Tag: Sadananda

  • `ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಸದಾನಂದ ವಿವಾಹ

    `ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಸದಾನಂದ ವಿವಾಹ

    ಕಿರುತೆರೆಯ ಸೂಪರ್ ಹಿಟ್ `ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದ ನಟ ಸದಾನಂದ ಹಸೆಮಣೆ ಏರಿದ್ದಾರೆ. ಇದೀಗನಟ ಸದಾನಂದ ಮದುವೆಯ ಫೋಟೋಗಳ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ಸುಲ್ತಾನ್‌ಪುರ ಗ್ರಾಮದ ಪ್ರತಿಭೆ ಸದಾನಂದ ದುರ್ಗಪ್ಪ ಕಾಳೆ ಅವರು ಖಾಸಗಿ ಚಾನೆಲ್‌ನ್ನ ಕಾಮಿಡಿ ಕಿಲಾಡಿಗಳು ಶೋ ಮೂಲಕ ಗುರುತಿಸಿಕೊಂಡಿದ್ದರು. ತಮ್ಮ ಅಮೋಘ ನಟನೆಯಿಂದ ಗಮನ ಸೆಳೆದಿದ್ದ ನಟ ಸದಾನಂದ ಇಂದು ಸರಳವಾಗಿ ವಿವಾಹವಾಗಿದ್ದಾರೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ನಟ ವಿಜಯ್ ಬಾಬು ಪಾಸ್‌ಪೋರ್ಟ್ ಸೀಜ್

    ಸಾಕಷ್ಟು ಸೀರಿಯಲ್ ಮತ್ತು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸದಾನಂದ ಸರಳವಾಗಿ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ನೆಚ್ಚಿನ ನಟನ ಹೊಸ ಬಾಳಿಗೆ ಸ್ನೇಹಿತರು ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

  • ಸದಾನಂದ ಗೌಡರಿಗೆ ಕೊರೊನಾ ಸೋಂಕು

    ಸದಾನಂದ ಗೌಡರಿಗೆ ಕೊರೊನಾ ಸೋಂಕು

    ಬೆಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರಿಗೆ ಕೋವಿಡ್-19 ಸೋಂಕು ತಗುಲಿದೆ. ಸದಾನಂದ ಗೌಡರು ಟ್ವಿಟ್ಟರ್ ಮೂಲಕ ಸೋಂಕು ತಗುಲಿರುವ ಮಾಹಿತಿಯನ್ನ ಬಹಿರಂಗಪಡಿಸಿದ್ದಾರೆ.

    ಸೋಂಕಿನ ಕೆಲ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಕೋವಿಡ್ 19 ಪರೀಕ್ಷೆಗೆ ಒಳಗಾಗಿದ್ದೆ. ವರದಿಯಲ್ಲಿ ಸೋಂಕು ತಗಲಿರೋದು ಖಚಿತವಾಗಿದ್ದು, ಐಸೋಲೇಷನ್ ನಲ್ಲಿದ್ದೇನೆ. ನನ್ನ ಸಂಪರ್ಕದಲ್ಲಿ ಬಂದವರು ತಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ ಮತ್ತು ಕೊರೊನಾ ನಿಯಮಗಳನ್ನ ಪಾಲಿಸಿ ಎಂದು ಸದಾನಂದ ಗೌಡರು ತಿಳಿಸಿದ್ದಾರೆ.

    3-4 ತಿಂಗಳಿನಲ್ಲಿ ಕೊರೊನಾಗೆ ಭಾರತ ಲಸಿಕೆ ಸಿಗಲಿದೆ. ಲಸಿಕೆ ಲಭ್ಯವಾಗುವ ವಿಚಾರದಲ್ಲಿ ನನಗೆ ಬಹಳ ವಿಶ್ವಾಸವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಕಾರ್ಯಕ್ರಮದ ಒಂದರಲ್ಲಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ವೈಜ್ಞಾನಿಕ ಮಾನದಂಡಗಳ ಅಡಿಯಲ್ಲಿ ಲಸಿಕೆ ವಿತರಣೆ ಮಾಡಲಾಗುವುದು. ಆರೋಗ್ಯ ಕಾರ್ಯಕರ್ತರಿಗೆ ಮತ್ತು ಕೊರೊನಾ ವಾರಿಯರ್ಸ್‍ಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಬಳಿಕ ಹಿರಿಯ ನಾಗರಿಕರಿಗೆ ಲಸಿಕೆಯನ್ನು ಹಾಕಲಾಗುವುದು ಎಂದು ಹೇಳಿದ್ದಾರೆ.