Tag: sahitya sammelana

  • ಮಂಡ್ಯ| ಮೂರು ದಿನಗಳ ಅಕ್ಷರ ಜಾತ್ರೆಗೆ ತೆರೆ

    ಮಂಡ್ಯ| ಮೂರು ದಿನಗಳ ಅಕ್ಷರ ಜಾತ್ರೆಗೆ ತೆರೆ

    ಮಂಡ್ಯ: ಸಾಲು ಸಾಲು ಗೊಂದಲ, ವಿವಾದಗಳಿಂದ ಸಾಕಷ್ಟು ಸುದ್ದಿಯಾಗಿದ್ದ ಮಂಡ್ಯದ ಸಾಹಿತ್ಯ ಸಮ್ಮೇಳನ (Mandya Kannada Sahitya Sammelana) ಸಂಪನ್ನವಾಗಿದೆ. ಮೂರು ದಿನಗಳ ಕಾಲ ಸಕ್ಕರೆನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವರ್ಣರಂಜಿತ ತೆರೆ ಬಿದ್ದಿದೆ. ಮೂರು ದಿನದ ನುಡಿ ಜಾತ್ರೆ, ದಾಖಲೆಯ ಜನ ಜಾತ್ರೆಯೊಂದಿಗೆ ಯಶಸ್ವಿಯಾಯ್ತು.

    ಮಂಡ್ಯದ ಸಾಹಿತ್ಯ ಸಮ್ಮೇಳನಕ್ಕೆ ಜನ ಬರ್ತಾರಾ? ಸಾಕಷ್ಟು ಗೊಂದಲಗಳ ನಡುವೆ ಸಮ್ಮೇಳನ ಯಶಸ್ವಿಯಾಗುತ್ತಾ? ಅನ್ನೋ ಚರ್ಚೆಗಳು ಆರಂಭದಿಂದಲೂ ಸಾಕಷ್ಟು ಸದ್ದು ಮಾಡಿತ್ತು. ಆದರೆ ಸಮ್ಮೇಳನಕ್ಕೆ ನಿರೀಕ್ಷೆಗೂ ಮೀರಿದ ಜನ ಸೇರುವ ಮೂಲಕ ಆ ಎಲ್ಲಾ ಚರ್ಚೆಗಳಿಗೆ ಮಂಡ್ಯ ಜನ ಉತ್ತರ ಕೊಟ್ಟಿದ್ದಾರೆ.

    ಮೊದಲ ದಿನದಿಂದ ಕೊನೆ ದಿನದವರೆಗೂ ಸಾಗರೋಪಾದಿಯಾಗಿ ಜನ ಸಮ್ಮೇಳನಕ್ಕೆ ಬರುವ ಮೂಲಕ ಸಮ್ಮೇಳನದ ಯಶಸ್ಸಿಗೆ ಕಾರಣವಾದ್ರು. ಜೊತೆಗೆ ಮೂರು ದಿನಗಳೂ ಕೂಡ ಯಾವುದೇ ಗೊಂದಲ, ಗದ್ದಲಕ್ಕೆ ಎಡೆ ಮಾಡಿಕೊಡದೆ ಹೊರಗಿನಿಂದ ಬಂದ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳಿಗೆ ಉತ್ತಮ ಆತಿಥ್ಯ ನೀಡುವಲ್ಲೂ ಸೈ ಎನಿಸಿಕೊಂಡರು.

    ಈ ಬಾರಿಯ ಸಮ್ಮೇಳನದಲ್ಲಿ ಹೊರನಾಡ ಕನ್ನಡಿಗರಷ್ಟೇ ಅಲ್ಲದೇ, ವಿದೇಶಿ ಕನ್ನಡಿಗರು ಕೂಡ ಭಾಗಿಯಾಗಿದರು. ಇದೇ ಮೊದಲ ಬಾರಿಗೆ ವಿದೇಶಿ ಕನ್ನಡಿಗರಿಗಾಗಿ ವಿಶೇಷ ಗೋಷ್ಠಿಯನ್ನೇ ಆಯೋಜನೆ ಮಾಡಲಾಗಿತ್ತು. ಇದೇ ಸಮ್ಮೇಳನದಲ್ಲಿ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಬೆಂಕಿ ಬಸಣ್ಣ ಅವರ ಸಂಪಾದಕತ್ವದಲ್ಲಿ ಮುದ್ರಿಸಿರುವ ವಿಶ್ವಕನ್ನಡ ಕೂಟಗಳ ಕೈಪಿಡಿ ಬಿಡುಗಡೆ ಮಾಡಲಾಯ್ತು. ಇದನ್ನೂ ಓದಿ: ಸಿ.ಟಿ ರವಿ ಸ್ವಾಗತಕ್ಕೆ ಬಂದಿದ್ದ 7 ಆಂಬುಲೆನ್ಸ್‌ಗಳ ವಿರುದ್ಧ ಎಫ್‍ಐಆರ್

    ಮೂರು ದಿನಗಳ ಸಮ್ಮೇಳನದಲ್ಲಿ 20ಕ್ಕೂ ಹೆಚ್ಚು ವಿಚಾರಗೋಷ್ಠಿ, ಕವಿಗೋಷ್ಠಿಗಳನ್ನು ಆಯೋಜಿಸಿ ಎಲ್ಲಾ ವರ್ಗದವರಿಗೂ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಯ್ತು. ಇದರೊಂದಿಗೆ ಈ ಬಾರಿಯ ಸಮ್ಮೇಳನದಲ್ಲಿ ಪುಸ್ತಕ ಮೇಳದ ಜೊತೆ ಜೊತೆಗೆ ಸ್ಥಳೀಯ ಹಾಗೂ ಖ್ಯಾತ ಕಲಾವಿದರು ನಡೆಸಿಕೊಟ್ಟ ನುಡಿ ಜಾತ್ರೆಯಲ್ಲಿ ಸ್ವರ ಯಾತ್ರೆ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಪ್ರಮುಖ ಆಕರ್ಷಣೀಯವಾಗಿತ್ತು.

    ಕೃಷಿ ಪ್ರಧಾನವಾದ ಮಂಡ್ಯ ಜಿಲ್ಲೆಯ ಸಮ್ಮೇಳನದಲ್ಲಿ ಕೃಷಿ ವಸ್ತು ಪ್ರದರ್ಶನ ಮತ್ತು ಮಾಹಿತಿ ಕೇಂದ್ರ ಕೂಡ ತೆರೆದು ರೈತರನ್ನ ಉತ್ತೇಜಿಸುವ ಪ್ರಯತ್ನ ಮಾಡಲಾಯಿತು. ಇದೇ ಮೊದಲ ಬಾರಿಗೆ ಅತೀ ಗಣ್ಯರಿಂದ ಹಿಡಿದು ಶ್ರೀ ಸಾಮಾನ್ಯನವರೆಗೂ ಒಂದೇ ಬಗೆಯ ಊಟೋಪಚಾರ ಮಾಡಲಾಗಿತ್ತು. ಸಮ್ಮೇಳನದ ಅಂಗವಾಗಿ ಮಂಡ್ಯ ನಗರವನ್ನ ವರ್ಣರಂಜಿತ ದೀಪಾಂಲಕಾರದಿಂದ ಸಿಂಗರಿಸಲಾಗಿತ್ತು. ಸಮಾರೋಪದ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೈಸೂರು ದಸರಾದಲ್ಲಿ ಮಾತ್ರ ನಡೆಯುತ್ತಿದ್ದ ಪೊಲೀಸ್ ಬ್ಯಾಂಡ್ ಗೆ ಜನ ಮನಸೋತರು.

    ಸಮ್ಮೇಳನದ ಸಮಾರೋಪ ಸಮಾರಂಭ ರಾಜಕೀಯ ಬದ್ಧ ವೈರಿಗಳ ಮುಖಾಮುಖಿಗೆ ಸಾಕ್ಷಿಯಾಯ್ತು. ಹೆಚ್‌ಡಿಕೆ ವೇದಿಕೆ ಏರುತ್ತಿದ್ದಂತೆ ಎದ್ದುನಿಂತಿದ್ದ ಚಲುವರಾಯಸ್ವಾಮಿ ಮುಂದೆಯೇ ಹೋದರೂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮಾತನಾಡಿಸದೇ ಮುಂದೆ ಸಾಗಿ ನಿಗದಿಯಾಗಿದ್ದ ಆಸನದಲ್ಲಿ ಕುಳಿತರು.

    ಸ್ವಾಗತದ ವೇಳೆ ಖುದ್ದು ಜಿಲ್ಲಾ ಮಂತ್ರಿಯಾದ ಚಲುವರಾಯಸ್ವಾಮಿಯವರೇ (Cheluvarayaswamy) ಹೆಚ್‌ಡಿಕೆಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಗಮನ ಸೆಳೆದರು. ನಂತರ ಭಾಷಣ ಮಾಡುವ ವೇಳೆ ಸಮ್ಮೇಳನ ಯಶಸ್ವಿಗೆ ಸಚಿವ ಚಲುವರಾಯಸ್ವಾಮಿ ಶ್ರಮ ಇದೆ ಎಂದು ಕುಮಾರಸ್ವಾಮಿ ಹೊಗಳಿದರು.

    ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳು:
    * ಕನ್ನಡ ಭಾಷಾ ಅಭಿವೃದ್ದಿ ಅಧಿನಿಯಮ- 2022 ಸಮಗ್ರ ಜಾರಿಗೆ ಒತ್ತಾಯ.
    * ಸರ್ಕಾರಿ ಕನ್ನಡ ಶಾಲೆಗೆ ಕಟ್ಟಡ, ವಾಚನಾಲಯ ಸೇರಿ ಮೂಲ ಸೌಕರ್ಯ ಕಲ್ಪಿಸಬೇಕು‌. ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಬೇಕು
    * ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸಬೇಕು.
    * ಧಾರವಾಡದಲ್ಲಿ ನಡೆಯಬೇಕಿದ್ದ ಸಮ್ಮೇಳನವನ್ನ ಶೀಘ್ರ ಮಾಡಬೇಕು.
    * ರಾಷ್ಟ್ರಕವಿ ಪ್ರಶಸ್ತಿಯನ್ನು  ಘೋಷಿಸಿಬೇಕು.

     

  • ಕನ್ನಡ ಸಾಹಿತ್ಯ ಸಮ್ಮೇಳನ: ಡಿ.20, 21 ಕ್ಕೆ ಮಂಡ್ಯ ಜಿಲ್ಲೆ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

    ಕನ್ನಡ ಸಾಹಿತ್ಯ ಸಮ್ಮೇಳನ: ಡಿ.20, 21 ಕ್ಕೆ ಮಂಡ್ಯ ಜಿಲ್ಲೆ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

    ಮಂಡ್ಯ: ಜಿಲ್ಲೆಯಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆ ಎರಡು ದಿನಗಳ ಕಾಲ ಜಿಲ್ಲೆಯ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

    ಮಂಡ್ಯ (Mandya) ಜಿಲ್ಲೆಯಲ್ಲಿ ಡಿ.20 ರಿಂದ ಡಿ.22ರವರೆಗೆ ಮೂರು ದಿನಗಳ ಕಾಲ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಡಿ.20 ಹಾಗೂ 21 ರಂದು ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ, ಆದೇಶಿಸಿದ್ದಾರೆ.ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ – ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಶೀಲನೆಗೆ ಮುಂದಾದ ಇಲಾಖೆ

    ಜಿಲ್ಲಾಧಿಕಾರಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆ ಗಣ್ಯರು, ನೋಂದಾಯಿತ ಪ್ರತಿನಿಧಿಗಳು ಮಂಡ್ಯಕ್ಕೆ ಬರಲಿದ್ದಾರೆ. ಅವರಿಗೆ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಕನ್ನಡದ ಐಕ್ಯತೆಯ ಸಂಕೇತವಾಗಿರುವ ನಮ್ಮ ಸಾಹಿತ್ಯ-ಸಂಸ್ಕೃತಿ-ಪರಂಪರೆಯನ್ನು ಬಿಂಬಿಸುವ ಹಾಗೂ ನಾಡು-ನುಡಿಯ ಬಗೆಗಿನ ಅಭಿಮಾನವನ್ನು ಮೂಡಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಉಪಾನ್ಯಾಸಕರು ಭಾಗವಹಿಸುವ ಮೂಲಕ ಸಾಹಿತ್ಯಾಭಿರುಚಿ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.

    ಕನ್ನಡ ನಾಡು ನುಡಿ ಬಗ್ಗೆ ವಿವಿಧ ಗೋಷ್ಠಿಗಳು ಇರುವುದರಿಂದ ಜ್ಞಾನಾರ್ಜನ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಡಿ.20 ಮತ್ತು 21 ರಂದು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಎರಡು ದಿನಗಳ ರಜೆ ಘೋಷಿಸಲಾಗಿದೆ. ಹಾಗಾಗಿ ಜಿಲ್ಲೆಯ ಸಮಸ್ತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು. ಸದರಿ ರಜೆ ಅವಧಿಯನ್ನು ಸರ್ಕಾರಿ ರಜಾ ದಿನದಂದು ಸರಿದೂಗಿಸಿ ಪಾಠ-ಪ್ರವಚನ ನಡೆಸಬೇಕೆಂದು ಆದೇಶ ಹೊರಡಿಸಿದ್ದಾರೆ.ಇದನ್ನೂ ಓದಿ: ಶೀಘ್ರವೇ ಮಲ್ಲಾಬಾದ್ ಏತ ನೀರಾವರಿ ಯೋಜನೆ ಟೆಂಡರ್ ಕೈಗೆತ್ತಿಕೊಳ್ಳುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

  • ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

    ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

    ಕಲಬುರಗಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಏಲಕ್ಕಿ ನಗರ ಹಾವೇರಿಯಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಮಿತಿ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ಅವರು ಗುರುವಾರ ಕಲಬುರಗಿಯಲ್ಲಿ ಅಧಿಕೃತ ಘೋಷಣೆ ಮಾಡಿದರು.

    ನಗರದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಾ. ಮನು ಬಳಿಗಾರ ಅವರು, ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಾವೇರಿ, ಚಿಕ್ಕಬಳ್ಳಾಪುರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ಮುಂದಿನ ಸಮ್ಮೇಳನ ಆಯೋಜಿಸುವ ಕುರಿತು ಚರ್ಚೆ ನಡೆಯಿತು. ಕೊನೆಗೆ ಎಲ್ಲಾ ಸದಸ್ಯರು ಸರ್ವಾನುಮತದಿಂದ ಹಾವೇರಿ ನಗರದಲ್ಲಿ ನಡೆಸಲು ತೀರ್ಮಾನಿಸಿದರು ಎಂದರು.

    39 ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸಭೆಯಲ್ಲಿ 21 ಮಂದಿ ಹಾವೇರಿ ಜಿಲ್ಲೆಯನ್ನು ಬೆಂಬಲಿಸಿದರೆ, 18 ಮಂದಿ ಚಿಕ್ಕಬಳ್ಳಾಪುರಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದರು. ಅಲ್ಲದೆ ಮೂಡಬಿದರೆಯಲ್ಲೂ ಸಾಹಿತ್ಯ ಸಮ್ಮೇನ ನಡೆಸುವ ಬಗ್ಗೆ ಮಾತುಕತೆ ನಡೆಸಲಾಯಿತು.