Tag: Sadalwood

  • 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಚಂದನ್ ಶೆಟ್ಟಿ, ನಿವೇದಿತಾ ಗೌಡ

    4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಚಂದನ್ ಶೆಟ್ಟಿ, ನಿವೇದಿತಾ ಗೌಡ

    ಸ್ಯಾಂಡಲ್‌ವುಡ್ ನಟ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ (Niveditha Gowda) ದಾಂಪತ್ಯ ಅಂತ್ಯವಾಗಿದೆ. 2ನೇ ಹೆಚ್ಚುವರಿ ನ್ಯಾಯಾಲಯವು ವಿಚ್ಛೇದನ (Divorce) ಮಂಜೂರು ಮಾಡಿದೆ. ಈ ಮೂಲಕ ಚಂದನ್ ಶೆಟ್ಟಿ ಮತ್ತು ನಿವೇದಿತಾರ 4 ವರ್ಷಗಳ ದಾಂಪತ್ಯಕ್ಕೆ ಬ್ರೇಕ್ ಬಿದ್ದಿದೆ.

    ಗಾಯಕ ಚಂದನ್ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ವಿಚ್ಚೇಧನಕ್ಕೆ ಬೆಂಗಳೂರಿನ ಶಾಂತಿನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಇಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್‌ಗೆ ಮುಂದಾಗಿದ್ದರು. 2ನೇ ಹೆಚ್ಚುವರಿ ನ್ಯಾಯಾಲಯ ವಿಚ್ಛೇದನಕ್ಕೆ ಅನುಮತಿ ನೀಡಿದೆ. ಇದನ್ನೂ ಓದಿ:ಚಿರು ಸರ್ಜಾ 4ನೇ ವರ್ಷದ ಪುಣ್ಯ ಸ್ಮರಣೆ- ಕುಟುಂಬಸ್ಥರಿಂದ ಪೂಜೆ

    ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ಪ್ರೀತಿಸಿ, ಅಲ್ಲಿಂದ ವಾಪಸ್ಸು ಬಂದ ನಂತರ ಅದ್ಧೂರಿಯಾಗಿ ಮದುವೆಯಾಗಿದ್ದರು. ಈ ಇಬ್ಬರೂ ಅನ್ಯೋನ್ಯ ಜೀವನ ನಡೆಸುತ್ತಿದ್ದರು ಎನ್ನುವುದಕ್ಕೆ ಅವರೇ ಮಾಡಿಕೊಂಡಿದ್ದ ಹಲವಾರು ರೀಲ್ಸ್ ಸಾಕ್ಷಿಯಾಗಿದ್ದವು. ಈಗ ಡಿವೋರ್ಸ್ ಮೂಲಕ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದಾರೆ.

  • ಪುನೀತ ನಮನ ಕಾರ್ಯಕ್ರಮ – ಯಾರೆಲ್ಲ ಗಣ್ಯರು ಬರುತ್ತಿದ್ದಾರೆ?

    ಪುನೀತ ನಮನ ಕಾರ್ಯಕ್ರಮ – ಯಾರೆಲ್ಲ ಗಣ್ಯರು ಬರುತ್ತಿದ್ದಾರೆ?

    ಬೆಂಗಳೂರು: ಕನ್ನಡಿಗರ ಕಣ್ಮಣಿ ಪುನೀತ್ ರಾಜ್‍ಕುಮಾರ್ ಅಗಲಿ ಮಂಗಳವಾರಕ್ಕೆ 19ನೇ ದಿನ. ಅಪ್ಪು ನೆನಪಿನಾರ್ಥ ಫಿಲಂ ಚೇಂಬರ್ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ `ಪುನೀತ ನಮನ’ ಹೆಸರಿನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದೆ.

    ಮಧ್ಯಾಹ್ನ 3 ಗಂಟೆಗೆ ನುಡಿನಮನ ಆರಂಭವಾಗಿ ಸಂಜೆ 6 ಗಂಟೆಯ ತನಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪುನೀತ್ ನಡೆದು ಬಂದ ಹಾದಿಯ ಮೆಲುಕು, ನಾಗೇಂದ್ರ ಪ್ರಸಾದ್ ಹಾಡು, ಸ್ಯಾಕ್ಸೋಫೋನ್ ವಾದನ ಇರಲಿದೆ.

    ಕಾರ್ಯಕ್ರಮಕ್ಕೆ 1,500 ಸಾವಿರ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾಜ್‍ ಕುಟುಂಬ, ಮುಖ್ಯಮಂತ್ರಿ ಬೊಮ್ಮಾಯಿ, ಸಚಿವರು, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮೈಸೂರು ಒಡೆಯರ್‌ಗೆ ಆಹ್ವಾನ ನೀಡಲಾಗಿದೆ.

    ಕನ್ನಡದ 150 ಕಲಾವಿದರು, ದಕ್ಷಿಣ ಭಾರತದ ನಾಲ್ಕು ರಾಜ್ಯದ ಖ್ಯಾತ ನಟರು, ಕ್ರೀಡಾ, ಸಾಹಿತ್ಯ ಕ್ಷೇತ್ರದ ಗಣ್ಯರಿಗೆ ಆಹ್ವಾನ ಕೊಡಲಾಗಿದೆ. ಅರಮನೆ ಮೈದಾನದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಅಂದಹಾಗೆ, ಸಾರ್ವಜನಿಕರಿಗೆ ಅವಕಾಶ ಇಲ್ಲದಿದ್ದರೂ ಕೂಡ ಪಾಸ್‍ಗಳಿಗೆ ಭಾರೀ ಮನವಿ ಬಂದಿದೆ. ಹೀಗಾಗಿ ಅಭಿಮಾನಿಗಳಿಗಾಗಿ ಉತ್ತರ ಕರ್ನಾಟಕದಲ್ಲಿ ಒಂದು ಪ್ರತ್ಯೇಕ ಕಾರ್ಯಕ್ರಮ ನಡೆಸ್ತೇವೆ. ಶಿವಣ್ಣ ಕೂಡ ಇರ್ತಾರೆ ಅಂತ ನಾಗೇಂದ್ರ ಪ್ರಸಾದ್ ಹೇಳಿದ್ದಾರೆ. ನಾಳೆ ಸ್ಯಾಂಡಲ್‍ವುಡ್ ಚಿತ್ರೀಕರಣ ಬಂದ್ ಆಗಲಿದೆ. ಇದನ್ನೂ ಓದಿ: ಪುನೀತ್ ದೇವರ ಸ್ವರೂಪದಲ್ಲಿದ್ದರು, ಆದ್ರೆ ನಮಗೆ ತಿಳಿಯಲಿಲ್ಲ: ಸೋನು ಗೌಡ

    ಯಾರಿಗೆಲ್ಲ ಆಹ್ವಾನ?
    ಅಮಿತಾಬ್‍ಬಚ್ಚನ್, ಚಿರಂಜೀವಿ, ಕಮಲ್‍ಹಾಸನ್, ವಿಜಯ್, ವಿಶಾಲ್, ಪ್ರಕಾಶ್ ರಾಜ್, ಜಗಪತಿ ಬಾಬು, ಜ್ಯೂ. ಎನ್‍ಟಿಆರ್, ರಾಮ್ ಚರಣ್, ಅಲ್ಲು ಅರ್ಜುನ್, ಪ್ರಭಾಸ್, ಸುದೀಪ್, ಉಪೇಂದ್ರ, ಗಣೇಶ್, ದುನಿಯಾ ವಿಜಿ, ಗುರುಕಿರಣ್, ಬಿ.ಸರೋಜಾದೇವಿ, ಭಾರತಿ, ಸುಮಲತಾ, ರಕ್ಷಿತಾ, ರಮ್ಯಾ ಅವರಿಗೆ ಆಹ್ವಾನ ನೀಡಲಾಗಿದೆ. ಇದನ್ನೂ ಓದಿ: ಶೂಟಿಂಗ್, ತಿಂಡಿ ಬಿಟ್ಟು ಪುನೀತ್‍ಗೆ ಪ್ರಪಂಚವೇ ಗೊತ್ತಿರಲಿಲ್ಲ – ಅಪ್ಪು ನೆನೆದು ಸಹೋದರಿ ಲಕ್ಷ್ಮೀ ಕಣ್ಣೀರು