ನವದೆಹಲಿ: ಆಪರೇಷನ್ ಸಿಂಧೂರದ(Operation Sindoor) ಯಶಸ್ವಿಗೆ ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ರಕ್ಷಣಾ ತಂಡಗಳ ಕುರಿತು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್(Sachin Tendulkar) ಪ್ರಶಂಸೆಯ ಬರಹವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Operation Sindoor had a team of over 1.4 billion rising in unison. Strong resolve and measured restraint, Team India!
Remarkable teamwork across all levels led by tireless efforts of Hon. PM @narendramodi ji and his team and the three defence forces.
ಪೋಸ್ಟ್‌ನಲ್ಲಿ ಏನಿದೆ?
ಆಪರೇಷನ್ ಸಿಂಧೂರದ ಕಾರ್ಯಚರಣೆಯಲ್ಲಿ 1.6 ಬಿಲಿಯನ್‌ಗಿಂತಲೂ ಹೆಚ್ಚು ಜನರು ಒಗ್ಗಟ್ಟಿನಿಂದ ಹೋರಾಡಿದ್ದಾರೆ. ಭಾರತೀಯ ಸೇನೆ ಬಲವಾದ ದೃಢನಿಶ್ಚಯ ಮತ್ತು ಸಂಯಮದ ಹೋರಾಡಿದೆ. ಇದನ್ನೂ ಓದಿ: ಮೋದಿ ಭಾಷಣದ ಬೆನ್ನಲ್ಲೇ ಮತ್ತೆ ಪಾಕ್ ಡ್ರೋನ್ ದಾಳಿ
ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ಮೂರು ರಕ್ಷಣಾ ತಂಡಗಳ ಅವಿಶ್ರಾಂತ ಪರಿಶ್ರಮವು ಗಮನಾರ್ಹವಾಗಿದೆ. ಅಲ್ಲದೇ ನಮ್ಮ ಧೈರ್ಯಶಾಲಿ ಸೈನಿಕರು ಹಾಗೂ ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವ ನಾಗರಿಕರ ಬಗ್ಗೆ ಇಲ್ಲಿ ನಾನು ವಿಶೇಷವಾಗಿ ಉಲ್ಲೇಖಿಸುತ್ತಿದ್ದೇನೆ. ಜೈ ಹಿಂದ್ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇಂದು ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 74ನೇ ಅರ್ಧಶತಕ ಸಿಡಿಸಿದರೆ ಐಸಿಸಿ ಆಯೋಜಿಸಿದ ಟೂರ್ನಿಯಲ್ಲಿ 24ನೇ ಫಿಫ್ಟಿ ಹೊಡೆದರು. ಈ ಮೂಲಕ ಐಸಿಸಿ ಆಯೋಜಿಸಿದ್ದ ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಫೈನಲಿಗೆ ಭಾರತ – ದಾಖಲೆ ಬರೆದ ರೋಹಿತ್ ಶರ್ಮಾ
Virat Kohli steadied the India chase in a crucial stand with Shreyas Iyer 👌
ಇಲ್ಲಿಯವರೆಗೆ ಐಸಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧ ಶತಕ ಸಿಡಿಸಿದ ಖ್ಯಾತಿಗೆ ಸಚಿನ್ (Sachin Tendulkar) ಪಾತ್ರವಾಗಿದ್ದರು. ತೆಂಡೂಲ್ಕರ್ 58 ಇನ್ನಿಂಗ್ಸ್‌ಗಳಿಂದ 23 ಅರ್ಧಶತಕ ಸಿಡಿಸಿದ್ದರು.
ಇಂದಿನ ಪಂದ್ಯದಲ್ಲಿ ಕೊಹ್ಲಿ 84 ರನ್ (98 ಎಸೆತ, 5 ಬೌಂಡರಿ) ಹೊಡೆದು ಔಟಾದರು. ಮೂರನೇ ವಿಕೆಟಿಗೆ ಶ್ರೇಯಸ್ ಅಯ್ಯರ್ ಜೊತೆ 111 ಎಸೆತಗಳಲ್ಲಿ 91 ರನ ಜೊತೆಯಾಟವಾಡಿದ್ದ ಕೊಹ್ಲಿ 4ನೇ ವಿಕೆಟಿಗೆ ಅಕ್ಷರ್ ಪಟೇಲ್ ಜೊತೆ 52 ಎಸೆತಗಳಲ್ಲಿ 44 ರನ್ ಜೊತೆಯಾಟವಾಡಿದ್ದರು. ಐದನೇ ವಿಕೆಟಿಗೆ ಕೆಎಲ್ ರಾಹುಲ್ ಜೊತೆ 46 ಎಸೆತಗಳಲ್ಲಿ 47 ರನ್ ಪೇರಿಸಿದ್ದರು.
ಅತ್ಯುತ್ತಮ ಆಟವಾಡಿದ್ದ ಕೊಹ್ಲಿ ಅವರಿಗೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು. ಈ ಟೂರ್ನಿಯಲ್ಲಿ ಎರಡನೇ ಬಾರಿಗೆ ಕೊಹ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೊದಲು ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಅಜೇಯ 100 ರನ್ ಹೊಡೆದಿದ್ದಕ್ಕೆ ಕೊಹ್ಲಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸಿಕ್ಕಿತ್ತು.
ಮುಂಬೈ: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರಿಗೆ 2024ನೇ ಸಾಲಿನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ನೀಡುವ ಕರ್ನಲ್ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ (C.K Nayudu Lifetime Achievement Award,)ಲಭಿಸಿದೆ.
ಭಾರತದ ಪರ 664 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಸಚಿನ್ ಅವರ ಹೆಸರಿನಲ್ಲಿ ಟೆಸ್ಟ್, ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ಇದೆ. ಕ್ರಿಕೆಟ್ ಕ್ಷೇತ್ರದಲ್ಲಿ ಸಚಿನ್ ಅವರ ಸಾಧನೆಯನ್ನು ಪರಿಗಣಿಸಿ ಬಿಸಿಸಿಐ ಕರ್ನಲ್ ಸಿ.ಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ನೀಡುತ್ತಿದೆ ಎಂದು ಮಂಡಳಿ ತಿಳಿಸಿದೆ.
ಸಚಿನ್ 200 ಟೆಸ್ಟ್ ಪಂದ್ಯಗಳು, 463 ಏಕದಿನ ಪಂದ್ಯಗಳಲ್ಲಿ ಆಡುವ ಮೂಲಕ ಅತಿ ಹೆಚ್ಚು ಪಂದ್ಯವನ್ನಾಡಿದ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಟೆಸ್ಟ್‌ನಲ್ಲಿ 15,921 ರನ್‌ಗಳು ಹಾಗೂ ಏಕದಿನದಲ್ಲಿ 18,426 ರನ್‌ಗಳನ್ನು ದಾಖಲಿಸಿದ್ದಾರೆ.
ಸಚಿನ್ ತಮ್ಮ ವೃತ್ತಿ ಜೀವನದಲ್ಲಿ ಒಂದು ಅಂತರರಾಷ್ಟ್ರೀಯ ಟಿ20 ಪಂದ್ಯ ಆಡಿದ್ದಾರೆ. 2023ನೇ ಸಾಲಿನಲ್ಲಿ ಈ ಪ್ರಶಸ್ತಿ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಮತ್ತು ಮಾಜಿ ವಿಕೆಟ್ ಕೀಪರ್ ಫಾರೂಕ್ ಎಂಜಿನಿಯರ್ ಅವರಿಗೆ ಲಭಿಸಿತ್ತು.
ಮುಂಬೈ: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರ ನಿಧನದ ಆಘಾತಕಾರಿ ಸುದ್ದಿಯನ್ನು ಕೇಳಿ ಇಡೀ ಭಾರತ ಕಂಬನಿ ಮಿಡಿದಿದೆ. ಬುಧವಾರ ತಡರಾತ್ರಿ ರತನ್ ಟಾಟಾ (86) ಕೊನೆಯುಸಿರೆಳೆದಿದ್ದಾರೆ. ಭಾರತದ ಲಕ್ಷಾಂತರ ಜನ ಸಂತಾಪ ಸೂಚಿಸುತ್ತಿದ್ದಾರೆ. ಇದಕ್ಕೆ ಕ್ರಿಕೆಟ್ ದೇವರು ತೆಂಡೂಲ್ಕರ್ ಸಹ ಕಂಬನಿ ಮಿಡಿದ್ದಾರೆ. ಟಾಟಾ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಟಾಟಾ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಈ ನಡುವೆ ಸಚಿನ್ ( Sachin Tendulkar) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇತ್ತೀಚೆಗೆ ರತನ್ ಟಾಟಾ ಅವರೊಂದಿಗಿ ಭೇಟಿಯನ್ನು ನೆನಪು ಮಾಡಿಕೊಂಡಿದ್ದಾರೆ. ಅವರ ಜೊತೆಗಿನ ಫೋಟೋದೊಂದಿಗೆ ಭಾವನಾತ್ಮಕ ಸಂದೇಶವೊಂದನ್ನೂ ಬರೆದುಕೊಂಡಿದ್ದಾರೆ. ಅವರೊಂದಿಗೆ ನಾನು ಸಮಯ ಕಳೆಯುವುದಕ್ಕೆ ಅವಕಾಶ ಸಿಕ್ಕಿದೆ. ಇದರಿಂದ ನಾನು ಅದೃಷ್ಟಶಾಲಿಯಾಗಿದ್ದೇನೆ. ಆದರೆ ಅವರನ್ನ ಭೇಟಿಯಾಗದ ಲಕ್ಷಾಂತರ ಜನರು ಅನುಭವಿಸುವ ದುಃಖವನ್ನು ಇಂದು ನಾನೂ ಅನುಭವಿಸುತ್ತಿದ್ದೇನೆ. ಅಂತಹ ಪ್ರಭಾವಿ ವ್ಯಕ್ತಿ ಅವರು. ಟಾಟಾ ನೀವು ನಿರ್ಮಿಸಿದ ಸಂಸ್ಥೆಗಳು ಮತ್ತು ನೀವು ಸ್ವೀಕರಿಸಿದ ಮೌಲ್ಯಗಳ ಮೂಲಕ ನಿಮ್ಮ ಪರಂಪರೆಯು ಮುಂದುವರಿಯುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಭ್ರಷ್ಟಾಚಾರ ನಿರ್ಮೂಲನೆ ಮಾಡೋದು ಹೇಗೆ? – ರತನ್ ಟಾಟಾ ನೀಡಿದ ಖಡಕ್ ಉತ್ತರ ಇದು
ಭಾರತದ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohith Sharma) ಕೂಡ ರತನ್ ಟಾಟಾ ಅವರ ಅಗಲಿಕೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ. ಸರ್ ನೀವು ಚಿನ್ನದಂತ ಹೃದಯ ಹೊಂದಿರುವ ವ್ಯಕ್ತಿ. ನೀವು ನಿಜವಾಗಿಯೂ ಕಾಳಜಿವಹಿಸುವ ಮತ್ತು ಎಲ್ಲರ ಜೀವನ ಉತ್ತಮಗೊಳಿಸಲು ತನ್ನ ಜೀವನ ನಡೆಸಿದ ವ್ಯಕ್ತಿಯಾಗಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತೀರಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಅನೇಕರು ಕೂಡ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ರತನ್ ಟಾಟಾರದ್ದು ಸಮಗ್ರ ವ್ಯಕ್ತಿತ್ವ: ಸುಧಾ ಮೂರ್ತಿ
ಟಾಟಾ ಅವರ ಪಾರ್ಥಿವ ಶರೀರವನ್ನು ದಕ್ಷಿಣ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ (ಎನ್‌ಸಿಪಿಎ) ಅಂತಿಮ ದರ್ಶನಕ್ಕಿಡಲಾಗಿದೆ. ಸಂಜೆ 4ರ ವರೆಗೆ ಅಂತಿಮ ದರ್ಶನಕ್ಕೆ ಅವಕಾಶವಿದ್ದು, ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದ್ದಾರೆ. ಇದನ್ನೂ ಓದಿ: 10 ವರ್ಷಗಳ ಹಿಂದೆ ಉಡುಪಿಗೆ ಆಗಮಿಸಿದ್ದ ರತನ್ ಟಾಟಾ
ಮುಂಬೈ: ಬಾಂಗ್ಲಾದೇಶ ವಿರುದ್ಧ ಕಾನ್ಪುರದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) 27,000 ಅಂತಾರಾಷ್ಟ್ರೀಯ ರನ್ ಪೂರೈಸಿದ ವೇಗದ ಬ್ಯಾಟ್ಸ್‌ಮನ್ ದಾಖಲೆ ಬರೆದಿದ್ದಾರೆ. ಆ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆ ಉಡೀಸ್ ಮಾಡಿದ್ದಾರೆ.
2007ರಲ್ಲಿ 623 ಇನ್ನಿಂಗ್ಸ್‌ಗಳಲ್ಲಿ ತೆಂಡೂಲ್ಕರ್ 27000 ರನ್ ಗಳಿಸಿದ್ದರು. ಅವರ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. 594ನೇ ಇನ್ನಿಂಗ್ಸ್‌ನಲ್ಲೇ ಈ ಸಾಧನೆ ಮಾಡಿರುವ ವಿರಾಟ್, ಸಚಿನ್‌ಗಿಂತ 29 ಇನ್ನಿಂಗ್ಸ್‌ಗಳಿಗೂ ಮುಂಚಿತವಾಗಿ 27,000 ರನ್‌ಗಳ ಗುರಿ ತಲುಪಿದ್ದಾರೆ. ಶ್ರೀಲಂಕಾದ ಸಂಗಕ್ಕಾರ ಅವರು 2015 ರಲ್ಲಿ ತಮ್ಮ 648ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯದ ರಿಕಿ ಪಾಂಟಿಂಗ್ ತನ್ನ 650ನೇ ಇನ್ನಿಂಗ್ಸ್‌ನಲ್ಲಿ ಇಷ್ಟು ರನ್ ಗಳಿಸಿದ್ದಾರೆ.
ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (Anant Ambani-Radhika Merchant Wedding) ಅವರ ಅದ್ಧೂರಿ ವಿವಾಹಕ್ಕೆ ಗಣ್ಯರು, ತಾರಾಗಣ ಸಾಕ್ಷಿಯಾಗಿದೆ. ಇಲ್ಲಿನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುತ್ತಿರುವ ವಿವಾಹ ಸಮಾರಂಭಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar), ಡಬ್ಲ್ಯೂಡಬ್ಲ್ಯೂಇ ಸ್ಟಾರ್ ಜಾನ್ ಸೀನಾ ಆಗಮಿಸಿದ್ದಾರೆ.
ಕುಟುಂಬದವರೊಂದಿಗೆ ತೆಂಡೂಲ್ಕರ್ ವಿವಾಹ ಸಮಾರಂಭಕ್ಕೆ ಆಗಮಿಸಿದ್ದಾರೆ. ಭಾರೀ ಮಳೆಯ ನಡುವೆ ಮಾಜಿ ಕ್ರಿಕೆಟಿಗ ಕಾರಿನಿಂದ ಇಳಿಯುತ್ತಿರುವ ದೃಶ್ಯ ಕ್ಯಾಮೆರಾಗಳ ಕಣ್ಣಲ್ಲಿ ಸೆರೆಯಾಗಿದೆ. ಮಧ್ಯರಾತ್ರಿಯ ಸುಮಾರಿಗೆ, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮದುವೆಯಲ್ಲಿ ಪಾಲ್ಗೊಳ್ಳಲು ಮುಂಬೈಗೆ ಬಂದಿಳಿದಿದ್ದರು. ಇದನ್ನೂ ಓದಿ: ಅಂಬಾನಿ ಮಗನ ಮದುವೆಯಲ್ಲಿ ರಾಕಿ ಭಾಯ್- ಯಶ್ ಗೆಟಪ್‌ಗೆ ಫ್ಯಾನ್ಸ್ ಫಿದಾ
ಅನಂತ್-ರಾಧಿಕಾ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಜಾನ್ ಸೀನಾ (John Cena) ಕೂಡ ಮುಂಬೈಗೆ ಶುಕ್ರವಾರ ಬಂದಿಳಿದರು. ಆ ಮೂಲಕ ಭಾರತದ ಮೇಲಿನ ತಮ್ಮ ಪ್ರೀತಿಯನ್ನು ಡಬ್ಲ್ಯೂಡಬ್ಲ್ಯೂಇ ಸ್ಟಾರ್ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಬಿಹಾರ್ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಕುಟುಂಬ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಕನ್ನಡದ ಸ್ಟಾರ್ ನಟ ಯಶ್-ರಾಧಿಕಾ ಪಂಡಿತ್ ದಂಪತಿ ಸೇರಿದಂತೆ ಅನೇಕ ಗಣ್ಯರು, ಸೆಲೆಬ್ರಿಟಿಗಳು ಅಂಬಾನಿ ಪುತ್ರನಿಗೆ ಶುಭಕೋರಲು ಆಗಮಿಸಿದ್ದಾರೆ. ಇದನ್ನೂ ಓದಿ: ನನ್ನ ಭೇಟಿಗೆ ಬರುವವರು ಕಡ್ಡಾಯವಾಗಿ ಆಧಾರ್ ತನ್ನಿ: ಕಂಗನಾ ರಣಾವತ್!
ಅಹಮದಾಬಾದ್: 2024ರ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡದ ಯುವ ಆಟಗಾರ ಸಾಯಿ ಸುದರ್ಶನ್ (Sai Sudharsan), ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಅಪರೂಪದ ದಾಖಲೆಯೊಂದನ್ನು ಮುರಿದಿದ್ದಾರೆ.
ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ 11ನೇ ಓವರ್‌ನಲ್ಲಿ ಸಿಮರ್ಜೀತ್ ಸಿಂಗ್ ಅವರ ಬೌಲಿಂಗ್‌ಗೆ ಸಿಕ್ಸರ್ ಸಿಡಿಸಿ, 71 ರನ್ ಗಳಿಸುವ ಮೂಲಕ ಸುದರ್ಶನ್ 1,000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಒಟ್ಟಾರೆ ಈ ಪಂದ್ಯದಲ್ಲಿ ಸಾಯಿ ಸುರ್ದಶನ್ 51 ಎಸೆತಗಳಲ್ಲಿ 7 ಸಿಕ್ಸರ್, 5 ಬೌಂಡರಿಯೊಂದಿಗೆ 103 ರನ್ ಬಾರಿಸಿದ್ದಾರೆ.
ವೇಗದ 1000 ರನ್ ಸಿಡಿಸಿದ ಮೊದಲ ಭಾರತೀಯ:
ಸಾಯಿ ಸುದರ್ಶನ್ ಕೇವಲ 25 ಇನ್ನಿಂಗ್ಸ್‌ಗಳಲ್ಲಿ 1,000 ರನ್ ಪೂರೈಸಿದ ಮೊದಲ ಭಾರತೀಯನಾಗಿದ್ದಾರೆ. ಸಚಿನ್ ತೆಂಡೂಲ್ಕರ್ (Sachin Tendulkar) ಮತ್ತು ಗಾಯಕ್ವಾಡ್ ಇಬ್ಬರೂ 31 ಇನ್ನಿಂಗ್ಸ್‌ಗಳಲ್ಲಿ 1000 ರನ್ ಪೂರೈಸಿದ್ದರು. 33 ಇನ್ನಿಂಗ್ಸ್‌ಗಳಲ್ಲಿ 1,000 ರನ್ ಬಾರಿಸಿದ್ದ ತಿಲಕ್ ವರ್ಮಾ 4ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಸಾಯಿ ಸುದರ್ಶನ್, ಗಿಲ್ ದ್ವಿಶತಕ ಜೊತೆಯಾಟ – ಚೆನ್ನೈ ವಿರುದ್ಧ ಗುಜರಾತ್‌ಗೆ 35 ರನ್‌ಗಳ ಜಯ
ವೇಗವಾಗಿ 1,000 ರನ್ ಸಿಡಿಸಿದ ಟಾಪ್-5 ಸರದಾರರು:
ಶಾನ್ ಮಾರ್ಷ್- 21 ಇನಿಂಗ್ಸ್
ಲೆಂಡ್ಲ್ ಸಿಮನ್ಸ್ – 23 ಇನಿಂಗ್ಸ್
ಮ್ಯಾಥ್ಯೂ ಹೇಡನ್- 25 ಇನಿಂಗ್ಸ್
ಸಾಯಿ ಸುದರ್ಶನ್- 25ಇನಿಂಗ್ಸ್
ಜಾನಿ ಬೈರ್ಸ್ಟೋವ್- 26 ಇನಿಂಗ್ಸ್
ಮುಂಬೈ: ಇತ್ತೀಚೆಗೆ ವೈರಲ್ ಆಗಿದ್ದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಡೀಪ್‍ಫೇಕ್ (Deepfake) ವೀಡಿಯೋ ಸಂಬಂಧ ಮುಂಬೈ (Mumbai) ಪೊಲೀಸರು (Police) ಗೇಮಿಂಗ್ ಅಪ್ಲಿಕೇಶನ್ ಹಾಗೂ ಫೇಸ್‍ಬುಕ್ ಪುಟವೊಂದರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಮತ್ತು ಅವರ ಮಗಳು ಸಾರಾ ಆನ್‍ಲೈನ್ ಗೇಮ್‍ವೊಂದರ ಮೂಲಕ ದೊಡ್ಡ ಮೊತ್ತದ ಹಣವನ್ನು ಗೆದ್ದಿದ್ದಾರೆ ಎಂದು ವೀಡಿಯೋದಲ್ಲಿ ಹೇಳಲಾಗಿತ್ತು. ಅಲ್ಲದೇ ಸಚಿನ್ ಗೇಮಿಂಗ್ ಅಪ್ಲಿಕೇಷನ್‍ನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರ ಧ್ವನಿ ಹಾಗೂ ಅವರ ವೀಡಿಯೋ ಬಳಸಿ ಹಂಚಿಕೊಳ್ಳಲಾಗಿತ್ತು. ಇದನ್ನು ಸಚಿನ್ ಅವರ ಟ್ವಿಟ್ಟರ್ ಮೂಲಕವೂ ಫ್ಲಾಗ್ ಮಾಡಲಾಗಿತ್ತು. ಇದನ್ನೂ ಓದಿ: ರಾಯಚೂರಿನಿಂದ ರಾಮಭಕ್ತನ ಪಾದಯಾತ್ರೆ: ರಾಮಮಂದಿರ ತಲುಪಲು 250 ಕಿ.ಮೀ ಬಾಕಿ
ಈ ಬಗ್ಗೆ ಸಚಿನ್ ಆಪ್ತ ಸಹಾಯಕರೊಬ್ಬರು ನೀಡಿದ ದೂರಿನ ಅಡಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 500ರ ಅಡಿ (ಮಾನನಷ್ಟ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 66ರ (ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುವುದು) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಗೇಮಿಂಗ್ ಸೈಟ್ ಮತ್ತು ಫೇಸ್‍ಬುಕ್ ಪುಟದ ಮಾಲೀಕರ ಬಗ್ಗೆ ಪೊಲೀಸರು ವಿವರಗಳನ್ನು ಹಂಚಿಕೊಂಡಿಲ್ಲ.
– ಕೊನೇ ಓವರ್‌ನಲ್ಲಿ ಸಿಕ್ಸರ್ ಸಿಡಿಸಿದ ಇರ್ಫಾನ್ ಪಠಾಣ್
– ಯುವರಾಜ್ ಸಿಂಗ್ ಬಳಗಕ್ಕೆ ವಿರೋಚಿತ ಸೋಲು
ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ನಡೆದ ಒನ್ ವರ್ಲ್ಡ್-ಒನ್ ಫ್ಯಾಮಿಲಿ ಕಪ್ (One World- One Family Cup) ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) ನೇತೃತ್ವದ ಒನ್ ವರ್ಲ್ಡ್ ತಂಡವು 4 ವಿಕೆಟ್‌ಗಳ ಜಯ ಸಾಧಿಸಿದೆ. ಕೊನೆಯ ಓವರ್‌ನಲ್ಲಿ ಅಣ್ಣ ಯುಸೂಫ್ ಪಠಾಣ್ (Yusuf Pathan) ಬೌಲಿಂಗ್‌ಗೆ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಇರ್ಫಾನ್ ಪಠಾಣ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
ಸತ್ಯಸಾಯಿ ಗ್ರಾಮದಲ್ಲಿ ನೂತನ ಸಾಯಿಕೃಷ್ಣನ್ ಸ್ಟೇಡಿಯಂ (Sai Krishnan Cricket Stadium) ಲೋಕಾರ್ಪಣೆ ಅಂಗವಾಗಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಒನ್ ವರ್ಲ್ಡ್ ತಂಡವು ಬ್ಯಾಟಿಂಗ್ ಮಾಡುವ ಅವಕಾಶವನ್ನು ಒನ್ ಫ್ಯಾಮಿಲಿ ತಂಡಕ್ಕೆ ಬಿಟ್ಟುಕೊಟ್ಟಿತು. ಈ ಮೂಲಕ ಮೊದಲು ಬ್ಯಾಟಿಂಗ್ ಮಾಡಿದ ನಾಯಕ ಯುವರಾಜ್ ಸಿಂಗ್ (Yuvraj Singh) ನೇತೃತ್ವದ ಒನ್ ಫ್ಯಾಮಿಲಿ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತ್ತು. 181 ರನ್‌ಗಳ ಗುರಿ ಬೆನ್ನತ್ತಿದ್ದ ಸಚಿನ್ ತೆಂಡೂಲ್ಕರ್ ನೇತೃತ್ವದ ಒನ್ ವರ್ಲ್ಡ್ ತಂಡ 19.5 ಓವರ್‌ಗಳಲ್ಲೇ 184 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಚೇಸಿಂಗ್ ಆರಂಭಿಸಿದ ಒನ್ ವರ್ಲ್ಡ್ ತಂಡದ ಪರ ನಮನ್ ಓಜಾ ಹಾಗೂ ಸಚಿನ್ ತೆಂಡೂಲ್ಕರ್ ಜೋಡಿ ಮೊದಲ ವಿಕೆಟ್‌ಗೆ 31 ರನ್‌ಗಳ ಜೊತೆಯಾಟ ನೀಡಿದ್ರೆ, 2ನೇ ವಿಕೆಟ್‌ಗೆ ಸಚಿನ್ ಹಾಗೂ ಅಲ್ವಿರೋ ಪೀಟರ್ಸನ್ ಜೋಡಿ 22 ಎಸೆತಗಳಲ್ಲಿ 41 ರನ್ ಕಲೆಹಾಕಿತು. ನಂತರ 3ನೇ ವಿಕೆಟ್‌ಗೆ ಪೀಟರ್ಸನ್ ಹಾಗೂ ಉಪುಲ್ ತರಂಗ ಜೋಡಿ 44 ಎಸೆತಗಳಲ್ಲಿ 59 ರನ್ ಪೇರಿಸಿತು. ಇದರಿಂದ ತಂಡದ ಗೆಲುವಿನ ಹಾದಿ ಸುಗಮವಾಯಿತು.
148 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಅಲ್ವಿರೋ ಪೀಟರ್ಸನ್ 50 ಎಸೆತಗಳಲ್ಲಿ 74 ರನ್ (5 ಬೌಂಡರಿ, 3 ಸಿಕ್ಸರ್) ಬಾರಿಸಿದರು. ಇನ್ನುಳಿದಂತೆ ನಮನ್ ಓಜಾ 25 ರನ್, ಸಚಿನ್ 27 ರನ್, ಉಪುಲ್ ತರಂಗ 29 ರನ್, ಸುಬ್ರಮಣ್ಯಂ ಬದರಿನಾಥ್ 4 ರನ್, ಹರ್ಭಜನ್ ಸಿಂಗ್ 4 ರನ್ ಗಳಿಸಿದ್ರೆ ಇರ್ಫಾನ್ ಪಠಾಣ್ (Irfan Pathan) 12 ರನ್ ಗಳಿಸಿ ಅಜೇಯರಾಗುಳಿದರು.
ಚಮಿಂದಾ ವಾಸ್ ಮಾರಕ ದಾಳಿ:
ಒನ್ ವರ್ಲ್ಡ್ ತಂಡದ ವಿರುದ್ಧ ಮಾರಕ ಬೌಲಿಂಗ್ ದಾಳಿ ನಡೆಸಿದ ಶ್ರೀಲಂಕಾ ತಂಡದ ಮಾಜಿ ಎಡಗೈ ವೇಗಿ ಚಮಿಂದಾ ವಾಸ್ 3 ವಿಕೆಟ್ ಪಡೆದರು. 4 ಓವರ್‌ಗಳಲ್ಲಿ 44 ರನ್ ಚಚ್ಚಿಸಿಕೊಂಡ ಹೊರತಾಗಿಯೂ 3 ವಿಕೆಟ್ ಪಡೆದುಕೊಂಡರು. ವಿಶೇಷವೆಂದರೆ ದಶಕಗಳ ಬಳಿಕ ಬೌಲಿಂಗ್‌ನಲ್ಲಿ ಎದುರಾದ ಮಿಂದಾ ವಾಸ್ದು ಬೌಲಿಂಗ್‌ಗೆ ಸಚಿನ್ ತೆಂಡೂಲ್ಕರ್ ಸತತ ಎರಡು ಮನಮೋಹಕ ಬೌಂಡರಿ ಸಿಡಿಸಿದರು. ಇನ್ನುಳಿದಂತೆ ಮುತ್ತಯ್ಯ ಮುರಳೀಧರನ್, ಯುವರಾಜ್ ಸಿಂಗ್, ಜೇಸನ್ ಕ್ರೆಜ್ಜಾ ತಲಾ ಒಂದೊಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.
181 ಟಾರ್ಗೆಟ್ ನೀಡಿದ್ದ ಒನ್ ಫ್ಯಾಮಿಲಿ:
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಯುವರಾಜ್ ಸಿಂಗ್ ನೇತೃತ್ವದ ಒನ್ ಫ್ಯಾಮಿಲಿ ತಂಡ ಎದುರಾಳಿ ತಂಡಕ್ಕೆ 181 ರನ್‌ಗಳ ಗುರಿ ನೀಡಿತ್ತು. ಡ್ಯಾರೆನ್ ಮ್ಯಾಡಿ 51 ರನ್ (41 ಎಸೆತ, 8 ಬೌಂಡರಿ), ರೋಮೇಶ್ ಕಲುವಿತಾರಣ 22 ರನ್ (15 ಎಸೆತ, 4 ಬೌಂಡರಿ), ಮೊಹಮ್ಮದ್ ಕೈಫ್ 9 ರನ್, ಪಾರ್ಥಿವ್ ಪಟೇಲ್ 19 ರನ್ (13 ಎಸೆತ, 3 ಬೌಂಡರಿ), ಯೂಸುಫ್ ಪಠಾಣ್ 38 ರನ್ (23, 4 ಸಿಕ್ಸರ್, 1 ಬೌಂಡರಿ), ಯುವರಾಜ್ ಸಿಂಗ್ 23 ರನ್ (10 ಎಸೆತ, 2 ಸಿಕ್ಸರ್, 2 ಬೌಂಡರಿ), ಜೇಸನ್ ಕ್ರೆಜ್ಜಾ 2 ರನ್ ಹಾಗೂ ಅಲೋಕ್ ಕಪಾಲಿ 1 ರನ್ ಗಳಿಸಿದ್ರೆ, ಹೆಚ್ಚುವರಿ 15 ರನ್ ತಂಡಕ್ಕೆ ಸೇರ್ಪಡೆಯಾಗಿತ್ತು.
ಚಿಕ್ಕಬಳ್ಳಾಪುರ: ʻಒಂದು ಜಗತ್ತು-ಒಂದು ಕುಟುಂಬʼ (One World- One Family) ಘೋಷ ವಾಕ್ಯದಡಿ ಶ್ರೀ ಸದ್ಗುರು ಮಧುಸೂದನಸಾಯಿ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಬಳಿ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಕ್ರಿಕೆಟ್ ದಿಗ್ಗಜರ ಕಾಳಗ ನಡೆಯುತ್ತಿದೆ.
ಸತ್ಯಸಾಯಿ ಗ್ರಾಮದಲ್ಲಿ ನೂತನ ಸಾಯಿಕೃಷ್ಣನ್ ಸ್ಟೇಡಿಯಂ (Sai Krishnan Cricket Stadium) ಲೋಕಾರ್ಪಣೆ ಅಂಗವಾಗಿ ಒಂದು ಜಗತ್ತು ಹಾಗೂ ಒಂದು ಕುಟುಂಬ ಎಂಬ (ಒನ್ ವರ್ಲ್ಡ್-ಒನ್ ಫ್ಯಾಮಿಲಿ ಕಪ್) ಟಿ20 ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಸಾಯಿಕೃಷ್ಣನ್ ಕ್ರೀಡಾಂಗಣವನ್ನು ಸದ್ಗುರು ಮಧುಸೂದನಸಾಯಿ ಜೊತೆ ಸಚಿನ್ ತೆಂಡೂಲ್ಕರ್ (Sachin Tendulkar) ಹಾಗೂ ಯುವರಾಜ್ ಸಿಂಗ್ (Yuvraj Singh) ಲೋಕಾರ್ಪಣೆ ಮಾಡಿದ್ದಾರೆ. ಈ ಟೂರ್ನಿಯಲ್ಲಿ ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ನಾಯಕತ್ವದಡಿ 8 ದೇಶಗಳ 24 ಮಂದಿ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಇದನ್ನೂ ಓದಿ: ನಾಯಕನಾಗಿ ಸಿಕ್ಸರ್‌ಗಳಿಂದಲೇ ಹೊಸ ದಾಖಲೆ – ನಂ.1 ಪಟ್ಟಕ್ಕೇರಿದ ರೋಹಿತ್ ಶರ್ಮಾ
ಟಾಸ್ ಗೆದ್ದ ಒನ್ ವರ್ಲ್ಡ್ ತಂಡದ ನಾಯಕ ಸಚಿನ್ ತೆಂಡೂಲ್ಕರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಯುವರಾಜ್ ಸಿಂಗ್ ನಾಯಕತ್ವದ ಒನ್ ಫ್ಯಾಮಿಲಿ ತಂಡ ಬ್ಯಾಟಿಂಗ್ ನಡೆಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಯುವಿ ನಾಯಕತ್ವದ ಒನ್ ಫ್ಯಾಮಿಲಿ ತಂಡ 20 ಒವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 180 ರನ್ ಗಳನ್ನ ಗಳಿಸಿದೆ. ಸಚಿನ್ ತೆಂಡೂಲ್ಕರ್ ನೇತೃತ್ವದ ಒನ್ ವರ್ಲ್ಡ್ ತಂಡಕ್ಕೆ 181 ರನ್ ಗಳ ಗುರಿ ನೀಡಲಾಗಿದೆ. ಅಂದಹಾಗೆ ವಸುಧೈವ ಕುಟುಂಬಕಂ ಅನ್ನೋ ಮಾತಿಗೆ ಸಾಕ್ಷಿಭೂತವೆಂಬಂತೆ ಭಾರತದ ಸನಾತನ ಸಂಸ್ಕೃತಿಯನ್ನ ಸಾರುವ ವಿಶ್ವಕ್ಕೆ ಮಾನವೀಯತೆಯ ಸಂದೇಶ ಸಾರುವ ಸಲುವಾಗಿ ಈ ಒಂದು ಟೂರ್ನಿಯನ್ನ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 2 ಸೂಪರ್ ಓವರ್ ಥ್ರಿಲ್ಲರ್ – ಟೀಂ ಇಂಡಿಯಾಗೆ ರೋಚಕ ಗೆಲುವು
ಒನ್ ಫ್ಯಾಮಿಲಿ ತಂಡದ ಸ್ಕೋರ್ ಕಾರ್ಡ್: ಡ್ಯಾರೆನ್ ಮ್ಯಾಡಿ 51 ರನ್ (41 ಎಸೆತ, 8 ಬೌಂಡರಿ), ರೋಮೇಶ್ ಕಲುವಿತಾರಣ 22 ರನ್ (15 ಎಸೆತ, 4 ಬೌಂಡರಿ), ಮೊಹಮ್ಮದ್ ಕೈಫ್ 9 ರನ್, ಪಾರ್ಥಿವ್ ಪಟೇಲ್ 19 ರನ್ (13 ಎಸೆತ, 3 ಬೌಂಡರಿ), ಯೂಸುಫ್ ಪಠಾಣ್ 38 ರನ್ (23, 4 ಸಿಕ್ಸರ್, 1 ಬೌಂಡರಿ), ಯುವರಾಜ್ ಸಿಂಗ್ 23 ರನ್ (10 ಎಸೆತ, 2 ಸಿಕ್ಸರ್, 2 ಬೌಂಡರಿ), ಜೇಸನ್ ಕ್ರೆಜ್ಜಾ 2 ರನ್ ಹಾಗೂ ಅಲೋಕ್ ಕಪಾಲಿ 1 ರನ್ ಗಳಿಸಿದ್ರೆ, ಹೆಚ್ಚುವರಿ 15 ರನ್ ತಂಡಕ್ಕೆ ಸೇರ್ಪಡೆಯಾಯಿತು. ಇದನ್ನೂ ಓದಿ: ರೋಹಿತ್ ಶತಕ, ರಿಂಕು ಹಾಫ್ ಸೆಂಚುರಿ, ವಿರಾಟ್ ಕೊಹ್ಲಿ 0- ಆಫ್ಘನ್‍ಗೆ 213 ರನ್ ಟಾರ್ಗೆಟ್