Tag: Sadhu

  • ನಾಗ ಸಾಧುಗಳು ಯಾರು? ನೇಮಕಾತಿ ಹೇಗೆ ನಡೆಯುತ್ತೆ? ದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?

    ನಾಗ ಸಾಧುಗಳು ಯಾರು? ನೇಮಕಾತಿ ಹೇಗೆ ನಡೆಯುತ್ತೆ? ದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?

    ಪ್ರಯಾಗರಾಜ್: ಮಹಾ ಕುಂಭಮೇಳದಲ್ಲಿ (Maha Kumbh Mela) ನಾಗ ಸಾಧುಗಳ (Naga Sadhus) ದೀಕ್ಷೆಗಾಗಿ ಅಭ್ಯರ್ಥಿಗಳ ವಿಶಿಷ್ಟ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.

    ಸನಾತನ ಧರ್ಮಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಉದ್ದೇಶದಿಂದ ವಿವಿಧ ಅಖಾರಗಳಲ್ಲಿ ನಾಗಗಳು ಸಿದ್ಧರಾಗಿರುವ ಸಾವಿರಾರು ಯುವ ಸನ್ಯಾಸಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದು ಅಖಾರಗಳು ಈಗಾಗಲೇ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿವೆ.

    ನಾಗಗಳು ಅಂದರೆ ಯಾರು?
    ‘ನಾಗ’ ಎಂಬ ಪದವು ಪ್ರಾಚೀನ ಕಾಲದಲ್ಲಿ ಭಾರತದ ಕಾಡುಗಳು ಮತ್ತು ಬೆಟ್ಟಗಳಲ್ಲಿ ಅಲೆದಾಡುತ್ತಿದ್ದ ಹಾವಿನ ಆರಾಧಕರ ಪ್ರಾಚೀನ ಬುಡಕಟ್ಟು ಜನಾಂಗವನ್ನು ಸೂಚಿಸುತ್ತದೆ. ನಾಗ ಸಾಧುಗಳು ಶಿವನೇ (Shiva) ದೇವರೆಂದು ನಂಬುತ್ತಾರೆ.

    ನಾಗಾ ಸಾಧುಗಳಾಗುವ ಮೊದಲ ಹೆಜ್ಜೆ ಯಾವುದೆಂದರೆ ಮಾರ್ಗದರ್ಶನ ಮಾಡುವ ಗುರುವನ್ನು ಹುಡುಕಬೇಕಾಗುತ್ತದೆ. ಗುರು ಸಿಕ್ಕಿದ ಬಳಿಕ ಕಠಿಣ ತರಬೇತಿ ಮತ್ತು ಶಿಸ್ತಿನ ಅವಧಿಗೆ ಒಳಗಾಗಬೇಕಾಗುತ್ತದೆ. ಇದರಲ್ಲಿ ಧ್ಯಾನ, ಯೋಗ ಮತ್ತು ಇತರ ಆಧ್ಯಾತ್ಮಿಕ ಅಭ್ಯಾಸಗಳು ಸೇರಿವೆ. ಕಟ್ಟುನಿಟ್ಟಾದ ಬ್ರಹ್ಮಚರ್ಯ ನಿಯಮಗಳನ್ನು ಪಾಲಿಸಬೇಕು ಮತ್ತು ಲೌಕಿಕ ಸುಖಗಳಿಂದ ದೂರವಿರಬೇಕಾಗುತ್ತದೆ.

    ರಹಸ್ಯ ಸಂದರ್ಶನ:
    ಅಖಾರ ಸೇರಲು ನೋಂದಣಿ ಫಾರಂ ನೀಡಲಾಗುತ್ತದೆ. ನಾಗ ಸಾಧುಗಳಾಲು ಇಚ್ಛಿಸಿದ ವ್ಯಕ್ತಿಗಳನ್ನು ರಹಸ್ಯವಾಗಿ ಸಂದರ್ಶಿಸಲಾಗುತ್ತಿದೆ. ಜುನಾ, ಶ್ರೀ ನಿರಂಜನಿ, ಶ್ರೀ ಮಹಾನಿರ್ವಾಣಿ, ಆವಾಹನ್, ಅಟಲ್ ಮತ್ತು ಆನಂದ್ ಅಖಾರಗಳಲ್ಲಿನ ಎಲ್ಲಾ ಮಾನದಂಡಗಳನ್ನು ಪೂರೈಸಿದವರನ್ನು ನಾಗ ಸನ್ಯಾಸದ ದೀಕ್ಷೆ ನೀಡಲಾಗುತ್ತದೆ. ಇದನ್ನೂ ಓದಿ: ನನ್ನ ಹಲವು ಪ್ರಶ್ನೆಗಳಿಗೆ ಸನಾತನ ಧರ್ಮದಲ್ಲಿ ಉತ್ತರ ಸಿಕ್ಕಿತು – ಕುಂಭಮೇಳದಲ್ಲಿ ಆಫ್ರಿಕಾದ ಸಾಧು

    ಪಿಂಡ ಪ್ರದಾನ ಮಾಡುತ್ತಾರೆ ಯಾಕೆ?
    ನಾಗ ಸಾಧುಗಳ ದೀಕ್ಷೆ ಪಡೆಯುತ್ತಿರುವ ಮೊದಲ ಬ್ಯಾಚ್‌ ಸದಸ್ಯರಿಗೆ ಗಂಗಾ ನದಿಯ ದಡದಲ್ಲಿ ಆಚರಣೆಯನ್ನು ನಡೆಸಲಾಗಿದೆ. ಪ್ರತಿ ಅಖಾರದಲ್ಲಿ ವಿಭಿನ್ನ ದಿನಗಳಲ್ಲಿ ದೀಕ್ಷೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಶನಿವಾರ ಜುನಾ ಅಖಾರದಲ್ಲಿ ಸನ್ಯಾಸಿಗಳಿಗೆ ಕೇಶ ಮುಂಡನ ಮಾಡಲಾಗಿದೆ. ಈ ಸನ್ಯಾಸಿಗಳು ತಮ್ಮ ಪಿಂಡ ಪ್ರದಾನ ಮಾಡಬೇಕಾಗುತ್ತದೆ. ಹಿಂದೂ ಧರ್ಮದದಲ್ಲಿ ತಮ್ಮ ಮನೆಯವರು, ಕುಟುಂಬಸ್ಥರು ಅಗಲಿದಾಗ ಅವರಿಗೆ ಗೌರವ ಸಲ್ಲಿಸುವ ಪರಿಯನ್ನು ಪಿಂಡ ಪ್ರದಾನ ಎನ್ನಲಾಗುತ್ತದೆ. ಆದರೆ ನಾಗಗಳಾದವರು ಜೀವಂತವಾಗಿದ್ದರೂ, ಭೌತಿಕ ಪ್ರಪಂಚದೊಂದಿನ ಸಂಬಂಧವನ್ನು ಕಡಿತಗೊಳಿಸಬೇಕಾಗುತ್ತದೆ. ಸಂಬಂಧ ಕಡಿತಗೊಳಿಸುವ ಸಲುವಾಗಿ ತಮ್ಮ ಪಿಂಡವನ್ನೇ ಪ್ರದಾನ ಮಾಡುತ್ತಾರೆ.

    ನಾಗಾದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?
    ಕೇಶ ಮುಂಡನ ಮತ್ತು ಪಿಂಡ ದಾನದ ನಂತರ ಮೌನಿ ಅಮಾವಾಸ್ಯೆಯ ಅಮೃತ ಸ್ನಾನ ಹಬ್ಬದ ರಾತ್ರಿ ನಾಗ ಸಾಧುವಾಗಲು ಸಂಪೂರ್ಣ ದೀಕ್ಷೆಯನ್ನು ನಡೆಸಲಾಗುತ್ತದೆ. ಎಲ್ಲಾ ಅಭ್ಯರ್ಥಿಗಳು ಧರ್ಮದ ಧ್ವಜದ ಅಡಿಯಲ್ಲಿ ವಿವಸ್ತ್ರವಾಗಿ ನಿಲ್ಲುತ್ತಾರೆ. ಆಚಾರ್ಯ ಮಹಾಮಂಡಲೇಶ್ವರರು ಅವರನ್ನು ವಿಧಿವಿಧಾನಗಳೊಂದಿಗೆ ನಾಗರಾಗಲು ದೀಕ್ಷೆ ನೀಡುತ್ತಾರೆ. ಸಭಾಪತಿ (ಸಮಾರಂಭದ ಅಧ್ಯಕ್ಷತೆ ವಹಿಸುವ ವ್ಯಕ್ತಿ) ಅವರಿಗೆ ಅಖಾರದ ನಿಯಮಗಳು ಮತ್ತು ನಿಯಮಗಳ ಬಗ್ಗೆ ತಿಳಿಸುತ್ತಾರೆ ಮತ್ತು ಪ್ರತಿಜ್ಞೆಯನ್ನು ಬೋಧಿಸುತ್ತಾರೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಎಲ್ಲರನ್ನೂ ಅಮೃತ ಸ್ನಾನಕ್ಕೆ ಕಳುಹಿಸಲಾಗುತ್ತದೆ. ಅಮೃತ ಸ್ನಾನದ ರಾತ್ರಿಯಂದು ಇವರ ನಾಗಾದೀಕ್ಷೆ ಪೂರ್ಣಗೊಳ್ಳುತ್ತದೆ. ಇದನ್ನೂ ಓದಿ: ಕುಂಭಮೇಳದಲ್ಲಿ 7 ಅಡಿ ಎತ್ತರದ ರಷ್ಯಾದ ಬಾಬಾ – ‘ಪರಶುರಾಮನ ಅವತಾರ’ ಎಂದ ಭಕ್ತರು

    ಮೂರು ಹಂತಗಳಲ್ಲಿ ಪರಿಶೀಲನೆ:
    ಜುನಾ ಅಖಾರದಲ್ಲಿ ಸುಮಾರು 2,000 ಜನರಿಗೆ ನಾಗ ಸನ್ಯಾಸಕ್ಕೆ ದೀಕ್ಷೆ ನೀಡಿದರೆ ಶ್ರೀ ನಿರಂಜನಿ ಅಖಾರದಲ್ಲಿ ಸುಮಾರು 1,100 ಮಂದಿಯನ್ನು ನಾಗಾ ಸನ್ಯಾಸಿಗಳನ್ನಾಗಿ ಮಾಡಲಾಗುತ್ತದೆ. ಅದೇ ರೀತಿಯಾಗಿ ಶ್ರೀ ಮಹಾನಿರ್ವಾಣಿ, ಅಟಲ್, ಆನಂದ್ ಮತ್ತು ಆವಾಹನ ಅಖಾರಗಳಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗಿದೆ.

    ಅರ್ಜಿದಾರರನ್ನು ಮೂರು ಹಂತಗಳಲ್ಲಿ ಸಂಪೂರ್ಣವಾಗಿ ಅವರ ವಿವರವನ್ನು ಪರಿಶೀಲಿಸಲಾಗುತ್ತದೆ. ಈ ಪರಿಶೀಲನಾ ಪ್ರಕ್ರಿಯೆ ಆರು ತಿಂಗಳ ಮೊದಲೇ ಆರಂಭವಾಗುತ್ತದೆ. ಅಖಾರದ ಠಾಣಾಪತಿ ಅಷ್ಟಕೋಶಲ್ ಮಹಂತ್, ಅಭ್ಯರ್ಥಿಯ ವಿವರ ಮತ್ತು ಆತನ ಚಟುವಟಿಕೆಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸುತ್ತಾರೆ. ಪರಿಶೀಲನೆ ನಡೆಸಿದ ಬಳಿಕ ವರದಿಯನ್ನು ಅಖಾರದ ಆಚಾರ್ಯ ಮಹಾಮಂಡಲೇಶ್ವರರಿಗೆ ನೀಡಲಾಗುತ್ತದೆ. ಆಚಾರ್ಯ ಮಹಾಮಂಡಲೇಶ್ವರರು ಅಖಾರದ ಪಂಚರಿಂದ ಮತ್ತೆ ಪರಿಶೀಲನೆ ನಡೆಸುತ್ತಾರೆ.

    ಅರ್ಜಿಗಳ ಪರಿಶೀಲನೆಯ ಸಮಯದಲ್ಲಿ ಜುನಾ ಅಖಾರ 53 ಮಂದಿಯನ್ನು ಮತ್ತು ನಿರಂಜನಿ ಅಖಾರ 22 ಜನರನ್ನು ಅನರ್ಹಗೊಳಿಸಿದೆ.

  • ಸಾಧು ವೇಷ ಧರಿಸಿ ದೇವಸ್ಥಾನದಲ್ಲಿ ಬೀಡುಬಿಟ್ಟಿದ್ದ ಮುಸ್ಲಿಂ ವ್ಯಕ್ತಿ ಅರೆಸ್ಟ್‌

    ಸಾಧು ವೇಷ ಧರಿಸಿ ದೇವಸ್ಥಾನದಲ್ಲಿ ಬೀಡುಬಿಟ್ಟಿದ್ದ ಮುಸ್ಲಿಂ ವ್ಯಕ್ತಿ ಅರೆಸ್ಟ್‌

    ಚಂಡೀಗಢ: ಸಾಧು (Sadhu) ವೇಷ ಧರಿಸಿ ದೇವಸ್ಥಾನದಲ್ಲಿ ಹಲವು ತಿಂಗಳಿಂದ ನೆಲೆಸಿದ್ದ ಮುಸ್ಲಿಂ ವ್ಯಕ್ತಿಯನ್ನು ಮೀರತ್‌ ಪೊಲೀಸರು (Meerut Police) ಬಂಧಿಸಿದ್ದಾರೆ.

    ಬಂಧಿತನನ್ನು ಹರಿಯಾಣದ ಪಾಣಿಪತ್‌ನ ಗಾದ್ರಿ ಗ್ರಾಮದ ನಿವಾಸಿ ಗುಲ್ಲು ಎಂದು ಗುರುತಿಸಲಾಗಿದೆ. ಆತನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಮತ್ತೂರು ಗ್ರಾಮದ ಶಿವ ದೇವಸ್ಥಾನದ ಬಳಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಈತ ಸಾಧು ಎಂದು ಹೇಳಿಕೊಂಡು ವಾಸವಾಗಿದ್ದ. ಇದನ್ನೂ ಓದಿ: ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಸ್ – ಬ್ರಿಜ್ ಭೂಷಣ್‌ಗೆ ಬಿಗ್ ರಿಲೀಫ್

    ಈ ವ್ಯಕ್ತಿ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತು. ಪೊಲೀಸರು ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ತಲುಪಿದ್ದಾರೆ. ದೇವಸ್ಥಾನದ ಆವರಣದ ಬಳಿ ಸಾಧು ವೇಷ ಧರಿಸಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯು ಪೊಲೀಸ್ ವಶದಲ್ಲಿದ್ದು, ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.

    ಗುಲ್ಲು ಎಂಬಾತ 2023 ರ ಜನವರಿಯಿಂದ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಧುವಿನಂತೆ ನಟಿಸುತ್ತಿದ್ದ. ಆತನ ಹಿನ್ನೆಲೆಯ ಬಗ್ಗೆ ಸ್ಥಳೀಯರಿಗೆ ತಿಳಿದಿರಲಿಲ್ಲ. ಈತನ ಕೃತ್ಯದ ಹಿಂದಿನ ಉದ್ದೇಶ ಮತ್ತು ಆತ ಏಕೆ ಮಾರುವೇಷದಲ್ಲಿ ಬದುಕಲು ನಿರ್ಧರಿಸಿದ ಎಂಬುದರ ಕುರಿತು ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಈತ ಅಪರಾಧ ಕೃತ್ಯಗಳ ಹಿನ್ನೆಲೆ ಹೊಂದಿದ್ದಾನೆಯೇ ಎಂಬ ವಿಚಾರವನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಈತನಿಗೆ ಮದುವೆಯಾಗಿರುವುದು ಗೊತ್ತಾಗಿದೆ. ಆದರೆ ಪತ್ನಿ ಜೊತೆಗೆ ವಾಸವಾಗಿಲ್ಲ ಎಂದು ದೌರಾಲಾ ಪೊಲೀಸ್ ಠಾಣೆಯ ಎಸ್‌ಐ ಅಭಿಷೇಕ್ ಪಟೇಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಿಮಾನ ತುರ್ತು ಭೂಸ್ಪರ್ಶದ ಬಳಿಕ ಸೋನಿಯಾ ಗಾಂಧಿ ಆರೋಗ್ಯ ವಿಚಾರಿಸಿದ ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾತಾ ಮಾಣಿಕೇಶ್ವರಿ ದರ್ಶನಕ್ಕೆ ಬಂದ ಸಾಧು ಮೇಲೆ ಕಾಲಿನಿಂದ ಒದ್ದು ಹಲ್ಲೆ

    ಮಾತಾ ಮಾಣಿಕೇಶ್ವರಿ ದರ್ಶನಕ್ಕೆ ಬಂದ ಸಾಧು ಮೇಲೆ ಕಾಲಿನಿಂದ ಒದ್ದು ಹಲ್ಲೆ

    ಕಲಬುರಗಿ: ಮಾತಾ ಮಾಣಿಕೇಶ್ವರಿ ಅಮ್ಮನವರ ದರ್ಶನಕ್ಕೆ ತೆರಳಿದ ಸಾಧುವೊಬ್ಬರ ಮೇಲೆ ಆಶ್ರಮದ ಕೆಲವರು ಹಲ್ಲೆ ನಡೆಸಿ, ಕಾಲಿನಿಂದ ಒದ್ದು ಹೊರಹಾಕಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

    ಸೇಡಂ ತಾಲೂಕಿನ ಯಾನಾಗುಂದಿ ಆಶ್ರಮದಲ್ಲಿದ್ದ ಸಾಧುವೊಬ್ಬರು ರವಿವಾರ ರಾತ್ರಿ ಅಮ್ಮನ ಮಂದಿರದಲ್ಲಿ ಧ್ಯಾನ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಆಶ್ರಮದವರು ವಿರೋಧ ವ್ಯಕ್ತಪಡಿಸಿದ್ದು, ದೇವಾಲಯದ ಬಾಗಿಲು ತೆರೆಯಲು ಯತ್ನಿಸಿದಾಗ ಆತನನ್ನು ಅಮಾನವೀಯವಾಗಿ ಎಳೆದೊಯ್ದು ಹೊರಹಾಕಿದ್ದಾರೆ. ಅಲ್ಲದೇ ಕೆಲವರು ಕಾಲಿನಿಂದ ಒದ್ದು ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸಾಧುವನ್ನು ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಚೀನಾ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಿದ ಭಾರತ – ಶಕ್ತಿಶಾಲಿ ಹೆರಾನ್ ಡ್ರೋನ್ ನಿಯೋಜನೆ

    ಮಾತಾ ಮಾಣಿಕೇಶ್ವರಿ ಅಮ್ಮನವರು ಜೀವಂತವಾಗಿದ್ದಾಗಲೂ ಸಹ ಅಮ್ಮನವರ ದರ್ಶನಕ್ಕೆ ಅಲ್ಲಿನ ಟ್ರಸ್ಟ್ ನಿರ್ಬಂಧ ಹೇರಿತ್ತು. ಮಾಣಿಕೇಶ್ವರಿ ಅಮ್ಮ ಲಿಂಗೈಕ್ಯರಾದ ನಂತರವೂ ಸಹ ಅಮ್ಮನವರ ಗರ್ಭಗುಡಿ ದರ್ಶನಕ್ಕೆ ಅವಕಾಶ ಕಲ್ಪಿಸದ ಟ್ರಸ್ಟ್​ ಸದಸ್ಯರ ನಡೆಗೆ ಭಕ್ತರು, ಜನರು ರೋಸಿ ಹೋಗಿದ್ದಾರೆ. ಇದೀಗ ಹಲವು ವರ್ಷಗಳಿಂದ ಸೇವೆ ಮಾಡಿಕೊಂಡಿದ್ದ ಸಾಧುವಿನ ಮೇಲೆ ಹಲ್ಲೆ ನಡೆಸಿದ ಟ್ರಸ್ಟ್​ ಸಿಬ್ಬಂದಿ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಕ್ತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

  • ಕಹಿಬೇವು, ತುಳಸಿಯಿಂದ ಮಾಸ್ಕ್ – ನೆಟ್ಟಿಗರನ್ನು ದಂಗುಬಡಿಸಿದ ಸಾಧು

    ಕಹಿಬೇವು, ತುಳಸಿಯಿಂದ ಮಾಸ್ಕ್ – ನೆಟ್ಟಿಗರನ್ನು ದಂಗುಬಡಿಸಿದ ಸಾಧು

    ಲಕ್ನೋ: ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಕರಿಛಾಯೆ ಹೆಚ್ಚಿಸುತ್ತಿದೆ. ಈ ನಡುವೆ ಜನ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಸೂಚನೆ ಕೊಡುತ್ತಿದೆ. ಇದರ ಪ್ರಕಾರ ಉತ್ತರ ಪ್ರದೇಶದಲ್ಲಿ ಸಾಧು ಒಬ್ಬರು ಕಹಿಬೇವು ಮತ್ತು ತುಳಸಿಯಿಂದ ತಯಾರು ಮಾಡಿದ ಹರ್ಬಲ್ ಮಾಸ್ಕ್ ಧರಿಸುವ ಮೂಲಕ ನೋಡುಗರ ಗಮನಸೆಳೆಯುತ್ತಿದ್ದಾರೆ.

    ಸಾಧು ಈ ರೀತಿ ಮಾಸ್ಕ್ ಬಳಸುತ್ತಿರುವ ವೀಡಿಯೋವನ್ನು ರೂಪಿನ್ ಶರ್ಮಾ ಹೆಸರಿನ ಐಪಿಎಸ್ ಅಧಿಕಾರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ಮಾಸ್ಕ್ ಕಂಡು ಹಲವು ಕಾಮೆಂಟ್‍ಗಳನ್ನು ಮಾಡುತ್ತಿದ್ದಾರೆ.

    ಸಾಧು ಮಾಸ್ಕ್ ಧರಿಸಿಕೊಂಡು ಈ ವೀಡಿಯೋದಲ್ಲಿ ಮಾತನಾಡುತ್ತಿದ್ದು, ಮಾಸ್ಕ್ ನ್ನು ಕಹಿಬೇವು ಮತ್ತು ತುಳಸಿಯ ಎಲೆಯನ್ನು ಉಪಯೋಗಿಸಿಕೊಂಡು ಧರಿಸುತ್ತಿದ್ದೇನೆ. ಇದು ಔಷಧಿಯ ಗುಣಹೊಂದಿದ್ದು, ಇತರ ಬಟ್ಟೆಯ ಮತ್ತು ಸರ್ಜಿಕಲ್ ಮಾಸ್ಕ್ ಗಿಂತ ಇದು ಉತ್ತಮವಾಗಿದೆ. ಕಹಿಬೇವು ಮತ್ತು ತುಳಸಿ ಪ್ರತಿ ರೋಗಕ್ಕೂ ರಾಮಬಾಣವಾಗಿದೆ ಎಂದು ವಿವರಿಸಿದ್ದಾರೆ.

    https://twitter.com/rupin1992/status/1396041839656849408

    ಇತ್ತ ಸಾಧು ಮಾಸ್ಕ್ ಕಂಡು ದಂಗಾಗಿರುವ ನೆಟ್ಟಿಗರು ನಾವು ಒಮ್ಮೆ ಬಳಸಿ ನೋಡೋಣ ಇದು ನಿಜವಾಗಿಯೂ ವಿಶೇಷವಾಗಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  • ‘ಸಾಧುಗಳ ಹತ್ಯೆ ಕೇಸ್‍ನಲ್ಲಿ 101 ಜನ ಬಂಧನ, ಒಬ್ಬರು ಮುಸ್ಲಿಮರಿಲ್ಲ’ – ಬಿಜೆಪಿ ವಿರುದ್ಧ ಶಿವಸೇನೆ ಕಿಡಿ

    ‘ಸಾಧುಗಳ ಹತ್ಯೆ ಕೇಸ್‍ನಲ್ಲಿ 101 ಜನ ಬಂಧನ, ಒಬ್ಬರು ಮುಸ್ಲಿಮರಿಲ್ಲ’ – ಬಿಜೆಪಿ ವಿರುದ್ಧ ಶಿವಸೇನೆ ಕಿಡಿ

    ಮುಂಬೈ: ಕಳೆದ ವಾರ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಓರ್ವ ಸಾಧು ಸೇರಿ ಮೂವರ ಮೇಲೆ ನಡೆದ ಸಾಮೂಹಿಕ ದಾಳಿಗೆ ಸಂಬಂಧಿಸಿದಂತೆ ಈವರೆಗೆ ಬಂಧಿಸಲಾಗಿರುವ 101 ಜನರಲ್ಲಿ ಯಾರೂ ಮುಸ್ಲಿಮರಲ್ಲ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ.

    ಇಂದು ಕೊರೊನಾ ವೈರಸ್ ಮತ್ತು ಸಾಮಾಜಿಕ ಅಂತರದ ಬಗ್ಗೆ ಮಾತನಾಡಲು ಫೇಸ್ ಬುಕ್‍ನಲ್ಲಿ ಲೈವ್ ಬಂದಿದ್ದ ಅನಿಲ್ ದೇಶ್ಮುಖ್, ವಿರೋಧ ಪಕ್ಷವಾದ ಬಿಜೆಪಿಯ ಮೇಲೆ ಕಿಡಿಕಾರಿದ್ದಾರೆ. ಈ ಘಟನೆಯನ್ನೇ ಮುಂದೆ ಇಟ್ಟುಕೊಂಡು ಬಿಜೆಪಿ ಪಕ್ಷ ಇದಕ್ಕೆ ಕೋಮುವಾದದ ಬಣ್ಣ ಹಚ್ಚಲು ಪ್ರಯತ್ನಿಸುತ್ತದೆ ಎಂದು ಆರೋಪಿಸಿದ್ದಾರೆ.

    ಸಾಧು ಮೇಲೆ ದಾಳಿಯಲ್ಲಿ ಭಾಗಿಯಾದ 101 ಜನರನ್ನು ನಮ್ಮ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಅದರಲ್ಲಿ ಒಬ್ಬರೂ ಮುಸ್ಲಿಂ ಸಮಾಜಕ್ಕೆ ಸೇರಿದ ವ್ಯಕ್ತಿಗಳು ಇಲ್ಲ. ಆದರೆ ಈ ಘಟನೆಗೆ ಕೋಮು ಬಣ್ಣ ಬಳಿಯಲು ಪ್ರಯತ್ನಿಸಿದ ಬಿಜೆಪಿ ಇದು ಮುಸ್ಲಿಮರೇ ಮಾಡಿರುವ ಕೃತ್ಯ ಎಂದು ಬಿಂಬಿಸಲು ಹೊರಟಿತ್ತು. ರಾಜಕೀಯವಾಗಿ ಹೊಡೆದಾಡಿಕೊಳ್ಳುವ ಸಮಯವಿದಲ್ಲ. ನಾವೆಲ್ಲ ಸೇರಿ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ದೇಶ್ಮುಖ್ ತಿಳಿಸಿದ್ದಾರೆ.

    ಮುಂಬೈನಿಂದ ಸುಮಾರು 125 ಕಿ.ಮೀ ದೂರದಲ್ಲಿ ನಡೆದ್ದ ಈ ಭಯಾನಕ ಘಟನೆಯ ಬಗ್ಗೆ ಮಾತನಾಡಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಈ ಘಟನೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ಈ ದಾಳಿಯಲ್ಲಿ ಹಿಂದು ಮುಸ್ಲಿಂ ಎಂಬ ಕೋಮುವಾದದ ಬಣ್ಣ ಇಲ್ಲ. ಈ ವಿಚಾರವಾಗಿ ತಕ್ಷಣ ಇಬ್ಬರು ಪೊಲೀಸರನ್ನು ಅಮಾನತು ಮಾಡಿದ್ದೇವೆ ಎಂದು ಟ್ವೀಟ್ ಮಾಡಿ ಕೋಮುವಾದ ಸೃಷ್ಟಿಸುತ್ತಿರುವರಿಗೆ ಎಚ್ಚರಿಕೆ ಎಂದು ವಾರ್ನಿಂಗ್ ನೀಡಿದ್ದರು.

    ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗಡ್ಚಿಂಚಲೆ ಗ್ರಾಮದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಮೂವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಈ ಮೂವರಲ್ಲಿ ಒಬ್ಬರು 70 ವರ್ಷದ ಸಾಧು ಕೂಡ ಇದ್ದರು. ಜನರು ದೊಣ್ಣೆ ಮತ್ತು ಕಲ್ಲಿನಿಂದ ಓರ್ವನನ್ನು ಸಾಯುವ ಹಾಗೇ ಹೊಡೆಯುತ್ತಿದ್ದ ವಿಡಿಯೋ ವೈರಲ್ ಕೂಡ ಆಗಿತ್ತು. ಜೊತೆಗೆ ಇವರನ್ನು ರಕ್ಷಣೆ ಮಾಡಲು ಬಂದ ಪೊಲೀಸರ ಮೇಲೂ ಹಲ್ಲೆ ಮಾಡಿ ಅವರ ವಾಹನವನ್ನು ಜಖಂ ಮಾಡಲಾಗಿತ್ತು.

    ಈ ವಿಚಾರವಾಗಿ ಮಾತನಾಡಿರುವ ಜಿಲ್ಲಾಧಿಕಾರಿ ಕೈಲಾಶ್ ಶಿಂಧೆ, ಲಾಕ್‍ಡೌನ್ ಸಮಯವನ್ನೇ ಬಂಡವಾಳ ಮಾಡಿಕೊಂಡು ಕಳ್ಳರು ಕಳ್ಳತನ ಮಾಡಲು ಗ್ರಾಮಗಳಿಗೆ ಬರುತ್ತಾರೆ. ಜೊತೆಗೆ ಮಕ್ಕಳನ್ನು ಕದ್ದುಕೊಂಡು ಹೋಗುತ್ತಾರೆ ಎಂಬ ವಂದತಿ ಸುತ್ತಮುತ್ತಲಿನ ಗ್ರಾಮದಲ್ಲಿ ಹರಿದಾಡುತ್ತಿತ್ತು. ಹೀಗಾಗಿ ಆ ಊರಿನ ಯುವಕರು ರಾತ್ರಿಯ ವೇಳೆ ಗಸ್ತು ತಿರುಗುತ್ತಿದ್ದರು. ಈ ವೇಳೆ ಈ ಸಾಧು ಅವರು ಅಲ್ಲಿಗೆ ಹೋಗಿದ್ದಾರೆ. ಅನುಮಾನಗೊಂಡ ಗ್ರಾಮದವರು ಅವರನ್ನು ಥಳಿಸಿದ್ದಾರೆ ಎಂದು ಹೇಳಿದ್ದಾರೆ.

  • ಸೈಕಲ್ ನೀಡಲು ನಿರಾಕರಿಸಿದ ಬಾಲಕನ ಗುಪ್ತಾಂಗ ಕತ್ತರಿಸಲು ಯತ್ನಿಸಿದ ಸಾಧು

    ಸೈಕಲ್ ನೀಡಲು ನಿರಾಕರಿಸಿದ ಬಾಲಕನ ಗುಪ್ತಾಂಗ ಕತ್ತರಿಸಲು ಯತ್ನಿಸಿದ ಸಾಧು

    ಲಕ್ನೋ: ಸೈಕಲ್ ಕೇಳಿದಾಗ ನೀಡಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಸಾಧುವೊಬ್ಬ ಕತ್ತಿಯಿಂದ ಬಾಲಕನ ಗುಪ್ತಾಂಗ ಕತ್ತರಿಸಲು ಯತ್ನಿಸಿ, ಹಲ್ಲೆ ಮಾಡಿ ಕ್ರೌರ್ಯ ಮೆರೆದ ಘಟನೆ ಉತ್ತರ ಪ್ರದೇಶದ ಫರುಖಾಬಾದ್‍ನಲ್ಲಿ ನಡೆದಿದೆ.

    ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಚೋನಪುರ ನಿವಾಸಿಯಾಗಿರುವ 12 ವರ್ಷದ ಬಾಲಕ ಮೇಲೆ ಅದೇ ಗ್ರಾಮದ ಸಾಧು ಹಲ್ಲೆ ಮಾಡಿದ್ದಾನೆ. ಬುಧವಾರ ರಾತ್ರಿ ಬಾಲಕ ರಸ್ತೆಯಲ್ಲಿ ಸೈಕಲ್ ಮೇಲೆ ಹೋಗುತ್ತಿದ್ದನು. ಈ ವೇಳೆ ಆತನಿಗೆ ಅಡ್ಡಗಟ್ಟಿದ ಸಾಧು ಬಾಲಕನ ಸೈಕಲ್ ತನಗೆ ಕೊಡುವಂತೆ ಕೇಳಿದ್ದಾನೆ. ಆಗ ಬಾಲಕ ಸೈಕಲ್ ನೀಡಲು ನಿರಾಕರಿಸಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಸಾಧು ತನ್ನ ಬಳಿ ಇದ್ದ ಕತ್ತಿಯಿಂದ ಬಾಲಕನ ಗುಪ್ತಾಂಗ ಕತ್ತರಿಸಲು ಯತ್ನಿಸಿ ಹಲ್ಲೆ ಮಾಡಿದ್ದಾನೆ.

    ಸಾಧುವಿನ ಕೃರ್ತಕ್ಕೆ ಬಾಲಕ ಗಂಭಿರ ಗಾಯಗೊಂಡಿದ್ದು, ನೋವಿನಿಂದ ಕೂಗಿಕೊಳ್ಳುತ್ತಿದ್ದಂತೆ ಸಾಧು ಸ್ಥಳದಿಂದ ಪರಾರಿಯಾಗಿದ್ದಾನೆ. ಬಾಲಕನ ಕಿರುಚಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಬಂದು ಆತನನ್ನು ಕರೆದುಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

    ಬಾಲಕನ ಪೋಷಕರು ಹಾಗೂ ಗ್ರಾಮಸ್ಥರು ಸೇರಿ ಸಾಧು ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸಾಧುವನ್ನು ಆದಷ್ಟು ಬೇಗ ಪತ್ತೆಹಚ್ಚಿ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮೃತಪಟ್ಟಿದ್ದ 115ರ ಸಾಧು 4 ಗಂಟೆ ನಂತ್ರ ಎದ್ದು ನಿಂತ್ರು – ಬಾಬಾನ ದರ್ಶನಕ್ಕೆ ಮುಗಿಬಿದ್ದ ಜನ

    ಮೃತಪಟ್ಟಿದ್ದ 115ರ ಸಾಧು 4 ಗಂಟೆ ನಂತ್ರ ಎದ್ದು ನಿಂತ್ರು – ಬಾಬಾನ ದರ್ಶನಕ್ಕೆ ಮುಗಿಬಿದ್ದ ಜನ

    ಲಕ್ನೋ: ಉತ್ತರ ಪ್ರದೇಶದ ಕಾನ್ಪುರದ ಹಳ್ಳಿಯೊಂದರಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದ ಸಾಧುವೊಬ್ಬರು 4 ಗಂಟೆಯ ನಂತರ ಎದ್ದು ನಿಂತ ಚಮತ್ಕಾರ ನಡೆದಿದೆ.

    ಕಾನ್ಪುರದ ರುಸೆಲ್ಲಾಬಾದ್ ತೆಹ್ಸಿಲ್ ಗ್ರಾಮದಲ್ಲಿ ಸೋಮವಾರ ಸಂಜೆ ಗ್ರಾಮದಲ್ಲಿದ್ದ 115 ವರ್ಷದ ಸಾಧು ನಾರಾಯಣ ಬಾಬಾ ಸಾವನ್ನಪ್ಪಿದ್ದರು. ಈ ವೇಳೆ ಊರವರೆಲ್ಲಾ ಸೇರಿ ಅವರ ಅಂತಿಮ ಸಂಸ್ಕಾರಕ್ಕೆ ತಯಾರಿ ನಡೆಸುತ್ತಿದ್ದರು. ಆದರೆ ಮೃತಪಟ್ಟ ನಾಲ್ಕು ಗಂಟೆಯ ನಂತರ ಚಮತ್ಕಾರ ಎಂಬಂತೆ ಸಾಧುವಿನ ಹೃದಯ ಬಡಿತ ಮತ್ತೆ ಶುರುವಾಗಿದೆ. ಇದನ್ನು ಕಂಡ ಗ್ರಾಮಸ್ಥರು ಮುಖವಿಸ್ಮಿತರಾಗಿದ್ದಾರೆ.

    ನಾರಾಯಣ ಬಾಬಾ ಕಳೆದ 15 ರಿಂದ 20 ವರ್ಷಗಳ ಹಿಂದೆ ಗ್ರಾಮದ ದೇವಸ್ಥಾನಕ್ಕೆ ಬಂದಿದ್ದರಂತೆ. ಆ ನಂತರ ಇಲ್ಲಿಯೇ ವಾಸಿಸಲು ಶುರು ಮಾಡಿದ್ದರು. ಅಲ್ಲದೆ ಅನೇಕ ವರ್ಷಗಳಿಂದ ಅನ್ನ ತ್ಯಜಿಸಿರುವ ಸಾಧು, ಹಣ್ಣನ್ನು ಮಾತ್ರ ಸೇವನೆ ಮಾಡುತ್ತಿದ್ದರು. ಹಾಗೆಯೇ ಅವರ ವಯಸ್ಸು ಅವರಿಗೆ ಸರಿಯಾಗಿ ತಿಳಿದಿಲ್ಲ. ಈ ಘಟನೆ ನಡೆದಿರುವುದು ಅಚ್ಚರಿ ಮೂಡಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಈಗ ಚಮತ್ಕಾರಿ ಸಾಧುವನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ಬೇರೆ ಬೇರೆ ಊರುಗಳಿಂದಲೂ ಕೂಡ ಜನರು ಸಾಧುವಿನ ದರ್ಶನ ಪಡೆಯಲು ಬರುತ್ತಿದ್ದಾರೆ.

  • ಮರ್ಮಾಂಗವನ್ನ ಕತ್ತರಿಸಿಕೊಂಡು ಆಸ್ಪತ್ರೆಗೆ ದಾಖಲಾದ ಸಾಧು!

    ಮರ್ಮಾಂಗವನ್ನ ಕತ್ತರಿಸಿಕೊಂಡು ಆಸ್ಪತ್ರೆಗೆ ದಾಖಲಾದ ಸಾಧು!

    ಲಕ್ನೋ: 45 ವರ್ಷದ ಸಾಧು ಒಬ್ಬರು ಬ್ಲೇಡ್‍ನಿಂದ ತಮ್ಮ ಮರ್ಮಾಂಗವನ್ನು ಕತ್ತರಿಸಿಕೊಂಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶ ರಾಜ್ಯದ ಬಾಂದಾ ಜಿಲ್ಲೆಯ ಕಾಮಸಿನ್ ನಗರದಲ್ಲಿ ನಡೆದಿದೆ.

    ಮದನಿ ಬಾಬಾ ಮರ್ಮಾಂಗ ಕತ್ತರಿಸಿಕೊಂಡ ಸಾಧು. ಮದನಿ ಬಾಬಾ ಕಳೆದ ಹಲವು ವರ್ಷಗಳಿಂದ ಕಾಮಸಿನ್ ನಗರದ ಸರ್ಕಾರಿ ನಿವೇಶನದಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಗುರುವಾರ ನಗರದ ಕೆಲ ಮಹಿಳೆಯರು ಸಾಧು ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪದಿಂದ ಮನನೊಂದು ಸಾಧು ರಾತ್ರಿ ಬ್ಲೇಡ್ ನಿಂದ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರೇಪಿಸ್ಟ್ ಕಾಮಿ ಸ್ವಾಮೀಜಿಯ ಮರ್ಮಾಂಗವನ್ನೇ ಕಟ್ ಮಾಡಿದ್ಳು ಯುವತಿ!

    ಮದನಿ ಬಾಬಾರನ್ನ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದೇಹದಿಂದ ಮರ್ಮಾಂಗ ಶೇ.80 ರಷ್ಟು ಬೇರೆಯಾಗಿದೆ. ಸದ್ಯ ಸಾಧು ಅವರ ಆರೋಗ್ಯ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಾಧು ಮದನಿ ಬಾಬಾರಿಗೆ ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದ ಮೇರೆಗೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ಯುವತಿ ಅಲ್ಲ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದೆ: ಕಾಮಿ ಸ್ವಾಮೀಜಿ 

    2017ರಲ್ಲಿ ರಾಜಸ್ಥಾನದ 30 ವರ್ಷದ ಸ್ವಯಂಘೋಷಿತ ದೇವಮಾನವ ಸಂತೋಷ್ ದಾಸ್ ಅಕ್ರಮ ಸಂಬಂಧದ ಆರೋಪಕ್ಕೆ ಮನನೊಂದು ಮರ್ಮಾಂಗವನ್ನು ಕಟ್ ಮಾಡಿಕೊಂಡಿದ್ದ ಘಟನೆ ನಡೆದಿತ್ತು. ಕೇರಳದಲ್ಲಿ 23 ವರ್ಷದ ಕಾನೂನು ವಿದ್ಯಾರ್ಥಿನಿಯ ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರೀ ಹರಿ ಅಲಿಯಾಸ್ ಗಣೇಶಾನಂದ ತೀರ್ಥಪಾದ ಸ್ವಾಮಿ ಮರ್ಮಾಂಗ ಕತ್ತರಿಸಿಕೊಂಡಿದ್ದ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು. ಇದನ್ನೂ ಓದಿ: ಅಕ್ರಮ ಸಂಬಂಧ ಆರೋಪಕ್ಕೆ ಮನನೊಂದು ಸ್ವಾಮೀಜಿ `ಅದನ್ನೇ’ ಕಟ್ ಮಾಡ್ಕೊಂಡ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv