Tag: sachin tendulkar

  • ಶತಕ ಹೊಡೆದು ಸಚಿನ್‌ ದಾಖಲೆ ಸರಿಗಟ್ಟಿದ ಕಿಂಗ್‌ ಕೊಹ್ಲಿ

    ಶತಕ ಹೊಡೆದು ಸಚಿನ್‌ ದಾಖಲೆ ಸರಿಗಟ್ಟಿದ ಕಿಂಗ್‌ ಕೊಹ್ಲಿ

    ಗುವಾಹಟಿ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ವರ್ಷದ ಮೊದಲ ಏಕದಿನ ಪಂದ್ಯದಲ್ಲೇ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಶತಕ ಸಿಡಿಸಿ ಸಚಿನ್‌ ತೆಂಡೂಲ್ಕರ್‌ (Sachin Tendulkar) ಎರಡು ದಾಖಲೆಯನ್ನು ಸರಿಗಟ್ಟಿದ್ದಾರೆ.

    ಇಂದಿನ ಪಂದ್ಯದಲ್ಲಿ ಕೊಹ್ಲಿ 80 ಎಸೆತದಲ್ಲಿ ಶತಕ(Century) ಹೊಡೆದರು. ಈ ಮೂಲಕ ಸ್ವದೇಶದಲ್ಲಿ 20 ಶತಕ ಸಿಡಿಸಿದ ಸಚಿನ್‌ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಸಚಿನ್‌ ತೆಂಡೂಲ್ಕರ್‌ 164 ಪಂದ್ಯಗಳ 102 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರೆ ಕೊಹ್ಲಿ 102 ಪಂದ್ಯಗಳ 99 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಸಚಿನ್‌ 48.68 ಸರಾಸರಿಯಲ್ಲಿ 6,976 ರನ್‌ ಹೊಡೆದರೆ ಕೊಹ್ಲಿ 59.68 ಸರಾಸರಿಯಲ್ಲಿ 5,133 ರನ್‌ ಹೊಡೆದಿದ್ದಾರೆ.

    ಏಕದಿನದಲ್ಲಿ ಕೊಹ್ಲಿ ಒಟ್ಟು 45 ಶತಕ ಹೊಡೆದಿದ್ದು ಲಂಕಾ ವಿರುದ್ಧವೇ 9 ಶತಕ ಬಾರಿಸಿದ್ದಾರೆ. ಈ ಹಿಂದೆ ಸಚಿನ್‌  ಲಂಕಾ ವಿರುದ್ಧ 9 ಶತಕ ಹೊಡೆದಿದ್ದರು. ಮುಂದಿನ ಪಂದ್ಯದಲ್ಲಿ ಶತಕ ಹೊಡೆದರೆ ಕೊಹ್ಲಿ ಎರಡು ದಾಖಲೆಯನ್ನು ಮುರಿಯಲಿದ್ದಾರೆ.

    19.4 ಓವರ್‌ನಲ್ಲಿ ಕ್ರೀಸ್‌ಗೆ ಬಂದಿದ್ದ ಕೊಹ್ಲಿ ಅಂತಿಮವಾಗಿ 48.2 ಓವರ್‌ ತನಕ ಇದ್ದು 113 ರನ್‌( 87 ಎಸೆತ, 12 ಬೌಂಡರಿ, 1 ಸಿಕ್ಸರ್‌) ಗಳಿಸಿ ಔಟಾದರು.

    ಟಾಸ್‌ ಸೋತು ಬ್ಯಾಟಿಂಗ್‌ ಇಳಿದ ಭಾರತದ ಪರ ಮೊದಲ ವಿಕೆಟಿಗೆ ರೋಹಿತ್‌ ಶರ್ಮಾ ಮತ್ತು ಶುಭಮನ್‌ ಗಿಲ್‌ 118 ಎಸೆತಗಳಿಗೆ 143 ರನ್‌ ಜೊತೆಯಾಟ ನೀಡಿದರು. ಶುಭಮನ್‌ ಗಿಲ್‌ 70 ರನ್‌(60 ಎಸೆತ, 11 ಬೌಂಡರಿ) ಹೊಡೆದರೆ ರೋಹಿತ್‌ ಶರ್ಮಾ 83 ರನ್‌( 67 ಎಸೆತ, 9 ಬೌಂಡರಿ, 3 ಸಿಕ್ಸರ್)‌ ಹೊಡೆದು ಔಟಾದರು.

    ಶ್ರೇಯಸ್‌ ಅಯ್ಯರ್‌ 28 ರನ್, ಕೆಎಲ್‌ ರಾಹುಲ್‌ 39 ರನ್‌ ಹೊಡೆದರು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 373 ರನ್‌ ಗಳಿಸಿತು.

    ರನ್‌ ಏರಿದ್ದು ಹೇಗೆ?
    50 ರನ್‌ 40 ಎಸೆತ
    100 ರನ್‌ 89 ಎಸೆತ
    150 ರನ್‌ 125 ಎಸೆತ
    200 ರನ್‌ 162 ಎಸೆತ
    250 ರನ್‌ 213 ಎಸೆತ
    300 ರನ್‌ 244 ಎಸೆತ
    350 ರನ್‌ 280 ಎಸೆತ
    373 ರನ್‌ 300 ಎಸೆತ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶತಕ ಸಿಡಿಸಿ ಅಪ್ಪನಂತೆ ಸಂಭ್ರಮಿಸಿದ ಅರ್ಜುನ್ ತೆಂಡೂಲ್ಕರ್

    ಶತಕ ಸಿಡಿಸಿ ಅಪ್ಪನಂತೆ ಸಂಭ್ರಮಿಸಿದ ಅರ್ಜುನ್ ತೆಂಡೂಲ್ಕರ್

    ಪಣಜಿ: ರಾಜಸ್ಥಾನ (Rajasthan) ವಿರುದ್ಧದ ರಣಜಿ ಪಂದ್ಯದಲ್ಲಿ (Ranji Trophy) ಗೋವಾ (Goa) ಪರ ತನ್ನ ಮೊದಲ ಪಂದ್ಯವಾಡುತ್ತಿರುವ ಅರ್ಜುನ್ ತೆಂಡೂಲ್ಕರ್ (Arjun Tendulkar) ತನ್ನ ಅಪ್ಪ ಸಚಿನ್ ತೆಂಡೂಲ್ಕರ್ (Sachin Tendulkar) ಶತಕ ಸಿಡಿಸಿದ ಬಳಿಕ ಸಂಭ್ರಮಿಸುತ್ತಿದ್ದಂತೆ ಸಂಭ್ರಮಿಸಿದ್ದಾರೆ.

     

     

    ಅರ್ಜುನ್ ತೆಂಡೂಲ್ಕರ್ ಈ ಹಿಂದೆ ಮುಂಬೈ (Mumbai) ಪರ ಆಡುತ್ತಿದ್ದರು. ಈ ಬಾರಿ ರಣಜಿ ಪಂದ್ಯದಲ್ಲಿ ಗೋವಾ ಪರ ಆಡುತ್ತಿದ್ದಾರೆ. ಪ್ರಸ್ತುತ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ 120 ರನ್ (207 ಎಸೆತ, 16 ಬೌಂಡರಿ, 2 ಸಿಕ್ಸ್) ಶತಕ ಬಾರಿಸಿದರು. ಇದು ಅರ್ಜುನ್ ತೆಂಡೂಲ್ಕರ್ ಗೋವಾ ಪರ ಆಡಿದ ಮೊದಲ ರಣಜಿ ಪಂದ್ಯವಾಗಿದೆ. ಶತಕ ಸಿಡಿಸುತ್ತಿದ್ದಂತೆ ಅರ್ಜುನ್ ತೆಂಡೂಲ್ಕರ್ ತಮ್ಮ ತಂದೆ ಸಚಿನ್ ತೆಂಡೂಲ್ಕರ್ ಶತಕ ಸಿಡಿಸಿದ ಬಳಿಕ ಬ್ಯಾಟ್ ಮೇಲೆತ್ತಿ ಆಕಾಶ ನೋಡುವಂತೆ ತಾವು ಕೂಡ ಸಂಭ್ರಮಿಸಿದರು. ಇದನ್ನೂ ಓದಿ: ತಂದೆಯ ಸಾಧನೆ ಸರಿಗಟ್ಟಿದ ಮಗ – ಮೊದಲ ರಣಜಿ ಪಂದ್ಯದಲ್ಲೇ ಅರ್ಜುನ್‌ ತೆಂಡೂಲ್ಕರ್‌ ಶತಕ

    15 ವರ್ಷದಲ್ಲೇ ರಣಜಿ ಕ್ಯಾಪ್ ಧರಿಸಿದ್ದ ಸಚಿನ್ 1988ರಲ್ಲಿ ತಮ್ಮ ಮೊದಲ ರಣಜಿ ಪಂದ್ಯದಲ್ಲಿ ಗುಜರಾತ್ ವಿರುದ್ಧ ಅಜೇಯ 100 ರನ್ ಹೊಡೆದಿದ್ದರು. ಇದೀಗ 23 ವರ್ಷದ ಅರ್ಜುನ್ ತೆಂಡೂಲ್ಕರ್ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿ ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಇದನ್ನೂ ಓದಿ: ಡಿ.18ರ ಫೈನಲ್‌ ನನ್ನ ಕೊನೆಯ ವಿಶ್ವಕಪ್‌ ಪಂದ್ಯ – ನಿವೃತ್ತಿ ಖಚಿತಪಡಿಸಿದ ಮೆಸ್ಸಿ

    https://twitter.com/Cric_GRH/status/1603057187139772416

    ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ದುಕೊಂಡಿತು. ಗೋವಾ ಮೊದಲು ಬ್ಯಾಟಿಂಗ್ ಮಾಡಿ ಸುಯಶ್ ಪ್ರಭುದೇಸಾಯಿ 202 ರನ್ (416 ಎಸೆತ, 29 ಬೌಂಡರಿ), ಅರ್ಜುನ್ ತೆಂಡೂಲ್ಕರ್ 120 ರನ್ ಮತ್ತು ಸ್ನೇಹಲ್ ಸುಹಾಸ್ ಕೌಠಂಕರ್ 59 (104 ಎಸೆತ, 7 ಬೌಂಡರಿ, 1 ಸಿಕ್ಸ್) ರನ್ ನೆರವಿನಿಂದ 174 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 547 ರನ್ ಬಾರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ವಿರಾಟ್ ಶತಕದ ಸರದಾರ – ಸಚಿನ್ ನಂತರ 2ನೇ ಸ್ಥಾನದಲ್ಲಿ ಕೊಹ್ಲಿ

    ವಿರಾಟ್ ಶತಕದ ಸರದಾರ – ಸಚಿನ್ ನಂತರ 2ನೇ ಸ್ಥಾನದಲ್ಲಿ ಕೊಹ್ಲಿ

    ಢಾಕಾ: ಬಾಂಗ್ಲಾದೇಶ (BanglaDesh) ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (International Cricket) ಅತಿಹೆಚ್ಚು ಶತಕ ಸಿಡಿಸಿದ ವಿಶ್ವದ ಹಾಗೂ ಭಾರತದ 2ನೇ ಆಟಗಾರನಾಗಿದ್ದಾರೆ.

    ಬಾಂಗ್ಲಾದೇಶ ವಿರುದ್ಧದ ರಣರೋಚಕ ಪಂದ್ಯದಲ್ಲಿ 91 ಎಸೆತಗಳನ್ನು ಎದುರಿಸಿದ ಕಿಂಗ್ ಕೊಹ್ಲಿ 2 ಸಿಕ್ಸರ್ ಹಾಗೂ 11 ಬೌಂಡರಿಗಳು ಸೇರಿ 113 ರನ್ ಕಲೆಹಾಕಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ತಂಡದ ಕೋಚ್ ರಿಕಿ ಪಾಂಟಿಂಗ್ (Ricky Ponting) ಅವರ ದಾಖಲೆಯನ್ನ ಪುಡಿ ಮಾಡಿದ್ದಾರೆ. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ಕೊಹ್ಲಿ ಕಿಂಗ್ – ನೂತನ ವಿಶ್ವದಾಖಲೆ

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ಬ್ಯಾಟ್ಸ್‌ಮ್ಯಾನ್‌ಗಳ ಪಟ್ಟಿಯಲ್ಲಿ ಇದೀಗ ವಿರಾಟ್ ಕೊಹ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ (ODI Cricket) 100 ಶತಕಗಳನ್ನು (ಟೆಸ್ಟ್‌ನಲ್ಲಿ 51, ಏಕದಿನ 49) ಗಳಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ವಿಶ್ವದ ನಂ.1 ಸ್ಥಾನದಲ್ಲಿದ್ದಾರೆ. ಇನ್ನೂ 71 ಶತಕ (ಟೆಸ್ಟ್‌ನಲ್ಲಿ  41, ಏಕದಿನ 30) ಬಾರಿಸಿದ್ದ ರಿಕಿ ಪಾಂಟಿಂಗ್ 2ನೇ ಸ್ಥಾನದಲ್ಲಿದ್ದರು. ಇದೀಗ 72 ಶತಕ (ಟೆಸ್ಟ್ 27, ಏಕದಿನದಲ್ಲಿ 44) ಬಾರಿಸಿ ವಿರಾಟ್ ಕೊಹ್ಲಿ ರಿಕಿ ಪಾಂಟಿಂಗ್ ದಾಖಲೆಯನ್ನ ಸರಿಗಟ್ಟಿದ್ದಾರೆ. ಅಲ್ಲದೇ ಈವರೆಗೆ 1,172 ಬೌಂಡರಿಗಳನ್ನು ಸಿಡಿಸಿ ಅತ್ಯಧಿಕ ಬೌಂಡರಿ ಬಾರಿಸಿದ ವಿಶ್ವದ 5ನೇ ಆಟಗಾರನಾಗಿದ್ದಾರೆ. ಇದನ್ನೂ ಓದಿ: India vs Bangladesh 3rd ODI – ಭಾರತಕ್ಕೆ 227 ರನ್‌ಗಳ ಭರ್ಜರಿ ಜಯ

    ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಸೋತು ಕ್ರೀಸ್‌ಗಿಳಿದ ಟೀಂ ಇಂಡಿಯಾ (Team India) 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್ ಗಳಿಸಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಬಾಂಗ್ಲಾ ತಂಡ 34 ಓವರ್‌ಗಳಲ್ಲಿ 182 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ 227 ರನ್‌ಗಳ ಬೃಹತ್ ಮೊತ್ತದ ಅಂತರದಲ್ಲಿ ಜಯ ಸಾಧಿಸಿತು.

    Live Tv
    [brid partner=56869869 player=32851 video=960834 autoplay=true]

  • ಬೆಳಗಾವಿಯಲ್ಲಿ ಕ್ರಿಕೆಟ್ ದೇವರು – ಗೂಡಂಗಡಿಯಲ್ಲಿ ಟೀ ಸವಿದ ತೆಂಡೂಲ್ಕರ್

    ಬೆಳಗಾವಿಯಲ್ಲಿ ಕ್ರಿಕೆಟ್ ದೇವರು – ಗೂಡಂಗಡಿಯಲ್ಲಿ ಟೀ ಸವಿದ ತೆಂಡೂಲ್ಕರ್

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ (Belagavi) ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ರಸ್ತೆ ಬದಿಯ ಗೂಡಂಗಡಿಯೊಂದರಲ್ಲಿ ಚಹಾ (Tea) ಸೇವಿಸಿದ ವೀಡಿಯೋ ಒಂದು ವೈರಲ್ ಆಗ ತೊಡಗಿದೆ.

    ಇಂದು ಮುಂಬೈ, ಬೆಳಗಾವಿ ಮಾರ್ಗವಾಗಿ ಗೋವಾಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬೆಳಗಾವಿಯಲ್ಲಿ ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಟೀ ಕುಡಿದು ಬಳಿಕ ತೆರಳಿದ್ದಾರೆ. ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಗೆ ಟೀಂ ಇಂಡಿಯಾದ T20 ನಾಯಕತ್ವ

    ತಾಲೂಕಿನ ಹೊರವಲಯದಲ್ಲಿರುವ ಮಚ್ಛೆ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಕ್ಕದಲ್ಲಿರುವ ವೈಜು ನಿತೂರ್ಕರ್ ಎಂಬುವವರ ಫೌಜಿ ಟೀ ಸ್ಟಾಲ್‍ನಲ್ಲಿ ಸಚಿನ್ ತೆಂಡೂಲ್ಕರ್ ಚಹಾ ಸೇವಿಸಿದ್ದಾರೆ. ಈ ವೇಳೆ ಅಲ್ಲಿದ್ದ ಸಾರ್ವಜನಿಕರು ಸಚಿನ್ ಕಂಡು ಸೆಲ್ಫಿ, ವೀಡಿಯೋ ಮತ್ತು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಮತ್ತೆ ಟೀಂ ಇಂಡಿಯಾ ಸೇರಲಿದ್ದಾರೆ ಜಡೇಜಾ

    Live Tv
    [brid partner=56869869 player=32851 video=960834 autoplay=true]

  • ಕ್ರಿಕೆಟ್ ದೇವರು ಸಚಿನ್ ಪುತ್ರಿಯ ಜೊತೆ ಶುಭಮನ್ ಗಿಲ್ ಲವ್ ಬ್ರೇಕ್ ಅಪ್

    ಕ್ರಿಕೆಟ್ ದೇವರು ಸಚಿನ್ ಪುತ್ರಿಯ ಜೊತೆ ಶುಭಮನ್ ಗಿಲ್ ಲವ್ ಬ್ರೇಕ್ ಅಪ್

    ಭಿಮಾನಿಗಳ ಪಾಲಿನ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪುತ್ರ ಸಾರಾ ತೆಂಡೂಲ್ಕರ್ ಮತ್ತು ಕ್ರಿಕೆಟಿಗ ಶುಭಮನ್ ಗಿಲ್ ನಡುವೆ ಪ್ರೀತಿ ಗೀತಿ ಇತ್ಯಾದಿ ಇದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಚಾರ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇಬ್ಬರೂ ಅದೆಷ್ಟೋ ಬಾರಿ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಗಳಿಗೆ ಆಹಾರವಾಗಿದ್ದಾರೆ. ಆದರೆ, ಸಾರಾ ಮತ್ತು ಶುಭಮನ್ ಬಾಂಧವ್ಯ ಚೆನ್ನಾಗಿ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಟೀಮ್ ಇಂಡಿಯಾದ ಪ್ರಭಾವಿ ಕ್ರಿಕೆಟಿಗ, ಸ್ಟಾರ್ ಓಪನರ್ ಎಂದೇ ಖ್ಯಾತರಾಗಿರುವ ಶುಭಮನ್ ಗಿಲ್ ಮತ್ತು ತೆಂಡೂಲ್ಕರ್ ಪುತ್ರಿ ಸಾರಾ ಇಬ್ಬರೂ ಒಬ್ಬರಿಗೊಬ್ಬರು ಇಷ್ಟಪಟ್ಟಿದ್ದರು ಎನ್ನುವುದು ಜಗಜ್ಜಾಹೀರು. ಆದರೂ, ಇಬ್ಬರೂ ಈ ಕುರಿತು ಪ್ರತಿಕ್ರಿಯೆ ನೀಡಿರಲಿಲ್ಲ. ಹಾಗಂತ ಅದು ಕೇವಲ ಗಾಸಿಪ್ ಕೂಡ ಆಗಿರಲಿಲ್ಲ. ಇಬ್ಬರೂ ಪ್ರೀತಿಸುತ್ತಿರುವ ವಿಚಾರ ಕ್ರಿಕೆಟ್ ತಂಡದ ಬಹುತೇಕರಿಗೆ ಗೊತ್ತಿತ್ತು. ಇದೀಗ ಆ ಪ್ರೀತಿ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ:‘ಜೊತೆ ಜೊತೆಯಲಿ’ ಅನಿರುದ್ಧ ಗಲಾಟೆ ಧಾರವಾಡಕ್ಕೆ ಶಿಫ್ಟ್: ಪ್ರಕರಣ ತಿಳಿಗೊಳಿಸಲು ಸ್ನೇಹಿತರ ಮನವಿ

    ಲವ್ ಬ್ರೇಕ್ ಅಪ್ ನಂತರ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿರುವುದು ಬೆಳಕಿಗೆ ಬಂದಿದೆ. ಈ ಜೋಡಿ ಆಗಾಗ್ಗೆ ಅಭಿನಂದನೆಗಳನ್ನು ಮತ್ತು ಶುಭಾಶಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಬಾರಿ ವಿನಿಮಯ ಮಾಡಿಕೊಂಡಿದಿದೆ. ಇದೀಗ ಇಬ್ಬರೂ ಅನ್ ಫಾಲೋ ಮಾಡುವ ಮೂಲಕ ಅನುಮಾನ ಹುಟ್ಟು ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • French Open 2022 ಗಾಯಗೊಂಡ ಅಲೆಕ್ಸಾಂಡರ್ ಜೆರೆವ್ – ಕ್ರೀಡಾ ಸ್ಪೂರ್ತಿ ಮೆರೆದ ನಡಾಲ್ ನಡೆಗೆ ಮೆಚ್ಚುಗೆ

    French Open 2022 ಗಾಯಗೊಂಡ ಅಲೆಕ್ಸಾಂಡರ್ ಜೆರೆವ್ – ಕ್ರೀಡಾ ಸ್ಪೂರ್ತಿ ಮೆರೆದ ನಡಾಲ್ ನಡೆಗೆ ಮೆಚ್ಚುಗೆ

    ಪ್ಯಾರಿಸ್: ಫ್ರೆಂಚ್ ಓಪನ್ 2022 ಪುರುಷರ ಸಿಂಗಲ್ಸ್ ಸೆಮಿಫೈನಲ್‍ನಲ್ಲಿ ಸ್ಪೇನ್‍ನ ರಾಫೆಲ್ ನಡಾಲ್ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಜೆರೆವ್ ನಡುವಿನ ಕಾದಾಟದಲ್ಲಿ ಜೆರೆವ್ ಗಾಯಗೊಂಡು ಹೊರನಡೆದರು. ಈ ವೇಳೆ ರಾಫೆಲ್ ನಡಾಲ್ ತೋರಿದ ಕ್ರೀಡಾ ಸ್ಪೂರ್ತಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಫ್ರೆಂಚ್ ಓಪನ್‍ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಚೊಚ್ಚಲ ಬಾರಿಗೆ ಸೆಮಿಫೈನಲ್‍ಗೆ ಪ್ರವೇಶ ಪಡೆದಿದ್ದ ಜೆರೆವ್ ಸೆಮಿಫೈನಲ್‍ನಲ್ಲಿ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಚೊಚ್ಚಲ ಬಾರಿಗೆ ಫ್ರೆಂಚ್ ಓಪನ್ ಫೈನಲ್‍ಗೇರುವ ಕನಸು ಕಂಡಿದ್ದ ಅಲೆಕ್ಸಾಂಡರ್ ಜೆರೆವ್ ಕನಸು ಭಗ್ನವಾಗಿದೆ. ಈ ನಡುವೆ ನಡಾಲ್ ಜೆರೆವ್ ಗಾಯಗೊಂಡು ಮೈದಾನ ತೊರೆಯುವಾಗ ಅವರೊಂದಿಗೆ ಹೆಜ್ಜೆ ಹಾಕಿ ಧೈರ್ಯ ತುಂಬಿದ ನಡೆಗೆ ಕ್ರೀಡಾ ಪ್ರೇಮಿಗಳಿಂದ ಮೆಚ್ಚುಗೆ ಮಾತು ಕೇಳಿಬರುತ್ತಿದೆ.

    ನಡಾಲ್ ಹಾಗೂ ಜೆರೆವ್ ನಡುವಿನ ಸೆಮಿಫೈನಲ್ ಕಾದಾಟ ಆರಂಭವಾಗದಾಗಿನಿಂದಲೂ ರೋಚಕವಾಗಿ ಕೋಡಿತ್ತು. 91 ನಿಮಿಷಗಳ ಕಾಲ ನಡೆದ ಮೊದಲ ಸೆಟ್‍ನ್ನು ಟೈ ಬ್ರೇಕರ್ ಮೂಲಕ 7-6 (10-8) ಗೆದ್ದಿದ್ದ ನಡಾಲ್‍ಗೆ 2ನೇ ಸೆಟ್‍ನಲ್ಲೂ ಭಾರೀ ಪೈಪೋಟಿ ಎದುರಾಯಿತು. 6-6 ಅಂಕಗಳಿಂದ ತೀವ್ರ ಜಿದ್ದಾಜಿದ್ದಿನ ಆಟದಲ್ಲಿ ಇಬ್ಬರೂ ಆಟಗಾರರು ಸಮಬಲ ಸಾಧಿಸಿದ್ದರು. ಆ ಬಳಿಕ ಕೆಲ ಕ್ಷಣಗಳಲ್ಲಿ ಜೆರೆವ್ ಜಾರಿ ಬಿದ್ದು ತಮ್ಮ ಬಲ ಮೊಣಕಾಲು ಗಾಯಮಾಡಿಕೊಂಡರು. ಕೂಡಲೇ ಅಂಕಣದಲ್ಲಿ ಕುಸಿದು ಬಿದ್ದ ಜೆರೆವ್ ನೋವಿನಿಂದ ಕಣ್ಣೀರಿಟ್ಟರು. ನಂತರ ಜೆರೆವ್‍ರನ್ನು ವಿಲ್‍ಚೇರ್ ಮೂಲಕ ಅಂಕಣದಿಂದ ಹೊರ ಕರೆದುಕೊಂಡುಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಪಂದ್ಯ ಬಿಟ್ಟುಕೊಡಲು ನಿರ್ಧರಿಸಿದರು. ಇದಾದ ಬಳಿಕ ಊರುಗೋಲು ಹಿಡಿದು ಅಂಕಣಕ್ಕೆ ಬಂದ ಜೆರೆವ್ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿ ನಡಾಲ್‍ರನ್ನು ಅಭಿನಂದಿಸಿದರು. ಈ ವೇಳೆ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಎದ್ದುನಿಂತು ಅಭಿನಂದಿಸಿದರು.

    https://twitter.com/VeroMontes_A/status/1532760372637310977

    ಇತ್ತ ಜೆರೆವ್ ಗಾಯಗೊಂಡ ತಕ್ಷಣ ಬಳಿ ಬಂದು ನಡಾಲ್ ಗಾಯದ ಬಗ್ಗೆ ತಿಳಿದುಕೊಂಡರು. ಆ ಬಳಿಕ ಮೈದಾನ ತೊರೆದು ಚಿಕಿತ್ಸೆ ಪಡೆದು ಕ್ರೀಡಾಂಗಣಕ್ಕೆ ಆಗಮಿಸಿ ಪಂದ್ಯ ಬಿಟ್ಟುಕೊಟ್ಟು ಊರುಗೋಲು ಹಿಡಿದುಕೊಂಡು ಹೊರ ಹೋಗುತ್ತಿದ್ದಂತೆ ನಡಾಲ್ ಅವರೊಂದಿಗೆ ಹೆಜ್ಜೆ ಹಾಕಿದರು.

    ನಡಾಲ್ ಈ ಕ್ರೀಡಾ ಸ್ಪೂರ್ತಿ ಕಂಡು ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ ಸೇರಿದಂತೆ ಸಾವಿರಾರು ಕ್ರೀಡಾ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದೀಗ ನಡಾಲ್ ಭಾನುವಾರ ನಡೆಯಲಿರುವ ಫೈನಲ್‍ನಲ್ಲಿ ನಾರ್ವೆಯ ಆಟಗಾರ ಕ್ಯಾಸ್ಪರ್ ರೂಡ್ ಅವರನ್ನು ಎದುರಿಸಲಿದ್ದಾರೆ.

  • ಮಗ ಅರ್ಜುನ್‍ಗೆ ಐಪಿಎಲ್‍ನಲ್ಲಿ ಸಿಗದ ಅವಕಾಶ – ಕೊನೆಗೂ ಮೌನ ಮುರಿದ ತೆಂಡೂಲ್ಕರ್

    ಮಗ ಅರ್ಜುನ್‍ಗೆ ಐಪಿಎಲ್‍ನಲ್ಲಿ ಸಿಗದ ಅವಕಾಶ – ಕೊನೆಗೂ ಮೌನ ಮುರಿದ ತೆಂಡೂಲ್ಕರ್

    ಮುಂಬೈ: ಐಪಿಎಲ್ 2022ರ ಟೂರ್ನಿಯಲ್ಲಿ ಮುಂಬೈ ತಂಡದ ಪರ ಲೀಗ್ ಪಂದ್ಯಗಳಲ್ಲಿ ಆಡಲು ಅರ್ಜುನ್‍ಗೆ ಒಂದೇ ಒಂದು ಅವಕಾಶ ಸಿಗದ ಕಾರಣ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮೌನ ಮುರಿದಿದ್ದಾರೆ.

    ಈ ಕುರಿತು ಮಂಗಳವಾರ ಯೂಟ್ಯೂಬ್ ಚಾನೆಲ್‍ವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಮುಂಬೈ ಫ್ರಾಂಚೈಸಿಯ ಮಾರ್ಗದರ್ಶಕರಾದ ಸಚಿನ್, ಮಗ ಅರ್ಜುನ್‍ಗೆ ನೀಡಿದ್ದ ಕೆಲ ಸಲಹೆಗಳನ್ನು ಬಹಿರಂಗಪಡಿಸಿದ್ದಾರೆ. ಅರ್ಜುನ್‍ಗೆ ಕೇವಲ ತನ್ನ ಆಟದ ಮೇಲೆ ಗಮನಹರಿಸು ಅಂತ ಹೇಳಿದ್ದೆ. ತಂಡದ ಆಯ್ಕೆಯ ಭಾಗದ ಬಗ್ಗೆ ಯೋಚಿಸುವುದಿಲ್ಲ. ನಾನು ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗುವುದಿಲ್ಲ. ನಾನು ಆ ಭಾಗವನ್ನು ನಿರ್ವಹಣೆಗೆ ಮಾತ್ರ ಬಿಡುತ್ತೇನೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಇಂದು ಎಲಿಮಿನೇಟರ್ ಪಂದ್ಯ – ಡುಪ್ಲೆಸಿ ಬಳಗಕ್ಕೆ ನಿರ್ಣಾಯಕ

    ಎಡಗೈ ಮಧ್ಯಮ ವೇಗಿ ಅರ್ಜುನ್‍ರನ್ನು ಈ ವರ್ಷದ ಐಪಿಎಲ್ 2022ರ ಮೆಗಾ ಹರಾಜಿನಲ್ಲಿ 30 ಲಕ್ಷ ನೀಡಿ ಖರೀದಿಸಲಾಗಿತ್ತು. ಆದರೆ ಲೀಗ್ ಹಂತದ ಒಂದೇ ಒಂದು ಪಂದ್ಯದಲ್ಲೂ ಅವರಿಗೆ ಆಡಲೂ ಅವಕಾಶ ಸಿಕ್ಕಿರಲಿಲ್ಲ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಮಿಲ್ಲರ್‌ ಹ್ಯಾಟ್ರಿಕ್‌ ಸಿಕ್ಸ್‌ – ಫೈನಲ್‌ಗೆ ಗುಜರಾತ್‌ ಎಂಟ್ರಿ

    ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಆಡಿರುವ 14 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದ್ದು, 10 ಪಂದ್ಯಗಳಲ್ಲಿ ಸೋಲು ಕಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಕ್ರಮವಾಗಿ ಕೊನೆ ಸ್ಥಾನದಲ್ಲಿದೆ. ಟೂರ್ನಿಯ ಆರಂಭದಿಂದಲೂ ಸ್ಥಿರ ಪದರ್ಶನ ನೀಡಲು ಎಡವಿದ್ದ ಮುಂಬೈ, ಪ್ಲೇ ಆಫ್ ಹಂತಕ್ಕೇರಲು ವಿಫಲವಾಗಿದೆ.

  • ವಿಶ್ವ ತಾಯಂದಿರ ದಿನಕ್ಕೆ ಶುಭಕೋರಿದ ಟಾಪ್ ಕ್ರಿಕೆಟರ್ಸ್- ನಿಮ್ಮ ಶಕ್ತಿಗೆ ಸಾಟಿಯಿಲ್ಲವೆಂದ ಕೊಹ್ಲಿ

    ವಿಶ್ವ ತಾಯಂದಿರ ದಿನಕ್ಕೆ ಶುಭಕೋರಿದ ಟಾಪ್ ಕ್ರಿಕೆಟರ್ಸ್- ನಿಮ್ಮ ಶಕ್ತಿಗೆ ಸಾಟಿಯಿಲ್ಲವೆಂದ ಕೊಹ್ಲಿ

    ಮುಂಬೈ: ಪ್ರತಿಯೊಬ್ಬರ ಜೀವನಕ್ಕೂ ಅಮ್ಮನೇ ಪ್ರಪಂಚ. ಆಕೆಯ ತ್ಯಾಗ, ಪರಿಶ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಆದರೆ ಅಮ್ಮನಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೂ ಒಂದು ದಿನವಿದೆ. ಅದಕ್ಕಾಗಿಯೇ ಪ್ರತಿ ವರ್ಷವು ಮೇ ತಿಂಗಳ 2ನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಮೇ 8 ರಂದು ಆಚರಿಸಲಾಗುತ್ತಿದೆ.

    SACHIN

    ಈ ದಿನದಂದು ಪ್ರತಿಯೊಬ್ಬರು ತಮ್ಮ ಅಮ್ಮನಿಗಾಗಿ ವಿಶೇಷ ಉಡುಗೊರೆಗಳನ್ನು ನೀಡಿ, ಶುಭಾಶಯ ಕೋರುತ್ತಾರೆ. ಇಡೀ ಭಾರತವೇ ತಾಯಂದಿರ ದಿನವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ ಪ್ರಮುಖ ಕ್ರಿಕೆಟಿಗರು ಅಮ್ಮನನ್ನು ನೆನೆದು ಶುಭಕೋರಿದ್ದಾರೆ. ಭಾರತೀಯ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಮಾಜಿ ನಾಯಕ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ಕ್ರಿಕೆಟಿಗ ಕೇನ್ ವಿಲಿಯಮ್ಸನ್ ಮೊದಲಾದವರು ತಮ್ಮ ತಾಯಂದಿರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಶುಭಕೋರಿದ್ದಾರೆ.  ಇದನ್ನೂ ಓದಿ: ಹೈದರಾಬಾದ್ ವಿರುದ್ಧ ಸ್ಫೋಟಕ ಆಟ – ಹೌ ಇಸ್ ದಿ ಜೋಶ್ ಎಂದ ವಾರ್ನರ್

    RCB ಆರಂಭಿಕ ಆಟಗಾರರೂ ಆಗಿರುವ ವಿರಾಟ್‌ಕೊಹ್ಲಿ ಟ್ವಿಟ್ಟರ್‌ನಲ್ಲಿ, ಎಲ್ಲಾ ತಾಯಂದಿರಿಗೂ ಬಹಳಷ್ಟು ಪ್ರೀತಿ ಮತ್ತು ಸಂತೋಷ ತರಲಿ. ನಿಮ್ಮ ಶಕ್ತಿಗೆ ಸಾಟಿಯಿಲ್ಲ. ನಿಮೆಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು ಎಂದು ಟ್ವಿಟ್ಟರ್ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಯಜಮಾನ ಪ್ರೀಮಿಯರ್ ಲೀಗ್ ಶುರು: ಡಾ.ವಿಷ್ಣು ಹೆಸರಿನಲ್ಲಿ ಅಭಿಮಾನಿಗಳ ಅಭಿಮಾನ

    ಸಚಿನ್ ತೆಂಡೂಲ್ಕರ್ ಸಹ ತಮ್ಮ ದತ್ತು ಪಡೆದ ಬೆಕ್ಕಿನೊಂದಿಗೆ ಅಮ್ಮನ ಚಿತ್ರವನ್ನು ಹಂಚಿಕೊಂಡಿದ್ದಾರೆ. ನಮಗೆ ಜಗತ್ತಿನಲ್ಲಿ ಸಾವಿರ ಚಿಂತೆಗಳಿರಬಹುದು. ಆದರೆ ನಾವು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿದ್ದೇವೆಯೇ ಎಂಬುದೇ ನಮ್ಮ ತಾಯಿಯ ಮುಖ್ಯಚಿಂತೆಯಾಗಿ ಉಳಿದಿರುತ್ತದೆ. ಅಂತಹ ತಾಯಿಯ ಪ್ರೀತಿ. ನಮ್ಮ ದತ್ತು ಪಡೆದ ಬೆಕ್ಕಿನೊಂದಿಗೆ ನನ್ನ ಆಕೆ ಇಲ್ಲಿದ್ದಾರೆ ಎಂದು ಬರೆದಿದ್ದಾರೆ.

    ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ತಾಯಂದಿರ ದಿನಕ್ಕೆ ಶುಭಕೋರಿ ವಿಶೇಷ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ನಾಯಕ ಕೇನ್ ವಿಲಿಯಮ್ಸನ್, ಗ್ಲೆನ್‌ಫಿಲಿಪ್ಸ್, ಶಶಾಂಕ್ ಸಿಂಗ್ ಮತ್ತು ಉಮ್ರಾನ್ ಮಲಿಕ್ ಮೊದಲಾದವರು ತಾಯಂದಿರ ದಿನದ ಶುಭಾಶಯ ಕೋರಿದ್ದಾರೆ. ಆರ್‌ಸಿಬಿಯ ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಶೇಷ ದಿನದಂದು ಎಲ್ಲಾ ತಾಯಿಯರಿಗೆ ಶುಭ ಹಾರೈಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

    ಗುಜರಾತ್ ಟೈಟಾನ್ಸ್ ತಂಡದ ಸ್ಪಿನ್ನರ್ ರಶೀದ್ ಖಾನ್ ತಮ್ಮ ದಿವಂಗತ ತಾಯಿಗಾಗಿ ಭಾವನಾತ್ಮಕ ಪೋಸ್ಟ್ ಅನ್ನು ಬರೆದಿದ್ದಾರೆ. ಪ್ರಿಯ ಅಮ್ಮ, ನೀವು ಹಿಂತಿರುಗಿ ಸ್ವಲ್ಪ ಸಮಯ ಇರಬಹುದೇ, ನಾನು ನಿಮ್ಮ ಧ್ವನಿಯನ್ನು ಕೇಳಲು ಮತ್ತು ನೀವು ನಗುವುದನ್ನು ನೋಡಲು ಬಯಸುತ್ತೇನೆ. ನಾನು ನಿನ್ನನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಲು ಬಯಸುತ್ತೇನೆ. ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಹೇಳುವುದಿಲ್ಲ. ಆದರೆ, ನಿನ್ನನ್ನು ನೆನಪಿಸಿಕೊಳ್ಳುತ್ತೇನೆ. ಪ್ರತಿದಿನ ನೆನಪಿಸಿಕೊಳ್ಳುತ್ತೇನೆ. ಆದರೆ ನಿನ್ನನ್ನು ಕಳೆದುಕೊಂಡಿರುವುದು ಎಂದಿಗೂ ದೂರವಾಗದ ನೋವು. ಅಮ್ಮಂದಿರ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದು, ತಮ್ಮ ತಾಯಿಯ ಸಮಾಧಿ ಬಳಿ ಪ್ರಾರ್ಥಿಸುತ್ತಿರುವ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.

  • ಬಾಲಿವುಡ್‌ಗೆ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಎಂಟ್ರಿ?

    ಬಾಲಿವುಡ್‌ಗೆ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಎಂಟ್ರಿ?

    ಕ್ರಿಕೆಟ್ ಜಗತ್ತಿನ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಬಾಲಿವುಡ್ ರಂಗಕ್ಕೆ ಎಂಟ್ರಿ ಕೊಡಲಿದ್ದಾರಂತೆ. ಈಗಾಗಲೇ ಸೋಷಿಯಲ್ ಮೀಡಿಯಾದ ಸೆನ್ಸೆಷನಲ್ ಸ್ಟಾರ್ ಆಗಿರೋ ಸಾರಾ ನಟನೆಯತ್ತ ಮುಖ ಮಾಡಲಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿನ ಭಾರೀ ಸದ್ದು ಮಾಡ್ತಿದೆ.

    ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಯಾವ ನಟಿಯರಿಗೂ ಕಮ್ಮಿಯಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಫೋಟೋಶೂಟ್ ಮತ್ತು ವಿಡಿಯೋ ಮೂಲಕ ಈಗಾಗಲೇ ಹವಾ ಕ್ರಿಯೇಟ್ ಮಾಡಿದ್ದಾರೆ. ಬ್ಯೂಟಿ ಕ್ವೀನ್ ಸಾರಾಗೆ ಈಗಾಗಲೇ ಅಪಾರ ಅಭಿಮಾನಿಗಳ ಬಳಗವಿದೆ. ಇನ್ನು 2021ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಸಾರಾ ಕಾಲಿಟ್ಟಿದ್ದರು. ಬಾಲಿವುಡ್‌ನ ಬಿಗ್ ಪ್ರಾಜೆಕ್ಟ್ ಮೂಲಕ ಸಾರಾ ಲಾಂಚ್ ಆಗಲಿದ್ದಾರೆ ಎಂಬ ಮಾತುಗಳು ಬಿಟೌನ್‌ನಲ್ಲಿ ಕೇಳಿ ಬರುತ್ತಿದೆ.

    ಈಗಾಗಲೇ ಸಾಕಷ್ಟು ಜನಪ್ರಿಯ ಬಟ್ಟೆ ಬ್ರ್ಯಾಂಡ್‌ಗಳಿಗೆ ಸಾರಾ ರಾಯಭಾರಿಯಾಗಿದ್ದಾರೆ. ಈ ಮೂಲಕ ಸಾರಾ ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಡೋದಕ್ಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಜತೆಗೆ ನಟನೆಯ ತರಬೇತಿ ಕೂಡ ಪಡೆಯುತ್ತಿದ್ದಾರೆ. ಸಾರಾ ಪ್ರತಿ ಹೆಜ್ಜೆಯಲ್ಲೂ ಸಚಿನ್ ದಂಪತಿ ಬೆಂಬಲ ಇದ್ದೆ ಇರುತ್ತದೆ. ಹಾಗಾಗಿ ಸಾರಾ ಕನಸಿಗೆ ಬೆಂಬಲ ಸೂಚಿಸಿದ್ದಾರಂತೆ. ಇದನ್ನೂ ಓದಿ: ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

     

    View this post on Instagram

     

    A post shared by Sara Tendulkar (@saratendulkar)

    ಬಾಲಿವುಡ್ ಸ್ಟಾರ್ ಕಿಡ್‌ಗಳ ಮಕ್ಕಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದು ಹೊಸ ವಿಚಾರವೇನಲ್ಲ ಆದರೆ ಕ್ರಿಕೆಟ್ ತಾರೆಯ ಮಗಳಾಗಿರುವ ಸಾರಾ ತೆಂಡೂಲ್ಕರ್, ಬಾಲಿವುಡ್ ಎಂಟ್ರಿಯ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಇನ್ನು ಅದ್ಯಾವ ಸ್ಟಾರ್ ಜತೆ ನಾಯಕಿಯಾಗಿ ಸಾರಾ  ಕಾಣಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ.

  • ಹುಟ್ಟುಹಬ್ಬದಂದು ಅಣ್ಣಾವ್ರ ನೆನೆದ RCB

    ಹುಟ್ಟುಹಬ್ಬದಂದು ಅಣ್ಣಾವ್ರ ನೆನೆದ RCB

    ಬೆಂಗಳೂರು: ಏಪ್ರಿಲ್ 24ರ ದಿನ ಕನ್ನಡಿಗರ ಪಾಲಿನ ಹೆಮ್ಮೆಯ ದಿನ. ಏಕೆಂದರೆ ಇಂದು ಕನ್ನಡ ಚಿತ್ರರಂಗದ ದಿಗ್ಗಜ ಡಾ.ರಾಜ್‌ಕುಮಾರ್ ಅವರ ಜನ್ಮದಿನ.

    ಸಿಂಗಾನಲ್ಲೂರು ಪುಟ್ಟಸ್ವಾಮಿ ಅವರ ಪುತ್ರ ಮುತ್ತುರಾಜ್ ಆಗಿ ಚಿತ್ರರಂಗ ಪ್ರವೇಶಿಸಿದರು. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಹಲವು ದಾಖಲೆಗಳನ್ನೇ ನಿರ್ಮಿಸಿದವರು ರಾಜ್‌ಕುಮಾರ್. ಕನ್ನಡ ನಾಡು, ನುಡಿಯ ಬಗ್ಗೆ ಅವರಿಗಿದ್ದ ಪ್ರೀತಿ ಮತ್ತು ಕಾಳಜಿಯಿಂದಾಗಿ ಅವರು ಕನ್ನಡಿಗರ ಮನೆ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಇದನ್ನೂ ಓದಿ: ಯಾಕಣ್ಣ ನನ್ನೊಬ್ಬಳನ್ನೇ ಬಿಟ್ಟು ಹೋದೆ: ರಾಜ್‌ ನೆನೆದು ತಂಗಿ ಕಣ್ಣೀರು

    ಹೀಗೆ ಅಭಿಮಾನಿಗಳ ಹಾಗೂ ಕನ್ನಡ ಪ್ರೇಮಿಗಳ ಆರಾಧ್ಯ ದೈವವಾಗಿ ಸ್ಥಾನ ಪಡೆದುಕೊಂಡಿರುವ ಡಾ.ರಾಜ್‌ಕುಮಾರ್ ಅವರ ಜನ್ಮದಿನವಾದ ಇಂದು ಹಲವಾರು ರಾಜಕೀಯ ಗಣ್ಯರು, ಚಲನಚಿತ್ರ ನಟ-ನಟಿಯರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಅಣ್ಣಾವ್ರನ್ನು ನೆನಪಿಸಿಕೊಳ್ಳುತ್ತಿದ್ದಾರೆ. #ಡಾ.ರಾಜ್‌ಕುಮಾರ್ ಹ್ಯಾಶ್‌ಟ್ಯಾಗ್‌ನೊಂದಿಗೆ ಟಾಪ್‌ಟ್ರೆಂಡಿಗ್‌ನಲ್ಲಿ ರಾಜ್ ಕಂಗೊಳಿಸುತ್ತಿದ್ದಾರೆ.

    ಈ ಸಾಲಿಗೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಹ ಸೇರಿಕೊಂಡಿದ್ದು, ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಖಾತೆಯಲ್ಲಿ ಡಾ.ರಾಜ್‌ಕುಮಾರ್ ಜನ್ಮದಿನದ ವಿಶೇಷ ಪೋಸ್ಟ್ ಹಂಚಿಕೊಳ್ಳುವ ಮೂಲಕ ಶುಭ ಕೋರಿ, ಕನ್ನಡಿಗರ ಹೃದಯ ಗೆದ್ದಿದ್ದಾರೆ. ಇದನ್ನೂ ಓದಿ: ಉಪ್ಪಿ-ಆರ್‌ಜಿವಿ ಕಾಂಬಿನೇಷನ್ ಹೊಸ ಚಿತ್ರ: `ಐ ಆ್ಯಮ್ ಆರ್’ ಫಸ್ಟ್ ಲುಕ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

    ಡಾ.ರಾಜ್‌ಕುಮಾರ್ ಅವರ ಫೋಟೋ ಹಂಚಿಕೊಳ್ಳುವ ಮೂಲಕ `ನಾವಾಡುವ ನುಡಿಯೇ ಕನ್ನಡ ನುಡಿ’, ನಟ ಸಾರ್ವಭೌಮ, ಕನ್ನಡಿಗರ ಪ್ರೀತಿಯ ಅಣ್ಣಾವ್ರು, ಡಾ.ರಾಜ್‌ಕುಮಾರ್ ಅವರ 93ನೇ ಜನ್ಮಮಹೋತ್ಸವದ ನೆನಪಿನಲ್ಲಿ’ ಎಂದು ಬರೆದುಕೊಂಡಿದ್ದು, ಅಣ್ಣಾವ್ರ ದಿನವನ್ನು ಆರ್‌ಸಿಬಿ ಸ್ಮರಿಸಿದೆ.

    ಅಲ್ಲದೆ ಇದೇ ದಿನದಂದು ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರ ಹುಟ್ಟುಹಬ್ಬವೂ ಇದ್ದು, ತೆಂಡೂಲ್ಕರ್ ಅವರಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಮಾಜಿಕ ಜಾಲತಾಣದಲ್ಲಿನ ತನ್ನ ಅಧಿಕೃತ ಖಾತೆಗಳ ಮೂಲಕ ಶುಭಾಶಯ ಕೋರಿದೆ.