Tag: sachin tendulkar

  • ಸೂಪರ್ ಫೀಲ್ಡಿಂಗ್, ಕೀಪಿಂಗ್ – ನಾಯಿಗೆ ಹೆಸರು ಕೊಡಿ ಎಂದ ಸಚಿನ್

    ಸೂಪರ್ ಫೀಲ್ಡಿಂಗ್, ಕೀಪಿಂಗ್ – ನಾಯಿಗೆ ಹೆಸರು ಕೊಡಿ ಎಂದ ಸಚಿನ್

    ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ನಾಯಿಯೊಂದರ ಕ್ಯೂಟ್ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಸಾಮಾನ್ಯವಾಗಿ ನಾಯಿ ನಿಯತ್ತಿನ ಪ್ರಾಣಿ ಎಂದು ಕರೆಯುತ್ತಾರೆ. ಸಾಕಷ್ಟು ಕ್ಯೂಟ್ ಪ್ರಾಣಿಗಳಲ್ಲಿ ಶ್ವಾನ ಕೂಡ ಒಂದಾಗಿದೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ನಾಯಿಯ ಕ್ಯೂಟ್ ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಸದ್ಯ ನಾಯಿಯೊಂದು ವಿಕೆಟ್ ಕೀಪರ್ ಆಗಿ, ಫೀಲ್ಡಿಂಗ್ ಮಾಡುತ್ತಾ ಆಟ ಆಡುತ್ತಿರುವ ವೀಡಿಯೋವೊಂದನ್ನು ಸಚಿನ್ ತೆಂಡೂಲ್ಕರ್ ಅವರು ತಮ್ಮ ಟ್ವಿಟ್ಟರ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ನೋಡಿದ ಪ್ರತಿಯೊಬ್ಬರ ಮೊಗದಲ್ಲಿ ಮಂದಹಾಸ ತರಿಸುತ್ತದೆ.

    sachin

    ರಸ್ತೆಯೊಂದರಲ್ಲಿ ಕೋಲುಗಳನ್ನೇ ಸ್ಟಂಪ್‍ಗಳನ್ನಾಗಿ ಮಾಡಿಕೊಂಡು ಮಕ್ಕಳು ಕ್ರಿಕೆಟ್ ಆಟ ಆಡುತ್ತಿರುತ್ತಾರೆ. ಈ ವೇಳೆ ಬಾಲಕಿಯೊಬ್ಬಳು ಬ್ಯಾಟ್ ಹಿಡಿದುಕೊಂಡು ಬಾಲ್ ಅನ್ನು ಹೊಡೆದರೆ, ಮಧ್ಯದಲ್ಲಿ ನಾಯಿ ಓಡಾಡುತ್ತಾ ಬಾಲ್ ಅನ್ನು ಹಿಡಿದು ಅದನ್ನು ಬಾಲರ್ ಕೈಗೆ ನೀಡುತ್ತದೆ. ಜೊತೆಗೆ ನಾಯಿ ವಿಕೆಟ್ ಕೀಪರ್ ಆಗಿ ಕೂಡ ಆಟ ಆಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ನಾಯಿ ಮೂತ್ರ, ವಿರ್ಸಜನೆ ಮಾಡಿದ್ದಕ್ಕೆ ವೃದ್ಧನಿಗೆ ಕಲ್ಲಿನಿಂದ ಹೊಡ್ದ

    ಈ ವೀಡಿಯೋವನ್ನು ಶೇರ್ ಮಾಡಿಕೊಂಡಿರುವ ಸಚಿನ್ ಅವರು, ಕೆಲವರು ಶಾರ್ಪ್ ಬಾಲ್ ಅನ್ನು ಕ್ಯಾಚ್ ಹಿಡಿಯುವ ಕೌಶಲ್ಯವನ್ನು ಹೊಂದಿರುತ್ತಾರೆ. ನಾವು ಕ್ರಿಕೆಟ್‍ನಲ್ಲಿ ವಿಕೆಟ್ ಕೀಪರ್‍ಗಳು, ಫೀಲ್ಡರ್‍ಗಳು ಮತ್ತು ಆಲ್‌ರೌಂಡರ್‌ಗಳನ್ನು  ನೋಡಿರುತ್ತೇವೆ. ಆದರೆ ಇದಕ್ಕೆ ನೀವು ಏನೆಂದು ಹೆಸರಿಡುತ್ತೀರಾ? ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ 243 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರು ಜೀನಿಯಸ್, ಅತ್ಯುತ್ತಮ ಆಲ್ ರೌಂಡರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಟನ್ ಚೀಲ ಹೊತ್ತೊಯ್ದ ಬೀದಿ ನಾಯಿ ಹೊಡೆದು ಕೊಂದ

  • ಮಧ್ಯಪ್ರದೇಶ ಸಿಎಂ ಭೇಟಿಯಾದ ಸಚಿನ್

    ಮಧ್ಯಪ್ರದೇಶ ಸಿಎಂ ಭೇಟಿಯಾದ ಸಚಿನ್

    ಭೋಪಾಲ್: ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಮಂಗಳವಾರ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾದರು.

    ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ಸಚಿನ್ ತೆಂಡೂಲ್ಕರ್ ಅವರ ಸಂಸ್ಥೆಯ ಸಮಾಜಸೇವೆಗಳ ಬಗ್ಗೆ ಚರ್ಚಿಸಲು ಈ ಭೇಟಿ ನಡೆಯಿತು. ಇದನ್ನೂ ಓದಿ: ಯುವರತ್ನನಿಗೆ ಪದ್ಮಶ್ರೀ ನೀಡಲು ಶಿಫಾರಸ್ಸಿಗೆ ತೀರ್ಮಾನ’

    ಈ ಕುರಿತು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರೋ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶವು ಕ್ರಿಕೆಟ್ ದೇವರು ಸಚಿನ್ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತದೆ. ಮಾಸ್ಟರ್ ಬ್ಲಾಸ್ಟರ್ ಅವರ ಜೊತೆ ಇಂದು ನಮ್ಮ ಮನೆಯಲ್ಲಿ ಅದ್ಭುತವಾದ ಸಭೆ ನಡೆಯಿತು. ನೀವು ನಮ್ಮವರಾಗಿಯೇ ನಮ್ಮ ಜೊತೆ ಇರುವುದಕ್ಕೆ ಖುಷಿಯಾಗುತ್ತಿದೆ. ನಿಮ್ಮ ಮುಂದಿನ ಎಲ್ಲ ಯೋಜನೆಗಳಿಗೂ ನಮ್ಮ ಕಡೆಯಿಂದ ಶುಭಹಾರೈಕೆ ಎಂದು ಟ್ವೀಟ್ ಮಾಡಿದ್ದಾರೆ.

    ಭೇಟಿ ಬಳಿಕ ಸಚಿನ್ ತೆಂಡೂಲ್ಕರ್ ಕೂಡ ಟ್ವೀಟ್ ಮಾಡಿದ್ದು, ಮೈದಾನದೊಳಗೆ ಹಾಗೂ ಹೊರಗೆ ಟೀಂ ಇಂಡಿಯಾಗೆ ಆಡುವುದು ಖುಷಿಯ ವಿಚಾರ. ಸೇವಾ ಕುಟೀರಕ್ಕೆ ಭೇಟಿ ಹಾಗೂ ಪರಿವಾರ ಸಂಸ್ಥೆ ಜೊತೆ ಸೇರಿ ನಿರ್ಮಿಸುತ್ತಿರುವ ವಸತಿ ಶಾಲೆಯ ಕಾಮಗಾರಿ ವೀಕ್ಷಣೆ ತೃಪ್ತಿ ತಂದಿದೆ. ನಮ್ಮ ಮಕ್ಕಳು ಈ ಜಗತ್ತನ್ನು ಉತ್ತಮಗೊಳಿಸಬೇಕು ಹಾಗೂ ಬೆಳಗಬೇಕು. ಎಲ್ಲರಿಗೂ ಸಮಾನ ಅವಕಾಶ ಸಿಗುವಂತೆ ನಾವು ನೋಡಿಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಕುರಿಗಳು – ಕುರಿಗಾಹಿಗಳ ಕಣ್ಣೀರು

    ಕೋವಿಡ್ ಸಂಖ್ಯೆ ಇಳಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಚಿನ್ ಮಧ್ಯಪ್ರದೇಶದ ಸೇವಾನಿಯಾ ಎಂಬ ಹಳ್ಳಿಯಲ್ಲಿ ಮಕ್ಕಳನ್ನು ಭೇಟಿಯಾದರು. ಸೇವಾ ಕುಟೀರ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ಯೋಜನೆ ಅಡಿ ಮಕ್ಕಳಿಗೆ ಪೌಷ್ಠಿಕ ಆಹಾರ, ಪೂರಕ ಶಿಕ್ಷಣ ಹಾಗೂ ಕ್ರೀಡೆಗಳಲ್ಲಿ ಭಾಗಿಯಾಗಲು ಅವಕಾಶ ಸಿಗುತ್ತದೆ. ಸಚಿನ್ ತೆಂಡೂಲ್ಕರ್ ಅವರ ಪರಿವಾರ ಸಂಘಟನೆ ಬುಡಕಟ್ಟು ಮಕ್ಕಳಿಗಾಗಿ ಈ ಸೇವಾ ಕುಟೀರಗಳನ್ನು ನಡೆಸುತ್ತಿದೆ.

  • ಪಂಡೋರಾ ಪೇಪರ್ ರಹಸ್ಯ- ಸಚಿನ್ ತೆಂಡೂಲ್ಕರ್ ಹೆಸರು ಉಲ್ಲೇಖ

    ಪಂಡೋರಾ ಪೇಪರ್ ರಹಸ್ಯ- ಸಚಿನ್ ತೆಂಡೂಲ್ಕರ್ ಹೆಸರು ಉಲ್ಲೇಖ

    ಮುಂಬೈ: ವಿಶ್ವದ ಪ್ರಸಿದ್ಧ ವ್ಯಕ್ತಿಗಳು ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಇದೀಗ ಪಂಡೋರಾ ಪೇಪರ್ ಎಂಬ ರಹಸ್ಯ ಹಣಕಾಸು ಮಾಹಿತಿ ಬಿಡುಗಡೆಯಾಗಿದೆ. ಈ ಮಾಹಿತಿಯಲ್ಲಿ ಕ್ರಿಕೆಟ್ ದೇವರು ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರ ಹೆಸರು ಕೇಳಿಬಂದಿದೆ.

    2016ರಲ್ಲಿ ಸಂಚಲನ ಮೂಡಿಸಿದ್ದ ಪನಾಮಾ ಪೇಪರ್ಸ್ ಬಳಿಕ ಇದೀಗ ಪಂಡೋರಾ ಪೇಪರ್ಸ್ ಬಿಡುಗಡೆಗೊಂಡಿದೆ. ಇದರಲ್ಲಿ ವಿಶ್ವದ ಹಲವಾರು ಪ್ರಸಿದ್ಧ ವ್ಯಕ್ತಿಗಳ ಹೆಸರು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಊಟ ಕೊಡಿಸ್ತೀನೆಂದು ಕರೆದೊಯ್ದು 500 ರೂ.ಗೆ ಪತ್ನಿಯನ್ನೇ ಮಾರಿಬಿಟ್ಟ!

    ಪಂಡೋರಾ ಪೇಪರ್ ಎಂದರೇನು?
    ವಿಶ್ವದ ಶ್ರೀಮಂತ ವ್ಯಕ್ತಿಗಳು ದೇಶ, ವಿದೇಶಗಳಲ್ಲಿ ಕಂಪೆನಿಗಳನ್ನು ಆರಂಭಿಸಿ ಬಳಿಕ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಪಂಡೋರಾ ಪೇಪರ್ಸ್‍ನಲ್ಲಿ ಉಲ್ಲೇಖವಾಗಿದೆ. ಈ ಬಗ್ಗೆ ತನಿಖಾ ಪತ್ರಕರ್ತರ ತಂಡ ನಡೆಸಿದ ತನಿಖೆಯ ವರದಿ ಇಲ್ಲಿದೆ. ಇದನ್ನೂ ಓದಿ: ಕೇರಳದಿಂದ ಪ್ರಯಾಣಿಕರಿಗೆ RTPCR ವರದಿ ಕಡ್ಡಾಯ – ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಕೆ

    ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರು ಕೂಡಾ ಪಂಡೋರಾ ಪೇಪರ್ಸ್‍ನಲ್ಲಿದೆ. ಅಲ್ಲದೆ ಅನಿಲ್ ಅಂಬಾನಿ, ಬಯೋಕಾನ್ ಸಂಸ್ಥೆಯ ಕಿರಣ್ ಮುಂಜುದಾರ್ ಶಾ ಪತಿ ಸೇರಿದಂತೆ ಸುಮಾರು 300 ಭಾರತೀಯರನ್ನು ಹೆಸರಿಸಲಾಗಿದೆ. ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಆಪ್ತ ಬಳಗ ಸೇರಿದಂತೆ ಸುಮಾರು 700ಕ್ಕೂ ಹೆಚ್ಚು ಮಂದಿಯ ಮಾಹಿತಿಯಿದೆ ಎಂದು ವರದಿಯಾಗಿದೆ.

  • ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

    ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

    ಸೌಂಥಾಂಪ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಕ್ಯಾಪ್ಟನ್‍ಶಿಪ್ ನಿರ್ವಹಿಸುವ ಮೂಲಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತನಗೆ ನಾಯಕತ್ವದ ಪಾಠ ಹೇಳಿಕೊಟ್ಟ ಗುರುವಿನ ದಾಖಲೆ ಮುರಿದಿದ್ದಾರೆ.

    ವಿರಾಟ್ ಕೊಹ್ಲಿ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಟಾಸ್ ಆದ ಬೆನ್ನಲ್ಲೇ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ ದಾಖಲೆಯನ್ನು ಮುರಿದಿದ್ದಾರೆ. ಧೋನಿ ಇವರೆಗೆ ಒಟ್ಟು 60 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರೆ, ವಿರಾಟ್ ಕೊಹ್ಲಿ 61ನೇ ಪಂದ್ಯದಲ್ಲಿ ನಾಯಕತ್ವ ವಹಿಸುವ ಮೂಲಕ ತನ್ನ ನಾಯಕತ್ವದ ಗುರುವಿನ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಇದನ್ನೂ ಓದಿ: ದಾಖಲೆ ಬರೆದ ವಿರಾಟ್ ಕೊಹ್ಲಿ

    ಧೋನಿ ಒಟ್ಟು 60 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿ 27 ಪಂದ್ಯದಲ್ಲಿ ಜಯ, 18 ಪಂದ್ಯ ಸೋಲು ಮತ್ತು 15 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ವಿರಾಟ್ ಒಟ್ಟು 61 ಪಂದ್ಯ 36 ಪಂದ್ಯ ಜಯ, 14 ಪಂದ್ಯ ಸೋಲು, 10 ಪಂದ್ಯ ಡ್ರಾ ಮಾಡಿಕೊಂಡಿದ್ದಾರೆ. 2014ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದ ಚುಕ್ಕಾನಿ ಹಿಡಿದಿದ್ದರು. ಬಳಿಕ ತಂಡವನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ನಂ 1 ಸ್ಥಾನಕ್ಕೇರಿಸಿ, ಇದೀಗ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ಗೆ ಏರಿಸಿದ ಕೀರ್ತಿ ವಿರಾಟ್‍ಗೆ ಸಲ್ಲುತ್ತದೆ. ಇದನ್ನೂ ಓದಿ: WTC ಫೈನಲ್ ಭಾರತ, ನ್ಯೂಜಿಲೆಂಡ್ ತಂಡದ ವೇಗಿಗಳ ಬಲಾಬಲ

    ಕೊಹ್ಲಿ ನಾಯಕತ್ವ ಮಾತ್ರವಲ್ಲದೆ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ವೈಯಕ್ತಿಕವಾಗಿ ಟೆಸ್ಟ್ ಕ್ರಿಕೆಟ್‍ನಲ್ಲಿ ವೇಗವಾಗಿ 7500ಕ್ಕೂ ಅಧಿಕ ರನ್ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಮೈಲಿಗಲ್ಲನ್ನು ನೆಟ್ಟಿದ್ದಾರೆ. ಈ ಮೊದಲು ಸಚಿನ್ ತೆಂಡೂಲ್ಕರ್ 144 ಟೆಸ್ಟ್ ಪಂದ್ಯಗಳಿಂದ 7500ರನ್ ಸಿಡಿಸಿದರೆ, ಬಳಿಕ ಸುನಿಲ್ ಗಾವಸ್ಕರ್ 154 ಟೆಸ್ಟ್ ಪಂದ್ಯಗಳಿಂದ 7500ರನ್ ಸಿಡಿಸಿದ್ದರು. ಇದೀಗ ಕೊಹ್ಲಿ 92 ಟೆಸ್ಟ್ ಪಂದ್ಯದಿಂದ 7500 ರನ್ ಸಿಡಿಸಿ ಮಿಂಚಿದ್ದಾರೆ.

  • ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬ-ಶುಭಾಶಯಗಳ ಮಹಾಪೂರ

    ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬ-ಶುಭಾಶಯಗಳ ಮಹಾಪೂರ

    ಮುಂಬೈ: ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟ್ಸ್‍ಮ್ಯಾನ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಇಂದು 48ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಕ್ರಿಕೆಟಿಗರು ಸೇರಿದಂತೆ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯವನ್ನು ಕೋರಿದ್ದಾರೆ.

    1973ರಲ್ಲಿ ಮುಂಬೈನ ದಾದರ್‍ ನಲ್ಲಿ ಜನಿಸಿದ ಸಚಿನ್, ಒಬ್ಬ ಕ್ರಿಕೆಟ್ ಆಟಗಾರನಾಗಿ ಯಶಸ್ಸಿನ ಉತ್ತುಂಗಕ್ಕೆ ಏರಿದ್ದಾರೆ. ಭಾರತ ಪರ ಅತೀ ಕಿರಿಯ ವಯಸ್ಸಿನಲ್ಲಿ ಬ್ಯಾಟ್‍ಹಿಡಿದು ಮೈದಾನಕ್ಕೆ ಇಳಿದ ಸಚಿನ್ ನೋಡ ನೋಡುತ್ತಲೇ ತನ್ನ ಅದ್ಭುತ ಬ್ಯಾಟಿಂಗ್‍ನಿಂದ ರನ್‍ಶಿಖರವನ್ನು ಕಟ್ಟ ತೊಡಗಿದರು. ನಂತರ ಹಲವು ದಾಖಲೆಗಳ ಒಡೆಯನಾಗಿ ಕ್ರಿಕೆಟ್ ದೇವರಾಗಿ ಎಲ್ಲರ ಮನದಲ್ಲಿ ಕಾಣಿಸಿಕೊಂಡಿದ್ದಾರೆ.

    ಭಾರತದ ಪರ 664 ಪಂದ್ಯಗಳನ್ನು ಆಡಿರುವ ಸಚಿನ್ 34,357 ರನ್‍ಗಳಿಸಿದ್ದಾರೆ. ಇದಲ್ಲದೆ 100 ಶತಕಗಳು ಮತ್ತು 201 ವಿಕೆಟ್ ಕೂಡ ಕಬಳಿಸುವ ಮೂಲಕ ಭಾರತದ ಕ್ರಿಕೆಟ್‍ಗೆ ಕೊಡುಗೆಯನ್ನು ಕೊಟ್ಟಿದ್ದಾರೆ.

    ಸಚಿನ್ ಕಳೆದ ಬಾರಿ ಕೊರೊನಾ ಸೋಂಕು ದೇಶದಾದ್ಯಂತ ಹರಡಿಕೊಂಡಿದ್ದ ಕಾರಣ ಹುಟ್ಟುಹಬ್ಬ ಆಚರಿಸದೆ ಕೊರೊನಾ ವಾರಿಯರ್ಸ್‍ಗಳಿಗೆ ಮತ್ತು ಫ್ರೆಂಟ್‍ಲೈನ್ ವರ್ಕಸ್‍ಗಳಿಗೆ ಗೌರವ ಕೊಡುವ ನಿರ್ಧಾರ ಮಾಡಿಕೊಂಡಿದ್ದರು. ಇದೀಗ ದೇಶದಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದೆ. ಕೆಲದಿನಗಳ ಹಿಂದೆ ಸಚಿನ್ ಅವರು ಕೂಡ ಸೋಂಕಿತರಾಗಿ ಆಸ್ಪತ್ರೆ ಸೇರಿದ್ದರು ಇದೀಗ ಸೋಂಕು ಗುಣವಾಗಿದ್ದು ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರೆ.

    ಇದೀಗ ಮುಂಬೈನಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದರಿಂದಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಡುವೆ ಸಚಿನ್ ಅವರು ಅಭಿಮಾನಿಗಳೊಂದಿಗೆ ಈ ಬಾರಿಯು ಹುಟ್ಟುಹಬ್ಬ ಆಚರಿಸದೆ ಇರಲು ನಿರ್ಧಾರಿಸಿದ್ದಾರೆ. ಹಾಗಾಗಿ ಅಭಿಮಾನಿಗಳು, ಕ್ರಿಕೆಟಿಗರು, ಸೆಲೆಬ್ರಿಟಿಗಳು ಸೇರಿದಂತೆ ಸಾವಿರಾರು ಮಂದಿ ಶುಭಾಶಯಗಳನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

    ಬಿಸಿಸಿಐ ಅವರ ಸಾಧನೆಯ ಪಟ್ಟಿಯನ್ನು ಹಾಕಿಕೊಂಡು ವಿಶ್ ಮಾಡಿದರೆ, ಹಿರಿಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಸಚಿನ್‍ರೊಂದಿಗೆ ಜೊತೆಯಾಗಿ ಆಡಿದ ದಿನಗಳ ಚಿತ್ರಗಳನ್ನು ಹಾಕಿಕೊಂಡು ಶುಭಾಶಯ ತಿಳಿಸಿದ್ದಾರೆ.

    ಸಚಿನ್ ಕೆಲ ತಿಂಗಳ ಹಿಂದೆ ನಡೆದ ರೋಡ್ ಸೇಪ್ಟಿ ಸೀರಿಸ್‍ನಲ್ಲಿ ಭಾರತದ ಪರ ಬ್ಯಾಟ್‍ಬೀಸಿದ್ದರು ಭಾರತ ಲೆಜೆಂಡ್ ತಂಡ ಈ ಕ್ರಿಕೆಟ್ ಸರಣಿಯ ಚಾಂಪಿಯನ್ ಕೂಡ ಆಗಿತ್ತು. ಈ ಸರಣಿಯಲ್ಲಿ ಸಚಿನ್ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಗಮನಸೆಳೆದಿದ್ದರು.

  • ವಿರಾಟ್ ಕೊಹ್ಲಿ ಮುಡಿಗೆ ಮತ್ತೊಂದು ಕಿರೀಟ

    ವಿರಾಟ್ ಕೊಹ್ಲಿ ಮುಡಿಗೆ ಮತ್ತೊಂದು ಕಿರೀಟ

    ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ತಂಡದ ಆಟಗಾರನಾಗಿ ಮತ್ತು ನಾಯಕನಾಗಿ ಹಲವಾರು ದಾಖಲೆಗಳ ಸರದಾರನಾಗಿದ್ದಾರೆ. ತನ್ನ ಅದ್ಭುತ ಬ್ಯಾಟಿಂಗ್ ಶೈಲಿಯಿಂದ ಅದೆಷ್ಟೋ ಪಂದ್ಯಗಳನ್ನು ಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ. ಈಗಾಗಲೇ ಕೊಹ್ಲಿಯ ಕ್ರಿಕೆಟ್ ಸಾಧನೆಗಾಗಿ ಹಲವಾರು ಪ್ರಶಸ್ತಿಗಳು ಸಂದಿವೆ. ಇದೀಗ ಅವರ ಪ್ರಶಸ್ತಿಯ ಮುಡಿಗೆ 2010 ರಿಂದ 2021ರ ದಶಕದ ವಿಸ್ಡನ್ ಕ್ರಿಕೆಟರ್ ಅಲ್‍ಮನ್ಯಾಕ್ ಪ್ರಶಸ್ತಿ ಸೇರಿಕೊಂಡಿದೆ.

    ಹೌದು ವಿರಾಟ್ ಕೊಹ್ಲಿ 2008ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ ನಂತರ ಒಂದಲ್ಲ ಒಂದು ರೀತಿಯಿಂದ ಭಾರತ ತಂಡಕ್ಕೆ ನೆರವಾಗಿ, ಹಲವು ಪ್ರಶಸ್ತಿಗಳನ್ನು ಗೆಲ್ಲಲು ಸಹಕಾರಿಯಾಗಿದ್ದಾರೆ. 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯನಾಗಿದ್ದ ವಿರಾಟ್ ಆ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿ ತನ್ನ ಬ್ಯಾಟಿಂಗ್ ಪರಾಕ್ರಮ ಮೆರೆದಿದ್ದಾರೆ ಅದರಲ್ಲೂ ಏಕದಿನ ಕ್ರಿಕೆಟ್‍ನಲ್ಲಿ ಕಳೆದ ಮೂರು ವರ್ಷಗಳಿಂದ ನಂಬರ್‍ವನ್ ಆಟಗಾರನಾಗಿ ಕಾಣಿಸಿಕೊಂಡಿದ್ದರು. ಈ ಎಲ್ಲಾ ಸಾಧನೆಗಳನ್ನು ಗಮನಿಸಿ ಪ್ರತಿಷ್ಠಿತ ವಿಸ್ಡನ್ ಅಲ್‍ಮನ್ಯಾಕ್ ದಶಕದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಕೊಹ್ಲಿಗೆ ಒಲಿದಿದೆ.

    ಭಾರತದ ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್ ಮತ್ತು ಸಚಿನ್ ತೆಂಡೂಲ್ಕರ್ ಈ ಹಿಂದೆ 1980 ಮತ್ತು 1990ರಲ್ಲಿ ವಿಸ್ಡನ್ ಅಲ್‍ಮನ್ಯಾಕ್ ದಶಕದ ಏಕದಿನ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿದ್ದರು. ಆ ಬಳಿಕ ಇದೀಗ ವಿರಾಟ್ ಕೊಹ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ವಿರಾಟ್ ಕೊಹ್ಲಿ 2011ರ ಏಕದಿನ ವಿಶ್ವಕಪ್ ವಿಜೇತ ಟೀಂ ಇಂಡಿಯಾ ಸದಸ್ಯನಾಗಿ, ಚಾಂಪಿಯನ್ ಟ್ರೋಫಿ ವಿಜೇತ ಭಾರತ ತಂಡದ ಸದಸ್ಯನಾಗಿ ಕಾಣಿಸಿಕೊಂಡಿದ್ದರು. ಈಗಾಗಲೇ ಏಕದಿನ ಕ್ರಿಕೆಟ್ ನಲ್ಲಿ 254 ಪಂದ್ಯಗಳಿಂದ 60ರ ಸರಾಸರಿಯಲ್ಲಿ 43 ಶತಕ ಮತ್ತು 62 ಅರ್ಧಶತಕ ಸಹಿತ 12,169 ರನ್ ಕಲೆಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ದಶಕದ ಏಕದಿನ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿದ್ದಾರೆ.

    ವಿಸ್ಡನ್ ಅಲ್‍ಮನ್ಯಾಕ್ ಪ್ರತಿಷ್ಠಿತ ವಾರ್ಷಿಕ ಪುಸ್ತಕದಲ್ಲಿ ಕ್ರಿಕೆಟ್ ಕ್ಷೇತ್ರದ ಐತಿಹಾಸಿಕ ಘಟನೆಗಳನ್ನು ದಾಖಲಿಸಲಾಗುತ್ತದೆ. ಈ ಹಿಂದೆ 2000 ಇಸವಿಯಿಂದ 2011ರ ವರೆಗೆ ಶ್ರೀಲಂಕಾ ಕ್ರಿಕೆಟ್‍ನ ದಿಗ್ಗಜ ಆಟಗಾರ ಮುತ್ತಯ್ಯ ಮುರುಳೀಧರನ್ ದಶಕ ಒಂದರಲ್ಲಿ 335 ವಿಕೆಟ್ ಪಡೆಯುವ ಮೂಲಕ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಇದೀಗ ಕೊಹ್ಲಿಗೆ ಈ ಪ್ರಶಸ್ತಿ ಬಂದಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

  • ಹೋಂ ಕ್ವಾರಂಟೈನ್‍ನಲ್ಲಿದ್ದ ಸಚಿನ್ ಆಸ್ಪತ್ರೆಗೆ ಶಿಫ್ಟ್

    ಹೋಂ ಕ್ವಾರಂಟೈನ್‍ನಲ್ಲಿದ್ದ ಸಚಿನ್ ಆಸ್ಪತ್ರೆಗೆ ಶಿಫ್ಟ್

    ಮುಂಬೈ: ಕೊರೊನಾ ಸೋಂಕಿಗೆ ತುತ್ತಾಗಿರುವ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡಲ್ಕೂರ್ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸಚಿನ್ ಅವರಿಗೆ ಕಳೆದ ವಾರ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಕ್ವಾರಂಟೈನ್‍ಗೆ ಒಳಗಾಗಿದ್ದರು. ಆದರೆ ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ನಿಮಗೆಲ್ಲರಿಗೂ ಧನ್ಯವಾದಗಳು, ನಾನು ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆದಷ್ಟು ಬೇಗ ಮರಳಿ ಮನೆಗೆ ಬರುವ ನಿರೀಕ್ಷೆ ಇದೆ. ದೇಶದ ಜನತೆ ದಯವಿಟ್ಟು ಕೊರೊನಾ ನಿಯಮಗಳನ್ನ ಪಾಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ಅದೇ ರೀತಿ ಇಂದಿಗೆ ವಿಶ್ವಕಪ್ ಗೆದ್ದು 10 ವರ್ಷಗಳು ಸಂದಿದೆ. ಹಾಗಾಗಿ ದೇಶದ ಜನತೆಗೆ ಮತ್ತು ನನ್ನ ತಂಡದ ಸಹ ಆಟಗಾರರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ ಎಂದು ಟ್ವಿಟ್ಟರ್‍ ನಲ್ಲಿ ಬರೆದುಕೊಂಡಿದ್ದಾರೆ.

    ಕೊರೊನಾ ದೃಢವಾದ ದಿನದಿಂದ ಸಚಿನ್ ಅವರಿಗೆ, ಅಭಿಷೇಕ್ ಬಚ್ಚನ್ ಸೇರಿದಂತೆ ಅಪಾರ ಸೆಲೆಬ್ರಿಟಿಗಳು ಗುಣಮುಖವಾಗಿ ಬನ್ನಿ ಎಂದು ಹಾರೈಸಿದ್ದಾರೆ. ಅಭಿಮಾನಿಗಳು ಸಹ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿ ಸಚಿನ್ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.

    ಸಚಿನ್ ಕೆಲದಿನಗಳ ಹಿಂದೆ ತವರಿನಲ್ಲಿ ನಡೆದ ರಸ್ತೆ ಸುರಕ್ಷತಾ ಕ್ರಿಕೆಟ್ ಲೀಗ್‍ನಲ್ಲಿ ಭಾರತ ತಂಡದ ಪರವಾಗಿ ಆಡಿದ್ದರು. ಭಾರತ ಫೈನಲ್‍ನಲ್ಲಿ ಶ್ರೀಲಂಕಾ ತಂಡದ ವಿರುದ್ಧ ಗೆದ್ದು ಪ್ರಶಸ್ತಿ ಜಯಿಸಿತ್ತು.

  • ಸಚಿನ್ ತೆಂಡಲ್ಕೂರ್ ಗೆ ಕೊರೊನಾ ಪಾಸಿಟಿವ್

    ಸಚಿನ್ ತೆಂಡಲ್ಕೂರ್ ಗೆ ಕೊರೊನಾ ಪಾಸಿಟಿವ್

    ಮುಂಬೈ: ಮಾಜಿ ಕ್ರಿಕೆಟಿಗ ಸಚಿನ್ ತೆಂಡಲ್ಕೂರ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಸೋಂಕು ತಗುಲಿರುವ ವಿಚಾರವನ್ನ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೊಂಡಿದ್ದು, ಕೊರೊನಾ ನಿಯಮಗಳನ್ನ ಪಾಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ಸಣ್ಣ ಪ್ರಮಾಣದ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದೆ. ಇಂದು ವರದಿಯಲ್ಲಿ ಸೋಂಕು ತಗುಲಿರೋದು ದೃಢವಾಗಿದ್ದು, ಮನೆಯ ಇತರೆ ಸದಸ್ಯರ ವರದಿ ನೆಗೆಟಿವ್ ಬಂದಿದೆ. ಕೋವಿಡ್ ನಿಯಮಗಳನ್ನ ಪಾಲಿಸಿ, ವೈದ್ಯರ ಸಲಹೆ ಪಡೆದು ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದೇನೆ ಎಂದು ತಿಳಿಸಿದ್ದಾರೆ. ಅಭಿಷೇಕ್ ಬಚ್ಚನ್ ಸೇರಿದಂತೆ ಅಪಾರ ಸೆಲೆಬ್ರಿಟಿಗಳು ಗುಣಮುಖವಾಗಿ ಬನ್ನಿ ಎಂದು ಹಾರೈಸಿದ್ದಾರೆ. ಅಭಿಮಾನಿಗಳು ಸಹ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದು, ಸಚಿನ್ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.

    ಕಳೆದ 24 ಗಂಟೆಯಲ್ಲಿ 62,258 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 291 ಜನರು ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 4,52,647 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರ ಸಂಖ್ಯೆ 1,19,08,910 ಏರಿಕೆಯಾಗಿದೆ.

  • #IndiaAgainstPropaganda -ರಾಷ್ಟ್ರಕ್ಕಾಗಿ ನಾವೆಲ್ಲ ಒಂದಾಗೋಣ ಎಂದ ಸಚಿನ್‌

    #IndiaAgainstPropaganda -ರಾಷ್ಟ್ರಕ್ಕಾಗಿ ನಾವೆಲ್ಲ ಒಂದಾಗೋಣ ಎಂದ ಸಚಿನ್‌

    ನವದೆಹಲಿ: ರೈತ ಚಳುವಳಿಯ ಹೆಸರಿನಲ್ಲಿ ಭಾರತದ ಆಂತರಿಕ ವಿಚಾರದಲ್ಲಿ ತಲೆ ಹಾಕಿದ ವಿದೇಶಿ ಸೆಲೆಬ್ರಿಟಿಗಳ ವಿರುದ್ಧ ದೇಶಿ ಸೆಲೆಬ್ರಿಟಿಗಳು ಸಿಡಿದೆದ್ದಿದ್ದಾರೆ.

    ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಸುನೀಲ್ ಶೆಟ್ಟಿ, ನಿರ್ಮಾಪಕ ಕರಣ್ ಜೋಹರ್, ಗಾಯಕ್ ಕೈಲಾಶ್ ಖೇರ್, ಖ್ಯಾತ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಟೀಂ ಇಂಡಿಯಾ ಆಟಗಾರ ಶಿಖರ್ ಧವನ್, ಸುರೇಶ್‌ ರೈನಾ ವಿದೇಶಿ ಸೆಲೆಬ್ರಿಟಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎನ್ನುತ್ತಾ #IndiaAgainstPropaganda #IndiaTogether ಟ್ರೆಂಡ್ ಮಾಡಿದ್ದಾರೆ.

    ಭಾರತದ ಸಾರ್ವಭೌಮತ್ವದಲ್ಲಿ ರಾಜಿಯಾಗುವುದಿಲ್ಲ. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದು ಆದರೆ ಭಾಗವಹಿಸುವಂತಿಲ್ಲ. ಭಾರತೀಯರಿಗೆ ಭಾರತ ಏನು ಎನ್ನುವುದು ತಿಳಿದಿದೆ ಮತ್ತು ಏನು ನಿರ್ಧರಿಸಬೇಕು ಎನ್ನುವುದು ಭಾರತಕ್ಕೆ ಗೊತ್ತಿದೆ. ರಾಷ್ಟ್ರಕ್ಕಾಗಿ ನಾವೆಲ್ಲ ಒಂದಾಗೋಣ ಎಂದು ಸಚಿನ್‌ ತೆಂಡೂಲ್ಕರ್‌ ಟ್ವೀಟ್‌ ಮಾಡಿ ಮನವಿ ಮಾಡಿಕೊಂಡಿದ್ದಾರೆ.

    ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‍ಬರ್ಗ್ ರೈತ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಖ್ಯಾತ ಪಾಪ್ ಗಾಯಕಿ ರಿಹಾನಾ ಟ್ವೀಟ್ ಮಾಡಿ, ರೈತ ಹೋರಾಟ ಬೆಂಬಲಿಸಿ ಏಕೆ ಮಾತಾಡ್ತಿಲ್ಲ ಅಂತಾ ಪ್ರಶ್ನಿಸಿದ್ದಾರೆ. ಇದಕ್ಕೆ ಬಾಲಿವುಡ್ ನಟಿ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ.

    ಪ್ರತಿಭಟನೆ ನಡೆಸ್ತಿರುವವರು ರೈತರಲ್ಲ. ಅವ್ರು ದೇಶವನ್ನು ವಿಭಜಿಸಲು ನೋಡ್ತಿರುವ ಭಯೋತ್ಪಾದಕರು. ದೇಶವನ್ನು ತುಕ್ಡೆ ತುಕ್ಡೆ ಮಾಡಿ ಚೈನಾ ಕಾಲನಿಗಳನ್ನಾಗಿ ಮಾಡುವ ಉದ್ದೇಶ ಹೊಂದಿರುವವರು. ನಾವು ನಮ್ಮ ದೇಶವನ್ನು ಮಾರಿಕೊಳ್ಳಲು ನೋಡ್ತಿಲ್ಲ. ಅದಕ್ಕೆ ನಾವು ಮಾತಾಡ್ತಿಲ್ಲ. ನೀವು ಸುಮ್ಮನಿರಿ ಎಂದು ಟ್ವೀಟ್ ಮಾಡಿ ಆಕ್ರೊಶ ಹೊರಹಾಕಿದ್ದಾರೆ.

    ವಿದೇಶಿ ಪ್ರಮುಖರ ಹೇಳಿಕೆ ಖಂಡಿಸಿ ವಿದೇಶಾಂಗ ಸಚಿವಾಲಯ ಕೂಡ ಪ್ರಕಟಣೆ ಹೊರಡಿಸಿದೆ. ಸೆಲೆಬ್ರಿಟಿಗಳ ಹೇಳಿಕೆಗಳು ಅವಾಸ್ತವ, ಬೇಜವಬ್ದಾರಿತನದಿಂದ ಕೂಡಿವೆ. ಕೆಲ ಸ್ವಾರ್ಥಿಗಳು ಹೋರಾಟದ ಹೆಸರಲ್ಲಿ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಗಿಟ್ಟಿಸಿಕೊಳ್ಳಲು ನೋಡ್ತಿದ್ದಾರೆ. ಇವರ ಸುಳ್ಳುಗಳಿಂದ ವಿದೇಶಗಳಲ್ಲಿ ಗಾಂಧಿ ಪ್ರತಿಮೆಯನ್ನು ಅಪವಿತ್ರ ಮಾಡುವ ಕೆಲಸ ನಡೆದಿದೆ. ಇದು ಭಾರತಕ್ಕೆ ಅತೀವ ನೋವು ತಂದಿದೆ ಎಂದಿದೆ. ಅಲ್ಲದೇ, ಇದಕ್ಕೆ #IndiaAgainstPropaganda #IndiaTogether ಹೆಸರಿನ ಹ್ಯಾಷ್‍ಟ್ಯಾಗನ್ನು ವಿದೇಶಾಂಗ ಸಚಿವಾಲಯ ಜೋಡಿಸಿದೆ.

    https://twitter.com/KanganaTeam/status/1356640083546406913

  • ಮುಂಬೈ ಹಿರಿಯರ ತಂಡದ ಪರ ಕಣಕ್ಕಿಳಿದ ಜೂನಿಯರ್ ತೆಂಡೂಲ್ಕರ್

    ಮುಂಬೈ ಹಿರಿಯರ ತಂಡದ ಪರ ಕಣಕ್ಕಿಳಿದ ಜೂನಿಯರ್ ತೆಂಡೂಲ್ಕರ್

    ಮುಂಬೈ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ನಡೆಯುತ್ತಿರುವ ಪಂದ್ಯಾಟದಲ್ಲಿ ಮುಂಬೈ ಹಿರಿಯರ ತಂಡದಲ್ಲಿ ಬ್ಯಾಟಿಂಗ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಕಣಕ್ಕಿಳಿದಿದ್ದಾರೆ.

    21 ವರ್ಷದ ಅರ್ಜುನ್ ತೆಂಡೂಲ್ಕರ್ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿ 3 ಓವರ್ ಎಸೆದು 1 ವಿಕೆಟ್ ಕಿತ್ತಿದ್ದಾರೆ.

    ಅಲ್‍ರೌಂಡರ್ ಆಗಿರುವ ಅರ್ಜುನ್ ತೆಂಡೂಲ್ಕರ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಒಂದು ವಿಕೆಟ್ ಕಿತ್ತು ಭರವಸೆ ಮೂಡಿಸಿದ್ದಾರೆ. ಆದರೂ ಈ ಪಂದ್ಯದಲ್ಲಿ ಮುಂಬೈ ಸೋಲನ್ನು ಅನುಭವಿಸಿದೆ.

    ಮುಂಬೈನ ಬಾಂದ್ರ ಕುರ್ಲಾ ಕಾಂಪ್ಲೆಕ್ಸ್ ಶರದ್ ಪವಾರ್ ಕ್ರಿಕೆಟ್ ಮೈದಾನದಲ್ಲಿ ನಡದ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 143 ರನ್ ಗಳಿಸಿತು. ಈ ಸಾಧಾರಣ ಮೊತ್ತವನ್ನು ಚೇಸ್ ಮಾಡಲು ಹೊರಟ ಹರಿಯಾಣ ತಂಡದ ಪರ ಹಿಮಾಂಶು ರಾಣಾ 75 ರನ್(53 ಎಸೆತ)ರನ್ ಹೊಡೆದು 17.4 ಓವರ್ ಗಳಲ್ಲಿ ಪಂದ್ಯ ಗೆಲ್ಲಿಸಿಕೊಟ್ಟರು.

     

    ಅರ್ಜುನ್ ತೆಂಡೂಲ್ಕರ್ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲಿ 3 ಓವರ್ ಮಾಡಿ 34ರನ್ ಬಿಟ್ಟುಕೊಟ್ಟರು. ಇವರ ಮೊದಲ ವಿಕೆಟ್ ಸಂಭ್ರಮಕ್ಕೆ ವಿಕೆಟ್ ಒಪ್ಪಿಸಿದವರು ಹರಿಯಾಣ ತಂಡದ ಆರಂಭಿಕ ಆಟಗಾರ ಚೈತ್ಯ ಬಿಷ್ಣೋಯ್. ಇವರ ವಿಕೆಟ್ ಪಡೆಯುವ ಮೂಲಕ ಮೊದಲ ವಿಕೆಟ್ ಪಡೆದು ಆರಂಭಿಕ ಯಶಸ್ಸು ತಂದು ಕೊಟ್ಟಿದ್ದರು. ಈ ಮೂಲಕ ಮುಂಬೈ ತಂಡಕ್ಕೆ ಮುಂದಿನ ಪಂದ್ಯಗಳಲ್ಲಿ ಭರವಸೆ ಮೂಡಿಸಿದ್ದಾರೆ.