Tag: Sachin Bansal

  • ವಾಲ್‍ಮಾರ್ಟ್ ಗೆ ಸೇಲ್- ಕೋಟ್ಯಾಧಿಪತಿಗಳಾದ ಫ್ಲಿಪ್‍ಕಾರ್ಟ್ ಉದ್ಯೋಗಿಗಳು

    ವಾಲ್‍ಮಾರ್ಟ್ ಗೆ ಸೇಲ್- ಕೋಟ್ಯಾಧಿಪತಿಗಳಾದ ಫ್ಲಿಪ್‍ಕಾರ್ಟ್ ಉದ್ಯೋಗಿಗಳು

    ಬೆಂಗಳೂರು: ಅಮೆರಿಕದ ವಾಲ್‍ಮಾರ್ಟ್ ಖರೀದಿಯಿಂದಾಗಿ ಫ್ಲಿಪ್ ಕಾರ್ಟ್ ನಲ್ಲಿರುವ ಕೆಲ ಉದ್ಯೋಗಿಗಳು ಕೋಟ್ಯಾಧಿಪತಿಗಳಾಗಲಿದ್ದಾರೆ.

    ಫ್ಲಿಪ್‍ಕಾರ್ಟ್ ನ ಸಂಸ್ಥಾಪಕ ಸಚಿನ್ ಬನ್ಸಾಲ್ 5.5%, ಸಹ-ಸಂಸ್ಥಾಪಕ ಬಿನ್ನಿ ಬನ್ಸಾಲ್ 5% ಷೇರುಗಳನ್ನು ಹೊಂದಿದ್ದಾರೆ. ಇವರ ಜೊತೆ ಫ್ಲಿಪ್‍ಕಾರ್ಟ್ ನ ಉದ್ಯೋಗಿಗಳಾದ ಸಮೀರ್ ನಿಗಮ್, ಅಮೋದ್ ಮಾಳವಿಯಾ, ಸುಜೀತ್ ಕುಮಾರ್, ಅಂಕಿತ್ ನಗೋರಿ, ಮೇಕಿನ್ ಮಹೇಶ್ವರಿ, ಫೌನ್ಹಾವ್ ಗುಪ್ತಾ, ಅನಂತ ನಾರಾಯಣನ್ ಬಳಿ ಹೆಚ್ಚು ಷೇರುಗಳಿರುವ ಕಾರಣ ಅವರು ಕೋಟ್ಯಾಧಿಪತಿಗಳಾಗಲಿದ್ದಾರೆ.

    ಸುಮಾರು 10 ಸಾವಿರ ಉದ್ಯೋಗಿಗಳು ಫ್ಲಿಪ್‍ಕಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದು, 3 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಹಾಗೂ ಮಾಜಿ ಉದ್ಯೋಗಿಗಳು ಷೇರುಗಳನ್ನು ಹೊಂದಿದ್ದಾರೆ. ಪ್ರತಿಯೊಂದು ಷೇರಿಗೆ 150 ಡಾಲರ್ (ಅಂದಾಜು 10 ಸಾವಿರ ರೂ.) ಮೌಲ್ಯವನ್ನು ನಿಗದಿ ಮಾಡಿದ ಪರಿಣಾಮ ಕೆಲ ಉದ್ಯೋಗಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಖರೀದಿ ಬಳಿಕ ಷೇರುಗಳನ್ನು ವಾಪಸ್ ಕೊಂಡುಕೊಳ್ಳಲಾಗುವುದು ಎಂದು ಫ್ಲಿಪ್‍ಕಾರ್ಟ್ ಗ್ರೂಪ್ ಸಿಇಒ ಬಿನ್ನಿ ಬನ್ಸಾಲ್ ಘೋಷಿಸಿದ್ದಾರೆ.

    ಫ್ಲಿಪ್‍ಕಾರ್ಟ್ ಕಂಪೆನಿಯ ನಿಯಮದ ಪ್ರಕಾರ 4 ವರ್ಷಗಳ ಮುಂಚಿತವಾಗಿ ಷೇರುಗಳನ್ನು ಮಾರಾಟ ಮಾಡುವಂತಿಲ್ಲ. ಹಾಗಾಗಿ ವಾಲ್‍ಮಾರ್ಟ್ ಜೊತೆಗಿನ ಒಪ್ಪಂದದ ಬಗ್ಗೆ ಹೊರಗೆ ಎಲ್ಲೂ ಮಾತನಾಡದಂತೆ ಫ್ಲಿಪ್‍ಕಾರ್ಟ್ ಕಂಪೆನಿ ನಿರ್ದೇಶಿಸಿದೆ.

    ಫ್ಲಿಪ್‍ಕಾರ್ಟ್ ನ ಶೇ. 77 ಷೇರುಗಳನ್ನು ವಾಲ್‍ಮಾರ್ಟ್ ಖರೀದಿ ಮಾಡಿದ್ದು, ಉಳಿದ ಶೇ. 23 ಷೇರುಗಳು ಸಹ-ಸಂಸ್ಥಾಪಕ ಬಿನ್ನಿ ಬನ್ಸಾಲ್, ಚೀನಾದ ಟೆನ್‍ಸೆಂಟ್ ಹೋಲ್ಡಿಂಗ್ಸ್, ಟೈಗರ್ ಗ್ಲೋಬಲ್ ಮ್ಯಾನೇಜ್‍ಮೆಂಟ್ ಮತ್ತು ಮೈಕ್ರೋಸಾಫ್ಟ್ ಕಾರ್ಪೋರೇಷನ್ ಮತ್ತು ಫ್ಲಿಪ್‍ಕಾರ್ಟ್ ಉದ್ಯೋಗಿಗಳ ಬಳಿಯಿದೆ.

  • ಭಾವನಾತ್ಮಕ ಸಂದೇಶ ರವಾನಿಸಿದ ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಸಚಿನ್ ಬನ್ಸಾಲ್

    ಭಾವನಾತ್ಮಕ ಸಂದೇಶ ರವಾನಿಸಿದ ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಸಚಿನ್ ಬನ್ಸಾಲ್

    ನವದೆಹಲಿ: ವಿಶ್ವದ ದೈತ್ಯ ಇ-ಕಾಮರ್ಸ್ ಸಂಸ್ಥೆ ವಾಲ್‍ಮಾರ್ಟ್ ಖರೀದಿಸಿದ ಬಳಿಕ ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

    ಈ ಕುರಿತು ಫೇಸ್ ಬುಕ್ ಪೋಸ್ಟ್ ಮಾಡಿರುವ ಅವರು, ಫ್ಲಿಪ್‍ಕಾರ್ಟ್ ಸಂಸ್ಥೆಯೂ ಗ್ರಾಹಕರ ಆಯ್ಕೆಗಳನ್ನು ಎತ್ತಿ ಹಿಡಿದಿದ್ದು, ನಾವು ಉತ್ತಮ ಜನರೊಂದಿಗೆ ಕೆಲಸ ಮಾಡಿದ್ದೇವೆ. ಈ ವೇಳೆ ಹಲವು ಸವಾಲುಗಳನ್ನು ಎದುರಿಸಿದ್ದೇವೆ. ಭಾರತದ ಹಲವು ಸಂಕೀರ್ಣ ಸಮಸ್ಯೆಗಳನ್ನು ಈ ಮೂಲಕ ಬಗೆಹರಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಇಂದು ನಮ್ಮ ಸೇವೆ ಮುಕ್ತಾಯವಾಗಿದೆ. ಸಂಸ್ಥೆಯನ್ನು ಹಸ್ತಾಂತರಿಸಿದ್ದೇವೆ. ಆದರೆ ಮುಂದೆಯೂ ಹೊರಗಿನಿಂದ ನಿಂತು ಸಂಸ್ಥೆಯನ್ನು ಪ್ರೋತ್ಸಾಹಿಸುತ್ತೇವೆ. ಫ್ಲಿಪ್ ಕಾರ್ಟ್ ನಿಮ್ಮ ಉತ್ತಮ ಸೇವೆ ಮುಂದುವರೆಸಿ ಎಂದು ಹೇಳಿದ್ದಾರೆ.

    https://www.facebook.com/sachin.bansal/posts/10156303878255996

    ಸದ್ಯ ನಾವು ಸ್ವಲ್ಪ ಬಿಡುವಿನ ಸಮಯವನ್ನು ತೆಗೆದುಕೊಂಡಿದ್ದು, ಕೆಲ ವಯಕ್ತಿಕ ಯೋಜನೆಗಳನ್ನು ಪೂರ್ಣಗೊಳಿಸಲು ಈ ಅವಧಿಯಲ್ಲಿ ಗಮಹರಿಸುತ್ತೇವೆ. ಅಲ್ಲದೇ ಈ ಅವಧಿ ಮಕ್ಕಳು ಯಾವ ಆಟಗಳನ್ನು ಆಡುತ್ತಾರೆ ಎಂಬುದನ್ನು ನೋಡುತ್ತೇವೆ. ಈ ಅವಧಿಯಲ್ಲಿ ಪಡೆದ ಅದ್ಭುತ ಸಂಬಂಧಗಳನ್ನು ಮುಂದುವರೆಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    2007 ರಲ್ಲಿ ಫ್ಲಿಪ್ ಕಾರ್ಟ್ ಕಂಪೆನಿಯನ್ನು ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಸ್ಥಾಪಿಸಿದ್ದರು. ಸಂಸ್ಥೆ ಆರಂಭದಿಂದಲೂ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ಅಮೆಜಾನ್ ಗೆ ತೀವ್ರ ಪೈಪೋಟಿ ಒಡ್ಡುತಿತ್ತು. ಸಂಸ್ಥೆ ಮಾರಾಟ ಬಳಿಕ ಸಚಿನ್ ಬನ್ಸಾಲ್ ಹುದ್ದೆಯಿಂದ ಫ್ಲಿಪ್‍ಕಾರ್ಟ್ ನಿಂದ ನಿರ್ಗಮಿಸಿದ್ದಾರೆ. ಈ ಖರೀದಿಯಿಂದ ವಾಲ್‍ಮಾರ್ಟ್ ಮತ್ತು ಅಮೆಜಾನ್ ಭಾರತದ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ದಿಗ್ಗಜ ಕಂಪೆನಿಗಳಾಗಲಿವೆ. ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳಿಗೆ, ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮ ಆಗಲಿದೆ ಎನ್ನಲಾಗಿದೆ.

    ವಾಲ್ ಮಾರ್ಟ್ 500 ಬಿಲಿಯನ್ ಯುಎಸ್ ಡಾಲರ್(33.63 ಲಕ್ಷ ಕೋಟಿ ರೂ) ಮೌಲ್ಯದ ಅಮೆರಿಕದ ಕಂಪೆನಿಯಾಗಿದೆ. ಬಹಳ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವುದು ಇದರ ವಿಶೇಷವಾಗಿದೆ.