Tag: sachin tendulkar

  • ಸಚಿನ್, ವಿರೇಂದ್ರರಂತೆ ಪಂತ್ ಶ್ರೇಷ್ಠ ಆಟಗಾರ: ರೈನಾ

    ಸಚಿನ್, ವಿರೇಂದ್ರರಂತೆ ಪಂತ್ ಶ್ರೇಷ್ಠ ಆಟಗಾರ: ರೈನಾ

    ನವದೆಹಲಿ: ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್, ಮಾಜಿ ಕ್ರಿಕೆಟರ್‌ಗಳಾದ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಅವರಂತೆ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದು ಅನುಭವಿ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.

    ಸುರೇಶ್ ರೈನಾ ಇತ್ತೀಚೆಗೆ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರೊಂದಿಗೆ ಇನ್‍ಸ್ಟಾಗ್ರಾಮ್ ಲೈವ್‍ನಲ್ಲಿ ಚಾಟ್ ನಡೆಸಿದ್ದರು. ಈ ವೇಳೆ ಭಾರತೀಯ ಕ್ರಿಕೆಟ್ ತಂಡ, ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಜೊತೆಗೆ ರೈನಾ ಯುವ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಅವರನ್ನು ಹೊಗಳಿದ್ದಾರೆ.

    “ನನ್ನ ಪ್ರಕಾರ ರಿಷಬ್ ಪಂತ್ ಅಗ್ರ ಕ್ರಿಕೆಟಿಗ, ಅತ್ಯಂತ ಪ್ರಬಲ ಆಟಗಾರ. ಅವರ ಆಟ ನೋಡಲು ಖುಷಿ ಪಡುತ್ತೇನೆ. ಶ್ರೇಷ್ಠ ಬ್ಯಾಟ್ಸ್‌ಮನ್‍ಗಳಾದ ಯುವರಾಜ್ ಸಿಂಗ್, ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರಂತೆ ಪಂತ್ ಕೂಡ ಪ್ರಾಬಲ್ಯ ಹೊಂದಿದ್ದಾರೆ” ಎಂದು ರೈನಾ ಹೇಳಿದರು.

    2017ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಪಂತ್, ಒಮ್ಮೆ ಮಾಜಿ ನಾಯಕ ಎಂ.ಎಸ್.ಧೋನಿ ಅವರ ಉತ್ತರಾಧಿಕಾರಿ ಎಂದು ಕರೆಯಲ್ಪಟ್ಟರು. ಆದರೆ ಪಂತ್ ನಿರೀಕ್ಷೆಗಳಿಗೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಹೀಗಾಗಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾನೆ.

    ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ 2020ರ ಜನವರಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ತಲೆಗೆ ಪೆಟ್ಟು ಬಿದ್ದಿದ್ದರಿಂದ ರಿಷಭ್ ಪಂತ್ ಸರಣಿಯಿಂದ ಹೊರಗುಳಿದಿದ್ದರು. ಪ್ಯಾಟ್ ಕಮ್ಮಿನ್ಸ್ ಎಸೆದ ಇನ್ನಿಂಗ್ಸ್ 44ನೇ ಓವರ್ ನಲ್ಲಿ ಪಂತ್ ಅವರ ಹೆಲ್ಮೆಟ್‍ಗೆ ಬಾಲ್ ಬಡೆದು ಗಾಯಗೊಂಡಿದ್ದರು. ನಂತರದ ನ್ಯೂಜಿಲೆಂಡ್ ಪ್ರವಾಸದಲ್ಲಿಯೂ ಪಂತ್ ತಂಡದಿಂದ ಹೊರಗೆ ಉಳಿದಿದ್ದರು. ಸದ್ಯ ಕೆ.ಎಲ್.ರಾಹುಲ್ ಅವರನ್ನು ವೈಟ್ ಬಾಲ್ ಕ್ರಿಕೆಟ್‍ನಲ್ಲಿ ಮೊದಲ ಆಯ್ಕೆಯ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ.

    ಕೆ.ಎಲ್.ರಾಹುಲ್ ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿ 5 ಪಂದ್ಯಗಳಲ್ಲಿ 224 ರನ್ ಗಳಿಸಿ ಮಿಂಚಿದ್ದರು. ಅಷ್ಟೇ ಅಲ್ಲದೆ ಕೇವಲ ಮೂರು ಏಕದಿನ ಪಂದ್ಯಗಳಲ್ಲಿ 204 ರನ್ ಗಳಿಸಿ ಸೈ ಎನಿಸಿಕೊಂಡಿದ್ದರು.

  • ದೇವರಿಗಿಂತ ಯಾರಾದರೂ ಉತ್ತಮವಾಗಬಹುದೇ?- ಬ್ರೆಟ್ ಲೀ

    ದೇವರಿಗಿಂತ ಯಾರಾದರೂ ಉತ್ತಮವಾಗಬಹುದೇ?- ಬ್ರೆಟ್ ಲೀ

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವ ಸಾಮಥ್ರ್ಯ ಹೊಂದಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಹೇಳಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಬ್ರೆಟ್ ಲೀ, ”ಲಿಟಲ್ ಮಾಸ್ಟರ್ ಸಚಿನ್ ಅವರ ದಾಖಲೆಯನ್ನು ಮುರಿಯುವುದು ಸುಲಭದ ವಿಷಯವಲ್ಲ. ಸಚಿನ್ ಕ್ರಿಕೆಟ್ ದೇವರು. ಹೀಗಾಗಿ ದೇವರಿಗಿಂತ ಯಾರಾದರೂ ಉತ್ತಮವಾಗಬಹುದೇ? ಇದಕ್ಕಾಗಿ ನಾವು ಕಾಯುತ್ತಿದ್ದೇವೆ ಮತ್ತು ನೋಡುತ್ತಿದ್ದೇವೆ. ಎಲ್ಲವನ್ನೂ ಕಾದು ನೋಡೋಣ” ಎಂದು ಹೇಳಿದ್ದಾರೆ.

    ಅಂಕಿಅಂಶಗಳನ್ನ ಗಮನಿಸಿದರೆ ವಿರಾಟ್ ಕೊಹ್ಲಿ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಏಳರಿಂದ ಎಂಟು ವರ್ಷಗಳ ಕ್ರಿಕೆಟ್‍ನಲ್ಲಿ ಅವರು ಗಳಿಸಿದ ರನ್ ಖಂಡಿತವಾಗಿಯೂ ಸಚಿನ್ ಅವರ ದಾಖಲೆಯನ್ನು ಮುರಿಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ವಿರಾಟ್ ಕೊಹ್ಲಿ ಅವರನ್ನ ಸಚಿನ್‍ಗೆ ಹೋಲಿಕೆಯಾಗಬಹುದೆಂದು ನಾನು ಭಾವಿಸಲು ಮೂರು ಕಾರಣಗಳಿವೆ ಎಂದು ಬ್ರೆಟ್ ಲೀ ಹೇಳಿದರು. ಮೊದಲ ಮತ್ತು ಪ್ರಮುಖ ಕಾರಣವೆಂದರೆ ವಿರಾಟ್ ಖಂಡಿತವಾಗಿಯೂ ಪ್ರತಿಭಾವಂತ ಬ್ಯಾಟ್ಸ್‍ಮನ್. ಎರಡನೆಯ ಕಾರಣ ಅವರ ಫಿಟ್‍ನೆಸ್. ಕೊಹ್ಲಿ 30ನೇ ವಯಸ್ಸಿನಲ್ಲಿಯೂ ಸಾಕಷ್ಟು ಫಿಟ್ ಆಗಿದ್ದಾರೆ. ಮೂರನೆಯ ಕಾರಣವೆಂದರೆ ದೊಡ್ಡ ಗುರಿಗಳನ್ನು ಸಾಧಿಸಲು ಅವರಿಗೆ ಮಾನಸಿಕ ಶಕ್ತಿ ಇದೆ. ಅವರು ತಮ್ಮ ಪ್ರತಿಭೆಯಿಂದ ಸುಲಭವಾಗಿ ಸಾಧನೆ ಮಾಡುತ್ತಾರೆ. ವಿರಾಟ್ ಸದೃಢರಾಗಿದ್ದರೆ ಇದು ಅವರ ಮಾನಸಿಕ ಶಕ್ತಿ ಎಂದು ಹೇಳಬಹುದು ಎಂದು ಬ್ರೆಟ್ ಲೀ ತಿಳಿಸಿದ್ದಾರೆ.

    ಸಚಿನ್ ತೆಂಡೂಲ್ಕರ್ ಅವರ 47ನೇ ಹುಟ್ಟುಹಬ್ಬಕ್ಕೆ ಬ್ರೆಟ್ ಲೀ ಶುಭಕೋರಿದ್ದರು. ”ಜನ್ಮದಿನದ ಶುಭಾಶಯಗಳು ಲೆಜೆಂಡ್. ಈಗ ಮೈದಾನದಲ್ಲಿ ಯುದ್ಧಗಳು ಮುಗಿದಿವೆ. ನಮ್ಮ ಸ್ನೇಹ ಯಾವಾಗಲೂ ಉಳಿಯುತ್ತದೆ. ಸುರಕ್ಷಿತವಾಗಿರಿ ಮತ್ತು ಜನ್ಮದಿನವನ್ನು ಉತ್ತಮವಾಗಿ ಆಚರಿಸಿ” ಎಂದು ಶುಕ್ರವಾರ ಟ್ವೀಟ್ ಮಾಡಿದ್ದರು.

    ಮಾಸ್ಟರ್ ಬ್ಲಾಸ್ಟರ್ ಸಚಿನ್ 49 ಏಕದಿನ ಮತ್ತು 51 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ 100 ಶತಕಗಳನ್ನು ಗಳಿಸಿದ ಏಕೈಕ ಆಟಗಾರ ಸಚಿನ್ ಆಗಿದ್ದಾರೆ. ತೆಂಡೂಲ್ಕರ್ ಅವರು 463 ಏಕದಿನ ಇನ್ನಿಂಗ್ಸ್ ಗಳಲ್ಲಿ 18,426 ರನ್ ಗಳಿಸಿ ಏಕದಿನ ಕ್ರಿಕೆಟ್‍ನಲ್ಲಿ ಅತ್ಯಧಿಕ ರನ್‍ಗಳಿಸಿದ ವಿಶ್ವದ ಸರ್ವಶ್ರೇಷ್ಠ ಆಟಗಾರ ಎನಿಸಿಕೊಂಡಿದ್ದಾರೆ.

    ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 44 ಏಕದಿನ ಮತ್ತು 27 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಸಚಿನ್ ಅವರನ್ನು ಹಿಂದಿಕ್ಕಲು ವಿರಾಟ್‍ಗೆ ಇನ್ನೂ 29 ಶತಕಗಳ ಅಗತ್ಯವಿದೆ.

  • ಟೆಸ್ಟ್ ದಾಖಲೆಯಲ್ಲಿ ಕಾಂಬ್ಳಿ ಫಸ್ಟ್, ಸಚಿನ್ ಸೆಕೆಂಡ್, ಕೊಹ್ಲಿಗೆ ಮೂರನೇ ಸ್ಥಾನ

    ಟೆಸ್ಟ್ ದಾಖಲೆಯಲ್ಲಿ ಕಾಂಬ್ಳಿ ಫಸ್ಟ್, ಸಚಿನ್ ಸೆಕೆಂಡ್, ಕೊಹ್ಲಿಗೆ ಮೂರನೇ ಸ್ಥಾನ

    ನವದೆಹಲಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪೀಳಿಗೆಯ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎಂದು ಪರಿಗಣಿಸಲಾಗಿದೆ. ಸಚಿನ್ ಎರಡು ಎಕದಿನ, ಟೆಸ್ಟ್ ಎರಡೂ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಾಗಿ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು. ಅವರು 200 ಟೆಸ್ಟ್ ಪಂದ್ಯಗಳಲ್ಲಿ 15,921 ರನ್ ಮತ್ತು 463 ಏಕದಿನ ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದಾರೆ.

    ಸಚಿನ್ ಅನೇಕ ಬ್ಯಾಟಿಂಗ್ ದಾಖಲೆಗಳನ್ನು ಹೊಂದಿದ್ದಾರೆ. ಆದರೆ ಟೆಸ್ಟ್‌ನಲ್ಲಿ ಉತ್ತಮ ಸರಾಸರಿಯನ್ನು ಹೊಂದಿರುವ ಭಾರತೀಯ ಬ್ಯಾಟ್ಸ್‌ಮನ್‌ ದಾಖಲೆಯನ್ನು ತಪ್ಪಿಸಿಕೊಂಡರು. ಈ ಪಟ್ಟಿಯಲ್ಲಿ ಅವರ ಬಾಲ್ಯದ ಸ್ನೇಹಿತ ವಿನೋದ್ ಕಾಂಬ್ಳಿ ಅಗ್ರಸ್ಥಾನದಲ್ಲಿದ್ದಾರೆ.

    ಹೌದು, ವಿನೋದ್ ಕಾಂಬ್ಳಿ ಅವರ ಹೆಸರು ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಆದರೆ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಸರಾಸರಿ ಹೊಂದಿರುವ ಭಾರತೀಯರ ಪಟ್ಟಿಯಲ್ಲಿ ವಿನೋದ್ ಕಾಂಬ್ಳಿ ನಂಬರ್ 1 ಸ್ಥಾನದಲ್ಲಿದ್ದಾರೆ. ಅವರು ಕೇವಲ 17 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೆ ಸಚಿನ್ ಅವರಿಗಿಂತ ಭಿನ್ನವಾಗಿ, ಕಾಂಬ್ಳಿ ಪ್ರಾರಂಭದಲ್ಲಿಯೇ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು ತಮ್ಮ ಮೂರನೇ ಮತ್ತು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಡಬಲ್-ಶತಕ ಸಿಡಿಸಿದ್ದರು. ಬಳಿಕ ಮುಂದಿನ ಎರಡು ಟೆಸ್ಟ್ ಗಳಲ್ಲಿ ಇನ್ನೂ ಎರಡು ಶತಕಗಳನ್ನು ಗಳಿಸಿದ್ದರು.

    ಕಾಂಬ್ಳಿ ಅವರು ಆಡಿದ ನಂತರದ 13 ಇನ್ನಿಂಗ್ಸ್‌ಗಳಲ್ಲಿ ಮೂರು ಅಂಕಿ ರನ್ ಗಳಿಸಲು ಹೆಣಗಾಡಿದರು. 1995ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ಮೂಲಕ ಕಾಂಬ್ಳಿ ತಮ್ಮ ವೃತ್ತಿ ಜೀವನದ ಟೆಸ್ಟ್ ಕ್ರಿಕೆಟ್‍ನಲ್ಲಿ 54.20ರ ಸರಾಸರಿಯಲ್ಲಿ ಒಟ್ಟು 1,084 ರನ್ ಗಳಿಸಿದರು. 2000ದಲ್ಲಿ ಅವರು ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದರು. ಆದರೆ 1995ರ ನಂತರ ಎಂದಿಗೂ ಟೆಸ್ಟ್ ತಂಡಕ್ಕೆ ಕಮ್‍ಬ್ಯಾಕ್ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ.

    ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಸರಾಸರಿ ಹೊಂದಿದ ಬ್ಯಾಟ್ಸ್‌ಮನ್‍ಗಳ ಪಟ್ಟಿಯಲ್ಲಿ ಕಾಂಬ್ಳಿ ನಂತರದ ಸ್ಥಾನದಲ್ಲಿ ಬಾಲ್ಯದ ಸ್ನೇಹಿತ ಸಚಿನ್ ಇದ್ದಾರೆ. ಮಾಸ್ಟರ್ ಬ್ಲಾಸ್ಟರ್ 53.78 ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 52.62 ಸರಾಸರಿಯಲ್ಲಿ 7,240 ರನ್ ದಾಖಲಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ರಾಹುಲ್ ದ್ರಾವಿಡ್ 52.63 ಸರಾಸರಿಯಲ್ಲಿ 13,265 ರನ್ ಗಳಿಸಿದರೆ, ಸುನಿಲ್ ಗವಾಸ್ಕರ್ 51.12 ಸರಾಸರಿಯಲ್ಲಿ 10,122 ರನ್ ದಾಖಲಿಸಿ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

  • ಅಮ್ಮನ ಆಶೀರ್ವಾದ ಪಡೆದುಕೊಂಡ ಕ್ರಿಕೆಟ್ ದೇವರು

    ಅಮ್ಮನ ಆಶೀರ್ವಾದ ಪಡೆದುಕೊಂಡ ಕ್ರಿಕೆಟ್ ದೇವರು

    – ಸಚಿನ್‍ಗೆ ಸಿಕ್ತು ಅಮ್ಮನಿಂದ ವಿಶೇಷ ಗಿಫ್ಟ್

    ಮುಂಬೈ: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದೇಶ, ವಿದೇಶಗಳಿಂದ ಕೋಟ್ಯಂತರ ಅಭಿಮಾನಿಗಳು ಕ್ರಿಕೆಟ್ ದೇವರಿಗೆ ಶುಭಕೋರಿ ಹಾರೈಸುತ್ತಿದ್ದಾರೆ.

    47ನೇ ಹುಟ್ಟುಹಬ್ಬದ ನಿಮಿತ್ತ ಸಚಿನ್ ತೆಂಡೂಲ್ಕರ್ ಅವರು ತಾಯಿಯ ಆಶೀರ್ವಾದ ಪಡೆದುಕೊಂಡಿದ್ದಾರೆ. ಜೊತೆಗೆ ಅಮ್ಮನಿಂದ ಅವರಿಗೆ ವಿಶೇಷ ಗಿಫ್ಟ್ ಕೂಡ ಸಿಕ್ಕಿದೆ.

    ಈ ಕುರಿತು ಟ್ವೀಟ್ ಮಾಡಿರುವ ಮಾಸ್ಟರ್ ಬ್ಲಾಸ್ಟರ್, ತಾಯಿಯ ಆಶೀರ್ವಾದ ಪಡೆದು ನನ್ನ ದಿನವನ್ನು ಪ್ರಾರಂಭಿಸಿದೆ. ಅವರು ನನಗೆ ಉಡುಗೊರೆಯಾಗಿ ಗಣಪತಿ ಬಪ್ಪಾ ಫೋಟೋ ನೀಡಿದ್ದಾರೆ. ಇದು ಬೆಲೆ ಕಟ್ಟಲಾಗದ ಉಡುಗೊರೆ. ಈ ಕ್ಷಣವನ್ನು ನಿಮ್ಮೊಂದಿಗೆ ಹಂಚಿಕೊಂಡಿರುವೆ ಎಂದು ಹೇಳಿದ್ದಾರೆ.

    47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಚಿನ್ ತೆಂಡೂಲ್ಕರ್ ಅವರಿಗೆ ವಿರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಕ್ರಿಸ್ ಗೇಲ್ ಸೇರಿದಂತೆ ಅನೇಕರು ಶುಭಾಶಯಗಳನ್ನು ತಿಳಿಸಿದ್ದಾರೆ.

    ವಿರಾಟ್ ಕೊಹ್ಲಿ ಮಾಡಿ, ಕ್ರಿಕೆಟ್ ಮೇಲಿರುವ ಫ್ಯಾಶನ್ ಮೂಲಕ ಹಲವರಿಗೆ ಸ್ಫೂರ್ತಿಯಾಗಿರುವ ಸಚಿನ್ ಅವರಿಗೆ ಹುಟ್ಟುಹಬ್ಬದ ಶುಭಾಶಗಳು. ಮುಂದಿನ ನಿಮ್ಮ ದಿನಗಳು ಅದ್ಭುತವಾಗಿ ಇರಲಿ ಎಂದು ಹಾರೈಸಿದ್ದಾರೆ. ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಕೂಡ ವಿಶ್ ಮಾಡಿದ್ದು, ಕ್ರೀಡೆಯಲ್ಲಿ ನೀವು ಬಿಟ್ಟುಹೋದ ಪರಂಪರೆ ಅಮರವಾದದ್ದು, ಹ್ಯಾಪಿ ಬರ್ತ್ ಡೇ ಚಾಂಪ್ ಎಂದು ಟ್ವೀಟ್ ಮಾಡಿದ್ದಾರೆ.

    ಯುವರಾಜ್ ಸಿಂಗ್ ಕೂಡ ಟ್ವೀಟ್ ಮಾಡಿ, ಬ್ಯಾಟ್ ಮತ್ತು ಹಾರ್ಟ್ ನಲ್ಲಿ ವಿಶೇಷ ಸ್ಥಾನವೊಂದಿರುವ ಲೆಜೆಂಡ್‍ಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ದಾಖಲೆಯಂತೆ ನಿಮ್ಮ ಜೀವನ ಕೂಡ ಬೆಳಗಲಿ. ನಿಮ್ಮ ಉದಾತ್ತ ಕಾರ್ಯಗಳಿಂದ ಇನ್ನೂ ಹಲವರು ಸ್ಫೂರ್ತಿಗೊಳ್ಳಲಿ ಎಂದು ಬರೆದುಕೊಂಡಿದ್ದಾರೆ. ಆಟದ ರೀತಿಯನ್ನೇ ಬದಲಿಸಿ ಕ್ರಿಕೆಟ್ ಅನ್ನು ಅನೇಕರು ಪ್ರೀತಿಸುವಂತೆ ಮಾಡಿದ ವ್ಯಕ್ತಿ. ಒಳ್ಳೆಯ ವ್ಯಕ್ತಿತ್ವವಿರುವ ಲೆಜೆಂಡ್‍ಗೆ ಹ್ಯಾಪಿ ಬರ್ತೆ ಡೇ ಎಂದು ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದಾರೆ.

    ಸಚಿನ್ ಅವರ ಹುಟ್ಟುಹಬ್ಬಕ್ಕೆ ಐಸಿಸಿ ಸೇರಿದಂತೆ ಬಿಸಿಸಿಐ ಕೂಡ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದು, ಭಾರತದ ಓಟಗಾರ್ತಿ ಹಿಮಾದಾಸ್ ಕೂಡ ಸಚಿನ್ ಅವರಿಗೆ ವಿಶ್ ಮಾಡಿದ್ದಾರೆ. ಉಳಿದಂತೆ ಮಾಜಿ ಆಟಗಾರರಾದ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಎಲ್ಲರೂ ಟ್ವೀಟ್ ಮಾಡಿದ್ದಾರೆ.

  • 47ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ದೇವರು

    47ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ದೇವರು

    – ‘ಒಂದು ಅವಕಾಶಕ್ಕಾಗಿ ಕ್ಯಾಪ್ಟನ್ ಬಳಿ ಬೇಡಿದ್ದ ಕ್ರಿಕೆಟ್ ದಿಗ್ಗಜ’

    ಮುಂಬೈ: ಕ್ರಿಕೆಟ್ ದಿಗ್ಗಜ, ಕ್ರಿಕೆಟ್ ದೇವರು, ದಂತಕಥೆ ಸಚಿನ್ ತೆಂಡೂಲ್ಕರ್ ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕ್ರಿಕೆಟ್ ದೇವರ ಹುಟ್ಟುಹಬ್ಬಕ್ಕೆ ವಿಶ್ವದ ಮೂಲೆ ಮೂಲೆಯಿಂದ ಶುಭಾಶಯಗಳು ಹರಿದು ಬರುತ್ತಿವೆ.

    ಮಹಾರಾಷ್ಟ್ರದ ಮುಂಬೈನಲ್ಲಿ 1973ರ ಏಪ್ರಿಲ್ 24ರಂದು ಜನಿಸಿದ ಮಾಸ್ಟರ್ ಬ್ಲಾಸ್ಟರ್ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅನೇಕ ದಾಖಲೆಯನ್ನು ಬರೆದಿದ್ದಾರೆ. ಆದರೆ ಲಿಟಲ್ ಮಾಸ್ಟರ್ ಒಂದು ಅವಕಾಶಕ್ಕಾಗಿ ನಾಯಕನ ಬಳಿ ಬೇಡಿಕೊಂಡಿದ್ದ ಬಗ್ಗೆ ನಿಮಗೆಷ್ಟು ಗೊತ್ತು? ಅಂದು ಸಿಕ್ಕ ಅವಕಾಶದಲ್ಲಿ ಸಚಿನ್ ತಮ್ಮ ಬ್ಯಾಟಿಂಗ್ ಮ್ಯಾಜಿಕ್ ತೋರಿಸಿದ್ದು ಇತಿಹಾಸದ ಪುಟ ಸೇರಿದೆ. ಇದನ್ನೂ ಓದಿ: ಹುಟ್ಟುಹಬ್ಬದಂದೇ ಸಚಿನ್ ಮಾನವೀಯತೆಯನ್ನು ನೆನೆದ ಸೆಹ್ವಾಗ್

    ಹೌದು. ಸಾಮಾನ್ಯವಾಗಿ ತಂಡದಲ್ಲಿ ಸ್ಥಾನ ಸಿಕ್ಕರೆ, ಓಪನಿಂಗ್ ಅವಕಾಶ ಪಡೆಯುವ ಆಸೆ ಪ್ರತಿಯೊಬ್ಬ ಬ್ಯಾಟ್ಸ್‌ಮನ್‍ನಲ್ಲೂ ಇರುತ್ತದೆ. ಅಂತಹದೊಂದು ತವಕ ಮಾಸ್ಟರ್ ಬ್ಲಾಸ್ಟರ್‍ಗೂ ಇತ್ತು. 16ನೇ ವಯಸ್ಸಿನಲ್ಲಿ ಭಾರತದ ಕ್ರಿಕೆಟ್ ತಂಡಕ್ಕೆ ಎಂಟ್ರಿಕೊಟ್ಟಿದ್ದ ಸಚಿನ್ ಮಿಡಲ್ ಆರ್ಡರ್ ಬ್ಯಾಟ್ಸ್‌ಮನ್ ಆಗಿ ವೃತ್ತಿಜೀವನ ಆರಂಭಿಸಿದ್ದರು. ಆದರೆ ಅಷ್ಟೇನು ಯಶಸ್ವಿಯಾಗಿರಲಿಲ್ಲ. ಹೀಗಾಗಿಯೇ ಲಿಟಲ್ ಮಾಸ್ಟರ್ ತಮಗೆ ಬ್ಯಾಟಿಂಗ್ ಮಾಡಲು ಅನುಕೂಲವಾಗುವ ಕ್ರಮಾಂಕವನ್ನು ಎದುರು ನೋಡುತ್ತಿದ್ದರು.

    ನ್ಯೂಜಿಲೆಂಡ್ ವಿರುದ್ಧ 1994ರ ಸೆಪ್ಟೆಂಬರ್‌ನಲ್ಲಿ ನಡೆದ ಪಂದ್ಯದಲ್ಲಿ ಓಪನಿಂಗ್ ಬ್ಯಾಟಿಂಗ್ ಮಾಡುವ ಅವಕಾಶ ನೀಡುವಂತೆ ಸಚಿನ್ ಟೀಂ ಇಂಡಿಯಾ ಮ್ಯಾನೇಜ್ಮೆಂಟ್, ನಾಯಕನನ್ನು ಬೇಡಿದ್ದರಂತೆ. ಈ ವಿಚಾರವನ್ನು ಸಂದರ್ಶವೊಂದರಲ್ಲಿ ಸ್ವತಃ ಸಚಿನ್ ಅವರೇ ಬಹಿರಂಗ ಪಡಿಸಿದ್ದರು. ”ನಾನು ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶಕ್ಕಾಗಿ ಟೀಂ ಮ್ಯಾನೇಜ್ಮೆಂಟ್ ಅನ್ನು ಭಿಕ್ಷುಕನಂತೆ ಬೇಡಿಕೊಂಡಿದ್ದೆ” ಎಂದು ಮಾಸ್ಟರ್ ಬ್ಲಾಸ್ಟರ್ ನೆನೆದಿದ್ದರು.

    ”ನನ್ನಲ್ಲಿ ಆಕ್ರಮಣಕಾರಿ ಆಟವಾಡುವ ವಿಶ್ವಾಸವಿತ್ತು. ಈ ಬಗ್ಗೆ ನಾಯಕನಿಗೆ ಮತ್ತು ಮ್ಯಾನೇಜರ್‌ಗೆ ಮನವರಿಕೆ ಮಾಡಿಕೊಟ್ಟೆ. ಒಂದು ವೇಳೆ ವಿಫಲನಾದರೆ ಮತ್ತೆ ನಿಮ್ಮೊಂದಿಗೆ ಕೇಳುವುದಿಲ್ಲ ಎಂದೆ. ಕೊನೆಗೂ ಅಂದು ನನಗೆ ಇನಿಂಗ್ಸ್ ಆರಂಭಿಸುವ ಅವಕಾಶ ಲಭಿಸಿತ್ತು” ಎಂದು ಸಚಿನ್ ಸಂದರ್ಶದಲ್ಲಿ ಹೇಳಿಕೊಂಡಿದ್ದರು.

    ”ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಅಂದಿನ ಆರಂಭಿಕ ಆಟಗಾರ ನವಜೋತ್ ಸಿಂಗ್ ಸಿಧು ಅವರಿಗೆ ಕುತ್ತಿಗೆ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ಇನ್ನಿಂಗ್ಸ್ ಆರಂಭಿಸಲು ಅವರಿಂದ ಸಾಧ್ಯವಿರಲಿಲ್ಲ. ಈ ವೇಳೆ ಅಂದಿನ ನಾಯಕ ಅಜರುದ್ದೀನ್ ಹಾಗೂ ಮ್ಯಾನೇಜರ್ ಅಜಿತ್ ವಾಡೇಕರ್ ಅವರಿಗೆ ಒಂದು ಅವಕಾಶ ನೀಡುವಂತೆ ಕೇಳಿಕೊಂಡಿದ್ದೆ. ಎಲ್ಲರ ಮೊದಲ ಪ್ರತಿಕ್ರಿಯೆ ನಾನ್ಯಾಕೆ ಇನಿಂಗ್ಸ್ ಆರಂಭಿಸಬೇಕು ಎಂಬುದಾಗಿತ್ತು. ಆದರೆ ನನ್ನಲ್ಲಿ ಆಕ್ರಮಣಕಾರಿ ಆಟವಾಡುವ ವಿಶ್ವಾಸವಿತ್ತು. ಈ ಬಗ್ಗೆ ನಾಯಕನಿಗೆ ಮತ್ತು ಮ್ಯಾನೇಜರ್ ಅಜಿತ್ ವಾಡೇಕರ್ ಅವರಿಗೆ ಮನವರಿಕೆ ಮಾಡಿಕೊಟ್ಟೆ. ಒಂದು ವೇಳೆ ವಿಫಲನಾದರೆ ಮತ್ತೆ ನಿಮ್ಮೊಂದಿಗೆ ಕೇಳುವುದಿಲ್ಲ ಎಂದು ಹೇಳಿದ್ದೆ. ಕೊನೆಗೂ ಅಂದು ನನಗೆ ಇನಿಂಗ್ಸ್ ಆರಂಭಿಸುವ ಅವಕಾಶ ಲಭಿಸಿತು” ಎಂದು ಸಚಿನ್ ಆದಿನವನ್ನು ನೆನೆದಿದ್ದರು.

    https://www.facebook.com/publictv/videos/532225020823063

    ”ಆಕ್ಲೆಂಡ್‍ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನನ್ನನ್ನು ಓಪನರ್ ಆಗಿ ಕಣಕ್ಕಿಳಿಸಿದ್ದರು. ಈ ಪಂದ್ಯದಲ್ಲಿ ನಾನು 49 ಎಸೆತಗಳಲ್ಲಿ ಸ್ಫೋಟಕ 82 ರನ್‍ಗಳನ್ನು ಚಚ್ಚಿದ್ದೆ. ಹಾಗಾಗಿ ಎರಡನೇ ಬಾರಿ ಓಪನಿಂಗ್ ಅವಕಾಶವನ್ನು ಕೇಳಬೇಕಾದ ಅನಿವಾರ್ಯತೆಯೇ ಬರಲಿಲ್ಲ” ಎಂದು ಸಚಿನ್ ತಮ್ಮ ಕ್ರಿಕೆಟ್ ಜೀವನವನ್ನು ಮೆಲುಕು ಹಾಕಿದ್ದರು.

    ಸಚಿನ್ ಅಂದು ಆರಂಭಿಕರಾಗಿ ಕಣಕ್ಕಿಳಿದ ಅವರ ಆಟದ ಖದರೇ ಬದಲಾಯಿತು. ಓಪನರ್ ಆಗಿ ಆಡಿದ ಮೊದಲ ಐದು ಇನ್ನಿಂಗ್ಸ್‌ಗಳಲ್ಲಿ ಕ್ರಿಕೆಟ್ ದೇವರು ಕ್ರಮವಾಗಿ 82, 63, 40, 63 ಮತ್ತು 73 ರನ್‍ಗಳನ್ನು ಬಾರಿಸಿದ್ದರು. ಕೊಲಂಬೊದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸಚಿನ್ ತಮ್ಮ 76ನೇ ಇನ್ನಿಂಗ್ಸ್‍ನಲ್ಲಿ ಚೊಚ್ಚಲ ಏಕದಿನ ಶತಕವನ್ನು ಗಳಿಸಿದ್ದರು. ಅಲ್ಲಿಂದ ಆರಂಭವಾದ ಸೆಂಚುರಿ ಸರದಾರನ ಆಟ ನಿವೃತ್ತರಾಗುವ ವೇಳೆಗೆ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ 100 ಶತಕಗಳಿಗೆ ಬಂದು ನಿಂತಿತ್ತು. ಕಾಡಿ ಬೇಡಿ ಆರಂಭವಾಗಿದ್ದ ಕ್ರಿಕೆಟ್ ವೃತ್ತಿಯ 463 ಏಕದಿನ ಇನ್ನಿಂಗ್ಸ್‍ಗಳಲ್ಲಿ 18,426 ರನ್ ಗಳಿಸಿ ಏಕದಿನ ಕ್ರಿಕೆಟ್‍ನಲ್ಲಿ ಅತ್ಯಧಿಕ ರನ್‍ಗಳಿಸಿದ ವಿಶ್ವದ ಸರ್ವಶ್ರೇಷ್ಠ ಆಟಗಾರ ಎನಿಸಿಕೊಂಡರು.

  • ಹುಟ್ಟುಹಬ್ಬದಂದೇ ಸಚಿನ್ ಮಾನವೀಯತೆಯನ್ನು ನೆನೆದ ಸೆಹ್ವಾಗ್

    ಹುಟ್ಟುಹಬ್ಬದಂದೇ ಸಚಿನ್ ಮಾನವೀಯತೆಯನ್ನು ನೆನೆದ ಸೆಹ್ವಾಗ್

    – ತೆಂಡೂಲ್ಕರ್ ಎಂದೂ ಅಭಿಮಾನಿಗಳ ಮೇಲೆ ಕೋಪಗೊಂಡಿಲ್ಲ

    ನವದೆಹಲಿ: ಇಂದು ಕ್ರಿಕೆಟ್ ಜಗತ್ತು ಕಂಡ ಅತ್ಯುತ್ತಮ ಆಟಗಾರ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹುಟ್ಟುಹಬ್ಬ. ತಮ್ಮ 16ನೇ ವಯಸ್ಸಿನಲ್ಲಿ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಸಚಿನ್ ಇಂದು 47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ.

    ಸಚಿನ್ ಅವರು ಮೈದಾನದಲ್ಲಿ ಎಂದೂ ಕೋಪ ಮಾಡಿಕೊಂಡವರಲ್ಲ. ಎದುರಾಳಿ ಬೌಲರ್ ಎಷ್ಟೇ ಕೆರಳಿಸಿದರೂ ಸಚಿನ್ ಮಾತ್ರ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡುತ್ತಿದ್ದರು. ಇದರ ಜೊತೆಗೆ ಅವರ ಅಭಿಮಾನಿಗಳ ಮೇಲೂ ಕೂಡ ಅವರು ಎಂದು ಕೂಡ ಕೋಪ ಮಾಡಿಕೊಂಡವರಲ್ಲ ಎಂದು ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

    ಸಚಿನ್ ಬಗ್ಗೆ ಮಾತನಾಡಿರುವ ಸೆಹ್ವಾಗ್, ಸಚಿನ್ ಅವರು ಎಂದೂ ಅವರ ಅಭಿಮಾನಿಗಳ ಮೇಲೆ ಕೋಪ ಮಾಡಿಕೊಂಡಿಲ್ಲ. ಅವರ ಬಳಿ ಸಾವಿರಾರು ಜನರು ಆಟೋಗ್ರಾಫ್ ತೆಗೆದುಕೊಳ್ಳಲು ಬರುತ್ತಿದ್ದರು. ಎಷ್ಟೇ ಅಭಿಮಾನಿಗಳು ಬಂದರೂ ಸಚಿನ್ ಅಷ್ಟೇ ತಾಳ್ಮೆಯಿಂದ ಆಟೋಗ್ರಾಫ್ ನೀಡುತ್ತಿದ್ದರು. ಫೋಟೋ ತೆಗೆಸಿಕೊಳ್ಳುತ್ತಿದ್ದರು ಎಂದು ಸೆಹ್ವಾಗ್ ಅವರು ಸಚಿನ್ ಅವರ ಸ್ವಭಾವದ ಬಗ್ಗೆ ತಿಳಿಸಿದ್ದಾರೆ.

    ಇದೇ ವೇಳೆ ಸಚಿನ್ ಅವರ ಮಾನವೀಯತೆಯ ಬಗ್ಗೆ ಮಾತನಾಡಿರುವ ಸೆಹ್ವಾಗ್, 2003 ವಿಶ್ವಕಪ್ ಸಮಯದಲ್ಲಿ ನಾವು ಎಲ್ಲರೂ ಸೌತ್ ಆಫ್ರಿಕಾಗೆ ಹೋಗಿದ್ದೆವು. ಈ ವೇಳೆ ಒಂದು ಪಂದ್ಯವನ್ನು ಆಡಲು ನಾವು ಡರ್ಬನ್‍ಗೆ ಹೋಗಲು ರೆಡಿಯಾಗಿದ್ದೆವು. ಆಗ ನಮ್ಮನ್ನು ಟೈಟ್ ಸೆಕ್ಯೂರಿಟಿಯೊಂದಿಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಿದ್ದರು. ಈ ವೇಳೆ ಅಲ್ಲಿ ವ್ಹೀಲ್ ಚೇರ್ ಮೇಲೆ ಅಂಗವಿಕಲ ಮಗುವೊಂದು ಕುಳಿತಿತ್ತು. ನಾವು ಯಾರೂ ಆ ಮಗುವನ್ನು ಗಮನಿಸದೆ ಒಳಗೆ ಹೋದೆವು. ಆದರೆ ಸಚಿನ್ ಮಾತ್ರ ತಾವೇ ಆ ಮಗು ಬಳಿ ಹೋಗಿ ಆಟೋಗ್ರಾಫ್ ನೀಡಿ ಫೋಟೋ ತೆಗೆಸಿಕೊಂಡು ಬಂದಿದ್ದರು ಎಂದು ಹಳೆಯ ಘಟನೆಯೊಂದನ್ನು ಮೆಲುಕು ಹಾಕಿದರು.

    ಸಚಿನ್ ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡಿ ವಿಶ್ ಮಾಡಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ತಮಗೆ ಕ್ರಿಕೆಟ್ ಮೇಲಿರುವ ಫ್ಯಾಶನ್ ಮೂಲಕ ಹಲವರಿಗೆ ಸ್ಫೂರ್ತಿಯಾಗಿರುವ ಸಚಿನ್ ಅವರಿಗೆ ಹುಟ್ಟುಹಬ್ಬದ ಶುಭಾಶಗಳು. ಮುಂದಿನ ನಿಮ್ಮ ದಿನಗಳು ಅದ್ಭುತವಾಗಿ ಇರಲಿ ಎಂದು ಟ್ವೀಟ್ ಮಾಡಿದ್ದಾರೆ. ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಕೂಡ ವಿಶ್ ಮಾಡಿದ್ದು, ಕ್ರೀಡೆಯಲ್ಲಿ ನೀವು ಬಿಟ್ಟುಹೋದ ಪರಂಪರೆ ಅಮರವಾದದ್ದು, ಹ್ಯಾಪಿ ಬರ್ತ್ ಡೇ ಚಾಂಪ್ ಎಂದು ಟ್ವೀಟ್ ಮಾಡಿದ್ದಾರೆ.

    https://twitter.com/YUVSTRONG12/status/1253541747235274752

    ಈ ವಿಚಾರವಾಗಿ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಕೂಡ ಟ್ವೀಟ್ ಮಾಡಿದ್ದು, ಬ್ಯಾಟ್ ಮತ್ತು ಹಾರ್ಟ್‍ನಲ್ಲಿ ವಿಶೇಷ ಸ್ಥಾನವೊಂದಿರುವ ಲೆಜೆಂಡ್‍ಗೆ ಹುಟ್ಟುಹಬ್ಬದ ಶುಭಶಯಗಳು. ನಿಮ್ಮ ದಾಖಲೆಯಂತೆ ನಿಮ್ಮ ಜೀವನ ಕೂಡ ಬೆಳಗಲಿ. ನಿಮ್ಮ ಉದಾತ್ತ ಕಾರ್ಯಗಳಿಂದ ಇನ್ನೂ ಹಲವರು ಸ್ಫೂರ್ತಿಗೊಳ್ಳಲಿ ಎಂದು ಬರೆದುಕೊಂಡಿದ್ದಾರೆ. ಆಟದ ರೀತಿಯನ್ನೇ ಬದಲಿಸಿ ಕ್ರಿಕೆಟ್ ಅನ್ನು ಅನೇಕರು ಪ್ರೀತಿಸುವಂತೆ ಮಾಡಿದ ವ್ಯಕ್ತಿ. ಒಳ್ಳೆಯ ವ್ಯಕ್ತಿತ್ವವಿರುವ ಲೆಜೆಂಡ್‍ಗೆ ಹ್ಯಾಪಿ ಬರ್ತೆ ಡೇ ಎಂದು ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದಾರೆ.

    ಸಚಿನ್ ಅವರ ಹುಟ್ಟುಹಬ್ಬಕ್ಕೆ ಐಸಿಸಿ ಸೇರಿದಂತೆ ಬಿಸಿಸಿಐ ಕೂಡ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದು, ಭಾರತದ ಓಟಗಾರ್ತಿ ಹಿಮಾದಾಸ್ ಕೂಡ ಸಚಿನ್ ಅವರಿಗೆ ವಿಶ್ ಮಾಡಿದ್ದಾರೆ. ಉಳಿದಂತೆ ಮಾಜಿ ಆಟಗಾರರಾದ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಎಲ್ಲರೂ ಟ್ವೀಟ್ ಮಾಡಿದ್ದಾರೆ.

    https://twitter.com/BCCI/status/1253390714924195841

  • 47ನೇ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಕ್ರಿಕೆಟ್ ದಿಗ್ಗಜ ನಿರ್ಧಾರ

    47ನೇ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಕ್ರಿಕೆಟ್ ದಿಗ್ಗಜ ನಿರ್ಧಾರ

    ಮುಂಬೈ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಭಾರತ ಹೋರಾಟವನ್ನು ಮುಂದುವರಿಸಿದೆ. ಇತ್ತ ಶುಕ್ರವಾರ 47ನೇ ವಸಂತಕ್ಕೆ ಕಾಲಿಡುತ್ತಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು, ಕೋವಿಡ್-19 ವಾರಿಯರ್ಸ್‍ಗೆ ಗೌರವ ಸಲ್ಲಿಸುವುದಕ್ಕಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

    ಇದು ಆಚರಣೆಗಳ ಸಮಯವಲ್ಲ ಎಂದು ಸಚಿನ್ ಹೇಳಿದ್ದಾರೆ. ಹೀಗಾಗಿ ಅವರು ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಎಲ್ಲಾ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು, ರಕ್ಷಣಾ ಸಿಬ್ಬಂದಿಗೆ ಸಲ್ಲಿಸುವ ಅತ್ಯುತ್ತಮ ಗೌರವ ಇದಾಗಿದೆ ಎಂದು ತೆಂಡೂಲ್ಕರ್ ಭಾವಿಸಿದ್ದಾರೆ ಎಂದು ಸಚಿನ್ ಆಪ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಭಾರತದ ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಅವರು ಈಗಾಗಲೇ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ರಿಲೀಫ್ ಫಂಡ್‍ಗೆ ಒಟ್ಟು 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಜೊತೆಗೆ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    ಅಪ್ರತಿಮ ಬ್ಯಾಟ್ಸ್‌ಮನ್‌ಗೆ ಕೋಟ್ಯಂತರ ಅಭಿಮಾನಿಗಳು ಹಾಗೂ ಕ್ಲಬ್‍ಗಳು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಗೌರವ ಸಲ್ಲಿಸಲು ಸಿದ್ಧತೆ ನಡೆಸಿವೆ. ಒಂದು ಫ್ಯಾನ್ ಕ್ಲಬ್ ಸಚಿನ್ ಅವರ 40 ಅಪರೂಪದ ಫೋಟೋಗಳನ್ನು ಬಿಡುಗಡೆ ಮಾಡಲಿದೆ. ಇನ್ನೊಂದು ಕ್ಲಬ್ ದಂತಕಥೆ ಸಚಿನ್ ಕೈಗೊಂಡ ಎಲ್ಲಾ ಸಾಮಾಜಿಕ ಕಾರ್ಯಗಳು ಮತ್ತು ಸೇವೆಗಳನ್ನು ಜನರ ಮುಂದಿಡಲು ತಯಾರಿ ನಡೆಸಿದೆ.

  • 12 ಸಾವಿರ ಕ್ರೀಡಾ ವೈದ್ಯರೊಂದಿಗೆ ಕ್ರಿಕೆಟ್ ದಂತಕಥೆ ಸಂವಾದ

    12 ಸಾವಿರ ಕ್ರೀಡಾ ವೈದ್ಯರೊಂದಿಗೆ ಕ್ರಿಕೆಟ್ ದಂತಕಥೆ ಸಂವಾದ

    – ವೈದ್ಯ ಸಮುದಾಯದ ಸೇವೆಗೆ ಕೃತಜ್ಞರಾಗಿರುವೆ: ಸಚಿನ್

    ಮುಂಬೈ: ಕೊರೊನಾ ವೈರಸ್ ಭೀತಿಯಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಸೆಲೆಬ್ರಿಟಿಗಳು, ಕ್ರಿಕೆಟ್ ಆಟಗಾರರು, ಕ್ರೀಡಾಪಟುಗಳು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ಆರೋಗ್ಯ ಹಾಗೂ ಫಿಟ್‍ಸೆಸ್ ಕುರಿತು ಯುವ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

    ಸಚಿನ್ ತೆಂಡೂಲ್ಕರ್ ಅವರು ಕ್ರೀಡಾ ಗಾಯಗಳ ಕುರಿತು ಲೈವ್ ವೆಬ್‌ನಾರ್‌ನಲ್ಲಿ ಶನಿವಾರ ಭಾಗವಹಿಸಿದರು. ಈ ವೇಳೆ ಅವರು ದೇಶಾದ್ಯಂತದ 12 ಸಾವಿರ ಯುವ ವೈದ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

    ಸಚಿನ್ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ತಮ್ಮ ವೃತ್ತಿಜೀವನದ ಅವಧಿಯಲ್ಲಿ ಹಲವಾರು ಆರೋಗ್ಯ ಸಮಸ್ಯೆ, ಗಾಯಗಳಿಂದ ಬಳಲುತ್ತಿದ್ದರು. ಅದರಲ್ಲಿ ಪ್ರಮುಖವಾದುದು ಮೊಣಕೈ ಗಾಯ ಕೂಡ ಒಂದು.

    ಈ ಕುರಿತು ಮಾಹಿತಿ ನೀಡಿರುವ ಮೂಳೆ ತಜ್ಞ ಸುಧೀರ್ ವಾರಿಯರ್ ಅವರು, ಲಾಕ್‍ಡೌನ್ ಸಮಯದಲ್ಲಿ ದೇಶಾದ್ಯಂತದ ಅನೇಕ ಯುವ ವೈದ್ಯರು ಸಚಿನ್ ಅವರೊಂದಿಗೆ ಕ್ರೀಡಾ ಸಂಬಂಧಿತ ಗಾಯಗಳ ಬಗ್ಗೆ ಪರಸ್ಪರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಕ್ರೀಡಾ ಗಾಯಗಳಿಗೆ ಸಂಬಂಧಿಸಿದಂತೆ ಶನಿವಾರ ಸಂವಾದ ನಡೆಸಲಾಗಿದ್ದು, ಸಚಿನ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಭಾರತದ ಮಾಜಿ ಬ್ಯಾಟ್ಸ್‍ಮನ್, ನಿಮ್ಮ ಸೇವೆಗಾಗಿ ವೈದ್ಯ ಸಮುದಾಯಕ್ಕೆ ಕೃತಜ್ಞರಾಗಿರುತ್ತೇನೆ ಎಂದು ಹೇಳಿದ್ದಾರೆ. ಕಾರ್ಯಕ್ರಮವು ಯುವ ವೈದ್ಯರಿಗೆ ಕಲಿಯಲು ಸಹಾಯ ಮಾಡುತ್ತದೆ ಎಂದು ಸುಧೀರ್ ವಾರಿಯರ್ ಹೇಳಿದ್ದಾರೆ.

    ಭಾರತೀಯ ಕ್ರಿಕೆಟ್ ತಂಡದ ಫಿಸಿಯೋ ನಿತಿನ್ ಪಟೇಲ್ ಅವರೊಂದಿಗೆ ಸುಧೀರ್ ವಾರಿಯರ್ ಸಂವಹನ ನಡೆಸಿದರು. ಪಟೇಲ್ ಅವರು ಈ ಹಿಂದೆ ಐಪಿಎಲ್ ತಂಡ ಮುಂಬೈ ಇಂಡಿಯನ್ಸ್ ಜೊತೆ ಕೆಲಸ ಮಾಡಿದ್ದರು.

  • 2011ರ ವಿಶ್ವಕಪ್ ಫೈನಲ್‍ನಲ್ಲಿ ಯುವಿಗಿಂತ ಧೋನಿ ಕೀರ್ತಿ ಹೆಚ್ಚಿದ್ದು ಹೇಗೆ?

    2011ರ ವಿಶ್ವಕಪ್ ಫೈನಲ್‍ನಲ್ಲಿ ಯುವಿಗಿಂತ ಧೋನಿ ಕೀರ್ತಿ ಹೆಚ್ಚಿದ್ದು ಹೇಗೆ?

    – ಧೋನಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ಯಾಕೆ?
    – ಎಲ್ಲವನ್ನೂ ರಿವಿಲ್ ಮಾಡಿದ ಭಾರತ ಕ್ರಿಕೆಟ್ ದಂತಕಥೆ

    ಮುಂಬೈ: ಟೀಂ ಇಂಡಿಯಾ 9 ವರ್ಷಗಳ ಹಿಂದೆ ಎರಡನೇ ಬಾರಿಗೆ ವಿಶ್ವಕಪ್ ಚಾಂಪಿಯನ್ ಆಗಿತ್ತು. ಏಪ್ರಿಲ್ 2ರಿಂದ ಈ ಬಗ್ಗೆ ಅನೇಕ ಚರ್ಚೆಗಳಾಗಿದ್ದವು. ಈ ವಾರವೂ ಮತ್ತೊಮ್ಮೆ ಫೈನಲ್ ಪಂದ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ.

    ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಶ್ರೀಲಂಕಾವನ್ನು ಸೋಲಿಸುವ ಮೂಲಕ ಎರಡನೇ ಬಾರಿ ಏಕದಿನ ವಿಶ್ವಕಪ್ ಗೆದ್ದಿತ್ತು. ಅಂದಿನ ನಾಯಕ ಎಂ.ಎಸ್.ಧೋನಿ ಅಜೇಯ 91 ರನ್, ಅದರಲ್ಲೂ ವಿಶೇಷವಾಗಿ ಫಿನಿಶಿಂಗ್ ಶಾಟ್ ಸಿಕ್ಸರ್ ಅನ್ನು ಸಿಡಿಸಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚಳಿಯದಂತೆ ಉಳಿದಿದೆ. ಈ ಪಂದ್ಯದಲ್ಲಿ ಗೌತಮ್ ಗಂಭೀರ್ 97 ರನ್ ಗಳಿಸಿದ್ದರು. ಯುವರಾಜ್ ಸಿಂಗ್ ಟೂರ್ನಿಯುದ್ದಕ್ಕೂ ಉತ್ತಮ ಆಲ್‍ರೌಂಡರ್ ಪ್ರದರ್ಶನ ನೀಡುತ್ತಲೇ ಬಂದಿದ್ದರೂ ಧೋನಿ ಯುವರಾಜ್ ಸಿಂಗ್ ಅವರಿಗಿಂತ ಹೆಚ್ಚು ಕೀರ್ತಿಯನ್ನು ಪಡೆದಿದ್ದು ಯಾಕೆ ಎಂಬ ಚರ್ಚೆ ಭಾರೀ ಸದ್ದು ಮಾಡುತ್ತಿದೆ.

    ಈ ಎಲ್ಲಾ ಪ್ರಶ್ನೆಗಳಿಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಮಾಧ್ಯಮವೊಂದರ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಸಚಿನ್, ಯುವರಾಜ್ ಸಿಂಗ್ ಟೂರ್ನಿಯುದ್ದಕ್ಕೂ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಕ್ವಾರ್ಟರ್ ಫೈನಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದ್ದರಿಂದ ಅವರು 5ನೇ ಕ್ರಮಾಂಕ, ನಾಯಕ ಧೋನಿ 6ನೇ ಕ್ರಮಾಂಕ ಮತ್ತು ಸುರೇಶ್ ರೈನಾ 7ನೇ ಕ್ರಮಾಂಕದಲ್ಲಿ ಬ್ಯಾಂಟಿಗ್ ಮಾಡಿದ್ದರು ಎಂದು ತಿಳಿಸಿದ್ದಾರೆ.

    ಟೀಂ ಇಂಡಿಯಾ ವೇಗದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಫೈನಲ್ ಪಂದ್ಯದಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದ್ದರು. ವಿರೇಂದ್ರ ಸೆಹ್ವಾಗ್ ಉಪುಲ್ ತರಂಗ ಅವರ ಅದ್ಭುತ ಕ್ಯಾಚ್ ಪಡೆದಿದ್ದರು. ಈ ಮೂಲಕ ನಾವು ಶ್ರೀಲಂಕಾವನ್ನು 274 ರನ್‍ಗಳಿಗೆ ಕಟ್ಟಿ ಹಾಕಿದ್ದೆವು. ಆದರೆ ಏಕಾಂಗಿ ಹೋರಾಟ ನಡೆಸಿದ್ದ ಮಹೇಲಾ ಜಯವರ್ಧನೆ 103 ರನ್ ಚಚ್ಚಿದ್ದರು ಎಂದು ನೆನೆದ್ದಾರೆ.

    ಕ್ವಾರ್ಟರ್-ಫೈನಲ್ ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ನನ್ನ ಮತ್ತು ವೀರು ಜೊತೆಯಾಟದ ನಂತರ ನಾನು ಡ್ರೆಸ್ಸಿಂಗ್ ಕೋಣೆಗೆ ಮರಳಿದೆ. ಆಗ ಫಿಸಿಯೋ ಟೇಬಲ್‍ನಲ್ಲಿ ಮಲಗಿದೆ. ವೀರು ನನ್ನ ಪಕ್ಕದಲ್ಲಿದ್ದರು. ಆಸೀಸ್ ವಿರುದ್ಧ ಗೆಲವು ಸಾಧಿಸಿ ಫೈನಲ್‍ಗೆ ಲಗ್ಗೆ ಇಟ್ಟಾಗ ಸಂತೋಷ ಇಮ್ಮಡಿಯಾಗಿತ್ತು. ಆಗ ನೀವು ನನ್ನ ಪಕ್ಕದಲ್ಲಿ ಕುಳಿತುಕೊಳ್ಳಿ ಎಲ್ಲೂ ಹೋಗಬೇಡಿ ಅಂತ ಸೆಹ್ವಾಗ್ ಅವರಿಗೆ ನಾನು ಹೇಳಿದ್ದೆ ಎಂದು ಸಚಿನ್ ನೆನಪನ್ನು ಬಿಚ್ಚಿಟ್ಟರು.

    ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೌತಮ್ ಮತ್ತು ವಿರಾಟ್ ಉತ್ತಮ ಜೊತೆಯಾಟ ನಡೆದಿತ್ತು. ಎದುರಾಳಿ ತಂಡಕ್ಕಿಂತ ಕೆಲವು ಹೆಜ್ಜೆ ಮುಂದಿಡಲು ನಾವು ಬಯಸಿದ್ದೇವೆ. ಈ ವೇಳೆ ನಾನು ವೀರೂಗೆ, ‘ಎಡಗೈ ಬ್ಯಾಟ್ಸ್‌ಮನ್ ಗೌತಮ್ ವಿಕೆಟ್ ಒಪ್ಪಿಸಿ ಹೊರ ಬಂದರೆ ಎಡಗೈ ಬ್ಯಾಟ್ಸ್‌ಮನ್ ಯುವಿ ಒಳಗೆ ಹೋಗಬೇಕು. ಒಂದು ವೇಳೆ ಬಲಗೈ ಬ್ಯಾಟ್ಸ್‌ಮನ್ ವಿರಾಟ್ ಹೊರಬಂದರೆ ಬಲಗೈ ಬ್ಯಾಟ್ಸ್‌ಮನ್ ಧೋನಿ ಬ್ಯಾಟಿಂಗ್‍ಗೆ ಇಳಿಯಬೇಕು’ ಎಂದು ಸಲಹೆ ನೀಡಿದ್ದೆ. ಹೀಗಾಗಿ ವಿರಾಟ್ ವಿಕೆಟ್ ಒಪ್ಪಿಸಿ ಹೊರ ಬಂದಿದ್ದರಿಂದ ಯುವಿಯನ್ನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಡ್ರಾಫ್ಟ್ ಮಾಡಲಾಯಿತು. ಏಕೆಂದರೆ ಬಲಗೈ, ಎಡಗೈ ಬ್ಯಾಟಿಂಗ್ ಸಂಯೋಜನೆ ಇರುವುದು ಮುಖ್ಯವಾಗಿತ್ತು. ಯುವಿ ಪ್ರಚಂಡ ರೂಪದಲ್ಲಿದ್ದರು. ಆದರೆ ಶ್ರೀಲಂಕಾದಲ್ಲಿ ಇಬ್ಬರು ಆಫ್ ಸ್ಪಿನ್ನರ್‌ಗಳು ಇದ್ದರು. ಆದ್ದರಿಂದ ಕಾರ್ಯತಂತ್ರದಲ್ಲಿ ಬದಲಾವಣೆ ಇರುತ್ತದೆ ಎಂದು ನಾನು ಭಾವಿಸಿದ್ದೆ ಎಂದು ಸಚಿನ್ ತಂತ್ರಗಾರಿಕೆ ರಿವೀಲ್ ಮಾಡಿದ್ದಾರೆ.

    ಈ ತಂತ್ರವನ್ನು ಅನುಸರಿಸುವಂತೆ ಸಲಹೆ ನೀಡಲು ಗ್ಯಾರಿ ಹೊರಗೆ ಕುಳಿತಿದ್ದ ಎಂ.ಎಸ್.ಧೋನಿ ಕಡೆಗೆ ತಿರುಗಿ ನೋಡಿದೆ. ಆಗ ಧೋನಿ ನನ್ನ ಬಳಿಗೆ ಬಂದಾಗ ವೀರು, ಕೋಚ್ ಗ್ಯಾರಿ ಕಸ್ಟರ್ನ್ ಹಾಗೂ ನಾನು ಅದರ ಬಗ್ಗೆ ಮಾತನಾಡಿದ್ದೆವು. ಗ್ಯಾರಿ ಸಹ ಒಪ್ಪಿದ್ದರು. ಆಗ ಮೈದಾನಕ್ಕಿಳಿಯಲು ಧೋನಿ ಸಿದ್ಧರಾದರು ಎಂದು ತಿಳಿಸಿದ್ದಾರೆ.

    ಇದೇ ವೇಳೆ ವಿರೇಂದ್ರ ಸೆಹ್ವಾಗ್ ಮಾತನಾಡಿ, ನಮ್ಮ ಮೂಲಭೂತ ಅಂಶಗಳನ್ನು ಸರಿಯಾಗಿ ಪಡೆದರೆ, ನಾವು ಯಾವಾಗಲೂ ನಿಯಂತ್ರಣದಲ್ಲಿರುತ್ತೇವೆ ಎಂದು ನಮಗೆ ತಿಳಿದಿತ್ತು. ನಾನು ಆರಂಭದಲ್ಲಿ ತುಂಬಾ ನಿರಾಶೆಗೊಂಡಿದ್ದೆ. ಸಚಿನ್ ಯಾವಾಗ ವಿಕೆಟ್ ಒಪ್ಪಿಸಿ ಹೊರ ಬಂದರೋ ನಾನು ಮೌನಕ್ಕೆ ಜಾರಿಬಿಟ್ಟಿದ್ದೆ ಎಂದು ನೆನೆದರು.

    ‘ಗೌತಮ್ ಗಂಭೀರ್ ಅವರ 97 ರನ್‍ಗಳ ಅಮೂಲ್ಯವಾದ ಇನ್ನಿಂಗ್ಸ್ ಗುರಿಯನ್ನು ಬೆನ್ನಟ್ಟುವಲ್ಲಿ ಅಡಿಪಾಯ ಹಾಕಿತು. ಜೊತೆಗೆ ಧೋನಿ ಅಜೇಯ 91 ರನ್ ಗಳಿಸಿ ಗುರಿ ತಲುಪಿದ್ದರು. ಧೋನಿ ಫಿನಿಶಿಂಗ್ ಸಿಕ್ಸರ್ ಸಿಡಿಸಿದ್ದು ಸ್ಮರಣೀಯವಾಗಿಸಿದೆ ಎಂದು ಸಚಿನ್ ಹೇಳಿದ್ದಾರೆ.

  • ಕೊರೊನಾ ವಿರುದ್ಧ ಹೋರಾಡಲು 50 ಲಕ್ಷ ರೂ. ದೇಣಿಗೆ ನೀಡಿದ ತೆಂಡೂಲ್ಕರ್

    ಕೊರೊನಾ ವಿರುದ್ಧ ಹೋರಾಡಲು 50 ಲಕ್ಷ ರೂ. ದೇಣಿಗೆ ನೀಡಿದ ತೆಂಡೂಲ್ಕರ್

    ನವದೆಹಲಿ: ಕೊರೊನಾ ವಿರುದ್ಧದ ಹೋರಾಡಲು ಸೆಲೆಬ್ರಿಟಿಗಳು, ಕ್ರಿಕೆಟಿಗರು ಮತ್ತು ಕ್ರೀಡಾಪಟುಗಳು ಸಹಾಯ ಮಾಡಲು ಸರ್ಕಾರಗಳಿಗೆ ದೇಣಿಗೆ ನೀಡುತ್ತಿದ್ದಾರೆ. ಎಂ.ಎಸ್.ಧೋನಿ, ಪಿ.ವಿ ಸಿಂಧು, ಹಿಮಾ ದಾಸ್, ಭಜರಂಗ್ ಪೂನಿಯಾ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು 50 ಲಕ್ಷ ರೂ. ದೊಡ್ಡ ದೇಣಿಗೆಯನ್ನು ನೀಡಿದ್ದಾರೆ.

    ಸಚಿನ್ ತೆಂಡೂಲ್ಕರ್ ಅವರು ಪ್ರಧಾನ ವಿಪತ್ತು ಪರಿಹಾರ ನಿಧಿಗೆ 25 ಲಕ್ಷ ರೂ. ಹಾಗೂ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಲು ನಿರ್ಧರಿಸಿದ್ದಾರೆ. ತೆಂಡೂಲ್ಕರ್ ಅವರ ಸಹಾಯದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಕೊರೊನಾ ಪರಿಹಾರ ನಿಧಿಗೆ ತನ್ನ 6 ತಿಂಗ್ಳ ಸಂಬಳ ನೀಡಿದ ಭಾರತದ ಕುಸ್ತಿಪಟು

    46 ವರ್ಷದ ಸಚಿನ್ ತೆಂಡೂಲ್ಕರ್ ಅವರು, ಈ ಹಿಂದೆ ಕೊರೊನಾ ವೈರಸ್ ವಿರುದ್ಧದ ಹೋರಾಟವನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ಆಟಗಾರ ಎದುರಿಸುವ ಸವಾಲುಗಳಿಗೆ ಹೋಲಿಸಿದ್ದರು. ‘ಬಹುಶಃ ನಾವೆಲ್ಲರೂ ಆಟದ ಹಳೆಯ ಸ್ವರೂಪದಿಂದ ಪಾಠಗಳನ್ನು ಕಲಿಯುವ ಸಮಯ ಬಂದಿದೆ. ನಾವು ಉತ್ತಮವಾಗಿ ಇರಬೇಕಾದರೆ ತಾಳ್ಮೆ ನಮಗೆ ಬೇಕಾಗಿದೆ’ ಎಂದು ಸಚಿತ್ ತಿಳಿಸಿದ್ದರು. ಇದನ್ನೂ ಓದಿ: ಕೊರೊನಾ ವಿರುದ್ಧದ ಹೋರಾಟಕ್ಕೆ 2 ಕೋಟಿ ರೂ. ದೇಣಿಗೆ ನೀಡಿದ ಪವನ್ ಕಲ್ಯಾಣ್

    ಅಷ್ಟೇ ಅಲ್ಲದೆ ಸಚಿನ್ ತೆಂಡೂಲ್ಕರ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂಚಿಕೊಂಡಿದ್ದ ಸಚಿನ್, ‘ಕೇಂದ್ರ ಸರ್ಕಾರ, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಮನೆಯಲ್ಲಿ ಇರುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೂ ಕೆಲವರು ಇದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ನಾವು ಕೆಲವು ವಿಡಿಯೋಗಳನ್ನು ನೋಡಿದ್ದೇನೆ. ಕೆಲವರು ಹೊರಗಡೆ ಕ್ರಿಕೆಟ್ ಆಡುತ್ತಿದ್ದಾರೆ. ಒಮ್ಮೆ ಕೊರೊನಾ ವೈರಸ್ ದೇಶದಲ್ಲಿ ಕೈಮೀರಿದರೆ ನಮ್ಮ ಹೆಣಗಳನ್ನು ಉರುಳಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

    https://www.instagram.com/p/B-J5zkZlg_O/

    ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಗಳಾದ ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್ ಒಟ್ಟು 4,000 ಫೇಸ್ ಮಾಸ್ಕ್ ಗಳನ್ನು ಬರೋಡಾ ಪೊಲೀಸ್ ಮತ್ತು ಆರೋಗ್ಯ ಇಲಾಖೆಗೆ ನೀಡಿದ್ದಾರೆ. ಮತ್ತೊಂದೆಡೆ ಧೋನಿ ಇತ್ತೀಚೆಗೆ ಪುಣೆ ಮೂಲದ ಎನ್‍ಜಿಒ ಮೂಲಕ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ.