Tag: Sajal Ali

  • ಪ್ರಭಾಸ್ ಹೊಸ ಚಿತ್ರಕ್ಕೆ ನಾಯಕಿಯಾದ ಪಾಕಿಸ್ತಾನಿ ನಟಿ

    ಪ್ರಭಾಸ್ ಹೊಸ ಚಿತ್ರಕ್ಕೆ ನಾಯಕಿಯಾದ ಪಾಕಿಸ್ತಾನಿ ನಟಿ

    ಟಾಲಿವುಡ್ ನಟ ಪ್ರಭಾಸ್‌ಗೆ (Prabhas) ಈಗ ‘ಕಲ್ಕಿ’ ಸಿನಿಮಾ ಯಶಸ್ಸಿನಿಂದ ಬೇಡಿಕೆ ಹೆಚ್ಚಾಗಿದೆ. ಕೆರಿಯರ್‌ನಲ್ಲಿ ಹೊಸ ತಿರುವು ಸಿಕ್ಕಿದೆ. ಹೀಗಿರುವಾಗ ಡಾರ್ಲಿಂಗ್ ಪ್ರಭಾಸ್ ನಟನೆಯ ಹೊಸ ಸಿನಿಮಾಗೆ ಪಾಕಿಸ್ತಾನಿ ನಟಿಗೆ ಅವಕಾಶ ಕೊಡಲಾಗಿದೆ. ಪ್ರಭಾಸ್‌ ಜೊತೆ ಪಾಕಿಸ್ತಾನಿ ನಟಿ ಡ್ಯುಯೇಟ್‌ ಹಾಡಲಿದ್ದಾರೆ. ಇದನ್ನೂ ಓದಿ:‘ರಾಜಾ ರಾಣಿ’ ಶೋಗೆ ಬಂದ್ಮೇಲೆ ನನ್ನ ಅಸ್ತಿತ್ವ ಕಾಣಿಸುತ್ತಿದೆ: ಅದಿತಿ ಪ್ರಭುದೇವ

    ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಸಕ್ಸಸ್‌ನಿಂದ ಹಳೆಯ ಸಿನಿಮಾಗಳ ಸೋಲಿನ ಕಹಿ ಮರೆಸಿದೆ. ಈ ಸಿನಿಮಾ ಬಳಿಕ ‘ದಿ ರಾಜಾ ಸಾಬ್’ ಚಿತ್ರದ ಶೂಟಿಂಗ್‌ನಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ.

    ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಪಾಕಿಸ್ತಾನಿ ನಟಿ ಸಜಲ್ ಅಲಿಗೆ ಚಾನ್ಸ್ ಸಿಕ್ಕಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಚಿತ್ರತಂಡಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಭಾರತದಲ್ಲಿ ನಾಯಕಿಯರಿಗೆ ಕೊರತೆ ಏನಿದೆ. ಪಾಕಿಸ್ತಾನಿ ನಟಿಗೆ ಅವಕಾಶ ಕೊಡುವ ಅಗತ್ಯ ಏನಿದೆ ಎಂದೆಲ್ಲಾ ಚಿತ್ರತಂಡಕ್ಕೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೆ ಸಜಲ್ ಅಲಿನೇ ಈ ಚಿತ್ರದ ನಾಯಕಿ ಎಂದು ಅಧಿಕೃತ ಘೋಷಣೆ ಮಾಡಿಲ್ಲ ಚಿತ್ರತಂಡ. ಕೇವಲ ಹರಿದಾಡುತ್ತಿರುವ ಸುದ್ದಿಗೆ ನೆಟ್ಟಿಗರು ರಾಂಗ್ ಆಗಿದ್ದಾರೆ. ಈ ಕುರಿತು ಚಿತ್ರತಂಡ ರಿಯಾಕ್ಟ್‌ ಮಾಡುತ್ತಾರಾ ಎಂದು ಕಾಯಬೇಕಿದೆ.

    ಅಂದಹಾಗೆ, ಸಜಲ್ ಅಲಿಗೆ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಬಾಲಿವುಡ್‌ನಲ್ಲಿ ಈ ಹಿಂದೆ ‘ಮಾಮ್’ ಎಂಬ ಸಿನಿಮಾದಲ್ಲಿ ಅವರು ನಟಿಸಿದ್ದರು.

  • ಶಾರುಖ್ ಖಾನ್ ಪುತ್ರನ ಜೊತೆ ಪಾಕ್ ನಟಿಯ ಲವ್ವಿ-ಡವ್ವಿ

    ಶಾರುಖ್ ಖಾನ್ ಪುತ್ರನ ಜೊತೆ ಪಾಕ್ ನಟಿಯ ಲವ್ವಿ-ಡವ್ವಿ

    ಶ್ರೀದೇವಿ ಮಗಳಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ಪಾಕಿಸ್ತಾನದ ನಟಿ ಸಜಲ್ ಅಲಿ(Sajal Ali) ಇದೀಗ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಪುತ್ರನ ಮೇಲೆ ಈ ನಟಿಗೆ ಲವ್ ಆಗಿದ್ಯಂತೆ. ಹಾಗಂತ ಸೋಷಿಯಲ್ ಮೀಡಿಯಾ ಮೂಲಕ ಸಜಲ್ ಹೇಳಿಕೊಂಡಿದ್ದಾರೆ.

    ಪಾಕ್ ನಟಿ ಸಜಲ್ ಸಾಕಷ್ಟು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. `ಮೋಮ್’ (Mom) ಚಿತ್ರದಲ್ಲಿ ಎವರ್‌ಗ್ರೀನ್ ನಟಿ ಶ್ರೀದೇವಿ(Sridevi Kapoor) ಪುತ್ರಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ಶಾರುಖ್ (Sharukh Khan) ಪುತ್ರ ಆರ್ಯನ್ ಮೇಲೆ ಸಜಲ್ ಅಲಿಗೆ ಪ್ಯಾರ್ ಆಗಿದೆ. ಆರ್ಯನ್ ಖಾನ್ ಅಂದ್ರೆ ತನಗಿಷ್ಟ ಎಂಬರ್ಥದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ಅಪ್ಪು ಜೊತೆಗಿನ ನೆನಪು ಬಿಚ್ಚಿಟ್ಟ `ಬಾ ಬಾರೋ ರಸಿಕಾ’ ಖ್ಯಾತಿಯ ನಟಿ ಆಶಿತಾ

    ಇತ್ತೀಚೆಗೆ ನಟಿ ಸಜಲ್, ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಆರ್ಯನ್ ಖಾನ್ ಫೋಟೋ ಶೇರ್ ಮಾಡಿ, ಶಾರುಖ್ ಖಾನ್ ನಟನೆಯ ರೊಮ್ಯಾಂಟಿಕ್ ಸಾಂಗ್ ಆ್ಯಡ್ ಮಾಡಿ ಶೇರ್ ಮಾಡಿದ್ದರು. ಈ ಫೋಸ್ಟ್ ಅಭಿಮಾನಿಗಳ ವಲಯದಲ್ಲಿ ಸಖತ್ ವೈರಲ್ ಕೂಡ ಆಗುತ್ತಿದೆ. ಇದನ್ನೂ ಓದಿ:ವೆಬ್ ಸಿರೀಸ್‌ನತ್ತ ಮುಖ ಮಾಡಿದ ಹರ್ಷಿಕಾ ಪೂಣಚ್ಚ

    ಇವರಿಬ್ಬರು ಮದುವೆ ಆದರೆ ಹೇಗಿರುತ್ತದೆ. ಇವರಿಬ್ಬರ ಜೋಡಿ ಹೇಗಿದೆ ಎಂದು ಈಗಾಗಲೇ ನೆಟ್ಟಿಗರು ಮುಂದಾಲೋಚನೆ ಮಾಡಿದ್ದಾರೆ. ಸಜಲ್ ಅಲಿ ಪ್ರೀತಿಗೆ ಆರ್ಯನ್ ಖಾನ್ ಇನ್ನೂ ರಿಯಾಕ್ಷನ್ ಕೊಟ್ಟಿಲ್ಲ. ಮುಂದೆ ಎನೆಲ್ಲಾ ಬೆಳವಣಿಗೆ ಆಗಬಹುದು ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಾನು ಮತ್ತೊಮ್ಮೆ ನನ್ನ ತಾಯಿಯನ್ನು ಕಳೆದುಕೊಂಡೆ ಅಂತಾ ಪೋಸ್ಟ್ ಮಾಡಿದ ಪಾಕಿಸ್ತಾನಿ ನಟಿ

    ನಾನು ಮತ್ತೊಮ್ಮೆ ನನ್ನ ತಾಯಿಯನ್ನು ಕಳೆದುಕೊಂಡೆ ಅಂತಾ ಪೋಸ್ಟ್ ಮಾಡಿದ ಪಾಕಿಸ್ತಾನಿ ನಟಿ

    ಮುಂಬೈ: ನಾನು ಮತ್ತೊಮ್ಮೆ ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ ಅಂತಾ ಪಾಕಿಸ್ತಾನದ ನಟಿ ಸಜಲ್ ಅಲಿ ಇನ್ ಸ್ಟಾಗ್ರಾಂನಲ್ಲಿ ನಟಿ ಶ್ರೀದೇವಿ ಜೊತೆಯಿರುವ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ.

    ಸಜಲ್ ಅಲಿ ಈ ಹಿಂದೆ ತೆರೆಕಂಡಿದ್ದ ಶ್ರೀದೇವಿಯವರ ‘ಮಾಮ್’ ಸಿನಿಮಾದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಮಲ ಮಗಳಾಗಿ ಸಜಲ್ ಅಭಿನಯ ಎಲ್ಲರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸಜಲ್ ಮೊದಲ ಚಿತ್ರದಲ್ಲೇ ಶ್ರೀದೇವಿಯಂತಹ ದೊಡ್ಡ ನಟಿಯ ಜೊತೆ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಅಂತಾ ಹೇಳಿಕೊಂಡಿದ್ರು.

    2017ರಲ್ಲಿ ಮಾಮ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸಜಲ್ ಅವರ ಸ್ವಂತ ತಾಯಿ ವಿಧಿವಶರಾಗಿದ್ದರು. ಅನಂತರ ಶ್ರೀದೇವಿ ಸಜಲ್ ಗೆ ಧೈರ್ಯ ತುಂಬಿ ಸ್ವಂತ ಮಗಳಂತೆ ಕಾಣುತ್ತಿದ್ದರು. ಶ್ರೀದೇವಿ ಸೆಟ್‍ನಲ್ಲಿ ತುಂಬಾ ಪ್ರೊಫೆಷನಲ್ ಆಗಿರುತ್ತಿದ್ದರು. ಆದ್ರೆ ಸಜಲ್ ಜೊತೆ ಅವರಿಗಿದ್ದ ಬಾಂಧವ್ಯವೇ ಬೇರೆಯಾಗಿತ್ತು ಎಂದು ಮೂಲಗಳು ತಿಳಿಸಿವೆ. ಸಜಲ್ ತಾಯಿ ಮರಣ ಹೊಂದಿದಾಗ ಶ್ರೀದೇವಿಗೆ ಕರೆ ಮಾಡಿ ಸಜಲ್ ಅತ್ತಿದ್ದರು.

    ಆದ್ರೆ ಚಿತ್ರದಲ್ಲಿ ತಾಯಿಯಾಗಿದ್ದ ಶ್ರೀದೇವಿ ಶನಿವಾರದಂದು ದುಬೈನಲ್ಲಿ ಸಾವನ್ನಪ್ಪಿದ್ದಕ್ಕೆ, ನಾನು ಮಗದೊಮ್ಮ ನನ್ನ ತಾಯಿಯನ್ನು ಕಳೆದುಕೊಂಡೆ ಅಂತಾ ಸಜಲ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ರವಿ ಉದಯವಾರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಮಾಮ್, 2017 ಜುಲೈ ನಲ್ಲಿ ತೆರೆಕಂಡಿತ್ತು. ಚಿತ್ರದಲ್ಲಿ ಶ್ರೀದೇವಿ, ಸಜಲ್ ಅಲಿ, ನವಾಜುದ್ದೀನ್ ಸಿದ್ದೀಕಿ, ಅಕ್ಷಯ್ ಖನ್ನಾ ಮತ್ತು ಅದ್ನಾನ್ ಸಿದ್ದೀಕಿ ಸೇರಿದಂತೆ ದೊಡ್ಡ ತಾರಾಗಣವನ್ನು ಸಿನಿಮಾ ಹೊಂದಿತ್ತು.