ಮುಂಬೈ: ಕ್ರಿಕೆಟ್ ಬದುಕಿಗೆ ವಿದಾಯ ಹೇಳಿ ವರ್ಷಗಳೇ ಕಳೆದರೂ ಎಷ್ಟು ಆಟಗಾರಿಗೆ ತಮ್ಮ ಸ್ಟಾರ್‌ಗಳ ಮೇಲಿನ ಭಕ್ತಿ ಕಡಿಮೆಯಾಗಿಲ್ಲ ಎಂಬುದಕ್ಕೆ ಬುಧವಾರ ಐಪಿಎಲ್ ವೇಳೆ ಕಂಡುಬಂದ ದೃಶ್ಯವೊಂದು ಸಾಕ್ಷಿಯಾಯಿತು.
ಹೌದು… 2022ನೇ ಸಾಲಿನ 15ನೇ ಆವೃತ್ತಿಯ ವೇಳೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಸಚಿನ್ ತೆಂಡೂಲ್ಕರ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಕಿಂಗ್ಸ್ ಪಂಜಾಬ್ ನಡುವಣ ಪಂದ್ಯದ ಬಳಿಕ ಎರಡೂ ತಂಡದ ಆಟಗಾರರೂ ಪರಸ್ಪರ ಹಸ್ತಲಾಘವ ಮಾಡುತ್ತಿದ್ದ ವೇಳೆ ರೋಡ್ಸ್ ಸಚಿನ್ ಕಾಲಿಗೆ ನಮಸ್ಕರಿಸಿದ್ದಾರೆ. ಈ ವೇಳೆ ಸಚಿನ್ ತಡೆಯಲು ಪ್ರಯತ್ನಿಸಿದ್ದಾದರೂ ರೋಡ್ಸ್ ತಮ್ಮ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ: 4 ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾಗಿದೆ ದೀಪಕ್ ಚಹರ್ – ಟಿ20 ವಿಶ್ವಕಪ್‍ಗೂ ಡೌಟ್
What a gesture !! Jonty Rhodes, who is four years older than Sachin, suddenly touches the feets of later in respect. Sachin realised Jonty's attempt and tried hard to stop him, but again the worlds best ever fielder wins the race. Beyond the word. pic.twitter.com/iH1MBlcLdS
ಪ್ರಸ್ತುತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚ್ಚಿನ್‌ಗಿಂತಲೂ ನಾಲ್ಕು ವರ್ಷ ದೊಡ್ಡವರಾಗಿರುವ ಜಾಂಟಿ ರೋಡ್ಸ್ (52) ಅವರ ವಿನಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. 2009ರಿಂದ 2017ರ ವರೆಗೆ ಮುಂಬೈ ತಂಡದ ಫೀಲ್ಡಿಂಗ್ ಕೋಚ್ ಆಗಿ ಜಾಂಟಿ ರೋಡ್ಸ್ ಕರ್ತವ್ಯ ನಿರ್ವಹಿಸಿದ್ದರು. ಈ ಮೂಲಕ ಸಚಿನ್ ತೆಂಡೂಲ್ಕರ್ ಜೊತೆಗೆ ಉತ್ತಮ ಒಡನಾಟ ಹೊಂದಿದ್ದಾರೆ. ಇದನ್ನೂ ಓದಿ: ಧೋನಿಯೇ ಮುಖ್ಯವಾದ್ರೆ ಉಳಿದ ಆಟಗಾರರು ಲಸ್ಸಿ ಕುಡಿಯಲು ಹೋಗಿದ್ರಾ: ಭಜ್ಜಿ ಪ್ರಶ್ನೆ
Jonty Rhodes yesterday tried to touch Sachin Tendulkar's feet after the match. pic.twitter.com/X8UjjWtfPD
ಪಂಜಾಬ್ ಕಿಂಗ್ಸ್ ತಂಡದ ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ಕೋಚ್ ಜವಾಬ್ದಾರಿಯನ್ನು ಜಾಂಟಿ ರೋಡ್ಸ್ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಮುಂಬೈ ವಿರುದ್ಧದ ಪಂದ್ಯದಲ್ಲಿ ಪಂಜಾಬ್ 12 ರನ್ ಅಂತರದ ಗೆಲುವು ದಾಖಲಿಸಿತ್ತು. ಈ ಹಿಂದೆ ಭಾರತದ ಮೇಲಿನ ಪ್ರೀತಿಗಾಗಿ ಜಾಂಟಿ ರೋಡ್ಸ್ ತನ್ನ ಮಗಳಿಗೆ `ಇಂಡಿಯಾ’ ಎಂದು ಹೆಸರಿಟ್ಟಿದ್ದರು ಎನ್ನುವುದು ಇಲ್ಲಿ ವಿಶೇಷ.
ನವದೆಹಲಿ: ಭಾರತದ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಭಾನುವಾರ 6 ಏಕದಿನ ವಿಶ್ವಕಪ್‍ಗಳಲ್ಲಿ ಆಡಿದ ಮೂರನೇ ಮಹಿಳಾ ಕ್ರಿಕೆಟಿಗರಾಗಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ನ್ಯೂಜಿಲ್ಯಾಂಡ್‍ನ ಮೌಂಟ್ ಮೌಂಗನುಯಿಯಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್‍ನಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಮೈದಾನಕ್ಕಿಳಿದಾಗ ಅವರು ಈ ಸಾಧನೆ ಮಾಡಿದ್ದಾರೆ.
ಮಿಥಾಲಿ ಅವರು ಸಚಿನ್ ತೆಂಡೂಲ್ಕರ್ ಮತ್ತು ಜಾವೇದ್ ಮಿಯಾಂದಾದ್ ನಂತರ ಆರು ಏಕದಿನ ವಿಶ್ವಕಪ್‍ಗಳಲ್ಲಿ ಆಡಿದ ಮೂರನೇ ಮಹಿಳಾ ಕ್ರಿಕೆಟಿಗರಾಗಿದ್ದಾರೆ. ಇದರೊಂದಿಗೆ ಆರು ಏಕದಿನ ವಿಶ್ವಕಪ್‍ಗಳಲ್ಲಿ ಆಡಿದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಮಿಥಾಲಿ ಅವರು 2000ನೇ ಇಸವಿಯ ಏಕದಿನ ವಿಶ್ವಕಪ್ ಮೂಲಕ ಪಾದಾರ್ಪಣೆ ಮಾಡಿದರು. 2005, 2009, 2013, 2017, ಮತ್ತು 2022ನೇ ವಿಶ್ವಕಪ್‍ಗಳಲ್ಲಿ ಭಾರತ ತಂಡದ ಪರ ಆಡಿ ಈ ಸಾಧನೆ ಮಾಡಿದ್ದಾರೆ. ಇದರ ಮಧ್ಯೆ ನ್ಯೂಜಿಲ್ಯಾಂಡ್‍ನ ದೆಬ್ಬೀ ಹಾಕ್ಲೆ ಹಾಗೂ ಇಂಗ್ಲೆಂಡ್‍ನ ಚಾರ್ಲೋಟ್ ಎಡ್ವಡ್ರ್ಸ್ ಅವರ ದಾಖಲೆಯನ್ನು ಸಹ ಅವರು ಮುರಿದಿದ್ದಾರೆ.
ಭಾರತದ ಕ್ರಿಕೆಟ್ ದೇವರಾದ ಸಚಿನ ತಂಡೂಲ್ಕರ್ ಅವರು, ಈ ಹಿಂದೆ 1992, 1996, 1999, 2003, 2007, ಮತ್ತು 2011ರ ವಿಶ್ವಕಪ್‍ನಲ್ಲಿ ಆಡಿ ಈ ಸಾಧನೆ ಮಾಡಿದ್ದರು.
-ರವೀಶ್. ಹೆಚ್.ಎಸ್, ಪೊಲಿಟಿಕಲ್ ಬ್ಯೂರೋ ಚೀಫ್, ಪಬ್ಲಿಕ್ ಟಿವಿ
ಆ ಇಬ್ಬರು ಕ್ರಿಕೆಟ್ ಲೆಜೆಂಡ್‌ಗಳು ಮೈದಾನದಲ್ಲಿದ್ದರೆ ಸಾಕು ರೋಚಕ.. ರೋಮಾಂಚನ. ಬೌಂಡರಿ ಗೆರೆ ದಾಟಿಸಲೇಬೇಕು ಅಂತಾ ಒಬ್ಬಾತ ಕ್ರೀಸ್‌ನಲ್ಲಿದ್ದರೆ, ಕ್ರೀಸ್‌ನಿಂದಲೇ ಬಹುಬೇಗ ಕಳುಹಿಸಬೇಕು ಅಂತಾ ಬಾಲ್ ಎಸೆಯುತ್ತಿದ್ದ ಇನ್ನೊಬ್ಬ. ಆ ಇಬ್ಬರು ಮೈದಾನದ ಎದುರಾಳಿಗಳು ವಿಶ್ವ ಕಂಡ ಶ್ರೇಷ್ಠ ಕ್ರಿಕೆಟ್ ಆಟಗಾರರು. ಅವರೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆಂಡ್ ಮ್ಯಾಜಿಕಲ್ ಬೌಲರ್ ಶೇನ್ ವಾರ್ನ್. ಮೈದಾನದಲ್ಲಿ ಎದುರಾಳಿಗಳಾದ್ರೆ ಹೊರಗೆ ಸ್ನೇಹ ಜೀವಿಗಳು. ಇಬ್ಬರ ನಡುವಿನ ಅಸಲಿ ಆಟ ಹೇಗಿತ್ತು ಅನ್ನೋದರ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಅದು 1992, ಜನವರಿ 2 ರಿಂದ 6. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತ- ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಸರಣಿಯ ಮೂರನೇ ಪಂದ್ಯ. ಮ್ಯಾಜಿಕ್ ಸ್ಪಿನ್ನರ್, ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆಯ ಆರಂಭದ ದಿನಗಳು ಇವು. ಭಾರತದಲ್ಲಿ ಮಾಸ್ಟರ್ ಬ್ಲಾಸ್ಟರ್ ಎಂಬ ಧ್ರುವತಾರೆ ಮಿನುಗುವ ಆರಂಭದ ಕಾಲ ಅದು. ಮೊದಲ ಟೆಸ್ಟ್ ಆಡಲು ಮೈದಾನಕ್ಕೆ ಇಳಿದ ಯುವಕ ಶೇನ್ ವಾರ್ನ್, ಸಚಿನ್ ಬಗ್ಗೆ ಮೊದಲ ಹೊಡೆತ ತಿಂದದ್ದು ಸಿಡ್ನಿ ಮೈದಾನದಲ್ಲೇ ಎನ್ನುವುದು ಇತಿಹಾಸ.
5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಗಿ ಶೇನ್ ವಾರ್ನ್ ಪಾದಾರ್ಪಣೆ ಮಾಡ್ತಾರೆ. ಆ ಪಂದ್ಯದಲ್ಲಿ ಆಟದ ಬಗ್ಗೆ ಗಮನ ಕೊಡಬೇಕಾದ ಯುವಕ ವಾರ್ನ್, ಸಚಿನ್ ನೋಡಿ 10 ವರ್ಷದ ಬಾಲಕ ಅಂತಾ ಛೇಡಿಸ್ತಾರೆ. ಆದರೆ ಪರಿಣಾಮ ಗೊತ್ತಾಗಿದ್ದು ಮೊದಲ ಇನ್ನಿಂಗ್ಸ್ ಮುಗಿದ ಮೇಲೆ. ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸಚಿನ್ ಸ್ಕೋರ್ 145. ಶೇನ್ ವಾರ್ನ್ 45 ಓವರ್ ಬೌಲಿಂಗ್ ಮಾಡಿ 150 ರನ್ ಕೊಟ್ಟು ಪಡೆದಿದ್ದು ಬರೀ 1 ವಿಕೆಟ್. ರವಿಶಾಸ್ತ್ರಿ ಡಬ್ಬಲ್ ಸೆಂಚುರಿ ಮಾಡಿ ಬಿಟ್ಟು ಕೊಟ್ಟ ವಿಕೆಟ್ ಅದು.
ಅವತ್ತು ಸಚಿನ್ ಕೊಟ್ಟ ಹೊಡೆತಕ್ಕೆ ಶೇನ್ ವಾರ್ನ್ ಪತರಗುಟ್ಟಿ ಹೋಗ್ತಾರೆ. ಅಲ್ಲಿಂದ ಶುರುವಾಗಿದ್ದು ಸಚಿನ್, ವಾರ್ನ್ ನಡುವಿನ ಸ್ನೇಹ, ಸಾಂಪ್ರಾದಾಯಿಕ ಎದುರಾಳಿ ಸ್ಪರ್ಧೆಯ ಪೈಪೋಟಿ. ನಾಲ್ಕನೇ ಟೆಸ್ಟ್‌ನಲ್ಲಿ ಶೇನ್ ವಾರ್ನ್ ಯಾವುದೇ ವಿಕೆಟ್ ಪಡೆಯದೇ ಹೆಚ್ಚು ರನ್ ಕೊಡ್ತಾರೆ. ಆಗಲೇ ಆಸ್ಟ್ರೇಲಿಯಾ ಶೇನ್ ವಾರ್ನ್ ಅವರನ್ನು 5ನೇ ಟೆಸ್ಟ್‌ಗೆ ಕಣಕ್ಕಿಳಿಸದೇ ಕೂರಿಸ್ತಾರೆ. ತೆಂಡೂಲ್ಕರ್ 10 ವರ್ಷದ ಬಾಲಕ ಎಂದಿದ್ದನ್ನ ವಾರ್ನ್ ಅವರೇ ಪಂದ್ಯವೊಂದರ ವೀಕ್ಷಕ ವಿವರಣೆಯ ಸಂದರ್ಭದಲ್ಲಿ ನೆನಪಿಸಿಕೊಳ್ತಾರೆ.
ಇನ್ನು ಸಚಿನ್, ಶೇನ್ ವಾರ್ನ್ ಮೈದಾನದಲ್ಲಿ ಎದುರಾಳಿಗಳು. ಮೈದಾನದಲ್ಲಿ ಸಚಿನ್ ಕಟ್ಟಿ ಹಾಕಲು ಶೇನ್ ವಾರ್ನ್ ಮಾಡುವ ಮ್ಯಾಜಿಕ್‌ಗಳಿಗೇನೂ ಕಮ್ಮಿ ಇರಲಿಲ್ಲ. ಶೇನ್ ವಾರ್ನ್ ಮತ್ತು ಸಚಿನ್ ನಡುವಿನ ಆ ಟಾಪ್ 5 ಮ್ಯಾಚ್‌ಗಳಂತೂ ರೋಚಕವಾಗಿರುತ್ತಿದ್ದವು.
ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ, ಮಾರ್ಚ್ 1998 1st ಟೆಸ್ಟ್ ಮ್ಯಾಚ್, ಚೆನ್ನೈ . ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಸಚಿನ್ 4 ರನ್ ಇದ್ದಾಗಲೇ ಶೇನ್ ವಾರ್ನ್ ವಿಕೆಟ್ ಕಬಳಿಸ್ತಾರೆ. ಅದೇ ಮುಯ್ಯಿಗೆ ಮುಯ್ಯಿ ಎಂಬಂತೆ ಎರಡನೇ ಇನ್ನಿಂಗ್ಸ್‌ನಲ್ಲಿ ಸಚಿನ್ not out 155 ರನ್ ಬಾರಿಸಿ ಮ್ಯಾನ್ ಆಫ್ ದಿ ಮ್ಯಾಚ್ ಮುಡಿಗೇರಿಸಿಕೊಳ್ತಾರೆ. ಈ ಪಂದ್ಯ ಸಚಿನ್ ವರ್ಸಸ್ ವಾರ್ನ್ ಎಂಬಂತಾಗಿತ್ತು.
ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ, 1998, ಅದು ಶಾರ್ಜಾದಲ್ಲಿ ನಡೆದ ಕೊಕೋಕೋಲಾ ಕಪ್. ಫೈನಲ್ ಪಂದ್ಯದಲ್ಲಿ ಶೇನ್ ವಾರ್ನ್‌ಗೆ ಜ್ವರ ಬಂದು ಕನಸಲ್ಲಿ ಬರುವ ಥರಾ ಸಚಿನ್ ರನ್ ಹೊಡೆದರು. ಆ ಪಂದ್ಯದಲ್ಲಿ ಸಚಿನ್ 131 ಬಾಲ್‌ಗೆ 134 ರನ್ ಸಿಡಿಸಿದರೆ, ಶೇನ್ ವಾರ್ನ್ 10 ಓವರ್‌ಗಳನ್ನು ಬೌಲ್ ಮಾಡಿ ವಿಕೆಟ್ ಪಡೆಯದೇ 61 ರನ್ ಕೊಟ್ಟಿದ್ದರು. ಆ ಕಾಲಕ್ಕೆ 61 ತುಂಬಾ ಕಾಸ್ಟ್ಲೀ ಆಗಿತ್ತು. ಇದನ್ನೂ ಓದಿ: ಇಂದು ಭಾವನಾತ್ಮಕ ಪೋಸ್ಟ್ ಮಾಡಿದ್ದ ಶೇನ್ ವಾರ್ನ್
ಇನ್ನುಳಿದಂತೆ ಡಿಸೆಂಬರ್ 1999ರಲ್ಲಿ ನಡೆದ ಆಡಿಲೇಡ್ ಟೆಸ್ಟ್ ಮ್ಯಾಚ್‌ನಲ್ಲಿ 61ರನ್ ಗಳಿಸಿ ಸಚಿನ್ ವಾರ್ನ್‌ಗೆ ಔಟ್ ಆದರೆ, ಡಿಸೆಂಬರ್ 1999 ಮೆಲ್ಬೋರ್ನ್ ಟೆಸ್ಟ್ ಮ್ಯಾಚ್ ನಲ್ಲಿ 116 ರನ್ ಬಾರಿಸಿದ ಸಚಿನ್, ಶೇನ್ ವಾರ್ನ್‌ಗೆ ಬಿಸಿ ಮುಟ್ಟಿಸಿದ್ದರು. ಇಬ್ಬರ ನಡುವಿನ ಆಟ ಮೇಲಾಟ ರೋಚಕವಾಗಿತ್ತು.
ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಏಕದಿನ ಪಂದ್ಯ, ಮಾರ್ಚ್ 2001ರಲ್ಲಿ ಇಂದೋರ್‌ನಲ್ಲಿ ನಡೆಯಿತು. ಈ ಮ್ಯಾಚ್‌ನಲ್ಲಂತೂ ಸಚಿನ್ ಏಟಿಗೆ ವಾರ್ನ್ ಮುಟ್ಟಿ ನೋಡಿಕೊಳ್ಳಬೇಕು ಹಂಗಿತ್ತು. ಸಚಿನ್ 125 ಬಾಲ್‌ಗೆ 139 ರನ್ ಪೇರಿಸಿದರೆ, ಶೇನ್ ವಾರ್ನ್ 10 ಓವರ್ ಮಾಡಿ ಯಾವುದೇ ವಿಕೆಟ್ ಪಡೆಯದೇ 64 ರನ್ ಕೊಟ್ಟಿದ್ದರು. ಇದನ್ನೂ ಓದಿ: ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಇನ್ನಿಲ್ಲ
ಒಟ್ಟಾರೆ ವಿಶ್ವ ಕ್ರಿಕೆಟ್‌ನಲ್ಲಿ ಈ ಇಬ್ಬರು ದಂತ ಕಥೆಗಳು ಮೈದಾನಕ್ಕಿಳಿದರೆ ಸಿಗುತ್ತಿದ್ದ ರೋಮಾಂಚನಕಾರಿ ಆಟ ಎಂದಿಗೂ ಸಿಗಲಾರದು. ಮೈದಾನದಲ್ಲಿ ಎಷ್ಟೇ ಡೆಡ್ಲಿ ವಿರೋಧಿಗಳಾಗಿದ್ದರೂ ವೈಯಕ್ತಿಕವಾಗಿ ಸಂಬಂಧ ತುಂಬಾ ಚೆನ್ನಾಗಿತ್ತು. ನನ್ನ ಕನಸಿನಲ್ಲಿ ಸಚಿನ್ ಬರ್ತಾರೆ ಎಂಬುದನ್ನ ಸ್ವತಃ ಶೇನ್ ವಾರ್ನ್ ಹೇಳಿಕೊಂಡಿದ್ದನ್ನ ಇಡೀ ವಿಶ್ವ ಕ್ರಿಕೆಟ್ ಅಚ್ಚರಿಯಿಂದ ನೋಡಿದ್ದನ್ನೂ ಯಾರೂ ಮರೆಯುಂತಿಲ್ಲ. ಮ್ಯಾಜಿಕಲ್ ಬೌಲರ್ ವೀರ, ವಿಶ್ವ ಕ್ರಿಕೆಟ್‌ನ ವಿಕೆಟ್‌ಗಳ ಸರದಾರ.. ಲೆಗ್ ಸ್ಪಿನ್ ಮೋಡಿಗಾರ.. ಈಗ ಎಲ್ಲರನ್ನು ಆಗಲಿದ್ದಾರೆ. ಅವರ ಆತ್ಮಕ್ಮೆ ಶಾಂತಿ ಸಿಗಲಿ.
ಮುಂಬೈ: ಕ್ರಿಕೆಟ್ ಇಂಗ್ಲೆಂಡ್‍ನಲ್ಲಿ ಹುಟ್ಟಿಕೊಂಡರೂ, ಪ್ರಸ್ತುತ ಹೆಚ್ಚು ಜನಮನ್ನಣೆ ಗಳಿಸಿರುವುದು ಮಾತ್ರ ಭಾರತದಲ್ಲಿ. ಅಷ್ಟೆ ಅಲ್ಲದೆ ಕ್ರಿಕೆಟ್‍ನಲ್ಲಿ ಹೆಚ್ಚು ದಾಖಲೆಗಳ ಒಡೆಯರಾಗಿರುವುದು ಟೀ ಇಂಡಿಯಾದ ಆಟಗಾರರು.
ಮೂರು ಮಾದರಿ ಕ್ರಿಕೆಟ್‍ನಲ್ಲೂ ಭಾರತ ತಂಡ ಮತ್ತು ಆಟಗಾರರು ವಿಶ್ವದ ಗಮನಸೆಳೆದಿದ್ದಾರೆ. ವಿಶ್ವದ ಇತರ ತಂಡಗಳಿಗೂ ಭಾರತ ತಂಡ ಟಕ್ಕರ್ ನೀಡಿದೆ. ಅಲ್ಲದೆ ಬಹುತೇಕ ಕ್ರಿಕೆಟ್‍ನ ದಾಖಲೆಗಳನ್ನು ಭಾರತೀಯ ಆಟಗಾರರು ತಮ್ಮ ಹೆಸರಿನಲ್ಲಿ ಬರೆಸಿಕೊಂಡಿದ್ದಾರೆ. ಇದನ್ನೂ ಓದಿ: ಮಗು ಕಳೆದುಕೊಂಡ ದುಃಖದಲ್ಲೇ ರಣಜಿ ಆಡುತ್ತಿದ್ದ ವಿಷ್ಣು ಸೋಲಂಕಿಗೆ ಮತ್ತೊಂದು ಆಘಾತ
ಟೆಸ್ಟ್ ಕ್ರಿಕೆಟ್‍ನಲ್ಲಿ 200 ಪಂದ್ಯ ಮತ್ತು ಏಕದಿನ ಕ್ರಿಕೆಟ್‍ನಲ್ಲಿ 463 ಪಂದ್ಯಗಳನ್ನಾಡಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆ ನಿರ್ಮಿಸಿದ್ದರೆ, ಇದೀಗ ರೋಹಿತ್ ಶರ್ಮಾ ಟಿ20 ಕ್ರಿಕೆಟ್‍ನಲ್ಲಿ 125 ಪಂದ್ಯಗಳನ್ನಾಡಿ ಅತೀ ಹೆಚ್ಚು ಟಿ20 ಪಂದ್ಯಗಳನ್ನಾಡಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ಮೂಲಕ ಮೂರು ಮಾದರಿ ಕ್ರಿಕೆಟ್‍ನಲ್ಲಿ ಭಾರತೀಯ ಆಟಗಾರರು ಪಾರುಪತ್ಯ ಸಾಧಿಸಿ ವಿಶ್ವ ಕ್ರಿಕೆಟ್‍ನಲ್ಲಿ ಮಿಂಚುಹರಿಸುತ್ತಿದ್ದಾರೆ.
ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ತವರಿನಲ್ಲಿ 100 ಏಕದಿನ ಪಂದ್ಯವನ್ನು ಆಡುವ ಮೂಲಕ ನೂತನ ಮೈಲಿಗಲ್ಲು ನೆಟ್ಟಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಅಹಮದಾಬಾದ್‍ನಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಆಡುವ ಮೂಲಕ ವಿರಾಟ್ ಕೊಹ್ಲಿ ಈ ನೂತನ ಮೈಲಿಗಲ್ಲಿಗೆ ಪಾತ್ರರಾಗಿದ್ದಾರೆ. ಈ ಮೂಲಕ ಭಾರತ ಕಂಡ ಶ್ರೇಷ್ಠ ಆಟಗಾರರಾದ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್ ಅವರೊನ್ನೊಳಗೊಂಡ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಇದನ್ನೂ ಓದಿ: ನೆಟ್ಟಿಗರಿಂದ ಟ್ರೋಲ್ ಆಯ್ತು ಎಸ್‍ಆರ್‌ಹೆಚ್ ಹೊಸ ಜೆರ್ಸಿ
ತವರಿನಲ್ಲಿ ಅತಿ ಹೆಚ್ಚು ಏಕದಿನ ಪಂದ್ಯಗಳನ್ನಾಡಿರುವ ಭಾರತೀಯ ಆಟಗಾರರ ಪೈಕಿ ಸಚಿನ್ ತೆಂಡೂಲ್ಕರ್ 164 ಏಕದಿನ ಪಂದ್ಯಗಳನ್ನು ಆಡಿ 20 ಶತಕ ಸಹಿತ 6,976 ರನ್ ಸಿಡಿಸಿದ್ದಾರೆ. ನಂತರ ಧೋನಿ 127 ಪಂದ್ಯಗಳಿಂದ 7 ಶತಕ ಸಹಿತ 4,351 ರನ್ ಕಳೆಹಾಕಿದ್ದಾರೆ. ಮೊಹಮ್ಮದ್ ಅಜರುದ್ದೀನ್ 113 ಪಂದ್ಯಗಳಿಂದ 3 ಶತಕ ಸಹಿತ 3,163 ರನ್ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಯುವರಾಜ್ ಸಿಂಗ್ ಇದ್ದು, ಯುವಿ 108 ಪಂದ್ಯಗಳಿಂದ 7 ಶತಕ ಸಹಿತ 3,415 ರನ್ ಬಾರಿಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ 100 ಪಂದ್ಯಗಳಿಂದ 19 ಶತಕ ಸಹಿತ 5,002 ರನ್ ಬಾರಿಸಿ 5ನೇ ಆಟಗಾರರಾಗಿ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಇದನ್ನೂ ಓದಿ: ಭಾರತ vs ವೆಸ್ಟ್ ಇಂಡೀಸ್ 2ನೇ ಏಕದಿನ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡ ವಿಶೇಷ ಅತಿಥಿಗಳು
ಕೊಹ್ಲಿ ಈ ಪಟ್ಟಿಯಲ್ಲಿ ಸಚಿನ್ ಬಳಿಕ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ಸಾಧನೆ ಮಾಡಿದ್ದು, ಈ ಪಟ್ಟಿಯಲ್ಲಿ ಅಗ್ರ 5 ಕ್ರಮಾಂಕದಲ್ಲಿರುವವರ ಪೈಕಿ ಕೊಹ್ಲಿ ಮಾತ್ರ ಟೀಂ ಇಂಡಿಯಾದಲ್ಲಿ ಆಡುತ್ತಿದ್ದು, ಉಳಿದವರು ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ ಎಂಬುದು ಗಮನಾರ್ಹವಾಗಿದೆ.
ನವದೆಹಲಿ: ಗಾಯಕಿ ಲತಾ ಮಂಗೇಶ್ಕರ್ ಇಂದು ನಿಧನರಾಗಿದ್ದಾರೆ. ಇವರ ಜೊತೆಗೆ ಹೊಂದಿದ್ದ ಒಡನಾಟವನ್ನು ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರು ನೆನಪು ಮಾಡಿಕೊಂಡಿದ್ದಾರೆ.
ಲತಾ ಮಂಗೇಶ್ಕರ್ ಅವರು ಆಯಿ, ಆಜಿ ಎಂದು ಕರೆಯುವ ಕುಟುಂಬ ಮತ್ತು ಅಭಿಮಾನಿಗಳನ್ನು ಹೊಂದಿದ್ದರು. ಸಚಿನ್ ತೆಂಡೂಲ್ಕರ್ ಅವರು ಲತಾ ಮಂಗೇಶ್ಕರ್ ಅವರನ್ನು ಆಯಿ ಎಂದು ಕರೆಯುತ್ತಿದ್ದರು.
ಲತಾ ಮಂಗೇಶ್ಕರ್ ಅವರು ಹಲವು ಸಂದರ್ಭಗಳಲ್ಲಿ ಕ್ರೀಡೆಯ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. 1983 ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ, ಭಾರತೀಯ ಕ್ರಿಕೆಟ್ ತಂಡಕ್ಕೆ ಮೀಸಲಾಗಿರುವ ಉಚಿತ ಸಂಗೀತ ಕಚೇರಿಯನ್ನು ಆಯೋಜಿಸಿದ್ದರು. 1983ರ ಗೆಲುವಿನ ನಂತರ ಲಂಡನ್‍ನಲ್ಲಿ ನಡೆದ ಐತಿಹಾಸಿಕ ಪಂದ್ಯವನ್ನು ವೀಕ್ಷಿಸಿದ ಲತಾ ಅವರು ಭಾರತ ತಂಡವನ್ನು ಖುದ್ದಾಗಿ ಅಭಿನಂದಿಸಿದರು. 2013 ರಲ್ಲಿ ನಾನು ನಿವೃತ್ತಿ ಘೋಷಿಸಿದಾಗ ಕೂಡ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದರು ಎಂದು ಸಚಿನ್ ಹೇಳಿದ್ದಾರೆ.
ಈ ಹಿಂದೆ ಲತಾ ಮಂಗೇಶ್ಕರ್ ಸಂದರ್ಶನವೊಂದರಲ್ಲಿ ಮಾತನಾಡಿ, ಸಚಿನ್ ನನ್ನನ್ನು ತನ್ನ ತಾಯಿಯಂತೆ ನೋಡಿಕೊಳ್ಳುತ್ತಾನೆ. ಸಚಿನ್‍ಗೆ ಯಾವಾಗಲೂ ತಾಯಿಯಾಗಿರುತ್ತೇನೆ. ಅವನು ನನ್ನನ್ನು ಮೊದಲ ಬಾರಿಗೆ ಆಯಿ ಎಂದು ಕರೆದ ದಿನವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ಅದನ್ನು ಎಂದಿಗೂ ಊಹಿಸಿರಲಿಲ್ಲ. ಇದು ನನಗೆ ಮತ್ತು ನನಗೆ ಆಹ್ಲಾದಕರ ಆಶ್ಚರ್ಯವನ್ನುಂಟುಮಾಡಿತು. ಅವನಂತಹ ಮಗನನ್ನು ಹೊಂದಲು ಆಶೀರ್ವದಿಸುತ್ತೇನೆ, ಎಂದು ಅವರು ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿದರು. ಇದನ್ನೂ ಓದಿ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ
ಸಚಿನ್ ನಿವೃತ್ತರಾಗಲು ನಿರ್ಧರಿಸಿದ್ದು, ಕೇಳಿದಾಗ ನನಗೆ ಎಷ್ಟು ದುಃಖವಾಯಿತು ಎಂದು ನಾನು ನಿಮಗೆ ಹೇಳಲಾರೆ. ಯಾರೂ ಶಾಶ್ವತವಾಗಿ ಮುಂದುವರಿಯಲು ಸಾಧ್ಯವಿಲ್ಲ. ಸಚಿನ್‍ನಂತಹ ಶ್ರೇಷ್ಠರಿಗೂ ಸಾಧ್ಯವಿಲ್ಲ. ಅವನು ಇನ್ನೂ ಸ್ವಲ್ಪ ಹೆಚ್ಚು ಆಡಬಹುದೆಂದು ನಾನು ಭಾವಿಸಿದೆ. ಇದು ಅತ್ಯುತ್ತಮ ಸಮಯ ಎಂದು ಅವರು ಭಾವಿಸಿದರೆ ನಾನು ಅವರ ನಿರ್ಧಾರವನ್ನು ಗೌರವಿಸುತ್ತೇನೆ ಎಂದು ಹೇಳಿದ್ದರು.
ಮುಂಬೈ: ಮಹಾರಾಷ್ಟ್ರದಲ್ಲಿ ಆರಂಭವಾಗುತ್ತಿರುವ ಮಹಾರಾಷ್ಟ್ರ ಓಪನ್ ಟೆನಿಸ್ ಟೂರ್ನಿ ATP 250 ಕ್ರೀಡಾಪಟುಗಳಿಗೆ ಉತ್ತಮವಾದ ವೇದಿಕೆಯಾಗಲಿದೆ ಎಂದು ಭಾರತದ ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
2022ರ ಮಹಾರಾಷ್ಟ್ರ ಓಪನ್ ಟೆನಿಸ್ ಟೂರ್ನಿ ಇಂದಿನಿಂದ ಫೆಬ್ರವರಿ 6ರ ವರೆಗೆ ಪುಣೆಯ ಬಾಳೆವಾಡಿಯಲ್ಲಿ ನಡೆಯಲಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಸಚಿನ್, ಟೆನಿಸ್ ಪ್ರಿಯರಿಗೆ ಮುಂದಿನ ಮಹಾರಾಷ್ಟ್ರ ಓಪನ್ ಟೆನಿಸ್ ಟೂರ್ನಿ ಉತ್ತಮವಾದ ವೇದಿಕೆಯಾಗಲಿದೆ. ಟೆನಿಸ್ ಆಸಕ್ತರು ATP 250 ಟೂರ್ನಿಯನ್ನು ವೀಕ್ಷಿಸಿ ಯಶಸ್ವಿಯಾಗಿಸಿ. ಎಲ್ಲಾ ಸ್ಪರ್ಧಿಗಳಿಗೂ ನನ್ನ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 44 ವರ್ಷಗಳ ಬಳಿಕ ಆಸ್ಟ್ರೇಲಿಯಾ ಓಪನ್ ಗೆದ್ದು ತವರಿನ ಪ್ರಶಸ್ತಿ ಬರ ನೀಗಿಸಿದ ಆಶ್ ಬಾರ್ಟಿ
ಟೂರ್ನಿಯಲ್ಲಿ ಭಾರತದ ಸ್ಟಾರ್ ಟೆನಿಸ್ ಆಟಗಾರರಾದ ರೋಹನ್ ಬೋಪಣ್ಣ ಮತ್ತು ರಾಮ್ ಕುಮಾರ್ ರಮಾಥನ್ ಡಬಲ್ಸ್ ವಿಭಾಗದಲ್ಲಿ ಆಡುತ್ತಿದ್ದಾರೆ. ಈ ಜೋಡಿಗೆ ಮೊದಲ ಪಂದ್ಯ ಡ್ರಾ ಲಭಿಸಿದೆ. ಈ ಟೂರ್ನಿಯಲ್ಲಿ ದಕ್ಷಿಣ ಏಷ್ಯಾದ 16 ಟೆನಿಸ್ ಜೋಡಿಗಳು ಆಡುತ್ತಿವೆ. ಆಮೆರಿಕಾದ ಡಬಲ್ಸ್ ಜೋಡಿ ಜೇಮಿ ಸೆರೆಟಾನಿ ಮತ್ತು ನಿಕೋಲಸ್ ಮನ್ರೋ ಕಾದಾಟದ ಮೂಲಕ ಟೂರ್ನಿ ಆರಂಭಗೊಳ್ಳಲಿದೆ. ಇದನ್ನೂ ಓದಿ: ಲೆಜೆಂಡ್ಸ್ ಕ್ರಿಕೆಟ್ ಲೀಗ್‍ನಲ್ಲಿ ಗಮನಸೆಳೆದ ಮಹಿಳಾ ಅಂಪೈರ್
As a tennis enthusiast, I know many like me will be excited for the upcoming #MaharashtraOpen. It will be a great opportunity for all the Indian aspirants & tennis lovers to watch the ATP 250 event taking place in India.
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಬಿಗ್ ಬಿ ಅಮಿತಾಭ್ ಬಚ್ಚನ್ ತಪ್ಪು ಪ್ರೋಮೋ ಶೇರ್ ಮಾಡಿದ್ದಕ್ಕೆ ಸಚಿನ್ ತಂಡವನ್ನು ಕ್ಷಮೆ ಕೇಳಿದ್ದಾರೆ.
ಅಮಿತಾಭ್ ಬಚ್ಚನ್ ಅವರು ಈ ಹಿಂದೆ ಟ್ವಟ್ಟರ್ ನಲ್ಲಿ, ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು ಹೊಂದಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್(ಎಲ್‍ಎಲ್‍ಸಿ) ಪ್ರೋಮೋವನ್ನು ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಚಿನ್ ತಂಡವು ಈ ಪಂದ್ಯದಲ್ಲಿ ಸಚಿನ್ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ರೀತಿ ಸುಳ್ಳು ಪ್ರೋಮೋ ಹಾಕಿ ಸಚಿನ್ ಅಭಿಮಾನಿಗಳು ದಾರಿತಪ್ಪುವಂತೆ ಮಾಡಬೇಡಿ ಎಂದು ಕೇಳಿಕೊಂಡಿದೆ. ಪರಿಣಾಮ ಬಿಗ್ ಬಿ, ಈ ರೀತಿ ತಪ್ಪು ಆಗಿರುವುದಕ್ಕೆ ನಾನು ವಿಷಾದಿಸುತ್ತೇನೆ. ಪ್ರೋಮೋವನ್ನು ಬೇಕೆಂದು ಹಾಕಿಲ್ಲ. ಸರಿಯಾದ ಮಾಹಿತಿ ಇಲ್ಲದೇ ಈ ರೀತಿ ಅಚಾತುರ್ಯ ಸಂಭವಿಸಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕರ್ಫ್ಯೂ ವೇಳೆ ಕ್ರಿಕೆಟ್ ಆಡಬಹುದೇ – ಯುವಕನ ಪ್ರಶ್ನೆಗೆ ಪೊಲೀಸರ ‘ಸಿಲ್ಲಿ ಪಾಯಿಂಟ್’ ಉತ್ತರ
ನಂತರ ಟ್ವಿಟ್ಟರ್ ನಲ್ಲಿ ಸಚಿನ್ ಹೆಸರಿಲ್ಲದ ಎಲ್‍ಎಲ್‍ಸಿ ಹೊಸ ಪ್ರೋಮೋವನ್ನು ಹಂಚಿಕೊಂಡಿದ್ದಾರೆ.
ಜನವರಿ 20 ರಂದು ಲೆಜೆಂಡ್ಸ್ ಲೀಗ್ ಕ್ರಿಕೆಟ್‍ನ ಆವೃತ್ತಿ ಪ್ರಾರಂಭವಾಗಲಿದೆ. ಕ್ರಿಕೆಟ್ ಅಭಿಮಾನಿಗಳು ಈ ಆವೃತ್ತಿ ಪ್ರಾರಂಭವಾಗುವುದನ್ನು ಕಾಯುತ್ತಿದ್ದಾರೆ. ಈ ಪಂದ್ಯಾವಳಿಯು ಓಮನ್‍ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಅನೇಕ ಮಾಜಿ ಕ್ರಿಕೆಟಿಗರು ಮತ್ತೆ ಆಡುತ್ತಿದ್ದಾರೆ. ಅದಕ್ಕೆ ಅಭಿಮಾನಿಗಳು ಅವರು ಆಡುವುದನ್ನು ಮತ್ತೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಈ ಎಲ್‍ಎಲ್‍ಸಿಗೆ ಅಮಿತಾಬ್ ಬಚ್ಚನ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಎಲ್‍ಎಲ್‍ಸಿ ಪ್ರೋಮೋ ವೀಡಿಯೋದಲ್ಲಿ ಮಾಡಿದ್ದು, ಅದರಲ್ಲಿ ಸಚಿನ್ ತೆಂಡೂಲ್ಕರ್ ಟೂರ್ನಿಮೆಂಟ್‍ನಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅವರ ಹೆಸರನ್ನು ಪ್ರಚಾರದಲ್ಲಿ ಉಲ್ಲೇಖಿಸಲಾಗಿದೆ. ಈ ವೀಡಿಯೋದಲ್ಲಿ ಬಚ್ಚನ್ ಕಾಣಿಸಿಕೊಂಡಿದ್ದರು. ಈ ಹಿನ್ನೆಲೆ ಸಚಿನ್ ತಂಡ, ಅಭಿಮಾನಿಗಳಿಗೆ ತಪ್ಪು ಮಾಹಿತಿ ನೀಡಬೇಡಿ. ಈ ಟೂರ್ನಿಮೆಂಟ್‍ನಲ್ಲಿ ಸಚಿನ್ ಭಾಗವಹಿಸುತ್ತಿಲ್ಲ ಎಂದು ತಿಳಿಸಿದ್ದರು. ಇದನ್ನೂ ಓದಿ: ಜಾಕ್ವೆಲಿನ್ ಕುತ್ತಿಗೆ ಮೇಲೆ ಲವ್ ಬೈಟ್ – ಫೋಟೋ ವೈರಲ್
ಸ್ಪೋಟ್ರ್ಸ್ ಮ್ಯಾನೇಜ್‍ಮೆಂಟ್ ಪ್ರೈವೇಟ್ ಲಿಮಿಟೆಡ್, ತೆಂಡೂಲ್ಕರ್ ಅವರು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ದೃಢಪಡಿಸಿದೆ. ಅದಕ್ಕೆ ಇಂದು ಬಿಗ್ ಬಿ ಎಲ್‍ಎಲ್‍ಸಿ ಹೊಸ ಪ್ರೋಮೋವನ್ನು ಹಂಚಿಕೊಂಡಿದ್ದು, ಕ್ಷಮೆಯನ್ನು ಕೇಳಿದ್ದಾರೆ.
ಮುಂಬೈ: ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ಸಂಚಾರಿ ಪೊಲೀಸರಿಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಧನ್ಯವಾದವನ್ನು ತಿಳಿಸಿದ್ದಾರೆ.
ಟ್ವೀಟ್‌ನಲ್ಲಿ ಏನಿದೆ?: ಕೆಲವು ದಿನಗಳ ಹಿಂದೆ ಆಪ್ತ ಸ್ನೇಹಿತೆಯೊಬ್ಬರು ಗಂಭೀರ ಅಪಘಾತಕ್ಕೆ ಒಳಗಾಗಿದ್ದರು. ದೇವರ ದಯೆ ಹಾಗೂ ಟ್ರಾಫಿಕ್ ಪೋಲೀಸರ ಸಮಯೋಚಿತ ಪ್ರಜ್ಞೆಯಿಂದ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅಪಘಾತಕ್ಕೀಡಾದ ಸ್ನೇಹಿತೆಯನ್ನು ತಕ್ಷಣ ಪೋಲಿಸರು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದು ಸರಿಯಾದ ಚಿಕಿತ್ಸೆ ನೀಡಿದ್ದಾರೆ.
ನಂತರ ದಿನದಲ್ಲಿ ಟ್ರಾಫಿಕ್ ಪೋಲಿಸರನ್ನು ಖುದ್ದಾಗಿ ನಾನೇ ಭೇಟಿಯಾಗಿ ಧನ್ಯವಾದ ಅರ್ಪಿಸಿದ್ದೇನೆ. ನಮ್ಮ ಸುತ್ತಲೂ ಇಂತಹ ವ್ಯಕ್ತಿಗಳು ಹಲವಾರು ಜನರು ಇರುತ್ತಾರೆ. ಅವರು ತಮ್ಮ ಕರ್ತವ್ಯವನ್ನು ಮೀರಿ ಕೆಲಸ ಮಾಡುತ್ತಾರೆ. ಇಂತವರಿಗೆ ಧನ್ಯವಾದ ತಿಳಿಸಲು ಪ್ರತಿಯೊಬ್ಬರು ಸಮಯ ನೀಡಿ. ಅವರು ತಮ್ಮದೇ ಆದ ರೀತಿಯಲ್ಲಿ ಸಮಾಜದಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಬಾಯಿ ಚಪ್ಪರಿಸುತ್ತಾ ಮಿಸಲ್ ಪಾವ್ ಸವಿದ ಸಚಿನ್ – ವೀಡಿಯೋ ವೈರಲ್
ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಮಿಸಲ್ ಪಾವ್ ಸವಿಯುತ್ತಿರುವ ವೀಡಿಯೋವೊಂದನ್ನು ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರದ ಹಲವಾರು ಖಾದ್ಯಗಳಲ್ಲಿ ಮಿಸಲ್ ಪಾವ್ ಕೂಡ ಒಂದು. ಕ್ರಿಕೆಟ್ ದೇವರು ಎಂದೇ ಫೇಮಸ್ ಆಗಿರುವ ಸಚಿನ್ ತೆಂಡೂಲ್ಕರ್ ಈ ಟೆಸ್ಟಿ ಫುಡ್ ಅನ್ನು ಬಹಳ ಇಷ್ಟಪಟ್ಟು ಸವಿದಿದ್ದಾರೆ. ಅಲ್ಲದೇ ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಾನಸಿಕವಾಗಿ, ದೈಹಿಕವಾಗಿ ಫಿಟ್ ಆಗಿರೋದು ಮುಖ್ಯ- ಸಂಯುಕ್ತಾ ಹಾಟ್ ಫೋಟೋ ವೈರಲ್
ಮಿಸಲ್ ಪಾವ್ ಅಂದ್ರೆನೇ ಅದ್ಭುತ. ಇದು ನನಗೆ ಬರ್ಮೀಸ್ ಖಾವೊ ಸೂಯಿಯನ್ನು ನೆನಪಿಸುತ್ತದೆ. ಆದರೆ ಮಹಾರಾಷ್ಟ್ರ ಮಿಸಲ್ ಪಾವ್ ನಂಬರ್1 ಎಂದು ಸಚಿನ್ ವಿಡಿಯೋದಲ್ಲಿ ಹೇಳಿರುವುದನ್ನು ಕಾಣಬಹುದಾಗಿದೆ. ವೀಡಿಯೋ ಜೊತೆಗೆ ಅದು ಭಾನುವಾರ ಅಥವಾ ಸೋಮವಾರ ಆಗಿರಲಿ. ನಾನು ಮಿಸಲ್ ಪಾವ್ ಯಾವ ದಿನವಾದರೂ ಸವಿಯುತ್ತೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆ ಇದೆ: ಬೊಮ್ಮಾಯಿ
25 ಸೆಕೆಂಡ್ ಇರುವ ಈ ವೀಡಿಯೋವನ್ನು ಇಲ್ಲಿಯವರೆಗೂ 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 50 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ ಮತ್ತು ಅನೇಕ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬಂದಿದೆ.