Tag: sachin tendulkar

  • ಪುಶ್ ಅಪ್ ಮಾಡಿ ಯೋಧರ ಕುಟುಂಬಗಳ ನೆರವಿಗೆ 15 ಲಕ್ಷ ದೇಣಿಗೆ ಸಂಗ್ರಹಿಸಿದ ಸಚಿನ್

    ಪುಶ್ ಅಪ್ ಮಾಡಿ ಯೋಧರ ಕುಟುಂಬಗಳ ನೆರವಿಗೆ 15 ಲಕ್ಷ ದೇಣಿಗೆ ಸಂಗ್ರಹಿಸಿದ ಸಚಿನ್

    ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೆರವು ನೀಡಲು ಕಾರ್ಯಕ್ರಮವನ್ನು ಆಯೋಜಿಸಿ ಮೊದಲ ದಿನವೇ 15 ಲಕ್ಷ ರೂ. ಹಣ ಸಂಗ್ರಹ ಮಾಡಿದ್ದಾರೆ.

    ದೆಹಲಿಯ ಮ್ಯಾರಾಥಾನ್ ನಲ್ಲಿ ಚಾಲನೆ ನೀಡಲು ಆಗಮಿಸಿದ್ದ ಸಚಿನ್ ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ 10 ಪುಶ್ ಅಪ್ ಮಾಡುವ ಕಿಪ್‍ಮೂವಿಂಗ್ ಪುಶ್ ಅಪ್ ಅಭಿಯಾನಕ್ಕೆ ಚಾಲನೆ ನೀಡಿದರು. ಅಲ್ಲದೇ ಎಲ್ಲರೂ ಈ ಚಾಲೆಜ್ ಸ್ವೀಕರಿಸಬೇಕು ಎಂದು ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಜನರಿಂದ ಸಂಗ್ರಹಿಸಿದ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಲಾಗುವುದು. ಪುಲ್ವಾಮಾ ಹುತಾತ್ಮ ಯೋಧರ ಕುಟುಂಬಕ್ಕೆ ನೆರವು ನೀಡಲಾಗುತ್ತದೆ. ನಮ್ಮ ಕಾರ್ಯಕ್ರಮದ ಉದ್ದೇಶವನ್ನು ಅರ್ಥೈಸಿಕೊಂಡು ಬೆಂಬಲ ನೀಡುವುದಾಗಿ ನನಗೆ ನಂಬಿಕೆ ಇದೆ ಎಂದು ಸಚಿನ್ ವಿಶ್ವಾಸ ವ್ಯಕ್ತಪಡಿಸಿದರು.

    ಉಳಿದಂತೆ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಮಕ್ಕಳು, ಯುವಕ, ಯುವತಿಯರು, ಹಿರಿಯರು ಸೇರಿದಂತೆ ಎಲ್ಲಾ ವಯೋಮಾನದವರು ಭಾಗವಹಿಸಿದ್ದರು. ಸಚಿನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪುಶ್ ಅಪ್ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಧನ್ಯವಾದ ತಿಳಿಸಿದ್ದಾರೆ.

    https://www.instagram.com/p/BuSqf2OFFOv/?utm_source=ig_web_copy_link

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಡೋ-ಪಾಕ್ ಪಂದ್ಯದ ಪರ ಸಚಿನ್ ಬ್ಯಾಟಿಂಗ್- ದ್ವಂದ್ವ ನಿಲುವಿನಲ್ಲಿ ಬಿಸಿಸಿಐ

    ಇಂಡೋ-ಪಾಕ್ ಪಂದ್ಯದ ಪರ ಸಚಿನ್ ಬ್ಯಾಟಿಂಗ್- ದ್ವಂದ್ವ ನಿಲುವಿನಲ್ಲಿ ಬಿಸಿಸಿಐ

    ಮುಂಬೈ: ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ರದ್ದು ಮಾಡುವಂತೆ ದೇಶದ್ಯಾಂತ ಆಗ್ರಹ ಕೇಳಿ ಬಂದರೂ ಕೂಡ ಬಿಸಿಸಿಐ ಈ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳದೆ ದ್ವಂದ್ವ ನಿಲುವು ತಾಳಿದೆ.

    ಇಂದು ಕೂಡ ಬಿಸಿಸಿಐ ಆಡಳಿತ ಸಮಿತಿಯ ಸಭೆ ನಡೆಸಲಾಗಿದ್ದು, ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಆಡುವ ಬಗ್ಗೆ ಸರ್ಕಾರದ ತೀರ್ಮಾನವೇ ಅಂತಿಮ ಎಂದು ಮತ್ತೊಮ್ಮೆ ಹೇಳಿದೆ. ಬಿಸಿಸಿಐ ಈ ಹೇಳಿಕೆ ವಿಶ್ವಕಪ್ ಟೂರ್ನಿಗೆ ಇನ್ನು 3 ತಿಂಗಳು ಸಮಯ ಇರುವುದರಿಂದ ಅಂತಿಮ ತೀರ್ಮಾನ ಕೈಗೊಳ್ಳುವುದನ್ನು ತಡ ಮಾಡುತ್ತಿದ್ದೇಯಾ ಎಂಬ ಅನುಮಾನ ಮೂಡಲು ಕಾರಣವಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಮ್ಯಾಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಲೀಗ್ ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಆಡದಿರುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪಂದ್ಯಕ್ಕೆ ಇನ್ನು 3 ತಿಂಗಳು ಕಾಲಾವಕಾಶ ಇರುವುದರಿಂದ ಸರ್ಕಾರ ತೀರ್ಮಾನವನ್ನೇ ಅಂತಿಮಗೊಳಿಸಲಿದ್ದೇವೆ. ಈಗಾಗಲೇ ಐಸಿಸಿ ಬಳಿ ಈ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.

    ಇಂಗ್ಲೆಂಡ್ ಸೇರಿದಂತೆ ಐಸಿಸಿ ಕ್ರಿಕೆಟ್ ಮಂಡಳಿಯಲ್ಲಿ ಸದಸ್ಯರಾಗಿರುವ ಬಹುತೇಕ ರಾಷ್ಟ್ರಗಳು ಭಾರತದಲ್ಲಿ ನಡೆದ ಭಯೋತ್ಪಾದನ ದಾಳಿಯನ್ನು ಖಂಡಿಸಿದೆ. ಇತ್ತ ಬಿಸಿಸಿಐ ಕೂಡ ಉಗ್ರರಿಗೆ ಬೆಂಬಲ ನೀಡುತ್ತಿರುವ ರಾಷ್ಟ್ರದೊಂದಿಗೆ ಕ್ರಿಕೆಟ್ ಸಂಬಂಧವನ್ನು ಅಂತ್ಯಗೊಳಿಸುವಂತೆ ಎಲ್ಲಾ ರಾಷ್ಟ್ರಗಳೊಂದಿಗೆ ಮನವಿ ಮಾಡಿದೆ.

    ಇತ್ತ ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡಿ ಗೆಲ್ಲಬೇಕಿದೆ. ವಿಶ್ವಕಪ್ ಇತಿಹಾಸದಲ್ಲಿ ಭಾರತ ಪಾಕ್ ವಿರುದ್ಧ ಸೋತ್ತಿಲ್ಲ. ಇಂದು ಅವರನ್ನು ಮತ್ತೊಮ್ಮೆ ಅವರನ್ನು ಸೋಲುಣಿಸುವ ಸಮಯ ಬಂದಿದೆ. ಪಂದ್ಯ ಆಡದಿರುವುದರಿಂದ ಅವರಿಗೆ 2 ಅಂಕಗಳು ನೀಡಿ ಪಾಕ್ ತಂಡಕ್ಕೆ ಸಹಾಯ ಮಾಡುವುದನ್ನು ವೈಯಕ್ತಿಕವಾಗಿ ವಿರೋಧಿಸುತ್ತೇನೆ ಎಂದಿದ್ದಾರೆ.

    ಹೇಳಿಕೆ ವಿವಾದವಾಗುತ್ತಿದ್ದಂತೆ ಸಚಿನ್, ನನಗೆ ಮೊದಲು ದೇಶವೇ ಮುಖ್ಯವಾಗಿದ್ದು, ನನ್ನ ದೇಶ ಏನು ನಿರ್ಧಾರ ಮಾಡುತ್ತದೆ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ತಮ್ಮ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಹ್ಲಿಯನ್ನು ಎಲ್ಲರು ಏಕೆ ಇಷ್ಟ ಪಡುತ್ತಾರೆ ಎಂದು ರಿವೀಲ್ ಮಾಡಿದ್ರು ಶೇನ್ ವಾರ್ನ್

    ಕೊಹ್ಲಿಯನ್ನು ಎಲ್ಲರು ಏಕೆ ಇಷ್ಟ ಪಡುತ್ತಾರೆ ಎಂದು ರಿವೀಲ್ ಮಾಡಿದ್ರು ಶೇನ್ ವಾರ್ನ್

    ಮುಂಬೈ: ಆಸ್ಟ್ರೇಲಿಯಾ ತಂಡದ ಬೌಲಿಂಗ್ ಲೆಜೆಂಡ್ ಶೇನ್ ವಾರ್ನ್ ನಾನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಬಹು ದೊಡ್ಡ ಅಭಿಮಾನಿ ಎಂದು ಹೇಳಿದ್ದು, ನಾನು ಮಾತ್ರವಲ್ಲ ಎಲ್ಲರೂ ಕೂಡ ಕೊಹ್ಲಿರನ್ನು ಇಷ್ಟ ಪಡುತ್ತಾರೆ ಎಂದಿದ್ದಾರೆ.

    ರಾಜಸ್ಥಾನ ರಾಯಲ್ಸ್ ತಂಡದ ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಮಾಧ್ಯಮಗಳಿಗೆ ಶೇನ್ ವಾರ್ನ್ ಪ್ರತಿಕ್ರಿಯೆ ನೀಡಿದ್ದು, ಕೊಹ್ಲಿ ಅವರ ನಾಯಕತ್ವ, ಪ್ರಾಮಾಣಿಕತೆ ಮತ್ತು ಕೌಶಲ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊಹ್ಲಿ ಅವರ ಬ್ಯಾಟಿಂಗ್ ನೋಡಲು ಹಾಗೂ ಅವರೊಂದಿಗೆ ಮಾತನಾಡಲು ನಾನು ಬಹಳಷ್ಟು ಇಷ್ಟ ಪಡುತ್ತೇನೆ. ಕೊಹ್ಲಿ ವಿಶ್ವ ಕ್ರಿಕೆಟ್‍ನ ಅತ್ಯುತ್ತಮ ನಾಯಕರಾಗಿದ್ದು, ಅವರು ನಂಬಿರುವ ವಿಷಯಗಳ ಬಗ್ಗೆ ಗಟ್ಟಿಯಾಗಿ ನಿಲ್ಲುತ್ತಾರೆ. ಫೀಲ್ಡ್ ನಲ್ಲಿ ಭಾವುಕರಾದರೂ ಕೂಡ ಮೋಡಿ ಮಾಡುತ್ತಾರೆ ಎಂದು ಹಾಡಿ ಹೊಗಳಿದ್ದಾರೆ. ಅಲ್ಲದೇ ಇದೇ ಅವರನ್ನು ಎಲ್ಲರೂ ಇಷ್ಟ ಪಡಲು ಕಾರಣ ಎಂದು ತಿಳಿಸಿದ್ದಾರೆ.

    ಸದ್ಯದ ಪರಿಸ್ಥಿತಿಯಲ್ಲಿ ಏಕದಿನ ಕ್ರಿಕೆಟ್‍ಕ್ಕಿಂತಲೂ ಟಿ20 ಕ್ರಿಕೆಟ್‍ಗೆ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದ್ದು, ಇದು ಕ್ರಿಕೆಟ್ ಭವಿಷ್ಯಕ್ಕೆ ಮಾರಕವಾಗಿದೆ. ಆದರೆ ಟೆಸ್ಟ್ ಕ್ರಿಕೆಟ್‍ಗೆ ಕೊಹ್ಲಿ ಸಾಕಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಇಂದಿನ ಕ್ರಿಕೆಟ್ ತಂಡದ ನಾಯಕರಲ್ಲಿ ಕೊಹ್ಲಿ ಟೆಸ್ಟ್ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಟೀಂ ಇಂಡಿಯಾ ಕೂಡ ಟೆಸ್ಟ್ ಕ್ರಿಕೆಟ್ ಬಗ್ಗೆ ಪ್ರಾಮುಖ್ಯತೆ ನೀಡುತ್ತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ಕೊಹ್ಲಿ, ಸಚಿನ್ ನಡುವೆ ಯಾರು ಇಷ್ಟ ಎಂಬ ಪ್ರಶ್ನೆಗೆ ಉತ್ತರಿಸಿ, ಇಬ್ಬರು ಆಟಗಾರರು ಕೂಡ ಭಿನ್ನ ಸಮಯದಲ್ಲಿ ತಂಡದಲ್ಲಿ ಆಡಿದ್ದಾರೆ. ಇಬ್ಬರಲ್ಲಿ ಯಾರು ಇಷ್ಟ ಎಂದು ಹೇಳುವುದು ಕಷ್ಟ. ಆದರೆ ಸಚಿನ್ ಹಾಗೂ ನಮ್ಮ ಕಾಲಘಟ್ಟದಲ್ಲಿದ್ದ ಪರಿಸ್ಥಿತಿಗಳಿಗಿಂತ ಈಗಿರುವ ಸ್ಥಿತಿಗಳು ಬ್ಯಾಟ್ಸ್ ಮನ್ಸ್ ಹೆಚ್ಚು ಅನುಕೂಲಗಳಿವೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿನ್, ದ್ರಾವಿಡ್, ಅಜರುದ್ದೀನ್ ದಿಗ್ಗಜರ ಸಾಲಿಗೆ ಸೇರಿದ ಧೋನಿ

    ಸಚಿನ್, ದ್ರಾವಿಡ್, ಅಜರುದ್ದೀನ್ ದಿಗ್ಗಜರ ಸಾಲಿಗೆ ಸೇರಿದ ಧೋನಿ

    ಮೌಂಟ್ ಮೌಂಗಾನೆ: ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯವನ್ನು ಆಡುವ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಂಡದ ಪರ 334 ಪಂದ್ಯಗಳನ್ನು ಪೂರ್ಣಗೊಳಿಸಿದ್ದು, ಈ ಮೂಲಕ ಅಜರುದ್ದೀನ್ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಟೀಂ ಇಂಡಿಯಾ ಪರ ಈಗಾಗಲೇ ಹಲವು ದಾಖಲೆಗಳನ್ನು ನಿರ್ಮಿಸಿರುವ ಧೋನಿ 2004ರಲ್ಲಿ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. 37 ವರ್ಷದ ಧೋನಿ ಸದ್ಯ ಭಾರತದ ಪರ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿರುವ 3ನೇ ಆಟಗಾರ ಎಂಬ ಹೆಗ್ಗಳಿಕೆಯನ್ನ ಅಜರುದ್ದೀನ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಉಳಿದಂತೆ ಧೋನಿ ಏಷ್ಯಾ ಇಲೆವನ್ ತಂಡದ ಪರ 3 ಪಂದ್ಯಗಳನ್ನು ಆಡಿದ್ದಾರೆ. ಟೀಂ ಇಂಡಿಯಾ ಪರ ಸಚಿನ್ ತೆಂಡೂಲ್ಕರ್ 463 ಪಂದ್ಯಗಳನ್ನು ಆಡಿದ್ದು, ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ರಾಹುಲ್ ದ್ರಾವಿಡ್ ಇದ್ದು, 340 ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

    ಉಳಿದಂತೆ ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಬ್ಯಾಟಿಂಗ್ ಫಾರ್ಮ್ ಗೆ ಮರಳಿರುವ ಧೋನಿ 241ರ ಸರಾಸರಿಯಲ್ಲಿ 241 ರನ್ ಸಿಡಿಸಿದ್ದಾರೆ. ಇಂದಿನ ಪಂದ್ಯದಲ್ಲೂ ಬಿರುಸಿನ ಆಟ ಪ್ರದರ್ಶಿಸಿದ ಧೋನಿ, 33 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 48 ರನ್ ಗಳಿಸಿ ಅಜೇಯರಾಗಿ ಉಳಿದರು. ಅಲ್ಲದೇ ಮುರಿಯದ 5ನೇ ವಿಕೆಟ್‍ಗೆ 53 ರನ್ ಜೊತೆಯಾಟ ನೀಡಿ ತಂಡ ಬೃಹತ್ ಮೊತ್ತಗಳಿಸಲು ಕಾರಣರಾಗಿದ್ದರು.

    https://twitter.com/Vidyadhar_R/status/1089123514135670784?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿನ್ ಕೋಪ ಮಾಡ್ಕೊಂಡಿದ್ದು ನೋಡಿದ್ದೇನೆ, ಆದ್ರೆ ಧೋನಿಯನ್ನ ನೋಡಿಲ್ಲ: ರವಿಶಾಸ್ತ್ರಿ

    ಸಚಿನ್ ಕೋಪ ಮಾಡ್ಕೊಂಡಿದ್ದು ನೋಡಿದ್ದೇನೆ, ಆದ್ರೆ ಧೋನಿಯನ್ನ ನೋಡಿಲ್ಲ: ರವಿಶಾಸ್ತ್ರಿ

    ಮೆಲ್ಬರ್ನ್: 40 ವರ್ಷದ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಸಚಿನ್ ಕೋಪ ಮಾಡಿಕೊಂಡಿದ್ದನ್ನು ಹಲವು ಬಾರಿ ನೋಡಿದ್ದು, ಆದರೆ ಧೋನಿ ಕೋಪಗೊಂಡಿದ್ದನ್ನು ಒಮ್ಮೆಯೂ ನೋಡಿಲ್ಲ ಎಂದು ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

    37 ವರ್ಷದ ಧೋನಿ ಕ್ರಿಕೆಟ್ ಲೆಜೆಂಡ್ ಆಟಗಾರ. ವೈಯಕ್ತಿಕವಾಗಿ ನಾನು ಧೋನಿ ಕೋಪಗೊಂಡಿದನ್ನು ನೋಡಿಲ್ಲ. ಆದರೆ ಸಚಿನ್ ಅವರು ಕೋಪಗೊಂಡ ಸಂದರ್ಭಗಳನ್ನು ನೋಡಿದ್ದೇನೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ಧೋನಿರಂತಹ ಮತ್ತೊಬ್ಬ ಆಟಗಾರರನ್ನು ತಂಡಕ್ಕೆ ತರಲು ಆಗುವುದಿಲ್ಲ. ಅಂತಹ ಆಟಗಾರರು 30, 40 ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತಾರೆ. ಒಂದೊಮ್ಮೆ ಧೋನಿ ನಿವೃತ್ತಿ ಹೊಂದಿದರೆ ಆಗ ನಿಮಗೇ ಇದರ ಅರಿವಾಗುತ್ತದೆ ಎಂದರು. ಇದೇ ವೇಳೆ ರಿಷಬ್ ಪಂತ್ ಕುರಿತ ಪ್ರಶ್ನೆಗೆ ಉತ್ತರಿಸಿ, ರಿಷಬ್ ಉತ್ತಮ ಸಾಮಥ್ರ್ಯವನ್ನು ಹೊಂದಿದ್ದು, ಆತ ಮುಂದಿನ 20 ವರ್ಷಗಳಲ್ಲಿ ಧೋನಿ ಸ್ಥಾನವನ್ನು ತುಂಬಿದರೆ ಸಂತಸ ಪಡುತ್ತೇನೆ. ರಿಷಬ್ ಹೀರೋ ಧೋನಿ ಆಗಿದ್ದು, ಟೆಸ್ಟ್ ಸರಣಿಯಲ್ಲಿ ಎಲ್ಲರಿಗಿಂತ ಹೆಚ್ಚು ಸಮಯ ಧೋನಿ ಅವರಿಗೆ ಫೋನ್ ಮಾಡಿ ಮಾತನಾಡಿದ್ದಾನೆ ಎಂದು ಹೇಳಿದರು. ಇದನ್ನು ಓದಿ:  ಬಾಲ್ ಹಿಡ್ಕೊಂಡ್ರೆ ನಿವೃತ್ತಿ ಅಂತಾರೆ : ಹಾಸ್ಯ ಚಟಾಕಿ ಹಾರಿಸಿ ಧೋನಿ ಟಾಂಗ್ – ವಿಡಿಯೋ

    ಧೋನಿ ಕಳೆದ 10 ವರ್ಷಗಳಿಂದ ತಂಡದ ನಾಯಕರಾಗಿದ್ದು ಟೀಂ ಇಂಡಿಯಾ ಇಂದು ಇಷ್ಟೊಂದು ಬಲಿಷ್ಠವಾಗಿ ರೂಪುಗೊಳ್ಳಲು ಕಾರಣ. ಆತ ತಂಡದಲ್ಲಿದ್ದರೆ ನಾಯಕ ಕೊಹ್ಲಿ ಅವರ ಜವಾಬ್ದಾರಿಯನ್ನು ಅರ್ಧದಷ್ಟು ನಿರ್ವಹಿಸುತ್ತಾರೆ. ಧೋನಿಯ ಅನುಭವ ಡ್ರೆಸಿಂಗ್ ರೂಮ್‍ನಲ್ಲಿ ಉತ್ತಮ ವಾತಾವರಣ ರೂಪಿಸುತ್ತದೆ. 2011 ರಿಂದ ಧೋನಿ ಏನೆ ಸಾಧನೆ ಮಾಡಿದ್ದರು, ಕಳಪೆ ಪ್ರದರ್ಶನ ತೋರಿದ್ದರು ಕೂಡ ಇದುವರೆಗೂ ಒಂದೇ ಒಂದು ಟಿವಿ ಸಂದರ್ಶನವನ್ನು ನೀಡಿಲ್ಲ. ಇದು ಧೋನಿ ಸರಳತೆಗೆ ಸಾಕ್ಷಿ ಎಂದು ಹಾಡಿ ಹೊಗಳಿದರು. ಇದನ್ನು ಓದಿ: ಆನ್‌ಫೀಲ್ಡ್‌ ನಲ್ಲೇ ಖಲೀಲ್ ಅಹ್ಮದ್ ವಿರುದ್ಧ ಗರಂ ಆದ ಧೋನಿ – ವೈರಲ್ ವಿಡಿಯೋ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗುರುವಿನ ಅಂತಿಮ ಯಾತ್ರೆ ವೇಳೆ ಹೆಗಲು ನೀಡಿ ಕಂಬನಿ ಮಿಡಿದ ಸಚಿನ್

    ಗುರುವಿನ ಅಂತಿಮ ಯಾತ್ರೆ ವೇಳೆ ಹೆಗಲು ನೀಡಿ ಕಂಬನಿ ಮಿಡಿದ ಸಚಿನ್

    ಮುಂಬೈ: ಇಹಲೋಕ ತ್ಯಜಿಸಿರುವ ಕ್ರಿಕೆಟ್ ಗುರು ರಮಾಕಾಂತ್ ಅಚ್ರೇಕರ್ ನೆನದು ಸಚಿನ್ ತೆಂಡೂಲ್ಕರ್ ಕಂಬನಿ ಮಿಡಿದಿದ್ದಾರೆ.

    ಮುಂಬೈನಲ್ಲಿ ನಡೆದ ಗುರುಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಸಚಿನ್, ಗುರುವಿನ ಅಂತಿಮ ಯಾತ್ರೆ ವೇಳೆ ಸ್ವತಃ ಹೆಗಲು ನೀಡಿದರು. ಈ ಮೂಲಕ ತಮ್ಮ ಗುರುಗಳಿಗೆ ಕೊನೆಯ ನಮನ ಸಲ್ಲಿಸಿದರು.

    ದ್ರೋಣಾಚಾರ್ಯ, ಪದ್ಮ ಶ್ರೀ ಪ್ರಶಸ್ತಿ ವಿಜೇತರಾಗಿದ್ದ ರಮಾಕಾಂತ್ ಅಚ್ರೆಕಾರ್ ತಮ್ಮ 87 ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದರು. ಇಂದು ಅವರ ಅಂತಿಮ ನಮನ ಕಾರ್ಯಗಳನ್ನ ಏರ್ಪಡಿಸಲಾಗಿತ್ತು. ಕ್ರಿಕೆಟ್ ಕೋಚ್ ಆಗಿ ಹಲವು ಗಣ್ಯರಿಗೆ ತರಬೇತಿ ನೀಡಿದ್ದ ರಮಾಕಾಂತ್ ಅವರು ಸಚಿನ್‍ರ ಬಾಲ್ಯದ ಕೋಚ್ ಆಗಿದ್ದರು. ಅಲ್ಲದೇ ವಿನೋದ್ ಕಾಂಬ್ಳಿ, ಪ್ರವೀಣ್ ಅಮ್ರೆ, ಸಮೀರ್ ದಿಘೆ ಮತ್ತು ಬಲ್ವಿಂದರ್ ಸಿಂಗ್ ಸಂಧು ಅವರಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

    ಇತ್ತ ಆಸೀಸ್ ಟೂರ್ನಿಯಲ್ಲಿ ಭಾಗವಹಿಸಿರುವ ಟೀಂ ಇಂಡಿಯಾ ಆಟಗಾರರು ಇಂದು ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಕಪ್ಪು ಪಟ್ಟಿ ಧರಿಸಿ ಆಡಿದರು. ಅಚ್ರೇಕರ್ ವಿಧಿವಶರಾದ ಹಿನ್ನಲೆಯಲ್ಲಿ ಅವರ ಗೌರವಾರ್ಥವಾಗಿ ಆಟಗಾರರುಕಪ್ಪು ಪಟ್ಟಿ ಧರಿಸಿ ಕಣಕ್ಕೆ ಇಳಿದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 11 ರನ್ ಗಳಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

    11 ರನ್ ಗಳಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

    ಸಿಡ್ನಿ: ನನ್ನ ದಾಖಲೆಗಳನ್ನು ಮುರಿಯುವ ಶಕ್ತಿ, ಸಾಮರ್ಥ್ಯವನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ ಎಂಬ ಸಚಿನ್ ಮಾತಿನಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಮತ್ತೊಂದು ದಾಖಲೆ ಮುರಿದಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸಚಿನ್‍ರ ಮತ್ತೊಂದು ದಾಖಲೆಯನ್ನು ಮುರಿದಿರುವ ಕೊಹ್ಲಿ, ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ವೇಗವಾಗಿ 17 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

    ಕೊಹ್ಲಿ ಈ ಪಂದ್ಯದಲ್ಲಿ 23 ರನ್ ಗಳಿಸಿ ಪೆವಿಲಿಯನ್ ಸೇರಿ ನಿರಾಸೆ ಮೂಡಿಸಿದರು ಕೂಡ 11 ರನ್ ಗಳಿಸಿದ್ದ ವೇಳೆ ಟಿ20, ಏಕದಿನ ಹಾಗೂ ಟೆಸ್ಟ್ ಮೂರು ಮಾದರಿಗಳಲ್ಲಿ 19 ಸಾವಿರ ರನ್ ಪೂರ್ಣಗೊಳಿಸಿದ್ದರು. ಕೊಹ್ಲಿ ಈ ಸಾಧನೆಯನ್ನು 399 ಇನ್ನಿಂಗ್ಸ್ ಗಳಲ್ಲಿ ಮಾಡಿದ್ದು, ಸಚಿನ್ 432 ಇನ್ನಿಂಗ್ಸ್ ಗಳಲ್ಲಿ 19 ಸಾವಿರ ರನ್ ಹೊಡೆದಿದ್ದರು.

    ಉಳಿದಂತೆ ವೆಸ್ಟ್ ಇಂಡೀಸ್ ತಂಡದ ಲಾರಾ 433 ಇನ್ನಿಂಗ್ಸ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 444 ಇನ್ನಿಂಗ್ಸ್, ಸೌತ್ ಆಫ್ರಿಕಾದ ಜಾಕ್ ಕಾಲಿಸ್ 458 ಇನ್ನಿಂಗ್ಸ್ ಗಳಲ್ಲಿ 19 ಸಾವಿರ ಪೂರ್ಣಗೊಳಿಸಿ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೊಹ್ಲಿ 2018 ರಲ್ಲಿ 2,735 ರನ್ ಗಳಿಸಿ ಟಾಪ್ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದರು. ಅಲ್ಲದೇ 2019 ಆರಂಭದಲ್ಲೇ ಮಹತ್ವದ ದಾಖಲೆ ಮಾಡುವ ಮೂಲಕ ಶುಭಾರಂಭ ಮಾಡಿದ್ದಾರೆ.

    ಎಷ್ಟು ಇನ್ನಿಂಗ್ಸ್ ಗಳಲ್ಲಿ ಎಷ್ಟು ರನ್?
    15 ಸಾವಿರ ರನ್ (333 ಇನ್ನಿಂಗ್ಸ್)
    16 ಸಾವಿರ ರನ್ (350 ಇನ್ನಿಂಗ್ಸ್)
    17 ಸಾವಿರ ರನ್ (363 ಇನ್ನಿಂಗ್ಸ್)
    18 ಸಾವಿರ ರನ್ (382 ಇನ್ನಿಂಗ್ಸ್)
    19 ಸಾವಿರ ರನ್ (399 ಇನ್ನಿಂಗ್ಸ್)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲ್ಯದ ಕೋಚ್‍ರನ್ನ ಕಳೆದುಕೊಂಡ ಸಚಿನ್ ತೆಂಡೂಲ್ಕರ್

    ಬಾಲ್ಯದ ಕೋಚ್‍ರನ್ನ ಕಳೆದುಕೊಂಡ ಸಚಿನ್ ತೆಂಡೂಲ್ಕರ್

    ಮುಂಬೈ: ದ್ರೋಣಾಚಾರ್ಯ ಪ್ರಶಸ್ತಿ ವಿಜೇತ, ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಕ್ರಿಕೆಟ್ ಕೋಚ್ ರಮಾಕಾಂತ್ ಅಚ್ರೆಕಾರ್ (87) ಇಂದು ನಿಧನರಾಗಿದ್ದಾರೆ.

    ಸಚಿನ್ ತೆಂಡೂಲ್ಕರ್ ಅವರನ್ನು ಒಬ್ಬ ಉತ್ತಮ ಬ್ಯಾಟ್ಸ್ ಮನ್ ಆಗಿ ರೂಪಿಸಿದ್ದ ರಮಾಕಾಂತ್ ಅವರು ವಯೋಸಹಜ ಆನಾರೋಗ್ಯದಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭಿಸಿದ್ದು, ರಮಾಕಾಂತ್ ಅವರ ನಿಧನದ ಬಗ್ಗೆ ಸಂಬಂಧಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿ ಖಚಿತ ಪಡಿಸಿದ್ದಾರೆ.

    ಬಾಲ್ಯ ದಿನಗಳಲ್ಲೇ ತಮ್ಮನ್ನು ಉತ್ತಮವಾಗಿ ರೂಪಿಸಿದ್ದ ಕೋಚ್ ರಮಾಕಾಂತ್ ಅವರ ಬಗ್ಗೆ ಸಚಿನ್ ಅವರು ಹೆಚ್ಚಿನ ಗೌರವ ಹೊಂದಿದ್ದರು. ರಮಾಕಾಂತ್ ಅವರು ತಮ್ಮ ವೃತ್ತಿ ಜೀವನದಲ್ಲಿ ಕೇವಲ ಸಚಿನ್ ಮಾತ್ರವಲ್ಲದೇ ವಿನೋದ್ ಕಾಂಬ್ಳಿ, ಪ್ರವೀಣ್ ಅಮ್ರೆ, ಸಮೀರ್ ದಿಘೆ ಮತ್ತು ಬಲ್ವಿಂದರ್ ಸಿಂಗ್ ಸಂಧು ಅವರಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

    ರಮಾಕಾಂತ್ ಅವರು ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಮೊದಲ ಬಾರಿಗೆ ಸಚಿನ್ ರನ್ನು ಭೇಟಿ ಮಾಡಿದ್ರು, ಅವರ ಸಹೋದರ ಅಜಿತ್ ಅವರು ಸಚಿನ್ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ ಆರಂಭವಾದ ಗುರು ಶಿಷ್ಯರ ಸಂಬಂಧ ಇಲ್ಲಿಯವರೆಗೂ ಮುಂದುವರೆದಿತ್ತು. ಸಚಿನ್ ಉತ್ತಮ ಅಭ್ಯಾಸದ ವೇಳೆ ಉತ್ತಮ ಪ್ರದರ್ಶನ ನೀಡಿದರೆ, ಅಂದು ಸಚಿನ್ ಅವರಿಗೆ ವಡಾ ಪಾವ್ ಕೊಡಿಸುತ್ತಿದ್ದರು.

    ಈ ಹಿಂದೆ ಗುರುಗಳ ಬಗ್ಗೆ ಮಾತನಾಡಿದ್ದ ಸಚಿನ್, ನಾನು ಸರಿಯಾಗಿ ಪ್ರದರ್ಶನ ನೀಡಿಲ್ಲ ಅಂತಾ ಕೋಚ್ ಎಂದು ನನಗೆ ಹೇಳಿಲ್ಲ. ನಾನು ಉತ್ತಮ ಪ್ರದರ್ಶನ ನೀಡಿದ ವೇಳೆ ನನಗೆ ತಿಂಡಿ ಕೊಡಿಸುತ್ತಿದ್ದರು, ಆಗ ನನಗೆ ನಾನು ಉತ್ತಮವಾಗಿ ಆಡಿದ್ದೆ ಎಂದು ತಿಳಿಯುತ್ತಿತ್ತು ಎಂದು ತಮ್ಮ ಜೀವನದ ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದರು.

    ಕ್ರೀಡೆಗೆ ರಮಾಕಾಂತ್ ಅವರ ನೀಡಿದ ಸೇವೆಯನ್ನು ಗುರುತಿಸಿದ್ದ ಸರ್ಕಾರ ಪದ್ಮ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂತಾಕ್ಲಾಸ್ ಡ್ರೆಸ್ ಧರಿಸಿದ ಸಚಿನ್ – ಅನಾಥ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಣೆ

    ಸಂತಾಕ್ಲಾಸ್ ಡ್ರೆಸ್ ಧರಿಸಿದ ಸಚಿನ್ – ಅನಾಥ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಣೆ

    ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಸಂತಾಕ್ಲಾಸ್ ಡ್ರೆಸ್ ಧರಿಸಿ ಅನಾಥ ಮಕ್ಕಳೊಡನೆ ಮಗುವಾಗಿ ಸಂಭ್ರವಿಸಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

    ಸಂತಾಕ್ಲಾಸ್ ವೇಷ ಧರಿಸಿ ಮುಂಬೈನಲ್ಲಿರುವ ಆಶ್ರಯ ಚೈಲ್ಡ್  ಕೇರ್‌ಲ್ಲಿ  ಅನಾಥ ಮಕ್ಕಳೊಂದಿಗೆ ಈ ಬಾರಿ ಕ್ರಿಸ್ಮಸ್ ಆಚರಿಸಿದ್ದಾರೆ.

    ಮಕ್ಕಳೊಂದಿಗೆ ಮಗುವಾದ ಸಚಿನ್ ಮಕ್ಕಳ ಆಸೆಯಂತೆ ಅವರೊಂದಿಗೆ ಕ್ರಿಕೆಟ್ ಆಟವಾಡಿ ಖುಷಿಪಟ್ಟರು. ಅಲ್ಲದೆ ಮಕ್ಕಳ ಜೊತೆ ತಾವು ಮಕ್ಕಳಾಗಿ ಸಂತೋಷವಾಗಿ ಎಲ್ಲರೊಡನೆ ಬೆರೆತರು. ಬಳಿಕ ಎಲ್ಲಾ ಮಕ್ಕಳಿಗೂ ಉಡುಗೊರೆಯನ್ನು ಕೊಟ್ಟು ಸಂಭ್ರಮಿಸಿದ್ದಾರೆ.

    ಮಕ್ಕಳೊಡನೆ ಕಳೆದ ಕ್ಷಣವನ್ನು, ಅವರ ಸಂಭ್ರಮದ ಕ್ರಿಸ್ಮಸ್ ಆಚರಣೆಯ ವೀಡಿಯೋವನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಸಚಿನ್ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಎಲ್ಲರಿಗೂ ಮೇರಿ ಕ್ರಿಸ್ಮಸ್. ಆಶ್ರಯ ಚೈಲ್ಡ್ ಕೇರ್‌ ಮಕ್ಕಳೊಂದಿಗೆ ಕಳೆದ ಸಮಯ ತುಂಬಾ ಅದ್ಭುತವಾಗಿತ್ತು. ಮಕ್ಕಳ ಮುಗ್ಧ ಮುಖಗಳಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅಂತ ಸಂತಸ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿನ್ ಬಳಿಕ ಆಸೀಸ್ ಬ್ರಾಡ್ಮನ್ ಮ್ಯೂಸಿಯಂನಿಂದ ಕೊಹ್ಲಿಗೆ ವಿಶೇಷ ಗೌರವ

    ಸಚಿನ್ ಬಳಿಕ ಆಸೀಸ್ ಬ್ರಾಡ್ಮನ್ ಮ್ಯೂಸಿಯಂನಿಂದ ಕೊಹ್ಲಿಗೆ ವಿಶೇಷ ಗೌರವ

    ಸಿಡ್ನಿ: ಆಸೀಸ್ ತಂಡದ ಮಾಜಿ ಆಟಗಾರ ಬ್ರಾಡ್ಮನ್ ಅವರ ನೆನಪಿಗಾಗಿ ನಿರ್ಮಾಣವಾಗಿರುವ ಮ್ಯೂಸಿಯಂನಲ್ಲಿ ಸಚಿನ್ ಪಕ್ಕ ಕೊಹ್ಲಿ ಸ್ಥಾನ ಪಡೆದಿದ್ದಾರೆ.

    ಬ್ರಾಡ್ಮನ್ ಕ್ರಿಕೆಟ್ ನೀಡಿದ ಕೊಡುಗೆಯನ್ನು ತಿಳಿಸಲು ಅವರ ಹೆಸರಿನಲ್ಲಿ ಮ್ಯೂಸಿಯಂ ನಿರ್ಮಿಸಲಾಗಿದೆ. ಇಲ್ಲಿ ಅವರ ಕ್ರಿಕೆಟ್ ಸಾಧನೆಗೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಈ ಮ್ಯೂಸಿಯಂನಲ್ಲಿ ಈಗಾಗಲೇ ಸಚಿನ್ ಭಾವಚಿತ್ರವನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಸದ್ಯ ಈ ಸಾಲಿಗೆ ಕೊಹ್ಲಿ ಕೂಡ ಸೇರಿದ್ದು ಕೊಹ್ಲಿ ಅವರ ಜರ್ಸಿಗೂ ಕೂಡ ಸಚಿನ್ ಪಕ್ಕದಲ್ಲೇ ಸ್ಥಾನ ಕಲ್ಪಿಸಲಾಗಿದೆ.

    ಈ ಕುರಿತು ಮ್ಯೂಸಿಯಂ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಕೊಹ್ಲಿ ಅವರ ಜೆರ್ಸಿಗೆ ವಿಶೇಷ ಸ್ಥಳ ನೀಡಲಾಗಿದೆ. ಸಚಿನ್ ಅವರ ಭಾವಚಿತ್ರದ ಪಕ್ಕವೇ ಸ್ಥಳ ನಿಗದಿ ಮಾಡಲಾಗಿದೆ. ಮ್ಯೂಸಿಯಂ ಪ್ರವೇಶ ಮಾಡುತ್ತಿದಂತೆ ಇಬ್ಬರು ಆಟಗಾರರು ಪ್ರೇರಣೆ ನೀಡುತ್ತಾರೆ. ಭಾರತದ ಕ್ರಿಕೆಟ್ ಆಧಾರಗಳಂತೆ ಕಾಣುತ್ತಾರೆ ಎಂದು ತಿಳಿಸಿದೆ.

    2014-15 ರಲ್ಲಿ ಆಸೀಸ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಟೂರ್ನಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದರು. ಈ ವೇಳೆ ಅವರು ಧರಿಸಿದ್ದ ಟೀ ಶರ್ಟ್ ಇದಾಗಿದ್ದು, ಸದ್ಯ ಸಚಿನ್ ಅವರ ಪಕ್ಕದಲ್ಲೇ ಕೊಹ್ಲಿ ಅವರಿಗೂ ಸ್ಥಾನ ನೀಡಲಾಗಿದೆ. ಈ ಮ್ಯೂಸಿಯಂನಲ್ಲಿ ಖ್ಯಾತ ಕ್ರಿಕೆಟಿಗರ ವಸ್ತುಗಳನ್ನು ಮಾತ್ರ ಇಡಲಾಗಿದ್ದು, ಭಾರತದ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ಅವರ ಸಾಧನೆಯ ನೆನಪುಗಳ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಮ್ಯೂಸಿಯಂ ಪ್ರವೇಶದ್ವಾರದಲ್ಲಯೇ ಸಚಿನ್ ಅವರ ಭಾವಚಿತ್ರ ಇಡಲಾಗಿದ್ದು, ಸದ್ಯ ಅವರ ಬಳಿ ಕೊಹ್ಲಿ ಜರ್ಸಿ ಇರಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv