ಕಿರುತೆರೆಯ ಜನಪ್ರಿಯ ‘ಸತ್ಯ’ ಸೀರಿಯಲ್ ಹೀರೋ ಸಾಗರ್ ಬಿಳಿಗೌಡ (Sagar Biligowda) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸಾಗರ್ ಪತ್ನಿ ಸಿರಿ ರಾಜು (Siri Raju) ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದಾರೆ. ಮಹಾಲಕ್ಷ್ಮಿ ಆಗಮನದ ಕುರಿತು ನಟ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ಕಿರುತೆರೆಯ ಜನಪ್ರಿಯ ‘ಸತ್ಯ’ (Sathya Serial) ಸೀರಿಯಲ್ ಹೀರೋ ಸಾಗರ್- ಸಿರಿ ರಾಜು (Siri Raju) ದಂಪತಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಸಾಗರ್ ದಂಪತಿ ಸ್ಪೆಷಲ್ ಫೋಟೋಶೂಟ್ ಹಂಚಿಕೊಳ್ಳುವ ಮೂಲಕ ಸಿಹಿಸುದ್ದಿ ನೀಡಿದ್ದಾರೆ.
ನಟಿ ಸಿರಿ ರಾಜು ಅವರು ಮಗುವಿನ ಶೂ ಫೋಟೋ ಶೇರ್ ಮಾಡಿ, ‘ಪವಾಡಗಳಿಗೂ ಸಮಯ ಹಿಡಿಯುತ್ತದೆ’ ಎಂದು ಗುಡ್ ನ್ಯೂಸ್ ತಿಳಿಸಿದ್ದರು. ಇದೀಗ ‘ಸತ್ಯ’ ಹೀರೋ ಸಾಗರ್ (Sagar Biligowda) ಪತ್ನಿ ಸಿರಿ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ. ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.
ಕಂದು ಬಣ್ಣದ ಟಾಪ್ ಧರಿಸಿ ಸಿರಿ ಬೇಬಿ ಬಂಪ್ ಲುಕ್ ತೋರಿಸಿದ್ದಾರೆ. ಪತ್ನಿ ಸಿರಿ ಜೊತೆ ಸಾಗರ್ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಸಾಗರ್ ದಂಪತಿಗೆ ಆಪ್ತರು, ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಂಡ ಬಾಲಿವುಡ್ ಸುಂದರಿ
ಕಳೆದ ವರ್ಷ ಜ.26ರಂದು ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಸಾಗರ್- ಸಿರಿ ರಾಜು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಕಿರುತೆರೆಯ ನಟ-ನಟಿಯರು ಸಾಗರ್- ಸಿರಿ ಮದುವೆಯಲ್ಲಿ ಭಾಗಿಯಾಗಿದ್ದರು.
`ಸತ್ಯ’ ಸೀರಿಯಲ್ (Sathya Serial) ಸಾಗರ್ ಬಿಳಿಗೌಡ (Sagar Biligowda) ಮತ್ತು ಮಾಡೆಲ್ ಕಮ್ ನಟಿ ಸಿರಿ ರಾಜು (Siri Raju) ವೈವಾಹಿಕ ಬದುಕಿಗೆ ಕಾಲಿಡಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಎಂಗೇಜ್‌ಮೆಂಟ್ ಕೂಡ ನೆರವೇರಿತ್ತು. ಇದೀಗ ಮದುವೆಯ (Wedding) ದಿನಾಂಕ ಕೂಡ ಫಿಕ್ಸ್ ಆಗಿದೆ. ಈ ಕುರಿತು ನಟಿ ಸಿರಿ ರಾಜು ಪಬ್ಲಿಕ್ ಟಿವಿ ಡಿಜಿಟಲ್‌ಗೆ ಮಾಹಿತಿ ನೀಡಿದ್ದಾರೆ.
ಸಾಗರ್ ಮತ್ತು ಸಿರಿ ರಾಜು ಭೇಟಿ ಅನಿರಿಕ್ಷಿತ ಭೇಟಿಯೇ, ಮದುವೆ ಎಂಬ ಬಂಧದವರೆಗೂ ತಂದು ನಿಲ್ಲಿಸಿದೆ. ಖಾಸಗಿ ವಾಹಿನಿಯ ಇವೆಂಟ್‌ನಲ್ಲಿ ಸಾಗರ್- ಸಿರಿ ಪರಿಚಯವಾಯ್ತು. ಇಬ್ಬರ ನಡುವೆ ಒಳ್ಳೆಯ ಫ್ರೆಂಡ್‌ಶಿಪ್‌ಯಿತ್ತು. ಆದರೆ ಮದುವೆ ಆಲೋಚನೆ ಇಬ್ಬರಿಗೂ ಇರಲಿಲ್ಲ. ಇದು ಪಕ್ಕಾ ಅರೆಂಜ್ ಮ್ಯಾರೇಜ್ (Arrange Marriage) ಆಗಿದ್ದು, ಗುರುಹಿರಿಯರು ನಿಶ್ಚಿಯಿಸಿದ ಮದುವೆ ಎಂದು ಸಿರಿ ರಾಜು ತಿಳಿಸಿದ್ದಾರೆ.
ಕಳೆದ ತಿಂಗಳು ನವೆಂಬರ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸಿರಿ ರಾಜು ಮತ್ತು ಸಾಗರ್ ಎಂಗೇಜ್‌ಮೆಂಟ್ (Engagemnet) ನಡೆದಿತ್ತು. ಇದೀಗ ಇದೇ ಜನವರಿ 26ರಂದು ಹಸೆಮಣೆ ಏರಲು ರೆಡಿಯಾಗಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿ ಸಾಗರ್, ಸಿರಿ ಜೋಡಿ ಮದುವೆಯಾಗುತ್ತಿದೆ. ಜ.25ರಂದು ಆರತಕ್ಷತೆ ನಡೆಯಲಿದೆ. ಅದಕ್ಕೂ ಮುನ್ನ ವಿವಾಹ ಪೂರ್ವ ಕಾರ್ಯಗಳು ಜರುಗಲಿದೆ.
ಸಾಗರ್ ಬಿಳಿಗೌಡ ಮದುವೆಯಾಗುತ್ತಿರುವ ಹುಡುಗಿ ಸಿರಿ ರಾಜು ಕೂಡ ಕಲಾವಿದೆ. ಸಿರಿ ರಾಜು ಉದ್ಯಮಿ ಕೂಡ ಹೌದು. ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಸಿರಿ ರಾಜು ಅಭಿನಯಿಸಿದ್ದಾರೆ. ಸದ್ಯ ವಿಜಯ್ ರಾಘವೇಂದ್ರ (Vijay Raghavendra) ಜೊತೆಗೆ `FIR 6 to 6′ ಸಿನಿಮಾದಲ್ಲಿ ಸಿರಿ ರಾಜು ನಟಿಸಿದ್ದಾರೆ. ಸಾಗರ್ ಬಿಳಿಗೌಡ ಪ್ರಸ್ತುತ `ಸತ್ಯ’ ಸೀರಿಯಲ್‌ನಲ್ಲಿ ನಾಯಕ ನಟನಾಗಿ ಜನಮನ ಗೆದ್ದಿದ್ದಾರೆ. ಇದನ್ನೂ ಓದಿ:ಒಂದೇ ದಿನ ತೆರೆಗೆ ಅಬ್ಬರಿಸುತ್ತಿದೆ ರಣ್‌ಬೀರ್- ಆಲಿಯಾ ಭಟ್ ಸಿನಿಮಾ: ಬಾಕ್ಸಾಫೀಸ್ ಫೈಟ್
ಇನ್ನೂ ವೈವಾಹಿಕ ಬದುಕಿಗೆ ಕಾಲಿಡುತ್ತಿರುವ ಸಾಗರ್ ಮತ್ತು ಸಿರಿ ರಾಜುಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]