Tag: Sabudana Poha Vada

  • ಸಬ್ಬಕ್ಕಿ, ಅವಲಕ್ಕಿಯಿಂದ ಮಾಡಿ ಸಖತ್ ಟೇಸ್ಟಿ ವಡೆ

    ಸಬ್ಬಕ್ಕಿ, ಅವಲಕ್ಕಿಯಿಂದ ಮಾಡಿ ಸಖತ್ ಟೇಸ್ಟಿ ವಡೆ

    ಬ್ಬಕ್ಕಿ ಹಾಗೂ ಅವಲಕ್ಕಿ ಬಳಸಿ ಈ ರೀತಿಯಲ್ಲಿ ವಡೆ ಮಾಡಿ ನೀವೊಮ್ಮೆ ಸವಿದು ನೋಡಿ. ಈ ರೆಸಿಪಿ ಸಂಜೆಯ ಸ್ನ್ಯಾಕ್ಸ್ ಆಗಿ ಚಹಾದೊಂದಿಗೆ ಸವಿಯಲು ಪರ್ಫೆಕ್ಟ್ ಆಗಿದೆ. ವಡೆ ಎಂದರೆ ಹೆಚ್ಚು ಎಣ್ಣೆಯಿರುವ ತಿಂಡಿ ಎಂದು ನಿಮಗೆ ಎನಿಸಿದರೂ ಇದಕ್ಕೆ ಹೆಚ್ಚಿನ ಎಣ್ಣೆ ಬೇಕೆಂದಿಲ್ಲ. ಈ ರೆಸಿಪಿ ಒಮ್ಮೆ ಟ್ರೈ ಮಾಡಿದ್ರೆ ಮತ್ತೆ ಮತ್ತೆ ಬೇಕೆನ್ನುತ್ತೀರಿ ಖಂಡಿತಾ.

    ಬೇಕಾಗುವ ಪದಾರ್ಥಗಳು:
    ಸಬ್ಬಕ್ಕಿ – ಅರ್ಧ ಕಪ್
    ಅವಲಕ್ಕಿ – 1 ಕಪ್
    ಓಟ್ಸ್ ಹಿಟ್ಟು – 2 ಟೀಸ್ಪೂನ್
    ಬೇಯಿಸಿ ಹಿಸುಕಿದ ಆಲೂಗಡ್ಡೆ – 1 ಕಪ್
    ತುರಿದ ಕ್ಯಾರೆಟ್ – ಕಾಲು ಕಪ್
    ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಈರುಳ್ಳಿ – ಕಾಲು ಕಪ್
    ಹುರಿದು ಪುಡಿ ಮಾಡಿದ ಜೀರಿಗೆ – 1 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ಕತ್ತರಿಸಿದ ಕರಿಬೇವಿನ ಎಲೆ – ಕೆಲವು
    ಒಣ ಮಾವಿನ ಪುಡಿ – ಅರ್ಧ ಟೀಸ್ಪೂನ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – 2 ಟೀಸ್ಪೂನ್ ಇದನ್ನೂ ಓದಿ: ಒಂದೊಳ್ಳೆ ಸ್ನ್ಯಾಕ್ಸ್ ರೆಸಿಪಿ – ಗೋಧಿ ಉಸ್ಲಿ

    ಮಾಡುವ ವಿಧಾನ:
    * ಮೊದಲಿಗೆ ಸಬ್ಬಕ್ಕಿಯನ್ನು ತೊಳೆದು 6 ಗಂಟೆ ನೆನೆಸಿಡಿ.
    * ಅವಲಕ್ಕಿಯನ್ನು ತೊಳೆದು 5 ನಿಮಿಷ ಮೃದುವಾಗುವವರೆಗೆ ನೆನೆಸಿಡಿ.
    * ಒಂದು ಪಾತ್ರೆ ತೆಗೆದುಕೊಂಡು, ಅದರಲ್ಲಿ ನೆನೆಸಿದ ಸಬ್ಬಕ್ಕಿ ಹಾಗೂ ಅವಲಕ್ಕಿಯನ್ನು ಹಾಕಿ. ಅವುಗಳನ್ನು ಚೆನ್ನಾಗಿ ಹಿಸುಕಿಕೊಳ್ಳಿ.
    * ಈಗ ಅದಕ್ಕೆ ಹಿಸುಕಿದ ಆಲೂಗಡ್ಡೆಯನ್ನು ಸೇರಿಸಿ, ಮಿಶ್ರಣ ಮಾಡಿ.
    * ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಗೂ ಕರಿಬೇವಿನ ಎಲೆ ಹಾಕಿ ಸಿಡಿಸಿ. ಬಳಿಕ ಉರಿಯನ್ನು ಆಫ್ ಮಾಡಿ.
    * ಅದಕ್ಕೆ ಸಬ್ಬಕ್ಕಿ ಹಾಗೂ ಅವಲಕ್ಕಿ ಮಿಶ್ರಣ ಹಾಕಿ ಮಿಕ್ಸ್ ಮಾಡಿ.
    * ಈಗ ಕೈಗೆ ಎಣ್ಣೆಯನ್ನು ಸವರಿಕೊಂಡು, ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ವಡೆ ರೀತಿಯಲ್ಲಿ ತಟ್ಟಿಕೊಳ್ಳಿ.
    * ನೀವೀಗ ಪ್ಯಾನ್ ಅನ್ನು ತೆಗೆದುಕೊಂಡು, ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ, ವಡೆಗಳನ್ನು ಅದರಲ್ಲಿಟ್ಟು, ಎರಡೂ ಬದಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಬೇಯಿಸಿಕೊಳ್ಳಿ.
    * ಇದೀಗ ಸಬ್ಬಕ್ಕಿ ಹಾಗೂ ಅವಲಕ್ಕಿಯ ವಡೆ ತಯಾರಾಗಿದ್ದು, ತೆಂಗಿನಕಾಯಿ ಚಟ್ನಿ ಅಥವಾ ಕಡಲೆಕಾಯಿ ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಬೇಕರಿಯಲ್ಲಿ ಸಿಗುವ ಡೋನಟ್ ಮನೆಯಲ್ಲೂ ಮಾಡ್ಬೋದು ತುಂಬಾ ಸುಲಭವಾಗಿ