Tag: Saira Banu

  • ನಮ್ಮ ವಿಚ್ಛೇದನ ವೈಯಕ್ತಿಕ ಸಮಸ್ಯೆಗಳಿಂದ ನಡೆದಿದ್ದು, ವೈಷಮ್ಯದಿಂದ ಅಲ್ಲ: ಎ.ಆರ್ ರೆಹಮಾನ್

    ನಮ್ಮ ವಿಚ್ಛೇದನ ವೈಯಕ್ತಿಕ ಸಮಸ್ಯೆಗಳಿಂದ ನಡೆದಿದ್ದು, ವೈಷಮ್ಯದಿಂದ ಅಲ್ಲ: ಎ.ಆರ್ ರೆಹಮಾನ್

    ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ (A.R Rahman) 5 ತಿಂಗಳ ಬಳಿಕ ಡಿವೋರ್ಸ್ (Divorce) ಕುರಿತಾಗಿ ಮೌನ ಮುರಿದಿದ್ದಾರೆ. ನಮ್ಮ ವಿಚ್ಛೇದನ ವೈಯಕ್ತಿಕ ಸಮಸ್ಯೆಗಳ ಕಾರಣದಿಂದ ನಡೆದಿದೆ. ಯಾವುದೇ ವೈಷಮ್ಯದಿಂದ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ಎ.ಆರ್‌.ರೆಹಮಾನ್‌-ಸಾಯಿರಾ ಬಾನು ವಿಚ್ಛೇದನ; 29 ವರ್ಷಗಳ ದಾಂಪತ್ಯ ಜೀವನ ಅಂತ್ಯ

    ಡಿವೋರ್ಸ್ ಘೋಷಣೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಮತ್ತು ಟೀಕೆಗಳು ವ್ಯಕ್ತವಾಗಿತ್ತು. ಈ ಹಿನ್ನೆಲೆ ಎ.ಆರ್ ರೆಹಮಾನ್ ಮೌನಕ್ಕೆ ಶರಣಾಗಿದ್ದರು. ಈಗ ಸೈರಾ ಬಾನು (Saira Banu) ಜೊತೆಗಿನ ಡಿವೋರ್ಸ್ ಬಗ್ಗೆ ಮೊದಲ ಬಾರಿಗೆ ಮಾತನಾಡಿ, ಸಾರ್ವಜನಿಕ ಜೀವನವನ್ನು ಆಯ್ಕೆ ಮಾಡುವುದು ಉದ್ದೇಶಪೂರ್ವಕ. ಆದ್ದರಿಂದ ಪ್ರತಿಯೊಬ್ಬರೂ ವಿಮರ್ಶೆಗೆ ಒಳಗಾಗುತ್ತಾರೆ. ಶ್ರೀಮಂತ ವ್ಯಕ್ತಿಯಿಂದ ಹಿಡಿದು ದೇವರುಗಳವರೆಗೆ ಎಲ್ಲರೂ ವಿಮರ್ಶೆಗೆ ಒಳಗಾಗುತ್ತಾರೆ. ನಾನು ಹಾಗೆಯೇ ಎಂದಿದ್ದಾರೆ. ಇದನ್ನೂ ಓದಿ:‘ರಾಮಾಯಣ’ ಚಿತ್ರ ಕೈಬಿಟ್ಟಿದ್ಯಾಕೆ ಶ್ರೀನಿಧಿ ಶೆಟ್ಟಿ?- ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ‘ಕೆಜಿಎಫ್ 2’ ನಟಿ

    ನಾನು ಯಾರದ್ದೋ ಕುಟುಂಬದ ಬಗ್ಗೆ ಕೆಟ್ಟದಾಗಿ ಹೇಳಿದರೆ, ಬೇರೆ ಯಾರಾದರೂ ನನ್ನ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ನಾವು ಭಾರತೀಯರು ಇದನ್ನು ನಂಬುತ್ತೇವೆ. ಯಾರೂ ಅನಗತ್ಯವಾಗಿ ಬೇರೆ ಅವರ ಬಗ್ಗೆ ಮಾತನಾಡಬಾರದು, ಏಕೆಂದರೆ ಪ್ರತಿಯೊಬ್ಬರಿಗೂ ಸಹೋದರಿ, ಪತ್ನಿ, ತಾಯಿ ಇರುತ್ತಾರೆ. ಸೈರಾ ಬಾನು ಅವರು ತಮ್ಮ ಕಾನೂನು ಪ್ರತಿನಿಧಿಗಳ ಮೂಲಕ ಈ ನಿರ್ಣಯ ಕೈಗೊಂಡಿದ್ದಾರೆ. ಡಿವೋರ್ಸ್ ವೈಯಕ್ತಿಕ ಸಮಸ್ಯೆಗಳ ಕಾರಣದಿಂದಾಗಿ ನಡೆದಿದ್ದು, ಯಾವುದೇ ವೈಷಮ್ಯದಿಂದ ಅಲ್ಲ ಎಂದು ಎ.ಆರ್ ರೆಹಮಾನ್ ಸ್ಪಷ್ಟಪಡಿಸಿದ್ದಾರೆ.

    ಅಂದಹಾಗೆ, 1995ರಲ್ಲಿ ಇಬ್ಬರೂ ವಿವಾಹವಾಗಿದ್ದರು. ಸೈರಾ ಜೊತೆಗಿನ 29 ವರ್ಷಗಳ ದಾಂಪತ್ಯಕ್ಕೆ ಕಳೆದ ನವೆಂಬರ್‌ನಲ್ಲಿ ಎ.ಆರ್ ರೆಹಮಾನ್ ಅಂತ್ಯ ಹಾಡಿದರು. 2024ರ ನವೆಂಬರ್ 19ರಂದು ಡಿವೋರ್ಸ್ ಘೋಷಿಸಿದರು.

  • ಎ.ಆರ್‌.ರೆಹಮಾನ್‌-ಸಾಯಿರಾ ಬಾನು ವಿಚ್ಛೇದನ; 29 ವರ್ಷಗಳ ದಾಂಪತ್ಯ ಜೀವನ ಅಂತ್ಯ

    ಎ.ಆರ್‌.ರೆಹಮಾನ್‌-ಸಾಯಿರಾ ಬಾನು ವಿಚ್ಛೇದನ; 29 ವರ್ಷಗಳ ದಾಂಪತ್ಯ ಜೀವನ ಅಂತ್ಯ

    ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮತ್ತು ಪತ್ನಿ ಸಾಯಿರಾ ಬಾನು ಸುಮಾರು ಮೂರು ದಶಕಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. 29 ವರ್ಷಗಳ ಬಳಿಕ ದಂಪತಿ ವಿಚ್ಛೇದನ ಘೋಷಿಸಿಕೊಂಡಿದ್ದಾರೆ.

    ಸಾಯಿರಾ ಅವರ ವಕೀಲ ವಂದನಾ ಶಾ ಅವರು, ದಂಪತಿಯ ವಿಚ್ಛೇದನ ನಿರ್ಧಾರದ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ.

    ಎ.ಆರ್.ರೆಹಮಾನ್ ಅವರು 1995 ರಲ್ಲಿ ಸಾಯಿರಾ ಬಾನು ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ.

    ಮದುವೆಯಾದ ಹಲವು ವರ್ಷಗಳ ನಂತರ, ಸಾಯಿರಾ ಅವರು ತಮ್ಮ ಪತಿ ಎ.ಆರ್.ರೆಹಮಾನ್ ಅವರಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ನಿರ್ಧಾರವು ಅವರ ಸಂಬಂಧದಲ್ಲಿ ಗಮನಾರ್ಹವಾದ ಭಾವನಾತ್ಮಕ ಒತ್ತಡದ ನಂತರ ಬಂದಿದೆ. ಒಬ್ಬರಿಗೊಬ್ಬರು ಆಳವಾದ ಪ್ರೀತಿಯ ಹೊರತಾಗಿಯೂ, ಉದ್ವಿಗ್ನತೆ ಮತ್ತು ತೊಂದರೆಗಳು ತಮ್ಮ ನಡುವೆ ದುಸ್ತರವಾದ ಅಂತರವನ್ನು ಸೃಷ್ಟಿಸಿವೆ ಎಂದು ಹೇಳಿಕೊಂಡಿದ್ದಾರೆ. ಸಾಯಿರಾ ಅವರು ನೋವು ಮತ್ತು ಸಂಕಟದಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ವಕೀಲರಾದ ವಂದನಾ ಶಾ ತಿಳಿಸಿದ್ದಾರೆ.

  • ರೆಹಮಾನ್ ಧ್ವನಿಗಾಗಿ ಮದುವೆ ಆದರಂತೆ ಪತ್ನಿ ಸಾಯಿರಾ ಬಾನು

    ರೆಹಮಾನ್ ಧ್ವನಿಗಾಗಿ ಮದುವೆ ಆದರಂತೆ ಪತ್ನಿ ಸಾಯಿರಾ ಬಾನು

    ಸಂಗೀತದ ಮೂಲಕ ಜಗತ್ತನ್ನೇ ತಮ್ಮತ್ತ ಸೆಳೆದುಕೊಂಡಿರುವ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ (AR Rahman) ಕುರಿತಾಗಿ ಪತ್ನಿ ಸಾಯಿರಾ ಬಾನು (Saira Banu) ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಜೊತೆಗೆ ತಾವು ರೆಹಮಾನ್ ಅವರನ್ನು ಮದುವೆ (Marriage) ಆಗಲು ಅವರ ಕಂಚಿನಕಂಠವೇ ಕಾರಣ ಎಂಬುದನ್ನೂ ತಿಳಿಸಿದ್ದಾರೆ. ಪತಿಯ ಬಗ್ಗೆ ಮಾತನಾಡುವಾಗ ತುಸು ಭಾವುಕರೇ ಆಗಿದ್ದರು ಸಾಯಿರಾ ಬಾನು.

    ಇತ್ತೀಚೆಗಷ್ಟೇ  ವಿಕಟನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದರು ರೆಹಮಾನ್ ಮತ್ತು ಸಾಯಿರಾ ಬಾನು. ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ರೆಹಮಾನ್ ಪತ್ನಿಯನ್ನೂ ವೇದಿಕೆಗೆ ಕರೆದರು. ಎರಡು ಮಾತುಗಳನ್ನು ಹೇಳುವಂತೆ ಕೇಳಿಕೊಂಡರು. ಆ ಸಮಯದಲ್ಲಿ ಸಾಯಿರಾ ಹಿಂದಿಯಲ್ಲಿ ಮಾತನಾಡುವುದಕ್ಕೆ ಶುರು ಮಾಡಿದರು. ಕೂಡಲೇ ಮಧ್ಯ ಪ್ರವೇಶ ಮಾಡಿದ ರೆಹಮಾನ್, ‘ಹಿಂದಿ ಬೇಡ ತಮಿಳಿನಲ್ಲೇ ಮಾತನಾಡು’ ಎಂದು ಹೇಳಿದರು. ಇದನ್ನೂ ಓದಿ:ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್- ನಟಿ ಅನಿಕಾ ಸಿಂಧ್ಯ

    ಹೆಂಡತಿಗೆ ತಮಿಳಿನಲ್ಲಿ ಮಾತನಾಡು ಎಂದು ರೆಹಮಾನ್ ಹೇಳುವ ವಿಡಿಯೋ ಸಖತ್ ವೈರಲ್ ಆಗಿದೆ. ಪತಿಯ ಮಾತಿಗೆ ನಗುತ್ತಲೇ ಪ್ರತಿಕ್ರಿಯಿಸಿದ ಸಾಯಿರಾ, ‘ನನಗೆ ಸಲೀಸಾಗಿ ತಮಿಳು ಮಾತನಾಡಲು ಬರುವುದಿಲ್ಲ, ಕ್ಷಮಿಸಿ’ ಎಂದು ಹೇಳುತ್ತಾ ಇಂಗ್ಲಿಷಿನಲ್ಲಿ ಮಾತನಾಡುತ್ತಾರೆ. ನಾನು ರೆಹಮಾನ್ ದೊಡ್ಡ ಅಭಿಮಾನಿ. ಅವರ ಕಂಠಕ್ಕೆ ಫಿದಾ ಆದೆ. ನಾನು ಮದುವೆ ಆಗಿದ್ದು ಅವರ ಗಾಯನಕ್ಕಾಗಿ’ ಎಂದಿದ್ದಾರೆ.