Tag: saffron

  • ಬಿಜೆಪಿ ಹಿಂದುತ್ವದ ಮೇಲೆ ಪೇಟೆಂಟ್ ಹೊಂದಿಲ್ಲ: ಉದ್ಧವ್ ಠಾಕ್ರೆ

    ಬಿಜೆಪಿ ಹಿಂದುತ್ವದ ಮೇಲೆ ಪೇಟೆಂಟ್ ಹೊಂದಿಲ್ಲ: ಉದ್ಧವ್ ಠಾಕ್ರೆ

    ಮುಂಬೈ: ಬಿಜೆಪಿ ಹಿಂದುತ್ವದ ಮೇಲೆ ಪೇಟೆಂಟ್ ಹೊಂದಿಲ್ಲ. ಅವರಿಗೆ ಕೇಸರಿ ಮತ್ತು ಹಿಂದುತ್ವವು ಅಧಿಕಾರವನ್ನು ಸಾಧಿಸಲು ಸಹಾಯ ಮಾಡುತ್ತಿದೆ ಎಂದು ಕೇಂದ್ರ ತೋರಿಸಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮನು ಹುಟ್ಟದಿದ್ದರೇ ಬಿಜೆಪಿ ಯಾವ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿತ್ತು ಎನ್ನುವುದು ನನಗೆ ಆಶ್ಚರ್ಯವಾಗುತ್ತದೆ ಎಂದ ಅವರು, ಬಿಜೆಪಿಯು ಸಮಸ್ಯೆಗಳಿಂದ ದೂರವಿರಲು ಧರ್ಮ, ಧರ್ಮಗಳ ಮಧ್ಯೆ ದ್ವೇಷವನ್ನು ಹರಡುವ ಬಗ್ಗೆ ಮಾತನಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಶಿವಸೇನಾ ಯಾವಾಗಲೂ ಕೇಸರಿ ಹಾಗೂ ಹಿಂದುತ್ವದ ಸಿದ್ಧಾಂತಕ್ಕೆ ಬದ್ಧವಾಗಿರುತ್ತದೆ ಎಂದ ಅವರು, ಬಿಜೆಪಿಗಿಂತ ಭಿನ್ನದ ಸಿದ್ಧಾಂತಗಳನ್ನು ಪ್ರಚಾರ ಮಾಡುವ ಭಾರತೀಯ ಜನಸಂಘ ವಿಭಿನ್ನ ಯೋಚನೆಯನ್ನು ಹೊಂದಿದೆ ಎಂದರು. ಇದನ್ನೂ ಓದಿ: ದೆಹಲಿ ಜೆಎನ್‍ಯುನಲ್ಲಿ ಮತ್ತೆ ರಣಾಂಗಣ – ಮಾಂಸಾಹಾರ ವಿಚಾರಕ್ಕೆ ವಿದ್ಯಾರ್ಥಿಗಳ ಮಾರಾಮಾರಿ

    ಕೇಸರಿ ಮತ್ತು ಹಿಂದುತ್ವವು ದೆಹಲಿಯವರೆಗೆ ಮುನ್ನಡೆಸುತ್ತದೆ ಎನ್ನುವುದನ್ನು ಬಿಜೆಪಿಗೆ ತೋರಿಸಿಕೊಟ್ಟವರು ಬಾಳ್ ಠಾಕ್ರೆಯಾಗಿದ್ದಾರೆ. ಬಾಳ್ ಠಾಕ್ರೆ ಅವರನ್ನು ಗೌರವಿಸುವುದಾಗಿ ಬಿಜೆಪಿ ಹೇಳಿಕೊಂಡರೆ, ಮುಂಬರುವ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿವಂಗತ ಶಿವಸೇನಾ ಸಂಸ್ಥಾಪಕರ ಹೆಸರಿಡುವ ಪ್ರಸ್ತಾಪವನ್ನು ಆ ಪಕ್ಷ ಏಕೆ ವಿರೋಧಿಸುತ್ತಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಏಪ್ರಿಲ್ 11ರಿಂದ ಕಲಬುರಗಿಯಲ್ಲಿ ನಾಲ್ಕು ದಿನ ಸಂವಿಧಾನ ನಾಟಕ ಪ್ರದರ್ಶನ

  • ಹಿಜಬ್- ಕೇಸರಿ ಶಾಲು ವಿವಾದ- ಹೋರಾಟಕ್ಕಾಗಿಯೇ ವಿದ್ಯಾರ್ಥಿಗಳು ಟ್ವಿಟ್ಟರ್ ಖಾತೆ ಓಪನ್..!

    ಹಿಜಬ್- ಕೇಸರಿ ಶಾಲು ವಿವಾದ- ಹೋರಾಟಕ್ಕಾಗಿಯೇ ವಿದ್ಯಾರ್ಥಿಗಳು ಟ್ವಿಟ್ಟರ್ ಖಾತೆ ಓಪನ್..!

    ಉಡುಪಿ: ರಾಜ್ಯದ ಹಿಜಬ್- ಕೇಸರಿ ಶಾಲು ವಿವಾದ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಹೋರಾಟಕ್ಕಾಗಿಯೇ ವಿದ್ಯಾರ್ಥಿಗಳು ಟ್ವಿಟ್ಟರ್ ಖಾತೆ ಓಪನ್ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹಿಜಬ್ ಹೋರಾಟದ ರೂಪುರೇಷೆ ಹಿಂದೆಯೇ ಮಾಡಲಾಗಿತ್ತು. ಅದಕ್ಕಾಗಿಯೇ ವಿದ್ಯಾರ್ಥಿಗಳ ಟ್ವಿಟ್ಟರ್ ಖಾತೆ ತೆರೆಯಲಾಯ್ತು. ಆ ನಂತರ ಉಡುಪಿ ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಹಿಜಬ್ ಗಾಗಿ ಮನವಿ ಕೊಟ್ಟರು. ಕಾಲೇಜು ಹಿಜಬ್ ಅವಕಾಶ ಕೊಡದಿದ್ದಾಗ ಅಂತಾರಾಷ್ಟ್ರೀಯ ಚರ್ಚೆಗೆ ವೇದಿಕೆ ಸಿದ್ಧ ಮಾಡಿದರು. ಕಾಲೇಜು, ಜಿಲ್ಲೆ ರಾಜ್ಯ ದೇಶಾದ್ಯಂತ, ಹೊರದೇಶಕ್ಕೆ ವ್ಯಾಪಿಸಲು ಕಾರಣವಾಯ್ತು. ಕೋರ್ಟ್ ಮೆಟ್ಟಿಲೇರುವ ಪ್ಲ್ಯಾನ್ ಮೊದಲೇ ಮಾಡಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಪವರ್ ಫುಲ್ ಜೇಮ್ಸ್ ಟೀಸರ್ ಔಟ್ – ಅಪ್ಪು ಎಂಟ್ರಿಗೆ ಅಭಿಮಾನಿಗಳು ಫಿದಾ

    ಹಿಜಾಬ್ ವಿವಾದಕ್ಕೆ ನವೆಂಬರ್ ತಿಂಗಳಲ್ಲೇ ಮಾಸ್ಟರ್ ಪ್ಲಾನ್ ನಡೆದಿತ್ತು. ನಾಲ್ವರು ಹಿಜಾಬ್ ಸಂತ್ರಸ್ತೆಯರು ಏಕಕಾಲದಲ್ಲಿ ಟ್ವಿಟರ್ ಖಾತೆ ತೆರೆದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವನ್ನು ಪ್ರಮೋಟ್ ಮಾಡತೊಡಗಿದ್ದರು. ನವೆಂಬರ್ ತಿಂಗಳಲ್ಲಿ ಬಾಬ್ರಿ ಮಸೀದಿ ತೀರ್ಪಿನ ವಿರುದ್ಧ ಟ್ವೀಟ್ ಮಾಡಿದ್ದರು. ಯುವತಿಯರ ಪ್ರತಿ ಟ್ವೀಟ್ ಗೆ ಸಿಎಫ್‍ಐ ರಾಷ್ಟ್ರಾಧ್ಯಕ್ಷ ರಿಟ್ವೀಟ್ ಮಾಡುತ್ತಿದ್ದರು. ಇದೀಗ ವಿಜಯ್ ಪಟೇಲ್ ಎಂಬವರಿಂದ ಸಿಎಫ್‍ಐ ಸಂಘಟನೆಯ ಟ್ವಿಟ್ಟರ್ ಟ್ರೆಂಡ್ ರಹಸ್ಯ ಬಯಲಾಗಿದೆ.

    ಹಿಜಾಬ್ ವಿವಾದ ಆರಂಭವಾಗುವ ಮೊದಲೇ ಸಿಎಎಫ್ ಐ ಸಕ್ರಿಯ ಕಾರ್ಯಕರ್ತರಾಗಿದ್ದ ಯುವತಿಯರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಟ್ವೀಟ್ ಮಾಡಿದ್ದರು. ಅಲ್ಮಾಸ್, ಮುಸ್ಕಾನ್, ಅಲಿಯಾ ಅಸಾದಿ, ಮೊದಲಾದವರ ಟ್ವಿಟ್ಟರ್ ಹಿಸ್ಟರಿಯಿಂದ ಸಾಕಷ್ಟು ಸಂಗತಿಗಳು ಬಹಿರಂಗವಾಗಿದೆ. ಮತೀಯವಾದಿ ವಿಚಾರಗಳನ್ನೇ ಟ್ವೀಟ್ ಮಾಡುತ್ತಾ ಬಂದಿರುವ ಮೂವರು ಯುವತಿಯರು ನವೆಂಬರ್ 21ರಂದು ಮಸೀದಿ ಮೈಕುಗಳನ್ನು ಸಮರ್ಥಿಸಿ ಟ್ವೀಟ್ ಮಾಡಿದ್ದರು. ಡಿಸೆಂಬರ್ 12ಕ್ಕೆ ದೆಹಲಿ ದಂಗೆಯ ಆರೋಪಿ ರೌಫ್ ಶರೀಫ್ ಬಿಡುಗಡೆಗೆ ಆಗ್ರಹಿಸಿ ಯುವತಿಯರು ಟ್ವೀಟ್ ಮಾಡಿದ್ದರು. ಡಿಸೆಂಬರ್ 24ರ ಬಳಿಕ ಯುವತಿಯರು ಉಡುಪಿಯಲ್ಲಿ ಹಿಜಾಬ್ ಹೋರಾಟ ಆರಂಭಿಸಿದರು. ಒಟ್ಟಿನಲ್ಲಿ ಇದೀಗ ಯುವತಿಯರ ಟ್ವಿಟರ್ ಟ್ರಾಕ್ ರೆಕಾರ್ಡಿನಲ್ಲಿ ಅನೇಕ ಕುತೂಹಲಕಾರಿ ಅಂಶಗಳು ಅಡಗಿವೆ.

  • ಸುಪ್ರೀಂಗೆ ಹೋಗೋರು ಹೋಗ್ಲಿ, ನಮ್ಮದೇನು ಅಭ್ಯಂತರ ಇಲ್ಲ: ಬಿಸಿ ನಾಗೇಶ್

    ಸುಪ್ರೀಂಗೆ ಹೋಗೋರು ಹೋಗ್ಲಿ, ನಮ್ಮದೇನು ಅಭ್ಯಂತರ ಇಲ್ಲ: ಬಿಸಿ ನಾಗೇಶ್

    ಬೆಂಗಳೂರು: ಹಿಜಬ್- ಕೇಸರಿ ಶಾಲು ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸುಪ್ರೀಂಗೆ ಹೋಗೋರು ಹೋಗಲಿ. ನಮ್ಮದೇನು ಅಭ್ಯಂತರ ಇಲ್ಲ. ಕೋರ್ಟ್ ಏನು ತೀರ್ಮಾನ ಮಾಡುತ್ತೋ ನೋಡೋಣ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಲಾಯರ್‍ಗಳನ್ನ ಇಟ್ಟು ಕೋರ್ಟ್‍ನಲ್ಲಿ ವಾದ ಮಾಡೋ ಶಕ್ತಿ ನನಗಂತೂ ಇಲ್ಲ, ಕಾಲೇಜಿನ ಆ ಹುಡುಗೀರಿಗೂ ಅ ಶಕ್ತಿ ಇರಲ್ಲ. ಆದರೆ ಯಾರೋ ಈ ವಿದ್ಯಾರ್ಥಿನಿಯರ ಹಿಂದೆ ಇದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದರು.

    ಇಡೀ ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಅನ್ನಿಸುತ್ತಿದೆ. ಅವರು ಹೀಗೆಲ್ಲಾ ಮಾಡಿಸ್ತಾ ಇದ್ದಾರೆ. ಸುಪ್ರೀಂಗೆ ಹೋಗೋರು ಹೋಗಲಿ… ನಮ್ಮದೇನು ಅಭ್ಯಂತರ ಇಲ್ಲ. ಕೋರ್ಟ್ ಏನು ತೀರ್ಮಾನ ಮಾಡುತ್ತೋ ನೋಡೋಣ. ಸರ್ಕಾರದ ಆದೇಶ ಪಾಲನೆ ಮಾಡಿದ್ರೆ ಮಾತ್ರ ಕಾಲೇಜ್‍ಗೆ ಎಂಟ್ರಿ ಎಂದು ಅವರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹಿಂದೆ ನಡೆದ ಎಲ್ಲಾ ಘಟನೆಗಳನ್ನು ಮರೆಯೋಣ – ವಿದ್ಯಾರ್ಥಿಗಳಿಗೆ ರಘುಪತಿ ಭಟ್ ಕರೆ

    ಕೋರ್ಟ್ ನಲ್ಲಿ ವಾದ ಮಾಡ್ತಿರೋರು ಕಾಂಗ್ರೆಸ್ ನ ಪ್ರಮುಖರು. ಕಪಿಲ್ ಸಿಬಲ್ ಯಾರು? ಕಾಮತ್ ಯಾರು? ಹೆಗ್ಡೆ ಯಾರು? ಇವೆಲ್ಲ ನೋಡಿದರೆ ಅನುಮಾನ ಬರೋದು ಸಹಜ. ಹೀಗಾಗಿ ಇದರ ಹಿಂದೆ ಕಾಂಗ್ರೆಸ್ ಇದೆ ಅಂತ ನನಗೆ ಅನುಮಾನ ಬರುತ್ತಿದೆ ಎಮದು ಹೇಳಿದರು. ಇದನ್ನೂ ಓದಿ: ಹಿಜಬ್‌- ಕೇಸರಿ ಫೈಟ್‌ಗೆ ತಾತ್ಕಾಲಿಕ ಬ್ರೇಕ್‌ – ಹೈಕೋರ್ಟ್‌ ಕಲಾಪದ ಪೂರ್ಣ ಪಾಠ ಇಲ್ಲಿದೆ

    ಸಿಎಫ್‍ಐ ಸಂಘಟನೆ ಅಜೆಂಡಾ ಈಡೇರಿದ ಹಾಗೆ ಇಲ್ಲ. ಹೀಗಾಗಿ ಕೋರ್ಟ್ ಆದೇಶವನ್ನು ವಿರೋಧ ಮಾಡುತ್ತಿದ್ದಾರೆ. ಈ ಸಂಘಟನೆಯೇ ಇದರ ಹಿಂದೆ ಇದ್ದು ಕೆಲಸ ಮಾಡುತ್ತಿದೆ. ಕೋರ್ಟ್ ಆದೇಶಕ್ಕೆ ಎಲ್ಲರೂ ತಲೆ ಬಾಗಲೇಬೇಕು ಎಂದು ಹೇಳಿದರು.

  • ಹಿಜಬ್-ಕೇಸರಿ ವಿವಾದದ ಪ್ರಚೋದನಕಾರಿ ವೀಡಿಯೋ ಹರಿಬಿಟ್ಟ ಕಿಡಿಗೇಡಿಗಳು: ಪ್ರಕರಣ ದಾಖಲು

    ಹಿಜಬ್-ಕೇಸರಿ ವಿವಾದದ ಪ್ರಚೋದನಕಾರಿ ವೀಡಿಯೋ ಹರಿಬಿಟ್ಟ ಕಿಡಿಗೇಡಿಗಳು: ಪ್ರಕರಣ ದಾಖಲು

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ನಡೆದಿದ್ದ ಘಟನೆಯ ಹಳೆ ವೀಡಿಯೋಗೆ ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಸಂಬಂಧ ಕಲ್ಪಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕಿಡಿಗೇಡಿಗಳು ಭಾರೀ ಸಂಚಲನ ಸೃಷ್ಟಿಸಿದ್ದಾರೆ.

    ಜನವರಿ 31 ರಂದು ಲಿಂಗಸುಗೂರು ಚರ್ಚ್‍ನ ಫಾದರ್ ಮಲ್ಲೇಶಪ್ಪ ಪಾಲ್ ಜಾನ್ ಮುದಗಲ್‍ನ ಮುಸ್ಲಿಂರ ಬಡಾವಣೆಯಲ್ಲಿ ಕುರಾನ್ ಬಗ್ಗೆ ಮಾತನಾಡಿದ್ದಕ್ಕೆ ಅಲ್ಲಿನ ಜನ ಆಕ್ರೋಶಗೊಂಡು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಸ್ಥಳೀಯ ಎಸ್‍ಡಿಪಿಐ ಕಾರ್ಯಕರ್ತ ಹಿಮದ್ ರಜಾಕ್ ಹಾಗೂ ಪಾಷಾ, ಮಲ್ಲೇಶಪ್ಪ ಪಾಲ್ ಜಾನ್‍ಗೆ ಖಡಕ್ ಎಚ್ಚರಿಕೆ ನೀಡಿದ್ದರು. ಪ್ರಚೋದನಕಾರಿಯಾಗಿ ಮಾತನಾಡಿದ್ದ ಹಿಮದ್ ರಜಾಕ್ ಹಾಗೂ ಪಾಷಾ ವಿರುದ್ಧ ಈಗಾಗಲೇ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ಅಮಾಯಕ ಮಕ್ಕಳ ಜೀವನದ ಜೊತೆ ಚೆಲ್ಲಾಟ ಆಡುತ್ತಿವೆ: ಹೆಚ್‍ಡಿಕೆ

    ಈ ವೀಡಿಯೋವನ್ನು ತಿರುಚಿರುವ ಕಿಡಿಗೇಡಿಗಳು ಹಿಜಬ್ ವಿಚಾರಕ್ಕೆ ಕಾಲೇಜು ಪ್ರಿನ್ಸಿಪಾಲ್‍ಗೆ ಎಸ್‍ಡಿಪಿಐ ಕಾರ್ಯಕರ್ತರು ಧಮ್ಕಿ ಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಅಂತ ಬಿಂಬಿಸಿ ವೀಡಿಯೋ ವೈರಲ್ ಮಾಡಿದ್ದಾರೆ. ಇದು ಜಿಲ್ಲೆಯಲ್ಲಿ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡಿರುವ ಜಿಲ್ಲಾ ಪೊಲೀಸ್ ಅಧಿಕಾರಿಗಳು, ಕಿಡಿಗೇಡಿಗಳು ಹರಿಬಿಟ್ಟ ಪ್ರಚೋದನಾಕಾರಿ ವೀಡಿಯೋ ಬಗ್ಗೆ ಯಾರು ತಲೆಕೆಡಿಸಿಕೊಳ್ಳಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದ ಶಾಂತಿಗೆ ಭಂಗ ತರುವ ಕೆಲಸವಾಗದಿರಲಿ: ಬೊಮ್ಮಾಯಿ

  • ಶಾಲೆಗಳು ಧರ್ಮ ಪ್ರದರ್ಶನದ ಸ್ಥಳವಲ್ಲ, ಭಾರತೀಯರೆಂಬ ಒಗ್ಗಟ್ಟನ್ನು ಪ್ರದರ್ಶಿಸಿ: ಖುಷ್ಬೂ

    ಶಾಲೆಗಳು ಧರ್ಮ ಪ್ರದರ್ಶನದ ಸ್ಥಳವಲ್ಲ, ಭಾರತೀಯರೆಂಬ ಒಗ್ಗಟ್ಟನ್ನು ಪ್ರದರ್ಶಿಸಿ: ಖುಷ್ಬೂ

    ಚೆನ್ನೈ: ಶಾಲಾ-ಕಾಲೇಜುಗಳು ಧರ್ಮ ಪ್ರದರ್ಶನಕ್ಕೆ ಇರುವ ಸ್ಥಳವಲ್ಲ. ಅಲ್ಲಿ ನೀವು ಭಾರತೀಯರೆಂಬ ಒಗ್ಗಟ್ಟನ್ನು ಪ್ರದರ್ಶಿಸಿ ಎಂದು ಹಿಜಬ್-ಕೇಸರಿ ವಿವಾದದ ಬಗ್ಗೆ ಸರಣಿ ಟ್ವೀಟ್ ಮೂಲಕ ನಟಿ ಖುಷ್ಬೂ ಕಿಡಿಕಾರಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?:
    ಶಿಕ್ಷಣಕ್ಕೆ ಧರ್ಮವಿಲ್ಲ ಅದು ಸಮಾನತೆಯ ಆಲಯ. ನಾನು ಶಾಲೆಗೆ ಹೋಗುವಾಗ ಸಮವಸ್ತ್ರ ಧರಿಸುತ್ತಿದ್ದೆ. ಆಗ ಎಲ್ಲರಿಗೂ ರೂಲ್ಸ್ ಒಂದೇ ಆಗಿತ್ತು. ಸಮಾನತೆ ಇತ್ತು. ಆದರೆ ಇದೀಗ ಶಾಲಾ-ಕಾಲೇಜಿನಲ್ಲಿ ಧರ್ಮದ ವಿಚಾರವಾಗಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದನ್ನೂ ಓದಿ: ಹಿಜಬ್‌-ಕೇಸರಿ ಶಾಲು ವಿವಾದ – ಕೇಂದ್ರ ಶಿಕ್ಷಣ ಸಚಿವರ ಮಧ್ಯಪ್ರವೇಶಕ್ಕೆ ಒತ್ತಾಯ

    ನಾನು ಶಾಲೆಗೆ ಹೋಗುವಾಗ ಯಾರೂ ಕೂಡ ಯಾವುದನ್ನು ಧರಿಸಕೊಂಡು ಬರುವುದನ್ನು ನೋಡಿಲ್ಲ. ಆದರೆ ಸಮವಸ್ತ್ರ ಮಾತ್ರ ಕಡ್ಡಾಯವಾಗಿತ್ತು. ನನ್ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಈವರೆಗೆ ಯಾರು ಕೂಡ ಈ ಬಗ್ಗೆ ಪ್ರಶ್ನೆ ಮಾಡಿಲ್ಲ. ಆದರೆ ಇದೀಗ ಈ ಗೊಂದಲ ಯಾಕೆ?. ಸರಸ್ವತಿ ಜ್ಞಾನದ ಸಂಕೇತ ಕೆಲ ಕಿಡಿಗೇಡಿಗಳು ಈ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಶಿಕ್ಷಣದ ಬಗ್ಗೆ ಜ್ಞಾನವಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಧರ್ಮ ಬರುವುದು ತಪ್ಪು.

    ಶಿಕ್ಷಣದಲ್ಲಿ ಸಮಾನತೆ, ಶಿಸ್ತು, ಜ್ಞಾನವನ್ನು ವೃದ್ಧಿಸುವ ಸ್ಥಳ ಶಾಲಾ-ಕಾಲೇಜು ಇಲ್ಲಿ ಧರ್ಮದ ಆಚರಣೆಗೆ ಮುಂದಾಗಬೇಡಿ. ನಿಮ್ಮ ಧರ್ಮದ ಆಚರಣೆಯನ್ನು ನಿಮ್ಮ ಇಚ್ಛೆಯ ಪ್ರಕಾರ ಇತರ ಸ್ಥಳಗಲ್ಲಿ ಆಚರಿಸಿ. ಶಿಕ್ಷಣದ ವಿಚಾರದಲ್ಲಿ ಸುಮ್ಮನೆ ರಾಜಕೀಯ ಮಾಡಬೇಡಿ ಎಂದಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳಲ್ಲಿ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ನಿಷೇಧ: ಕಮಲ್ ಪಂತ್

  • ದೇಶದ ಯುವಕರು ಇಬ್ಭಾಗವಾಗ್ತಿರೋದನ್ನು ನೋಡ್ತಿದ್ದರೆ ಬೇಸರವಾಗುತ್ತೆ: ರಮ್ಯಾ

    ದೇಶದ ಯುವಕರು ಇಬ್ಭಾಗವಾಗ್ತಿರೋದನ್ನು ನೋಡ್ತಿದ್ದರೆ ಬೇಸರವಾಗುತ್ತೆ: ರಮ್ಯಾ

    ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳಿಂದ ಹಿಜಬ್- ಕೇಸರಿ ಶಾಲು ಸಂಘರ್ಷ ನಟೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಸಂಸದೆ, ನಟಿ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ವೀಡಿಯೋವೊಂದನ್ನು ಟ್ವೀಟ್ ಮಾಡಿ, ಭಾರತದ ಯುವಕರು ಈ ರೀತಿ ಇಬ್ಭಾವಾಗುತ್ತಿರುವುದನ್ನು ನೋಡುತ್ತಿದ್ದರೆ ತುಂಬಾ ಬೇಸರವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಕಿನಿ, ಜೀನ್ಸ್, ಹಿಜಬ್ ಹೀಗೆ ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು : ಪ್ರಿಯಾಂಕಾ ಗಾಂಧಿ

    ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಬ್-ಕೇಸರಿ ಫೈಟ್‍ಗೆ ಲಗಾಮು ಹಾಕುವ ನಿಟ್ಟಿನಲ್ಲಿ ಸರ್ಕಾರ ಸಮವಸ್ತ್ರ ಕಡ್ಡಾಯ ಆದೇಶ ಮಾಡಿದೆ. ಆದರೆ ಸರ್ಕಾರದ ಆದೇಶಕ್ಕೆ ಹಿಜಬ್‍ಧಾರಿ ವಿದ್ಯಾರ್ಥಿಗಳು ಡೋಂಟ್‍ಕೇರ್ ಅಂದಿದ್ದಾರೆ. ಮತ್ತೆ ಮೊಂಡುವಾದ ಮಾಡಿ ಹಿಜಬ್ ಧರಿಸಿಯೇ ಎಲ್ಲೆಡೆ ವಿದ್ಯಾರ್ಥಿನಿಯರು ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಹಿಜಬ್ ಹೋರಾಟದ ಮೂಲ ಜಿಲ್ಲೆ ಉಡುಪಿಯಲ್ಲಿ ಇಂದು ಹೈಡ್ರಾಮಾ ಜೋರಾಗಿತ್ತು. ಸರ್ಕಾರದ ಆದೇಶ ಬಂದ ಹಿನ್ನೆಲೆಯಲ್ಲಿ ಇಂದು ಏನಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ ಹಗ್ಗಜಗ್ಗಾಟ ಜೋರಾಗಿತ್ತು. ಇದನ್ನೂ ಓದಿ: Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್‌

    ಸರ್ಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದಲ್ಲಿ ಸ್ಕಾರ್ಫ್‍ಗಾಗಿ ಪ್ರತಿಭಟನೆ ಮಾಡುತ್ತಿರುವ 22 ವಿದ್ಯಾರ್ಥಿನಿಯರು ಬುರ್ಖಾ ತೊಟ್ಟು ಬಂದಿದ್ದರು. ಸರ್ಕಾರದ ಆದೇಶವನ್ನು ಪ್ರಾಂಶುಪಾಲರು ಪ್ರಾಧ್ಯಾಪಕರು ವಿವರಿಸಿದರೂ ಅದಕ್ಕೆ ವಿದ್ಯಾರ್ಥಿನಿಯರು ಒಪ್ಪಲಿಲ್ಲ. ವಾಪಸ್ ಕಳಿಸೋಕೆ ನೋಡಿದ್ರು. ಕೊನೆಗೆ ವಿದ್ಯಾರ್ಥಿಗಳು ಹೊರಗಡೆ ನಿಲ್ಲೋದು ಬೇಡ ಅಂತಾ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಪ್ರತ್ಯೇಕ ಕೊಠಡಿಯಲ್ಲಿ ಕೂರಿಸೋ ವ್ಯವಸ್ಥೆ ಮಾಡಿದ್ರು. 22 ವಿದ್ಯಾರ್ಥಿನಿಯರು ಆ ರೂಂ ಸೇರಬೇಕಾಯ್ತು. ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಸಭಾಂಗಣದ ಕೋಣೆಯಲ್ಲಿ ಕಾಲಕಳೆದರು. ಕೊನೆಗೆ ಕೂತು ಕೂತು ಸಂಜೆ ಮನೆಗೋದ್ರು.

    ಇಷ್ಟಾಗುತ್ತಲೇ ಜಿಲ್ಲೆಯ ಹಲವು ಕಾಲೇಜಿನಲ್ಲಿ ಕೇಸರಿ ವರ್ಸಸ್ ಹಿಜಬ್ ಜಟಾಪಟಿ ನಡೆಯಿತು. ನಿನ್ನೆ ಹೈಕೋರ್ಟ್ ನಲ್ಲಿ ವಾದ-ಪ್ರತಿವಾದಗಳ ಮಧ್ಯೆಯೂ ರಾಜ್ಯಾದ್ಯಂತ ತಿಕ್ಕಾಟ ಮುಂದುವರಿದಿತ್ತು. ಇಂದು ಮತ್ತೆ 2.30ಗೆ ಈ ಸಂಬಂಧ ವಿಚಾರಣೆ ನಡೆಯಲಿದೆ.

  • ರಾಜ್ಯದಲ್ಲಿ ಒಂದು ಕಡೆ ಹಿಜಬ್ ಕಿಡಿ ಇನ್ನೊಂದೆಡೆ ಕೇಸರಿ, ನೀಲಿ ಶಾಲು ಸಂಘರ್ಷ!

    ರಾಜ್ಯದಲ್ಲಿ ಒಂದು ಕಡೆ ಹಿಜಬ್ ಕಿಡಿ ಇನ್ನೊಂದೆಡೆ ಕೇಸರಿ, ನೀಲಿ ಶಾಲು ಸಂಘರ್ಷ!

    ರಾಯಚೂರು: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹಿಜಬ್ ವಿವಾದ ಜೋರಾಗುತ್ತಿದೆ. ಈ ನಡುವೆ ಹಿಜಬ್ ಹೆಸರಿನಲ್ಲಿ ಕೇಸರಿ ಹಾಗೂ ನೀಲಿ ಶಾಲು ವಿವಾದ ಶುರುವಾಗಿದೆ.

    ಸಿಂಧನೂರು ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜ್‍ನಲ್ಲಿ ಕೇಸರಿ ಹಾಗೂ ನೀಲಿ ಶಾಲು ಧರಿಸಿ ಬಂದಿದ್ದ ವಿದ್ಯಾರ್ಥಿಗಳು ಪರಸ್ಪರ ಘೋಷಣೆಗಳನ್ನು ಕೂಗಿ ಸಂಘರ್ಷ ಆರಂಭವಾಗಿದೆ. ವಿದ್ಯಾರ್ಥಿಗಳ ಗುಂಪು ಜೈ ಶ್ರೀರಾಮ್ ಮತ್ತು ಜೈ ಭೀಮ್ ಎಂದು ಘೋಷಣೆ ಕೂಗಿದ ಬಳಿಕ ವಾಗ್ವಾದ ಆರಂಭವಾಗಿದೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ 20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ತಾರಕಕ್ಕೇರಿದ ಹಿಜಬ್ ವಿವಾದ – ಶಿಕ್ಷಕರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ

    ಇತ್ತ ರಾಯಚೂರು ನಗರದಲ್ಲಿ ಹಿಜಬ್ ಪರ ವಿದ್ಯಾರ್ಥಿನಿಯರು ಧ್ವನಿ ಎತ್ತಿದ್ದು ಕೇಸರಿ, ಬಿಳಿ, ಹಸಿರು ಬಣ್ಣದ ಹಿಜಬ್ ಧರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಹಿಜಬ್ ಬೇಕೇ ಬೇಕು, ಇದು ನಮ್ಮ ಮೂಲಭೂತ ಹಕ್ಕು. ಕೇಸರಿ ಶಾಲಿಗೆ ನಮ್ಮ ವಿರೋಧವಿಲ್ಲ ನಮಗೆ ಹಿಜಬ್‍ಗೆ ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.  ಇದನ್ನೂ ಓದಿ: ಶಿವಮೊಗ್ಗ ಕಾಲೇಜಿನಲ್ಲಿ ಕೇಸರಿ ಧ್ವಜ ಹಾರಾಟ, ಕಲ್ಲು ತೂರಾಟ – ನಿಷೇಧಾಜ್ಞೆ ಜಾರಿ

  • ಶಿವಮೊಗ್ಗದಲ್ಲಿ ಭುಗಿಲೆದ್ದ ಹಿಜಬ್-ಕೇಸರಿ ವಿವಾದ- ರಾಷ್ಟ್ರಧ್ವಜ ಹಾರಿಸುವಲ್ಲಿ ಭಗವಾನ್ ಧ್ವಜ ಹಾರಿಸಿದ ವಿದ್ಯಾರ್ಥಿಗಳು

    ಶಿವಮೊಗ್ಗದಲ್ಲಿ ಭುಗಿಲೆದ್ದ ಹಿಜಬ್-ಕೇಸರಿ ವಿವಾದ- ರಾಷ್ಟ್ರಧ್ವಜ ಹಾರಿಸುವಲ್ಲಿ ಭಗವಾನ್ ಧ್ವಜ ಹಾರಿಸಿದ ವಿದ್ಯಾರ್ಥಿಗಳು

    ಶಿವಮೊಗ್ಗ: ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆಯಲಿದ್ದು, ಈ ಮಧ್ಯೆಯೇ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಹಿಜಬ್- ಕೇಸರಿ ಶಾಕು ಸಂಘರ್ಷ ತಾರಕಕ್ಕೇರಿದೆ. ಅಂತೆಯೇ ಶಿವಮೊಗ್ಗದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಾರಿಸುವ ಸ್ಥಳದಲ್ಲಿ ಭಗವಾನ್ ಧ್ವಜ ಹಾರಿಸಿದ್ದಾರೆ.

    ಶಿವಮೊಗ್ಗದ ಬಹುತೇಕ ಕಾಲೇಜುಗಳಲ್ಲಿ ಹಿಜಬ್, ಕೇಸರಿ ಶಾಲು ವಿವಾದ ಭುಗಿಲೆದಿದೆ. ಸಹ್ಯಾದ್ರಿ ಕಾಲೇಜ್, ಸರಕಾರಿ ಪದವಿ ಕಾಲೇಜ್ ಹಾಗು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸರಕಾರಿ ಪದವಿ ಕಾಲೇಜಿನಲ್ಲಿ ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಜಾರ್ಜ್ ಮಾಡಿದ್ದಾರೆ.

    ಶಿವಮೊಗ್ಗದ ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಮದು ಘೋಷಣೆ ಕೂಗಿದ್ದಾರೆ. ಸ್ಥಳಕ್ಕೆ ಎಸ್‍ಪಿ ಲಕ್ಷ್ಮಿ ಪ್ರಸಾದ್ ದೌಡಾಯಿಸಿದ್ದಾರೆ. ಇದನ್ನೂ ಓದಿ: ಕೇಸರಿ ಪೇಟ, ಕೇಸರಿ ಶಾಲಿನೊಂದಿಗೆ ಕಾಲೇಜಿಗೆ ಬಂದ ಎಂಜಿಎಂ ವಿದ್ಯಾರ್ಥಿಗಳು!

    ಒಟ್ಟನಲ್ಲಿ ಹೈಕೋರ್ಟ್ ವಿಚಾರಣೆ ನಡುವೆಯೇ ರಾಜ್ಯಾದ್ಯಂತ ಹಿಜಬ್- ಕೇಸರಿ ಶಾಲು ಸಂಘರ್ಷ ವಿಕೋಪಕ್ಕೆ ತಿರುಗುತ್ತಿದೆ. ರಾಜ್ಯದ ಹಲವಡೆ ಕಲ್ಲುತೂರಾಟ ನಡೆಯುತ್ತಿದೆ. ಪರಿಸ್ಥಿತಿ ನಿಯಂತ್ರಿಸಲು ಆಯಾ ಕಾಲೇಜಿನ ಆಡಳಿತ ಮಂಡಳಿಗಳು ಹಾಗೂ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಧಮ್ ಇದ್ರೆ ಮಸೀದಿಗೆ ಮುಸ್ಲಿಂ ಮಹಿಳೆಗೆ ಪ್ರವೇಶ ಕೊಡಿಸಿ- ಶಾಸಕಿಗೆ ಈಶ್ವರಪ್ಪ ಸವಾಲು

  • ಗ್ರಾಮೀಣ ಭಾಗದ ಜನರಿಗೆ ಕೇಸರಿ ಬಣ್ಣದ ಬಸ್ ಸೇವೆ ಆರಂಭಿಸಿದ ಯೋಗಿ ಸರ್ಕಾರ

    ಗ್ರಾಮೀಣ ಭಾಗದ ಜನರಿಗೆ ಕೇಸರಿ ಬಣ್ಣದ ಬಸ್ ಸೇವೆ ಆರಂಭಿಸಿದ ಯೋಗಿ ಸರ್ಕಾರ

    ಲಕ್ನೋ: ಉತ್ತರ ಪ್ರದೇಶದ ಯೋಗಿ ಸರ್ಕಾರ ಬುಧವಾರ ರಾಜ್ಯ ಗ್ರಾಮೀಣ ಸಾರಿಗೆ ವ್ಯವಸ್ಥೆಗೆ ಹೊಸ ಕೇಸರಿ ಬಣ್ಣದ ಸಾರಿಗೆ ಬಸ್‍ಗಳ ಸೇವೆಯನ್ನು ಆರಂಭಿಸಿದ್ದು, ಸಿಎಂ ಯೋಗಿ ಅದಿತ್ಯನಾಥ್ ಬುಧವಾರ 50 ಬಸ್‍ಗಳಿಗೆ ಚಾಲನೆ ನೀಡಿದರು.

    ಬಸ್ ಸೇವೆಗೆ ಸರ್ಕಾರಿ ಸಾರಿಗೆ ಇಲಾಖೆಯು `ಸಂಕಲ್ಪ್’ ಎಂದು ಹೆಸರಿಟ್ಟಿದ್ದು, ಸುಮಾರು 40 ಸಾವಿರ ಹಳ್ಳಿಗಳಿಗೆ ಮುಂದಿನ ನಾಲ್ಕು ವರ್ಷಗಳಲ್ಲಿ ಸೇವೆಯನ್ನು ನೀಡುವ ಗುರಿಯನ್ನು ಹೊಂದಿದೆ.

    ಪ್ರಸ್ತುತ ಈ ಯೋಜನೆಯು ರಾಜ್ಯದ ವಾರಣಾಸಿ, ಗೋರಖ್‍ಪುರ, ಕಾನ್‍ಪುರ, ಅಲಹಾಬಾದ್, ಬರೇಲಿ ಮತ್ತು ಮೊರಾದಾಬಾದ್ ಜಿಲ್ಲೆಗಳ ಗ್ರಾಮಗಳಿಗೆ ಸೇವೆಯನ್ನು ನೀಡಲಿದೆ. 16 ಸಾವಿರ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಒದಗಿಸಲು 1,500 ಬಸ್‍ಗಳು ಸಿದ್ಧವಾಗಿವೆ.

    `ಗೌರವ್ ಪಥ್’ ರಸ್ತೆ ನಿರ್ಮಾಣ ಯೋಜನೆಯನ್ನು ಆರಂಭಿಸುವ ಮೂಲಕ ಯೋಗಿ ಅದಿತ್ಯನಾಥ್ ಸರ್ಕಾರವು ರಾಜ್ಯದ ಕುಗ್ರಾಮಗಳಿಗೂ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಸೇವೆಯನ್ನು ನೀರುವ ಉದ್ದೇಶವನ್ನು ಹೊಂದಿದೆ. ಹುತಾತ್ಮ ಯೋಧರ ಗ್ರಾಮಗಳಿಗೆ ಗೌರವ್ ಪಥ್/ಸಂಪರ್ಕ ರಸ್ತೆಗಳನ್ನ ನಿರ್ಮಿಸಲು ಬಿಜೆಪಿ ಸರ್ಕಾರ ಯೋಜನೆ ರೂಪಿಸಿದ್ದು, ಈ ಗ್ರಾಮಗಳಿಗೆ ಬಸ್ ವ್ಯವಸ್ಥೆ ಸಂಪರ್ಕ ಕಲ್ಪಿಸಲಿದೆ.

    ಈ ಹಿಂದೆ ಉತ್ತರ ಪ್ರದೇಶದಲ್ಲಿ ಆಡಳಿತ ವಹಿಸಿದ್ದ ಸಮಾಜವಾದಿ ಪಕ್ಷವು ಲೋಹಿಯಾ ಬಸ್ ಸೇವಾ ಯೋಜನೆಯನ್ನು ಜಾರಿಗೆ ತಂದು ಶೇ.25 ರಷ್ಟು ರಿಯಾಯಿತಿ ದರದಲ್ಲಿ ಸೇವೆಯನ್ನು ನೀಡುತ್ತಿದೆ. ಆದರೆ ಸಂಕಲ್ಪ್ ಬಸ್‍ಗಳಲ್ಲಿ ಸಾಮಾನ್ಯ ಟಿಕೆಟ್ ದರವೇ ಇದೆ. ಏಕೆಂದರೆ ಸಂಕಲ್ಪ್ ಯೋಜನೆಗೆ ಧನಸಹಾಯದ ಕೊರತೆ ಇದ್ದು, ಮುಂದಿನ ದಿನಗಳಲ್ಲಿ ಧನಸಹಾಯ ಸಿಕ್ಕರೆ ರಿಯಾಯಿತಿನ್ನು ನೀಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸುಮಾರು 38,254 ಗ್ರಾಮಗಳನ್ನು ಈ ಯೋಜನೆ ಅಡಿಯಲ್ಲಿ ಗುರುತಿಸಲಾಗಿದೆ ಎಂದು ಉತ್ತರ ಪ್ರದೇಶ ಕಿರಿಯ ಸಾರಿಗೆ ಸಚಿವ ಸ್ವಾತಂತ್ ದೇವ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಪ್ರಯಾಣಿಕರಿಗೆ ಅನುಕೂಲಕಾರ ಹಾಗೂ ಸುರಕ್ಷಿತ ಸೇವೆ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಪ್ರಮುಖವಾಗಿ ಜಿಲ್ಲಾ ಕೇಂದ್ರಗಳಿಂದ ಗ್ರಾಮಗಳಿಗೆ ಹೆಚ್ಚು ಪ್ರಯಾಣ ಸೇವೆಯನ್ನು ನೀಡಲಿದ್ದು, ಖಾಸಗಿ ಸೇವಾ ಸಂಸ್ಥೆಗೆ ಮುಂದಿನ ದಿನಗಳಲ್ಲಿ ಬಸ್‍ಗಳ ನಿರ್ವಹಣೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಸಂಕಲ್ಪ್ ಯೋಜನೆಯಿಂದ ಪ್ರತಿವರ್ಷ 9,563 ಹಳ್ಳಿಗಳಿಗೆ ಸೇವೆಯನ್ನು ವಿಸ್ತರಿಸುವ ಚಿಂತನೆಯನ್ನು ನಡೆಸಿದ್ದು, ನಾಲ್ಕು ವರ್ಷಗಳಲ್ಲಿ ರಾಜ್ಯದ ಎಲ್ಲಾ ಗ್ರಾಮಗಳು ಬಸ್ ವ್ಯವಸ್ಥೆಯನ್ನು ಹೊಂದಿರಲಿವೆ. ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯು ಇದುವರೆಗೂ ಸುಮಾರು 5 ಸಾವಿರ ಹಳ್ಳಿಗಳಿಗೆ ತನ್ನ ಸೇವೆಯನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.