Tag: Sacramento

  • ಶ್ವಾನ ಹುಡುಕಿಕೊಟ್ಟವರಿಗೆ 3 ಕೋಟಿ ಘೋಷಿಸಿದ ಗಾಯಕಿ

    ಶ್ವಾನ ಹುಡುಕಿಕೊಟ್ಟವರಿಗೆ 3 ಕೋಟಿ ಘೋಷಿಸಿದ ಗಾಯಕಿ

    – ವಾಕ್ ತೆರಳಿದ್ದ ವೇಳೆ ಶ್ವಾನಗಳ ಕಳ್ಳತನ

    ಸ್ಯಾಕ್ರಮೆಂಟೊ: ಹಾಲಿವುಡ್ ಸಿಂಗರ್ ಲೇಡಿ ಗಾಗಾರವರ ಮುದ್ದಾದ ಎರಡು ಶ್ವಾನಗಳು ಕಳುವಾಗಿದ್ದು ಅವುಗಳನ್ನು ಹುಡುಕಿ ಸುರಕ್ಷಿತವಾಗಿ ಹಿಂದಿರುಗಿಸುವವರಿಗೆ ಅರ್ಧ ಮಿಲಿಯನ್ ಡಾಲರ್(3,67,98,200.00)ರೂ ನೀಡಿವುದಾಗಿ ಘೋಷಿಸಿದ್ದಾರೆ. ಅಲ್ಲದೆ ಪಿಸ್ತೂಲಿನಿಂದ ಬೆದರಿಸಿ ಶ್ವಾನಗಳನ್ನು ಕದ್ದಿರುವ ವಿಚಾರ ಆಘಾತವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.

    ಸಿಂಗರ್ ಲೇಡಿ ಗಾಗಾರವರ ಉದ್ಯೋಗಿಯೊಬ್ಬರು, ಫ್ರೆಂಚ್ ಬುಲ್ಡಾಗ್ಸ್ ಕೊಜಿ ಮತ್ತು ಗುಸ್ತಾನ್ ಎಂಬ ಶ್ವಾನವನ್ನು ಲಾಸ್ ಏಂಜಲೀಸ್ ಬಳಿ ವಾಕಿಂಗ್ ಕರೆದುಕೊಂಡು ಹೋಗಿದ್ದ ವೇಳೆ ವ್ಯಕ್ತಿಯೋರ್ವ ಉದ್ಯೋಗಿ ಮೇಲೆ ಗುಂಡು ಹಾರಿಸಿ ಬುಧವಾರ ರಾತ್ರಿ ಶ್ವಾನವನ್ನು ಕದ್ದು ವಾಹನದಲ್ಲಿ ಪರಾರಿಯಾಗಿದ್ದಾನೆ.

    ಈ ಕುರಿತಂತೆ ಲೇಡಿ ಗಾಗಾ, ಈ ಘಟನೆಯಿಂದ ನನ್ನ ಮನಸ್ಸಿಗೆ ಆಘಾತವಾಗಿದೆ. ದೇವರ ದಯೆಯಿಂದ ನನ್ನ ಕುಟುಂಬವು ಮೊದಲಿನಂತೆ ಪೂರ್ಣವಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಶ್ವಾನಗಳನ್ನು ಸುರಕ್ಷಿತವಾಗಿ ಹಿಂದಿರುಗಿಸಿದವರಿಗೆ ಅರ್ಧ ಮಿಲಿಯನ್ ಡಾಲರ್(3,67,98,200.00)ರೂ. ಗಳನ್ನು ನೀಡುತ್ತೇನೆ ಎಂದು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಅಲ್ಲದೆ ಶ್ವಾನವನ್ನು ಯಾರಾದರೂ ತಿಳಿಯದೇ ಖರೀದಿಸಿದರೆ ಅಥವಾ ಅವುಗಳ ಬಗ್ಗೆ ಮಾಹಿತಿ ದೊರೆತರೆ “Email KojiandGustav@gmail.com ಗೆ ಮೇಲ್ ಮಾಡುವ ಮೂಲಕ ನನ್ನನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾರೆ.

     

    View this post on Instagram

     

    A post shared by Lady Gaga (@ladygaga)

    ಸದ್ಯ ಘಟನೆ ವೇಳೆ ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಉದ್ಯೋಗಿ ರಿಯಾನ್ ಫಿಷರ್‍ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನನ್ನ ಕುಟುಂಬಕ್ಕಾಗಿ ಪ್ರಾಣವನ್ನೇ ಪಣಕಿಟ್ಟ ನಿಮ್ಮನ್ನು ನಾನು ಪ್ರೀತಿಸುತ್ತನೆ. ನೀವು ಎಂದಿಗೂ ಹೀರೋ ಎಂದು ಉದ್ಯೋಗಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಘಟನೆ ವೇಳೆ ಜೊತೆ ಇದ್ದ ಮತ್ತೊಂದು ಮಿಸ್ ಏಷ್ಯಾ ಶ್ವಾನ ತಪ್ಪಿಸಿಕೊಂಡಿದ್ದು, ಈ ಕುರಿತಂತೆ ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ ದರೋಡೆ-ಅಪರಾಧ ವಿಭಾಗ ತನಿಖೆ ನಡೆಸುತ್ತಿದ್ದಾರೆ.

    ಫ್ರೆಂಚ್ ಬುಲ್ಡಾಗ್ಸ್ ಶ್ವಾನ ಬಹಳ ದುಬಾರಿ ಹಾಗೂ ಅಪರೂಪದ ತಳಿ ಶ್ವಾನವಾದರಿದ್ದ ಸಾವಿರಾರು ಡಾಲರ್ ಗೆ ಮಾರಾಟವಾಗುತ್ತದೆ. ಈ ಉದ್ದೇಶದಿಂದ ದುಷ್ಕರ್ಮಿಗಳು ಶ್ವಾನವನ್ನು ಕದ್ದಿದ್ದಾರೆ ಎಂದು ಶಂಕಿಸಲಾಗುತ್ತಿದೆ.

  • ಪ್ಯಾಸೆಂಜರ್ ಜೊತೆ ಉಬರ್ ಚಾಲಕ ಸೆಕ್ಸ್- ತಕ್ಷಣ ಪೊಲೀಸ್ ಠಾಣೆಗೆ ಹೋದ

    ಪ್ಯಾಸೆಂಜರ್ ಜೊತೆ ಉಬರ್ ಚಾಲಕ ಸೆಕ್ಸ್- ತಕ್ಷಣ ಪೊಲೀಸ್ ಠಾಣೆಗೆ ಹೋದ

    – ಚಾಲಕ ಸೆಕ್ಸ್ ಮಾಡ್ತಿದ್ದಾಗ ಮಹಿಳೆಗೆ ಎಚ್ಚರ

    ಸ್ಯಾಕ್ರಮೆಂಟೋ: ನಶೆಯಲ್ಲಿದ್ದ ಮಹಿಳಾ ಪ್ಯಾಸೆಂಜರ್ ಮೇಲೆ ಉಬರ್ ಚಾಲಕ ಅತ್ಯಾಚಾರ ಎಸಗಿರುವ ಘಟನೆ ಕ್ಯಾಲಿಫೋರ್ನಿಯಾದ ಫೊಂಟಾನಾದಲ್ಲಿ ನಡೆದಿದೆ.

    ಪೊಲೀಸರು ಉಬರ್ ಚಾಲಕ ಅಲೋನ್ಸೊ ಕ್ಯಾಲೆಯನ್ನು ಬಂಧಿಸಿದ್ದಾರೆ. ಸಂತ್ರಸ್ತೆ ಪಾರ್ಟಿ ಮುಗಿಸಿ ಉಬರ್ ಕಾರ್ ಹತ್ತಿದ್ದಾಳೆ. ಆದರೆ ನಶೆಯಲ್ಲಿದ್ದ ಮಹಿಳೆ ಕಾರಿನಲ್ಲಿಯೇ ಮಲಗಿಕೊಂಡಿದ್ದಳು. ನನಗೆ ಎಚ್ಚರವಾದಾಗ ಮೆಕ್‍ ಡರ್ಮೊಟ್ ಪಾರ್ಕ್ ಬಳಿ ಉಬರ್ ಚಾಲಕ ನನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದನು ಎಂದು ಆರೋಪಿಸಿದ್ದಾಳೆ.

    ಆದರೆ ಚಾಲಕ ಮಹಿಳೆ ಜೊತೆ ಸೆಕ್ಸ್ ಮಾಡಿದ ತಕ್ಷಣ ಫಾಂಟಾನಾ ಪೊಲೀಸ್ ಠಾಣೆಗೆ ಹೋಗಿದ್ದು, ಮಹಿಳೆಯ ಒಪ್ಪಿಗೆ ಮೇರೆಗೆ ನಾನು ಆಕೆಯೊಂದಿಗೆ ಸೆಕ್ಸ್ ಮಾಡಿದ್ದೇನೆ. ಆದರೆ ಮಹಿಳೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಹೇಳಬಹುದು ಎಂದು ಮಹಿಳೆ ದೂರು ಕೊಡುವ ಮೊದಲೇ ಪೊಲೀಸರಿಗೆ ತಿಳಿಸಿದ್ದಾನೆ.

    ಮಹಿಳೆ ಮದ್ಯದ ನಶೆಯಲ್ಲಿದ್ದಳು ಎಂದು ನನಗೆ ತಿಳಿದಿತ್ತು. ಆದರೆ ಆಕೆಯ ಒಮ್ಮತದ ಮೇರೆಗೆ ನಾನು ಆಕೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೆ ಎಂದು ಪೊಲೀಸ್ ಅಧಿಕಾರಿಯ ಬಳಿ ಹೇಳಿದ್ದಾನೆ.

    ಸದ್ಯಕ್ಕೆ ಪೊಲೀಸರು ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಚಾಲಕ ಕ್ಯಾಲೆಯನ್ನು ಬಂಧಿಸಿ, ಕೋರ್ಟಿಗೆ ಹಾಜರುಪಡಿಸಿದ್ದಾರೆ.