Tag: Sadhus

  • ಅಪಹರಣಕಾರರೆಂದು ಸಾಧುಗಳಿಗೆ ಹಿಗ್ಗಾಮುಗ್ಗ ಥಳಿತ – ಪಶ್ಚಿಮ ಬಂಗಾಳದ 12 ಮಂದಿ ಅರೆಸ್ಟ್‌

    ಅಪಹರಣಕಾರರೆಂದು ಸಾಧುಗಳಿಗೆ ಹಿಗ್ಗಾಮುಗ್ಗ ಥಳಿತ – ಪಶ್ಚಿಮ ಬಂಗಾಳದ 12 ಮಂದಿ ಅರೆಸ್ಟ್‌

    – ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ನಾಯಕರು ಕೆಂಡ

    ಕೋಲ್ಕತ್ತಾ: ಉತ್ತರ ಪ್ರದೇಶ ಮೂಲದ ಮೂವರು ಸಾಧುಗಳನ್ನು ಅಪಹರಣಕಾರರೆಂದು ಶಂಕಿಸಿ, ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಪುರುಲಿಯಾ (West Bengal Purulia) ಜಿಲ್ಲೆಯಲ್ಲಿ ನಡೆದಿದೆ.

    ಸಂಕ್ರಾಂತಿ ಹಬ್ಬದ (Sankranti Festival) ಹಿನ್ನೆಲೆಯಲ್ಲಿ ಗಂಗಾಸಾಗರ ಮೇಳಕ್ಕೆ (Gangasagar Mela) ತೆರಳುತ್ತಿದ್ದ ಸಾಧುಗಳನ್ನು ಅಪಹರಣಕಾರರೆಂದು ಶಂಕಿಸಿ ಗುಂಪು ಥಳಿಸಿದ್ದು, ಈ ಘಟನೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ 12 ಜನರನ್ನ ಬಂಧಿಸಲಾಗಿದ್ದು, ಆರೋಪಿಗಳನ್ನು ಪುರುಲಿಯಾ ಜಿಲ್ಲೆಯ ಕೋರ್ಟ್‌ಗೆ ಹಾಜರುಪಡಿಸುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಲ್ಲಿದ್ದಲು ಅನೀಲಿಕರಣ ಯೋಜನೆ ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಮಂಡನೆ – ಪ್ರಹ್ಲಾದ್‌ ಜೋಶಿ

    ಗಂಗಾಸಾಗರದಲ್ಲಿ ಮಕರ ಸಂಕ್ರಾಂತಿ ಉತ್ಸವದಲ್ಲಿ ಪಾಲ್ಗೊಳ್ಳಲು ಹಿರಿಯ ಸಾಧು ಮತ್ತು ಅವರ ಇಬ್ಬರು ಪುತ್ರರು ಬಾಡಿಗೆ ವಾಹನದಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ಮಹಿಳೆಯರ ಗುಂಪನ್ನು ಸಂಪರ್ಕಿಸಿ ಗಂಗಾಸಾಗರಕ್ಕೆ ತೆರಳಲು ದಾರಿ ಕೇಳಿದ್ದಾರೆ. ಇದರಿಂದ ಕೆಲವು ಸ್ಥಳೀಯರಲ್ಲಿ ಅನುಮಾನ ವ್ಯಕ್ತವಾಗಿದೆ. ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿ ಸೇರಿದ ಜನರ ಗುಂಪು, ಸಾಧುಗಳನ್ನ ಅಪಹರಣಕಾರರು ಎಂದು ದೂರಿ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಅತಿಹೆಚ್ಚು ದೇಣಿಗೆ ಕೊಟ್ಟಿದ್ದು ಮುಸ್ಲಿಮರು!

    ಸಾಧುಗಳು ಮತ್ತು ಮೂವರು ಸ್ಥಳೀಯ ಹೆಣ್ಣುಮಕ್ಕಳ ನಡುವೆ ಭಾಷೆ ಸಮಸ್ಯೆಯಿಂದಾಗಿ ತಪ್ಪು ತಿಳಿವಳಿಕೆ ಉಂಟಾಗಿತ್ತು. ಸಾಧುಗಳ ಮಾತನ್ನು ಅರ್ಥಮಾಡಿಕೊಳ್ಳದೇ ಹೆಣ್ಣುಮಕ್ಕಳು ಜೋರಾಗಿ ಕಿರುಚುತ್ತಾ ಅಲ್ಲಿಂದ ಓಡಿ ಹೋದರು. ಇದರಿಂದ ಸ್ಥಳೀಯರು ಸಾಧುಗಳನ್ನು ಹಿಡಿದು ಥಳಿಸಿದ್ದಾರೆ. ಅಲ್ಲದೇ ಸಾಧುಗಳ ವಾಹವನ್ನೂ ಧ್ವಂಸಗೊಳಿಸಿದ್ದಾರೆ ಎಂದು ಪುರುಲಿಯಾ ಪೊಲೀಸರು ತಿಳಿಸಿದ್ದಾರೆ. ನಂತರ ಸಾಧುಗಳನ್ನು ರಕ್ಷಿಸಿ, ಕಾಸಿಪುರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಕಲ್ಲಿದ್ದಲು ಅನೀಲಿಕರಣ ಯೋಜನೆ ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಮಂಡನೆ – ಪ್ರಹ್ಲಾದ್‌ ಜೋಶಿ

    ಬಿಜೆಪಿ ಖಂಡನೆ: ಸಾಧುಗಳ ಮೇಲಿನ ಹಲ್ಲೆಯನ್ನು ಬಿಜೆಪಿಯ ಅನುರಾಗ್‌ ಠಾಕೂರ್, ಅಮಿತ್‌ ಮಾಳವೀಯಾ ಸೇರಿದಂತೆ ಹಲವರು ಮಮತಾ ಬ್ಯಾನರ್ಜಿ ವಿರುದ್ಧ ಖಂಡನೆ ವ್ಯಕ್ತಪಡಿಸಿದ್ದಾರೆ. ಮೌನ ವಹಿಸಿರುವ ಮಮತಾ ಬ್ಯಾನರ್ಜಿ ಅವರಿಗೆ ನಾಚಿಕೆಯಾಗಬೇಕು. ಈ ಹಿಂದೂ ಸಾಧುಗಳು ನಿಮ್ಮ ಅನುಕಂಪಕ್ಕೆ ಯೋಗ್ಯರಲ್ಲವೇ? ಈ ದೌರ್ಜನ್ಯಕ್ಕೆ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

    ಮಮತಾ ಬ್ಯಾನರ್ಜಿ ಅವರ ಸರ್ಕಾರವು ಶಹಜಹಾನ್ ಶೇಖ್‌ನಂತಹ ಉಗ್ರರಿಗೆ ರಕ್ಷಣೆ ಒದಗಿಸುತ್ತಿದೆ. ಆದರೆ ಸಾಧುಗಳನ್ನು ಕ್ರೂರವಾಗಿ ಹತ್ಯೆ ಮಾಡಲಾಗುತ್ತಿದೆ ಎಂದು ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಕಿಡಿ ಕಾರಿದ್ದಾರೆ.

  • ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳಿಗೆ ಹಿಗ್ಗಾಮುಗ್ಗ ಥಳಿತ

    ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳಿಗೆ ಹಿಗ್ಗಾಮುಗ್ಗ ಥಳಿತ

    ಮುಂಬೈ: ಮಕ್ಕಳ ಕಳ್ಳರೆಂದು ಶಂಕಿಸಿ ಸಾಧುಗಳನ್ನೇ ಹಿಡಿದು ಥಳಿಸಿರುವ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.

    ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಾಲ್ವರು ಸಾಧುಗಳ ಮೇಲೆ ಗುಂಪೊಂದು ಮಕ್ಕಳ ಕಳ್ಳರೆಂದು ಶಂಕಿಸಿ ಹಲ್ಲೆ ನಡೆಸಿರುವ ದೃಶ್ಯದ ವೀಡಿಯೋ ವೈರಲ್ ಆಗಿದೆ. ಜಿಲ್ಲೆಯ ಲವಣ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: UP ಬಿಜೆಪಿ ಶಾಸಕನ ತಾಯಿಯ ಕಿವಿ ಕತ್ತರಿಸಿ ಓಲೆ ಕದ್ದ ಕಳ್ಳರು

    ಸಾಧುಗಳು ಕಿರಾಣಿ ಅಂಗಡಿಯೊಂದರಲ್ಲಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಕೋಲುಗಳನ್ನು ಹಿಡಿದು ಬಂದ ಗುಂಪೊಂದು ಅಂಗಡಿಯ ಹೊರಗೆ ಸಾಧುಗಳನ್ನು ಥಳಿಸಿದ್ದಾರೆ.

    ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಘಟನೆಯನ್ನು ಖಂಡಿಸಿದ್ದಾರೆ. ಸಾಧುಗಳ ಮೇಲಿನ ಇಂತಹ ದುಷ್ಕೃತ್ಯವನ್ನು ಸಹಿಸಲಾಗುವುದಿಲ್ಲ ಎಂದು ಸರ್ಕಾರ ಕೂಡ ಬೇಸರ ವ್ಯಕ್ತಪಡಿಸಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವೀಡಿಯೋ ಸಂದೇಶದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: Rantac ಸೇರಿದಂತೆ 26 ಔಷಧಿಗಳನ್ನು ನಿಷೇಧಿಸಿದ ಕೇಂದ್ರ

    ಪಾಲ್ಘರ್‌ನಲ್ಲಿ ನಡೆದ ಸಾಧುಗಳ ಹತ್ಯೆ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಅವರ ಸರ್ಕಾರವು ಅವರಿಗೆ ಅನ್ಯಾಯವನ್ನು ಮಾಡಿದೆ. ಆದರೆ ಪ್ರಸ್ತುತ ಮಹಾರಾಷ್ಟ್ರ ಸರ್ಕಾರವು ಯಾವುದೇ ಸಾಧುವಿನ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂದು 2020ರ ಘಟನೆಯನ್ನು ಉಲ್ಲೇಖಿಸಿ ಸರ್ಕಾರ ಸ್ಪಷ್ಟನೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಧೂಮಪಾನ ಬಿಡುವಂತೆ ಕುಂಭಮೇಳದಲ್ಲಿ ಸಾಧುಗಳ ಕಾಲು ಮುಟ್ಟಿ ಬೇಡಿಕೊಂಡ ಬಾಬಾ ರಾಮ್‍ದೇವ್

    ಧೂಮಪಾನ ಬಿಡುವಂತೆ ಕುಂಭಮೇಳದಲ್ಲಿ ಸಾಧುಗಳ ಕಾಲು ಮುಟ್ಟಿ ಬೇಡಿಕೊಂಡ ಬಾಬಾ ರಾಮ್‍ದೇವ್

    ಲಕ್ನೋ: ಪ್ರಯಾಗ್ ಕುಂಭ ಮೇಳದಲ್ಲಿ ಸೇರಿರುವ ಅನೇಕ ಸಾಧು ಹಾಗೂ ಭಕ್ತರ ಬಳಿಗೆ ಹೋಗಿ ಧೂಮಪಾನ ಬಿಡುವಂತೆ ಯೋಗ ಗುರು ಬಾಬಾ ರಾಮ್‍ದೇವ್ ಮನವಿ ಮಾಡಿಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ.

    ಶ್ರೀರಾಮ ಹಾಗೂ ಕೃಷ್ಣ ತಂಬಾಕು ಸೇವನೆ ಮಾಡುತ್ತಿರಲಿಲ್ಲ. ಅವರನ್ನು ಪೂಜಿಸುವ ನಾವು ತಂಬಾಕು ಸೇವನೆ ಹಾಗೂ ಧೂಮಪಾನ ಮಾಡುವುದು ಎಷ್ಟು ಸರಿ? ನಾವೆಲ್ಲರೂ ಧೂಮಪಾನ ಬಿಟ್ಟುಬಿಡೋಣ ಎಂದು ಬಾಬಾ ರಾಮ್‍ದೇವ್ ಸಾಧುಗಳಿಗೆ ಮನವರಿಕೆ ಮಾಡುತ್ತಿದ್ದಾರೆ.

    ಸಾಧುಗಳಾದ ನಾವು ಮನೆ, ಕುಟುಂಬ ಸೇರಿದಂತೆ ಎಲ್ಲವನ್ನೂ ಬಿಟ್ಟಿದ್ದೇವೆ. ಇದಕ್ಕಿಂತ ಮಿಗಿಲಾಗಿ ನಮ್ಮ ತಂದೆ ಹಾಗೂ ತಾಯಿಯನ್ನು ಬಿಟ್ಟು ಬಂದಿದ್ದೇವೆ. ಆದರೆ ನಮ್ಮಿಂದ ಯಾಕೆ ಧೂಮಪಾನ ಬೀಡಲು ಆಗುತ್ತಿಲ್ಲ ಎಂದು ಪ್ರಶ್ನಿಸಿ, ಸಾಧುಗಳ ಕಾಲು ಮುಟ್ಟಿ ಧೂಮಪಾನ ಮಾಡದಂತೆ ಬಾಬಾ ರಾಮ್‍ದೇವ್ ಮನವಿ ಮಾಡಿಕೊಂಡಿದ್ದಾರೆ.

    https://twitter.com/yogrishiramdev/status/1090858740046315520

    ಬಾಬಾ ರಾಮ್‍ದೇವ್ ಅವರು ಅನೇಕ ಸಾಧುಗಳ ಬಳಿ ಇದ್ದ ಚಿಲ್ಮಿ (ತಂಬಾಕು ಸೇವನೆ ಕೊಳವೆ) ಪಡೆದಿದ್ದಾರೆ. ಈ ಮೂಲಕ ಅವುಗಳನ್ನು ತಮ್ಮ ವಸ್ತು ಪ್ರದರ್ಶನ ಕೇಂದ್ರದಲ್ಲಿ ಇಡುತ್ತೇನೆ. ನೀವು ತಂಬಾಕು ಸೇವನೆಯನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡಿದ್ದಾರೆ.

    ಧೂಮಪಾನ ಹಾಗೂ ತಂಬಾಕು ಸೇವನೆಯನ್ನು ಬಿಡುವಂತೆ ಯುವಕರಿಗೆ ಸಲಹೆ ನೀಡುತ್ತಿರುವೆ. ಹೀಗಾಗಿ ಮಹಾತ್ಮರಿಗೂ ಈ ಕುರಿತು ಮನವರಿಕೆ ಮಾಡಿಕೊಡುತ್ತಿರುವೆ ಎಂದು ಬಾಬಾ ರಾಮ್‍ದೇವ್ ತಿಳಿಸಿದ್ದಾರೆ.

    ಒಟ್ಟು 55 ದಿನಗಳ ಕಾಲ ನಡೆಯುವ ಕುಂಭ ಮೇಳವು ಮಾರ್ಚ್ 4ರಂದು ಮುಕ್ತಾಯವಾಗಲಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಜನರು ಸೇರುವ ಮೇಳ ಇದಾಗಿದೆ. ಸಾಧು, ಸಂತರು ಹಾಗೂ ಭಕ್ತರು ಸೇರಿದಂತೆ ಸುಮಾರು 13 ಕೋಟಿ ಜನರು ಪ್ರಯಾಗ್ ಕುಂಭ ಮೇಳದಲ್ಲಿ ಸೇರುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv