Tag: sachin tendulkar

  • ವಿಶ್ವಕಪ್‌ನಲ್ಲಿ ವಿಶೇಷ ಸಾಧನೆ ಮಾಡಿದ ಡಿ ಕಾಕ್‌ – ಸಚಿನ್‌ ವಿಶ್ವ ದಾಖಲೆ ಮುರಿಯಲು ಬೇಕಿದೆ 129 ರನ್‌

    ವಿಶ್ವಕಪ್‌ನಲ್ಲಿ ವಿಶೇಷ ಸಾಧನೆ ಮಾಡಿದ ಡಿ ಕಾಕ್‌ – ಸಚಿನ್‌ ವಿಶ್ವ ದಾಖಲೆ ಮುರಿಯಲು ಬೇಕಿದೆ 129 ರನ್‌

    ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ 2023 ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್‌ ಕ್ವಿಂಟನ್‌ ಡಿ ಕಾಕ್‌ (Quinton de Kock) ವಿಶಿಷ್ಟ ಸಾಧನೆ ಮಾಡಿದ್ದಾರೆ. ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರನಾಗಿದ್ದು ಹೊರಹೊಮ್ಮಿದ್ದು, ವಿಶ್ವಕಪ್‌ ಇತಿಹಾಸದಲ್ಲಿ ಅಗ್ರ ಸ್ಥಾನದಲ್ಲಿರುವ ಸಚಿನ್‌ ತೆಂಡೂಲ್ಕರ್‌ ವಿಶ್ವ ದಾಖಲೆ ಮುರಿಯಲು 129 ರನ್‌ಗಳಷ್ಟೇ ಬಾಕಿ ಇದೆ.

    ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂದು (ಬುಧವಾರ) ನಡೆದ ಪಂದ್ಯದಲ್ಲಿ ಆಫ್ರಿಕಾ (South Africa) ಪರ ಕ್ವಿಂಟನ್ ಡಿ ಕಾಕ್ ಶತಕ ಸಿಡಿಸಿ ಮಿಂಚಿದರು. ಆ ಮೂಲಕ ಐಸಿಸಿ ವಿಶ್ವಕಪ್ 2023 ರಲ್ಲಿ 500 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಆಸೀಸ್‌ಗೆ ಆಘಾತ – ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಮ್ಯಾಕ್ಸ್‌ವೆಲ್ ಔಟ್

    ಪಂದ್ಯದ ಆರಂಭಕ್ಕೂ ಮುನ್ನ ಡಿ ಕಾಕ್‌ಗೆ 500 ರನ್‌ಗಳನ್ನು ಪೂರೈಸಲು 69 ರನ್‌ಗಳ ಅಗತ್ಯವಿತ್ತು. ಅವರು ನ್ಯೂಜಿಲೆಂಡ್ ವಿರುದ್ಧ 114 ರನ್‌ ಬಾರಿಸಿದರು. ಆ ಮೂಲಕ ಈ ಪಂದ್ಯಾವಳಿಯ 7 ಪಂದ್ಯಗಳಲ್ಲಿ 545 ರನ್ ಗಳಿಸಿದ್ದಾರೆ.

    30ರ ಹರೆಯದ ಅವರು ವಿಶ್ವಕಪ್ ಆವೃತ್ತಿಯಲ್ಲಿ 500 ರನ್ ಗಳಿಸಿದ ದಕ್ಷಿಣ ಆಫ್ರಿಕಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 2007 ರ ವಿಶ್ವಕಪ್‌ನಲ್ಲಿ ಜಾಕ್ವೆಸ್ ಕಾಲಿಸ್ ಅವರ 485 ರನ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಗೆದ್ದರೂ ಪಟಾಕಿ ಸಿಡಿಸುವಂತಿಲ್ಲ – BCCI ಪಟಾಕಿ ಬ್ಯಾನ್‌ ಮಾಡಿದ್ದೇಕೆ?

    ಸಚಿನ್‌ ದಾಖಲೆ ಉಡೀಸ್‌ಗೆ ಬೇಕು 128 ರನ್‌
    ಐಸಿಸಿ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಐದು ಆಟಗಾರರು 600 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2003ರ ವಿಶ್ವಕಪ್‌ನಲ್ಲಿ ಭಾರತದ ಸಚಿನ್ ತೆಂಡೂಲ್ಕರ್ (Sachin Tendulkar) 673 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದರೆ, 2007ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ 659 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಸಚಿನ್‌ ದಾಖಲೆ ಮುರಿಯಲು ಡಿ ಕಾಕ್‌ಗೆ 129 ರನ್‌ಗಳಷ್ಟೇ ಬಾಕಿ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: 18,000 ರನ್‌ ಪೂರೈಸಿ ದಿಗ್ಗಜರ ಎಲೈಟ್‌ ಪಟ್ಟಿ ಸೇರಿದ ಹಿಟ್‌ಮ್ಯಾನ್‌

    World Cup 2023: 18,000 ರನ್‌ ಪೂರೈಸಿ ದಿಗ್ಗಜರ ಎಲೈಟ್‌ ಪಟ್ಟಿ ಸೇರಿದ ಹಿಟ್‌ಮ್ಯಾನ್‌

    ಲಕ್ನೋ: ಟೀಂ ಇಂಡಿಯಾ ಪೂರ್ಣ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ (World Cup 2023) ಟೂರ್ನಿಯಲ್ಲಿ ಟೀಂ ಇಂಡಿಯಾ ಆಟಗಾರರು ತಮ್ಮ ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆಗಳನ್ನ ನುಚ್ಚುನೂರು ಮಾಡುತ್ತಲೇ ಇದ್ದಾರೆ. ಹಾಗೆಯೇ ಭಾನುವಾರ ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ರೋಹಿತ್‌ ಶರ್ಮಾ (Rohit Sharma) ವಿಶೇಷ ಸಾಧನೆ ಮಾಡಿ ದಿಗ್ಗಜರ ಎಲೈಟ್‌ ಪಟ್ಟಿ ಸೇರಿದ್ದಾರೆ.

    ಇಂಗ್ಲೆಂಡ್‌ ವಿರುದ್ಧ ಜವಾಬ್ದಾರಿ ಅರ್ಧಶತಕ ಸಿಡಿಸುವ ಜೊತೆಗೆ 18,000 ಅಂತಾರಾಷ್ಟ್ರೀಯ ರನ್‌ ಪೂರೈಸಿ, ಸಚಿನ್‌ ತೆಂಡೂಲ್ಕರ್‌ (Sachin Tendulkar), ವಿರಾಟ್‌ ಕೊಹ್ಲಿ, ರಾಹುಲ್‌ ದ್ರಾವಿಡ್‌ ಹಾಗೂ ಸೌರವ್‌ ಗಂಗೂಲಿ ಅವರಿದ್ದ ಎಲೈಟ್‌ ಪಟ್ಟಿ ಸೇರಿದ್ದಾರೆ. ಇದರೊಂದಿಗೆ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 18 ಸಾವಿರ ರನ್‌ ಪೂರೈಸಿದ ಹಾಗೂ ಭಾರತದ ಪರ ಅತಿಹೆಚ್ಚು ರನ್‌ ಗಳಿಸಿದ ಟಾಪ್‌-5 ಬ್ಯಾಟರ್‌ ಸಹ ಎನಿಸಿಕೊಂಡಿದ್ದಾರೆ.‌ ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಪ್ಪುಪಟ್ಟಿ ಧರಿಸಿದ ಟೀಂ ಇಂಡಿಯಾ ಆಟಗಾರರು – ಕಾರಣವೇನು ಗೊತ್ತಾ?

    ರೋಹಿತ್‌ ಶರ್ಮಾ ಈವರೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 3,677 ರನ್‌, ಟಿ20 ಕ್ರಿಕೆಟ್‌ನಲ್ಲಿ 3,853 ರನ್‌ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 10,470 ರನ್‌ ಪೂರೈಸಿದ್ದಾರೆ. ಇದರಲ್ಲಿ 45 ಶತಕಗಳು ಹಾಗೂ 98 ಅರ್ಧ ಶತಕಗಳೂ ಸೇರಿವೆ. ವಿರಾಟ್‌ ಕೊಹ್ಲಿ (Virat Kohli) 382 ಇನ್ನಿಂಗ್ಸ್‌ಗಳಲ್ಲಿ, ಸಚಿನ್‌ 412 ಇನ್ನಿಂಗ್ಸ್‌ಗಳಲ್ಲಿ, ರಾಹುಲ್‌ ದ್ರಾವಿಡ್‌ 436 ಇನ್ನಿಂಗ್ಸ್‌ಗಳಲ್ಲಿ, ಸೌರವ್‌ ಗಂಗೂಲಿ 470 ಇನ್ನಿಂಗ್ಸ್‌ಗಳಲ್ಲಿ 18 ಸಾವಿರ ರನ್‌ ಪೂರೈಸಿದ್ದರು. ರೋಹಿತ್‌ ಶರ್ಮಾ 478 ಇನ್ನಿಂಗ್ಸ್‌ಗಳಲ್ಲಿ ಈ ವಿಶೇಷ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಕೊಹ್ಲಿ ಶತಕ ಕಣ್ತುಂಬಿಕೊಳ್ಳಲು 12,445 ಕಿಮೀನಿಂದ ಬಂದಿದ್ದ ಅಭಿಮಾನಿಗೆ ಭಾರೀ ನಿರಾಸೆ

    ಇದರೊಂದಿಗೆ ಟೀಂ ಇಂಡಿಯಾ (Team India) ಪರ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ 5ನೇ ಬ್ಯಾಟರ್‌ ಎನಿಸಿಕೊಂಡಿದ್ದಾರೆ. 34,357 ರನ್‌ ಗಳಿಸಿರುವ ಸಚಿನ್‌ ತೆಂಡೂಲ್ಕರ್‌ ಮೊದಲ ಸ್ಥಾನದಲ್ಲಿದ್ದರೆ, 26,121 ರನ್‌ ಗಳಿಸಿರುವ ವಿರಾಟ್‌ ಕೊಹ್ಲಿ 2ನೇ ಸ್ಥಾನದಲ್ಲಿ, 24,064 ರನ್‌ ಗಳಿಸಿರುವ ರಾಹುಲ್‌ ದ್ರಾವಿಡ್‌ 3ನೇ ಸ್ಥಾನದಲ್ಲಿ 18,433 ರನ್‌ ಗಳಿಸಿರುವ ಸೌರವ್‌ ಗಂಗೂಲಿ 4ನೇ ಸ್ಥಾನದಲ್ಲಿದ್ದರೆ, 18,001 ರನ್‌ ಪೂರೈಸಿರುವ ಹಿಟ್‌ಮ್ಯಾನ್‌ ರೋಹಿತ್‌ 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: World Cup 2023: ನಾನು 100% ಕಿವೀಸ್‌ ಎಂದ ಬೆಂಗಳೂರು ಯುವಕ ರಚಿನ್‌ ರವೀಂದ್ರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಹ್ಲಿ ಶತಕ ಕಣ್ತುಂಬಿಕೊಳ್ಳಲು 12,445 ಕಿಮೀನಿಂದ ಬಂದಿದ್ದ ಅಭಿಮಾನಿಗೆ ಭಾರೀ ನಿರಾಸೆ

    ಕೊಹ್ಲಿ ಶತಕ ಕಣ್ತುಂಬಿಕೊಳ್ಳಲು 12,445 ಕಿಮೀನಿಂದ ಬಂದಿದ್ದ ಅಭಿಮಾನಿಗೆ ಭಾರೀ ನಿರಾಸೆ

    ಲಕ್ನೋ: ಸೂಪರ್‌ ಸಂಡೇನಲ್ಲಿ ಇಂಗ್ಲೆಂಡ್‌ (England) ವಿರುದ್ಧ ನಡೆಯುತ್ತಿರುವ ಪಂದ್ಯವು ರೋಚಕತೆಯಿಂದ ಕೂಡಿದೆ. 20 ವರ್ಷಗಳ ಬಳಿಕ ಟೀಂ ಇಂಡಿಯಾ (Team India) ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ ಮಣಿಸಿ ಹೊಸ ಇತಿಹಾಸ ನಿರ್ಮಿಸುವ ತವಕದಲ್ಲಿದೆ.

    ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಟೀಂ ಇಂಡಿಯಾಕ್ಕೆ ಬಿಟ್ಟುಕೊಟ್ಟಿತು. ಉತ್ತಮ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾ, 11.5 ಓವರ್‌ಗಳಲ್ಲಿ 40 ರನ್‌ಗಳಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ವಿಶ್ವದಾಖಲೆಯ ಶತಕ ಸಿಡಿಸುವ ಭರವಸೆ ಮೂಡಿಸಿದ್ದ ಕಿಂಗ್‌ ಕೊಹ್ಲಿ (Virat Kohli) 9 ಎಸೆತಗಳಲ್ಲಿ 1 ರನ್‌ ಸಹ ಗಳಿಸದೇ ನಿರಾಸೆ ಮೂಡಿಸಿದರು. ಇದು ಭಾರತೀಯ ಅಭಿಮಾನಿಗಳಿಗೆ ಮಾತ್ರವಲ್ಲದೇ ವಿದೇಶಗಳಿಂದ ಬಂದಿದ್ದ ಅಭಿಮಾನಿಗಳಲ್ಲೂ ನಿರಾಸೆ ತರಿಸಿತ್ತು.

    ಲಕ್ನೋ ಕ್ರೀಡಾಂಗಣದಲ್ಲಿ ಕಿಂಗ್‌ ಕೊಹ್ಲಿ ಶತಕ ಸಿಡಿಸುತ್ತಾರೆ ಎಂಬ ಆಸೆಯಿಂದಲೇ ಅಮೆರಿಕದಿಂದ 12,445 ಕಿಮೀ (7,732 ಮೈಲು) ದೂರ ಪ್ರಯಾಣ ಮಾಡಿ ಅಭಿಮಾನಿಯೊಬ್ಬರು ಮ್ಯಾಚ್‌ ನೋಡಲು ಬಂದಿದ್ದಾರೆ. ಆದ್ರೆ ಕೊಹ್ಲಿ ಒಂದು ರನ್‌ ಕೂಡ ಗಳಿಸದೇ ಶೂನ್ಯಕ್ಕೆ ಔಟಾಗಿದ್ದು, ಅಮಾನಿಗಳಿಗೆ (Kohli Fans) ಅರಗಿಸಿಕೊಳ್ಳಲಾರದಷ್ಟು ಬೇಸರವಾಗಿದೆ. ಇದನ್ನೂ ಓದಿ: ಬಾಂಗ್ಲಾ ವಿರುದ್ಧ 87 ರನ್‌ಗಳ ಭರ್ಜರಿ ಜಯ – ಬಲಿಷ್ಠ ಇಂಗ್ಲೆಂಡ್‌ ತಂಡವನ್ನೇ ಹಿಂದಿಕ್ಕಿದ ಡಚ್ಚರು

    2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಇಂಡಿಯಾ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ ‌ಬೆಸ್ಟ್‌ ಫಾರ್ಮ್‌ನಲ್ಲಿದ್ದು, 6 ಪಂದ್ಯಗಳಲ್ಲಿ 1 ಶತಕ ಸೇರಿ ಒಟ್ಟು 354 ರನ್‌ ಗಳಿಸಿದ್ದಾರೆ. ಈ ಮೂಲಕ ಪ್ರಸ್ತುತ ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ಆಟಗಾರರ ಪೈಕಿ 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: World Cup 2023: ನಾನು 100% ಕಿವೀಸ್‌ ಎಂದ ಬೆಂಗಳೂರು ಯುವಕ ರಚಿನ್‌ ರವೀಂದ್ರ

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ 29 ಟೆಸ್ಟ್‌ ಶತಕ, 1 T20 ಶತಕ ಹಾಗೂ 48 ಏಕದಿನ ಕ್ರಿಕೆಟ್‌ ಶತಕ ಸೇರಿ ಒಟ್ಟು 78 ಶತಕಗಳನ್ನು ಸಿಡಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧ ತಮ್ಮ ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಸಿಡಿಸುವ ಮೂಲಕ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನ ಸರಿಗಟ್ಟುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಅಭಿಮಾನಿಗಳ ಕನಸು ಹುಸಿಯಾಗಿದೆ. ಇದನ್ನೂ ಓದಿ: World Cup 2023: ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಭಾರತದ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಆಸೀಸ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ನಾನು 100% ಕಿವೀಸ್‌ ಎಂದ ಬೆಂಗಳೂರು ಯುವಕ ರಚಿನ್‌ ರವೀಂದ್ರ

    World Cup 2023: ನಾನು 100% ಕಿವೀಸ್‌ ಎಂದ ಬೆಂಗಳೂರು ಯುವಕ ರಚಿನ್‌ ರವೀಂದ್ರ

    ಧರ್ಮಶಾಲಾ: ಆಸ್ಟ್ರೇಲಿಯಾ (Australia) ವಿರುದ್ಧ ಇಲ್ಲಿನ HPCA ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸೀಸ್‌ ಬೌಲರ್‌ಗಳನ್ನ ಬೆಂಡೆತ್ತಿದ್ದ ಕಿವೀಸ್ ಆಟಗಾರ ರಚಿನ್ ರವೀಂದ್ರ (Rachin Ravindra) 77 ಎಸೆತಗಳಲ್ಲೇ 5 ಸಿಕ್ಸರ್, 7 ಬೌಂಡರಿಗಳ ನೆರವಿನೊಂದಿಗೆ ಶತಕ ಸಿಡಿಸಿ ಮಿಂಚಿದರು. ಒಟ್ಟು 89 ಎಸೆತಗಳನ್ನು ಎದುರಿಸಿದ ರವೀಂದ್ರ 116 ರನ್ (9 ಬೌಂಡರಿ, 5 ಸಿಕ್ಸರ್) ಬಾರಿಸುವ ಮೂಲಕ ಸ್ಫೋಟಕ ಪ್ರದರ್ಶನ ನೀಡಿ ಗಮನ ಸೆಳೆದರು.

    ಈ ಶತಕದೊಂದಿಗೆ 23ನೇ ವಯಸ್ಸಿಗೆ ವಿಶ್ವಕಪ್‌ (World Cup) ಇತಿಹಾಸದಲ್ಲಿ 2 ಶತಕ ಸಿಡಿಸುವ ಮೂಲಕ ಭಾರತದ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ವಿಶೇಷ ದಾಖಲೆಯನ್ನೂ ಸರಿಗಟ್ಟಿದರು. ಪಂದ್ಯ ಮುಗಿದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ, ಭಾರತೀಯ ಮೂಲದವನಾಗಿ ಭಾರತದಲ್ಲಿ ಪ್ರದರ್ಶನ ನೀಡುತ್ತಿರುವ ಒತ್ತಡದ ಬಗ್ಗೆ ಕೇಳಲಾಯಿತು. ಇದನ್ನೂ ಓದಿ: 23ನೇ ವಯಸ್ಸಿಗೆ ಸಚಿನ್‌ ದಾಖಲೆ ಸರಿಗಟ್ಟಿದ ಬೆಂಗಳೂರು ಯುವಕ ರಚಿನ್‌

    ಇದಕ್ಕೆ ಪ್ರತಿಕ್ರಿಯಿಸಿದ ರಚಿನ್‌, ನನಗೆ ಈ ಬಗ್ಗೆ ಸಾಕಷ್ಟುಬಾರಿ ಕೇಳಿದ್ದಾರೆ. ನಾನು 100% ಕಿವೀಸ್‌ ಅಟಗಾರನೇ ಎಂದು ಭಾವಿಸುತ್ತೇನೆ. ಆದ್ರೆ ನನ್ನ ಭಾರತೀಯ ಪರಂಪರೆ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ. ನನ್ನ ಹೆತ್ತವರು ಹುಟ್ಟಿಬೆಳೆದ ದೇಶ ಇದು, ನನ್ನ ಕುಟುಂಬದ ಬಹಳಷ್ಟು ಮಂದಿ ಇಲ್ಲಿದ್ದಾರೆ. ಇಲ್ಲಿನ ಪರಿಸ್ಥಿತಿ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಭಾರತದ ಪ್ರವಾಸಕ್ಕೆ ಬರಲು ಇದೆಲ್ಲವೂ ನೆರವಾಗುತ್ತದೆ. ನನ್ನ ಆಟ ಪರ್ಫೆಕ್ಟ್‌ ಆಗಿ ಇರಬೇಕು ಎಂದು ನಾನು ಬಯಸುವುದಿಲ್ಲ, ಆದ್ರೆ ಉತ್ತಮ ಪ್ರದರ್ಶನ ನೀಡಬೇಕೆಂದು ಪ್ರಯತ್ನಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

    ನಂತರ ಧರ್ಮಶಾಲಾ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಂದ ಸಿಕ್ಕ ಬೆಂಬಲದ ಬಗ್ಗೆ ಮಾತನಾಡಿದ ರಚಿನ್‌, ಖಂಡಿತವಾಗಿಯೂ ಪ್ರೇಕ್ಷಕರಿಂದ ಉತ್ತಮ ಬೆಂಬಲ ಸಿಕ್ಕಿದೆ. ಭಾರತದಲ್ಲಿ ಆಡಿದ ಪಂದ್ಯಗಳ ಪೈಕಿ ಹೆಚ್ಚಿನ ಜನ ಪ್ರೇಕ್ಷಕರನ್ನು ಒಳಗೊಂಡ ಪಂದ್ಯಗಳಲ್ಲಿ ಇದೂ ಒಂದಾಗಿದೆ. ಅಭಿಮಾನಿಗಳು ಸ್ಪಂದಿಸುತ್ತಿದ್ದ ರೀತಿ ತುಂಬಾ ಖುಷಿ ಕೊಟ್ಟಿದೆ. ಚಿಕ್ಕಮಕ್ಕಳಾಗಿದ್ದಾಗ ಸಾವಿರಾರು ಜನ ನಮ್ಮ ಹೆಸರು ಹೇಳಬೇಕೆಂದು ಬಯಸುತ್ತೇವೆ. ಆ ಕನಸು ಈಗ ನನಸಾಗಿದೆ. ಆ ಕ್ಷಣವನ್ನು ಕಣ್ತುಂಬಿಕೊಳ್ಳುವುದು ಆನಂದವಾಗಿತ್ತು, ಅದನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಧರ್ಮಶಾಲಾ ಅಂಗಳದಲ್ಲಿ ವಂದೇ ಮಾತರಂ ಝೇಂಕಾರ – ಅದ್ಭುತ ವೀಡಿಯೋ ನೀವೇ ನೋಡಿ

    ಕೊಹ್ಲಿ ಹಿಂದಿಕ್ಕಿದ ರವೀಂದ್ರ: ಪ್ರಸ್ತುತ ವಿಶ್ವಕಪ್ ಕ್ರಿಕೆಟ್‌ನಲ್ಲಿ 354 ರನ್ ಗಳಿಸಿದ್ದ ಕಿಂಗ್ ಕೊಹ್ಲಿ ಅತಿಹೆಚ್ಚು ರನ್ ಗಳಿಸಿದ 4ನೇ ಬ್ಯಾಟರ್ ಎನಿಸಿಕೊಂಡಿದ್ದರು. ಆದ್ರೆ ಆಸೀಸ್ ವಿರುದ್ಧ ಸ್ಫೋಟಕ ಶತಕ ಸಿಡಿಸುವ ಮೂಲಕ 6 ಪಂದ್ಯಗಳಲ್ಲಿ 2 ಶತಕ ಸೇರಿ 406 ರನ್ ಗಳಿಸಿರುವ ರಚಿನ್ ರವೀಂದ್ರ ಕೊಹ್ಲಿಯನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. 431 ರನ್ ಗಳಿಸಿರುವ ಕ್ವಿಂಟನ್ ಡಿಕಾಕ್ ಮೊದಲ ಸ್ಥಾನದಲ್ಲಿ, 413 ರನ್ ಗಳಿಸಿರುವ ಡೇವಿಡ್ ವಾರ್ನರ್ 2ನೇ ಸ್ಥಾನ, 356 ರನ್ ಗಳಿಸಿರುವ ಏಡನ್ ಮಾರ್ಕ್ರಮ್ 4ನೇ ಸ್ಥಾನದಲ್ಲಿದ್ದಾರೆ. ಭಾನುವಾರ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲೂ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದು, 6 ಪಂದ್ಯಗಳಿಂದ 354 ರನ್‌ ಗಳಿಸಿ 5ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇದನ್ನೂ ಓದಿ: World Cup 2023: ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಭಾರತದ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಆಸೀಸ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 23ನೇ ವಯಸ್ಸಿಗೆ ಸಚಿನ್‌ ದಾಖಲೆ ಸರಿಗಟ್ಟಿದ ಬೆಂಗಳೂರು ಯುವಕ ರಚಿನ್‌

    23ನೇ ವಯಸ್ಸಿಗೆ ಸಚಿನ್‌ ದಾಖಲೆ ಸರಿಗಟ್ಟಿದ ಬೆಂಗಳೂರು ಯುವಕ ರಚಿನ್‌

    – ಕಿಂಗ್‌ ಕೊಹ್ಲಿಯನ್ನೇ ಹಿಂದಿಕ್ಕಿದ ರಚಿನ್‌ ರವೀಂದ್ರ

    ಧರ್ಮಶಾಲಾ: ಸದ್ಯ ಟೀಂ ಇಂಡಿಯಾ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ (Virat Kohli), ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರ ಶತಕ ದಾಖಲೆಯನ್ನು ಸರಿಗಟ್ಟುತ್ತಾರೆ ಎಂಬುದು ಚರ್ಚೆಯಲ್ಲಿರುವ ವಿಷಯ. ಈ ನಡುವೆ ಕಿವೀಸ್‌ ತಂಡದಲ್ಲಿ ಆಡುತ್ತಿರುವ ಬೆಂಗಳೂರು ಮೂಲದ ಯುವಕ ತಾನು ಪ್ರವೇಶಿಸಿದ ಚೊಚ್ಚಲ ವಿಶ್ವಕಪ್‌ ಆವೃತ್ತಿಯಲ್ಲೇ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನ ಸರಿಗಟ್ಟಿದ್ದಾರೆ.

    ಶನಿವಾರ (ಅ.28) ಧರ್ಮಶಾಲಾದ HPCA ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾದ ತಂಡವು 49.2 ಓವರ್‌ಗಳಿಗೆ 388 ರನ್‌ಗಳಿಗೆ ಆಲೌಟ್‌ ಆಯಿತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ (New Zealand) 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 383 ರನ್‌ ಗಳಿಸಿ ವಿರೋಚಿತ ಸೋಲಿಗೆ ತುತ್ತಾಯಿತು. ಇದನ್ನೂ ಓದಿ: World Cup 2023: ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಭಾರತದ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಆಸೀಸ್‌

    ಈ ಪಂದ್ಯದಲ್ಲಿ ಆಸೀಸ್‌ ಬೌಲರ್‌ಗಳನ್ನ ಬೆಂಡೆತ್ತಿದ್ದ ಕಿವೀಸ್‌ ಆಟಗಾರ ರಚಿನ್‌ ರವೀಂದ್ರ 77 ಎಸೆತಗಳಲ್ಲೇ 5 ಸಿಕ್ಸರ್‌, 7 ಬೌಂಡರಿಗಳ ನೆರವಿನೊಂದಿಗೆ ಶತಕ ಸಿಡಿಸಿ ಮಿಂಚಿದರು. ಒಟ್ಟು 89 ಎಸೆತಗಳನ್ನು ಎದುರಿಸಿದ ರವೀಂದ್ರ (Rachin Ravindra) 116 ರನ್‌ (9 ಬೌಂಡರಿ, 5 ಸಿಕ್ಸರ್‌) ಬಾರಿಸುವ ಮೂಲಕ ಸ್ಪೋಟಕ ಪ್ರದರ್ಶನ ನೀಡಿ ಗಮನ ಸೆಳೆದರು. ಈ ಶತಕದೊಂದಿಗೆ ಭಾರತದ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ವಿಶೇಷ ದಾಖಲೆಯೊಂದನ್ನೂ ಸರಿಗಟ್ಟಿದರು.

    24 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಏಕದಿನ ವಿಶ್ವಕಪ್‌ ಇತಿಹಾಸದಲ್ಲಿ 2 ಶತಕಗಳನ್ನು ಗಳಿಸಿದವರಲ್ಲಿ ಸಚಿನ್‌ ತೆಂಡೂಲ್ಕರ್‌ ಮೊದಲಿಗರಾಗಿದ್ದರು. ಸಚಿನ್‌ 23 ವರ್ಷದವರಾಗಿದ್ದಾಗ 1996ರ ವಿಶ್ವಕಪ್‌ನಲ್ಲಿ (World Cup) 2 ಶತಕ ಸಿಡಿಸಿದ್ದರು. ಇದೀಗ 23 ವರ್ಷ ವಯಸ್ಸಿನ ರಚಿನ್‌ ರವೀಂದ್ರ 2023ರ ವಿಶ್ವಕಪ್‌ ಟೂರ್ನಿಯಲ್ಲಿ 2 ಶತಕ ಸಿಡಿಸಿ ಸಚಿನ್‌ ದಾಖಲೆಯನ್ನ ಸರಿಗಟ್ಟಿದ್ದಾರೆ. ಇದನ್ನೂ ಓದಿ: World Cup 2023: ರೋಚಕ ಪಂದ್ಯದಲ್ಲಿ ಆಸೀಸ್‌ಗೆ 5 ರನ್‌ಗಳ ಜಯ – ಹೋರಾಡಿ ಸೋತ ಕಿವೀಸ್‌  

    ರಚಿನ್‌ ರವೀಂದ್ರ ಅವರು ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ ಜನಿಸಿದ್ದರೂ ಅವರ ಅಪ್ಪ-ಅಮ್ಮ ಮೂಲತಃ ಬೆಂಗಳೂರಿನವರು. ತಂದೆ ರವಿ ಕೃಷ್ಣಮೂರ್ತಿ ಹಾಗೂ ತಾಯಿ ದೀಪಾ ಕೃಷ್ಣಮೂರ್ತಿ ಅವರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾಗಿದ್ದು, ಉದ್ಯೋಗ ಅರಸಿ 1990ರ ದಶಕದಲ್ಲಿ ಬೆಂಗಳೂರಿನಿಂದ ನ್ಯೂಜಿಲೆಂಡ್‌ಗೆ ತೆರಳಿದ್ದರು. ರಚಿನ್‌ ರವೀಂದ್ರ ಅವರ ತಂದೆ, ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದರೂ ಅಪ್ಪಟ ಕ್ರಿಕೆಟ್‌ ಅಭಿಮಾನಿ. ಅದರಲ್ಲೂ ರವಿ ಕೃಷ್ಣಮೂರ್ತಿ ಅವರು ಭಾರತೀಯ ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌ ಹಾಗೂ ರಾಹುಲ್‌ ದ್ರಾವಿಡ್‌ ಅವರ ಪಕ್ಕಾ ಫ್ಯಾನ್‌. ಈ ಕಾರಣದಿಂದಾಗಿ ರಾಹುಲ್‌ ದ್ರಾವಿಡ್‌ (Rahul Dravid) ಹೆಸರಿನಿಂದ ʻರʼ ಮತ್ತು ಸಚಿನ್‌ ತೆಂಡೂಲ್ಕರ್‌ (Sachin Tendulkar) ಹೆಸರಿನಿಂದ ʻಚಿನ್‌ʼ ಅಕ್ಷರಗಳನ್ನು ತೆಗೆದುಕೊಂಡು ತಮ್ಮ ಪುತ್ರನಿಗೆ ರಚಿನ್‌ ಎಂದು ಹೆಸರಿಟ್ಟಿದ್ದರು ಎಂಬುದು ವಿಶೇಷ. ಇದನ್ನೂ ಓದಿ: IND vs ENG: 2019 ರ ವಿಶ್ವಕಪ್ ಪಂದ್ಯದಲ್ಲಿ ಭಾರತ ಕೊನೆ ಬಾರಿಗೆ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದಾಗ ಏನಾಗಿತ್ತು?

    ಕೊಹ್ಲಿ ಹಿಂದಿಕ್ಕಿದ ರವೀಂದ್ರ: ಪ್ರಸ್ತುತ ವಿಶ್ವಕಪ್‌ ಕ್ರಿಕೆಟ್‌ನಲ್ಲಿ 354 ರನ್‌ ಗಳಿಸಿದ್ದ ಕಿಂಗ್‌ ಕೊಹ್ಲಿ ಅತಿಹೆಚ್ಚು ರನ್‌ ಗಳಿಸಿದ 4ನೇ ಬ್ಯಾಟರ್‌ ಎನಿಸಿಕೊಂಡಿದ್ದರು. ಆದ್ರೆ ಆಸೀಸ್‌ ವಿರುದ್ಧ ಸ್ಫೋಟಕ ಶತಕ ಸಿಡಿಸುವ ಮೂಲಕ 6 ಪಂದ್ಯಗಳಲ್ಲಿ 2 ಶತಕ ಸೇರಿ 406 ರನ್‌ ಗಳಿಸಿರುವ ರಚಿನ್‌ ರವೀಂದ್ರ ಕೊಹ್ಲಿಯನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. 431 ರನ್‌ ಗಳಿಸಿರುವ ಕ್ವಿಂಟನ್‌ ಡಿಕಾಕ್‌ ಮೊದಲ ಸ್ಥಾನದಲ್ಲಿ, 413 ರನ್‌ ಗಳಿಸಿರುವ ಡೇವಿಡ್‌ ವಾರ್ನರ್‌ 2ನೇ ಸ್ಥಾನದಲ್ಲಿ ಹಾಗೂ 356 ರನ್‌ ಗಳಿಸಿರುವ ಏಡನ್‌ ಮಾರ್ಕ್ರಮ್‌ 4ನೇ ಸ್ಥಾನದಲ್ಲಿದ್ದರೆ, 354 ರನ್‌ ಗಳಿಸಿರುವ ಕೊಹ್ಲಿ 5ನೇ ಸ್ಥಾನಕ್ಕೆ ಕುಸಿದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಾಖಲೆ ಶತಕ ಸಿಡಿಸಲು ಕೊಹ್ಲಿ ವೇಯ್ಟಿಂಗ್‌ – ಮತ್ತೆ ಆ ತಪ್ಪು ಮಾಡದಿರಲಿ ಅಂದ್ರು ಫ್ಯಾನ್ಸ್‌

    ದಾಖಲೆ ಶತಕ ಸಿಡಿಸಲು ಕೊಹ್ಲಿ ವೇಯ್ಟಿಂಗ್‌ – ಮತ್ತೆ ಆ ತಪ್ಪು ಮಾಡದಿರಲಿ ಅಂದ್ರು ಫ್ಯಾನ್ಸ್‌

    ಲಕ್ನೋ: ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ (Team India) ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ (Virat Kohli) ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈವರೆಗೆ ಆಡಿರುವ 5 ಪಂದ್ಯಗಳಲ್ಲಿ 1 ಶತಕ ಸೇರಿ ಒಟ್ಟು 354 ರನ್‌ ಗಳಿಸಿದ್ದಾರೆ.

    ಈ ಮೂಲಕ ಪ್ರಸ್ತುತ ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ಆಟಗಾರರ ಪೈಕಿ 2ನೇ ಸ್ಥಾನದಲ್ಲಿದ್ದಾರೆ. 5 ಪಂದ್ಯಗಳಲ್ಲಿ 3 ಭರ್ಜರಿ ಶತಕಗಳೊಂದಿಗೆ 407 ರನ್‌ ಗಳಿಸಿರುವ ದಕ್ಷಿಣ ಆಫ್ರಿಕಾದ ಕ್ವಿಂಟನ್‌ ಡಿಕಾಕ್‌ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ಇನ್ನೊಂದು ಶತಕ ಸಿಡಿಸಿದರೆ, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ (ODI) 49 ಶತಕ ಸಿಡಿಸಿರುವ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರ ವಿಶ್ವದಾಖಲೆಯನ್ನು ಸರಿಗಟ್ಟಲಿದ್ದಾರೆ. ಇದನ್ನೂ ಓದಿ: Record Break: ಭಾರತ-ಕಿವೀಸ್‌ ರೋಚಕ ಪಂದ್ಯಕ್ಕೆ ಗ್ರೌಂಡ್‌ ಹೊರಗಿನ ದಾಖಲೆಗಳೂ ಉಡೀಸ್‌

    ಸಚಿನ್‌ ದಾಖಲೆ ಮುರಿಯುವ ಸನಿಹದಲ್ಲಿ ಕಿಂಗ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಒಟ್ಟು 78 ಶತಕಗಳನ್ನು ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 48 ಶತಕ ಗಳಿಸಿರುವ ಕಿಂಗ್‌ ಕೊಹ್ಲಿ, ಈ ಟೂರ್ನಿಯಲ್ಲಿ ಇನ್ನೆರಡು ಶತಕಗಳನ್ನು ಸಿಡಿಸಿದರೆ, ಸಚಿನ್‌ ತೆಂಡೂಲ್ಕರ್ ಅವರ (49 ಶತಕ) ಶತಕಗಳ ದಾಖಲೆಯನ್ನು ಮುರಿಯಲಿದ್ದಾರೆ. ಇದನ್ನೂ ಓದಿ: ನಮ್ಮನ್ನು ಕ್ಷಮಿಸಿಬಿಡಿ ಪಾಕಿಸ್ತಾನ – ಅಫ್ಘಾನ್‌ ವಿರುದ್ಧ ಸೋಲಿನ ಬಳಿಕ ಅಬ್ದುಲ್ಲಾ ಶಫೀಕ್ ಭಾವುಕ ಟ್ವೀಟ್‌

    ಮತ್ತೆ ಆ ತಪ್ಪು ಮಾಡದಿರಲಿ:‌ ಕಳೆದ ಭಾನುವಾರ ನ್ಯೂಜಿಲೆಂಡ್‌ ವಿರುದ್ಧ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿಗೆ ಶತಕ ಸಿಡಿಸುವ ಅವಕಾಶವಿತ್ತು. ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿದ್ದ ಕೊಹ್ಲಿ, ಕೊನೆಯಲ್ಲಿ ಬಿರುಸಿನ ಆಟಕ್ಕೆ ತಿರುಗಿದರು. 103 ಎಸೆತಗಳಲ್ಲಿ 95 ರನ್‌ ಗಳಿಸಿ ಆಡುತ್ತಿದ್ದಾಗ ಗೆಲುವಿಗೆ ಇನ್ನೂ 5 ರನ್‌ ಬಾಕಿಯಿತ್ತು. ಇದನ್ನೂ ಓದಿ: ಶಮಿ ಹೊಸ ದಾಖಲೆ – ODI ವಿಶ್ವಕಪ್‌ ಇತಿಹಾಸದಲ್ಲೇ 2 ಬಾರಿ ಐದು ವಿಕೆಟ್‌ ಕಬಳಿಸಿದ ಮೊದಲ ಭಾರತೀಯ

    ಕೊಹ್ಲಿಯ ಶತಕಕ್ಕೂ ಅಷ್ಟೇ ರನ್‌ ಬೇಕಿತ್ತು. ಈ ವೇಳೆ 104ನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಲು ಯತ್ನಿಸಿದ ಕೊಹ್ಲಿ ಕ್ಯಾಚ್‌ ನೀಡಿ ನಿರಾಸೆ ಅನುಭವಿಸಿದರು. ಕೋಟ್ಯಂತರ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದಂತಾಯಿತು. ಆದ್ದರಿಂದ ಕೊಹ್ಲಿ ಈ ಪಂದ್ಯದಲ್ಲಾದರೂ 49ನೇ ಶತಕ ಸಿಡಿಸಲಿ, ನ್ಯೂಜಿಲೆಂಡ್‌ ವಿರುದ್ಧ ಮಾಡಿದ ತಪ್ಪು ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವಂತೆ ಅಭಿಮಾನಿಗಳು ಸಲಹೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Breaking: ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಕ್ಕೆ ಧೋನಿ, ಸಚಿನ್ ಆಗಮನ

    Breaking: ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಕ್ಕೆ ಧೋನಿ, ಸಚಿನ್ ಆಗಮನ

    ಕಿಚ್ಚ ಸುದೀಪ್ (Sudeep) ನೇತೃತ್ವದಲ್ಲಿ ಪ್ರತಿ ವರ್ಷವೂ ಆಯೋಜನೆಗೊಳ್ಳುವ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ (Cricket) ಪಂದ್ಯಾವಳಿಯ ಉದ್ಘಾಟನೆ ಸಮಾರಂಭಕ್ಕೆ ಭಾರತೀಯ ಕ್ರಿಕೆಟ್ ದಿಗ್ಗಜರಾದ ಎಂ.ಎಸ್. ಧೋನಿ (MS Dhoni) ಮತ್ತು ಸಚಿನ್ ತೆಂಡೂಲ್ಕರ್ (Sachin Tendulkar) ಆಗಮಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈಗಾಗಲೇ ಇಬ್ಬರ ಜೊತೆ ಮಾತುಕತೆ ಕೂಡ ನಡೆಸಲಾಗಿದೆ.

    ಹಲವಾರು ವರ್ಷಗಳಿಂದ ಕನ್ನಡ ಚಿತ್ರೋದ್ಯಮವನ್ನು ಸಂಘಟಿಸಿಕೊಂಡು ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡುತ್ತಾ ಬರಲಾಗಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲ, ಹುಬ್ಬಳಿಯಲ್ಲೂ ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. ಕನ್ನಡ ಸಿನಿಮಾ ರಂಗದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಈ ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ.

    ನಟರು ತಮ್ಮದೇ ಆದ ತಂಡಗಳನ್ನು ಕಟ್ಟಿಕೊಂಡು ಆಟವಾಡುವುದು ಈ ಕ್ರಿಕೆಟ್ ಪಂದ್ಯದ ಉದ್ದೇಶ. ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕ್ರೀಡೆಗೂ ಉತ್ತೇಜಿಸುವಂತಹ ಕೆಲಸವನ್ನು ಕನ್ನಡ ಚಿತ್ರೋದ್ಯಮ ಮಾಡುತ್ತಾ ಬಂದಿದೆ. ಕೆಸಿಸಿ ಹೆಸರಿನಲ್ಲಿ ಈ ಪಂದ್ಯಗಳು ಆಯೋಜನೆ ಆಗುತ್ತವೆ.

     

    ಶಿವರಾಜ್ ಕುಮಾರ್, ಗಣೇಶ್, ಸುದೀಪ್, ಪುನೀತ್ ರಾಜ್ ಕುಮಾರ್, ಯಶ್, ದರ್ಶನ್, ಉಪೇಂದ್ರ, ಡಾಲಿ ಧನಂಜಯ್ ಹೀಗೆ ಅನೇಕರು ಈ ಪಂದ್ಯದಲ್ಲಿ ಆಡಿದ್ದಾರೆ. ಈ ಕ್ರಿಕೆಟ್ ಪಂದ್ಯದ ಮತ್ತೊಂದು ವಿಶೇಷ ಅಂದರೆ, ನುರಿತ ಕ್ರಿಕೆಟ್ ಆಟಗಾರರು ಕೂಡ ಭಾಗಿ ಆಗಿರುತ್ತಾರೆ. ಭಾರತ ಕ್ರಿಕೆಟ್ ತಂಡದಲ್ಲಿ ಆಡಿರುವ ಮತ್ತು ವಿದೇಶಿ ಕ್ರಿಕೆಟ್ ಆಟಗಾರರು ಕೂಡ ಪಂದ್ಯದಲ್ಲಿ ಆಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Virat Kohli: ಸಚಿನ್‌ ತೆಂಡೂಲ್ಕರ್‌ ಮತ್ತೊಂದು ದಾಖಲೆ ಉಡೀಸ್‌ ಮಾಡಿದ ಕೊಹ್ಲಿ!

    Virat Kohli: ಸಚಿನ್‌ ತೆಂಡೂಲ್ಕರ್‌ ಮತ್ತೊಂದು ದಾಖಲೆ ಉಡೀಸ್‌ ಮಾಡಿದ ಕೊಹ್ಲಿ!

    ಪುಣೆ: ಚೇಸ್‌ ಮಾಸ್ಟರ್‌, ಸೂಪರ್‌ ಸ್ಟಾರ್‌ ಕ್ರಿಕೆಟಿಗ, ಕ್ರಿಕೆಟ್‌ ಲೋಕದ ಕಿಂಗ್‌ ಎಂದೇ ವಿಶ್ವದಾದ್ಯಂತ ಖ್ಯಾತಿ ಗಳಿಸಿರುವ ಟೀಂ ಇಂಡಿಯಾ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ (Virat Kohli) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.

    2018ರ ಆಗಸ್ಟ್‌ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟ ಕೊಹ್ಲಿ ಇದೀಗ ವಿಶ್ವದಲ್ಲೇ ಅತಿಹೆಚ್ಚು ರನ್‌ ಗಳಿಸಿದ ಟಾಪ್‌-5 ಬ್ಯಾಟರ್ಸ್‌ಗಳ ಪಟ್ಟಿ ಸೇರಿ ಇತಿಹಾಸ ನಿರ್ಮಿಸಿದ್ದು, ಒಂದು ಸ್ಥಾನ ಮುಂದಕ್ಕೆ ಜಿಗಿದಿದ್ದಾರೆ. ಇದನ್ನೂ ಓದಿ: ಬಾಬರ್‌ ಆಜಂ ಬಳಿಕ ನವೀನ್ ಉಲ್ ಹಕ್‌ನನ್ನ ಹೊಗಳಿದ ಗಂಭೀರ್‌ – ಕಾಲೆಳೆದ ಕೊಹ್ಲಿ ಫ್ಯಾನ್ಸ್‌

    ಬಾಂಗ್ಲಾದೇಶದ (Bangladesh) ವಿರುದ್ಧ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಕೊಹ್ಲಿ 50ಕ್ಕೂ ಹೆಚ್ಚು ರನ್‌ ಗಳಿಸುವ ಮೂಲಕ ವೇಗವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 26,000 ರನ್‌ ಗಳಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 511 ಪಂದ್ಯ ಮತ್ತು 567 ಇನ್ನಿಂಗ್ಸ್‌ಗಳಲ್ಲಿ 26 ಸಾವಿರ ರನ್‌ ಬಾರಿಸಿರುವ ಕೊಹ್ಲಿ 600 ಇನ್ನಿಂಗ್ಸ್‌ಗಳಲ್ಲಿ 26,000 ರನ್‌ ಪೂರೈಸಿದ ಸಚಿನ್‌ ತೆಂಡೂಲ್ಕರ್‌ (Sachin Tendulkar) ದಾಖಲೆಯನ್ನ ಉಡೀಸ್‌ ಮಾಡಿದ್ದಾರೆ. ಅಲ್ಲದೇ ಈ ಪಂದ್ಯದಲ್ಲಿ 106.18 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಕೊಹ್ಲಿ ಒಟ್ಟು 97 ಎಸೆತಗಳಲ್ಲಿ ಅಜೇಯ 103 ರನ್‌ ಬಾರಿಸಿ ಮಿಂಚಿದ್ದಾರೆ. ಇದನ್ನೂ ಓದಿ: Asia Cup 2023ː ಕಿಂಗ್‌ ಕೊಹ್ಲಿ, ರಾಹುಲ್‌ ಆರ್ಭಟಕ್ಕೆ‌ ಪಾಕ್‌ ಪಂಚರ್‌ – 357 ರನ್‌ ಗುರಿ ನೀಡಿದ ಭಾರತ

    ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 78ನೇ ಶತಕ ಸಿಡಿಸಿರುವ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ 48ನೇ ಶತಕ ಸಿಡಿಸಿದ್ದು, ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿಯಲು 2 ಶತಕಗಳಷ್ಟೇ ಬಾಕಿಯಿವೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ಟಾಪ್‌ 5 ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದನ್ನೂ ಓದಿ: Asia Cup 2023ː ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಿಂಗ್‌ ಕೊಹ್ಲಿ ಮತ್ತೊಂದು ಮೈಲುಗಲ್ಲು

    ವೃತ್ತಿ ಜೀವನದಲ್ಲಿ 34,357 ರನ್‌ ಗಳಿಸಿರುವ ಸಚಿನ್‌ ತೆಂಡೂಲ್ಕರ್‌ ಅಗ್ರಸ್ಥಾನದಲ್ಲಿದ್ದರೆ, 28,016 ರನ್‌ ಗಳಿಸಿರುವ ಶ್ರೀಲಂಕಾ ತಂಡದ ಮಾಜಿ ಕ್ರಿಕೆಟಿಗ ಕುಮಾರ್‌ ಸಂಗಕ್ಕಾರ 2ನೇ ಸ್ಥಾನದಲ್ಲಿದ್ದಾರೆ. 27,483 ರನ್‌ ಗಳಿಸಿರುವ ರಿಕಿ ಪಾಟಿಂಗ್‌ 3ನೇ ಸ್ಥಾನದಲ್ಲಿದ್ದರೆ, 25,957 ರನ್‌ ಗಳಿಸಿದ್ದ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿ ಕೊಹ್ಲಿ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೋಹಿತ್, ಬುಮ್ರಾ ಬ್ಯಾಟಿಂಗ್ ದಾಳಿ ಕೊಂಡಾಡಿದ ಕ್ರಿಕೆಟ್ ದಿಗ್ಗಜ ತೆಂಡೂಲ್ಕರ್

    ರೋಹಿತ್, ಬುಮ್ರಾ ಬ್ಯಾಟಿಂಗ್ ದಾಳಿ ಕೊಂಡಾಡಿದ ಕ್ರಿಕೆಟ್ ದಿಗ್ಗಜ ತೆಂಡೂಲ್ಕರ್

    ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ಸ್ಫೋಟಕ ಶತಕ ಬಾರಿಸಿ ದಾಖಲೆ ನಿರ್ಮಿಸಿದ ನಂತರ ಅವರ ಆಟದ ಬಗ್ಗೆ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ (Sachin Tendulkar) ಪ್ರತಿಕ್ರಿಯಿಸಿದ್ದಾರೆ. ಬುಮ್ರಾ ಮತ್ತು ರೋಹಿತ್ ಅವರ ಎರಡು ಉತ್ತಮ ಪ್ರದರ್ಶನಗಳು ಟೀಂ ಇಂಡಿಯಾಕ್ಕೆ ಬಲ ನೀಡಿದೆ ಎಂದು ಅವರು ಕೊಂಡಾಡಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

    ಐಸಿಸಿ ವಿಶ್ವಕಪ್‍ನಲ್ಲಿ  (World Cup) ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಅವರ ಸ್ಫೋಟಕ ಶತಕದಿಂದ ಸತತ ಎರಡನೇ ಗೆಲುವು ದಾಖಲಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 8 ವಿಕೆಟ್‍ಗಳ ಜಯ ಗಳಿಸಿತು. ಅಲ್ಲದೆ, ಪ್ರಸ್ತುತ ಅಂಕಪಟ್ಟಿಯಲ್ಲಿ ಭಾರತ 4ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿಯಿತು. ಇದನ್ನೂ ಓದಿ: World Cup 2023: ಗುಡ್‌ನ್ಯೂಸ್‌ – ಪಾಕ್‌ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸೇರಲಿದ್ದಾರೆ ಗಿಲ್‌

    ರೋಹಿತ್ ಶರ್ಮಾ ಕೇವಲ 84 ಎಸೆತಗಳಲ್ಲಿ 16 ಬೌಂಡರಿ ಹಾಗೂ 5 ಸಿಕ್ಸರ್ ಸೇರಿ 131 ರನ್ ಬಾರಿಸಿದರು. ಅಲ್ಲದೇ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 31ನೇ ಶತಕ ಸಿಡಿಸಿದ ರೋಹಿತ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು.

    ಪ್ರಸ್ತುತ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ 19ನೇ ಇನ್ನಿಂಗ್ಸ್‍ನಲ್ಲಿ 7ನೇ ಶತಕ ಸಿಡಿಸುವ ಮೂಲಕ ಅತಿ ಹೆಚ್ಚು ಶತಕಗಳನ್ನು ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಒಟ್ಟು ಶತಕಗಳ ಪಟ್ಟಿಯಲ್ಲಿ ಸಚಿನ್ (49) ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ (47) 2ನೇ ಸ್ಥಾನದಲ್ಲಿದ್ದಾರೆ. ವಿಶ್ವಕಪ್‍ನಲ್ಲಿ ವೇಗವಾಗಿ 1,000 ರನ್ ಪೂರೈಸಿದರಲ್ಲಿ ರೋಹಿತ್ ಶರ್ಮಾ ಜಂಟಿಯಾಗಿ ಡೇವಿಡ್ ವಾರ್ನರ್ ಮೊದಲನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರೂ ಆಟಗಾರರು 19 ಇನ್ನಿಂಗ್ಸ್‌ಗಳಿಂದ 1 ಸಾವಿರ ರನ್ ಬಾರಿಸಿದ್ದಾರೆ.

    ಐಸಿಸಿ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‍ಗಳಿಂದ ಗೆದ್ದುಕೊಂಡಿತ್ತು. ಅಫ್ಘಾನಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ 8 ವಿಕೆಟ್‍ಗಳು ಗೆಲುವು ಪಡೆದಿದೆ. 2011ರ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿತ್ತು. ಆಗ ಸಚಿನ್ ತಂಡದ ಭಾಗವಾಗಿದ್ದರು. ವಿಶ್ವಕಪ್‍ನಲ್ಲಿ ಸಚಿನ್ 44 ಇನ್ನಿಂಗ್ಸ್‌ಗಳನ್ನು ಆಡಿದ್ದು, 6 ಶತಕಗಳನ್ನು ಗಳಿಸಿದ್ದರು. ಇದನ್ನೂ ಓದಿ: ರೋಹಿತ್‌ ಶರ್ಮಾ ಸ್ಫೋಟಕ ಶತಕ – 8 ವಿಕೆಟ್‌ಗಳ ಜಯದೊಂದಿಗೆ ಪಾಕ್‌ ಹಿಂದಿಕ್ಕಿದ ಭಾರತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • IPL 2024: RCBಗೆ ಎಂಟ್ರಿ ಕೊಡ್ತಾರಾ ರಚಿನ್‌ ರವೀಂದ್ರ ?

    IPL 2024: RCBಗೆ ಎಂಟ್ರಿ ಕೊಡ್ತಾರಾ ರಚಿನ್‌ ರವೀಂದ್ರ ?

    ಬೆಂಗಳೂರು:‌ ನಿನ್ನೆಯಿಂದಲೂ ಜಾಲತಾಣದಲ್ಲಿ ಬೆಂಗಳೂರು ಮೂಲದ ಕಿವೀಸ್‌ ಆಟಗಾರ ರಚಿನ್‌ ರವೀಂದ್ರ (Rachin Ravindra) ಅವರದ್ದೇ ಸುದ್ದಿ ಹರಿದಾಡುತ್ತಿದೆ. ನವೆಂಬರ್‌ 4 ರಂದು ಬೆಂಗಳೂರಿನ (Bengaluru) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್‌ ಸೆಣಸಲಿದ್ದು, ಈ ಪಂದ್ಯದಲ್ಲಿ ರಚಿನ್‌ ಆಟವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

    ರಚಿನ್‌ ಬಗ್ಗೆ ಜಾಲತಾಣದಲ್ಲಿ ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತಿರುವ ಹೊತ್ತಿನಲ್ಲೇ ಆರ್‌ಸಿಬಿ ಜೆರ್ಸಿಯಲ್ಲಿ ರಚಿನ್‌ ಕಾಣಿಸಿಕೊಂಡಿರುವ ಫೋಟೋ ವೈರಲ್‌ ಆಗಿದೆ. ಅಲ್ಲದೇ 2024ರ ಐಪಿಎಲ್‌ (IPL 2024) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಪರ ರಚಿನ್‌ ಕಣಕ್ಕಿಳಿಯಲಿದ್ದಾರೆ ಎನ್ನುವ ಸುದ್ದಿಗಳೂ ಹರಿದಾಡುತ್ತಿದೆ. ಇದನ್ನೂ ಓದಿ: ಕನ್ನಡ ಮಾತು ಕೇಳಿ ಇಂಗ್ಲಿಷ್‌ನಲ್ಲಿ ಉತ್ತರ ಕೊಟ್ಟ ರಚಿನ್‌ – ಬೆಂಗ್ಳೂರು ವಿಲ್ಸನ್‌ ಗಾರ್ಡನ್‌ ನೆನಪು ಹಂಚಿಕೊಂಡ ರವೀಂದ್ರ

    ಈಗಾಗಲೇ ವಿರಾಟ್‌ ಕೊಹ್ಲಿ (Virat Kohli), ಗ್ಲೇನ್‌ ಮ್ಯಾಕ್ಸ್‌ವೆಲ್‌, ಫಾಫ್‌ ಡು ಪ್ಲೆಸಿಸ್‌ ನಂತಹ ಸ್ಟಾರ್‌ ಆಟಗಾರರನ್ನು ಹೊಂದಿರುವ ಆರ್‌ಸಿಬಿ ಇದೀಗ ಬೆಂಗಳೂರು ಮೂಲದ ಹುಡುಗನ ಮೇಲೆ ಕಣ್ಣಿಟ್ಟಿದೆಯಾ? ಆರ್‌ಸಿಬಿ ಪರ ರಚಿನ್‌ ಕಣಕ್ಕಿಳಿಯುತ್ತಾರಾ? ಅನ್ನೋ ಪ್ರಶ್ನೆಗಳೂ ಎದ್ದಿವೆ. ಆದ್ರೆ ಈ ಬಗ್ಗೆ ಆರ್‌ಸಿಬಿ ಟೀಂ ಮ್ಯಾನೇಜ್‌ಮೆಂಟ್‌ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಇದನ್ನೂ ಓದಿ: World Cup 2023: ಚೊಚ್ಚಲ ಪಂದ್ಯದಲ್ಲೇ ಸೇಡು ತೀರಿಸಿಕೊಂಡ ಕಿವೀಸ್‌; ಇಂಗ್ಲೆಂಡ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

    ರಚಿನ್‌ ರವೀಂದ್ರ ಯಾರು?
    23 ವರ್ಷದ ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ ಜನಿಸಿದ್ದರೂ ಅವರ ಅಪ್ಪ-ಅಮ್ಮ ಮೂಲತಃ ಬೆಂಗಳೂರಿನವರು. ತಂದೆ ರವಿ ಕೃಷ್ಣಮೂರ್ತಿ ಹಾಗೂ ತಾಯಿ ದೀಪಾ ಕೃಷ್ಣಮೂರ್ತಿ ಅವರು ಸಾಫ್ಟ್ವೇರ್ ಎಂಜಿನೀಯರ್‌ಗಳಾಗಿದ್ದು, ಉದ್ಯೋಗ ಅರಸಿ 1990ರ ದಶಕದಲ್ಲಿ ಬೆಂಗಳೂರಿನಿಂದ ನ್ಯೂಜಿಲೆಂಡ್‌ಗೆ ತೆರಳಿದ್ದರು. ರಚಿನ್ ರವೀಂದ್ರ ಅವರ ತಂದೆ, ಸಾಫ್ಟ್ವೇರ್ ಎಂಜಿನೀಯರ್ ಆಗಿದ್ದರೂ ಅಪ್ಪಟ ಕ್ರಿಕೆಟ್ ಅಭಿಮಾನಿ. ಅದರಲ್ಲೂ ರವಿ ಕೃಷ್ಣಮೂರ್ತಿ ಅವರು ಭಾರತೀಯ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಅವರ ಪಕ್ಕಾ ಫ್ಯಾನ್. ಈ ಕಾರಣದಿಂದಾಗಿ ರಾಹುಲ್ ದ್ರಾವಿಡ್ ಹೆಸರಿನಿಂದ ʻರʼ ಮತ್ತು ಸಚಿನ್ ತೆಂಡೂಲ್ಕರ್ ಹೆಸರಿನಿಂದ ʻಚಿನ್ʼ ಅಕ್ಷರಗಳನ್ನು ತೆಗೆದುಕೊಂಡು ತಮ್ಮ ಪುತ್ರನಿಗೆ ರಚಿನ್ ಎಂದು ಹೆಸರಿಟ್ಟಿದ್ದರು. ಇದನ್ನೂ ಓದಿ: ಆಂಗ್ಲರ ವಿರುದ್ಧ ಶತಕ ಸಿಡಿಸಿ ಮೆರೆದಾಡಿದ ಬೆಂಗ್ಳೂರು ಮೂಲದ ರಚಿನ್‌ ರವೀಂದ್ರ ಯಾರು ಗೊತ್ತಾ?

    ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್ ಪರ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದಾರೆ. 2016 ಮತ್ತು 2018ರಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರು ನ್ಯೂಜಿಲೆಂಡ್ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಅಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು. ಇದರ ಫಲವಾಗಿ 2021ರಲ್ಲಿ ಭಾರತದ ವಿರುದ್ಧ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿದ್ದರು. ನಂತರ ಇದೇ ವರ್ಷದಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]