Tag: sachin tendulkar

  • ಕನ್ನಡ ಮಾತು ಕೇಳಿ ಇಂಗ್ಲಿಷ್‌ನಲ್ಲಿ ಉತ್ತರ ಕೊಟ್ಟ ರಚಿನ್‌ – ಬೆಂಗ್ಳೂರು ವಿಲ್ಸನ್‌ ಗಾರ್ಡನ್‌ ನೆನಪು ಹಂಚಿಕೊಂಡ ರವೀಂದ್ರ

    ಕನ್ನಡ ಮಾತು ಕೇಳಿ ಇಂಗ್ಲಿಷ್‌ನಲ್ಲಿ ಉತ್ತರ ಕೊಟ್ಟ ರಚಿನ್‌ – ಬೆಂಗ್ಳೂರು ವಿಲ್ಸನ್‌ ಗಾರ್ಡನ್‌ ನೆನಪು ಹಂಚಿಕೊಂಡ ರವೀಂದ್ರ

    ಅಹಮದಾಬಾದ್: ಏಕದಿನ ವಿಶ್ವಕಪ್ (Cricket World Cup) ಟೂರ್ನಿಯ ಚೊಚ್ಚಲ ಪಂದ್ಯದಲ್ಲೇ ಆಂಗ್ಲರ ವಿರುದ್ಧ ಶತಕ ಸಿಡಿಸಿ ಕಿವೀಸ್ ಪಡೆಗೆ ಗೆಲುವು ತಂದುಕೊಟ್ಟ ರಚಿನ್ ರವೀಂದ್ರ (Rachin Ravindra) ನಿನ್ನೆಯಿಂದಲೂ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ರಚಿನ್‌ ಬಗ್ಗೆ ಅನೇಕ ಕುತೂಹಲಕಾರಿ ಸಂಗತಿಗಳು ಹರಿದಾಡುತ್ತಿವೆ. ಇದೀಗ ರಚಿನ್‌ ರವೀಂದ್ರ ಅವರೊಂದಿಗೆ ಕನ್ನಡದಲ್ಲಿ ಮಾಡಿರುವ ಸಂದರ್ಶನದ ವೀಡಿಯೋ ತುಣುಕು ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಇಂಗ್ಲೆಂಡ್‌ (England) ವಿರುದ್ಧ ಗೆಲುವು ಸಾಧಿಸಿದ ಬಳಿಕ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ರಚಿನ್‌ ನಿರೂಪಕರು ಕನ್ನಡದಲ್ಲೇ ಕೇಳುವ ಪ್ರಶ್ನೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡು ಇಂಗ್ಲಿಷ್‌ನಲ್ಲೇ ಉತ್ತರ ಕೊಟ್ಟಿದ್ದಾರೆ. ಈ ಮೂಲಕ ಕನ್ನಡ ಭಾಷೆ ಮೇಲಿನ ಪ್ರೀತಿಯನ್ನು ಅಭಿವ್ಯಕ್ತಪಡಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಭೇಷ್‌ ಎಂದಿದ್ದಾರೆ. ಇದನ್ನೂ ಓದಿ: World Cup 2023: ಚೊಚ್ಚಲ ಪಂದ್ಯದಲ್ಲೇ ಸೇಡು ತೀರಿಸಿಕೊಂಡ ಕಿವೀಸ್‌; ಇಂಗ್ಲೆಂಡ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

    ನಿರೂಪಕರು ಮೊದಲು ನಿಮ್ಗೆ ರಿಪ್ಲೇ ಮಾಡೋದಕ್ಕೆ ಕಷ್ಟ ಆಗುತ್ತೆ ಅಂತಾ ನಾವು ಕನ್ನಡದಲ್ಲಿ ಪ್ರಶ್ನೆ ಕೇಳುತ್ತೇವೆ ನಡೆಯುತ್ತಲ್ಲಾ? ಎನ್ನುತ್ತಿದ್ದಂತೆ ಹೋ, ತುಂಬಾ ಸಂತೋಷ ಎಂದು ಹೇಳಿದ ರಚಿನ್‌, ಬಳಿಕ ಕನ್ನಡದಲ್ಲಿ ಕೇಳಿದ ಪ್ರತಿಯೊಂದು ಪ್ರಶ್ನೆಯನ್ನು ಸುಲಭವಾಗಿ ಅರ್ಥಮಾಡಿಕೊಂಡು ಇಂಗ್ಲಿಷ್‌ನಲ್ಲಿ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: World Cup 2023: ಚೊಚ್ಚಲ ಪಂದ್ಯದಲ್ಲೇ ಮೋದಿ ಕ್ರಿಕೆಟ್‌ ಅಂಗಳದಲ್ಲಿ ಇತಿಹಾಸ ಬರೆದ ಇಂಗ್ಲೆಂಡ್‌

    ಕನ್ನಡದಲ್ಲಿ ಕೇಳುವ ನಿರೂಪಕರ ಪ್ರಶ್ನೆಗಳಿಗೆ ಸಂತೋಷದಿಂದಲೇ ಉತ್ತರಿಸಿದ ರಚಿನ್‌, ಶತಕ ಸಿಡಿಸುವುದು ಒಬ್ಬ ಕ್ರಿಕೆಟ್ ಆಟಗಾರನಿಗೆ ತುಂಬಾ ವಿಶಿಷ್ಟವಾಗಿರುತ್ತದೆ. ಆದರೆ ಭಾರತದ ಮೈದಾನದಲ್ಲಿ ಇಂತಹ ದೊಡ್ಡ ಇನಿಂಗ್ಸ್ ಆಡಿರುವುದು ನಿಜಕ್ಕೂ ಆಹ್ಲಾದಾಕರವಾಗಿದೆ. ಇಂತಹ ದೊಡ್ಡ ಮೈದಾನದಲ್ಲಿ ಆಡುವುದು ನಿಜಕ್ಕೂ ಮರೆಯಲಾಗದ ಕ್ಷಣವಾಗಿದೆ. ಇದು ಮೊದಲ ಪಂದ್ಯವಾದ್ದರಿಂದ ಆಶಾದಾಯಕವಾಗಿಯೇ ಮುಂದುವರಿಯಬಹುದು ಎಂದು ಹೇಳಿದ್ದಾರೆ.

    ಈ ಸೋಲಿನಿಂದ ಇಂಗ್ಲೆಂಡ್‌ ತಂಡವನ್ನು ಟೂರ್ನಿಯಿಂದ ಸೋಲಿಸಬಹುದು ಎಂದು ನಾನು ಹೇಳುವುದಿಲ್ಲ. ಇಂಗ್ಲೆಂಡ್‌ ಕೂಡ ಒಂದು ಅದ್ಭುತ ಕ್ರಿಕೆಟ್‌ ತಂಡ. ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಇನ್ನೂ ಮುಂದೆ ಸಾಗುತ್ತಾರೆ ಅಂತ ನನಗನ್ನಿಸುತ್ತದೆ. ಕೆಲವೊಮ್ಮೆ ದಿನ ನಿಮ್ಮದಾಗಿರುತ್ತದೆ, ಕೆಲವೊಮ್ಮೆ ಆಗಿರೋದಿಲ್ಲ ಅಷ್ಟೇ. ಆದ್ರೆ ಖಂಡಿತವಾಗಿಯೂ ಇಂಗ್ಲೆಂಡ್‌ ಚಾಂಪಿಯನ್‌ ಟೀಂ ಎಂದು ನಂಬುತ್ತೇನೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಆಂಗ್ಲರ ವಿರುದ್ಧ ಶತಕ ಸಿಡಿಸಿ ಮೆರೆದಾಡಿದ ಬೆಂಗ್ಳೂರು ಮೂಲದ ರಚಿನ್‌ ರವೀಂದ್ರ ಯಾರು ಗೊತ್ತಾ?

    ಇದೇ ವೇಳೆ ಬೆಂಗಳೂರಿಗಿರುವ ನಂಟಿನ ಬಗ್ಗೆ ಮಾತನಾಡಿದ ರಚಿನ್‌, ನಾನು ಬೆಂಗಳೂರಿಗೆ ಹಿಂದಿರುಗುತ್ತಿರುವುದು ಆಹ್ಲಾದಕರವೆನಿಸಿದೆ. ಬೆಂಗಳೂರಿನಲ್ಲಿ ನನ್ನ ಕುಟುಂಬದೊಂದಿಗಿನ ನೆನಪುಗಳಿವೆ. ನನ್ನ ಅಜ್ಜ ಮತ್ತು ಅಜ್ಜಿಯನ್ನು ವಿಲ್ಸನ್‌ ಗಾರ್ಡನ್‌ನಲ್ಲಿ ನೋಡಿದ ನೆನಪು ಈಗಲೂ ನೆನಪಾಗುತ್ತೆ. ನನ್ನ ತಾಯಿ ಸಂಬಂಧಿಕರು ಇಸ್ರೋ ಬಡಾವಣೆಯಲ್ಲಿದ್ದಾರೆ. ನನಗೆ ಸಾಧ್ಯವಾದಾಗಲೆಲ್ಲಾ ಅವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ. ಅದು ನನಗೆ ತುಂಬಾ ಸಂತೋಷ ನೀಡುತ್ತದೆ. ಮುಂದೆ ಪಾಕಿಸ್ತಾನದ ವಿರುದ್ಧ ಬೆಂಗಳೂರಿನಲ್ಲಿ ಆಡುವಾಗಲು ಅಭಿಮಾನಿಗಳಿಂದ ಸಾಕಷ್ಟು ಬೆಂಬಲ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

    ಅಲ್ಲದೇ ನಮ್ಮದು ದೊಡ್ಡ ಪರಿವಾರ, ನನ್ನ ಇಡೀ ಕುಟುಂಬಕ್ಕೆ ಎಷ್ಟು ಟಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ, ಅಷ್ಟು ಪಡೆಯಲು ನಾನು ಪ್ರಯತ್ನಿಸುತ್ತೇನೆ. ಆದ್ರೆ ಕುಟುಂಬದಿಂದ ಎಷ್ಟು ಜನ ಬರುತ್ತಾರೆ ಅನ್ನೋದು ಖಚಿತವಿಲ್ಲ. ಒಟ್ಟಿನಲ್ಲಿ ಅವರೆಲ್ಲರಿಗೂ ನಾನು ಕೃತಜ್ಞನನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Asian Games 2023- ಗ್ರೀಕೊ ರೋಮನ್ ಕುಸ್ತಿಯಲ್ಲಿ ಭಾರತಕ್ಕೆ 13 ವರ್ಷಗಳ ಬಳಿಕ ಪದಕ

    ರಚಿನ್‌ ರವೀಂದ್ರ ಯಾರು?
    23 ವರ್ಷದ ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ ಜನಿಸಿದ್ದರೂ ಅವರ ಅಪ್ಪ-ಅಮ್ಮ ಮೂಲತಃ ಬೆಂಗಳೂರಿನವರು. ತಂದೆ ರವಿ ಕೃಷ್ಣಮೂರ್ತಿ ಹಾಗೂ ತಾಯಿ ದೀಪಾ ಕೃಷ್ಣಮೂರ್ತಿ ಅವರು ಸಾಫ್ಟ್ವೇರ್ ಎಂಜಿನೀಯರ್‌ಗಳಾಗಿದ್ದು, ಉದ್ಯೋಗ ಅರಸಿ 1990ರ ದಶಕದಲ್ಲಿ ಬೆಂಗಳೂರಿನಿಂದ ನ್ಯೂಜಿಲೆಂಡ್‌ಗೆ ತೆರಳಿದ್ದರು. ರಚಿನ್ ರವೀಂದ್ರ ಅವರ ತಂದೆ, ಸಾಫ್ಟ್ವೇರ್ ಎಂಜಿನೀಯರ್ ಆಗಿದ್ದರೂ ಅಪ್ಪಟ ಕ್ರಿಕೆಟ್ ಅಭಿಮಾನಿ. ಅದರಲ್ಲೂ ರವಿ ಕೃಷ್ಣಮೂರ್ತಿ ಅವರು ಭಾರತೀಯ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಅವರ ಪಕ್ಕಾ ಫ್ಯಾನ್. ಈ ಕಾರಣದಿಂದಾಗಿ ರಾಹುಲ್ ದ್ರಾವಿಡ್ ಹೆಸರಿನಿಂದ ʻರʼ ಮತ್ತು ಸಚಿನ್ ತೆಂಡೂಲ್ಕರ್ ಹೆಸರಿನಿಂದ ʻಚಿನ್ʼ ಅಕ್ಷರಗಳನ್ನು ತೆಗೆದುಕೊಂಡು ತಮ್ಮ ಪುತ್ರನಿಗೆ ರಚಿನ್ ಎಂದು ಹೆಸರಿಟ್ಟಿದ್ದರು.

    ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್ ಪರ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದಾರೆ. 2016 ಮತ್ತು 2018ರಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರು ನ್ಯೂಜಿಲೆಂಡ್ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಅಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು. ಇದರ ಫಲವಾಗಿ 2021ರಲ್ಲಿ ಭಾರತದ ವಿರುದ್ಧ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿದ್ದರು. ನಂತರ ಇದೇ ವರ್ಷದಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಂಗ್ಲರ ವಿರುದ್ಧ ಶತಕ ಸಿಡಿಸಿ ಮೆರೆದಾಡಿದ ಬೆಂಗ್ಳೂರು ಮೂಲದ ರಚಿನ್‌ ರವೀಂದ್ರ ಯಾರು ಗೊತ್ತಾ?

    ಆಂಗ್ಲರ ವಿರುದ್ಧ ಶತಕ ಸಿಡಿಸಿ ಮೆರೆದಾಡಿದ ಬೆಂಗ್ಳೂರು ಮೂಲದ ರಚಿನ್‌ ರವೀಂದ್ರ ಯಾರು ಗೊತ್ತಾ?

    ಅಹಮದಾಬಾದ್‌: ಏಕದಿನ ವಿಶ್ವಕಪ್‌ ಟೂರ್ನಿಯ ಚೊಚ್ಚಲ ಪಂದ್ಯದಲ್ಲೇ ಆಂಗ್ಲರ ವಿರುದ್ಧ ಶತಕ ಸಿಡಿಸಿ ಕಿವೀಸ್‌ ಪಡೆಗೆ ಭರ್ಜರಿ ಗೆಲುವು ತಂದುಕೊಟ್ಟ ರಚಿನ್‌ ರವೀಂದ್ರ (Rachin Ravindra) ಈಗ ಜಾಲತಾಣದಲ್ಲಿ ಸದ್ದು ಮಾಡ್ತಿದ್ದಾರೆ. 23 ವರ್ಷದ ರಚಿನ್‌ ರವೀಂದ್ರ ಅವರಿಗೆ ರಚಿನ್‌ ಎಂಬ ಹೆಸರು ಬಂದಿದ್ದು ಹೇಗೆ? ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಕೊಂಡಿದೆ.

    ಹೌದು. ಇಂಗ್ಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ 82 ಎಸೆತಗಳಲ್ಲಿಯೇ ಶತಕ (9 ಬೌಂಡರಿ, 4 ಸಿಕ್ಸರ್‌) ಪೂರೈಸಿದ ರಚಿನ್‌ ಒಟ್ಟಾರೆ 96 ಎಸೆತಗಳಲ್ಲಿ 5 ಸಿಕ್ಸರ್‌, 11 ಬೌಂಡರಿಗಳೊಂದಿಗೆ ಅಜೇಯ 123 ರನ್‌ಗಳನ್ನ ಸಿಡಿಸಿದ್ದಾರೆ. ಮುರಿಯದ 2ನೇ ವಿಕೆಟಿಗೆ 273 ರನ್‌ಗಳ ಜೊತೆಯಾಟದೊಂದಿಗೆ ನ್ಯೂಜಿಲೆಂಡ್‌ಗೆ (New Zealand) ಗೆಲುವು ತಂದುಕೊಟ್ಟಿದ್ದಾರೆ. ಇದಕ್ಕೂ ಮುನ್ನ ಹೈದರಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲೂ ರಚಿನ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಇದನ್ನೂ ಓದಿ: World Cup 2023: ಚೊಚ್ಚಲ ಪಂದ್ಯದಲ್ಲೇ ಸೇಡು ತೀರಿಸಿಕೊಂಡ ಕಿವೀಸ್‌; ಇಂಗ್ಲೆಂಡ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

    ರಚಿನ್‌ ರವೀಂದ್ರ ಅವರು ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ ಜನಿಸಿದ್ದರೂ ಅವರ ಅಪ್ಪ-ಅಮ್ಮ ಮೂಲತಃ ಬೆಂಗಳೂರಿನವರು. ತಂದೆ ರವಿ ಕೃಷ್ಣಮೂರ್ತಿ ಹಾಗೂ ತಾಯಿ ದೀಪಾ ಕೃಷ್ಣಮೂರ್ತಿ ಅವರು ಸಾಫ್ಟ್‌ವೇರ್‌ ಎಂಜಿನೀಯರ್‌ಗಳಾಗಿದ್ದು, ಉದ್ಯೋಗ ಅರಿಸಿ 1990ರ ದಶಕದಲ್ಲಿ ಬೆಂಗಳೂರಿನಿಂದ ನ್ಯೂಜಿಲೆಂಡ್‌ಗೆ ತೆರಳಿದ್ದರು. ರಚಿನ್‌ ರವೀಂದ್ರ ಅವರ ತಂದೆ, ಸಾಫ್ಟ್‌ವೇರ್‌ ಎಂಜಿನೀಯರ್‌ ಆಗಿದ್ದರೂ ಅಪ್ಪಟ ಕ್ರಿಕೆಟ್‌ ಅಭಿಮಾನಿ. ಅದರಲ್ಲೂ ರವಿ ಕೃಷ್ಣಮೂರ್ತಿ ಅವರು ಭಾರತೀಯ ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌ ಹಾಗೂ ರಾಹುಲ್‌ ದ್ರಾವಿಡ್‌ ಅವರ ಪಕ್ಕಾ ಫ್ಯಾನ್‌. ಈ ಕಾರಣದಿಂದಾಗಿ ರಾಹುಲ್‌ ದ್ರಾವಿಡ್‌ (Rahul Dravid) ಹೆಸರಿನಿಂದ ʻರʼ ಮತ್ತು ಸಚಿನ್‌ ತೆಂಡೂಲ್ಕರ್‌ (Sachin Tendulkar) ಹೆಸರಿನಿಂದ ʻಚಿನ್‌ʼ ಅಕ್ಷರಗಳನ್ನು ತೆಗೆದುಕೊಂಡು ತಮ್ಮ ಪುತ್ರನಿಗೆ ರಚಿನ್‌ ಎಂದು ಹೆಸರಿಟ್ಟಿದ್ದರು.

    ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್‌ ಪರ ಅಂಡರ್‌-19 ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದಾರೆ. 2016 ಮತ್ತು 2018ರಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರು ನ್ಯೂಜಿಲೆಂಡ್‌ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಅಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು. ಇದರ ಫಲವಾಗಿ 2021ರಲ್ಲಿ ಭಾರತದ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ನ್ಯೂಜಿಲೆಂಡ್‌ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿದ್ದರು. ನಂತರ ಇದೇ ವರ್ಷದಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದನ್ನೂ ಓದಿ: World Cup 2023: ಚೊಚ್ಚಲ ಪಂದ್ಯದಲ್ಲೇ ಮೋದಿ ಕ್ರಿಕೆಟ್‌ ಅಂಗಳದಲ್ಲಿ ಇತಿಹಾಸ ಬರೆದ ಇಂಗ್ಲೆಂಡ್‌

    ಈ ಕುರಿತು ಮಾತನಾಡಿರುವ ರಚಿನ್‌ ರವೀಂದ್ರ, 2019ರ ವಿಶ್ವಕಪ್‌ ಟೂರ್ನಿ ವೇಳೆ ಅಭಿಮಾನಿಯಾಗಿ ವೀಕ್ಷಿಸುತ್ತಿದ್ದೆ. ಅಂದು ನನ್ನ ತಂದೆ ಭಾರತಕ್ಕೆ ಪ್ರವಾಸ ಕೈಗೊಂಡಿದ್ದರು, ನಾನೂ ಸಹ ಪ್ರವಾಸದಲ್ಲಿ ಬೆಂಗಳೂರಿನಲ್ಲಿದ್ದೆ. ಸಂಪೂರ್ಣ ಫೈನಲ್‌ ಪಂದ್ಯ ವೀಕ್ಷಿಸಿದೆ. ಆಗ ಇಂಗ್ಲೆಂಡ್‌ ವಿರುದ್ಧ ವಿರೋಚಿತ ಸೋಲನುಭವಿಸಿದ್ದನ್ನು ಕಂಡಿದ್ದೆ. ಆಗ ನನಗೆ 19 ವರ್ಷ ವಯಸ್ಸಾಗಿತ್ತು. ಆ ವಿರೋಚಿತ ಸೋಲನ್ನು ನಾನು ಇಂದಿಗೂ ಮರೆತಿಲ್ಲ. ಆ ನಂತರ ನಾನು ತಂಡದಲ್ಲಿ ಪಾಲ್ಗೊಳ್ಳಬೇಕು ನಿರ್ಧರಿಸಿದೆ ಎಂದು ಹೇಳಿಕೊಂಡಿದ್ದಾರೆ.

    ಅಂದುಕೊಂಡಂತೆ 2023ರ ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ರಚಿನ್‌ ಇಂದು ಮೊದಲ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಗೆಲುವು ತಂದುಕೊಟ್ಟಿದ್ದಾರೆ. ಇದನ್ನೂ ಓದಿ: ICC World Cup 2023: ಇಂದಿನಿಂದ ವಿಶ್ವಕಪ್‌ ಮಹಾಸಮರ – ಇಂದು ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್ ಸೆಣಸಾಟ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಧಾನಿ ಮೋದಿಗೆ ‘ನಮೋ’ ಜೆರ್ಸಿ ಗಿಫ್ಟ್ ನೀಡಿದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್

    ಪ್ರಧಾನಿ ಮೋದಿಗೆ ‘ನಮೋ’ ಜೆರ್ಸಿ ಗಿಫ್ಟ್ ನೀಡಿದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಶನಿವಾರ) ಉತ್ತರ ಪ್ರದೇಶದ (Uttar Pradesh) ವಾರಣಾಸಿಯಲ್ಲಿ (Varanasi) ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ (International Cricket Stadium) ಶಂಕುಸ್ಥಾಪನೆ ಮಾಡಿದ್ದಾರೆ. ಈ ಸಂದರ್ಭ ಭಾರತದ ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ (Sachin Tendulkar), ನರೇಂದ್ರ ಮೋದಿಯವರಿಗೆ ಭಾರತೀಯ ಕ್ರಿಕಟ್ ತಂಡದ ಜೆರ್ಸಿಯನ್ನು (Jersy) ಉಡುಗೊರೆಯಾಗಿ ನೀಡಿದರು.

    ಈ ಸಂದರ್ಭ ರವಿಶಾಸ್ತ್ರಿ, ಸುನಿಲ್ ಗವಾಸ್ಕರ್ ಮತ್ತು ದಿಲೀಪ್ ಉಪಸ್ಥಿತರಿದ್ದರು. ಜೆರ್ಸಿ ಹಿಂಭಾಗದಲ್ಲಿ ‘ನಮೋ’ ಎಂದು ಬರೆಯಲಾಗಿದೆ. ತೆಂಡೂಲ್ಕರ್ ಮೋದಿಗೆ ಜೆರ್ಸಿ ಉಡುಗೊರೆ ನೀಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ

    ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adithyanath) ಕೂಡಾ ಭಾಗವಹಿಸಿದ್ದು, ಪ್ರಧಾನಿ ಮೋದಿಯವರು ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಾರಣಾಸಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಅಡಿಪಾಯ ಹಾಕಿದ್ದಾರೆ. ರಾಜ್ಯದ ಪ್ರತಿಯೊಬ್ಬ ಕ್ರೀಡಾ ಉತ್ಸಾಹಿ ಪರವಾಗಿ ನಾನು ಮೋದಿಯವರನ್ನು ಸ್ವಾಗತಿಸುತ್ತೇನೆ ಎಂದರು. ಇದನ್ನೂ ಓದಿ: ICC Ranking: ಭಾರತ ನಂ.1 – ಕ್ರಿಕೆಟ್‌ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ

    ವಾರಣಾಸಿಯಲ್ಲಿ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಮಿಷನ್ ಸಹಾಯದಿಂದ ಒಂದು ಕ್ರೀಡಾಂಗಣ ನಿರ್ಮಾಣ ಹಂತದಲ್ಲಿದೆ. ಇದು ಉತ್ತರ ಪ್ರದೇಶದ ಮೂರನೇ ಅಂತಾರಾಷ್ಟ್ರೀಯ ಕ್ರೀಡಾಂಗಣವಾಗಿದ್ದು, ಬಿಸಿಸಿಐ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾದ ಮೊದಲ ಕ್ರೀಡಾಂಗಣ ಇದಾಗಿದೆ. ಯುಪಿಗೆ ಈ ಉಡುಗೊರೆ ನೀಡಿದ್ದಕ್ಕಾಗಿ ಬಿಸಿಸಿಐ ಮತ್ತು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ವಿಶ್ವಕಪ್‌ ಟೂರ್ನಿಯಲ್ಲಿ ಗೆದ್ದರೂ ಸೋತರೂ ದುಡ್ಡೋ ದುಡ್ಡು – ಬಹುಮಾನದ ಮೊತ್ತ ಪ್ರಕಟಿಸಿದ ICC

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಕ್ರೀಡಾಂಗಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 121 ಕೋಟಿ ರೂ. ಖರ್ಚು ಮಾಡಿದ್ದು, ಬಿಸಿಸಿಐ ಅದರ ನಿರ್ಮಾಣಕ್ಕೆ 330 ಕೋಟಿ ರೂ.ಗಳನ್ನು ಖರ್ಚು ಮಾಡಲಿದೆ. ಇದನ್ನೂ ಓದಿ: ಚಂದ್ರಯಾನ-3 ಲ್ಯಾಂಡರ್‌, ರೋವರ್‌ನಿಂದ ಸಿಗ್ನಲ್‌ ಸಿಗ್ತಿಲ್ಲ: ಇಸ್ರೋ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತಕ್ಕಾಗಿ ಮತ್ತೆ ಬ್ಯಾಟಿಂಗ್ ಮುಂದುವರೆಸುತ್ತೇನೆ: ಸಚಿನ್ ತೆಂಡೂಲ್ಕರ್

    ಭಾರತಕ್ಕಾಗಿ ಮತ್ತೆ ಬ್ಯಾಟಿಂಗ್ ಮುಂದುವರೆಸುತ್ತೇನೆ: ಸಚಿನ್ ತೆಂಡೂಲ್ಕರ್

    ಮುಂಬೈ: ನನ್ನ ಎರಡನೇ ಇನ್ನಿಂಗ್ಸ್‌ನಲ್ಲೂ ನಾನು ಭಾರತಕ್ಕಾಗಿ ಬ್ಯಾಟಿಂಗ್ ಮುಂದುವರಿಸುತ್ತೇನೆ ಎಂದು ಕ್ರಿಕೆಟ್ (Cricket) ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಹೇಳಿದ್ದಾರೆ. ಅವರು ಚುನಾವಣಾ ಆಯೋಗದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಹೀಗೆ ಘೋಷಿಸಿದ್ದಾರೆ. ಈ ಮೂಲಕ ಮುಂದಿನ ಮೂರು ವರ್ಷಗಳ ಕಾಲ ಚುನಾವಣಾ ರಾಷ್ಟ್ರೀಯ ಐಕಾನ್ ಆಗಿ ಮುಂದುವರೆಯಲಿದ್ದಾರೆ.

    ಭಾರತವನ್ನು ಜವಾಬ್ದಾರಿಯುತ ರಾಷ್ಟ್ರವೆಂದು ಗುರುತಿಸಿಕೊಳ್ಳಲು ಶ್ರಮಿಸಬೇಕು. ನಮ್ಮ ರಾಷ್ಟ್ರಕ್ಕೆ ಒಳ್ಳೆಯದೇ ಆಗಬೇಕೆಂದು ನಾವೆಲ್ಲರೂ ಬಯಸುತ್ತೇವೆ. ಆದರೆ ಅದಕ್ಕೆ ಹೋಗಿ ಮತ ಹಾಕುವ ಪ್ರಯತ್ನದ ಅಗತ್ಯವಿದೆ. ಒಂದು ಮತ ಕೂಡ ದೇಶದ ರಾಜಕೀಯದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಬಹುದು. ಈ ಬಗ್ಗೆ ಎಂದಿಗೂ ಸಂದೇಹಪಡಬೇಡಿ. ಜನರು ದೇಶಕ್ಕಾಗಿ ಮತ ಚಲಾಯಿಸಬೇಕು ಎಂದು ಜಾಗೃತಿಯ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್ ಗೆಲ್ಲುವ ಉತ್ಸಾಹ – ಟೀಂ ಇಂಡಿಯಾಕ್ಕೆ ಬೆಂಗಳೂರಿನಲ್ಲಿ ಫಿಟ್‍ನೆಸ್ ಟ್ರೈನಿಂಗ್

    ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ (Election) ಆಯುಕ್ತರಾದ ಅನುಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯೆಲ್ ಅವರ ಸಮ್ಮುಖದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ವಿಶೇಷವಾಗಿ ಯುವ ಮತ್ತು ನಗರ ಭಾಗಗಳಲ್ಲಿ ಮತದಾನವನ್ನು ಹೆಚ್ಚಿಸುವಲ್ಲಿ ಸಚಿನ್ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ಚಂದ್ರಯಾನದ ಯಶಸ್ಸು ಸಂಭ್ರಮಿಸಿದ ಟೀಂ ಇಂಡಿಯಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂದು 500ನೇ ಅಂತರಾಷ್ಟ್ರೀಯ ಪಂದ್ಯ ಆಡಲಿದ್ದಾರೆ ಕೊಹ್ಲಿ

    ಇಂದು 500ನೇ ಅಂತರಾಷ್ಟ್ರೀಯ ಪಂದ್ಯ ಆಡಲಿದ್ದಾರೆ ಕೊಹ್ಲಿ

    ನವದೆಹಲಿ: ಫೋರ್ಟ್ ಆಫ್ ಸ್ಪೇನ್‍ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ (Virat Kohli) ಗುರುವಾರ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ.

    ಸಚಿನ್ ತೆಂಡೂಲ್ಕರ್ (Sachin Tendulkar) (664), ರಾಹುಲ್ ದ್ರಾವಿಡ್ (509) ಮತ್ತು ಎಂಎಸ್ ಧೋನಿ (538) ನಂತರ ಕೊಹ್ಲಿ 500ನೇ ಅಂತರಾಷ್ಟ್ರೀಯ ಪಂದ್ಯ ಆಡುತ್ತಿರುವ ಟೀಂ ಇಂಡಿಯಾದ ನಾಲ್ಕನೇ ಆಟಗಾರರಾಗಿದ್ದಾರೆ. ಅಲ್ಲದೇ ಒಟ್ಟಾರೆ ಕ್ರಿಕೆಟ್ ಇತಿಹಾಸದಲ್ಲಿ 500ನೇ ಪಂದ್ಯ ಆಡುತ್ತಿರುವ 10ನೇ ಆಟಗಾರರಾಗಿದ್ದಾರೆ. ಇದನ್ನೂ ಓದಿ: ಆ.30 ರಿಂದ ಏಷ್ಯಾಕಪ್ ಕ್ರಿಕೆಟ್ : ಸೆ.2ಕ್ಕೆ ಇಂಡಿಯಾ, ಪಾಕ್ ಮ್ಯಾಚ್

    499 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 558 ಇನ್ನಿಂಗ್ಸ್‌ಗಳಲ್ಲಿ 53.48 ಸರಾಸರಿಯಲ್ಲಿ 25,461 ರನ್ ಗಳಿಸಿದ್ದಾರೆ. ಮೂರು ಮಾದರಿಯಲ್ಲಿ 75 ಶತಕ ಮತ್ತು 131 ಅರ್ಧಶತಕಗಳನ್ನು ಗಳಿಸಿದ್ದಾರೆ.

    274 ಏಕದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 57.32 ಸರಾಸರಿಯಲ್ಲಿ 12,898 ರನ್ ಗಳಿಸಿದ್ದಾರೆ. 46 ಶತಕ ಮತ್ತು 65 ಅರ್ಧ ಶತಕಗಳನ್ನು ಹೊಡೆದಿರುವ ಕೊಹ್ಲಿ ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್‍ಗಳಿಸಿದ ಎರಡನೇ ಭಾರತೀಯ (Team India) ಬ್ಯಾಟ್ಸ್‌ಮನ್ ಆಗಿದ್ದಾರೆ.

    8,000 ರನ್ (175 ಇನ್ನಿಂಗ್ಸ್), 9,000 ರನ್ (194 ಇನ್ನಿಂಗ್ಸ್), 10,000 ರನ್ (205 ಇನ್ನಿಂಗ್ಸ್), 11,000 ರನ್ (222 ಇನ್ನಿಂಗ್ಸ್) ಮತ್ತು 242 ಇನ್ನಿಂಗ್ಸ್‌ನಲ್ಲಿ 12,000 ರನ್ ಹೊಡೆದಿದ್ದಾರೆ. ಇದನ್ನೂ ಓದಿ: RCB ಏಕೆ ಐಪಿಎಲ್‌ ಟ್ರೋಫಿ ಗೆದ್ದಿಲ್ಲ – ತಂಡದಿಂದ ಕೈಬಿಟ್ಟ ಮೇಲೆ ಪ್ರಾಮಾಣಿಕ ಉತ್ತರ ಕೊಟ್ಟ ಚಾಹಲ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಚಿನ್ LBW ತೀರ್ಪು ನೆನಪಿಸಿಕೊಂಡ ಅಜ್ಮಲ್

    ಸಚಿನ್ LBW ತೀರ್ಪು ನೆನಪಿಸಿಕೊಂಡ ಅಜ್ಮಲ್

    ಇಸ್ಲಾಮಾಬಾದ್: 2016ರ ಟಿ20 ವಿಶ್ವಕಪ್ (World Cup) ಬಳಿಕ ಭಾರತಕ್ಕೆ ಪಾಕ್ ತಂಡ ಈ ವರ್ಷ ಕಾಲಿಡುತ್ತಿದೆ. ಈ ಮೂಲಕ ಸಾಂಪ್ರದಾಯಿಕ ಎದುರಾಳಿಗಳ ಹಣಾಹಣಿ ಅಕ್ಟೋಬರ್ 15ರ ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಾಕ್ಷಿಯಾಗಲಿದೆ.

    ಈ ನಡುವೆ 2011ರ ವಿಶ್ವಕಪ್ ಟೂರ್ನಿಯಲ್ಲಿ ನಡೆದ ಘಟನೆಯೊಂದು ಮತ್ತೆ ಚರ್ಚೆಗೆ ಒಳಗಾಗಿದೆ. ಭಾರತದೊಂದಿಗೆ (Team India) ಆಡಿದ್ದ ಪಾಕಿಸ್ತಾನವು ಸೆಮಿಫೈನಲ್‍ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡದ ವಿರುದ್ಧ ಸೋತಿತ್ತು. ಪಂದ್ಯದ ವೇಳೆ ನಾಟಕೀಯ ಮತ್ತು ವಿವಾದದ ಒಂದು ಪ್ರಸಂಗ ನಡೆದಿತ್ತು. ಸಚಿನ್ ತೆಂಡೂಲ್ಕರ್ ಅವರ ಎಲ್‍ಬಿಡಬ್ಲ್ಯೂ (LBW) ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಇದನ್ನೂ ಓದಿ: ಕ್ಯಾಚ್ ವಿವಾದ; ಮತ್ತೆ ಮೋಸದಾಟ ಆಡಲು ಪ್ರಯತ್ನಿಸಿತಾ ಆಸೀಸ್? – ಅಭಿಮಾನಿಗಳು ಕೆಂಡ

    ಪಂದ್ಯದ 11 ನೇ ಓವರ್‌ನಲ್ಲಿ ತೆಂಡೂಲ್ಕರ್ (Sachin Tendulkar) ಎಲ್‍ಬಿಡಬ್ಲ್ಯೂ ವಿಚಾರ ಬಹಳ ಚರ್ಚೆಗೆ ಕಾರಣವಾಗಿತ್ತು. ಪಂದ್ಯದ ಬಳಿಕ ಬೌಲರ್ ಅಜ್ಮಲ್ ನಿರ್ಧಾರದ ವಿರುದ್ಧ ಬಲವಾದ ಟೀಕೆ ವ್ಯಕ್ತವಾಗಿತ್ತು.

    ಈಗ ಮತ್ತೆ ಅಜ್ಮಲ್ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ ಸಚಿನ್ ರಿವ್ಯೂ ತೆಗೆದುಕೊಂಡರು. ಆದರೆ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಆದರೆ ನಾನು ಮತ್ತು ಅಂಪೈರ್ ಇಬ್ಬರೂ ಔಟ್ ಎಂದು ತಿಳಿದಿದ್ದೆವು ಎಂದಿದ್ದಾರೆ.

    ತೆಂಡೂಲ್ಕರ್ ಅಂತಿಮವಾಗಿ ಪಂದ್ಯದಲ್ಲಿ 115 ಎಸೆತಗಳಲ್ಲಿ 85 ರನ್ ಗಳಿಸಿದರು. ಅಂತಿಮವಾಗಿ ಭಾರತ ಪಾಕ್ ವಿರುದ್ಧ 29 ರನ್‍ಗಳ ಜಯಗಳಿಸಿ ಫೈನಲ್ ಪ್ರವೇಶಿಸಿತ್ತು. ಇದನ್ನೂ ಓದಿ: ಕೊಹ್ಲಿ ಮತ್ತು ಬಾಬರ್‌ ಇಬ್ಬರಲ್ಲಿ ಯಾರು ಶ್ರೇಷ್ಠ? – ಭಜ್ಜಿ ಪ್ರಶ್ನೆಗೆ ಶಾಕಿಂಗ್‌ ಉತ್ತರ ಕೊಟ್ಟ ಅಖ್ತರ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಶ್ಮಿಕಾ ನನ್ನ ಕ್ರಶ್ ಅಲ್ಲ: ಸಿಟ್ಟಿಗೆದ್ದ ಕ್ರಿಕೆಟಿಗ ಶುಭ್‍ಮನ್ ಗಿಲ್

    ರಶ್ಮಿಕಾ ನನ್ನ ಕ್ರಶ್ ಅಲ್ಲ: ಸಿಟ್ಟಿಗೆದ್ದ ಕ್ರಿಕೆಟಿಗ ಶುಭ್‍ಮನ್ ಗಿಲ್

    ಯುವ ಕ್ರಿಕೆಟಿಗ ಶುಭ್‍ಮನ್ ಗಿಲ್ (Shubman Gill) ಕೋಪಗೊಂಡಿದ್ದಾರೆ. ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ವಿಚಾರವಾಗಿ ಅವರು ಅಸಮಾಧಾನಗೊಂಡಿದ್ದಾರೆ. ಹಲವು ದಿನಗಳಿಂದ ರಶ್ಮಿಕಾ ಮತ್ತು ಗಿಲ್ ವಿಚಾರ ಬಹಳ ಸುದ್ದಿಯಾಗಿತ್ತು. ಆಕೆ ನನ್ನ ಕ್ರಶ್ (Crush) ಎಂದು ಗಿಲ್ ಹೇಳಿದ್ದಾರೆ ಎನ್ನುವುದು ಭಾರಿ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಆ ಪೋಸ್ಟ್ ಹರಿದಾಡಿತ್ತು. ಅದನ್ನು ಕಂಡ ಗಿಲ್ ಮತ್ತೊಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

    ರಶ್ಮಿಕಾ ನನ್ನ ಕ್ರಶ್ ಎಂದು ಎಲ್ಲಿಯೂ ಹೇಳಿಲ್ಲ. ನನ್ನ ಕ್ರಶ್ ಅವಳಲ್ಲ. ಯಾವತ್ತೂ ನಾನು ಹೇಳಿಲ್ಲ, ಹೇಳುವುದೂ ಇಲ್ಲ. ಇದೊಂದು ಕಪೋಕಲ್ಪತ ವರದಿ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ರಶ್ಮಿಕಾ ನನ್ನ ಕ್ರಶ್ ಅಲ್ಲ ಎಂದು ಅವರು ಉತ್ತರಿಸಿದ್ದಾರೆ. ಯಾವ ಮಾಧ್ಯಮದಲ್ಲೂ ನಾನು ಆ ರೀತಿಯಾಗಿ ಮಾತನಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬ್ಯಾಕ್‌ಲೆಸ್ ಫೋಟೋ ಶೇರ್‌, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ

    ಗಿಲ್ ಜೊತೆ ಈ ಹಿಂದೆ ಸಚಿನ್ ತೆಂಡೂಲ್ಕರ್ (Sachin Tendulkar) ಪುತ್ರಿ ಸಾರಾ (Sara) ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರೂ ಜೊತೆಗಿದ್ದ ಫೋಟೋಗಳು ಕೂಡ ಸಿಕ್ಕಿದ್ದವು. ಆ ಸಮಯದಲ್ಲಿ ಸಾರಾ ಮತ್ತು ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತು ಅವರು ಏನೂ ಹೇಳಿಕೆ ನೀಡಿರಲಿಲ್ಲ. ಆದರೆ, ರಶ್ಮಿಕಾ ವಿಚಾರವಾಗಿ ಅವರು ಅಸಮಾಧಾನಗೊಂಡಿದ್ದಾರೆ.

    ಗಿಲ್ ತಮ್ಮನ್ನು ಇಷ್ಟಪಟ್ಟಿದ್ದರು ಎನ್ನುವುದು ರಶ್ಮಿಕಾಗೆ ಸಂಭ್ರಮದ ಸಂಗತಿಯಾಗಿತ್ತು. ರಶ್ಮಿಕಾ ಅಭಿಮಾನಿಗಳು ಕೂಡ ಖುಷಿಗೊಂಡಿದ್ದರು. ಆದರೆ, ಈ ಎಲ್ಲ ಖುಷಿಯನ್ನು ಒಟ್ಟಿಗೆ ಇಲ್ಲವಾಗಿಸಿದ್ದಾರೆ ಗಿಲ್. ಆದರೆ, ಸಾರಾ ವಿಷಯದಲ್ಲಿ ಮಾತ್ರ ಅವರು ದಿವ್ಯಮೌನ ತಾಳಿದ್ದಾರೆ. ಹಾಗಾಗಿ ಸಾರಾ ಮತ್ತು ಗಿಲ್ ಇನ್ನೂ ಡೇಟಿಂಗ್ ಮಾಡುತ್ತಿದ್ದಾರಾ ಎನ್ನುವ ಅನುಮಾನ ಕೂಡ ಮೂಡಿದೆ.

  • ದ್ವಿಶತಕ ಸಿಡಿಸಿ ದಿಗ್ಗಜರ ಪಟ್ಟಿಗೆ ಸೇರಿದ ಗಿಲ್ – ಭಾರತ ಪರ ಡಬಲ್ ಸೆಂಚುರಿ ಬಾರಿಸಿದ ಐವರು ಸಾಧಕರಿವರು

    ದ್ವಿಶತಕ ಸಿಡಿಸಿ ದಿಗ್ಗಜರ ಪಟ್ಟಿಗೆ ಸೇರಿದ ಗಿಲ್ – ಭಾರತ ಪರ ಡಬಲ್ ಸೆಂಚುರಿ ಬಾರಿಸಿದ ಐವರು ಸಾಧಕರಿವರು

    ಮುಂಬೈ: ಟೀಂ ಇಂಡಿಯಾದ (Team India) ಯುವ ಆಟಗಾರ ಶುಭಮನ್ ಗಿಲ್ (Shubman Gill) ದ್ವಿಶತಕ (Double Hundred) ಬಾರಿಸಿ ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್ (Sachin Tendulkar), ವೀರೇಂದ್ರ ಸೆಹ್ವಾಗ್ (Virender Sehwag) ಅವರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

    ಗಿಲ್ 7ನೇ ದ್ವಿಶತಕ ವೀರನಾಗಿ ದಿಗ್ಗಜರ ಪಟ್ಟಿಗೆ ಎಂಟ್ರಿಕೊಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದ 23 ವರ್ಷದ ಗಿಲ್ ಬರೋಬ್ಬರಿ 19 ಬೌಂಡರಿ, 9 ಭರ್ಜರಿ ಸಿಕ್ಸ್ ಸಹಿತ 149 ಎಸೆತಗಳಲ್ಲಿ 208 ರನ್ ಚಚ್ಚಿದರು. ಈ ಮೂಲಕ ಏಕದಿನ ಮಾದರಿ ಕ್ರಿಕೆಟ್‍ನಲ್ಲಿ ದ್ವಿಶತಕ ಸಿಡಿಸಿದ ಯುವ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಹ್ಯಾಟ್ರಿಕ್ ಸಿಕ್ಸ್ ಸಿಡಿಸಿ ದ್ವಿಶತಕ ಬಾರಿಸಿದ ಗಿಲ್

     

     

    ಟೀಂ ಇಂಡಿಯಾದ ದ್ವಿಶತಕ ವೀರರು:
    ಟೀಂ ಇಂಡಿಯಾ ಪರ ಈವರೆಗೆ 7 ದ್ವಿಶತಕ ದಾಖಲಾಗಿದೆ. ಈ ಪೈಕಿ ಟೀಂ ಇಂಡಿಯಾದ ಕ್ಯಾಪ್ಟನ್ ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ (Rohit Sharma) ಒಬ್ಬರೇ 3 ದ್ವಿಶತಕ ಬಾರಿಸಿದ್ದಾರೆ. ಉಳಿದಂತೆ ಸಚಿನ್, ಸೆಹ್ವಾಗ್, ಇಶಾನ್ ಕಿಶನ್ (Ishan Kishan) ಮತ್ತು ಶುಭಮನ್ ಗಿಲ್ ತಲಾ ಒಂದೊಂದು ದ್ವಿಶತಕ ಬಾರಿಸಿ ಸಾಧನೆ ಮಾಡಿದ್ದಾರೆ.

    ಟೀಂ ಇಂಡಿಯಾ ಪರ ಮೊದಲ ದ್ವಿಶತಕ ಸಚಿನ್‍ರಿಂದ ಬಂತು. 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ 200 ರನ್ ಸಿಡಿಸಿದ್ದರು. 2ನೇ ದ್ವಿಶತಕ ಸೆಹ್ವಾಗ್ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬಾರಿಸಿದ್ದರು. ನಂತರ 2013, 2014 ಮತ್ತು 2017ರಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ ದ್ವಿಶತಕ ಸಿಡಿಸಿ ಮಿಂಚಿದ್ದರು. ಆ ಬಳಿಕ 2022ರಲ್ಲಿ ಬಾಂಗ್ಲಾದೇಶ ವಿರುದ್ಧ ಇಶಾನ್ ಕಿಶನ್ ದ್ವಿಶತಕ ಸಾಧನೆಗೈದಿದ್ದರು. ಇದೀಗ 2023ರಲ್ಲಿ ಗಿಲ್ ನ್ಯೂಜಿಲೆಂಡ್ ವಿರುದ್ಧ ದ್ವಿಶತಕ ಸಿಡಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ತರಬೇತುದಾರರಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ – ವಿನೇಶ್‌ ಫೋಗಟ್‌ ಗಂಭೀರ ಆರೋಪ

    ದ್ವಿಶತಕಗಳ ಪೈಕಿ ರೋಹಿತ್ 264 ರನ್ ಸಿಡಿಸಿದ್ದರೆ, ಸೆಹ್ವಾಗ್ 219, ಇಶಾನ್ ಕಿಶನ್ 210, ಗಿಲ್ 208 ಮತ್ತು ಸಚಿನ್ ತೆಂಡೂಲ್ಕರ್ 200 ರನ್ ಬಾರಿಸಿ ಏಕದಿನ ಮಾದರಿ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಭಾರತೀಯ ಆಟಗಾರರಾಗಿಯೂ ಗುರುತಿಸಿಕೊಂಡಿದ್ದಾರೆ.

    ಗಿಲ್ ಏಕದಿನ ಮಾದರಿ ಕ್ರಿಕೆಟ್‍ನಲ್ಲಿ ವೇಗವಾಗಿ ಕೇವಲ 19 ಇನ್ನಿಂಗ್ಸ್‌ಗಳಿಂದ 1,000 ರನ್ ಪೂರ್ತಿಗೊಳಿಸಿದ ಆಟಗಾರ ಎಂಬ ದಾಖಲೆ ಬರೆದರು. ಈ ಮೊದಲು ವಿರಾಟ್ ಕೊಹ್ಲಿ 24 ಇನ್ನಿಂಗ್ಸ್‌ಗಳಿಂದ ಸಾವಿರ ರನ್ ಪೂರೈಸಿದ ದಾಖಲೆ ಬರೆದಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೇವರೆಂದು ಕಾಲಿಗೆ ಬಿದ್ದ ಅಭಿಮಾನಿಯ ಆಸೆ ಪೂರೈಸಿದ ಕೊಹ್ಲಿ – ನೆಟ್ಟಿಗರಿಂದ ಭಾರೀ ಮೆಚ್ಚುಗೆ

    ದೇವರೆಂದು ಕಾಲಿಗೆ ಬಿದ್ದ ಅಭಿಮಾನಿಯ ಆಸೆ ಪೂರೈಸಿದ ಕೊಹ್ಲಿ – ನೆಟ್ಟಿಗರಿಂದ ಭಾರೀ ಮೆಚ್ಚುಗೆ

    ತಿರುವನಂತಪುರಂ: ಟೀಂ ಇಂಡಿಯಾ (Team India) ಸ್ಟಾರ್ ಕ್ರಿಕೆಟಿಗ, ಚೇಸ್ ಮಾಸ್ಟರ್ ಕೊಹ್ಲಿಗೆ (Virat Kohli) ವಿಶ್ವಾದ್ಯಂತ ಫ್ಯಾನ್ಸ್ ಇದ್ದಾರೆ ಅನ್ನೋದು ಗೊತ್ತಿದೆ. ಅಂತೆಯೇ ಕೊಹ್ಲಿ ಸಹ ತಮ್ಮ ಅಭಿಮಾನಿಗಳೊಂದಿಗೆ (Virat Kohli Fans)ಯಾವ ರೀತಿ ನಡೆದುಕೊಳ್ತಾರೆ, ಎಷ್ಟು ಪ್ರಾಮುಖ್ಯತೆ ಕೊಡ್ತಾರೆ ಅನ್ನೋದು ಕೆಲವು ಸನ್ನಿವೇಶಗಳಿಂದ ಸಾಕ್ಷಿಯಾಗುತ್ತಿದ್ದಾರೆ.

    ಭಾನುವಾರ ಶ್ರೀಲಂಕಾ (SriLanka) ವಿರುದ್ಧ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ 317 ಭಾರೀ ರನ್‌ಗಳ ಅಂತರದಿಂದ ಗೆಲುವು ಸಾಧಿಸಿ ವಿಶ್ವದಾಖಲೆ ಬರೆಯಿತು. ಈ ಪಂದ್ಯ ಮುಗಿಯುತ್ತಿದ್ದಂತೆ ಟೀಂ ಇಂಡಿಯಾ ಸಂಭ್ರಮದಲ್ಲಿತ್ತು. ಈ ವೇಳೆ ಸ್ಟೇಡಿಯಂಗೆ ಧುಮುಕಿದ ಅಭಿಮಾನಿಯೊಬ್ಬ ನೇರವಾಗಿ ವಿರಾಟ್ ಕೊಹ್ಲಿ ಅವರ ಕಾಲಿಗೆ ಬಿದ್ದರು, ಕೊಹ್ಲಿ ದೇವರೆಂದು ಕೊಂಡಾಡಿದರು. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – ಕಿಂಗ್ ಕೊಹ್ಲಿಯಿಂದ ಸಚಿನ್ ದಾಖಲೆ ಉಡೀಸ್‌

    ಈ ವೇಳೆ ಭದ್ರತಾ ಸಿಬ್ಬಂದಿ ಆತನನ್ನ ತಡೆದು, ಹೊರಹಾಕಲು ಪ್ರಯತ್ನಿಸಿದರು. ಆದ್ರೆ ಅಭಿಮಾನಿ ಪರ ನಿಂತ ಕೊಹ್ಲಿ ಸ್ಟೇಡಿಯಂನಲ್ಲೇ ತನ್ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಟ್ಟರು. ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್, ಕೊಹ್ಲಿ ಅಭಿಮಾನಿಗಳಿಗೆ ಫೋಟೋ ಗ್ರಾಫರ್‌ಆಗಿ ನಿಂತರು. ಇದನ್ನೂ ಓದಿ: ಭಾರತಕ್ಕೆ 317 ರನ್‌ಗಳ ಭರ್ಜರಿ ಗೆಲುವು – ವಿಶ್ವದಾಖಲೆಯೊಂದಿಗೆ ಸರಣಿ ಕ್ಲೀನ್‌ ಸ್ವೀಪ್‌

    ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 390 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಶ್ರೀಲಂಕಾ 22 ಓವರ್‌ಗಳಲ್ಲೇ 73 ರನ್ ಗಳಿಸಿ ಸರ್ವಪತನ ಕಂಡಿತು. ಟೀಂ ಇಂಡಿಯಾ 317 ರನ್‌ಗಳ ಅಂತರದಿಂದ ಗೆದ್ದು ವಿಶ್ವದಾಖಲೆ ಬರೆಯಿತು. ಈ ಪಂದ್ಯದಲ್ಲಿ ಕೊನೆಯವರೆಗೂ ಅಜೇರಾಗಿ ಹೋರಾಡಿದ ಕೊಹ್ಲಿ 110 ಎಸೆತಗಳಲ್ಲಿ 166 ರನ್ (13 ಬೌಂಡರಿ, 8 ಸಿಕ್ಸ್) ಚಚ್ಚಿ ಸಚಿನ್ ತೆಂಡೂಲ್ಕರ್ ದಾಖಲೆ ಉಡೀಸ್ ಮಾಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಕ್ಸರ್, ಬೌಂಡರಿಗಳ ಸುರಿಮಳೆ – ಕಿಂಗ್ ಕೊಹ್ಲಿಯಿಂದ ಸಚಿನ್ ದಾಖಲೆ ಉಡೀಸ್‌

    ಸಿಕ್ಸರ್, ಬೌಂಡರಿಗಳ ಸುರಿಮಳೆ – ಕಿಂಗ್ ಕೊಹ್ಲಿಯಿಂದ ಸಚಿನ್ ದಾಖಲೆ ಉಡೀಸ್‌

    ತಿರುವನಂತಪುರಂ: ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ವರ್ಷದ ಮೊದಲ ಏಕದಿನ ಸರಣಿಯಲ್ಲಿ 2 ಶತಕ ಸಿಡಿಸುವ ಮೂಲಕ ಸಚಿನ್ ತೆಂಡೂಲ್ಕರ್ (Sachin Tendulkar) ದಾಖಲೆಯನ್ನ ಉಡೀಸ್ ಮಾಡಿದ್ದಾರೆ.

    ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ 85 ಎಸೆತಗಳಲ್ಲಿ ಶತಕ ಸಿಡಿಸಿದ ಕೊಹ್ಲಿ, ಸ್ವದೇಶದಲ್ಲಿ 21 ಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ. ಮುಖ್ಯವಾಗಿ ಏಕದಿನ ಪಂದ್ಯದಲ್ಲೀ ಶ್ರೀಲಂಕಾ (SriLanka) ವಿರುದ್ಧವೇ 10 ಶತಕ ಸಿಡಿಸಿ ತೆಂಡೂಲ್ಕರ್ ದಾಖಲೆಯನ್ನ ಮುರಿದಿದ್ದಾರೆ. 

    ಸಚಿನ್ ತೆಂಡೂಲ್ಕರ್ 164 ಪಂದ್ಯಗಳ 102 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರೆ ಕೊಹ್ಲಿ 104 ಪಂದ್ಯಗಳ 101 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಏಕದಿನದಲ್ಲಿ ಕೊಹ್ಲಿ ಒಟ್ಟು 46 ಶತಕ ಹೊಡೆದಿದ್ದು, ಲಂಕಾ ವಿರುದ್ಧವೇ 10 ಶತಕ ಬಾರಿಸಿದ್ದಾರೆ. ಈ ಹಿಂದೆ ಸಚಿನ್ ಲಂಕಾ ವಿರುದ್ಧ 9 ಶತಕ ಹೊಡೆದಿದ್ದರು. ಇದನ್ನೂ ಓದಿ: ಶತಕ ಹೊಡೆದು ಸಚಿನ್‌ ದಾಖಲೆ ಸರಿಗಟ್ಟಿದ ಕಿಂಗ್‌ ಕೊಹ್ಲಿ

    16ನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ಕೊಹ್ಲಿ ಅಂತಿಮವಾಗಿ 50 ಓವರ್ ತನಕ ಔಟಾಗದೇ 166 ರನ್ ಚಚ್ಚಿದ್ದಾರೆ. 14 ಬೌಂಡರಿ, 8 ಸಿಕ್ಸರ್‌ಗಳೂ ಇದರಲ್ಲಿ ಸೇರಿವೆ. ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ ಮೊದಲ 48 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ ಅರ್ಧ ಶತಕ ಸಿಡಿಸಿದ್ದರು. ಬಳಿಕ 85 ಎಸೆತಗಳಲ್ಲಿ 100 ರನ್ ಚಚ್ಚಿದರು. ಶತಕದ ಬಳಿಕ 150.90 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಕೊಹ್ಲಿ ಮುಂದಿನ 25 ಎಸೆತಗಳಲ್ಲಿ 66 ರನ್ ಬಾರಿಸಿದರು. ಪರಿಣಾಮ ಲಂಕಾಗೆ ಟೀಂ ಇಂಡಿಯಾ ಬೃಹತ್ ಮೊತ್ತದ ಗುರಿ ನೀಡಲು ಸಾಧ್ಯವಾಯಿತು.

    ಈವರೆಗೆ ಒಟ್ಟಾರೆಯಾಗಿ 74 ಶತಕ ಸಿಡಿಸಿರುವ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ (ODI Cricket) 46 ಶತಕ ಸಿಡಿಸಿದ್ದಾರೆ. ಇನ್ನೂ 3 ಶತಕ ಸಿಡಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ವಿಶ್ವದ ನಂ.1 ಆಟಗಾರ ಅಗಲಿದ್ದಾರೆ. ಜೊತೆಗೆ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಒಟ್ಟು 100 ಶತಕ ಬಾರಿಸಿರುವ ಸಚಿನ್ ಟೆಸ್ಟ್ನಲ್ಲಿ 51 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳನ್ನ ಸಿಡಿಸಿದ್ದಾರೆ.

    2012 ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 183 ರನ್ ಗಳಿಸಿದ್ದು, ವಿರಾಟ್ ಕೊಹ್ಲಿ ಅವರ ಈವರೆಗಿನ ಅತಿಹೆಚ್ಚು ರನ್ ಆಗಿತ್ತು. ಇದೀಗ 162 ರನ್ ಕೊಹ್ಲಿಯ 2ನೇ ಅತ್ಯಧಿಕ ಸ್ಕೋರ್ ಆಗಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 390 ರನ್ ಗಳಿಸಿತು. ರೋಹಿತ್ ಶರ್ಮಾ 42, ಶುಭಮನ್ ಗಿಲ್ 116, ವಿರಾಟ್ ಕೊಹ್ಲಿ 166, ಶ್ರೇಯಸ್ ಅಯ್ಯರ್ 38, ಕೆ.ಎಲ್ ರಾಹುಲ್ 7, ಸೂರ್ಯಕುಮಾರ್ ಯಾದವ್ 4 ಹಾಗೂ ಅಕ್ಷರ್ ಪಟೇಲ್ 2 ರನ್ ಗಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k