Tag: Sadhguru

  • ಡಿಕೆ ಶಿವಕುಮಾರ್ ಸದ್ಗುರು ಕಾರ್ಯಕ್ರಮಕ್ಕೆ ಹೋಗಿರೋ ಬಗ್ಗೆ ಚರ್ಚೆ ಬೇಡ: ಪ್ರಿಯಾಂಕ್ ಖರ್ಗೆ

    ಡಿಕೆ ಶಿವಕುಮಾರ್ ಸದ್ಗುರು ಕಾರ್ಯಕ್ರಮಕ್ಕೆ ಹೋಗಿರೋ ಬಗ್ಗೆ ಚರ್ಚೆ ಬೇಡ: ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸದ್ಗುರು (Sadhguru) ಕಾರ್ಯಕ್ರಮಕ್ಕೆ ಹೋಗಿರೋ ಬಗ್ಗೆ ಅನಗತ್ಯ ಚರ್ಚೆ ಬೇಡ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.

    ಸದ್ಗುರು ಕಾರ್ಯಕ್ರಮದಲ್ಲಿ ಡಿಕೆಶಿ ಭಾಗಿ ಹಿನ್ನೆಲೆ ಅವರು ಬಿಜೆಪಿ ಸೇರುತ್ತಾರೆ ಎಂಬ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅದೆಲ್ಲಾ ಅನಾವಶ್ಯಕವಾದ ಚರ್ಚೆ. ಡಿಕೆ ಶಿವಕುಮಾರ್ ಅವರಿಗೆ ಆಹ್ವಾನ ಬಂದಿತ್ತು ಹೋಗಿದ್ದಾರೆ. ಏಕನಾಥ್ ಶಿಂಧೆ ಎನ್ನುತ್ತಾರೆ ಅವರ ಸಾಮರ್ಥ್ಯ ಅಷ್ಟೇನಾ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಸ್ವತಂತ್ರವಾಗಿ ಯಾವತ್ತಾದ್ರೂ ಅಧಿಕಾರಕ್ಕೆ ಬಂದಿದ್ದಾರಾ. ಹೋದ ಸಲ 17 ಏಕನಾಥ್ ಶಿಂಧೆಗಳನ್ನು ಕರೆದುಕೊಂಡು ಹೋಗಿದ್ರಲ್ಲಾ. ಈ ಸಲ ಅದು ಸಾಧ್ಯವಿಲ್ಲ. ಒಂದು ಅರ್ಥ ಆಗ್ತಿದೆ, ಅವರಲ್ಲಿ ಧಮ್ಮಿಲ್ಲ, ಸಾಮರ್ಥ್ಯ ಇಲ್ಲ. ಬಿಜೆಪಿಯವರ ಬಗ್ಗೆ ನಾನ್ಯಾಕೆ ಕಾಳಜಿ ತೋರಿಸಲಿ, ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ. ಬಿಜೆಪಿಯವರು ಯಾರನ್ನಾದ್ರೂ ದ್ವೇಷಿಸಿಕೊಳ್ಳಲಿ. ಮೋದಿ, ಖರ್ಗೆ ಅಕ್ಕಪಕ್ಕ ಫೋಟೋ ಇರುತ್ತೆ. ಹಾಗಂತ ಮೋದಿ ಕಾಂಗ್ರೆಸ್ ಸೇರುತ್ತಾರೆ ಅನ್ನೋಕಾಗುತ್ತಾ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಕ್ಷೇತ್ರ ಪುನರ್ ವಿಂಗಡಣೆ ವಿಚಾರ ಇನ್ನೂ ಚರ್ಚಾ ಹಂತದಲ್ಲಿದೆ: ಕುಮಾರಸ್ವಾಮಿ

    ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಮಾಜಿ ಸಂಸದ ಸುರೇಶ್ ಇಂಗಿತ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರಿಗೂ ಅವರ ಕುಟುಂಬದರು ಆಗಬೇಕು ಎಂದು ಇರುತ್ತೆ. ಯತೀಂದ್ರ ಅವರನ್ನು ಕೇಳಿದ್ರೆ ಅವರು ಹೇಳುತ್ತಾರೆ. ನಮ್ಮ ಕುಟುಂಬದವರನ್ನು ಕೇಳಿದ್ರೂ ಹೇಳುತ್ತಾರೆ. ಅದೆಲ್ಲಾ ಆಗುತ್ತಾ? ಹೈಕಮಾಂಡ್ ಅಂತಿಮವಾಗಿ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆ ಶಿವಕುಮಾರ್ ಒಂದು ವಾರದಿಂದ ಭೂಮಿ ಮೇಲೆ ಇಲ್ಲದಂತೆ ಮಾತಾಡ್ತಿದ್ದಾರೆ: ಹೆಚ್‌ಡಿಕೆ

  • ಸಾವಿರ ಜನ ವಿರೋಧ ಮಾಡಲಿ, ಇದು ನನ್ನ ನಂಬಿಕೆ ವಿಚಾರ – ಟ್ವೀಟ್‌ ಮಾಡಿದವರಿಗೆಲ್ಲ ಉತ್ತರ ನೀಡಲ್ಲ: ಡಿಕೆಶಿ

    ಸಾವಿರ ಜನ ವಿರೋಧ ಮಾಡಲಿ, ಇದು ನನ್ನ ನಂಬಿಕೆ ವಿಚಾರ – ಟ್ವೀಟ್‌ ಮಾಡಿದವರಿಗೆಲ್ಲ ಉತ್ತರ ನೀಡಲ್ಲ: ಡಿಕೆಶಿ

    – ಇಶಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಸಮರ್ಥನೆ
    – ಕುಂಭಮೇಳಕ್ಕೂ ರಾಜಕೀಯಕ್ಕೂ ಏನ್ ಸಂಬಂಧ?

    ಬೆಂಗಳೂರು:  ಸಾವಿರ ಜನ ವಿರೋಧ ಮಾಡಲಿ. ಇದು ನನ್ನ ನಂಬಿಕೆ ವಿಚಾರ.  ಯಾರ್ಯಾರೋ ಟ್ವೀಟ್ ಮಾಡುತ್ತಾರೆ. ಅವರಿಗೆಲ್ಲ ನಾನು ಉತ್ತರ ನೀಡಲು ಹೋಗುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

    ಇಶಾ ಫೌಂಡೇಶನ್‌ (Isha Foundation) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನ್ನು ಸಮರ್ಥಿಸಿಕೊಂಡ ಅವರು, ದೊಡ್ಡನಾಯಕರ ಮಾತಿಗೆ ನಾನು ಉತ್ತರ ನೀಡುವುದಿಲ್ಲ. ನಾನು ಹೋಗಿದ್ದು ಶಿವನರಾತ್ರಿಗೆ. ಇದು ನನ್ನ ಸ್ವಂತ ನಂಬಿಕೆ ಎಂದು ಎಐಸಿಸಿ ಕಾರ್ಯದರ್ಶಿ ಪಿವಿ ಮೋಹನ್‌ಗೆ ಠಕ್ಕರ್‌ ನೀಡಿದರು.

    ಯಾವ ಬಿಜೆಪಿಯ ಸ್ವಾಗತ ಬೇಡ, ಕಾಂಗ್ರೆಸ್ ಅವರು ಸ್ವಾಗತ ಮಾಡುವುದು ಬೇಡ. ಮಾಧ್ಯಮಗಳು ಮಾತನಾಡುವ ಅವಶ್ಯಕತೆ ಇಲ್ಲ. ಇದು ನನ್ನ ವೈಯಕ್ತಿಕ ನಂಬಿಕೆ ಹೋಗಿದ್ದೇನೆ ಎಂದರು. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಅಮಿತ್ ಶಾ ಜೊತೆ ಡಿಕೆಶಿ – ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ

    ರಾಹುಲ್ ಗಾಂಧಿ (Rahul Gandhi) ಅವರನ್ನು ಸದ್ಗುರು ವಿರೋಧ ಮಾಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಯಾರು ಏನು ಕಾಮೆಂಟ್ ಮಾಡಿದ್ದಾರೆ ನಾನು ನೋಡಿಲ್ಲ. ನನಗೆ ಸದ್ಗುರು ನಮ್ಮ ರಾಜ್ಯದವರು, ಮೈಸೂರಿನವರು. ಕಾವೇರಿ ವಿಚಾರದಲ್ಲಿ ಹೋರಾಟ ಮಾಡಿದ್ದರು. ಸೇವ್ ಸಾಯಲ್ ಅಂತ ಅಭಿಯಾನ ಮಾಡಿದ್ದರು. ನಮ್ಮ ರಾಜ್ಯದಲ್ಲಿ ಅವರ ಫೌಂಡೇಶನ್‌ನಿಂದ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅವರೇ ಖುದ್ದು ಬಂದು ಕರೆದಿದ್ದಕ್ಕೆ ಹೋಗಿದ್ದೇನೆ. ನಾನು ಅವರ ಅಚಾರ, ವಿಚಾರ ಮೆಚ್ಚಿಕೊಂಡಿದ್ದೇನೆ ಎಂದು ಹೇಳಿದರು.

    ಹಿಂದೂ (Hindu) ಆಗಿಯೇ ಹುಟ್ಟಿದ್ದೇನೆ. ಹಿಂದೂ ಆಗಿಯೇ ಸಾಯುತ್ತೇನೆ ಎಂಬ ಮಾತಿಗೆ ಬಿಜೆಪಿ ಸ್ವಾಗತ ಮಾಡಿದ್ದಕ್ಕೆ, ನಾನು ಯಾಕೆ ಬೇರೆ ಧರ್ಮಕ್ಕೆ ಹೋಗಲಿ? ನನಗೆ ಎಲ್ಲಾ ಧರ್ಮದ ಮೇಲೆ ಪ್ರೀತಿ ನಂಬಿಕೆ ಇದೆ. ಮಾನವ ಧರ್ಮಕ್ಕೆ ಜಯವಾಗಲಿ. ಯಾವ ಧರ್ಮದಲ್ಲಿ ಹುಟ್ಟಬೇಕು ಎಂದು ಯಾರು ಅರ್ಜಿ ಹಾಕಿಕೊಂಡಿಲ್ಲ. ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ಹುಟ್ಟಿ ಬೌದ್ದ ಧರ್ಮಕ್ಕೆ ಸೇರಿಕೊಂಡರು. ಅದು ಅವರ ಇಷ್ಟ. ರಾಜಕೀಯಕ್ಕೆ ಬಳಕೆ ಮಾಡುವುದಾದರೆ ಮಾಡಿಕೊಳ್ಳಲಿ. ನಮ್ಮ ಬಗ್ಗೆ ಚರ್ಚೆ ಆಗುತ್ತನೇ ಇರಲಿ ಎಂದರು

    ಕುಂಭಮೇಳಕ್ಕೂ ರಾಜಕೀಯಕ್ಕೂ ಏನ್ ಸಂಬಂಧ? ನೀರು, ಗಾಳಿಗೆ ಜಾತಿ ಇದೆಯಾ? ಅಲ್ಲೂ 3 ನದಿ ಸೇರುತ್ತದೆ. ಟಿ ನರಸಿಪುರದಲ್ಲೂ 3 ನದಿ ಸೇರುತ್ತದೆ. ಅದು ಕಮ್ಯೂನಲ್ ವಿಷಯ ಅಲ್ಲ. ಮೊದಲಿಂದಲೂ ಅದೊಂದು ಪದ್ದತಿ ಧರ್ಮದಲ್ಲಿ ನಡೆದುಕೊಂಡು ಬಂದಿದೆ. ಅಷ್ಟು ಬಿಟ್ಟರೆ ಅದರಲ್ಲಿ ಯಾವುದೇ ರಾಜಕೀಯ ಇಲ್ಲ. ಸ್ಪೀಕರ್ ಕೂಡಾ ಕುಂಭಮೇಳೆಕ್ಕೆ ಬಂದಿದ್ದರು. ಅವರೇ ಹೋಗಬೇಕು‌ ಅಂತ ಹೇಳಿದ್ದರು. ಕುಂಭಮೇಳದಲ್ಲಿ ಹೇಗೆ ವ್ಯವಸ್ಥೆ ಅಂತ ನೋಡಿಕೊಂಡು ಬಂದಿದ್ದೇನೆ ಅಷ್ಟೇ. ಕಾವೇರಿ ಆರತಿ ಬಗ್ಗೆಯೂ ಮಾತಾಡಿದ್ದೇನೆ. ಅದಕ್ಕೆ ರಾಜಕೀಯ ಬೆಳೆಸಬೇಡಿ ಎಂದು ಹೇಳಿದರು.

     

  • ಸ್ವಾಮಿ ಅವಧೇಶಾನಂದ ಗಿರಿ, ಸದ್ಗುರು ಭೇಟಿಯಾದ ಅಮಿತ್‌ ಶಾ

    ಸ್ವಾಮಿ ಅವಧೇಶಾನಂದ ಗಿರಿ, ಸದ್ಗುರು ಭೇಟಿಯಾದ ಅಮಿತ್‌ ಶಾ

    ನವದೆಹಲಿ: ಆಧ್ಯಾತ್ಮಿಕ ನಾಯಕ ಸದ್ಗುರುಗಳನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಭೇಟಿಯಾದರು. ಭಾರತೀಯ ಆಧ್ಯಾತ್ಮಿಕತೆ ಕುರಿತು ಸದ್ಗುರುಗಳ ಜೊತೆ ಚರ್ಚೆ ನಡೆಸಿದ್ದಾರೆ.

    ಸದ್ಗುರುಗಳನ್ನು ಭೇಟಿಯಾಗಿದ್ದು ಸಂತೋಷವಾಯಿತು. ಭಾರತೀಯ ಆಧ್ಯಾತ್ಮಿಕತೆ ಮತ್ತು ಸಮಾಜಗಳನ್ನು ಪರಿವರ್ತಿಸುವಲ್ಲಿ ಅದರ ಪಾತ್ರದ ಬಗ್ಗೆ ಸದ್ಗುರುಗಳ ಜೊತೆ ಚರ್ಚೆ ನಡೆಸಿದೆ ಎಂದು ಸಚಿವರು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

    ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್‌ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಇದಕ್ಕೂ ಮುನ್ನ, ಸ್ವಾಮಿ ಅವಧೇಶಾನಂದ ಗಿರಿ ಜಿ ಮಹಾರಾಜ್ ಅವರನ್ನು ಭೇಟಿಯಾದರು.

    ಸ್ವಾಮಿ ಅವಧೇಶಾನಂದ ಗಿರಿ ಜಿ ಮಹಾರಾಜ್ ಅವರು ಜುನಾ ಅಖಾರದ ಪ್ರಸ್ತುತ ಆಚಾರ್ಯ ಮಹಾಮಂಡಲೇಶ್ವರರಾಗಿದ್ದಾರೆ. ಇದು ಭಾರತದ ಅತ್ಯಂತ ಹಳೆಯ ಮತ್ತು ಪ್ರಮುಖ ಅಖಾರಾಗಳಲ್ಲಿ ಒಂದಾಗಿದೆ.

  • ಶಸ್ತ್ರಚಿಕಿತ್ಸೆ ಬಳಿಕ ಈಶ ಯೋಗ ಕೇಂದ್ರಕ್ಕೆ ಮರಳಿದ ಸದ್ಗುರು – ಜನರಿಂದ ಭವ್ಯ ಸ್ವಾಗತ

    ಶಸ್ತ್ರಚಿಕಿತ್ಸೆ ಬಳಿಕ ಈಶ ಯೋಗ ಕೇಂದ್ರಕ್ಕೆ ಮರಳಿದ ಸದ್ಗುರು – ಜನರಿಂದ ಭವ್ಯ ಸ್ವಾಗತ

    ನವದೆಹಲಿ: ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಇಂದು (ಸೋಮವಾರ) ಈಶ ಯೋಗ ಕೇಂದ್ರಕ್ಕೆ ಮರಳಿದ ಸದ್ಗುರು ಅವರನ್ನು ಕೊಯಮತ್ತೂರು ನಗರದಲ್ಲಿ ಅವರ ಭಕ್ತರು ಸ್ವಾಗತಿಸಿದ್ದಾರೆ.

    ಕೊಯಮತ್ತೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಜನ ಭೇಟಿಯಾಗಿ ಶುಭಾಶಯ ಕೋರಿದ್ದಾರೆ. ಸದ್ಗುರು ಆಗಮನವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಕೊಯಮತ್ತೂರಿನ ನಿವಾಸಿಗಳು ಮತ್ತು ಸ್ಥಳೀಯ ಗ್ರಾಮಸ್ಥರು ಈಶ ಕೇಂದ್ರಕ್ಕೆ ಹೋಗುವ ರಸ್ತೆಗಳಲ್ಲಿ ನಿಂತು ಅವರ ದರ್ಶನ ಪಡೆದಿದ್ದಾರೆ. ಇನ್ನೂ ಈಶ ಕೇಂದ್ರದಲ್ಲಿ ಆದಿವಾಸಿಗಳು ಮತ್ತು ಸ್ಥಳೀಯ ಗ್ರಾಮಸ್ಥರು ಸಾಂಪ್ರದಾಯಿಕ ಸಂಗೀತ, ಸುಮಧುರ ಡ್ರಮ್ಸ್ ಮತ್ತು ಜಾನಪದ ಹಾಡುಗಳೊಂದಿಗೆ ಸದ್ಗುರುಗಳನ್ನು ಸ್ವಾಗತಿಸಿದರು. ಇದನ್ನೂ ಓದಿ: ಚುನಾವಣಾ ಖರ್ಚಿಗಾಗಿ ಹೆಚ್‌ಡಿಕೆಗೆ 500 ರೂ. ಹಣ ಕೊಟ್ಟ ಅಭಿಮಾನಿ

    ಸ್ಥಳೀಯ ಥಣಿಕಂಡಿ ಗ್ರಾಮದ ಆದಿವಾಸಿ ಮಹಿಳೆ, ವಿಜಯಾ ಎಂಬವರು ಮಾತನಾಡಿ, ಸದ್ಗುರುಗಳು ಯೋಗ ಸಾಧನೆ ಮೂಲಕ ನಮ್ಮ ಗ್ರಾಮವನ್ನು ಸಂತೋಷ ಮತ್ತು ಆರೋಗ್ಯದ ಗ್ರಾಮವನ್ನಾಗಿ ಪರಿವರ್ತಿಸಿದ್ದಾರೆ. ಅವರ ವೀಡಿಯೋಗಳನ್ನು ಕೇಳುತ್ತಾ, ನನ್ನ ಹಳ್ಳಿಯ ಯುವಕರು ಅಮಲು ಮತ್ತು ಆಲಸ್ಯದಿಂದ ದೂರ ಸರಿಯುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅವರ ಶಸ್ತ್ರಚಿಕಿತ್ಸೆಯ ಸುದ್ದಿ ಬಂದಾಗ, ನಾವು ತೀವ್ರ ಕಳವಳಗೊಂಡಿದ್ದೆವು. ಅವರು ಆರೋಗ್ಯವಾಗಿ ಮರಳಿರುವುದು ನಮಗೆ ಖುಷಿ ನೀಡಿದೆ ಎಂದಿದ್ದಾರೆ.

    ಮಾ.27 ರಂದು ನವದೆಹಲಿಯಲ್ಲಿ ಮಿದುಳಿನ ಶಸ್ತ್ರಚಿಕಿತ್ಸೆಗೆ ಅವರು ಒಳಗಾಗಿದ್ದರು. ಇದೀಗ ಸುರಕ್ಷಿತವಾಗಿ ಅವರು ಮರಳಿರುವುದು ಅವರ ಅನುಯಾಯಿಗಳಲ್ಲಿ ಸಂಭ್ರಮ ಉಂಟು ಮಾಡಿದೆ. ಜನ ಸ್ವಾಗತ ಕೋರಿರುವ ವೀಡಿಯೋವನ್ನು ಈಶ ಫೌಂಡೇಷನ್ ಹಾಗೂ ಅವರ ಅನುಯಾಯಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 41 ಕೋಟಿ ರೂ. ಆಸ್ತಿ ಘೋಷಿಸಿದ ಹಾಸನದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್

  • ಹಾವನ್ನು ರಕ್ಷಣೆ ಮಾಡಲಾಗಿದೆ ಹೊರತು, ಹಾನಿ ಮಾಡಿಲ್ಲ: ಇಶಾ ಫೌಂಡೇಶನ್

    ಹಾವನ್ನು ರಕ್ಷಣೆ ಮಾಡಲಾಗಿದೆ ಹೊರತು, ಹಾನಿ ಮಾಡಿಲ್ಲ: ಇಶಾ ಫೌಂಡೇಶನ್

    ಚಿಕ್ಕಬಳ್ಳಾಪುರ: ಜೀವಂತ ಹಾವು (Snake) ಕೈಯಲ್ಲಿ ಹಿಡಿದು ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಇಶಾ ಫೌಂಡೇಶನ್ (Isha Foundation) ಸಂಸ್ಥಾಪಕ ಜಗ್ಗಿ ವಾಸುದೇವ್ (Jaggi Vasudev) ವಿರುದ್ಧ ಅರಣ್ಯಾಧಿಕಾರಿಗೆ ದೂರು ನೀಡಲಾಗಿತ್ತು. ಇದನ್ನು ಪಬ್ಲಿಕ್ ಟಿವಿ ಡಿಜಿಟಲ್‌ನಲ್ಲಿ ವರದಿ ಮಾಡಲಾಗಿದ್ದು, ಈ ಬಗ್ಗೆ ಇಶಾ ಫೌಂಡೇಶನ್ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದೆ.

    ತಾಲೂಕಿನ ನರಸಿಂಹದೇವರ ಬೆಟ್ಟದ ತಪ್ಪಲಿನಲ್ಲಿರುವ ಇಶಾ ಕೇಂದ್ರದಲ್ಲಿ ನಾಗಮಂಟಪ ಪ್ರತಿಷ್ಠಾಪನೆ ಕಾರ್ಯಕ್ರಮದ ವೇಳೆ ಸಾವಿರಾರು ಜನರ ಮುಂದೆಯೇ ಜಗ್ಗಿ ವಾಸುದೇವ್ ಅವರು ಹಾವನ್ನು ಕೈಯಲ್ಲಿ ಹಿಡಿದು ಪ್ರದರ್ಶನ ಮಾಡಿದ್ದರು. ಈ ಬಗ್ಗೆ ಜಗ್ಗಿ ವಾಸುದೇವ್ ವಿರುದ್ಧ ಎಸ್‌ಪಿಸಿಎ ಸದಸ್ಯ ಹಾಗೂ ಉರಗರಕ್ಷಕ ಪ್ರಥ್ವಿರಾಜ್ ಚಿಕ್ಕಬಳ್ಳಾಪುರ ಜಿಲ್ಲಾ ಉಪ ಸಂರಕ್ಷಣಾಧಿಕಾರಿಗೆ ದೂರು ನೀಡಿದ್ದರು.

    ಪಬ್ಲಿಕ್ ಟಿವಿ ವರದಿ ಹಿನ್ನೆಲೆ ಇಶಾ ಫೌಂಡೇಶನ್ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ. ಟ್ವಿಟರ್ ಮೂಲಕ ಪಬ್ಲಿಕ್ ಟಿವಿ ಟ್ವಿಟರ್ ಖಾತೆಗೆ ಮಾಧ್ಯಮ ಪ್ರಕಟಣೆಯನ್ನು ಇಶಾ ಫೌಂಡೇಶನ್ ಟ್ಯಾಗ್ ಮಾಡಿದೆ. ಮಾಧ್ಯಮ ಪ್ರಕಟಣೆಯಲ್ಲಿ ಹಾವನ್ನು ಹಿಡಿದು ಪ್ರದರ್ಶನ ಮಾಡಿರುವ ಬಗೆಗಿನ ಅಸಲಿ ವಿಚಾರವನ್ನು ಸವಿಸ್ತಾರವಾಗಿ ವಿವರಿಸಲಾಗಿದೆ. ಇದನ್ನೂ ಓದಿ: ಹಾವು ಹಿಡಿದು ಪ್ರದರ್ಶನ – ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಅರಣ್ಯಾಧಿಕಾರಿಗೆ ದೂರು

    ಟ್ವೀಟ್‌ನಲ್ಲೇನಿದೆ?
    ಹಾವಿಗೆ ತೊಂದರೆ ಕೊಟ್ಟಿದ್ದಾರೆ ಎಂಬುದು ತಪ್ಪು ಮಾಹಿತಿಯಿಂದ ಕೂಡಿರುವ ದೂರಾಗಿದೆ. ನಾಗಮಂಟಪ ಪ್ರತಿಷ್ಠಾಪನೆ ವೇಳೆ ಸ್ವತಃ ಹಾವೇ ಇಶಾ ಯೋಗ ಕೇಂದ್ರದ ಸಮೀಪ ಆಗಮಿಸಿತ್ತು. ಹಾವಿನ ಹಾಗೂ ಜನರ ಸುರಕ್ಷತೆಯ ಹಿತದೃಷ್ಟಿಯಿಂದ ಹಾವನ್ನು ರಕ್ಷಣೆ ಮಾಡಲಾಗಿದೆ ಹೊರತು, ಹಾನಿ ಮಾಡಿಲ್ಲ. ಇದನ್ನೂ ಓದಿ: ಅಪ್ಪು ಅಭಿಮಾನಿಗಳಿಂದ ಆವಲಬೆಟ್ಟಕ್ಕೆ `ಗಂಧದಗುಡಿ ರೈಡ್’ – ಆಲದ ಗಿಡ ನೆಟ್ಟು ಪುನೀತ್‌ ನಾಮಕರಣ

    ಸ್ವಯಂ ಸೇವಕರೊಬ್ಬರು ಹಾವು ಆಗಮಿಸಿರುವ ಬಗ್ಗೆ ಸದ್ಗುರುಗಳ ಗಮನಕ್ಕೆ ತಂದಿದ್ದರು. ದೂರಿನಲ್ಲಿ ಉಲ್ಲೇಖಿಸಿರುವಂತೆ ಹಾವಿಗೆ ಯಾವುದೇ ರೀತಿಯ ಹಾನಿ ಮಾಡಲಾಗಿಲ್ಲ. ಮೃದುವಾಗಿ ಹಾವು ಹಿಡಿದು ಕಾಡಿನೊಳಗೆ ಬಿಡಲಾಗಿದೆ ಎಂದು ಇಶಾ ಫೌಂಡೇಶನ್ ಸ್ಪಷ್ಟನೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಜನಸಾಮಾನ್ಯರಿಗೆ ಕೈಯಾರೆ ಊಟ ಬಡಿಸಿದ ಸಿಎಂ ಬೊಮ್ಮಾಯಿ

    ಜನಸಾಮಾನ್ಯರಿಗೆ ಕೈಯಾರೆ ಊಟ ಬಡಿಸಿದ ಸಿಎಂ ಬೊಮ್ಮಾಯಿ

    ಚಿಕ್ಕಬಳ್ಳಾಪುರ: ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಬಸವರಾಜ ಬೊಮ್ಮಾಯಿಯವರು (Basavaraj Bommai) ಜನಸಾಮಾನ್ಯರಿಗೆ ಊಟ ಉಣಬಡಿಸಿ (Served Food), ಅವರೊಂದಿಗೇ ಕೂತು ಊಟ ಸವಿದ ಬಲು ಅಪರೂಪದ ಘಟನೆ ಚಿಕ್ಕಬಳ್ಳಾಪುರದ (Chikkaballapur) ಈಶಾ ಯೋಗ ಕೇಂದ್ರದಲ್ಲಿ ಶನಿವಾರ ರಾತ್ರಿ ನಡೆದಿದೆ.

    ಚಿಕ್ಕಬಳ್ಳಾಪುರ ತಾಲೂಕಿನ ನರಸಿಂಹದೇವರಬೆಟ್ಟದ ಬಳಿ ಈಶಾ ಫೌಂಡೇಶನ್ ವತಿಯಿಂದ ಈಶಾ ಯೋಗ ಕೇಂದ್ರ, 112 ಅಡಿ ಎತ್ತರದ ಅದಿಯೋಗಿ ಶಿವನ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಇದೇ ಜಾಗದಲ್ಲಿ ನಾಗಮಂಟಪ ಉದ್ಘಾಟನಾ ಕಾರ್ಯಕ್ರಮ ನಿನ್ನೆ ನೆರವೇರಿತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಇನ್ಮುಂದೆ ಎಲೆಕ್ಟ್ರಿಕ್ ಬಸ್‍ಗಳದ್ದೇ ಹವಾ- ಖಾಸಗೀಕರಣದ ಆತಂಕದಲ್ಲಿ ನೌಕರರು

    ಈ ಕಾರ್ಯದಲ್ಲಿ ಭಾಗಿಯಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಕಾರ್ಯಕ್ರಮ ಮುಗಿದ ನಂತರ ಜನಸಾಮಾನ್ಯರಿಗೆ ತಮ್ಮ ಕೈಯ್ಯಾರೆ ಊಟ ಬಡಿಸಿದ್ದಾರೆ. ತದನಂತರ ಜನಸಾಮಾನ್ಯರ ಜೊತೆಯಲ್ಲೇ ಕೂತು ಊಟ ಮಾಡಿದ್ದಾರೆ.

    ಇಶಾ ಫೌಂಡೇಶನ್ ಸಂಸ್ಥಾಪಕರಾದ ಸದ್ಗುರು ಜಗ್ಗೀ ವಾಸುದೇವ್ ಹಾಗೂ ಸಚಿವ ಸುಧಾಕರ್ ಸಹ ಸಾಥ್ ನೀಡಿದರು. ಇದನ್ನೂ ಓದಿ: ಸ್ವಚ್ಛ ನಗರ ಪಟ್ಟಿಯಲ್ಲಿ ಬೆಂಗಳೂರು ಲಾಸ್ಟ್ – ಷರತ್ತಿನೊಂದಿಗೆ ನೂತನ ಕಸದ ಟೆಂಡರ್‌ಗೆ BBMP ಸಿದ್ಧತೆ

    Live Tv
    [brid partner=56869869 player=32851 video=960834 autoplay=true]

  • ಪರಿಸರ ಉಳಿಸಲು ಸರ್ಕಾರದಿಂದ ಇಕಾಲಾಜಿಕಲ್ ಬಜೆಟ್ ಮಂಡನೆ: ಬೊಮ್ಮಾಯಿ

    ಪರಿಸರ ಉಳಿಸಲು ಸರ್ಕಾರದಿಂದ ಇಕಾಲಾಜಿಕಲ್ ಬಜೆಟ್ ಮಂಡನೆ: ಬೊಮ್ಮಾಯಿ

    ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಪರಿಸರ ಉಳಿಸಲು ಸರ್ಕಾರದಿಂದ ಇಕಾಲಾಜಿಕಲ್ ಬಜೆಟ್ ಮಂಡನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸರ ಉಳಿಸಲು 100 ಕೋಟಿ ಮೊತ್ತದ ಇಕಾಲಾಜಿಕಲ್ ಬಜೆಟ್ ಮಂಡನೆ ಮಾಡುತ್ತೇವೆ. ಇದರ ಜೊತೆಗೆ ಎಲ್ಲೆಲ್ಲಿ ಅರಣ್ಯ ನಾಶ ಆಗಿದೆಯೋ, ಬಂಜರು ಭೂಮಿ ಇದೆಯೋ ಅದನ್ನು ಪುನಶ್ಚೇತನ ಮಾಡುತ್ತೇವೆ. ರಾಜ್ಯದಲ್ಲಿ ಅರಣ್ಯವು 24% ಇದೆ. ಇದನ್ನು ಮುಂದಿನ 5 ವರ್ಷಗಳಲ್ಲಿ 30%ಕ್ಕೆ ಏರಿಸುವ ಯೋಜನೆ ಹಾಕಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

    ಪಂಚಭೂತಗಳಲ್ಲಿ ಶ್ರೇಷ್ಠವಾದುದ್ದು ಮಣ್ಣು. ಮಣ್ಣಿನಲ್ಲಿ ಎಲ್ಲ ಪಂಚಭೂತಗಳೂ ಅಡಕವಾಗಿವೆ. ಆದರೆ ನಾವು ಯಾವ್ಯಾವುದೋ ಸಮಾವೇಶ ಮಾಡುತ್ತೇವೆ. ಅದರ ಜೊತೆಗೆ ನಮ್ಮ ಅಸ್ತಿತ್ವ, ಭವಿಷ್ಯಕ್ಕೆ ಕಾರಣವಾಗಿರುವ ಮಣ್ಣು ಉಳಿಸಿ ಸಮಾವೇಶ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ 2008ರಲ್ಲಿ ಯಡಿಯೂರಪ್ಪ ಭೂಚೇತನ ಕಾರ್ಯಕ್ರಮ ತಂದರು. ಭೂಚೇತನ ಮಣ್ಣಿನಲ್ಲಿರುವ ಸತ್ವ, ಸಾರ ಉಳಿಸುವ ಯೋಜನೆ ಇದಾಗಿದೆ. ಮಣ್ಣಿನಲ್ಲಿ ನೈಸರ್ಗಿಕ ಸತ್ವ, ಸಾರ ಕಮ್ಮಿ ಇದ್ದರೆ ಅದನ್ನು ಸರಿದೂಗಿಸುವ ಕಾರ್ಯಕ್ರಮವಾಗಿದೆ. ಮಣ್ಣು ಉಳಿಸಿ ಪರಿಕಲ್ಪನೆಯನ್ನು ದೂರದೃಷ್ಟಿಯಿಂದ ಅಂದೇ ಮಾಜಿ ಸಿಎಂ ಯಡಿಯೂರಪ್ಪ ಪರಿಚಯಿಸಿದರು ಎಂದರು. ಇದನ್ನೂ ಓದಿ: ಸದ್ಗುರು ಕಾಲು ಮುಟ್ಟಿ ನಮಸ್ಕರಿಸಿದ BSY – ಭಾಷಣದ ವೇಳೆ ಕೆಮ್ಮಿದಾಗ ನೀರು ತಂದುಕೊಟ್ಟ ಜಗ್ಗಿ ವಾಸುದೇವ್

    ಇದೇ ವೇಳೆ ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನಕ್ಕೆ ಸರ್ಕಾರ ಕೈಜೋಡಿಸುವ ಒಪ್ಪಂದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿ ಹಾಕಿದರು. ಈ ಬಗ್ಗೆ ಮಾತನಾಡಿದ ಅವರು, ಮಣ್ಣು ಉಳಿಸಿ ಅಭಿಯಾನ ಐತಿಹಾಸಿಕ ಮಹತ್ವದ್ದಾಗಿದ್ದು, ಜಗತ್ತಿನ ಇತಿಹಾಸದ ಪುಟಗಳಲ್ಲಿ ಈ ಅಭಿಯಾನ ದಾಖಲೆ ಆಗಲಿದೆ. ಈ ಅಭಿಯಾನ ಯಶಸ್ವಿ ಆಗಿದೆ, ಮುಂದೆಯೂ ಯಶಸ್ವಿಯಾಗಲಿದೆ. ಹುಟ್ಟುವ ಮಗುವಿಗೂ ಈ ಅಭಿಯಾನ ಅವಶ್ಯಕತೆ ಇದೆ. ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನಕ್ಕೆ ಸರ್ಕಾರ ಸಹಕಾರ ನೀಡಲಿದೆ ಎಂದರು. ಇದನ್ನೂ ಓದಿ: 52ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ಗಾಂಧಿ – ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದೇಕೆ?

    Live Tv 

  • ಸದ್ಗುರು ಜೊತೆ ಮಂಡಿ ನೋವಿನ ಬಗ್ಗೆ ಹೇಳಿಕೊಂಡ ಸಿಎಂ

    ಸದ್ಗುರು ಜೊತೆ ಮಂಡಿ ನೋವಿನ ಬಗ್ಗೆ ಹೇಳಿಕೊಂಡ ಸಿಎಂ

    ಬರ್ನ್: ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಬಸವರಾಜ ಬೊಮ್ಮಾಯಿ ತೆರಳಿದ್ದಾರೆ. ಈ ವೇಳೆ ಬೊಮ್ಮಾಯಿ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಭೇಟಿ ಮಾಡಿದರು.

    ಹವಾಮಾನ ಬದಲಾವಣೆ ಹಾಗೂ ಪರಿಸರ ಮಾಲಿನ್ಯ ಕುರಿತ ಗೋಷ್ಠಿಗೂ ಮುನ್ನ ಸದ್ಗುರು ಬೊಮ್ಮಾಯಿಯವರನ್ನು ಭೇಟಿ ಮಾಡಿದರು. ಸಿಎಂ ನಡೆದು ಬರುತ್ತಿದ್ದುದನ್ನು ನೋಡಿ ಸದ್ಗುರು ಏನಾಗಿದೆ ಎಂದು ವಿಚಾರಿಸಿದರು. ಈ ವೇಳೆ ಬೊಮ್ಮಾಯಿ ತಮ್ಮ ಮಂಡಿ ನೋವಿನ ಸಮಸ್ಯೆ ಬಗ್ಗೆ ಜಗ್ಗಿ ವಾಸುದೇವ್ ಬಳಿ ಹೇಳಿಕೊಂಡರು. ಇದನ್ನೂ ಓದಿ: ಪರಿಷತ್‌ ಚುನಾವಣೆ – ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಕಾಂಗ್ರೆಸ್-ಬಿಜೆಪಿಯಲ್ಲಿ ಇನ್ನೂ ಅಂತಿಮವಾಗದ ಅಭ್ಯರ್ಥಿಗಳು

    ಶೃಂಗಸಭೆಯಲ್ಲಿ ಸಿಎಂ ಬೊಮ್ಮಾಯಿ ನೀಲಿ ಬಣ್ಣದ ಸೂಟ್ ಧರಿಸಿ ಮಿಂಚಿದ್ದಾರೆ. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕೈಗಾರಿಕಾ ಇಲಾಖೆ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಹಾಗೂ ಸಿಎಂ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಸಿಎಂಗೆ ಸಾತ್ ನೀಡಿದ್ದಾರೆ. ಇದನ್ನೂ ಓದಿ: ಕುವೆಂಪು, ನಾಡಗೀತೆಗೆ ಅವಮಾನ- ರೋಹಿತ್ ಚಕ್ರತೀರ್ಥರ ಮೇಲೆ ಮುಗಿಬಿದ್ದ ಕಾಂಗ್ರೆಸ್

    ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಭಾರತವನ್ನು ಬಸವರಾಜ ಬೊಮ್ಮಾಯಿ ಪ್ರತಿನಿಧಿಸುತ್ತಿದ್ದಾರೆ. ಸಿಎಂ ಜೊತೆ 8 ಜನರ ತಂಡ ದಾವೋಸ್‌ಗೆ ತೆರಳಿದ್ದು, ಸಿಎಂ ಆದ ಬಳಿಕ ಬೊಮ್ಮಾಯಿಯವರಿಗೆ ಇದು ಮೊದಲ ವಿದೇಶ ಪ್ರವಾಸವಾಗಿದೆ.