Tag: sabha azad

  • ತನಗಿಂತ 16 ವರ್ಷ ಚಿಕ್ಕವಳೊಂದಿಗೆ ಹೃತಿಕ್ ರೋಷನ್ ಡೇಟಿಂಗ್: ಮದುವೆ ಯಾವಾಗ?

    ತನಗಿಂತ 16 ವರ್ಷ ಚಿಕ್ಕವಳೊಂದಿಗೆ ಹೃತಿಕ್ ರೋಷನ್ ಡೇಟಿಂಗ್: ಮದುವೆ ಯಾವಾಗ?

    ಬಾಲಿವುಡ್‌ನ ಸೂಪರ್ ಸ್ಟಾರ್ ಹೃತಿಕ್ ರೋಷನ್ ಈಗ ಸಿನಿಮಾಗಿಂತ ಸಬಾ ಆಜಾದ್ ಜತೆಗಿನ ಲವ್ವಿ ಡವ್ವಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೃತಿಕ್ ತಮ್ಮ ಡಿವೋರ್ಸ್ ನಂತರ ಸಬಾ ಜತೆ ಏಂಗೇಜ್ ಆಗಿದ್ದಾರೆ. ಈ ಸ್ಟಾರ್ ಜೋಡಿಯ ಮದುವೆ ಕುರಿತು ಅಸಲಿ ವಿಚಾರವೊಂದು ಹೊರಬಿದ್ದಿದೆ.

    ಬಿಟೌನ್ ಸದ್ಯದ ಹಾಟ್ ಟಾಪಿಕ್ ಅಂದ್ರೆ ಹೃತಿಕ್ ರೋಷನ್ ಮತ್ತು ಸಬಾ ಡೇಟಿಂಗ್ ವಿಚಾರ. ಮೊದಲ ಮದುವೆಗೆ ಹೃತಿಕ್ ಫುಲ್ ಸ್ಟಾಪ್ ಇಟ್ಟ ಮೇಲೆ ಸಬಾ ಜತೆ ರೆಸ್ಟೋರೆಂಟ್, ಪಾರ್ಟಿ ಏರ್‌ಪೋರ್ಟ್, ವೆಕೇಷನ್ ಅಂತಾ ಈ ಜೋಡಿ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಕರಣ್ ಜೋಹರ್ ಪಾರ್ಟಿಯಲ್ಲಿ ಹೃತಿಕ್ ಮತ್ತು ಸಬಾ ಕೈ ಕೈ ಹಿಡಿದು ಕ್ಯಾಮೆರಾ ಕಣ್ಣಿಗೆ ಜೋಡಿಯಾಗಿ ಪೋಸ್ ಕೊಟ್ಟಿದ್ದರು. ಈಗ ಈ ಜೋಡಿ ಯಾವಾಗ ಮದುವೆ ಆಗುತ್ತಾರೆ ಎಂಬುದಕ್ಕೆ ಇದೀಗ ಸ್ಪಷ್ಣನೆ ಸಿಕ್ಕಿದೆ. ಇದನ್ನೂ ಓದಿ:ರಮ್ಯಾಕೃಷ್ಣ- ನಿರ್ದೇಶಕ ಕೃಷ್ಣವಂಶಿ ಡಿವೋರ್ಸ್? ಅಸಲಿ ವಿಚಾರ ಬಿಚ್ಚಿಟ್ಟ ಕೃಷ್ಣವಂಶಿ

    ಇದೀಗ ಹೃತಿಕ್ ರೋಷನ್ ಕುಟುಂಬಕ್ಕೂ ಸಭಾ ಆಪ್ತರಾಗಿದ್ದಾರೆ. ಬಾಲಿವುಡ್ ಮೂಲಗಳ ಪ್ರಕಾರ ಸದ್ಯದಕ್ಕೆ ಈ ಜೋಡಿ ಮದುವೆಯ ಬಗ್ಗೆ ನಿರ್ಧರಿಸಿಲ್ಲವಂತೆ. ಗ್ರೀಕ್ ಗಾಢ್ ಹೃತಿಕ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಸಭಾ ಕೈಯಲ್ಲಿ ಕೂಡ ಆ್ಯಡ್ ಶೂಟ್ ಜತೆ ಒಂದಿಷ್ಟು ಸಿನಿಮಾಗಳಿವೆ. ಒಪ್ಪಿಕೊಂಡಿರುವ ಪ್ರಾಜೆಕ್ಟ್ ಕಡೆ ಜೋಡಿ ಗಮನ ಕೊಡ್ತಿದ್ದಾರೆ. ಒಬ್ಬರನೊಬ್ಬರು ಪರಸ್ಪರ ಅರ್ಥಮಾಡಿಕೊಂಡಿರುವ ಈ ಜೋಡಿ ಈಗ ಮದುವೆಗೆ ನೋ ಅಂತಿದ್ದಾರೆ.

    Live Tv
    [brid partner=56869869 player=32851 video=960834 autoplay=true]