Tag: Sagar Khandre

  • ಸಂಸದ ಸಾಗರ್ ಖಂಡ್ರೆ ಮನೆ ವಿದ್ಯುತ್ ಸಂಪರ್ಕ ಕಡಿತ – ಅಪಾರ್ಟ್‌ಮೆಂಟ್ ಮ್ಯಾನೇಜರ್ ವಿರುದ್ಧ ಎಫ್‌ಐಆರ್

    ಸಂಸದ ಸಾಗರ್ ಖಂಡ್ರೆ ಮನೆ ವಿದ್ಯುತ್ ಸಂಪರ್ಕ ಕಡಿತ – ಅಪಾರ್ಟ್‌ಮೆಂಟ್ ಮ್ಯಾನೇಜರ್ ವಿರುದ್ಧ ಎಫ್‌ಐಆರ್

    ಬೆಂಗಳೂರು: ಸಂಸದ ಸಾಗರ್ ಖಂಡ್ರೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ ಶ್ರೀ ಕೃಷ್ಣ ಅಪಾರ್ಟ್‌ಮೆಂಟ್ ಮ್ಯಾನೇಜರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

    ಶ್ರೀ ಕೃಷ್ಣ ಅಪಾರ್ಟ್‌ಮೆಂಟ್‌ನ ಮ್ಯಾನೇಜರ್ ಚಂದ್ರ ಕುಮಾರ್ ಹಾಗೂ ಸೆಕ್ರೆಟರಿ ವಿರುದ್ಧ ವಿಧಾನಸೌದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಚಿವ ಈಶ್ವರ್ ಖಂಡ್ರೆ ಅಪ್ತ ಸಹಾಯಕ ದೂರು ದಾಖಲಿಸಿದ್ದು, ವಿನಾಕಾರಣ ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.

    ಏ.2 ರಂದು ಅಲಿ ಅಸ್ಕರ್ ರಸ್ತೆಯಲ್ಲಿರುವ ಶ್ರೀ ಕೃಷ್ಣ ಅಪಾರ್ಟ್ಮೆಂಟ್ ಸೊಸೈಟಿಯಿಂದ ಪೂರ್ವಾನುಮತಿ ಪಡೆದು ನವೀಕರಣ ಮಾಡಲಾಗುತ್ತಿತ್ತು. ಮೆಟ್ಟಿಲುಗಳ ಮೇಲೆ ಬೆಳಕಿನ ವ್ಯವಸ್ಥೆ ಮಾಡಲು ವೈರ್ ಎಳೆಯಲಾಗಿತ್ತು. ಇದನ್ನು ನೆಪಮಾಡಿಕೊಂಡು ಮ್ಯಾನೇಜರ್ ಕಾರ್ಮಿಕರಿಗೆ ಅವಾಚ್ಯವಾಗಿ ನಿಂದಿದ್ದಾರೆ ಎಂದು ಆರೋಪಿಸಲಾಗಿದೆ.

    ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಮುಸ್ಲಿಂ ಮತಗಳಿಂದ್ಲೇ ಸಾಗರ್‌ ಖಂಡ್ರೆ ಗೆದ್ದಿರೋದು: ಜಮೀರ್ ವಿವಾದ

    ಮುಸ್ಲಿಂ ಮತಗಳಿಂದ್ಲೇ ಸಾಗರ್‌ ಖಂಡ್ರೆ ಗೆದ್ದಿರೋದು: ಜಮೀರ್ ವಿವಾದ

    ಬೀದರ್: ಅರಣ್ಯ ಸಚಿವ ಖಂಡ್ರೆ ಮಗ ಸಾಗರ್ ಖಂಡ್ರೆ (Sagar Khandre) ಗೆದ್ದಿರೋದೆ ಮುಸ್ಲಿಂ ಮತಗಳಿಂದ ಎಂದು ವೇದಿಕೆ ಮೇಲೆ ಬಹಿರಂಗವಾಗಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ (Zameer Ahmed Khan) ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ‌.

    ಬೀದರ್ ನ ಪಾಟೀಲ್ ಫಂಕ್ಷನ್ ಹಾಲ್ ನಲ್ಲಿ ನಡೆದ ವಕ್ಫ್ ಅದಾಲತ್ ಕಾರ್ಯಕ್ರಮದಲ್ಲಿ ಮೃತರ ಅಂತ್ಯ ಸಂಸ್ಕಾರಕ್ಕೆ ಖಬರಸ್ತಾನ್ ಇಲ್ಲಾ. ಹಿಂದಿನಿಂದಲೂ ಅರಣ್ಯ ಪ್ರದೇಶದ ಜಮೀನಿನಲ್ಲೇ ಶವ ಸಂಸ್ಕಾರ ಮಾಡುತ್ತಾ ಬಂದಿದ್ದು. ಈಗ ಅವಕಾಶ ಕಲ್ಪಿಸಿ ಎಂದು ವ್ಯಕ್ತಿಯೊಬ್ಬ ಮನವಿ ಪತ್ರ ಸಲ್ಲಿಸಿದರು. ಅರಣ್ಯ ಸಚಿವರು ಪರಿಚಿತರು ಹೀಗಾಗಿ ಈ ಬಗ್ಗೆ ಅವರ ಜೊತೆ ಚರ್ಚೆ ಮಾಡಿ ಪರಿಹಾರ ಮಾಡುತ್ತೆನೆ ಎಂದ್ರು.

    ಈ ವೇಳೆ ಸಚಿವ ಈಶ್ವರ್ ಖಂಡ್ರೆ (Eshwar Khandre) ಮಗ, ನಮ್ಮ ಮುಸ್ಲಿಂ ಮತಗಳಿಂದಲ್ಲೇ ಗೆದ್ದಿರೋದು ಎಂದು ವಿವಾದಾತ್ಮಕ ಹೇಳಿಕೆ ನೀಡಿ ಸಚಿವ ಜಮೀರ್ ಹಿಂದೂಗಳ ಕೆಂಗಣ್ಣಿಗೆ ಗುರಿಯಾದ್ರು. ಈ ವಿಷಯ ಈಗಾ ಸಾಮಾಜಿಕ ಜಾಲತಾಣದಲ್ಲಿ ಧರ್ಮದಂಗಲ್ ಗೆ ಕಾರಣವಾಗಿದೆ. ಇದನ್ನೂ ಓದಿ: ಹಾಲಿನ ದರ ಏರಿಕೆ ಬಗ್ಗೆ ನನಗೆ ಗೊತ್ತಿಲ್ಲ: ಸಿಎಂ ಸಿದ್ದರಾಮಯ್ಯ

    ಸಾಗರ್ ಖಂಡ್ರೆಗೆ ಮುಸ್ಲಿಮರು ಮಾತ್ರ ವೋಟು ಹಾಕಿದ್ದಾರಾ..?, ಹಾಗಾದ್ರೆ ಹಿಂದೂಗಳು ಮತ ಹಾಕಿಲ್ವಾ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಕಿಡಿಕಾರಿದ್ದಾರೆ. ಈ ಜಿಹಾದಿಗಳಿಂದ ಕರ್ನಾಟಕವನ್ನು ಆ ದೇವರೇ ಕಾಪಾಡಬೇಕು ಎಂದು ಎಕ್ಸ್‌ ಮೂಲಕ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ‌‌‌‌‌.

  • ಕೇಂದ್ರ ಸಚಿವ ಖೂಬಾಗೆ ಬಿಗ್‌ ಶಾಕ್‌ – ಕಿರಿಯ ವಯಸ್ಸಿನ ಸಾಗರ್ ಖಂಡ್ರೆ ವಿರುದ್ಧ ಸೋಲು

    ಕೇಂದ್ರ ಸಚಿವ ಖೂಬಾಗೆ ಬಿಗ್‌ ಶಾಕ್‌ – ಕಿರಿಯ ವಯಸ್ಸಿನ ಸಾಗರ್ ಖಂಡ್ರೆ ವಿರುದ್ಧ ಸೋಲು

    ಬೀದರ್: ಹ್ಯಾಟ್ರಿಕ್ ಗೆಲುವಿನ ನೀರಿಕ್ಷೆಯಲ್ಲಿದ್ದ ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ಮುಖಭಂಗ ಅನುಭವಿಸಿದ್ದಾರೆ. ಕಿರಿಯ ವಯಸ್ಸಿನ ಸಾಗರ್‌ ಖಂಡ್ರೆ (Sagar Khandre) ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ.

    1.28 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಹಾಲಿ ಸಂಸದ ಭಗವಂತ್ ಖೂಬಾರನ್ನು ಸಾಗರ್‌ ಸೋಲಿಸಿದ್ದಾರೆ. ಕಳೆದ ಬಾರಿಯ ಸೋಲಿನ ಸೇಡನ್ನು ಈಶ್ವರ್ ಖಂಡ್ರೆ ಮಗನ ಮುಖಾಂತರ ತೀರಿಸಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ʻಕೈʼ ಹಿಡಿದ ಚಿಕ್ಕೋಡಿ – ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಮುಗಿಲುಮುಟ್ಟಿದ ಸಂಭ್ರಮ

    ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಂಸತ್ತಿನಲ್ಲಿ ನಾನು ಧ್ವನಿ ಎತ್ತುತ್ತೇನೆ. ನಮ್ಮ ತಂದೆ ವರ್ಚಸ್ಸು, ಗ್ಯಾರಂಟಿಯ ಅನುಷ್ಠಾನದಿಂದಾಗಿ ಜನ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಜಯದ ಬಗ್ಗೆ ಸಾಗರ್‌ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.

    ಬೀದರ್‌ ಕ್ಷೇತ್ರದಲ್ಲಿ ಭಗವಂತ್‌ ಖೂಬಾ ವಿರುದ್ಧದ ಅಲೆ ಇತ್ತು. ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ಖೂಬಾ ವಿರುದ್ಧ ಜನ ಅಸಮಾಧಾನ ಹೊರಹಾಕಿದ್ದರು. ಹೊಸ ಹಾಗೂ ಯುವ ನಾಯಕನಿಗೆ ಜನ ಅವಕಾಶ ನೀಡಿದ್ದಾರೆ. ಇದನ್ನೂ ಓದಿ: ಚಾಮರಾಜನಗರ: ಕಾಂಗ್ರೆಸ್‌ ಸಚಿವರ ಪುತ್ರನಿಗೆ ಚೊಚ್ಚಲ ಜಯ