Tag: Sad

  • ನನ್ನ ಮಗ ಬರ್ತಾನೆ ಬಾಗಿಲು ತೆಗೀರಿ- ಸುರೇಶ್ ಅಂಗಡಿ ತಾಯಿಯ ಕಣ್ಣೀರು

    ನನ್ನ ಮಗ ಬರ್ತಾನೆ ಬಾಗಿಲು ತೆಗೀರಿ- ಸುರೇಶ್ ಅಂಗಡಿ ತಾಯಿಯ ಕಣ್ಣೀರು

    – ದುಃಖದ ಮಡುವಿನಲ್ಲಿ ಮಕ್ಕಳು, ಕುಟುಂಬಸ್ಥರು

    ಬೆಳಗಾವಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್(65) ಅಂಗಡಿಯವರು ವಿಧಿವಶರಾಗಿದ್ದು, ಕುಟುಂಬಸ್ಥರು ತೀವ್ರ ದುಃಖತಪ್ತರಾಗಿದ್ದಾರೆ. ಅವರ ತಾಯಿ, ಪತ್ನಿ ಹಾಗೂ ಮಗಳು ಕಣ್ಣೀರು ಹಾಕುತ್ತಿದ್ದು, ಸಂಬಂಧಿಕರು ಹಾಗೂ ಸ್ನೇಹಿತರು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ.

    ಬುಧವಾರ ರಾತ್ರಿ ಸುರೇಶ್ ಅಂಗಡಿಯವರು ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಪ್ರಧಾನಿ ಮೋದಿ ಸೇರಿ ದೇಶಾದ್ಯಂತ ಹಲವು ರಾಷ್ಟ್ರೀಯ ಹಾಗೂ ನಾಯಕರು ಕಂಬನಿ ಮಿಡಿದ್ದಾರೆ. ಅವರ ಮನೆಯಲ್ಲಿ ನೀರವ ಮೌನ ಆವರಿಸಿದ್ದು, ಇಡೀ ಕುಟುಂಬ ದುಃಖದಲ್ಲಿ ಮುಳುಗಿದೆ. ಸುರೇಶ್ ಅಂಗಡಿ ತಾಯಿ ಸೋಮವ್ವ ಅಂಗಡಿಯವರು ತೀವ್ರ ದುಃಖತಪ್ತರಾಗಿದ್ದು, ನನ್ನ ಮಗ ಬರ್ತಾನೆ, ಬಾಗಿಲು ತೆಗೀರಿ ಅವನಿಗೆ ಎನೂ ಆಗಿಲ್ಲ ಎಂದು ರೋಧಿಸುತ್ತಿದ್ದಾರೆ. ಸುರೇಶ್ ಅಂಗಡಿ ಅವರ ತಾಯಿಗೆ ವಯಸ್ಸಾದ ಪರಿಣಾಮ ದೆಹಲಿ ತೆರಳಿಲ್ಲ. ಬೆಳಗಾವಿಯ ಮನೆಯಲ್ಲೇ ಇದ್ದು, ದುಃಖದ ಮಡುವಿನಲ್ಲಿದ್ದಾರೆ.

    ತಂದೆಯನ್ನು ಕಳೆದುಕೊಂಡು ಅವರ ತಾಯಿ, ಪತ್ನಿ, ಇಬ್ಬರು ಮಕ್ಕಳು ಹಾಗೂ ಮೊಮ್ಮಕ್ಕಳು ನೋವಿನಲ್ಲಿದ್ದಾರೆ. ಹಲವು ಸಂಬಂಧಿಕರು ಹಾಗೂ ಸ್ನೇಹಿತರು ಸಹ ಅವರ ಮೆನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ದಾಸ್ತಿಕೊಪ್ಪ, ಇಟಗಿ ಗ್ರಾಮದಿಂದ ಚಿಕ್ಕಮ್ಮಂದಿರು ಸೇರಿದಂತೆ ಅವರ ಸಂಬಂಧಿಕರು ಆಗಮಿಸಿದ್ದು, ಸಂಭದಿಕರ ಆಕ್ರಂದನ ಮುಗಿಲು ಮುಟ್ಟಿದೆ. ಅವರ ಸಹೋದರಿ ಸಹ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಹ ಸುರೇಶ್ ಅಂಗಡಿ ನಿವಾಸದ ಬಳಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುತ್ತಿದ್ದಾರೆ.

    ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ. ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಯಲಿದ್ದು, ದೆಹಲಿಯ ದ್ವಾರಕಾ ಸೆಕ್ಟರ್-24 ರಲ್ಲಿ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ. ತವರು ಕ್ಷೇತ್ರ ಬೆಳಗಾವಿಗೆ ಪಾರ್ಥಿವ ಶರೀರ ಕೊಂಡ್ಯೋಯಲು ಅನುಮತಿ ನೀಡದ ಹಿನ್ನೆಲೆ ದೆಹಲಿಯಲ್ಲೇ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ವಿಧಿವಶರಾದ ನಂತರ ಮತ್ತೊಂದು ಬಾರಿ ಕೊರೊನಾ ಪಾಸಿಟವ್ ಬಂದ ಹಿನ್ನಲೆಯಲ್ಲಿ ಪಾರ್ಥಿವ ಶರೀರ ಕೊಂಡೊಯ್ಯುವುದು ಬೇಡವೆಂದು ನಿರ್ಧರಿಸಲಾಗಿದೆ. ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವರು ಏಮ್ಸ್ ಆಸ್ಪತ್ರೆಯಲ್ಲೇ ಅಂತಿಮ ದರ್ಶನ ಮಾಡಿದ್ದಾರೆ.

    ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸುರೇಶ ಅಂಗಡಿ ಹಿರಿಯ ಪುತ್ರಿ ಡಾಕ್ಟರ್ ಶೃತಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಹಿನ್ನಲೆಯಲ್ಲಿ ಸಂಜೆಗೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ ಮುಂಬೈ ಮೂಲಕ ದೆಹಲಿಗೆ ತೆರಳಿದ್ದಾರೆ. ಬೆಳಗಾವಿ ಮೂಲಕ ಮುಂಬೈ ನಂತರ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಪುತ್ರಿ, ಮೊಮ್ಮಗಳು ಹಾಗೂ ಅಂತ್ಯಕ್ರಿಯೆ ವಿಧಿವಿಧಾನ ನೇರವೇರಿಸವ ಸ್ವಾಮೀಜಿ ಬಾಳಯ್ಯ ದೆಹಲಿಗೆ ತೆರಳಿದ್ದಾರೆ.

  • ಜಾತಿವಾರು, ಪ್ರಾಂತ್ಯಾವಾರು ವಿಚಾರದಲ್ಲಿ ಜಿಲ್ಲೆ ಲೆಕ್ಕಕ್ಕೆ ಇಲ್ಲದಂತಾಗಿದೆ: ಬಿ.ಸಿ ಪಾಟೀಲ್ ಬೇಸರ

    ಜಾತಿವಾರು, ಪ್ರಾಂತ್ಯಾವಾರು ವಿಚಾರದಲ್ಲಿ ಜಿಲ್ಲೆ ಲೆಕ್ಕಕ್ಕೆ ಇಲ್ಲದಂತಾಗಿದೆ: ಬಿ.ಸಿ ಪಾಟೀಲ್ ಬೇಸರ

    ಹಾವೇರಿ: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬಹಳ ನೋವು, ಬೇಸರ ಆಗಿದೆ. ಜಾತಿವಾರು, ಪ್ರಾಂತ್ಯಾವಾರು ವಿಚಾರದಲ್ಲಿ ಹಾವೇರಿ ಜಿಲ್ಲೆ ಲೆಕ್ಕಕ್ಕೆ ಇಲ್ಲದಂತಾಗಿದೆ ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಾನು ಏಕೈಕ ಕಾಂಗ್ರೆಸ್ ಶಾಸಕನಾಗಿದ್ದೇನೆ. ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಯಲ್ಲಿ ನಾನೊಬ್ಬನೆ ಲಿಂಗಾಯತ ಶಾಸಕ. ಈ ಬಾರಿ ಸಚಿವ ಸ್ಥಾನ ಸಿಗೋ ಭರವಸೆ ಇತ್ತು. ಪ್ರಥಮ ಬಾರಿ ಸಾದರ ಲಿಂಗಾಯತರನ್ನು ಹೊರಗಿಟ್ಟು ಸಚಿವ ಸಂಪುಟ ಆಗಿರೋದು. ಹಾವೇರಿ ಜಿಲ್ಲೆಗೆ ಹೇಳೋರು ಕೇಳೋರು ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಪ್ಪನಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಬಿ.ಸಿ ಪಾಟೀಲ್ ಮಗಳು ಗರಂ..!

    ಬಹುತೇಕ ಎಲ್ಲ ಸರ್ಕಾರಗಳು ಇದ್ದಾಗ ಸಾದರ ಲಿಂಗಾಯತರಿಗೆ ಸ್ಥಾನ ಸಿಕ್ಕಿತ್ತು. ಕಾಂಗ್ರೆಸ್ ವಿರೋಧಿ ಅಲೆ ಇದ್ದಾಗಲೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ನಾನು ಸಿದ್ದರಾಮಯ್ಯರನ್ನ ನಂಬಿದ್ದೆ. ಇಷ್ಟು ವರ್ಷಗಳ ಕಾಲ ಸಿದ್ದರಾಮಯ್ಯನವರ ಜೊತೆಗಿದ್ದೆ. ಅವರೇ ನಮ್ಮ ಗಾಡ್ ಫಾದರ್. ನಾನು ಅವರನ್ನೇ ನಂಬಿದ್ದೆ, ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ರೆ ನನಗೆ ಮಂತ್ರಿ ಸ್ಥಾನ ಸಿಗುತ್ತಿತ್ತು. ಹಾವೇರಿ ಜಿಲ್ಲೆ ಏನು ತಪ್ಪು ಮಾಡಿದೆ. ಜಿಲ್ಲೆಯ ಜನರು ಯಾವ ರೀತಿ ಪಕ್ಷವನ್ನು ನಂಬಬೇಕು ಅಂತ ಗೊತ್ತಾಗ್ತಿಲ್ಲ. ಸಚಿವ ಸ್ಥಾನ ಸಿಕ್ಕಿಲ್ಲ ಎಂದಾಗ ಯಾರೂ ನನ್ನ ಪರವಾಗಿಲ್ಲ ಎಂದು ನೊಂದುಕೊಂಡಿದ್ದಾರೆ.

    ಮುಂದಿನ ನಡೆ ಏನು ಅಂತ ಕಾದು ನೋಡಿ, ದಿಢೀರ್ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ನಾನು ಎಲ್ಲೂ ಹೋಗಲ್ಲ, ಲೋಕಸಭಾ ಚುನಾವಣೆಯ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತದೆ. ನಾನು ಪಕ್ಷದ ಪರ ನಿಲ್ಲಲೇಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

    ಇದಕ್ಕೂ ಮೊದಲು ಪುತ್ರಿ ಸೃಷ್ಠಿ ಪಾಟೀಲ್ ಅವರು ತಂದೆಗೆ ಸಚಿವ ಸ್ಥಾಸ ಸಿಗಲಿಲ್ಲ ಅಂತ ಹೈಕಮಾಂಡ್ ವಿರುದ್ಧ ಕಿಡಿಕಾರಿ ಅಸಮಾಧಾನ ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುರುಕ್ಷೇತ್ರ ಶೂಟಿಂಗ್‍ ನಿಂದ ಬಂದ ಮೇಲೆ ಬೇಸರದಲ್ಲಿದ್ದಾರೆ ದರ್ಶನ್!

    ಕುರುಕ್ಷೇತ್ರ ಶೂಟಿಂಗ್‍ ನಿಂದ ಬಂದ ಮೇಲೆ ಬೇಸರದಲ್ಲಿದ್ದಾರೆ ದರ್ಶನ್!

    ಬೆಂಗಳೂರು: ಕೋಟಿ ಹೃದಯಗಳನ್ನು ಗೆದ್ದ ಸ್ಯಾಂಡಲ್‍ವುಡ್ ಸಾರಥಿ ಈಗ ಬೇಸರದಲ್ಲಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ದೂರದ ಹೈದರಾಬಾದ್‍ನ ರಾಮೋಜಿರಾವ್ ಸ್ಟುಡಿಯೋದಲ್ಲಿ ಬೀಡು ಬಿಟ್ಟಿದ್ದ ದರ್ಶನ್ ಈಗ ತಾಯಿನಾಡಿಗೆ ವಾಪಸ್ ಬಂದಿದ್ದಾರೆ. ಸದ್ಯ ಮೈಸೂರಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ದರ್ಶನ್ ರಾಮೋಜಿ ಫಿಲಂ ಸಿಟಿಯಂತ ಶೂಟಿಂಗ್ ತಾಣ ಕರ್ನಾಟಕದಲ್ಲಿ ನಿರ್ಮಾಣವಾಗದ್ದಕ್ಕೆ ಬೇಸರಗೊಂಡಿದ್ದಾರೆ.

    ರಾಮೋಜಿ ರಾವ್ ಅಂತ ಸುಸರ್ಜಿತ ಶೂಟಿಂಗ್ ಸ್ಪಾಟ್ ಕರ್ನಾಟಕದಲ್ಲಿ ಇಲ್ಲವಲ್ಲ. ಅನಿವಾರ್ಯವಾಗಿ ಇಲ್ಲಿಗೆ ಬಂದು ಶೂಟಿಂಗ್ ಮಾಡಬೇಕಾಯ್ತು ಎಂದು ದರ್ಶನ್ ತನ್ನ ಆಪ್ತರ ಜೊತೆ ಹೇಳಿಕೊಂಡಿದ್ದಾರೆ. ನಮ್ಮಲಿರೋದು ಕೆಲವೇ ಕೆಲವು ಸ್ಟುಡಿಯೋಗಳು. ಅಲ್ಲಿ ದೊಡ್ಡ ದೊಡ್ಡ ಸೆಟ್ ಹಾಕೋದು ಕಷ್ಟ. ಪೌರಾಣಿಕ ಸಿನಿಮಾಗಳು ಮಾಡೋದು ಇನ್ನೂ ಕಷ್ಟ ಎಂದು ದರ್ಶನ್ ಹೇಳಿದ್ದಾರೆ.

    ಸಿನಿಮಾ ಕೆಲಸಗಳಿಗೆ ಎಂದು ಕೊಟ್ಟಿದ್ದ ಹೆಸರಘಟ್ಟದ 240 ಎಕರೆ ಜಾಗ ಸದುಪಯೋಗ ಆಗದೆ ಇರೋದರ ಬಗ್ಗೆ ದರ್ಶನ್‍ಗೆ ಬೇಸರವಾಗಿದೆ. 2005ರಲ್ಲಿ ಕೊಟ್ಟಿದ್ದ ಈ ಜಾಗ ನಾನಾ ಕಾರಣಗಳಿಂದ ಕನ್ನಡ ಚಿತ್ರರಂಗದ ಕೈ ತಪ್ಪಿತು. ಈಗ ಮೈಸೂರಿನಲ್ಲಿ 100 ಎಕರೆ ಜಾಗದಲ್ಲಿ ಚಿತ್ರನಗರಿ ಶುರುವಾಗಲಿದೆ. ಆದರೆ ಯಾವಾಗ ಕನ್ನಡದ ಚಿತ್ರನಗರಿ ಕೆಲಸ ಆಗುತ್ತೆ ಎನ್ನೋದಕ್ಕೆ ಕಾಲವೇ ಉತ್ತರಿಸಬೇಕು.

    ನಮ್ಮಲ್ಲಿ ಅನುಕೂಲಗಳು ಇದ್ದರೂ ಬೇರೆ ಊರಿನಲ್ಲಿ ಕನ್ನಡ ಸಿನಿಮಾ ನಿರ್ಮಿಸುತ್ತಿದ್ದೇವೆ. ರಾಜ್ಯದಲ್ಲಿ ಕನ್ನಡ ಸಿನಿಮಾ ಕೋಟಿ ರೂ. ವ್ಯವಹಾರ ನಡೆಸುತ್ತಿದ್ದರೂ ಒಂದು ಅತ್ಯುತ್ತಮ ಸ್ಟುಡಿಯೋ ನಿರ್ಮಾಣವಾಗದ ವಿಚಾರ ದರ್ಶನ್ ಅವರನ್ನು ಕಾಡುತ್ತಿದೆ.