Tag: safari

  • Bannerghatta | ಸಫಾರಿಗೆ ತೆರಳಿದ್ದ ಪ್ರವಾಸಿಗ ಹೃದಯಾಘಾತಕ್ಕೆ ಬಲಿ

    Bannerghatta | ಸಫಾರಿಗೆ ತೆರಳಿದ್ದ ಪ್ರವಾಸಿಗ ಹೃದಯಾಘಾತಕ್ಕೆ ಬಲಿ

    ಆನೇಕಲ್: ಸಫಾರಿಗೆ (Safari) ಹೋಗಿದ್ದ ಪ್ರವಾಸಿಗ (Tourist) ಹೃದಯಾಘಾತಕ್ಕೆ (Heart Attack) ಬಲಿಯಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯ ಬನ್ನೇರುಘಟ್ಟ (Bannerghatta) ಜೈವಿಕ ಉದ್ಯಾನವನದಲ್ಲಿ ನಡೆದಿದೆ.

    ಬೆಂಗಳೂರಿನ ನಾಗರಬಾವಿಯ ನಿವಾಸಿ ನಂಜಪ್ಪ (45) ಮೃತ ವ್ಯಕ್ತಿ. ಶನಿವಾರ ಸಫಾರಿಗೆ ಬಂದಿದ್ದ ವೇಳೆ ಘಟನೆ ನಡೆದಿದೆ. ಪತ್ನಿ ಇಬ್ಬರು ಮಕ್ಕಳೊಂದಿಗೆ ಸಫಾರಿ ವೀಕ್ಷಣೆ ಬಂದಿದ್ದ ವೇಳೆ ನಂಜಪ್ಪ ಸಫಾರಿ ಬಸ್ಸಿನಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇದನ್ನೂ ಓದಿ: ಮಾನವ ಕಳ್ಳಸಾಗಣಿಕೆ ಮಾಡಿದ್ದೀಯಾ ಅಂತ ಮಹಿಳಾ ವಿಜ್ಞಾನಿಗೆ ಬೆದರಿಸಿ ಲಕ್ಷ ಲಕ್ಷ ಪೀಕಿದ ಸೈಬರ್ ವಂಚಕ

    ಝೂ ಅಂಬುಲೆನ್ಸ್ ಮೂಲಕ ನಂಜಪ್ಪರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಂಜಪ್ಪ ಮೃತಪಟ್ಟಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮನ್ ಕೀ ಬಾತ್‌ನಲ್ಲಿ ಅಕ್ಷರ ಮಾಂತ್ರಿಕ ಎಸ್‌.ಎಲ್‌ ಭೈರಪ್ಪರನ್ನ ನೆನೆದ ಮೋದಿ

  • ಥಾಯ್ಲೆಂಡ್‌ನಲ್ಲಿ ಝೂ ಸಿಬ್ಬಂದಿಯನ್ನೇ ಕೊಂದು ತಿಂದ ಸಿಂಹಪಡೆ

    ಥಾಯ್ಲೆಂಡ್‌ನಲ್ಲಿ ಝೂ ಸಿಬ್ಬಂದಿಯನ್ನೇ ಕೊಂದು ತಿಂದ ಸಿಂಹಪಡೆ

    ಬ್ಯಾಂಕಾಕ್: ಥಾಯ್ಲೆಂಡ್‌ನ (Thailand) ಮೃಗಾಲಯದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಸಫಾರಿ (Safari) ಜೀಪ್‌ನಿಂದ ಇಳಿದ ಸಿಬ್ಬಂದಿಯನ್ನೇ ಸಿಂಹಗಳ (Lions) ಗುಂಪು ಎಳೆದೊಯ್ದು ಕೊಂದು ತಿಂದು ಹಾಕಿವೆ.

    ಬ್ಯಾಂಕಾಕ್‌ನಲ್ಲಿರುವ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಸಫಾರಿ ವರ್ಲ್ಡ್ ಮೃಗಾಲಯದಲ್ಲಿ ಈ ಭೀಕರ ಘಟನೆ ನಡೆದಿದೆ. ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಎದುರೇ ಸಿಂಹಗಳ ಗುಂಪೊಂದು ಮೃಗಾಲಯದ ಪಾಲಕ ಜಿಯಾನ್ ರಂಗ್ಖರಸಾಮೀ ಎಂಬಾತನ ಮೇಲೆ ಸಿಂಹಗಳ ಹಿಂಡೊಂದು ದಾಳಿ ನಡೆಸಿ ಕೊಂದು ಹಾಕಿದೆ. ಸುಮಾರು 15 ನಿಮಿಷಗಳ ಕಾಲ ನಡೆದ ಈ ಭೀಕರ ಘಟನೆಗೆ ನೂರಾರು ಪ್ರವಾಸಿಗರು ಸಾಕ್ಷಿಯಾಗಿದ್ದರು. ಅಲ್ಲದೆ ಕೆಲವರು ತಮ್ಮ ಮೊಬೈಲ್‌ನಲ್ಲಿ ಈ ಭೀಕರ ವೀಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಅಧಿಕಾರದ ಆಸೆಯಿಂದ ಬಂದಿಲ್ಲ, 6 ತಿಂಗಳಿಗಿಂತ ಹೆಚ್ಚು ದಿನ ಇರಲ್ಲ: ನೇಪಾಳ ಪ್ರಧಾನಿ

    ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಈ ಕುರಿತು ಆಘಾತ ವ್ಯಕ್ತಪಡಿಸಿರುವ ಸಫಾರಿ ವರ್ಲ್ಡ್ ಆಡಳಿತ ಮಂಡಳಿ ಮೃತ ಸಿಬ್ಬಂದಿಯ ಕುಟುಂಬಕ್ಕೆ ಸಂತಾಪ ಸೂಚಿಸಿದೆ. ಅಲ್ಲದೆ ಮೃಗಾಲಯದಲ್ಲಿನ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುವುದಾಗಿ ತಿಳಿಸಿದೆ. ಇದನ್ನೂ ಓದಿ: ಅಸ್ಸಾಂನ ಗುವಾಹಟಿಯಲ್ಲಿ 5.8 ತೀವ್ರತೆಯ ಭೂಕಂಪ – ಉತ್ತರ ಬಂಗಾಳ, ಭೂತಾನ್‌ನಲ್ಲೂ ಕಂಪನ

  • ಬಂಡೀಪುರ | ಸಫಾರಿ ವಾಹನವನ್ನು ಅಟ್ಟಾಡಿಸಿದ ಕಾಡಾನೆ – ವೀಡಿಯೋ ವೈರಲ್

    ಬಂಡೀಪುರ | ಸಫಾರಿ ವಾಹನವನ್ನು ಅಟ್ಟಾಡಿಸಿದ ಕಾಡಾನೆ – ವೀಡಿಯೋ ವೈರಲ್

    ಚಾಮರಾಜನಗರ: ಸಫಾರಿ ವಾಹನದ ಮೇಲೆ ಕಾಡಾನೆಯೊಂದು (Wild Elephant) ದಾಳಿಗೆ ಯತ್ನಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ (Bandipura) ಸಫಾರಿಯಲ್ಲಿ ನಡೆದಿದೆ.

    ಸಫಾರಿ (Safari) ರಸ್ತೆಯ ಪಕ್ಕದಲ್ಲಿ ನಿಂತಿದ್ದ ಕಾಡಾನೆಯೊಂದು ಸಫಾರಿ ಜೀಪ್ ಕಂಡ ಕೂಡಲೇ ಅಟ್ಟಾಡಿಸಿಕೊಂಡು ಬಂದಿದೆ. ಈ ವೇಳೆ ಚಾಲಕ ಎಚ್ಚೆತ್ತುಕೊಂಡು ಜೀಪ್ ಅನ್ನು ರಿವರ್ಸ್ ಚಲಾಯಿಸಿ ಅಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕ್ರಿಕೆಟ್‌ ಪಂದ್ಯ ನಡೆಯುತ್ತಿದ್ದಾಗ ಪಾಕ್‌ ಸ್ಟೇಡಿಯಂನಲ್ಲಿ ಸ್ಫೋಟ – ಓರ್ವ ಸಾವು, ಹಲವರಿಗೆ ಗಾಯ

     ಈ ವೇಳೆ ಕೋಪಗೊಂಡ ಕಾಡಾನೆ ನೆಲಕ್ಕೆ ಕಾಲು ಕೆರೆದು ವಾರ್ನಿಂಗ್ ಕೊಟ್ಟಿದೆ. ಸಫಾರಿ ಜೀಪ್ ಅನ್ನು ಕಾಡಾನೆ ಅಟ್ಟಾಡಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಬನ್ನೇರುಘಟ್ಟ ಸಫಾರಿ ವೇಳೆ ಬೊಲೆರೋ ಹಿಂಬಾಲಿಸಿ ಬಾಲಕನ ಮೇಲೆ ಚಿರತೆ ದಾಳಿ

    ಬನ್ನೇರುಘಟ್ಟ ಸಫಾರಿ ವೇಳೆ ಬೊಲೆರೋ ಹಿಂಬಾಲಿಸಿ ಬಾಲಕನ ಮೇಲೆ ಚಿರತೆ ದಾಳಿ

    ಬೆಂಗಳೂರು: ಸಫಾರಿ ವೇಳೆ ಚಿರತೆಯೊಂದು (Leopard ) ಬಾಲಕನ ಮೇಲೆ ದಾಳಿ ಮಾಡಿದ ಘಟನೆ ಬನ್ನೇರುಘಟ್ಟದ (Bannerghatta Safari) ಜೈವಿಕ ಉದ್ಯಾನವನದಲ್ಲಿ ನಡೆದಿದೆ.

    ಶುಕ್ರವಾರ ಮಧ್ಯಾಹ್ನ ಸಫಾರಿ ವೇಳೆ ಈ ಘಟನೆ ನಡೆದಿದೆ. 13 ವರ್ಷದ ಬಾಲಕ ಪೋಷಕರ ಜೊತೆ ಸಫಾರಿಗೆ ತೆರಳಿದ್ದ. ಈ ವೇಳೆ ಚಿರತೆಯನ್ನು ನೋಡಿ ಚಾಲಕ ಬೊಲೆರೋ ನಿಲ್ಲಿಸಿದ್ದಾನೆ. ಇದನ್ನೂ ಓದಿ: ಗಿರೀಶ್ ಮಟ್ಟಣ್ಣನವರ್ ಹತ್ತಾರು ಎಕ್ರೆ ಪ್ರದೇಶದಲ್ಲಿ ರೆಸಾರ್ಟ್‌ ಮಾಡಿದ್ದಾನೆ ಬ್ರಾಹ್ಮಣ ಪುರೋಹಿತ ಪರಿಷತ್ಆರೋಪ

    ನಿಂತ ಕೆಲ ಕ್ಷಣದ ಬಳಿಕ ಬೊಲೆರೋ ಮುಂದಕ್ಕೆ ನಿಧಾನವಾಗಿ ಸಾಗಿದೆ. ಈ ವೇಳೆ ಬೊಲೆರೋ ಹಿಂಬಾಲಿಸಿದ ಚಿರತೆ ಕಿಟಕಿಯ ಮೂಲಕ ಕೈ ಹಾಕಿ ಉಗುರಿನಿಂದ ಪರಚಿದೆ. ಗಾಯಾಳು ಬಾಲಕನಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಬಾಲಕ ಮನೆಗೆ ತೆರಳಿದ್ದಾನೆ.

    ಚರತೆ ಬೊಲೆರೋ ಹತ್ತಿ ದಾಳಿ ನಡೆಸುತ್ತಿರುವ ದೃಶ್ಯ ಹಿಂಬದಿಯ ವಾಹನದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲಿನಲ್ಲಿ ಸೆರೆಯಾಗಿದೆ.

    ಪಾರ್ಕ್ ಒಳಗೆ ಸಂಚಾರ ಮಾಡುವ ಬಸ್‌ ಹಾಗೂ ಜೀಪ್‌ಗಳಲ್ಲಿ ಸಣ್ಣದಾದ ರಂದ್ರ ಇದ್ದು ಅದನ್ನು ಕೂಡ ಸಂಪೂರ್ಣವಾಗಿ ಬಂದ್ ಮಾಡಲು ಕೆಎಸ್‌ಟಿಡಿಸಿಗೆ ಸೂಚನೆ ನೀಡಿದ್ದು, ಇನ್ನು ಮುಂದೆ ಇಂತಹ ಘಟನೆ ಆಗದಂತೆ ಎಚ್ಚರ ವಹಿಸಲು ಸಿಬ್ಬಂದಿಗೆ ಹಾಗೂ  ಚಾಲಕರಿಗೆ ಸೂಚನೆ ನೀಡಿದ್ದೇನೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸುರ್ಯಸೇನ್ ಮಾಹಿತಿ ನೀಡಿದ್ದಾರೆ.

    ಈ ಹಿಂದೆಯೂ ಕೂಡ ಒಮ್ಮೆ ಚಿರತೆ ಹಾಗೂ ಇನ್ನೊಮ್ಮೆ ಹುಲಿ ಇದೇ ರೀತಿ ದಾಳಿ ಮಾಡಿತ್ತು. ಆದರೂ ಕೂಡ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

  • ಬಿಆರ್‌ಟಿ ಅರಣ್ಯದಲ್ಲಿ ಪ್ರವಾಸಿಗರಿಗೆ ತಾಯಿ ಚಿರತೆ, ಎರಡು ಮರಿಗಳ ದರ್ಶನ

    ಬಿಆರ್‌ಟಿ ಅರಣ್ಯದಲ್ಲಿ ಪ್ರವಾಸಿಗರಿಗೆ ತಾಯಿ ಚಿರತೆ, ಎರಡು ಮರಿಗಳ ದರ್ಶನ

    ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟ ಹುಲಿಸಂರಕ್ಷಿತಾರಣ್ಯದಲ್ಲಿ (BRT Tiger Reserve) ಪ್ರವಾಸಿಗರಿಗೆ ತಾಯಿ ಚಿರತೆ ಹಾಗೂ ಎರಡು ಮರಿ ಚಿರತೆಗಳ ದರ್ಶನವಾಗಿದೆ.

    ಕೆ.ಗುಡಿ ವಲಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಚಿರತೆಗಳ ದರ್ಶನವಾಗಿದೆ. ಒಮ್ಮೆಲೆ ತಾಯಿ ಚಿರತೆ ಹಾಗೂ ಮರಿ ಚಿರತೆಗಳನ್ನು ಕಂಡ ಪ್ರವಾಸಿಗರು ಸಂತಸಗೊಂಡಿದ್ದಾರೆ.

    ಚಿರತೆಗಳ ಓಡಾಟದ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ಸದ್ಯ ಮೂರು ಚಿರತೆಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತಿಚ್ಚಿನ ದಿನಗಳಲ್ಲಿ ಹುಲಿಗಳ ಬಳಿಕ ಚಿರತೆ ದರ್ಶನವೂ ಕೂಡ ಸಫಾರಿಗರಿಗೆ ಸಿಗುತ್ತಿದೆ.

  • ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಮಲೆ ಮಹದೇಶ್ವರ ವನ್ಯಧಾಮದ ಸುಂಕದ ಕಟ್ಟೆಯಲ್ಲಿ ಹುಲಿ ದರ್ಶನ

    ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಮಲೆ ಮಹದೇಶ್ವರ ವನ್ಯಧಾಮದ ಸುಂಕದ ಕಟ್ಟೆಯಲ್ಲಿ ಹುಲಿ ದರ್ಶನ

    ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯ ಹನೂರು ಬಫರ್ ವಲಯದ ಪಚ್ಚೆ ದೊಡ್ಡಿಗಸ್ತಿನ ಸುಂಕದಕಟ್ಟೆ ಅರಣ್ಯ ಪ್ರದೇಶದಲ್ಲಿ ಸಫಾರಿಗರಿಗೆ ಹುಲಿ ಕಾಣಿಸಿಕೊಂಡಿದ್ದು, ಪ್ರವಾಸಿಗರು ಹರ್ಷ ವ್ಯಕ್ತಪಡಿಸಿದ್ದಾರೆ.

    ಕಳೆದ ತಿಂಗಳು ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆ ಕಾಡ್ಗಿಚ್ಚು ಕಾಣಿಸಿಕೊಂಡು ಒಣ ಹುಲ್ಲು ಹಾಗೂ ಸಣ್ಣ ಪುಟ್ಟ ಮರಗಳು ಬೆಂಕಿಗೆ ಆಹುತಿಯಾಗಿತ್ತು. ತದನಂತರ ಮೂರ್ನಾಲ್ಕು ದಿನಗಳ ಕಾಲ ಸತತವಾಗಿ ಬಿದ್ದ ಮಳೆಗೆ ಅರಣ್ಯವು ಅಚ್ಚಹಸಿರಿನಿಂದ ಕೂಡಿದ್ದು ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಇದನ್ನೂ ಓದಿ: 2ನೇ ದಿನ ಪಬ್ಲಿಕ್‌ ಟಿವಿ ವಿದ್ಯಾಪೀಠಕ್ಕೆ ಭರ್ಜರಿ ಪ್ರತಿಕ್ರಿಯೆ – ಮುಗಿಯುವ ಮುನ್ನ ಭಾಗಿಯಾಗಿ

    ಇದೀಗ ಅರಣ್ಯವು ಅಚ್ಚಹಸಿರಿನಿಂದ ಕಂಗೊಳಿಸುತ್ತಿರುವುದರಿಂದ ಸಫಾರಿಗೆ ತೆರಳುವ ವನ್ಯ ಪ್ರಿಯರಿಗೆ ಒಂದಲ್ಲ ಒಂದು ಪ್ರಾಣಿಗಳು ಕಾಣಸಿಗುತ್ತಿವೆ. ಮಲೆ ಮಹದೇಶ್ವರ ವನ್ಯಜೀವಿ ವ್ಯಾಪ್ತಿಯ ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿ ಸಫಾರಿ ಕೇಂದ್ರ 2024ರ ಅಕ್ಟೋಬರ್ 2 ರಂದು ಪ್ರಾರಂಭಿಸಲಾಗಿತ್ತು. ಆದರೆ, ಇದುವರೆಗೂ ಒಮ್ಮೆಯೂ ಹುಲಿರಾಯ ದರ್ಶನ ನೀಡಿರಲಿಲ್ಲ.

    ಅಜ್ಜೀಪುರ ಸಫಾರಿ ಕೇಂದ್ರದಿಂದ ತೆರಳುವ ಪ್ರವಾಸಿಗರಿಗೆ ಆನೆ, ಕಾಡೆಮ್ಮೆ, ಜಿಂಕೆ, ಕಡವೆ, ಕರಡಿ, ತೋಳ ನರಿ ಇನ್ನಿತರ ಪ್ರಾಣಿಗಳು ಮಾತ್ರ ಕಾಣಿಸಿಕೊಂಡಿದ್ದವು. ಶನಿವಾರ ತೆರಳಿದ್ದ ಪ್ರವಾಸಿಗರಿಗೆ ಹುಲಿರಾಯ ಕಾಣಿಸಿಕೊಳ್ಳುತ್ತಿದ್ದಂತೆ ತಮ್ಮ ಮೊಬೈಲ್ ಹಾಗೂ ಕ್ಯಾಮೆರಾದಲ್ಲಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ಎಂಟು ಜನ ಬೆಂಗಳೂರು ಮೂಲದ ಪ್ರವಾಸಿಗರು ಸಫಾರಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜನಿವಾರ ವಾರ್‌ | ಭೌತಶಾಸ್ತ್ರ, ರಸಾಯನಶಾಸ್ತ್ರ ಸರಾಸರಿ ಅಂಕ ಪರಿಗಣಿಸಿ ಗಣಿತಕ್ಕೆ ಮಾರ್ಕ್ಸ್‌ ನೀಡಿ

  • ಬಂಡೀಪುರದಲ್ಲಿ ಐದು ಹುಲಿಗಳ ದರ್ಶನ – ನ್ಯೂ ಇಯರ್ ಹೊತ್ತಲ್ಲಿ ಪ್ರವಾಸಿಗರು ಫುಲ್ ಖುಷ್

    ಬಂಡೀಪುರದಲ್ಲಿ ಐದು ಹುಲಿಗಳ ದರ್ಶನ – ನ್ಯೂ ಇಯರ್ ಹೊತ್ತಲ್ಲಿ ಪ್ರವಾಸಿಗರು ಫುಲ್ ಖುಷ್

    ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ (Gundlupet) ತಾಲೂಕಿನ ಬಂಡೀಪುರದಲ್ಲಿ (Bandipur Safari) ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಒಂದಲ್ಲ, ಎರಡಲ್ಲ, ಐದು ಹುಲಿಗಳ ದರ್ಶನವಾಗಿದೆ. ಹೊಸ ವರ್ಷದ ಮುನ್ನಾ ದಿನ ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ.

    ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ ಸಂಚಾರದ ಅಪರೂಪದ ದೃಶ್ಯ ಕಂಡುಬಂದಿದೆ. ಹೊಸ ವರ್ಷಾಚರಣೆಯ ಮೂಡ್‌ನಲ್ಲಿದ್ದ ಪ್ರವಾಸಿಗರಿಗೆ ಮರಿ ಹುಲಿಗಳು ಮುದ ನೀಡಿವೆ. ಇದನ್ನೂ ಓದಿ: ಹೊಸ ವರ್ಷದ ಆರಂಭದ ತಿಂಗಳಲ್ಲೇ ಬಸ್ ಟಿಕೆಟ್ ದರ ಏರಿಕೆಯಾಗುತ್ತಾ?

    ಪ್ರವಾಸಿಗರ ಕ್ಯಾಮೆರಾದಲ್ಲಿ ಅಪರೂಪದ ದೃಶ್ಯ ಸೆರೆಯಾಗಿದೆ. ಹೊಸ ವರ್ಷದ ಹಿನ್ನೆಲೆ ಬಂಡೀಪುರಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗಿದೆ. ಇದನ್ನೂ ಓದಿ: ಸಚಿನ್ ಪಾಂಚಾಳ್ ಸಾವಿಗೆ ನೀವು ಹೊಣೆಯಾಗಬಹುದಲ್ಲವೇ: ಪ್ರಿಯಾಂಕ್ ಖರ್ಗೆಗೆ ಸಿ.ಟಿ ರವಿ ಪ್ರಶ್ನೆ

  • ಟಾಟಾ ಕಾರುಗಳ ಬೆಲೆ ಭಾರೀ ಕಡಿತ

    ಟಾಟಾ ಕಾರುಗಳ ಬೆಲೆ ಭಾರೀ ಕಡಿತ

    ಟಾಟಾ ಮೋಟಾರ್ಸ್ (Tata Motors) ಕಂಪನಿಯು ಪೆಟ್ರೋಲ್, ಡೀಸೆಲ್ ಮತ್ತು CNG ಕಾರುಗಳು ಮತ್ತು SUVಗಳ ಬೆಲೆಯನ್ನು ಬೆಲೆಯನ್ನು 1.80 ಲಕ್ಷ ರೂ.ವರೆಗೆ ಕಡಿತಗೊಳಿಸಿದೆ. ಟಿಯಾಗೋ, ಟಿಗೋರ್, ನೆಕ್ಸಾನ್, ಆಲ್ಟ್ರೋಜ್, ಹ್ಯಾರಿಯರ್ ಮತ್ತು ಸಫಾರಿ (Tiago, Tigor, Nexon, Altroz, Harrier, Safari) ಕಾರುಗಳ ಬೆಲೆಯನ್ನು ಕಂಪನಿ ಕಡಿತಗೊಳಿಸಿದೆ. ಅಕ್ಟೋಬರ್ 31ರವರೆಗೆ ಮಾತ್ರ ಈ ಕೊಡುಗೆ ಇರುತ್ತದೆ.

    ಯಾವ ಯಾವ ಕಾರಿನ ಬೆಲೆ ಎಷ್ಟು ಕಡಿತ..?

    ಟಾಟಾ ಕಂಪನಿಯು ಕಾರುಗಳ ಮಾದರಿ ಮತ್ತು ಅವುಗಳ ಆವೃತ್ತಿಗೆ ಅನುಗುಣವಾಗಿ ಬೆಲೆ ಕಡಿತ ಮಾಡಿದೆ.

    ಸಫಾರಿ: ಬೆಲೆ ಕಡಿತ 1.80 ಲಕ್ಷ
    ಬೆಲೆ ಕಡಿತದ ನಂತರ ಸಫಾರಿ ಕಾರಿನ ಬೆಲೆ 15.49 ಲಕ್ಷದಿಂದ – 25.09 ಲಕ್ಷದವರೆಗೆ ಇದೆ.

    ಹ್ಯಾರಿಯರ್: ಬೆಲೆ ಕಡಿತ 1.60 ಲಕ್ಷ
    ಬೆಲೆ ಕಡಿತದ ನಂತರ ಹ್ಯಾರಿಯರ್ ಕಾರಿನ ಬೆಲೆ 14.99 ಲಕ್ಷದಿಂದ – 23.99 ಲಕ್ಷದವರೆಗೆ ಇದೆ.

    ನೆಕ್ಸಾನ್: ಬೆಲೆ ಕಡಿತ 80 ಸಾವಿರ
    ಬೆಲೆ ಕಡಿತದ ನಂತರ ನೆಕ್ಸಾನ್ ಕಾರಿನ ಬೆಲೆ 7.99 ಲಕ್ಷದಿಂದ – 15.29 ಲಕ್ಷದವರೆಗೆ ಇದೆ.

    ಟಿಯಾಗೋ: ಬೆಲೆ ಕಡಿತ 65 ಸಾವಿರ
    ಬೆಲೆ ಕಡಿತದ ನಂತರ ಟಿಯಾಗೋ ಕಾರಿನ ಬೆಲೆ 4.99 ಲಕ್ಷದಿಂದ – 8.74 ಲಕ್ಷದವರೆಗೆ ಇದೆ.

    ಆಲ್ಟ್ರೋಜ್: ಬೆಲೆ ಕಡಿತ 45 ಸಾವಿರ
    ಬೆಲೆ ಕಡಿತದ ನಂತರ ಆಲ್ಟ್ರೋಜ್ ಕಾರಿನ ಬೆಲೆ 6.49 ಲಕ್ಷದಿಂದ – 11.15 ಲಕ್ಷದವರೆಗೆ ಇದೆ.

    ಟಿಗೋರ್: ಬೆಲೆ ಕಡಿತ 30 ಸಾವಿರ
    ಬೆಲೆ ಕಡಿತದ ನಂತರ ಟಿಯಾಗೋ ಕಾರಿನ ಬೆಲೆ 5.99 ಲಕ್ಷದಿಂದ – 9.39 ಲಕ್ಷದವರೆಗೆ ಇದೆ.

    ಪಂಚ್ ಕಾರಿನ ಬೆಲೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ.

    ಬೆಲೆ ಕಡಿತ ಮಾಡಿರುವ ಟಾಟಾ ಮೋಟಾರ್ಸ್ ಈ ತಿಂಗಳು ಅಥವಾ ಮುಂದಿನ ತಿಂಗಳು ತನ್ನ ಕಾರುಗಳ ಮೇಲೆ ಬೇರೆ ಯಾವುದೇ ರಿಯಾಯಿತಿಗಳನ್ನು ನೀಡುವುದಿಲ್ಲ. ನೀವು ನಿಮ್ಮ ಹಳೆಯ ಕಾರನ್ನು ಹೊಸ ಕಾರಿಗೆ ವಿನಿಮಯ ಮಾಡಿಕೊಂಡರೆ ಕಂಪನಿಯು ಹೆಚ್ಚುವರಿಯಾಗಿ ರೂ 45,000 ದವರೆಗೆ ವಿನಿಮಯ ಪ್ರಯೋಜನವನ್ನು ನೀಡುತ್ತಿದೆ.

    ಬೆಲೆ ಕಡಿತದ ಪ್ರಯೋಜನವನ್ನು ಪಡೆದು ಈ ಹಬ್ಬದ ಋತುವಿನಲ್ಲಿ ಒಂದು ಕಾರನ್ನು ಕೊಳ್ಳಿರಿ.

  • ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಮೋದಿ ಸಫಾರಿ

    ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಮೋದಿ ಸಫಾರಿ

    ಡಿಸ್ಪುರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ (ಮಾ.9) ಬೆಳಗ್ಗೆ ಅಸ್ಸಾಂನ (Assam) ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ (Kaziranga National Park) ಆನೆ ಸಫಾರಿ ಹಾಗೂ ಜೀಪ್ ಸಫಾರಿ ನಡೆಸಿದ್ದಾರೆ. ನರೇಂದ್ರ ಮೋದಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಎನಿಸಿಕೊಂಡಿದ್ದಾರೆ.

    ಮೋದಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಕ್ಕೆ ಭೇಟಿ ನೀಡಿದ ಸಂದರ್ಭ ಉದ್ಯಾನದ ಸೆಂಟ್ರಲ್ ಕೊಹೊರಾ ಶ್ರೇಣಿಯ ಮಿಹಿಮುಖ್ ಪ್ರದೇಶದಲ್ಲಿ ಮೊದಲು ಆನೆ ಸಫಾರಿ ನಡೆಸಿದರು. ಬಳಿಕ ಅದೇ ವ್ಯಾಪ್ತಿಯಲ್ಲಿ ಜೀಪ್ ಸಫಾರಿ ನಡೆಸಿದರು. ಈ ವೇಳೆ ಪ್ರಧಾನಿಯೊಂದಿಗೆ ಉದ್ಯಾನದ ನಿರ್ದೇಶಕಿ ಸೋನಾಲಿ ಘೋಷ್ ಮತ್ತು ಇತರ ಹಿರಿಯ ಅರಣ್ಯ ಅಧಿಕಾರಿಗಳು ಇದ್ದರು. ಇದನ್ನೂ ಓದಿ: ಲೋಕಸಭೆಗೆ ರಾಜ್ಯದಿಂದ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ?

    ರಾಜ್ಯಕ್ಕೆ ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಶುಕ್ರವಾರ ಸಂಜೆ ಕಾಜಿರಂಗಕ್ಕೆ ಆಗಮಿಸಿದ್ದರು. ಶನಿವಾರ ಮಧ್ಯಾಹ್ನ ಮೋದಿ ಜೋರ್ಹತ್‌ನಲ್ಲಿ ಅಹೋಮ್ ಜನರಲ್ ಲಚಿತ್ ಬರ್ಫುಕನ್ ಅವರ 125 ಅಡಿ ಎತ್ತರದ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: NDA 358, INDIA 110 ಸ್ಥಾನ – ಟೈಮ್ಸ್‌ ನೌ ಸಮೀಕ್ಷೆ

    ಜೋರ್ಹತ್ ಜಿಲ್ಲೆಯ ಮೆಲೆಂಗ್ ಮೆಟೆಲಿ ಪೋಥಾರ್‌ಗೆ ತೆರಳಲಿರುವ ಮೋದಿ ಸುಮಾರು 18,000 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: Congress 1st Lok Sabha List: ಮತ್ತೆ ವಯನಾಡಿನಿಂದಲೇ ಅದೃಷ್ಟ ಪರೀಕ್ಷೆಗಿಳಿದ ರಾಗಾ!

  • ಇಂದು ಬಂಡೀಪುರದಲ್ಲಿ ಪ್ರವಾಸಿಗರಿಗೆ ಸಫಾರಿ ಬಂದ್

    ಇಂದು ಬಂಡೀಪುರದಲ್ಲಿ ಪ್ರವಾಸಿಗರಿಗೆ ಸಫಾರಿ ಬಂದ್

    ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಹುಲಿಸಂರಕ್ಷಿತಾರಣ್ಯ ಬಂಡೀಪುರದಲ್ಲಿ (Bandipura) ಇಂದು (ಬುಧವಾರ) ಒಂದು ದಿನದ ಮಟ್ಟಿಗೆ ಸಫಾರಿ ಬಂದ್ ಮಾಡಲಾಗಿದೆ.

    ಇಂದು (ಸೆ.20) ಸಫಾರಿ ಪಾಯಿಂಟ್ ಮೇಲುಕಾಮನಹಳ್ಳಿಯಲ್ಲಿ ಬಂಡೀಪುರದ ಅರಣ್ಯ ಮುಂಚೂಣಿ ಸಿಬ್ಬಂದಿಗಳ ದಿನಾಚರಣೆ ಆಚರಿಸಲಾಗುತ್ತಿದೆ. ಆ ಹಿನ್ನೆಲೆ ಬಂಡೀಪುರದ ಅರಣ್ಯ ಸಿಬ್ಬಂದಿ ಸೇವೆ, ಸಾಧನೆ ಸ್ಮರಿಸಿ ಗೌರವ ಸಲ್ಲಿಕೆ ಮಾಡಲಾಗುತ್ತದೆ. ಇದನ್ನೂ ಓದಿ: ಹಾಲಶ್ರೀ ಬಂಧಿಸಲು ಅರ್ಚಕರ ವೇಷದಲ್ಲಿ ಫೀಲ್ಡ್‌ಗಿಳಿದಿದ್ದ ಅಧಿಕಾರಿಗಳು!

    ಈ ವೇಳೆ ಬಂಡೀಪುರದ ಬಹುತೇಕ ಎಲ್ಲಾ ಸಿಬ್ಬಂದಿ ಕೂಡ ಪಾಲ್ಗೊಳ್ಳುತ್ತಾರೆ. ಅರಣ್ಯ ಸಿಬ್ಬಂದಿಗಳಿಗೆ ಮೊದಲ ಬಾರಿಗೆ ಗೌರವ ಕೊಡಲು ಇಂತಹ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಹೀಗಾಗಿ ಪ್ರವಾಸಿಗರಿಗೆ ಸಫಾರಿ ಬಂದ್ ಮಾಡಿರುವ ಕುರಿತು ಬಂಡೀಪುರ ಹುಲಿಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ಮಾಹಿತಿ ಕೊಟ್ಟಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]