Tag: Sahil

  • ಸಾಕ್ಷಿ ಕೊಲ್ಲಲು 15 ದಿನಗಳ ಹಿಂದೆಯೇ ಹರಿದ್ವಾರದಿಂದ ಚಾಕು ಖರೀದಿಸಿದ್ದ ಸಾಹಿಲ್!

    ಸಾಕ್ಷಿ ಕೊಲ್ಲಲು 15 ದಿನಗಳ ಹಿಂದೆಯೇ ಹರಿದ್ವಾರದಿಂದ ಚಾಕು ಖರೀದಿಸಿದ್ದ ಸಾಹಿಲ್!

    ನವದೆಹಲಿ: ಇಡೀ ದೇಶದಲ್ಲಿಯೇ ಸಂಚಲನ ಸೃಷ್ಟಿಸಿದ್ದ 16 ವರ್ಷದ ಹುಡುಗಿಯ ಕೊಲೆ ಪ್ರಕರಣವು ದಿನೇ ದಿನೇ ಹೊಸ ಕಥೆಗಳನ್ನು ತೆರೆದಿಡುತ್ತಿದೆ. ಪ್ರಕರಣ ಸಂಬಂಧ ಆರೋಪಿ ಸಾಹಿಲ್ (Sahil) ನನ್ನು ಬಂಧಿಸಿರುವ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ವೇಳೆ 15 ದಿನಗಳ ಹಿಂದೆಯೇ ಸಾಕ್ಷಿ (Sakshi Murder Case) ಯನ್ನು ಕೊಲ್ಲಲೆಂದು ಸಾಹಿಲ್ ಹರಿದ್ವಾರದಿಂದ ಚಾಕು ಖರೀದಿಸಿರುವ ಬಗ್ಗೆ ಬಯಲಾಗಿದೆ. ಈ ಮೂಲಕ ಸಾಕ್ಷಿಯನ್ನು ಕೊಲ್ಲಲು ಅನೇಕ ದಿನಗಳಿಂದ ಪ್ಲಾನ್ ಮಾಡಿದ್ದಾನೆಂಬುದು ಸ್ಪಷ್ಟವಾಗಿದೆ.

    ರೋಹಿಣಿ ನಗರದ ಶಹಬಾದ್ ಡೈರಿ (Rohini’s Shahabad Dairy) ಪ್ರದೇಶದಲ್ಲಿ ಸಾಕ್ಷಿಯನ್ನು ಕೊಲೆ ಮಾಡಿದ ಬಳಿಕ ಸುಮಾರು ಅರ್ಧ ಗಂಟೆಗಳ ಕಾಲ ಸಾಹಿಲ್ ತಿರುಗಾಡುತ್ತಿದ್ದ. ಅಲ್ಲದೆ ಅಲ್ಲೇ ಇದ್ದ ಪಾರ್ಕ್ ನಲ್ಲಿಯೂ ಸ್ವಲ್ಪ ಹೊತ್ತು ಕುಳಿತಿದ್ದನು. ನಂತರ ರಿಥಾಲಾ ಎಂಬ ಅರಣ್ಯ ಪ್ರದೇಶಕ್ಕೆ ತೆರಳಿ ಅಲ್ಲಿ ಚಾಕುವನ್ನು ಬಿಸಾಕಿ, ಫೋನ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದಾನೆ. ತದನಂತರ ಇ- ರಿಕ್ಷಾದ ಮೂಲಕ ಸಮಯಪುರ ಬದ್ಲಿಗೆ ತೆರಳಿ ಅಲ್ಲಿ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ ಕಳೆದಿದ್ದಾನೆ. ಮರುದಿನ ಬೆಳಗ್ಗೆ ಸಮಯಪುರ ಬದ್ಲಿಯಿಂದ ಆನಂದ್ ವಿಹಾರ್‍ಗೆ ಹೋಗಿದ್ದಾನೆ. ಅಲ್ಲಿಂದ ಬುಲಂದ್‍ಶಹರ್‍ಗೆ ಬಸ್‍ನಲ್ಲಿ ತೆರಳಿದ್ದಾನೆ. ದಾರಿ ಮಧ್ಯೆ ಆತನಿಗೆ ಬಂಧನದ ಭೀತಿ ಶುರುವಾಗಿದ್ದು, ಕೂಡಲೇ ಆತ ಬಸ್ ಬದಲಾಯಿಸಿದ್ದಾನೆ. ಇತ್ತ ಸೋಮವಾರ ಉತ್ತರ ಪ್ರದೇಶದ ಬುಲಂದ್‍ಶಹರ್‍ನಲ್ಲಿ ಬಂಧಿಸಲ್ಪಟ್ಟಾಗ ಸಾಹಿಲ್ ಖಾನ್ ಮುಖದಲ್ಲಿ ಯಾವುದೇ ಪಶ್ಚಾತ್ತಾಪ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಸಾಹಿಲ್ ಸುಮಾರು 15 ದಿನಗಳ ಹಿಂದೆ ಹರಿದ್ವಾರ (Haridwar) ದಿಂದ ಹತ್ಯೆಗೆ ಬಳಸಲು ಚಾಕುವನ್ನು ಖರೀದಿಸಿದ್ದನು. ಅಂತೆಯೇ ಸಾಕ್ಷಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಈ ಘೋರ ಹತ್ಯೆಯ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎದೆ ಝಲ್ಲೆನಿಸುತ್ತದೆ. ಸಾಹಿಲ್, ಪ್ರಿಯತಮೆ ಸಾಕ್ಷಿಯನ್ನು ಕೊಲೆ ಬರ್ಬರವಾಗಿ ಕೊಲೆ ಮಾಡುತ್ತಿದ್ದರೂ ಜನ ಮೂಕ ವಿಸ್ಮಿತರಂತೆ ನಿಂತಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ. ಯಾರಾದರೂ ಸಾಹಿಲ್ ಅನ್ನು ತಡೆಯಲು ಪ್ರಯತ್ನಿಸಿದ್ದರೆ ಅಥವಾ ಪೊಲೀಸರಿಗೆ ಕರೆ ಮಾಡುವಂತೆ ಬೆದರಿಕೆ ಹಾಕಿದ್ದರೆ ಆಕೆಯನ್ನು ಉಳಿಸಬಹುದಿತ್ತು ಎಂದು ಪೊಲೀಸರು ಹೇಳಿದ್ದಾರೆ.

    ಆರೋಪಿಯನ್ನು ಸೋಮವಾರ ಉತ್ತರ ಪ್ರದೇಶದ ಬುಲಂದ್‍ಶಹರ್‍ನಲ್ಲಿ ಬಂಧಿಸಲಾಗಿದ್ದು, ಮಂಗಳವಾರ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ದೆಹಲಿ ಪೊಲೀಸರು ಸಾಹಿಲ್‍ನನ್ನು ಗುರುವಾರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿದ್ದಾರೆ. ಮೂಲಗಳ ಪ್ರಕಾರ, ಅಧಿಕಾರಿಗಳು ಆತನ ಮೊಬೈಲ್ ಫೋನ್ (Mobile Phone) ಮತ್ತು ಸಾಹಿಲ್ ಕೊಲೆಗೆ ಬಳಸಿದ ಚಾಕುವನ್ನು ಇನ್ನೂ ವಶಪಡಿಸಿಕೊಳ್ಳಬೇಕಾಗಿದೆ. ಇದನ್ನೂ ಓದಿ: ಪಶ್ಚಾತ್ತಾಪವಿಲ್ಲ, ನನ್ನ ತಿರಸ್ಕರಿಸಿದ್ದಕ್ಕೆ ಆಕೆಯನ್ನು ಕೊಂದೆ- ತಪ್ಪೊಪ್ಪಿಕೊಂಡ ಸಾಹಿಲ್

    ವಿಚಾರಣೆ ವೇಳೆ ಸಾಹಿಲ್ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾನೆ. ಸಂತ್ರಸ್ತೆ ಜಬ್ರು ಎಂಬ ಇನ್ನೊಬ್ಬ ಹುಡುಗನೊಂದಿಗೆ ಸ್ನೇಹ ಬೆಳೆಸಿದ್ದರಿಂದ ಸಾಹಿಲ್ ಸಿಟ್ಟಿಗೆದ್ದು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಘಟನೆಗೆ ಒಂದು ದಿನ ಮೊದಲು ಸಾಕ್ಷಿ ತನ್ನ ಸ್ನೇಹಿತೆಯರಾದ ಭಾವನಾ ಮತ್ತು ಜಬ್ರು ಜೊತೆ ಸಾಹಿಲ್‍ನನ್ನು ಭೇಟಿಯಾಗಿದ್ದಳು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಮೂವರಲ್ಲಿ ವಾಗ್ವಾದ ನಡೆದಿದ್ದು, ಸಾಕ್ಷಿಯಿಂದ ದೂರ ಇರುವಂತೆ ಸಾಹಿಲ್‍ಗೆ ಜಬ್ರು ವಾರ್ನ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಸದ್ಯ ಸಾಹಿಲ್ ನಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ಸಿಸಿಟಿವಿಯಲ್ಲಿ ಕೃತ್ಯ ನಡೆದ ಸ್ಥಳದ ಮೂಲಕ ಹಾದುಹೋಗುವ 8 ಮಂದಿ ಪ್ರತ್ಯಕ್ಷದರ್ಶಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ. ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: 25 ಬಾರಿ ಚಾಕುವಿನಿಂದ ಇರಿದು ಮಗಳನ್ನೇ ಕೊಂದ ಪಾಪಿ ತಂದೆ!

  • ಪಶ್ಚಾತ್ತಾಪವಿಲ್ಲ, ನನ್ನ ತಿರಸ್ಕರಿಸಿದ್ದಕ್ಕೆ ಆಕೆಯನ್ನು ಕೊಂದೆ- ತಪ್ಪೊಪ್ಪಿಕೊಂಡ ಸಾಹಿಲ್

    ಪಶ್ಚಾತ್ತಾಪವಿಲ್ಲ, ನನ್ನ ತಿರಸ್ಕರಿಸಿದ್ದಕ್ಕೆ ಆಕೆಯನ್ನು ಕೊಂದೆ- ತಪ್ಪೊಪ್ಪಿಕೊಂಡ ಸಾಹಿಲ್

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 16 ವರ್ಷದ ಹುಡುಗಿಯನ್ನು ಚುಚ್ಚಿ, ಚುಚ್ಚಿ ಕೊಲೆಗೈದ ಪ್ರಕರಣ ಸಂಬಂಧ ಇದೀಗ ಆರೋಪಿ ಸಾಹಿಲ್ (Sahil) ಪೊಲೀಸರ ಮುಂದೆ ಕೊಲೆಗೆ ಕಾರಣವೇನು ಎಂಬುದನ್ನು ಬಾಯ್ಬಿಟ್ಟಿದ್ದಾನೆ.

    ಪ್ರಕರಣ ಸಂಬಂಧ ಸೋಮವಾರ ಉತ್ತರ ಪ್ರದೇಶದ ಬುಲಂದ್‍ಶಹರ್ ನಲ್ಲಿ 20 ವರ್ಷದ ಸಾಹಿಲ್‍ನನ್ನು ಬಂಧಿಸಲಾಗಿತ್ತು. ಬಳಿಕ ವಿಚಾರಣೆ ನಡೆಸಿದಾಗ, ಆಕೆಯನ್ನು ಕೊಂದಿದ್ದಕ್ಕೆ ನನಗೆ ಪಶ್ಚಾತ್ತಾಪವಿಲ್ಲ. ಯಾಕಂದ್ರೆ ಆಕೆ ನನ್ನನ್ನು ತಿರಸ್ಕರಿಸಿದ್ದಾಳೆ. ಹೀಗಾಗಿ ಕೋಪದ ಭರದಲ್ಲಿ ಕೊಲೆ ಮಾಡಿದೆ ಎಂದು ತನ್ನ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

    ಆಕೆ ತನ್ನೊಂದಿಗೆ ಬ್ರೇಕ್ ಅಪ್ (Love BreakUp) ಮಾಡಲು ಬಯಸಿದ್ದಳು. ಅಲ್ಲದೆ ಬೇರೊಬ್ಬನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಆಕೆಯ ಗೆಳೆಯ ನನ್ನ ಮೇಲೆ ಗೂಂಡಾಗರಿ ನಡೆಸಿದ್ದಾನೆ. ಅಲ್ಲದೆ ಇನ್ನು ಮುಂದೆ ತೊಂದರೆ ಕೊಟ್ಟರೆ ಪೊಲೀಸರಿಗೆ ದೂರು ನೀಡುವುದಾಗಿ ಆಕೆ ಬೆದರಿಸಿದ್ದಳು ಎಂದು ಸಾಹಿಲ್ ಹೇಳಿದ್ದಾನೆ.

    ಹುಡುಗಿ ಆತನನ್ನು ಬೆದರಿಸಲು ಆಟಿಕೆ ಪಿಸ್ತೂಲ್ ಕೂಡ ಬಳಸಿದ್ದಳು. ಹತ್ಯೆಯ ಹಿಂದಿನ ದಿನ ಇಬ್ಬರೂ ಜಗಳವಾಡಿದ್ದರು. ಕೊಲೆ ಮಾಡುವ ಸಂದರ್ಭದಲ್ಲಿ ಸಾಹಿಲ್ ಕುಡಿದಿದ್ದ ಎನ್ನಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಆಂಟಿ ಮನೆಗೆ ತಲುಪಿದ ಬಳಿಕ ತಂದೆಗೆ ಕರೆ- ಸಾಹಿಲ್ ಸಿಕ್ಕಿಬಿದ್ದಿದ್ದು ಹೇಗೆ?

    ಭಾನುವಾರ ಸಂಜೆ, ಮೃತ ಹುಡುಗಿ ಸಾಕ್ಷಿ ಸ್ನೇಹಿತನ ಮಗನ ಹುಟ್ಟುಹಬ್ಬದ ಪಾರ್ಟಿ (Birthday Party) ಗೆ ಹೋಗುತ್ತಿದ್ದಾಗ ಸಾಹಿಲ್ ಅವಳನ್ನು ಗೋಡೆಗೆ ಬಿಗಿ ಹಿಡಿದು ಸಾರ್ವಜನಿಕರು ನೋಡನೋಡುತ್ತಿದ್ದಂತೆಯೇ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಆಕೆ ಕುಸಿದು ಬಿದ್ದಿದ್ದಾಳೆ. ಆದರೂ ಬಿಡದ ಸಾಹಿಲ್ ಆಕೆಯ ಮೇಲೆ 3-4 ಬಾರಿ ಕಲ್ಲು ಎತ್ತಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಎಲ್ಲಾ ದೃಶ್ಯ ಸ್ಥಳೀಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

    ಕೊಲೆಯ ಬಳಿಕ ಸಾಹಿಲ್, ಚಾಕು ಹಾಗೂ ಮೊಬೈಲ್ ಫೋನ್ ಎಸೆದು ಬುಲಂದ್‍ಶಹರ್‍ಗೆ ಬಸ್ಸಿನಲ್ಲಿ ತೆರಳಿದ್ದಾನೆ. ತನ್ನ ಚಿಕ್ಕಮ್ಮನ ಮನೆಯಲ್ಲಿ ಅವಿತಿದ್ದನು. ಇತ್ತ ಕೊಲೆಯಾಗಿ ಸುಮಾರು 25 ನಿಮಿಷಗಳ ಬಳಿಕ ಸ್ಥಳೀಯ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲಿಯವರೆಗೆ ಆಕೆಯ ದೇಹ ಬೀದಿಯಲ್ಲಿಯೇ ಬಿದ್ದಿತ್ತು. ಆಕೆಯ ದೇಹದಲ್ಲಿ 34 ಗಾಯಗಳಿದ್ದು, ತಲೆಬುರುಡೆ ಛಿದ್ರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಾಹಿಲ್ ಜೊತೆ ಹುಡುಗಿ ಕಳೆದ 3 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಳು. ಆದರೆ ಇತ್ತೀಚೆಗೆ ಅವಳು ಸಂಬಂಧವನ್ನು ಕೊನೆಗೊಳಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ಸಮಯದಿಂದ ಹುಡುಗಿ ನಿರ್ಲಕ್ಷಿಸುತ್ತಿದ್ದರಿಂದ ಸಾಹಿಲ್ ಕೋಪಗೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  • ಆಂಟಿ ಮನೆಗೆ ತಲುಪಿದ ಬಳಿಕ ತಂದೆಗೆ ಕರೆ- ಸಾಹಿಲ್ ಸಿಕ್ಕಿಬಿದ್ದಿದ್ದು ಹೇಗೆ?

    ಆಂಟಿ ಮನೆಗೆ ತಲುಪಿದ ಬಳಿಕ ತಂದೆಗೆ ಕರೆ- ಸಾಹಿಲ್ ಸಿಕ್ಕಿಬಿದ್ದಿದ್ದು ಹೇಗೆ?

    ನವದೆಹಲಿ: 16 ವರ್ಷದ ಹುಡುಗಿಯನ್ನು ಚುಚ್ಚಿ ಚುಚ್ಚಿ ಕೊಂದಿದ್ದಲ್ಲದೇ ತಲೆ ಮೇಲೆ ಕಲ್ಲು ಎತ್ತಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆರೋಪಿ ಸಿಕ್ಕಿ ಬಿದ್ದಿದ್ದು ಹೇಗೆ ಎಂಬುದನ್ನು ಪೊಲೀಸರು ರಿವೀಲ್ ಮಾಡಿದ್ದಾರೆ.

    ಎರಡೆರಡು ಬಸ್ ಬದಲಾಯಿಸಿಕೊಂಡು ಹೋಗಿರುವ ಸಾಹಿಲ್ (Sahil), ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದಾನೆ. ನಂತರ ಉತ್ತರಪ್ರದೇಶದಲ್ಲಿರುವ ತನ್ನ ಆಂಟಿ ಮನೆಗೆ ತಲುಪಿದ ಬಳಿಕ ಸ್ವಿಚ್ಛ್ ಆನ್ ಮಾಡಿ ತಂದೆಗೆ ಕರೆ ಮಾಡಿದ್ದಾನೆ. ಈ ಕರೆಯ ಸುಳಿವಿನ ಮೇರೆಗೆ ಪೊಲೀಸರು ಆರೋಪಿ ಪತ್ತೆಗೆ ಇಳಿದಿದ್ದಾರೆ. ಮೋಬೈಲ್ ನ ತಾಂತ್ರಿಕ ಜಾಡು ಹಿಡಿದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ನಡೆದಿದ್ದೇನು..?: ದೆಹಲಿಯ ಶಹಬಾದ್ ಡೈರಿ ಪ್ರದೇಶದ ಜೆ.ಜೆ. ಕಾಲೊನಿಯ ಹುಡುಗಿ ಸಾಕ್ಷಿ ಹಾಗೂ ಸಾಹಿಲ್ ಕಳೆದ ಮೂರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಮಧ್ಯೆ ವೈಮನಸ್ಸು ಉಂಟಾದ ಹಿನ್ನೆಲೆ ಭಾನುವಾರ ಸಂಜೆ ರೋಹಿಣಿಯ ಶಹಬಾದ್ ಡೈರಿ (Shahbad Dairy Murder) ಪ್ರದೇಶದಲ್ಲಿ ಸಾಹಿಲ್, ಸಾಕ್ಷಿಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಅಲ್ಲದೇ ಕಲ್ಲಿನಿಂದ ಜಜ್ಜಿ ಆಕೆಯನ್ನು ಹತ್ಯೆಗೈದಿದ್ದಾನೆ. ಇದನ್ನೂ ಓದಿ: ಸಾಹಿಲ್‍ಗೆ ಬೆದರಿಕೆ ಹಾಕಿದ್ದೇ ಅಪ್ರಾಪ್ತೆಯ ಕೊಲೆಗೆ ಕಾರಣವಾಯ್ತಾ..?

    ಸಾಕ್ಷಿ ತನ್ನ ಸ್ನೇಹಿತೆಯ ಮಗನ ಬರ್ತ್‍ಡೇ ಪಾರ್ಟಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭ ಸಾಹಿಲ್ ಆಕೆಯ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾನೆ. ಶಹಬಾದ್ ಡೈರಿಯ ಕಿರಿದಾದ ಲೇನ್‍ನಲ್ಲಿ ಈ ಘಟನೆ ನಡೆದಿದ್ದು, ಈ ಭೀಕರ ದೃಶ್ಯವನ್ನು ದಾರಿಹೋಕರು ಮೂಕಪ್ರೇಕ್ಷಕರಂತೆ ನೋಡುತ್ತಿದ್ದರು. ಚಾಕುವಿನಿಂದ ಇರಿದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  • ಸಾಹಿಲ್‍ಗೆ ಬೆದರಿಕೆ ಹಾಕಿದ್ದೇ ಅಪ್ರಾಪ್ತೆಯ ಕೊಲೆಗೆ ಕಾರಣವಾಯ್ತಾ..?

    ಸಾಹಿಲ್‍ಗೆ ಬೆದರಿಕೆ ಹಾಕಿದ್ದೇ ಅಪ್ರಾಪ್ತೆಯ ಕೊಲೆಗೆ ಕಾರಣವಾಯ್ತಾ..?

    ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ನಡೆದ ಅಪ್ರಾಪ್ತೆಯ ಭೀಕರ ಹತ್ಯೆಗೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಆರೋಪಿ ಸಾಹಿಲ್‍ (Sahil) ಗೆ ಹುಡುಗಿ ಬೆದರಿಕೆ ಹಾಕಿದ್ದೇ ಕೊಲೆಗೆ ಕಾರಣವಾಯ್ತಾ ಎಂಬ ಪ್ರಶ್ನೆ ಮೂಡಿದೆ.

    ಮೂಲಗಳ ಪ್ರಕಾರ, ಹುಡುಗಿ ತಮ್ಮ ಮೂರು ವರ್ಷಗಳ ಸಂಬಂಧ (Relationship) ವನ್ನು ಕೊನೆಗೊಳಿಸಲು ಬಯಸಿದ್ದರಿಂದ ಇಬ್ಬರೂ ಇತ್ತೀಚೆಗೆ ಜಗಳವಾಡುತ್ತಿದ್ದರು. ಆ ಬಳಿಕ ನನಗೆ ತೊಂದರೆ ಕೊಟ್ಟರೆ ಪೊಲೀಸರ ಮೊರೆ ಹೋಗುವುದಾಗಿ ಬೆದರಿಕೆ ಹಾಕಿದ್ದಳು. ಅಲ್ಲದೆ ಹುಡುಗಿ ತನ್ನ ಕೈಯಲ್ಲಿ ಇನ್ನೊಬ್ಬನ ಹೆಸರನ್ನು ಹಚ್ಚೆ ಹಾಕಿಸಿದ್ದಳು. ಕೆಲವು ದಿನಗಳ ಹಿಂದೆ ಹದಿಹರೆಯದವರು ಸಾಹಿಲ್‍ಗೆ ಆಟಿಕೆ ಪಿಸ್ತೂಲ್ (Toy Gun) ತೋರಿಸಿ ಹೆದರಿಸಿದ್ದಾರೆ. ಇವೆಲ್ಲವೂ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

    ಫ್ರಿಡ್ಜ್ ಮತ್ತು ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಸಾಹಿಲ್, ಜನನಿಬಿಡ ಪ್ರದೇಶದಲ್ಲಿ ಹುಡುಗಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ಹುಡುಗಿ ನೆಲಕ್ಕೆ ಬೀಳುತ್ತಿದ್ದಂತೆಯೇ ಆಕೆಯ ಮೇಲೆ ಪದೇ ಪದೇ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ಈ ಎಲ್ಲಾ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ದೆಹಲಿ ಪೊಲೀಸರು ಉತ್ತರ ಪ್ರದೇಶದ ಬುಲಂದ್‍ಶಹರ್‍ನಲ್ಲಿರುವ ಆತನ ಚಿಕ್ಕಮ್ಮನ ಮನೆಯಿಂದ ಬಂಧಿಸಿದ್ದಾರೆ. ಸದ್ಯ ಕೊಲೆಯ ಹಿಂದಿನ ರಹಸ್ಯವೇನು..?, ಕೊಲೆಗೆ ಪ್ರೇರಣೆ ಏನು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಸಾಹಿಲ್ ತನ್ನ ಹೆಸರನ್ನು ಹುಡುಗಿಯ ಸ್ನೇಹಕ್ಕಾಗಿ ಬದಲಾಯಿಸಿದ್ದನೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಂದ 16 ವರ್ಷದ ಹುಡುಗಿಯ ಬರ್ಬರ ಹತ್ಯೆ- ಆರೋಪಿ ಅರೆಸ್ಟ್

    ಘಟನೆಯ ಕುರಿತು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ (Lt Governor VK Saxena) ಅವರನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal), ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅವರ ಜವಾಬ್ದಾರಿಯಾಗಿರುವುದರಿಂದ ಏನಾದರೂ ಮಾಡಿಕೊಳ್ಳಲಿ ಎಂದಿದ್ದಾರೆ. ಇನ್ನು ದೆಹಲಿ ಮಹಿಳಾ ಸಮಿತಿಯ ಮುಖ್ಯಸ್ಥೆ ಸ್ವಾತಿ ಮಲಿವಾಲ್ (Swati Maliwal) ಕೂಡ ಪೊಲೀಸರ ವಿರುದ್ಧವೇ ಕಿಡಿಕಾರಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸರು ಅಥವಾ ಕಾನೂನಿಗೆ ಯಾರೂ ಹೆದರುವುದಿಲ್ಲ ಎಂದು ಹೇಳಿದ್ದಾರೆ.

  • ವಿಚ್ಛೇದನದ ಬಳಿಕ ಜೀವನ ಹೇಗಿರುತ್ತೆ ಎಂಬುದರ ಅರಿವು ನನಗಿತ್ತು: ದಿಯಾ ಮಿರ್ಜಾ

    ವಿಚ್ಛೇದನದ ಬಳಿಕ ಜೀವನ ಹೇಗಿರುತ್ತೆ ಎಂಬುದರ ಅರಿವು ನನಗಿತ್ತು: ದಿಯಾ ಮಿರ್ಜಾ

    – ನಾಲ್ಕೂವರೆ ವರ್ಷದವಳಿದ್ದಾಗ ಅಪ್ಪ-ಅಮ್ಮ ಬೇರೆಯಾಗಿದ್ರು

    ಮುಂಬೈ: ಬಾಲಿವುಡ್ ನಟಿ ದಿಯಾ ಮಿರ್ಜಾ ಸಂದರ್ಶನದಲ್ಲಿ ತಮ್ಮ ವಿಚ್ಛೇದನ ಪಡೆದ ಬಗ್ಗೆ ಹೇಳಿದ್ದಾರೆ. ಈ ಸಂದರ್ಶನದಲ್ಲಿ ಖಾಸಗಿ ಜೀವನದ ಬಗ್ಗೆ ಹಲವು ವಿಷಯಗಳನ್ನು ಅಭಿಮಾನಿಗಳೊಂದಿಗೆ ದಿಯಾ ಹಂಚಿಕೊಂಡಿದ್ದಾರೆ.

    ನನಗೆ ನಾಲ್ಕೂವರೆ ವರ್ಷ, ಅಮ್ಮನಿಗೆ 34 ವರ್ಷ. ಆವಾಗ ಅಪ್ಪ-ಅಮ್ಮ ವಿಚ್ಛೇದನ ಪಡೆದು ಬೇರೆಯಾಗಿದ್ದರು. ವಿಚ್ಛೇದನದ ಬಳಿಕ ಬದುಕು ಹೇಗಿರುತ್ತೆ ಎಂಬುದರ ಅರಿವು ನನಗಿತ್ತು. ಅಮ್ಮನ ಜೀವನದಲ್ಲಿ ನಡೆದಂತೆ ನಾನು ಸಹ ನನ್ನ 37ನೇ ವಯಸ್ಸಿನಲ್ಲಿ ವಿಚ್ಛೇದನ ಪಡೆಯಬೇಕಾಯ್ತು. ಬಹುತೇಕ ದಂಪತಿ ಬೇರೆ ಆಗಲು ಹಿಂದೇಟು ಹಾಕುತ್ತಾರೆ. ಮುಂದಿನ ಜೀವನ ಹೇಗಿರುತ್ತೆ? ಸಮಾಜ ನಮ್ಮನ್ನು ಯಾವ ರೀತಿ ಸ್ವೀಕರಿಸುತ್ತೆ ಎಂಬ ಭಯ ಇರುತ್ತೆ. ನನ್ನ 37ನೇ ವಯಸ್ಸಿನಲ್ಲಿ ಇಂತಹದೊಂದು ದಿಟ್ಟ ನಿರ್ಧಾರಕ್ಕೆ ಬರಬೇಕಾಯ್ತು ಎಂದು ಹೇಳಿದರು.

    ಕಳೆದ ವರ್ಷ ಆಗಸ್ಟ್ ನಲ್ಲಿ ಪತಿ ಸಾಹಿಲ್ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇನೆ ಎಂದು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಳ್ಳುವ ಮೂಲಕ ವಿಷಯವನ್ನು ಬಹಿರಂಗಪಡಿಸಿದ್ದರು. 11 ವರ್ಷಗಳ ಬಳಿಕ ನಾವಿಬ್ಬರು ಬೇರೆ ಆಗಬೇಕೆಂದು ನಿರ್ಧರಿಸಿದ್ದೇವೆ. ಮುಂದಿನ ದಿನಗಳಲ್ಲಿ ಇಬ್ಬರು ಒಳ್ಳೆಯ ಸ್ನೇಹಿತರಾಗಿರಲು ಇಷ್ಟಪಡುತ್ತೇವೆ. ದೂರವಾದ ಬಳಿಕ ಒಬ್ಬರನ್ನೊಬ್ಬರನ್ನು ಗೌರವ ಮತ್ತು ಪ್ರೀತಿಯಿಂದ ಕಾಣುತ್ತೇವೆ. ಇಂದಿನಿಂದ ಇಬ್ಬರ ಜೀವನ ಹೊಸ ದಿಕ್ಕುಗಳತ್ತ ಸಾಗಲಿದ್ದು, ಇಷ್ಟು ದಿನ ಜೊತೆಯಾಗಿದ್ದಕ್ಕೆ ಒಬ್ಬರಿಗೊಬ್ಬರು ಆಭಾರಿಯಾಗಿದ್ದೇವೆ. ಇಷ್ಟು ನಮ್ಮ ಜೊತೆಗಿದ್ದ ಕುಟುಂಬ, ಸ್ನೇಹಿತರ ಬಳಗ ಮತ್ತು ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸಿ ಎಲ್ಲ ವಿಚಾರವನ್ನು ದಿಯಾ ತಿಳಿಸಿದ್ದರು.

    2014ರಲ್ಲಿ ಮದುವೆ: 2014 ಅಕ್ಟೋಬರ್ 18ರಂದು ದಿಯಾ ಮಿರ್ಜಾ ಉದ್ಯಮಿ ಸಾಹಿಲ್ ಅವರನ್ನು ಮದುವೆ ಆಗಿದ್ದರು. ಆರ್ಯ ಸಂಪ್ರದಾಯದಂಯೆ ಮದುವೆ ದೆಹಲಿಯಲ್ಲಿ ನಡೆದಿತ್ತು. ಹೈದರಾಬಾದ್ ಸಂಪ್ರದಾಯದಂತೆ ದಿಯಾ ರೆಡಿಯಾಗಿ ಕಂಗೊಳಿಸಿದ್ದರು. ಸಾಹಿಲ್ ಮತ್ತು ದಿಯಾ ಮದುವೆ ಬಳಿಕ ಜೊತೆಯಾಗಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು. ವ್ಯವಹಾರದಲ್ಲಿ ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ ಇಬ್ಬರು ಬೇರೆಯಾಗಲು ನಿರ್ಧರಿಸಿದ್ದರು ಎಂದು ವರದಿಗಳ ಪ್ರಕಟವಾಗಿವೆ.

    ಮಂದಿನ ಸಿನಿಮಾ ಥಪ್ಪಡ್: ತಾಪ್ಸಿ ಪನ್ನು ನಟನೆಯ ‘ಥಪ್ಪಡ್’ ಸಿನಿಮಾದಲ್ಲ ಶಿವಾನಿ ಪಾತ್ರದಲ್ಲಿ ದಿಯಾ ಮಿರ್ಜಾ ನಟಿಸುತ್ತಿದ್ದಾರೆ. ಅನುವ್ ಸಿನ್ಹಾ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಫೆಬ್ರವರಿ 28ರಂದು ಬಿಡುಗಡೆಯಾಗಲಿದೆ.