Tag: sajani

  • ಮದುವೆ ಆಗುವ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ಶರ್ಮಿಳಾ ಮಾಂಡ್ರೆ

    ಮದುವೆ ಆಗುವ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ಶರ್ಮಿಳಾ ಮಾಂಡ್ರೆ

    ‘ಗಾಳಿಪಟ 2′ (Galipata 2) ನಾಯಕಿ ಶರ್ಮಿಳಾ ಮಾಂಡ್ರೆ (Sharmiela Mandre) ಸದ್ಯ ನಿರ್ಮಾಪಕಿಯಾಗಿ (Producer)  ಗುರುತಿಸಿಕೊಳ್ತಿದ್ದಾರೆ. ಹೊಸ ಬಗೆಯ ಕಂಟೆಂಟ್‌ಗಳಿಗೆ ಹೆಚ್ಚಿನ ಆದ್ಯತೆ ಕೊಡ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಟಿಯ ಮದುವೆ ಬಗ್ಗೆ ಕೇಳಲಾಗಿದೆ. ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ನಟಿ ಬಿಚ್ಚಿಟ್ಟಿದ್ದಾರೆ.

    ‘ಸಜನಿ’ ಸಿನಿಮಾ ಮೂಲಕ ನಾಯಕಿಯಾಗಿ ಶರ್ಮಿಳಾ ಮಾಂಡ್ರೆ ಎಂಟ್ರಿ ಕೊಟ್ಟರು. ಬಳಿಕ ನವಗ್ರಹ, ಗಾಳಿಪಟ 2 ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಸದ್ಯ ತಮ್ಮ ನಿರ್ಮಾಣ ಸಂಸ್ಥೆಯ ಜವಬ್ದಾರಿಯನ್ನ ನಟಿ ಹೊತ್ತಿದ್ದಾರೆ. ಸದ್ಯ ಮದುವೆ ಬಗ್ಗೆ ಶರ್ಮಿಳಾ ಮಾತನಾಡಿದ್ದಾರೆ. ಇದನ್ನೂ ಓದಿ:ಸ್ಪರ್ಧಿಗಳಿಂದ ಅಗೌರವ: ಬಿಗ್ ಬಾಸ್ ಶೋ ಮಧ್ಯೆಯೇ ಹೊರನಡೆದ ನಟ ಮೋಹನ್ ಲಾಲ್

    ನನಗೆ ಯಾವುದೇ ಮದುವೆಗೆ ಹೋಗುವುದು ಎಂದರೆ ಭಯವಾಗುತ್ತದೆ. ಏಕೆಂದರೆ ಅಲ್ಲಿರುವ ಎಲ್ಲಾ ಆಂಟಿಯರ ಕಣ್ಣು ನನ್ನ ಮೇಲೆ ಬೀಳುತ್ತದೆ. ಅವರ ನೋಟ ನೋಡಿದರೇನೇ ನನಗೆ ಮುಂದೇ ಏನು ಪ್ರಶ್ನೆ ಎದುರಾಗುತ್ತದೆ ಎನ್ನುವುದು ಅರ್ಥವಾಗುತ್ತದೆ. ಅದಕ್ಕಾಗಿಯೇ ಮದುವೆಯ ಮನೆಗೆ ಹೋಗುವುದು ಎಂದರೆ ಕಿರಿಕಿರಿ ಎನಿಸುತ್ತದೆ. ಅಷ್ಟಕ್ಕೂ ಆ ಆಂಟಿಯರ ಮುಂದಿನ ಪ್ರಶ್ನೆ ಬರುವುದೇ ನಿನ್ನ ಮದುವೆ ಯಾವಾಗ ಎನ್ನುವುದು. ಮದುವೆ ಯಾವಾಗ ಆಗುತ್ತಿಯಾ, ಮದುವೆಯ ಯೋಚನೆ ಇಲ್ವಾ ಅಂತ ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಯಾವುದೇ ಫಂಕ್ಷನ್‌ಗೆ ಹೋಗುವುದರಿಂದ ತಪ್ಪಿಸಿಕೊಳ್ಳುತ್ತೇನೆ, ಮದುವೆ ಮನೆಗಳಿಗೆ ಹೋಗುವುದು ಎಂದರೆ ಭಯ ಎಂದಿದ್ದಾರೆ.

    ಅಷ್ಟಕ್ಕೂ ತಮಗೆ ಮದುವೆ ಆಗುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಈಗ ಅನೇಕ ಮಂದಿ ಹುಡುಗಿಯರು ಮದುವೆಯಾಗಲು ಹಿಂಜರಿಯುತ್ತಾರೆ. ತಮಗೆ ಮದುವೆ ಬೇಡ ಎಂದು ಹೇಳುತ್ತಾರೆ. ಆದರೆ ನಾನು ಅಂತವಳಲ್ಲ, ನಾನು ಮದುವೆಯಾಗುವುದಿಲ್ಲ ಎಂದು ಯಾವಾಗಲೂ ಹೇಳಿಲ್ಲ. ಮದುವೆಯಾಗುತ್ತೇನೆ ಎಂದಿದ್ದಾರೆ. ಎಂಥ ಹುಡುಗ ಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶರ್ಮಿಳಾ, ಚಿಕ್ಕವಳಿರುವಾಗ ಹುಡುಗ ಹಾಗಿರಬೇಕು, ಹೀಗಿರಬೇಕು ಎಂದು ಅಂದುಕೊಂಡಿದ್ದೆ. ಈಗ ಅದ್ಯಾವುದೂ ಆಸೆ ಇಲ್ಲ. ಅವೆಲ್ಲಾ 23-24ನೇ ವಯಸ್ಸಿಗೆ ಮುಗಿದುಹೋದವು. ಈಗ ಸ್ವೀಟ್, ನೈಸ್ ಮತ್ತು ಒಳ್ಳೆಯ ಪರ್ಸನ್ಯಾಲಿಟಿ ಇರೋ ಹುಡುಗ ಬೇಕು ಅಷ್ಟೇ ಎಂದಿದ್ದಾರೆ. ಸಿನಿಮಾ ಇಂಡಸ್ಟ್ರಿಯ ಹುಡುಗನೇ ಬೇಕೆಂದೇನೂ ಇಲ್ಲ, ಯಾವ ಕ್ಷೇತ್ರದವನಾದರೂ ಓಕೆ ಎಂದಿದ್ದಾರೆ.

  • ಶಿರಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶರ್ಮಿಳಾ ಮಾಂಡ್ರೆ

    ಶಿರಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶರ್ಮಿಳಾ ಮಾಂಡ್ರೆ

    `ಸಜನಿ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಬೆಡಗಿ ಶರ್ಮಿಳಾ ಮಾಂಡ್ರೆ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಶೂಟಿಂಗ್‌ಗೆ ಬ್ರೇಕ್ ಹಾಕಿ, ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೆ ಶರ್ಮಿಳಾ ಮಾಂಡ್ರೆ ತೆರಳಿದ್ದಾರೆ.

    ಧ್ಯಾನ್‌ಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ ಲಗ್ಗೆಯಿಟ್ಟ ಬೆಡಗಿ ಶರ್ಮಿಳಾ ನಂತರ ಕನ್ನಡದ ಸಾಕಷ್ಟು ಚಿತ್ರಗಳ ಸೌತ್ ಸಿನಿಮಾ ಅಂಗಳದಲ್ಲೂ ನಟಿಸಿ ಸೈ ಎನಿಸಿಕೊಂಡರು. ಈಗ ಕೈತುಂಬಾ ಸಿನಿಮಾಗಳ ಮಧ್ಯೆ ಶೂಟಿಂಗ್‌ಗೆ ಬ್ರೇಕ್ ಹಾಕಿ ಶಿರಡಿಯತ್ತ ಶರ್ಮಿಳಾ ಬಂದಿದ್ದಾರೆ. ಸಾಯಿ ಬಾಬಾ ಸನ್ನಿಧಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಟಿಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಜಸ್ವಂತ್ ಗಿಲ್ ಬಯೋಪಿಕ್‌ನಲ್ಲಿ ಅಕ್ಷಯ್ ಕುಮಾರ್

    ನಟಿ ಶರ್ಮಿಳಾ ಸದ್ಯ `ಗಾಳಿಪಟ 2′, `ದಸರಾ’ ಮತ್ತು ಅನಂತ್ ನಾಗ್ ನಟನೆಯ `ಮಂಡಲ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೀಗೆ ಪವರ್‌ಫುಲ್ ಪಾತ್ರದ ಮೂಲಕ ಕಮಾಲ್ ಮಾಡಕು ನಟಿ ಶರ್ಮಿಳಾ ಸಜ್ಜಾಗಿದ್ದಾರೆ.

    Live Tv