Tag: Sadan

  • ಇಬ್ರಾಹಿಂ ಕಥೆಗೆ ಸದನದಲ್ಲಿ ಗದ್ದಲ – ಸದನದಿಂದ ಹೊರ ನಡೆದ ತೇಜಸ್ವಿನಿ

    ಇಬ್ರಾಹಿಂ ಕಥೆಗೆ ಸದನದಲ್ಲಿ ಗದ್ದಲ – ಸದನದಿಂದ ಹೊರ ನಡೆದ ತೇಜಸ್ವಿನಿ

    ಬೆಂಗಳೂರು: ಸದಾ ಸ್ವಾರಸ್ಯಕರ ಘಟನೆಗಳು, ಕಥೆಗಳ ಮೂಲಕ ಸದನದಲ್ಲಿ ಹಾಸ್ಯ ಚಟಾಕಿ ಹಾರಿಸೋ ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ ಹೇಳಿಕೆ ಇವತ್ತು ಸದನದಲ್ಲಿ ಗದ್ದಲ ಗಲಾಟೆಗೆ ಕಾರಣವಾಯಿತು. ಮಹಿಳೆಯರಿಗೆ ಸಂಬಂಧಿಸಿದ ಪದ ಬಳಕೆಗೆ ಬಿಜೆಪಿ ಸದಸ್ಯರು ಕೆರಳಿ ಕೆಂಡವಾದರು. ಇಬ್ರಾಹಿಂ ಹೇಳಿಕೆ ಖಂಡಿಸಿ ತೇಜಸ್ವಿನಿ ರಮೇಶ್ ಸದನದಿಂದ ಹೊರ ನಡೆದ ಘಟನೆಯೂ ನಡೀತು.

    ಸಂವಿಧಾನದ ಮೇಲೆ ಮಾತನಾಡುತ್ತಿದ್ದ ಇಬ್ರಾಹಿಂ ಎಂದಿನಂತೆ ಹಾಸ್ಯ ಶೈಲಿಯಲ್ಲಿ ಭಾಷಣ ಮಾಡಿದರು. ಈ ವೇಳೆ ಸನ್ನಿವೇಶವೊಂದನ್ನ ಉಲ್ಲೇಖ ಮಾಡಿದರು. ಈಗ ಯಾರು ಎಲ್ಲಿಯೇ ಕೆಲಸ ಕೇಳಲು ಹೋದರೆ ಅನುಭವ ಕೇಳುತ್ತಾರೆ. ಅದಕ್ಕೆ ನಾನು ನಿನ್ನ ಮಗಳನ್ನು ಕೊಡುವಾಗ ಅಳಿಯನ ಅನುಭವ ಕೇಳಿದ್ದೀರಾ ಅಂತ ಕೇಳಿದೆ ಅಂತ ಇಬ್ರಾಹಿಂ ಪದ ಬಳಕೆ ಮಾಡುತ್ತಾರೆ.

    ಇಬ್ರಾಹಿಂ ಪದ ಬಳಕೆಗೆ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಸೇರಿದಂತೆ ಇತರೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮದುವೆಗೆ ಮುನ್ನ ಅನುಭವ ಕೇಳುತ್ತೀರಲ್ಲ ಇದು ಮಹಿಳೆಯರಿಗೆ ಮಾಡುತ್ತಿರುವ ಅಪಮಾನ ಎಂದು ಇಬ್ರಾಹಿಂ ಹೇಳಿಕೆಯನ್ನು ಖಂಡಿಸಿದರು. ಇಬ್ರಾಹಿಂ ಮಾತಿಗೆ ಕೆರಳಿ ಕೆಂಡವಾದ ತೇಜಸ್ವಿನಿ ರಮೇಶ್, ಇಬ್ರಾಹಿಂ ಅವರ ಮಾತಿನಿಂದ ನಮಗೆ ನೋವಾಗಿದೆ. ಹೆಣ್ಣಿನ ಬಗ್ಗೆ ಬೇಕಾದಂತೆ ಮಾತನಾಡೋದಾದ್ರೆ ನಾನು ಹೊರ ಹೋಗುತ್ತೇನೆ. ಇದು ಸಂತೆಯಲ್ಲ. ಮಹಿಳೆಯರಿಗೆ ಅವಮಾನ ಮಾಡುತ್ತೀದ್ದೀರಾ ಎನ್ನುತ್ತಾ ಸದನದಿಂದ ಹೊರ ನಡೆದರು.

    ನಂತರ ಬಿಜೆಪಿ ಸದಸ್ಯರು ಇಬ್ರಾಹಿಂ ವಿರುದ್ಧ ಮುಗಿಬಿದ್ದರು. ನಿಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದಾಗ ಅನುಭವ ಕೇಳಿದ್ರಾ ಎಂದು ಇಬ್ರಾಹಿಂರನ್ನು ಪ್ರಶ್ನಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಕೂಡಲೇ ಸಿಎಂ ಇಬ್ರಾಹಿಂ ಮಾತನ್ನ ಕಡಿತದಿಂದ ತೆಗೆಯಬೇಕು ಎಂದು ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದರು.

    ಈ ವೇಳೆ ಮಧ್ಯಪ್ರವೇಶ ಮಾಡಿದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ಸದನದಲ್ಲಿ ಹೇಗೆ ಮಾತನಾಡಬೇಕು ಅಂತ ನಿಯಮ ಇದೆ. ಅದು ಎಲ್ಲರಿಗೂ ಗೊತ್ತಿದೆ. ಕೆಲವೊಮ್ಮೆ ಮಾತನಾಡುವಾಗ ಹೆಚ್ಚು ಕಡಿಮೆ ಆಗುವುದು ಸಹಜ. ಈಗ ಇಬ್ರಾಹಿಂ ತಪ್ಪಾಗಿ ಹೇಳಿದ್ದನ್ನ ವಾಪಸ್ ಪಡೆಯುವಂತೆ ಸಲಹೆ ನೀಡಿದರು. ಹೊರಟ್ಟಿ ಸಲಹೆಯಂತೆ ಸಿಎಂ ಇಬ್ರಾಹಿಂ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ವಿವಾದಕ್ಕೆ ತಿಲಾಂಜಲಿ ಹಾಡಿದರು. ಬಳಿಕ ತೇಜಸ್ವಿನಿ ರಮೇಶ್ ಸದನಕ್ಕೆ ಹಾಜರಾದರು.

  • ಕುಟುಂಬದಲ್ಲಿ ಅಸಮಾಧಾನ ಸಾಮಾನ್ಯ, ನಾಳೆ ಹಾಜರಾಗುತ್ತೇನೆ: ಶಾಸಕಿ ಸೌಮ್ಯಾ ರೆಡ್ಡಿ

    ಕುಟುಂಬದಲ್ಲಿ ಅಸಮಾಧಾನ ಸಾಮಾನ್ಯ, ನಾಳೆ ಹಾಜರಾಗುತ್ತೇನೆ: ಶಾಸಕಿ ಸೌಮ್ಯಾ ರೆಡ್ಡಿ

    ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಮೊದಲ ದಿನ ಬಜೆಟ್ ಅಧಿವೇಶನಕ್ಕೆ ಗೈರಾಗಿದ್ದೇನೆ ಎಂದು ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

    ಗೈರು ಹಾಜರಿ ಬಗ್ಗೆ ಪಬ್ಲಿಕ್ ಟಿವಿಗೆ ದೂರವಾಣಿ ಮೂಲಕ ಸ್ಪಷ್ಟನೆ ನೀಡಿದ ಸೌಮ್ಯ ರೆಡ್ಡಿ ಅವರು, ಪಕ್ಷದಿಂದ ಸದನಕ್ಕೆ ಹಾಜರು ಆಗವಂತೆ ವಿಪ್ ಜಾರಿ ಮಾಡಿದ್ದಾರೆ. ಆದರೆ ಈ ಬಗ್ಗೆ ನಾನು ಪಕ್ಷದ ಮುಖಂಡರಿಗೆ ಮಾಹಿತಿ ನೀಡಿ ಗೈರಾಗುವ ಬಗ್ಗೆ ಪೂರ್ವಾನುಮತಿ ಪಡೆದಿದ್ದೇನೆ ಎಂದು ತಿಳಿಸಿದರು.

    ಸದನದ ಮೊದಲ ದಿನವಾಗಿದ್ದು, ನನಗೆ ಅನಾರೋಗ್ಯದ ಸಮಸ್ಯೆ ಇದೆ. ಒಂದು ದಿನ ಬರಲಿಲ್ಲ ಎಂದರೆ ಅಸಮಾಧಾನ ಎಂದು ಪರಿಗಣಿಸಬಾರದು, ಆದರೆ ಪಕ್ಷದ ವಲಯದಲ್ಲಿ ಈ ಬಗ್ಗೆ ನಾಯಕರಿಗೆ ಸ್ಪಷ್ಟವಾಗಿ ಮಾಹಿತಿ ನೀಡಿದ್ದೇನೆ. ನಾಳೆ ಸದನಕ್ಕೆ ಆಗಮಿಸುತ್ತೇನೆ ಎಂದರು. ಇದೇ ವೇಳೆ ಅಸಮಾಧಾನದ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಮೊದಲು ಸಚಿವ ಸ್ಥಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ನಿಜ. ಆದರೆ ಒಂದು ಕುಟುಂಬ ಎಂದರೆ ಇದೆಲ್ಲ ಸಾಮಾನ್ಯ. ಸದ್ಯ ಅಂತಹ ಯಾವುದೇ ಅಸಮಾಧಾನ ಇಲ್ಲ, ಎಲ್ಲರೂ ಒಟ್ಟಾಗಿ ನಡೆಯುತ್ತೇವೆ ಎಂದರು.

    ಇತ್ತ ಸದನಕ್ಕೆ ಎರಡು ಗಂಟೆ ತಡವಾಗಿ ಆಗಮಿಸಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದರು. ಪಕ್ಷದ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಸದನಕ್ಕೆ ಬರುವುದು ಸ್ವಲ್ಪ ತಡ ಆಯಿತು ಅಷ್ಟೇ. ಆದರೆ ಬಿಜೆಪಿ ಶಾಸಕರು ಸದನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸಿದ್ದು ಸರಿ ಅಲ್ಲ. ಅವರ ಭಾಷಣ ಮುಗಿದ ಮೇಲೆ ಮಾತನಾಡಲು ವಿಪಕ್ಷಕ್ಕೆ ಅವಕಾಶ ಇರುತ್ತದೆ. ನಾವು ವಿರೋಧ ಪಕ್ಷದಲ್ಲಿ ಇದ್ದ ವೇಳೆ ಇಂತಹ ವರ್ತನೆ ತೋರಿರಲಿಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv