Tag: Sai Pallavi

  • ಬಿಕಿನಿ ಎಐ ಫೋಟೋ ವೈರಲ್ ಮಾಡಿದವ್ರಿಗೆ ಸಾಯಿಪಲ್ಲವಿ ಟಾಂಗ್

    ಬಿಕಿನಿ ಎಐ ಫೋಟೋ ವೈರಲ್ ಮಾಡಿದವ್ರಿಗೆ ಸಾಯಿಪಲ್ಲವಿ ಟಾಂಗ್

    ತ್ತೀಚೆಗೆ ನಟಿ ಸಾಯಿಪಲ್ಲವಿ (Sai Pallavi) ಬಿಕಿನಿ ಧರಿಸಿರುವ ಫೋಟೋ ವೈರಲ್ ಆಗಿತ್ತು. ಆರಂಭದಲ್ಲಿ ಅಸಲಿಯಾ ನಕಲಿಯಾ ಎಂಬ ಹುಡುಕಾಟದಲ್ಲಿದ್ದ ಫ್ಯಾನ್ಸ್‌ ಗೆ ಇದು ಎಐ ಫೋಟೋ ಅನ್ನೋದು ಬಳಿಕ ತಿಳಿದುಬಂತು. ಇದೀಗ ಇದೇ ವೈರಲ್ ಫೋಟೋ ವಿಚಾರಕ್ಕೆ ಸಾಯಿಪಲ್ಲವಿ ಪರೋಕ್ಷವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪ್ರವಾಸದ ಅಷ್ಟೂ ವೀಡಿಯೋ ಫೋಟೋಗಳನ್ನ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರು ಇಲ್ಲಿ ಕಾಣಿಸುವ ಫೋಟೋಗಳು ಎಐ ಫೋಟೋಗಳಲ್ಲ ಎಂದು ಹೇಳುವ ಮೂಲಕ ವೈರಲ್ ಮಾಡಿರೋ ಎಐ ಫೋಟೋ ದುರುಳರಿಗೆ ಟಾಂಗ್ ಕೊಟ್ಟಿದ್ದಾರೆ.

    ಸಾಯಿಪಲ್ಲವಿ ಇತ್ತೀಚೆಗೆ ತಂಗಿ ಪೂಜಾ ಹಾಗೂ ಕುಟುಂಬಸ್ಥರ ಜೊತೆ ಪ್ರವಾಸಕ್ಕೆ ತೆರಳಿದ್ರು. ಅಲ್ಲಿನ ಒಂದಷ್ಟು ಫೋಟೋಗಳನ್ನ ಪೂಜಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಕ್ಕ ಸಾಯಿಪಲ್ಲವಿ ಜೊತೆ ಪೂಜಾ ಬೀಚ್‌ನಲ್ಲಿ ಸಮಯ ಕಳೆದಿರುವ ಫೋಟೋಗಳನ್ನ ಹಂಚಿಕೊಂಡಿದ್ದು ಅಕ್ಕ, ತಂಗಿ ಇಬ್ಬರೂ ಈಜುಡುಗೆ ಧರಿಸಿರುವ ಫೋಟೋವನ್ನೂ ಹಂಚಿಕೊಂಡಿದ್ದರು. ಆದರೆ ಈಜುಡುಗೆಗೂ ಬಿಕಿನಿಗೂ ವ್ಯತ್ಯಾಸ ಇರುತ್ತೆ. ಇದೇ ಫೋಟೋಗಳನ್ನ ಇಟ್ಟುಕೊಂಡು ಸಾಯಿಪಲ್ಲವಿ ಬಿಕಿನಿ ಧರಿಸಿ ನಿಂತಿರುವಂತೆ ಎಐ ಫೋಟೋಗಳನ್ನ ಜನರೇಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿತ್ತು.

     

    View this post on Instagram

     

    A post shared by Sai Pallavi (@saipallavi.senthamarai)

    ಸಾಯಿಪಲ್ಲವಿ ಇದುವರೆಗೂ ಹೀಗೆ ಯಾವತ್ತೂ ಕಾಣಿಸ್ಕೊಂಡಿಲ್ಲ. ಹೀಗಾಗಿ ಕೆಲವರ ಅಸಮಾಧಾನಕ್ಕೆ ಕಾರಣವಾಗಿದ್ದರು. ಜೊತೆಗೆ ಸಾಯಿಪಲ್ಲವಿ ರಾಮಾಯಣದಲ್ಲಿ ಸೀತೆ ಪಾತ್ರ ಮಾಡುತ್ತಿರುವ ಬಗ್ಗೆಯೂ ಅದೇ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಟ್ರೋಲ್ ಮಾಡಲಾಗಿತ್ತು. ತಂತ್ರಜ್ಞಾನದ ದುರುಪಯೋಗಕ್ಕೆ ಬೇಸರಿಸಿಕೊಂಡ ಸಾಯಿಪಲ್ಲವಿ ಇದೀಗ ಏನನ್ನೂ ಹೇಳದೆ ಪ್ರವಾಸದ ನಿಜವಾದ ಚಿತ್ರಣ ಹೇಗಿತ್ತು ಅನ್ನೋದನ್ನ ಎಳೆ ಎಳೆಯಾಗಿ ದರ್ಶನ ಮಾಡಿಸಿದ್ದಾರೆ. ಇದ್ಯಾವ್ದೂ ಎಐ ಫೋಟೋಗಳಲ್ಲ ಅನ್ನೋದ್ರ ಮೂಲಕ ಸುಳ್ಳು ವದಂತಿ ಹಬ್ಬಿಸಿ ಸಾಯಿಪಲ್ಲವಿ ಬಗ್ಗೆ ಕೀಳರಿಮೆ ಮೂಡಿಸುವ ಪ್ರಯತ್ನದಲ್ಲಿದ್ದವರಿಗೆ ಟಾಂಗ್ ಕೊಟ್ಟಿದ್ದಾರೆ.

  • ತಂಗಿ ಮಾಡಿರೋ ತಪ್ಪಿಗೆ ಟ್ರೋಲ್ ಆದ ಸಾಯಿಪಲ್ಲವಿ

    ತಂಗಿ ಮಾಡಿರೋ ತಪ್ಪಿಗೆ ಟ್ರೋಲ್ ಆದ ಸಾಯಿಪಲ್ಲವಿ

    ಉಡುಗೆ ತೊಡುಗೆ ವಿಚಾರದಲ್ಲಿ ನಟಿ ಸಾಯಿಪಲ್ಲವಿ (Sai Pallavi) ಸಾಮಾನ್ಯರಲ್ಲಿ ಸಾಮಾನ್ಯ ಹುಡುಗಿಯಂತೆ ಇರೋದು ವಾಡಿಕೆ. ನೋ ಮೇಕಪ್, ನೋ ಗ್ಲ್ಯಾಮರ್ ಡ್ರೆಸ್ ಅನ್ನೋದು ಸಾಯಿಪಲ್ಲವಿ ಪಾಲಿಸಿ. ಆದರೆ ಇದೀಗ ತಂಗಿ ಮಾಡಿರೋ ಯಡವಟ್ಟಿನಿಂದ ಸಾಯಿಪಲ್ಲವಿ ಬಟ್ಟೆ ವಿಚಾರದಲ್ಲಿ ಟ್ರೋಲ್ ಆಗಿದ್ದಾರೆ. ಸಾಯಿಪಲ್ಲವಿ ಸ್ವಿಮ್‌ಸೂಟ್ ಧರಿಸಿರುವ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ.

    ಅನೇಕರು ಉದ್ದೇಶಪೂರ್ವಕವಾಗಿ ಸ್ವಿಮ್‌ಸೂಟ್ ಧರಿಸಿ ಫೋಟೋ ಪೋಸ್ಟ್ ಮಾಡುವಂತೆ ಸಾಯಿಪಲ್ಲವಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಲ್ಲ. ಸಾಯಿಪಲ್ಲವಿ ತಂಗಿ ಪೂಜಾ ಕಣ್ಣನ್ ಹಾಕಿರುವ ಪೋಸ್ಟ್ ಸಾಯಿಪಲ್ಲವಿಯನ್ನ ಇಣುಕಿ ನೋಡುವಂತೆ ಮಾಡಿದೆ. ಬೀಚ್‌ನಲ್ಲಿ ಅಕ್ಕ ಸಾಯಿಪಲ್ಲವಿ ತಂಗಿ ಪೂಜಾ ವೆಕೇಷನ್ ಎಂಜಾಯ್ ಮಾಡಿದ್ದು, ಇದರ ಕ್ಲೋಸ್‌ಅಪ್ ಫೋಟೋಗಳನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.ಇದನ್ನೂ ಓದಿ: ರೂಮರ್ ಬಾಯ್‍ಫ್ರೆಂಡ್ ಜೊತೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಮಂತಾ!

    ಫೋಟೋಗಳಲ್ಲಿ ಎಲ್ಲಿಯೂ ಸಾಯಿಪಲ್ಲವಿ ಮೈಕಾಣುವಂತೆ ಪೋಸ್ ನೀಡಿಲ್ಲ. ಇಷ್ಟಾದ್ರೂ ಟ್ರೋಲ್ ಆಗೋಕೆ ಕಾರಣ ಸಾಯಿಪಲ್ಲವಿ ಬೀಚ್‌ವೇರ್ ಅಥವಾ ಸ್ವಿಮ್‌ಸೂಟ್ ಧರಿಸಿದ್ದಾರೆ ಅನ್ನೋದು. ಗ್ಲ್ಯಾಮರ್ ಬಟ್ಟೆ ಇರಲಿ ಕೊನೆ ಪಕ್ಷ ಸ್ಲೀವ್‌ಲೆಸ್ ಡ್ರೆಸ್‌ನಲ್ಲೂ ಸಾಯಿಪಲ್ಲವಿ ಕಾಣಿಸಿಕೊಳ್ಳೋದು ವಿರಳ. ಆದರೆ ಬೀಚ್‌ನಲ್ಲಿ ಎಂಥಹ ಉಡುಗೆ ಧರಿಸಬೇಕೋ ಅಂಥಹ ಉಡುಗೆ ಧರಿಸಿದ್ದಾರೆ ಸಾಯಿಪಲ್ಲವಿ. ಇಷ್ಟಕ್ಕೇ ಸಾಯಿಪಲ್ಲವಿ ಫೋಟೋಗೆ ಕೆಟ್ಟ ಕಾಮೆಂಟ್‌ಗಳು ಬಂದಿದೆ. ಕಾಮೆಂಟ್ ಬಾಕ್ಸ್‌ನಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಆದರೆ ಇದು ಬೀಚ್‌ನಲ್ಲಿ ಸಾಮಾನ್ಯ ಉಡುಗೆಯಾಗಿದ್ದು ಇಷ್ಟಕ್ಕೇ ರಾಮಾಯಣದ ಸೀತೆ ಪಾತ್ರಧಾರಿ ಸಾಯಿಪಲ್ಲವಿಯನ್ನ ಗುರಿ ಮಾಡಿ ಕಾಮೆಂಟ್ ಮಾಡ್ತಿರೋದು ಖಂಡನೀಯ ಎಂಬ ಕಾಮೆಂಟ್ ಕೂಡ ಬಂದಿದೆ. ಒಟ್ನಲ್ಲಿ ತಂಗಿ ಮಾಡಿರೋ ಚಿಕ್ಕ ತಪ್ಪಿಗೆ ಅಕ್ಕ ಸಾಯಿಪಲ್ಲವಿ ದಂಡ ತೆರುವ ಪ್ರಸಂಗ ನಡೆದಿದೆ.

  • ಯಶ್ ನಟನೆಯ ರಾಮಾಯಣ-2 ಚಿತ್ರಕ್ಕೆ VFX ಗಾಗಿ ಗಾಡ್ಜಿಲ್ಲ ತಂತ್ರಜ್ಞರು ಎಂಟ್ರಿ

    ಯಶ್ ನಟನೆಯ ರಾಮಾಯಣ-2 ಚಿತ್ರಕ್ಕೆ VFX ಗಾಗಿ ಗಾಡ್ಜಿಲ್ಲ ತಂತ್ರಜ್ಞರು ಎಂಟ್ರಿ

    ಣಬೀರ್ ಕಪೂರ್, ಯಶ್ (Yash) ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ, ನಿತೇಶ್ ತಿವಾರಿ ಅವರ ನಿರ್ದೇಶನದ ರಾಮಾಯಣ 2 (Ramayana 2) ಚಿತ್ರವು ಪ್ರೀ-ಪ್ರೊಡಕ್ಷನ್ ನಿರ್ಮಾಣ ಹಂತದಲ್ಲಿದೆ. ರಾಮಾಯಣ-2 ಸಿನಿಮಾದ ವಿಎಫ್‌ಎಕ್ಸ್ ಕುರಿತು ಹೊಸ ಸುದ್ದಿಯೊಂದು ಸಖತ್ ಸುದ್ದಿ ಮಾಡ್ತಿದೆ. ರಾಮಾಯಣ ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆದ ಬಳಿಕ ಸಿನಿಮಾ ಮೇಲೆ ಮತ್ತಷ್ಟು ಕ್ಯೂರಿಯಾಸಿಟಿ ಬಿಲ್ಡ್ ಆಗಿದೆ. ಇದೀಗ ಈ ಸಿನಿಮಾದ ಪಾರ್ಟ್-2 ಬಗ್ಗೆ ಬಿಗ್ ಅಪ್ ಡೇಟ್ ಸಿಕ್ಕಿದೆ.

    ರಾಮಾಯಣ-2 ಸಿನಿಮಾದ ವಿಎಫ್‌ಎಕ್ಸ್‌ (VFX) ಸುಪ್ರವೈಸ್ ಮಾಡಲಿದೆ ಹಾಲಿವುಡ್ ಟೀಂ. ಗಾಡ್ಜಿಲ್ಲಾ ಎಕ್ಸ್ ಕಾಂಗ್ ಹಾಗೂ ವೆನಮ್ ಸಿನಿಮಾದಲ್ಲಿ ವಿಡಿಯೋ ಗ್ರಾಫಿಕ್ಸ್ ನಲ್ಲಿ ಕೆಲಸ ಮಾಡಿದ ತಂಡ ರಾಮಾಯಣ-2 ಚಿತ್ರದ VFX ತಂಡದ ಮೇಲ್ವಿಚಾರಣೆಯನ್ನ ವಹಿಸಿಕೊಂಡಿದೆ. ಈ ಬೆಳವಣಿಗೆ ರಾಮಾಯಣ ತಂಡಕ್ಕೆ ಮತ್ತಷ್ಟು ಬಲ ನೀಡಿದೆ. ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಆಗಾಗ ಚಿತ್ರದ ಬಜೆಟ್ ಹಾಗೂ ತಂಡದ ಬಗ್ಗೆ ಹೊಸ ಹೊಸ ಅಪ್ಡೇಟ್ ಕೊಡುತ್ತಿರುವುದು ಫ್ಯಾನ್ಸ್ ಕೌತುಕತೆ ಇಮ್ಮಡಿಗೊಳ್ಳೋಕೆ ಕಾರಣವಾಗ್ತಿದೆ. ಇದನ್ನೂ ಓದಿ: ಮದ್ವೆಯಲ್ಲಿ ಅನುಶ್ರೀ ಉಟ್ಟ ಸೀರೆಯ ಬೆಲೆ 2.5 ಲಕ್ಷ ಅಲ್ಲ ಕೇವಲ 2,700 ರೂ.

    ರಾಮಾಯಣ ಪಾರ್ಟ್-2 ಸಿನಿಮಾದ ವಿಎಫ್ ಎಕ್ಸ್ ಮೇಲ್ವಿಚಾರಣೆಯನ್ನ ಹಾಲಿವುಡ್ ತಂತ್ರಜ್ಞ ಕ್ಸೇವಿಯರ್ ಬರ್ನಾಸ್ಕೋನಿ ನಿರ್ವಹಿಸಲಿದ್ದಾರೆ. ಫಸ್ಟ್ ಲುಕ್ ನಿಂದಲೇ ಅಟ್ರ್ಯಾಕ್ಟ್ ಮಾಡಿರುವ ರಾಮಾಯಣ ಸಿನಿಮಾದ ಪಾರ್ಟ್-1 2026ರ ದೀಪಾವಳಿಗೆ ವಿಶ್ವದಾದ್ಯಂತ ತೆರೆಗೆ ಬರಲಿದೆ. ಇನ್ನು ಪಾರ್ಟ್-2 ಸಿನಿಮಾ 2027ರ ದೀಪಾವಳಿ ಹಬ್ಬದ ವಿಶೇಷವಾಗಿ ರಿಲೀಸ್ ಆಗಲಿದೆ. ಈಗ ಸಿಕ್ಕಿರುವ ಹೊಸ ಅಪ್ಡೇಟ್ ಕೇಳಿ ರಾಕಿಭಾಯ್ ಫ್ಯಾನ್ಸ್ ಸಂಭ್ರಮ ಪಡುತ್ತಿದ್ದಾರೆ.

     

  • ರಾಮಾಯಣ ಫಸ್ಟ್ ಟೈಟಲ್ ಟೀಸರ್ ರಿಲೀಸ್: ರಾಮ-ರಾವಣನ ಆರ್ಭಟ ಶುರು

    ರಾಮಾಯಣ ಫಸ್ಟ್ ಟೈಟಲ್ ಟೀಸರ್ ರಿಲೀಸ್: ರಾಮ-ರಾವಣನ ಆರ್ಭಟ ಶುರು

    ಶ್ (Yash) ನಟಿಸಿ ನಿರ್ಮಿಸುತ್ತಿರುವ ಮಹಾತ್ವಾಕಾಂಕ್ಷೆಯ ಪ್ರಾಜೆಕ್ಟ್ ರಾಮಾಯಣ (Ramayana) ಚಿತ್ರದ ಅಫಿಷಿಯಲ್ ಫಸ್ಟ್‌ ಟೈಟಲ್‌ ಟೀಸರ್‌ ರಿಲೀಸ್‌ ಆಗಿದೆ. ರಾಮಾಯಣ ಫಸ್ಟ್‌ ಟೈಟಲ್‌ ಟೀಸರ್‌ ಕೊನೆಗೂ ರಿಲೀಸ್‌ ಆಗಿದೆ. ಟೀಸರ್‌ನಲ್ಲಿ ರಾಮ-ರಾವಣ ಆರ್ಭಟ ಶುರುವಾಗಿದೆ.

    ರಾಮಾಯಣ ಫಸ್ಟ್‌ ಟೈಟಲ್‌ ಟೀಸರ್‌ ಅನ್ನು ರಾಕಿಂಗ್‌ ಸ್ಟಾರ್‌ ಯಶ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹತ್ತು ವರ್ಷಗಳ ಆಕಾಂಕ್ಷೆ. ಸಾರ್ವಕಾಲಿಕ ಶ್ರೇಷ್ಠ ಮಹಾಕಾವ್ಯವನ್ನು ಜಗತ್ತಿಗೆ ತರುವ ನಿರಂತರ ದೃಢನಿಶ್ಚಯ. ರಾಮಾಯಣವನ್ನು ಅತ್ಯಂತ ಗೌರವದಿಂದ ಪ್ರಸ್ತುತಪಡಿಸಲು ವಿಶ್ವದ ಕೆಲವು ಅತ್ಯುತ್ತಮ ವ್ಯಕ್ತಿಗಳು ಒಟ್ಟಾಗಿ ಶ್ರಮಿಸಿದ್ದಾರೆ. ಅದರ ಫಲಿತಾಂಶ ಇದು ಎಂದು ಯಶ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 5 ದಿನಕ್ಕೆ 10 ಕೋಟಿ – ಇದು ಅಕ್ಷಯ್‌ ಕುಮಾರ್‌ ಕಾಲ್‌ ಶೀಟ್!

    ಆರಂಭಕ್ಕೆ ಸ್ವಾಗತ. ರಾಮ v/s ರಾವಣನ ಅಮರ ಕಥೆಯನ್ನು ಆಚರಿಸೋಣ. ನಮ್ಮ ಸತ್ಯ. ನಮ್ಮ ಇತಿಹಾಸ ಎಂದು ಯಶ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

    ಟಾಕ್ಸಿಕ್ ಹಾಗೂ ರಾಮಾಯಣ, ಎರಡೂ ಚಿತ್ರಗಳ ನಿರ್ಮಾಣ ಹಾಗೂ ನಟನೆಯಲ್ಲಿ ಯಶ್ ಬ್ಯುಸಿ ಇದ್ದಾರೆ. ಹೀಗಾಗಿ ಟೈಟ್ ಶೆಡ್ಯೂಲ್ ಶೂಟಿಂಗ್ ಮುಗಿಸಿ ಇದೀಗ ಅಲ್ಪ ಸಮಯದಲ್ಲಿ ಪ್ರವಾಸಕ್ಕೆಂದು ಯಶ್‌ ಹೋಗಿದ್ದಾರೆ. ಇದನ್ನೂ ಓದಿ: ರಾಮಾಯಣ ಫಸ್ಟ್ ಗ್ಲಿಮ್ಸ್ ನೋಡಲು ತಯಾರಾಗಿ ಎಂದ ಯಶ್

    ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ರಣಬೀರ್‌ ಕಪೂರ್‌, ಸೀತೆ ಪಾತ್ರದಲ್ಲಿ ಸಾಯಿಪಲ್ಲವಿ ಹಾಗೂ ರಾವಣನ ಪಾತ್ರದಲ್ಲಿ ಕೆಜಿಎಫ್‌ ಸ್ಟಾರ್‌ ಯಶ್‌ ಕಾಣಿಸಿಕೊಂಡಿದ್ದಾರೆ.

  • ಯಶ್‌ ನಟನೆಯ ರಾಮಾಯಣ ಚಿತ್ರದ ಫಸ್ಟ್‌ ಗ್ಲಿಂಪ್ಸ್ WAVES ಶೃಂಗಸಭೆಯಲ್ಲಿ ರಿಲೀಸ್‌

    ಯಶ್‌ ನಟನೆಯ ರಾಮಾಯಣ ಚಿತ್ರದ ಫಸ್ಟ್‌ ಗ್ಲಿಂಪ್ಸ್ WAVES ಶೃಂಗಸಭೆಯಲ್ಲಿ ರಿಲೀಸ್‌

    – ರಾವಣನ ಅವತಾರದಲ್ಲಿ ರಾಕಿಂಗ್‌ ಸ್ಟಾರ್‌ನ ಲುಕ್‌

    ‘ರಾಕಿಂಗ್ ಸ್ಟಾರ್’ ಯಶ್ ಅಭಿಮಾನಿಗಳು (Yash Fans) ಕಳೆದ 3 ವರ್ಷಗಳಿಂದ ಕಾಯುತ್ತಿದ್ದು, ಮುಂದಿನ ವರ್ಷ ʻಟಾಕ್ಸಿಕ್ʼ ಮತ್ತು ʻರಾಮಾಯಣʼ ಸಿನಿಮಾಗಳ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ʻಟಾಕ್ಸಿಕ್ʼ 2026ರ ಮಾರ್ಚ್ 19ಕ್ಕೆ ಬಿಡುಗಡೆಯಾಗಲಿದ್ದು, ʻರಾಮಾಯಣʼ ಪಾರ್ಟ್‌-1 ದೀಪಾವಳಿಯ ಹೊತ್ತಿಗೆ ತೆರೆಯ ಮೇಲೆ ಬರಲಿದೆ. ಯಶ್‌ ನಟನೆಯ ಈ ಎರಡೂ ದಿನಿಮಾಗಳು ಭರ್ಜರಿ ಹಿಟ್‌ ಆಗಲಿದೆ, ಜೊತೆಗೆ ಯಶ್ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲಿವೆ ಎಂದು ನಿರೀಕ್ಷಿಸಲಾಗಿದೆ.

    ಈ ನಡುವೆ ಚಿತ್ರತಂಡದಿಂದ ರಾಮಾಯಣ ಪಾರ್ಟ್‌-1 (Ramayana Part-1) ಚಿತ್ರದ ಫಸ್ಟ್‌ ಗ್ಲಿಂಪ್ಸ್‌ ಮುಂದಿನ ಮೇ 1 ರಿಂದ 4ರ ವರೆಗೆ ನಡೆಯಲಿರುವ ವಿಶ್ವ ಆಡಿಯೋ ವಿಷುಯಲ್ & ಎಂಟರ್ಟೈನ್ಮೆಂಟ್ ಶೃಂಗಸಭೆ (ಅಕಾ WAVES ಶೃಂಗಸಭೆ)ಯಲ್ಲಿ ರಿಲೀಸ್‌ ಆಗಲಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ತಮನ್ನಾಗೆ ಬಿಗ್ ಚಾನ್ಸ್- ಬಾಲಿವುಡ್‌ನ ಹೊಸ ಚಿತ್ರಕ್ಕೆ ಮಿಲ್ಕಿ ಬ್ಯೂಟಿ ನಾಯಕಿ

    ಬಾಲಿವುಡ್‌ ಸ್ಟಾರ್ ರಣಬೀರ್ ಕಪೂರ್‌ ರಾಮನ ಪಾತ್ರದಲ್ಲಿ ನಟಿಸಿದ್ದು, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ, ಸ್ಯಾಂಡಲ್‌ವುಡ್‌ನ ರಾಕಿಂಗ್‌ಸ್ಟಾರ್‌ ಯಶ್‌ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಲಾರಾ ದತ್ತ, ಸನ್ನಿ ಡಿಯೋಲ್ ಮತ್ತು ಇಂದಿರಾ ಕೃಷ್ಣ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕಾಗಿ ರಣಬೀರ್‌ ಕಪೂರ್‌ ಅಭಿಮಾನಿಗಳೂ ಸಹ ಕಾತುರದಿಂದ ಕಾಯ್ತಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ಯಕ್ಷಗಾನ ‘ವೀರ ಚಂದ್ರಹಾಸ’ ಚಿತ್ರದ ಮೂಲಕ ಹೊಸ ಪ್ರಯೋಗ: ರವಿ ಬಸ್ರೂರು

    ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾವು 2026ರ ಮಾರ್ಚ್ 19ರಂದು ತೆರೆಗೆ ಬರಲಿದೆ. ಇದು ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾವಾಗಿದ್ದು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಕೆವಿಎನ್ ಸಂಸ್ಥೆ ಮತ್ತು ಯಶ್ ಜಂಟಿಯಾಗಿ ಈ ಸಿನಿಮಾಕ್ಕೆ ಹಣ ಹಾಕಿದ್ದಾರೆ. ಇದರ ಜೊತೆಗೆ ನಿತೇಶ್ ತಿವಾರಿ ಅವರ ‘ರಾಮಾಯಣ: ಪಾರ್ಟ್ 1’ ಸಿನಿಮಾದಲ್ಲೂ ಯಶ್ ನಟಿಸಲಿದ್ದು, ಅದರಲ್ಲಿನ ರಾವಣನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರ ಕೂಡ 2026ರ ದೀಪಾವಳಿ ಹಬ್ಬದ ಸಮಯದಲ್ಲಿ ತೆರೆಗೆ ಬರಲಿದೆ. ಇದನ್ನೂ ಓದಿ: ಉಗ್ರರ ದಾಳಿ ಸ್ಥಳದಲ್ಲೇ ಮಾರ್ಟಿನ್ ಸಿನಿಮಾ ಶೂಟಿಂಗ್ ನಡೆದಿತ್ತು, ಆಗ ಸೆಕ್ಯೂರಿಟಿ ಚೆನ್ನಾಗಿತ್ತು: ಧ್ರುವ ಸರ್ಜಾ

  • ಶೋಭಿತಾಗೆ ಪ್ರೀತಿಯಿಂದ ನಾಗಚೈತನ್ಯ ಏನೆಂದು ಕರೆಯುತ್ತಾರೆ ಗೊತ್ತಾ?- ರಿವೀಲ್ ಮಾಡಿದ ನಟ

    ಶೋಭಿತಾಗೆ ಪ್ರೀತಿಯಿಂದ ನಾಗಚೈತನ್ಯ ಏನೆಂದು ಕರೆಯುತ್ತಾರೆ ಗೊತ್ತಾ?- ರಿವೀಲ್ ಮಾಡಿದ ನಟ

    ತೆಲುಗಿನ ನಟ ನಾಗಚೈತನ್ಯ ನಟನೆಯ ‘ತಾಂಡೇಲ್’ (Thandel) ಸಿನಿಮಾ ಇದೇ ಫೆ.7ರಂದು ರಿಲೀಸ್‌ಗೆ ಸಜ್ಜಾಗಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ವೇಳೆ, ಪತ್ನಿ ಶೋಭಿತಾ (Sobhita Dhulipala) ಪ್ರೀತಿಯಿಂದ ಯಾವ ಅಡ್ಡ ಹೆಸರಿನಿಂದ ಕರೆಯುತ್ತಾರೆ ಎಂದು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

    ‘ತಾಂಡೇಲ್’ ಸಿನಿಮಾದ ಸಾಂಗ್ಸ್ ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲಿ ‘ಬುಜ್ಜಿ ತಲ್ಲಿ’ ಹಾಡಿಗೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರದಲ್ಲಿ ನಾಯಕಿ ಸಾಯಿ ಪಲ್ಲವಿಗೆ (Sai Pallavi) ನಾಗಚೈತನ್ಯ (Naga Chaitanya) ಬುಜ್ಜಿ ತಲ್ಲಿ ಎಂದು ಕರೆಯುತ್ತಾರೆ. ಇದೇ ಹೆಸರನ್ನು ಪತ್ನಿಗೂ ಕರೆಯುವ ವಿಚಾರವನ್ನು ಸಂದರ್ಶನದಲ್ಲಿ ನಟ ರಿವೀಲ್ ಮಾಡಿದ್ದಾರೆ.

    ಶೋಭಿತಾಗೆ ‘ಬುಜ್ಜಿ ತಲ್ಲಿ’ ಎಂದು ನಟ ಅಡ್ಡ ಹೆಸರು ಇಟ್ಟಿರೋದಾಗಿ ಹೇಳುವ ಮೂಲಕ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಪತ್ನಿಗೆ ಮುದ್ದಾಗಿ ಏನೆಂದು ಕರೆಯುತ್ತಾರೆ ಎಂದು ತಿಳಿಸಿದ್ದಾರೆ.

    ಇನ್ನೂ ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿಯೂ ಶೋಭಿತಾ ಜೊತೆ ಸಿನಿಮಾದಲ್ಲಿಯೂ ಜೋಡಿಯಾಗಿ ಕಾಣಿಸಿಕೊಳ್ಳುತ್ತೇವೆ ಎಂದು ನಾಗಚೈತನ್ಯ ತಿಳಿಸಿದ್ದಾರೆ.

  • ‘ಅಮರನ್’ ಸಕ್ಸಸ್ ಬಳಿಕ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡ ಸಾಯಿ ಪಲ್ಲವಿ

    ‘ಅಮರನ್’ ಸಕ್ಸಸ್ ಬಳಿಕ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡ ಸಾಯಿ ಪಲ್ಲವಿ

    ‘ಫಿದಾ’ ಬೆಡಗಿ ಸಾಯಿ ಪಲ್ಲವಿ (Sai Pallavi) ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಿವಕಾರ್ತಿಕೇಯನ್ ಜೊತೆಗಿನ ‘ಅಮರನ್’ (Amaran) ಸಿನಿಮಾ ಸಕ್ಸಸ್ ಕಂಡ್ಮೇಲೆ ತೆಲುಗಿನಲ್ಲಿ ಮಹಿಳಾ ಪ್ರಧಾನ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ಫ್ಯಾನ್ಸ್ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ಸೈಫ್ ಅಲಿ ಖಾನ್‌ಗೆ ಚಾಕು ಇರಿದಿದ್ದ ಆರೋಪಿ ಅರೆಸ್ಟ್

    ಆಮೀರ್ ಖಾನ್ ಪುತ್ರನ ಜೊತೆ ಮತ್ತು ‘ರಾಮಾಯಣ’ ಸಿನಿಮಾ ಕೆಲಸಗಳ ನಡುವೆ ವಿಭಿನ್ನ ಎನಿಸೋ ಮಹಿಳಾ ಪ್ರಧಾನ ಚಿತ್ರ ಒಪ್ಪಿಕೊಂಡಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಕಾರ್ತಿಕ್ ತೀಡಾ ಜೊತೆ ನಟಿ ಕೈಜೋಡಿಸಿದ್ದಾರೆ.

    ಈ ಹಿಂದೆ ‘ಗಾರ್ಗಿ’ ಚಿತ್ರದಲ್ಲಿ ಸಾಯಿ ಪಲ್ಲವಿ ಮಹಿಳಾ ಪ್ರಧಾನ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದರು. ಈಗ ಹೊಸ ಸಿನಿಮಾದಲ್ಲೂ ಡಿಫರೆಂಟ್ ಆಗಿರುವ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಈ ಸಿನಿಮಾ ಬಗ್ಗೆ ಅಧಿಕೃತ ಅನೌನ್ಸ್ಮೆಂಟ್‌ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

    ಇನ್ನೂ ನಾಗಚೈತನ್ಯ ಜೊತೆಗಿನ 2ನೇ ಸಿನಿಮಾ ತಾಂಡೇಲ್ ಇದೇ ಫೆ.7ರಂದು ರಿಲೀಸ್ ಆಗಲಿದೆ. ಈಗಾಗಲೇ ಸಿನಿಮಾದ ಸಾಂಗ್ಸ್ ಪ್ರೇಕ್ಷಕರ ಮನ ಗೆದ್ದಿದೆ.

  • ಶಿವಕಾರ್ತಿಕೇಯನ್‌, ಸಾಯಿ ಪಲ್ಲವಿ ಸಿನಿಮಾ ನೋಡಿ ಮ್ಯಾಜಿಕಲ್ ಎಂದ ಜಾನ್ವಿ ಕಪೂರ್

    ಶಿವಕಾರ್ತಿಕೇಯನ್‌, ಸಾಯಿ ಪಲ್ಲವಿ ಸಿನಿಮಾ ನೋಡಿ ಮ್ಯಾಜಿಕಲ್ ಎಂದ ಜಾನ್ವಿ ಕಪೂರ್

    ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಹಿಂದಿ ಮಾತ್ರವಲ್ಲೇ ಸೌತ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಇದರ ನಡುವೆ ಶಿವಕಾರ್ತಿಕೇಯನ್ ನಟನೆಯ ಅಮರನ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಮ್ಯಾಜಿಕಲ್ ಸಿನಿಮಾ ಎಂದು ಕೊಂಡಾಡಿದ್ದಾರೆ. ಇದನ್ನೂ ಓದಿ:BBK 11: ‘ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆ ಯಾವಾಗ?- ಇಲ್ಲಿದೆ ಅಪ್‌ಡೇಟ್

    ಶಿವಕಾರ್ತಿಕೇಯನ್, ಸಾಯಿ ಪಲ್ಲವಿ (Sai Pallavi) ನಟನೆಯ ‘ಅಮರನ್’ (Amaran) ಸಿನಿಮಾ ವೀಕ್ಷಿಸಿದ ಜಾನ್ವಿ ಕಪೂರ್ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಚಿತ್ರದ ಕುರಿತು ಬರೆದುಕೊಂಡಿದ್ದಾರೆ. ಸಿನಿಮಾ ನೋಡೋದು ತಡವಾಗಿದೆ. ಆದರೆ ಇದೊಂದು ಮ್ಯಾಜಿಕಲ್ ಸಿನಿಮಾ ಎಂದಿದ್ದಾರೆ. ಈ ವರ್ಷವನ್ನು ಈ ಸಿನಿಮಾ ನೋಡಿ ಕೊನೆಗೊಳಿಸಿದೆ ಎಂಬರ್ಥದಲ್ಲಿ ನಟಿ ಬರೆದುಕೊಂಡಿದ್ದಾರೆ. ಈ ವರ್ಷ ನೋಡಿದ ಹೃದಯಸ್ಪರ್ಶಿ ಸಿನಿಮಾ ಇದಾಗಿದೆ ಎಂದು ನಟಿ ಬರೆದುಕೊಂಡಿದ್ದಾರೆ.

    ಅಂದಹಾಗೆ, ಅಕ್ಟೋಬರ್ 31ರಂದು ‘ಅಮರನ್’ ಸಿನಿಮಾ ರಿಲೀಸ್ ಆಗಿತ್ತು. ಮೇಜತ್ ಮುಕುಂದ್ ವರದರಾಜನ್ ಪಾತ್ರದಲ್ಲಿ ಶಿವಕಾರ್ತಿಕೇಯನ್ (Sivakarthikeyan) ನಟಿಸಿದ್ದಾರೆ. ಅವರಿಗೆ ಸಾಯಿ ಪಲ್ಲವಿ ಜೋಡಿಯಾಗಿದ್ದಾರೆ.

    ಇನ್ನೂ ಜಾನ್ವಿ ಕಪೂರ್ ಅವರು ತೆಲುಗಿನ ‘ದೇವರ’ ಸಿನಿಮಾ ಬಳಿಕ ರಾಮ್ ಚರಣ್ ಜೊತೆಗಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವರುಣ್ ಧವನ್ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ತಮಿಳಿನ ಹೊಸ ಸಿನಿಮಾಗೂ ನಟಿ ಓಕೆ ಎಂದಿದ್ದಾರೆ. ಅದ್ಯಾವ ಸಿನಿಮಾ ಎಂದು ಕಾಯಬೇಕಿದೆ.

  • 3 ತಿಂಗಳ ಬಳಿಕ ತಂಗಿ ಮದುವೆಯ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ

    3 ತಿಂಗಳ ಬಳಿಕ ತಂಗಿ ಮದುವೆಯ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ

    ಸೌತ್ ಬ್ಯೂಟಿ ಸಾಯಿ ಪಲ್ಲವಿ (Sai Pallavi) ಅವರ ತಂಗಿ ಮದುವೆಯಾಗಿ 3 ತಿಂಗಳ ಬಳಿಕ ಮದುವೆ ಫೋಟೋವನ್ನು ಹಂಚಿಕೊಂಡಿದ್ದಾರೆ. ತಂಗಿ ಮದುವೆ ಬಗ್ಗೆ ಎಮೋಷನಲ್ ಪೋಸ್ಟ್ ಶೇರ್ ಮಾಡಿದ್ದಾರೆ. ಸಹೋದರಿ ಮದುವೆ ಫೋಟೋಸ್ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ತ್ರಿವಿಕ್ರಮ್‌ ವಿಚಾರಕ್ಕೆ ಕಾಲೆಳೆದ ಕಿಚ್ಚ- ನಾಚಿ ನೀರಾದ ಭವ್ಯಾ

     

    View this post on Instagram

     

    A post shared by Sai Pallavi (@saipallavi.senthamarai)

    ಎಲ್ಲ ವಿಷಯದಲ್ಲಿಯೂ ನಾನು ತಂಗಿ ಪೂಜಾಗೆ ಸಲಹೆ ನೀಡುತ್ತಿದ್ದೆ. ಆದರೆ ಮದುವೆ ವಿಷಯದಲ್ಲಿ ನಾನು ಯಾವುದೇ ಸಲಹೆ ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ನಾನು ಹೆದರಿದ್ದೆ, ಆದರೆ ಆ ಹೆದರಿಕೆ ಈಗ ಹೊರಟು ಹೋಗಿದೆ ಎಂದಿದ್ದಾರೆ. ತಂಗಿಯ ಮದುವೆ ಆಗಿ ಮೂರು ತಿಂಗಳಾಗಿದ್ದು, ಒಂದು ಬಾರಿಯೂ ಸಹ ನನ್ನ ತಂಗಿ ತಪ್ಪು ಮಾಡಿದಳು, ಅಥವಾ ನಾನು ಆಕೆಗೆ ಮಾರ್ಗದರ್ಶನ ಮಾಡಲಿಲ್ಲ ಎಂಬ ಅಳುಕೇ ನನಗೆ ಮೂಡಿಲ್ಲ ಎಂದಿದ್ದಾರೆ ಸಾಯಿ ಪಲ್ಲವಿ.

     

    View this post on Instagram

     

    A post shared by Sai Pallavi (@saipallavi.senthamarai)

    ಅಂದಹಾಗೆ, ಬಹುಕಾಲದ ಗೆಳೆಯ ವಿನೀತ್ ಶಿವಕುಮಾರ್ ಜೊತೆ ಸೆಪ್ಟೆಂಬರ್‌ನಲ್ಲಿ ಪೂಜಾ ಮದುವೆಯಾದರು. ಅವರು ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಸಾಯಿ ಪಲ್ಲವಿಯಂತೆ ಪೂಜಾಗೆ ಸಕ್ಸಸ್ ಸಿಗಲಿಲ್ಲ.

    ಇನ್ನೂ ರಣ್‌ಬೀರ್ ಕಪೂರ್ (Ranbir Kapoor) ಜೊತೆ ‘ರಾಮಾಯಣ’, ನಾಗ ಚೈತನ್ಯ ಜೊತೆ ‘ತಾಂಡೇಲ್’, ಆಮೀರ್ ಖಾನ್ ಪುತ್ರನ ಜೊತೆ ಬಾಲಿವುಡ್ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಸಾಯಿ ಪಲ್ಲವಿ ಕೈಯಲ್ಲಿವೆ.

  • ವಾರಣಾಸಿ ಕಾಶಿ ವಿಶ್ವನಾಥ ಸನ್ನಿಧಿಯಲ್ಲಿ ಸಾಯಿ ಪಲ್ಲವಿ

    ವಾರಣಾಸಿ ಕಾಶಿ ವಿಶ್ವನಾಥ ಸನ್ನಿಧಿಯಲ್ಲಿ ಸಾಯಿ ಪಲ್ಲವಿ

    ಸೌತ್ ಬ್ಯೂಟಿ ಸಾಯಿ ಪಲ್ಲವಿ (Sai Pallavi) ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ವಾರಣಾಸಿಗೆ ಭೇಟಿ ನೀಡಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನಕ್ಕೆ (Kashi Vishwanath Temple) ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಪತ್ನಿ ಅವಿವ ಜೊತೆ ಅಭಿಷೇಕ್ ಅಂಬರೀಶ್ ಮಸ್ತ್ ಫೋಟೋಶೂಟ್

    ತೆಲುಗು ಮತ್ತು ಬಾಲಿವುಡ್ (Bollywood) ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಾಯಿ ಪಲ್ಲವಿ ಇಂದು (ಡಿ.23) ವಾರಣಾಸಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ (Kashi Vishwanath Temple) ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ದೇವರ ಸನ್ನಿಧಿಯಲ್ಲಿ ಕೆಲ ಕಾಲ ಸಮಯ ಕಳೆದಿದ್ದಾರೆ. ನಟಿ ವಾರಣಾಸಿಗೆ ಭೇಟಿ ಕೊಟ್ಟಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

    ಅಂದಹಾಗೆ, ನಾಗಚೈತನ್ಯ ಜೊತೆಗಿನ ‘ತಾಂಡೇಲ್’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ರಿಲೀಸ್ ಆಗಲಿದೆ. ರಣ್‌ಬೀರ್ ಕಪೂರ್‌ಗೆ ಸೀತೆಯಾಗಿ ‘ರಾಮಾಯಣ’ ಸಿನಿಮಾದಲ್ಲಿ ಸಾಯಿ ಪಲ್ಲಿವಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್ ಅಬ್ಬರಿಸಲಿದ್ದಾರೆ.