ ಪೊಲೀಸರ್ ಬಂಧಿಸಿ ಕರೆದೊಯ್ದಿದ್ದಾರೆ ಎಂದು ಟಿಎಂಸಿ ನಾಯಕರೊಬ್ಬರು ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಬಿಜೆಪಿಯಾಗಲಿ ಅಥವಾ ಗುಜರಾತ್ ಸರ್ಕಾರವಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಕಳೆದ ಅಕ್ಟೋಬರ್ 30 ರಂದು ಗುಜರಾತಿನ ಮೋರ್ಬಿ ಜಿಲ್ಲೆಯಲ್ಲಿ ತೂಗು ಸೇತುವೆ ಕುಸಿದು 135 ಜನರು ಮೃತಪಟ್ಟಿದರು. ಬಳಿಕ ತನಿಖೆಯಲ್ಲಿ 9 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಸಂತ್ರಸ್ತರ ಆರೋಗ್ಯ ವಿಚಾರಿಸಿ, ಪರಿಹಾರ ಘೋಷಣೆ ಮಾಡಿದ್ದಾರೆ. ನಂತರದಲ್ಲಿ ಮೋರ್ಬಿ ಪುರಸಭೆಯನ್ನು ತರಾಟೆಗೆ ತೆಗೆದುಕೊಂಡಿದ್ದ ಗುಜರಾತ್ ಹೈಕೋರ್ಟ್ 1 ಲಕ್ಷ ದಂಡ ಸಹ ವಿಧಿಸಿದೆ.

    Live Tv
    [brid partner=56869869 player=32851 video=960834 autoplay=true]