Tag: Saira

  • ಲಹರಿ ಸಂಸ್ಥೆಯಿಂದ 5 ಕೋಟಿಗೆ ‘ಸೈರಾ’ ಆಡಿಯೋ ಹಕ್ಕು ಖರೀದಿ

    ಲಹರಿ ಸಂಸ್ಥೆಯಿಂದ 5 ಕೋಟಿಗೆ ‘ಸೈರಾ’ ಆಡಿಯೋ ಹಕ್ಕು ಖರೀದಿ

    ಟಾಲಿವುಡ್‍ನ ‘ಸೈರಾ ನರಸಿಂಹ ರೆಡ್ಡಿ’ ಭಾರತೀಯ ಚಿತ್ರರಂಗದಲ್ಲೇ ಭಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾವಾಗಿದೆ. ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ಇದು ತೆರೆ ಕಾಣಲಿದೆ. ಸದ್ಯ ಆಡಿಯೋ ಹಕ್ಕುಗಳ ವಿಚಾರವಾಗಿ ಎಲ್ಲರ ಚಿತ್ತವಿತ್ತು. ಈಗ ಈ ಸಿನಿಮಾದ ಆಡಿಯೋ ಹಕ್ಕು ಯಾರ ಪಾಲಾಗಲಿದೆ ಎಂಬ ನಿರೀಕ್ಷೆಗೆ ತೆರೆ ಬಿದ್ದಿದೆ. ಕನ್ನಡದ ಅತಿ ಹೆಚ್ಚು ಹಾಡುಗಳ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪ್ರತಿಷ್ಠಿತ ಲಹರಿ ಸಂಸ್ಥೆ ‘ಸೈರಾ’ ಆಡಿಯೋ ಹಕ್ಕುಗಳನ್ನು ದೊಡ್ಡ ಮೊತ್ತ ಕೊಟ್ಟು ಖರೀದಿಸಿದೆ.

    ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಸೈರಾ ಸಿನಿಮಾದ ಆಡಿಯೋ ಹಕ್ಕು ಲಹರಿ ಸಂಸ್ಥೆ ಮಡಿಲಿಗೆ ಬಿದ್ದಿದೆ. ಈ ಹಕ್ಕುಗಳನ್ನು ಕೊಳ್ಳಲು ಹಲವಾರು ಕಂಪನಿಗಳು ತುದಿಗಾಲಲ್ಲಿ ನಿಂತಿದ್ದವು. ಆದರೆ ಎಲ್ಲರನ್ನು ಹಿಮ್ಮೆಟ್ಟಿಸಿ ಮತ್ತೊಂದು ಬಿಗ್‍ಬಜೆಟ್ ಸಿನಿಮಾವನ್ನು ಈ ಸಂಸ್ಥೆ ತನ್ನದಾಗಿಸಿಕೊಂಡಿದೆ. ಲಹರಿ ಸಂಸ್ಥೆ ಬರೋಬ್ಬರಿ ಐದು ಕೋಟಿಗೆ ಸಿನಿಮಾದ ಆಡಿಯೂ ಹಕ್ಕನ್ನು ಖರೀದಿ ಮಾಡಿದೆ ಎಂದು ವರದಿಯಾಗಿದೆ.

    ಈಗಾಗಲೇ ಲಹರಿ ಆಡಿಯೋ ಸಂಸ್ಥೆ ಪಂಚಭಾಷೆಗಳ ಹಲವಾರು ಸ್ಟಾರ್‌ಗಳ ಸಿನಿಮಾ ಆಡಿಯೋ ಹಕ್ಕು ಖರೀದಿಸಿದೆ. ಹಾಗೇ ಯೂಟ್ಯೂಬ್ ಗೋಲ್ಡ್ ಮೆಂಬರ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಅದರಲ್ಲೂ ಕನ್ನಡದ ಸಕ್ಸಸ್ ಫುಲ್ ಸಿನಿಮಾಗಳಾದ ಕೆ.ಜಿ.ಎಫ್, ಕುರುಕ್ಷೇತ್ರ, ಜಾಗ್ವಾರ್, ಕಿಲ್ಲಿಂಗ್ ವೀರಪ್ಪನ್, ಪೈಲ್ವಾನ್ ಸೇರಿದಂತೆ ಬಿಗ್ ಸ್ಟಾರ್‌ಗಳ ಸಿನಿಮಾದ ಆಡಿಯೋ ಹಕ್ಕನ್ನು ಕೊಂಡಿದೆ.

  • ಹುಟ್ಟುಹಬ್ಬಕ್ಕೆ ಸೈರಾ ಚಿತ್ರದಲ್ಲಿನ ಸುದೀಪ್ ಲುಕ್ ರಿವೀಲ್

    ಹುಟ್ಟುಹಬ್ಬಕ್ಕೆ ಸೈರಾ ಚಿತ್ರದಲ್ಲಿನ ಸುದೀಪ್ ಲುಕ್ ರಿವೀಲ್

    ಬೆಂಗಳೂರು: ತೆಲುಗಿನ ಸೈರಾ ನರಸಿಂಹರೆಡ್ಡಿ ಚಿತ್ರದ ಸುದೀಪ್ ಲುಕ್ ರಿವೀಲ್ ಆಗಿದೆ. ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಸೈರಾ ಚಿತ್ರತಂಡ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ.

    ಸದ್ಯ ತೆಲುಗು ಮಾತ್ರವಲ್ಲದೇ ಇಡೀ ದಕ್ಷಿಣ ಭಾರತೀಯ ಚಿತ್ರರಂಗವೇ ಬೆರಗಾಗಿ ನೋಡುವಂತೆ ಮಾಡಿರುವ ಚಿತ್ರ ಸೈರಾ. ಸ್ವಾತಂತ್ರ್ಯ ಹೋರಾಟದ ವೀರೋದ್ಧಾತ ಕಥೆ ಹೊಂದಿರೋ ಈ ಚಿತ್ರದಲ್ಲಿ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರು ಪಾತ್ರ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಕಿಚ್ಚ ಸುದೀಪ್ ಅವುಕು ಎಂಬೊಂದು ಪ್ರಾಂತ್ಯದ ರಾಜನಾಗಿ ನಟಿಸಲಿದ್ದಾರೆ. ಕಪ್ಪು ಬಟ್ಟೆ ಧರಿಸಿ ಖಡಕ್ ಲುಕ್‍ನಲ್ಲಿ ಕಿಚ್ಚ ಮಿಂಚಿದ್ದಾರೆ.

    ಮೆಗಾ ಸ್ಟಾರ್ ಚಿರಂಜೀವಿ ನಾಯಕನಾಗಿರೋ ಈ ಚಿತ್ರ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲುವಾಡ ನರಸಿಂಹ ರೆಡ್ಡಿಯ ಕಥೆಯಾಧಾರಿತ ಚಿತ್ರ. ಮೆಗಾ ಸ್ಟಾರ್ ರೆಡ್ಡಿಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಸುದೀಪ್ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಸೆಣಸಾಡುವ ಅವುಕು ಪ್ರಾಂತ್ಯದ ರಾಜನಾಗಿ ಕಾಣಿಸಿಕೊಳ್ಳಲಿದ್ದಾರೆ.

    ಇತಿಹಾಸದಲ್ಲಿಯೂ ಕೂಡಾ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಈ ಅವುಕು ರಾಜನ ಕ್ರಾಂತಿಯ ಬಗ್ಗೆ ಉಲ್ಲೇಖಗಳಿವೆ. ಈ ಮೂಲಕ ಸುದೀಪ್ ಐತಿಹಾಸಿಕ ಚಿತ್ರದಲ್ಲಿನ ಖದರು ತುಂಬಿರೋ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಬಹು ಕಾಲದಿಂದಲೂ ಕೂಡಾ ತೆಲುಗಿನ ಕಿಚ್ಚನ ಅಭಿಮಾನಿಗಳು ಅವರ ನಟನೆಗಾಗಿ ಕಾದು ಕೂತಿದ್ದರು. ಅವರೆಲ್ಲ ಸುದೀಪ್ ಸೈರಾ ಚಿತ್ರದಲ್ಲಿ ನಟಿಸುವ ಸುದ್ದಿ ಕೇಳಿ ಸಂತಸಗೊಂಡಿದ್ದಾರೆ.

    ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ದಿಗ್ಗಜ ನಟರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಬಿಗ್ ಬಜೆಟ್ ಚಿತ್ರ ಇದಾಗಿದೆ. ರಾಮ್‍ಚರಣ್ ನಿರ್ಮಾಣ ಸುರೇಂದ್ರ ರೆಡ್ಡಿ ನಿರ್ದೇಶನ ಈ ಚಿತ್ರಕ್ಕಿದ್ದು 2019ರಲ್ಲಿ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv