Tag: saharanaru

  • ಮುರುಘಾ ಶರಣರ ಬಂಧನ- ಬಿಕೋ ಎನ್ನುತ್ತಿದೆ ಮಠದ ಆವರಣ

    ಮುರುಘಾ ಶರಣರ ಬಂಧನ- ಬಿಕೋ ಎನ್ನುತ್ತಿದೆ ಮಠದ ಆವರಣ

    ಚಿತ್ರದುರ್ಗ: ಪೋಕ್ಸೊ ಪ್ರಕರಣ ಸಂಬಂಧ ಮುರುಘಾ ಶರಣರ ಬಂಧನವಾಗಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಮಠದ ಆವರಣ ಬಿಕೋ ಎನ್ನುತ್ತಿದೆ.

    ಬ್ಯಾರಿಕೇಡ್ ಹಾಕಿ ಸಾರ್ವಜನಿಕರು ಬರದಂತೆ ಮಠದ ಸುತ್ತಮುತ್ತ ಪೊಲೀಸರು ಬಿಗಿ ಬಂದೊಬಸ್ತ್ ಮಾಡಿದ್ದಾರೆ. ಬ್ಯಾಕ್ ಗೇಟ್, ಫ್ರಂಟ್ ಗೇಟ್ ಕೂಡ ಬಂದ್ ಮಾಡಲಾಗಿದೆ. ಕೇವಲ ಮಠದ ಸಿಬ್ಬಂದಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಸದ್ಯ ಭಕ್ತಾದಿಗಳು ಇಲ್ಲದೇ ಮಠದ ಆವರಣ ಖಾಲಿ ಖಾಲಿಯಾಗಿದೆ. ಇದನ್ನೂ ಓದಿ: ಪೋಕ್ಸೊ ಪ್ರಕರಣ – ಮುರುಘಾ ಶ್ರೀಗೆ 14 ದಿನ ನ್ಯಾಯಾಂಗ ಬಂಧನ

    ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಸಂಬಂಧ ಮುರುಘಾ ಶ್ರೀಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದರು. ನಂತರ ಅವರಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಕೊಡಿಸಲಾಯಿತು. ನಸುಕಿನ ಜಾವ 2.25ಕ್ಕೆ ಆಸ್ಪತ್ರೆಯಿಂದ ಹೊರಟ ಪೊಲೀಸರು, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕೋಮಲಾ ಅವರ ಮುಂದೆ ಹಾಜರುಪಡಿಸಿದರು.

    ಶರಣರ ಪರ ಜಾಮೀನು ಕೋರಿ ಸ್ಥಳದಲ್ಲೇ ಅರ್ಜಿ ಸಲ್ಲಿಸಿದರು. ಅರ್ಜಿ ತಿರಸ್ಕರಿಸಿದ ನ್ಯಾಯಾಧೀಶರು ಶುಕ್ರವಾರ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಸೂಚಿಸಿ, ಶ್ರೀಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಇದನ್ನೂ ಓದಿ: ಮಠದಲ್ಲೇ ಮುರುಘಾಶ್ರೀ ಬಂಧನ

    Live Tv
    [brid partner=56869869 player=32851 video=960834 autoplay=true]