Tag: Saikumar

  • ‘ಚೌಕಿದಾರ್’ ಅಡ್ಡಾಗೆ ಡೈಲಾಗ್ ಕಿಂಗ್ ಸಾಯಿಕುಮಾರ್ ಎಂಟ್ರಿ

    ‘ಚೌಕಿದಾರ್’ ಅಡ್ಡಾಗೆ ಡೈಲಾಗ್ ಕಿಂಗ್ ಸಾಯಿಕುಮಾರ್ ಎಂಟ್ರಿ

    ಟೈಟಲ್ ಮೂಲಕ ಪ್ರೇಕ್ಷಕರನ್ನು ಒಂಟಿಗಾಲಲ್ಲಿ ನಿಲ್ಲಿಸಿರುವ ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ನಟಿಸುತ್ತಿರುವ ಚೌಕಿದಾರ್ (Chowkidar) ಸಿನಿಮಾ ತಂಡದಿಂದ ಮತ್ತೊಂದು ಹೊಸ ಅಪ್ ಡೇಟ್ ಸಿಕ್ಕಿದೆ. ಇತ್ತೀಚೆಗಷ್ಟೇ ಟೈಟಲ್ ಬಿಡುಗಡೆ ಮಾಡಿದ್ದ ಚಿತ್ರತಂಡವೀಗ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರನ್ನು ತಮ್ಮ ಬಳಗಕ್ಕೆ ಸ್ವಾಗತಿಸಿದೆ. ಚೌಕಿದಾರ್ ಸಿನಿಮಾಕ್ಕೀಗ ಬಹುಭಾಷಾ ನಟ ಸಾಯಿಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ ಡೈಲಾಗ್ ಕಿಂಗ್ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟುಬಿಟ್ಟುಕೊಟ್ಟಿಲ್ಲ.

    ಕನ್ನಡದಲ್ಲಿ ‘ಆನೆ ಪಟಾಕಿ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗಿ, ‘ರಥಾವರ’, ‘ತಾರಕಾಸುರ’ ಸಿನಿಮಾಗಳನ್ನು ನಿರ್ದೇಶಿಸಿ ಯಶಸ್ವಿಯಾಗಿರುವ ನಿರ್ದೇಶಕ ಚಂದ್ರಶೇಖರ್‌ ಬಂಡಿಯಪ್ಪ ಚೌಕಿದಾರ ಸಿನಿಮಾದ ಸೂತ್ರಧಾರರು. ಈವರೆಗೆ ಸಿನಿಮಾದಲ್ಲಿ ಲವರ್‌ ಬಾಯ್‌ನಂತೆ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್‌ ಈ ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ, ಹಾಗಂತ ಚೌಕಿದಾರ್ ಕಂಪ್ಲೀಟ್ ಆಕ್ಷನ್ ಸಿನಿಮಾವಲ್ಲ. ಪಕ್ಕ ಫ್ಯಾಮಿಲಿ ಎಂಟರ್ ಟೈನರ್.

    ವಿದ್ಯಾ ಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ಚೌಕಿದಾರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್‌ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಜುಲೈ ಮೊದಲ ವಾರ ಚೌಕಿದಾರ್ ಸಿನಿಮಾ ಮುಹೂರ್ತ ನೆರವೇರಿಸಲು ಚಿತ್ರತಂಡ ಯೋಜನೆ ಹಾಕಿದೆ.

  • ಗಾಯಕಿಯಾದ ನಟಿ ಪ್ರೇಮಾ: ‘ವರಾಹಚಕ್ರಂ’ ಚಿತ್ರಕ್ಕೆ ನಟಿ ಗಾಯನ

    ಗಾಯಕಿಯಾದ ನಟಿ ಪ್ರೇಮಾ: ‘ವರಾಹಚಕ್ರಂ’ ಚಿತ್ರಕ್ಕೆ ನಟಿ ಗಾಯನ

    ಗೌರಿಪುತ್ರ ಖ್ಯಾತಿಯ ಮಂಜು ಮಸ್ಕಲ್ ಮಟ್ಟಿ  ಅವರ ನಿರ್ದೇಶನ‌ದ ಚಿತ್ರ ವರಾಹಚಕ್ರಂ. ಬೆಂಗಳೂರಿನಲ್ಲಿ ನಡೆಯುತ್ತಿರುವ ಅವ್ಯವಸ್ಥಿತ ಪದ್ದತಿಗಳು, ಸಂಸ್ಕ್ರತಿಯ ಕಗ್ಗೊಲೆ, ದೌರ್ಜನ್ಯಗಳ ಬಗ್ಗೆ  ಜಾಗೃತಿ ಮೂಡಿಸುವ ಕಥಾಹಂದರ ಒಳಗೊಂಡ  ವರಾಹಚಕ್ರಂ ಚಿತ್ರದಲ್ಲಿ ಹಿರಿಯನಟಿ ಪ್ರೇಮಾ (Prema), ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮನ್ವಂತರಿ ಮೂವಿ ಮೇಕರ್ಸ್ ಅಡಿಯಲ್ಲಿ ಸ್ನೇಹಿತರೆಲ್ಲ ಸೇರಿ  ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

    ಲಾವಣ್ಯ ಗ್ರೂಪ್, ನಾಗಭೂಷಣ್ ಎಂ.ರಾವ್, ಮಂಜುನಾಥ್ ಸಿ.ಗೌಡ್ರು, ಕೆ.ಎಸ್.ಜೈ ಸುರೇಶ್ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ವಿಶೇಷವಾಗಿ ನಾಯಕಿ ಪ್ರೇಮಾ ಅವರು ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ದೇಶಭಕ್ತಿ ಗೀತೆಯೊಂದನ್ನು ಹಾಡಿದ್ದಾರೆ. ವಾರಣಾಸಿಯಲ್ಲಿ  ಚಿತ್ರೀಕರಿಸಲಾಗಿರುವ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ಜನವರಿ 26ರ  ಗಣರಾಜ್ಯೋತ್ಸವದಂದು ನಡೆಯಲಿದೆ.

    ಶೂಟಿಂಗ್  ಟೈಮ್ ನಲ್ಲಿ ಸೆಟ್ ನಲ್ಲಿ ಪ್ರೇಮ ಅವರು  ಹಾಡುತ್ತಿರುವಾಗ  ಅದನ್ನು ಕೇಳಿದ ನಿರ್ದೇಶಕರು ಈ ಹಾಡನ್ನು ನೀವೆ ಹಾಡಿ ಎಂದು ಕೇಳಿದಾಗ ಅವರೂ ಒಪ್ಪಿ ಪ್ರೀತಿಯಿಂದ ಹಾಡಿಗೆ ದನಿಯಾಗಿದ್ದಾರೆ.  ನಾಯಕಿ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿರುವ ಪ್ರೇಮ ಅವರು ತುಂಬಾ ಅನುಭವಿ ಗಾಯಕಿಯ ಹಾಗೆ  ಹಾಡಿದ್ದು ವಿಷೇಶವಾಗಿತ್ತು.  ಅರ್ಜುನ್ ದೇವ  ಚಿತ್ರದ ನಾಯಕನಾಗಿ ನಟಿಸಿದ್ದು, ರಾಣಾ, ಇಮ್ರಾನ್ ಷರೀಫ್, ಆರ್ಯನ್, ಪ್ರತೀಕ್ ಗೌಡ ಉಳಿದ ಪಾತ್ರಗಳಲ್ಲಿ  ಕಾಣಿಸಿಕೊಂಡಿದ್ದಾರೆ.


    ಮಂಜುನಾಥ್ ಮಸ್ಕಲ್ ಮಟ್ಟಿ ಅವರೇ  ಚಿತ್ರದ ಕಥೆ, ಚಿತ್ರಕಥೆ  ಬರೆದು ನಿರ್ದೇಶನ‌ ಮಾಡಿದ್ದಾರೆ. ಡಾ.ವಿ. ನಾಗೇಂದ್ರಪ್ರಸಾದ್ ಅವರು  ಸಾಹಿತ್ಯ ರಚಿಸಿ, ಸಂಗೀತ ಸಂಯೋಜನೆಯ ಜೊತೆ ಪ್ರಮುಖ ಪಾತ್ರವನ್ನೂ ಸಹ ಮಾಡುತ್ತಿದ್ದಾರೆ. ಚಿತ್ರಕ್ಕೆ ಶರತ್‌ಕುಮಾರ್ ಜಿ. ಅವರ ಛಾಯಾಗ್ರಹಣ, ಭಾರ್ಗವ ಅವರ ಸಂಕಲನವಿದ್ದು, ಬೆಂಗಳೂರು, ನೆಲ್ಲೂರು, ಪೊಲ್ಲಾಚ್ಚಿ, ಭಟ್ಕಳ, ಹಿರಿಯೂರು ಸೇರಿ ಹಲವಾರು ಲೊಕೇಶನ್ ಗಳಲ್ಲಿ ವರಾಹಚಕ್ರಂ ಚಿತ್ರೀಕರಣ ನಡೆದಿದೆ.

  • ನಟ ಭಯಂಕರ: ಮೊದಲು ಟ್ರೈಲರ್ ನೋಡಿ, ಆನಂತರ ಸಿನಿಮಾ ನೋಡ್ಬೇಕೋ ಬೇಡ್ವೊ ಡಿಸೈಡ್ ಮಾಡಿ

    ನಟ ಭಯಂಕರ: ಮೊದಲು ಟ್ರೈಲರ್ ನೋಡಿ, ಆನಂತರ ಸಿನಿಮಾ ನೋಡ್ಬೇಕೋ ಬೇಡ್ವೊ ಡಿಸೈಡ್ ಮಾಡಿ

    ಬಿಗ್ ಬಾಸ್ ಖ್ಯಾತಿಯ ಪ್ರಥಮ್ (Pratham) ಇದೇ ಮೊದಲ ಬಾರಿಗೆ ನಿರ್ದೇಶಿಸಿ, ನಟಿಸಿರುವ ‘ನಟ ಭಯಂಕರ’ (Nata Bhayankara) ಚಿತ್ರದ ಟ್ರೈಲರ್ (Trailer) ರಿಲೀಸ್ ಆಗಿ ಕಳೆದ ಒಂದು ವಾರದಿಂದ ಟ್ರೆಂಡಿಂಗ್ ನಲ್ಲಿದೆ. ಈ ಸಿನಿಮಾದಲ್ಲಿ ಪ್ರಥಮ್ ಸಿಕ್ಕಾಪಟ್ಟೆ ಬಿಲ್ಡ್ ಅಪ್ ಕೊಟ್ಟಿದ್ದಾರೆ ಅಂತ ಅನಿಸಿದರೂ, ಅಲ್ಲೊಂದು ಪ್ರಾಮಾಣಿಕತೆ ಇರುವುದು ಎದ್ದು ಕಾಣುತ್ತದೆ. ಸಿನಿಮಾದಲ್ಲಿರುವ ಅಷ್ಟೂ ಪಾತ್ರ, ಪಾತ್ರಕ್ಕಿರುವ ಹಿನ್ನೆಲೆ ಮತ್ತು ತಾವು ಸಿನಿಮಾದ ಮೂಲಕ ಏನನ್ನು ಹೇಳಲು ಹೊರಟಿದ್ದೇವೆ ಎನ್ನುವುದನ್ನು ಸ್ಪಷ್ಟ ಮತ್ತು ನಿಖಿರವಾಗಿ ಟ್ರೈಲರ್ ನಲ್ಲಿ ಹೇಳಿದ್ದಾರೆ ಪ್ರಥಮ್.

    ಈ ಸಿನಿಮಾದ ಬಗ್ಗೆ ಅವರಲ್ಲಿ ಎಷ್ಟೊಂದು ಆತ್ಮವಿಶ್ವಾಸವಿದೆ ಎಂದರೆ, ‘ಜನರು ಮೊದಲು ಟ್ರೈಲರ್ ನೋಡಲಿ. ಆನಂತರ ಸಿನಿಮಾ ನೋಡಬೇಕೋ ಬೇಡವೋ ಡಿಸೈಡ್ ಮಾಡಲಿ’ ಎನ್ನುತ್ತಾರೆ ಪ್ರಥಮ. ಟ್ರೈಲರ್ ತುಣುಕುಗಳೇ ಹೇಳುವಂತೆ ನವರಸಗಳನ್ನು ಹಿಂಡಿ ಭಯಂಕರವಾದ ನಟನನ್ನು ಪ್ರೇಕ್ಷಕರು ಎದುರು ನಿಲ್ಲಿಸಲು ಹೊರಟಿದ್ದಾರೆ ಪ್ರಥಮ್. ಈ ಕಾರಣಕ್ಕಾಗಿ ನಟ ಭಯಂಕರ ನೋಡುಗರಿಗೆ ಇಷ್ಟವಾಗುತ್ತಾನೆ. ಇದನ್ನೂ ಓದಿ: ಹಸೆಮಣೆ ಏರಿದ ಸ್ಯಾಂಡಲ್‌ವುಡ್‌ ನಟ ವಸಿಷ್ಠ ಸಿಂಹ- ಹರಿಪ್ರಿಯಾ

    ಇದು ಪ್ರಥಮ್ ನಿರ್ದೇಶನದ ಚೊಚ್ಚಲು ಸಿನಿಮಾವಾದರೂ, ಹಾಗಂತ ಅನಿಸುವುದಿಲ್ಲ. ತಾವೇ ನಿರ್ದೇಶನ ಮಾಡಿ, ನಟಿಸುವ ದೊಡ್ಡದೊಂದು ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅದರಲ್ಲಿ ಗೆಲುವು ಕಾಣುವಂತಹ ಸಾಕಷ್ಟು ಅಂಶಗಳನ್ನು ಟ್ರೈಲರ್ ನಲ್ಲಿಯೇ ಬಿಟ್ಟುಕೊಟ್ಟಿದ್ದಾರೆ. ಟ್ರೈಲರ್ ನಲ್ಲಿ ಕಾಮಿಡಿ ಇದೆ. ಹಾರರ್ ಇದೆ, ಥ್ರಿಲ್ಲರ್ ಅಂಶಗಳಿವೆ. ಸಾಹಸವಿದೆ ಜೊತೆಗೆ ಅನುಭವಿ ಕಲಾವಿದರ ದಂಡೇ ತಾರಾಗಣದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ನಟ ಭಯಂಕರ ಸಿನಿಮಾ ನೋಡುಗರಿಗೆ ಭರ್ಜರಿ ಮನರಂಜನೆ ನೀಡುವುದು ಗ್ಯಾರಂಟಿ.

    ಈ ಸಿನಿಮಾದ ಟ್ರೈಲರ್ ಅನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಬಿಡುಗಡೆ ಮಾಡಿ, ಅವರೇ ಮೆಚ್ಚಿ ಮಾತನಾಡಿದ್ದರು. ಪ್ರಥಮ್ ಸಾಮರ್ಥ್ಯದ ಬಗ್ಗೆ ಕೊಂಡಾಡಿದ್ದರು. ಈಗ ಜನರೂ ಟ್ರೈಲರ್ ನೋಡಿ ಭರವಸೆಯ ಮಾತುಗಳನ್ನು ಆಡುತ್ತಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ಸಾಯಿಕುಮಾರ್ (Saikumar), ಶೋಭರಾಜ್, ಹಿರಿಯ ನಟ ಉಮೇಶ್, ಕುರಿ ಪ್ರತಾಪ್ ಸೇರಿದಂತೆ ಅನುಭವಿ ಕಲಾವಿದರೇ ಪಾತ್ರ ಮಾಡಿದ್ದಾರೆ.

    ಪ್ರಥಮ್ ಗೆ ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು. ನಿಹಾರಿಕಾ ಮತ್ತು ಚಂದನಾ ಈ ಸಿನಿಮಾದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಪ್ರಥಮ್ ಈ ಸಿನಿಮಾದಲ್ಲಿ ಫೈಟ್ ಅಷ್ಟೇ ಮಾಡಿಲ್ಲ, ಇಬ್ಬರು ಸುಂದರಿಯರ ಜೊತೆ ಡ್ಯುಯೆಟ್ ಕೂಡ ಹಾಡಿದ್ದಾರೆ. ಹಾಗಾಗಿ ಈ ಪ್ರಥಮ್ ನಿಜಕಕ್ಕ ನಟ ಭಯಂಕರ ಅನ್ನುವುದರಲ್ಲಿ ಎರಡು ಮಾತಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k