Tag: Sairam

  • ಈ ಸಿನಿಮಾದ ಕಥಾನಾಯಕ ಬದುಕಿದ್ದಾರೆ, ಸಿನಿಮಾ ನೋಡೋಕೆ ಬರ್ತಾರೆ

    ಈ ಸಿನಿಮಾದ ಕಥಾನಾಯಕ ಬದುಕಿದ್ದಾರೆ, ಸಿನಿಮಾ ನೋಡೋಕೆ ಬರ್ತಾರೆ

    .ಆರ್.ಸಾಯಿರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತರಚನೆ ಮಾಡಿ ಆಕ್ಷನ್ ಕಟ್ ಹೇಳಿರುವ, ವಿನೂತನ ಶೀರ್ಷಿಕೆ ಹೊಂದಿರುವ ’ಧೈರ್ಯಂ ಸರ್ವತ್ರ ಸಾಧನಂ’ (ಡಿಎಸ್‌ಎಸ್) ಚಿತ್ರದ ಟೀಸರ್ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಎ.ಪಿ.ಪ್ರೊಡಕ್ಷನ್ ಅಡಿಯಲ್ಲಿ ಉದ್ಯಮಿ ಆನಂದ್ ಬಾಬು.ಜಿ ನಿರ್ಮಾಣ ಮಾಡಿದ್ದಾರೆ.  ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹನುಮಂತನಾಥ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಇವರುಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಇದಕ್ಕೂ ಮುನ್ನ ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ ಟ್ರೇಲರ್ ಲೋಕಾರ್ಪಣೆಗೊಳಿಸಿ ಅಭಿನಂದಿಸಿದ ತುಣುಕುಗಳು ಪರದೆ ಮೇಲೆ ಬಿತ್ತರಗೊಂಡಿತು.

    ನಂತರ ಸಿನಿಮಾ ಹುಟ್ಟಿಕೊಂಡ ಬಗೆಯನ್ನು ಅಣುಕು ಪ್ರದರ್ಶನದ ಮೂಲಕ ಕಲಾವಿದರು, ತಂತ್ರಜ್ಞರು ತೋರಿಸಿದ್ದು ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಬಿಡಿ ಭಾಗಗಳು ಕೂಡಿಕೊಂಡು ಗನ್ ಆಗಿದೆ. ಒಬ್ಬೊಬ್ಬರೆ ಸೇರಿಕೊಂಡು ಚಿತ್ರ ಸಿದ್ದಗೊಂಡಿದೆ. ವಿಶೇಷವೆಂದರೆ ಇದೊಂದು ಸತ್ಯ ಘಟನೆಯ ಅಂಶಗಳನ್ನು ಒಳಗೊಂಡಿದೆ. ಯಾರ ಕಥೆ. ಎಲ್ಲಿ ಆಗಿದ್ದು? ಎಂಬುದನ್ನು ಕೊನೆಯಲ್ಲಿ ಆ ವ್ಯಕ್ತಿಗಳ ಭಾವಚಿತ್ರ ಹಾಗೂ ಪೂರ್ಣ ವಿವರವು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ. ಈಗಾಗಲೇ ಅವರುಗಳ ಬಳಿ ಅನುಮತಿ ಪಡೆಯಲಾಗಿದೆ. ಘಟನೆ ನಡೆದಂತ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಒಂದಷ್ಟು ಜನರು ಭೂಮಿ ಮೇಲೆ ಇರುವುದಿಲ್ಲ. ನಾಯಕ ಪಾತ್ರಧಾರಿಯು ಬದುಕಿದ್ದು, ಅವರು ಚಿತ್ರ ನೋಡಲು ಬರುತ್ತಾರೆ. ಮಾಧ್ಯಮದವರು ಪ್ರೋತ್ಸಾಹ ನೀಡಬೇಕೆಂದು ಕೋರಿಕೊಂಡರು.

    ನಿರ್ದೇಶಕ ಹಾಗೂ ನಾಯಕನ ಅಮ್ಮನಿಗೆ ಭರವಸೆ ನೀಡಿದಂತೆ ನಿರ್ಮಾಣ ಮಾಡಿರುವುದಾಗಿ ಆನಂದ್‌ಬಾಬು ಹೇಳಿಕೊಂಡರು. ನಾಯಕನಾಗಿ ವಿವಾನ್.ಕೆ.ಕೆ, ನಾಯಕಿಯಾಗಿ ಅನುಷಾ ರೈ. ವಿಶಿಷ್ಟ ಪಾತ್ರಗಳಲ್ಲಿ ಯಶ್‌ ಶೆಟ್ಟಿ, ಬಲರಾಜವಾಡಿ, ಚಕ್ರವರ್ತಿ ಚಂದ್ರಚೂಡ್, ವರ್ಧನ್, ಪ್ರದೀಪ್‌ ಪೂಜಾರಿ ರಾಮ್‌ ಪವನ್. ಉಳಿದಂತೆ ಮೀನಾ, ಪದ್ಮಿನಿ ಶೆಟ್ಟಿ, ಅರ್ಜುನ್‌ ಪಾಳೆಗಾರ, ರಾಮ್‌ ನಾಯಕ್, ಹೊಂಗಿರಣ ಚಂದ್ರು ಮತ್ತು ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ.

    ಹೃದಯಶಿವ, ಕಿನ್ನಾಳ್‌ ರಾಜ್, ಅರಸು ಅಂತಾರೆ ಸಾಹಿತ್ಯದ ಐದು ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ರವಿಕುಮಾರ್ ಸನಾ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಕುಂಗುಫು ಚಂದ್ರು ಸಾಹಸ, ಕ್ಯಾಪ್ಟನ್ ಕಿಶೋರ್ ನೃತ್ಯ ಇರಲಿದೆ. ತುಮಕೂರು, ಕೊರಟಗೆರೆ, ದೇವರಾಯನದುರ್ಗ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ.

  • ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ

    ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ

    ಧೈರ್ಯಂ ಸರ್ವತ್ರ ಸಾಧನಂ’..ಸ್ಯಾಂಡಲ್ ವುಡ್ ಸಿನಿ ಪ್ರೇಕ್ಷರನ್ನು ರಂಜಿಸಲು ಸಿದ್ದವಾಗಿರುವ ನೂತನ ಚಿತ್ರ. ಪವರ್ ಫುಲ್ ಟೈಟಲ್ ಮೂಲಕ ಸುದ್ದಿಯಲ್ಲಿರುವ ಸಿನಿಮಾ ತಂಡವೀಗ ಚಿತ್ರದ ಮೊಟ್ಟ ಮೊದಲ ಹಾಡು ಬಿಡುಗಡೆ ಮಾಡಿದೆ. ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನಿರ್ದೇಶನ ವಿಭಾಗದಲ್ಲಿ, ಡೈಲಾಗ್ ರೈಟರ್ ಆಗಿ, ತಾಂತ್ರಿಕ ವಿಭಾಗದಲ್ಲಿ ದುಡಿದು ಅನುಭವ ಇರುವ ಎ. ಆರ್. ಸಾಯಿರಾಮ್ ಚೊಚ್ಚಲ ನಿರ್ದೇಶನದಲ್ಲಿ ಅರಳಿದ ಸಿನಿಮಾ ಧೈರ್ಯಂ ಸರ್ವತ್ರ ಸಾಧನಂ.

    ‘ಹೆಂಡವೇ ನಮ್ಮ ಮನೆ ದ್ಯಾವರು’ ಎಂಬ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ಹಳ್ಳಿ ಸೊಗಡಿರೋ ಈ ಹಾಡಿಗೆ ನಿರ್ದೇಶಕ ಎ.ಆರ್. ಸಾಯಿರಾಮ್ ಮತ್ತು ಹೃದಯ ಶಿವ ಸಾಹಿತ್ಯ ಬರೆದಿದ್ದು, ದೇವಾನಂದ್ ವರ ಪ್ರಸಾದ್ ಹಾಡಿಗೆ ದನಿಯಾಗಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಈ ಹಾಡಿಗಿದೆ. ಚಿತ್ರದಲ್ಲಿ ಹೊಸ ಪ್ರತಿಭೆ ವಿವನ್ ಕೆ.ಕೆ ನಾಯಕ ನಟನಾಗಿ ಅಭಿನಯಿಸಿದ್ದು, ಅನುಷಾ ರೈ ನಾಯಕಿಯಾಗಿ ನಟಿಸಿದ್ದಾರೆ. ಯಶ್ ಶೆಟ್ಟಿ, ಬಾಲ ರಾಜವಾಡಿ, ಪ್ರದೀಪ್ ಪೂಜಾರಿ, ರಾಮ್ ಪವನ್, ವರ್ಧನ್ ತೀರ್ಥಹಳ್ಳಿ, ಚಕ್ರವರ್ತಿ ಚಂದ್ರಚೂಡ್, ಹೊಂಗಿರಣ ಚಂದ್ರು ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

    ಚಿತ್ರೀಕರಣ ಕಂಪ್ಲೀಟ್ ಆಗಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಸೆನ್ಸಾರ್ ಗೆ ರೆಡಿಯಾಗಿರುವ ಚಿತ್ರತಂಡ ಹಾಡು ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಆರಂಭಿಸಿದೆ. ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಸಿನಿಮಾ ಬಿಡುಗಡೆ ಮಾಡಲು  ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್

    ಎ. ಪಿ. ಪ್ರೊಡಕ್ಷನ್ಸ್ ಬ್ಯಾನರ್ ನಡಿ ಆನಂದ್ ಬಾಬು.ಜಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಐದು ಹಾಡು, ಐದು ಆಕ್ಷನ್ ಸೀನ್ ಗಳಿದ್ದು, ಜ್ಯೂಡ ಸ್ಯಾಂಡಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ, ರವಿಕುಮಾರ್ ಸನ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕಿನ್ನಲ್ ರಾಜ್, ಅರಸು ಅಂತಾರೆ, ಹೃದಯ ಶಿವ, ಎ. ಆರ್.ಸಾಯಿರಾಮ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]