Tag: saffron shawls

  • ಕಾಲೇಜಿನಲ್ಲಿ ಹಿಜಬ್‍, ಕೇಸರಿ ಶಾಲು ಇವೆರಡಕ್ಕೂ ಅವಕಾಶ ಇಲ್ಲ: ಬಿ.ಸಿ ನಾಗೇಶ್

    ಕಾಲೇಜಿನಲ್ಲಿ ಹಿಜಬ್‍, ಕೇಸರಿ ಶಾಲು ಇವೆರಡಕ್ಕೂ ಅವಕಾಶ ಇಲ್ಲ: ಬಿ.ಸಿ ನಾಗೇಶ್

    ಬೆಂಗಳೂರು: ಇಂದು ಹೈಕೋರ್ಟ್‍ಗೆ ನಮ್ಮ ಕ್ರಮಗಳ ಬಗ್ಗೆ ಎಜಿ ತಿಳಿಸಿದ್ದಾರೆ. ಹಿಜಾಬ್ ಪ್ರಕರಣದ ಹಿಂದೆ ಬೇರೆ ಶಕ್ತಿಗಳು ಕೆಲಸ ಮಾಡುತ್ತಿದೆ. ಈ ಕುರಿತು ಪೊಲೀಸ್ ಇಲಾಖೆ ಮೂಲಕ ತನಿಖೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಕಾಲೇಜು ನಿಯಮ ಪಾಲನೆ ಮಾಡಿದ್ರೆ ಮಾತ್ರ ಕಾಲೇಜಿಗೆ ಎಂಟ್ರಿ ಇಲ್ಲ ಅಂದ್ರೆ ಯಾವುದೇ ಕಾರಣಕ್ಕೂ ಎಂಟ್ರಿ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.

    ಹಿಜಬ್ ವಿವಾದದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೋರ್ಟ್‍ಗೆ ಎಲ್ಲರೂ ಒಂದೇ ಎಂಬ ಮನಸ್ಥಿತಿ, ಶಿಕ್ಷಣ ಇಲಾಖೆಯ ಸಮಾನತೆಯ ರೂಲ್ಸ್ ಎಲ್ಲವನ್ನೂ ನಾವು ಸ್ಪಷ್ಟಪಡಿಸುತ್ತೇವೆ. ಈ ನಿಯಮಗಳನ್ನು ಎಲ್ಲರೂ ಪಾಲನೆ ಮಾಡಿದರೆ ಮಾತ್ರ ವಿದ್ಯಾರ್ಥಿಗಳು ಕಾಲೇಜಿಗೆ ಬರಲಿ ಇಲ್ಲದೆ ಹೋದ್ರೆ ಕಾಲೇಜಿಗೆ ಎಂಟ್ರಿ ಇಲ್ಲ. ಕೋರ್ಟ್‍ಗೆ ಇವತ್ತು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡ್ತೀವಿ. 14 ಲಕ್ಷ ಮಕ್ಕಳ ಪೈಕಿ 29 ಮಕ್ಕಳಿಂದ ವ್ಯವಸ್ಥೆ ಹಾಳಾಗಲು ನಾವು ಬಿಡುವುದಿಲ್ಲ. ಸರ್ಕಾರ ವ್ಯವಸ್ಥೆ ಹಾಳು ಮಾಡೋದಕ್ಕೆ ಅವಕಾಶ ಕೊಡುವುದಿಲ್ಲ. ಈ ವಿವಾದದ ಹಿಂದೆ ಕೆಲ ಸಂಘಟನೆಗಳು ಕೆಲಸ ಮಾಡುತ್ತೀವೆ. ಈ ಬಗ್ಗೆ ಪೊಲೀಸ್ ತನಿಖೆ ಮಾಡಿಸ್ತೀವಿ. ಸಂವಿಧಾನದ ಬಗ್ಗೆ ಮಾತಾಡೋರು ಮೊದಲು ಸಂವಿಧಾನ ಓದಲಿ. ಸರ್ಕಾರದ ನಿಯಮಗಳನ್ನು ವಿದ್ಯಾರ್ಥಿಗಳು ಪಾಲನೆ ಮಾಡಲೇಬೇಕು ಎಂದು ತಿಳಿ ಹೇಳಿದ್ದಾರೆ. ಇದನ್ನೂ ಓದಿ: ಕೇಸರಿ ಪೇಟ, ಕೇಸರಿ ಶಾಲಿನೊಂದಿಗೆ ಕಾಲೇಜಿಗೆ ಬಂದ ಎಂಜಿಎಂ ವಿದ್ಯಾರ್ಥಿಗಳು!

    ಸಮಾನತೆಯನ್ನು ಶಾಲೆಗಳಲ್ಲಿ ಬರುವಂತೆ ಮಾಡುವಲ್ಲಿ ಸಮವಸ್ತ್ರ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಹಾಗಾಗಿ ಸರ್ಕಾರ ಈ ಬಗ್ಗೆ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುತ್ತದೆ. ಇದೀಗ ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜು ಧರ್ಮದ ಕೇಂದ್ರವಾಗುವುದನ್ನು ಮತ್ತು ಅಲ್ಲಿ ನಡೆಯುವ ಅಶಾಂತಿಯನ್ನು ತಪ್ಪಿಸಲು ಸರ್ಕಾರ ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.  ಇದನ್ನೂ ಓದಿ: ಧರ್ಮವನ್ನು ಮನೆಗಳಲ್ಲಿ ಆಚರಿಸಿ, ಶಿಕ್ಷಣಕ್ಕೆ ತರಬೇಡಿ: ಸುರಯ್ಯ ಅಂಜುಮ್

  • ಕಾಲೇಜುಗಳಲ್ಲಿ ಮುಂದಿನ ವರ್ಷದಿಂದ ಏಕರೂಪ ಸಮವಸ್ತ್ರ ನಿಯಮ ಜಾರಿ

    ಕಾಲೇಜುಗಳಲ್ಲಿ ಮುಂದಿನ ವರ್ಷದಿಂದ ಏಕರೂಪ ಸಮವಸ್ತ್ರ ನಿಯಮ ಜಾರಿ

    ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾಗಿರುವ ಹಿಜಬ್, ಕೇಸರಿ ಶಾಲು ಸಂಘರ್ಷಕ್ಕೆ ಕಾನೂನಾತ್ಮಕವಾಗಿ ಅಂತ್ಯ ಹಾಡಲು ಶಿಕ್ಷಣ ಇಲಾಖೆ ಸಿದ್ದತೆ ನಡೆಸಿದೆ. ಈ ನಿಟ್ಟಿನಲ್ಲಿ ಸಿದ್ದತೆ ಪ್ರಾರಂಭ ಮಾಡಿರುವ ಶಿಕ್ಷಣ ಇಲಾಖೆಯು ಕಾನೂನು ಇಲಾಖೆ ಜೊತೆ ಚರ್ಚೆ ಮಾಡಿದೆ.

    1ರಿಂದ 10ನೇ ತರಗತಿಗಳಿಗೆ ಇರುವಂತೆ ಡ್ರೆಸ್ ಕೋಡ್ ನಿಯಮ ಕಾಲೇಜುಗಳಲ್ಲಿ ಜಾರಿ ಮಾಡಲು ಶಿಕ್ಷಣ ಇಲಾಖೆ ಸಿದ್ದತೆ ಮಾಡಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಡ್ರೆಸ್ ಕೋಡ್ ಜಾರಿಗೆ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದ್ದು, ಹೈಕೋರ್ಟ್ ತೀರ್ಪು ನೋಡಿಕೊಂಡು ಮುಂದಿನ ತೀರ್ಮಾನ ಮಾಡಲು ನಿರ್ಧರಿಸಿದೆ. ಇದನ್ನೂ ಓದಿ: ಶಾಲಾ-ಕಾಲೇಜುಗಳಲ್ಲಿ ಹಿಜಬ್‌, ಕೇಸರಿ ಶಾಲು ಧರಿಸಬಾರದು: ಸತೀಶ್‌ ಜಾರಕಿಹೊಳಿ

    ಸಮವಸ್ತ್ರ ನಿಯಮ ಜಾರಿಗೆ ಸರ್ಕಾರಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ಕರ್ನಾಟಕ ಶಿಕ್ಷಣ ಕಾಯ್ದೆ 1983 ಮತ್ತು 1995, 2017, 2018 ಕಾಯ್ದೆಯಲ್ಲಿ ಸರ್ಕಾರಕ್ಕೆ ಸಮವಸ್ತ್ರ ನಿಯಮ ಜಾರಿಗೆ ಸಂಪೂರ್ಣ ಅಧಿಕಾರ ಇದೆ. ಈ ಕಾಯ್ದೆ ಅನ್ವಯವೇ ಕಾನೂನಾತ್ಮವಾಗಿಯೇ ಕಾಲೇಜುಗಳಿಗೆ ಸಮವಸ್ತ್ರ ನೀತಿ ಜಾರಿಗೆ ಸಿದ್ದತೆ ಮಾಡಿದೆ.

    ಸಮವಸ್ತ್ರ ನಿಯಮ ಹೇಗಿರಲಿದೆ?
    1ರಿಂದ 10 ನೇ ತರಗತಿಗಳಿಗೆ ಇರುವಂತೆ ಪದವಿ ಪೂರ್ವ ಕಾಲೇಜುಗಳಿಗೂ ಏಕರೂಪದ ಡ್ರೆಸ್ ಕೋಡ್ ನಿಯಮ ಜಾರಿ ಮಾಡಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಡ್ರೆಸ್ ಕೋಡ್ (ಸಮವಸ್ತ್ರ) ನಿಯಮ ಜಾರಿಗೆ ಬರಲಿದೆ. ಧಾರ್ಮಿಕ ಭಾವನೆಗಳಿಗೆ ಪ್ರೋತ್ಸಾಹ ನೀಡುವುದಾಗಲಿ ಅಥವಾ ಧಕ್ಕೆ ಉಂಟು ಮಾಡದಂತೆ ಏಕರೂಪದ ಸಮವಸ್ತ್ರ ನಿಯಮ ಜಾರಿ ಮಾಡಲಾಗುತ್ತದೆ. ಯಾವ ಮಾದರಿಯ (ಡಿಸೈನ್) ಡ್ರೆಸ್ ಧರಿಸಬೇಕು‌. ಯಾವ ಬಣ್ಣದ (ಕಲರ್) ಡ್ರೆಸ್ ಧರಿಸಬೇಕು ಎನ್ನುವುದು SDMCಗಳ ವಿವೇಚನೆಗೆ ಬಿಡಲು ನಿರ್ಧಾರ ಮಾಡಲಾಗಿದೆ. ಇದನ್ನೂ ಓದಿ: ಮುಸ್ಲಿಂ ಮುಖಂಡರ ಅಭಿಪ್ರಾಯ ಪಡೆದು ಸಮವಸ್ತ್ರ ಕಡ್ಡಾಯ ಮಾಡಿ: ಉಮರ್ ಷರೀಫ್

    ಕೇಂದ್ರೀಯ ವಿದ್ಯಾಲಯ, ಸಿಬಿಎಸ್ಸಿ ಬೋರ್ಡ್‌ಗಳ ಮಾದರಿಯಲ್ಲಿ ಸಮವಸ್ತ್ರ ನಿಯಮವನ್ನು ರಾಜ್ಯದಲ್ಲಿ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಇದಲ್ಲದೆ ಮುಂದಿನ ವರ್ಷದಿಂದ ಶಾಲಾ-ಕಾಲೇಜುಗೆ ಸೇರುವಾಗಲೇ ವಿದ್ಯಾರ್ಥಿಗಳಿಗೆ ನಿಯಮದ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ಅಂಶ ಉಲ್ಲೇಖ ಮಾಡಲಾಗುತ್ತದೆ. ಶಿಕ್ಷಣ ಇಲಾಖೆಯಿಂದಲೇ ಶಾಲಾ ಮಕ್ಕಳಿಗೆ ಕೊಡುತ್ತಿರುವ ರೀತಿ 2 ಜೊತೆ ಸಮವಸ್ತ್ರ ಕೊಡುವ ಬಗ್ಗೆ ಚರ್ಚಿಸಲಾಗುವುದು. ಆರ್ಥಿಕ ಪರಿಸ್ಥಿತಿ ಹೊಂದಾಣಿಕೆ ಆದರೆ ಸರ್ಕಾರದಿಂದಲೇ ಸಮವಸ್ತ್ರ ನೀಡುವ ಚಿಂತನೆಯನ್ನು ಇಲಾಖೆ ಮಾಡಿದೆ.