Tag: sabbakki payasa

  • ಮನೆಯಲ್ಲಿಯೇ ಮಾಡಬಹುದು ಸರಳವಾದ ಸಬ್ಬಕ್ಕಿ ಪಾಯಸ

    ಮನೆಯಲ್ಲಿಯೇ ಮಾಡಬಹುದು ಸರಳವಾದ ಸಬ್ಬಕ್ಕಿ ಪಾಯಸ

    ಸಾಮಾನ್ಯವಾಗಿ ಸಿಹಿ ಎಂದ ತಕ್ಷಣ ಮೊದಲಿಗೆ ನೆನೆಪಾಗುವುದು ಪಾಯಸ. ಯಾವುದೇ ಹಬ್ಬ, ಕಾರ್ಯಕ್ರಮಗಳಲ್ಲಿ ಸಿಹಿಯೂಟದ ಜೊತೆಗೆ ಪಾಯಸ ಕಡ್ಡಾಯವಾಗಿ ಹಾಕುತ್ತಾರೆ. ಮಕ್ಕಳಿಂದ ವಯಸ್ಸಾದವರವರೆಗೂ ಪಾಯಸ ಎಂದರೆ ಎಲ್ಲರೂ ಬಾಯಿ ಚಪ್ಪರಿಸುತ್ತಾರೆ. ಪಾಯಸದಲ್ಲಿ ಹಾಲು ಪಾಯಸ, ಶಾವಿಗೆ ಪಾಯಸ, ಹೆಸರು ಬೆಳೆ ಪಾಯಸ ಹೀಗೆ ವಿಧ, ವಿಧವಾದ ಹಲವಾರು ಪಾಯಸಗಳಿದೆ. ಅವುಗಳಲ್ಲಿ ಸಬ್ಬಕ್ಕಿ ಪಾಯಸ ಕೂಡ ಒಂದು. ನಿಮಗೆ ತಕ್ಷಣಕ್ಕೆ ಸಿಹಿ ಮಾಡಿ ಸವಿಯ ಬೇಕೆಂದರೆ ಮನೆಯಲ್ಲಿಯೇ ಫಟಾಫಟ್ ಎಂದು ಸಬ್ಬಕ್ಕಿ ಪಾಯಸ ಮಾಡಿ ಸವಿಯಬಹುದು.

    ಬೇಕಾಗುವ ಸಾಮಗ್ರಿಗಳು:
    * 1/4 ಕಪ್ ಸಬ್ಬಕ್ಕಿ
    * ಏಲಕ್ಕಿಕಾಯಿ ಪುಡಿ
    * 1/4 ಕಪ್ ಸಕ್ಕರೆ
    * ದ್ರಾಕ್ಷಿ, ಗೋಡಂಬಿ
    * ಕೇಸರಿ ದಳ
    * ಬಾದಮಿ ಪುಡಿ- 1 ಚಮಚ
    * ಹಾಲು – 3 ಕಪ್
    * ತುಪ್ಪ -1 ಚಮಚ

    ಮಾಡುವ ವಿಧಾನ:
    * ಒಂದು ಬಾಣಲೆಗೆ ತುಪ್ಪ ಹಾಕಿ ದ್ರಾಕ್ಷಿ ಗೋಡಂಬಿಯನ್ನು ಉರಿದುಕೊಳ್ಳಬೇಕು.
    * ಬಾಣಲಿಲೆಗೆ ಹಾಲನ್ನು ಸುರಿದುಕೊಂಡು ನೀರಿನಲ್ಲಿ ನೆನೆಸಿಟ್ಟಿದ್ದ ಸಬ್ಬಕ್ಕಿಯನ್ನು ಬೆರೆಸಬೇಕು.
    * ಸಬ್ಬಕ್ಕಿ ಬೆಂದ ನಂತರ ಇದಕ್ಕೆ ಸಕ್ಕರೆ ಹಾಕಬೇಕು. ನಂತರ ಒಂದು ಕಪ್ ಹಾಲಿನಲ್ಲಿ ನೆನಸಿಟ್ಟ ಕೇಸರಿಯನ್ನು ಮಿಶ್ರಣ ಮಾಡಬೇಕು. ಬಳಿಕ 5-6 ನಿಮಿಷ ಚೆನ್ನಾಗಿ ಕುದಿಸಬೇಕು.
    * 10 ನಿಮಿಷ ಕುದಿಸಿದ ನಂತರ ಬಾದಾಮಿ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಬೇಕು. ಕ್ರೀಮಿ ರೀತಿ ಇರುವ ಪಾಯಸವನ್ನು ಸ್ಟವ್ ಮೇಲಿಂದ ಕೆಳಗೆ ಇಳಿಸಿ ಕಪ್‍ನಲ್ಲಿ ಬಡಿಸಿಕೊಂಡರೆ, ಪಾಯಸ ಸವಿಯಲು ಸಿದ್ಧ. ಇದನ್ನೂ ಓದಿ: ಚೆಟ್ಟಿನಾಡ್ ಶೈಲಿಯಲ್ಲಿ ಮಾಡಿ ಫಿಶ್ ಫ್ರೈ

  • ಸಿಹಿ ಸಿಹಿ ಸಬ್ಬಕ್ಕಿ ಪಾಯಸ ಮಾಡೋ ವಿಧಾನ

    ಸಿಹಿ ಸಿಹಿ ಸಬ್ಬಕ್ಕಿ ಪಾಯಸ ಮಾಡೋ ವಿಧಾನ

    ಬ್ಬಕ್ಕಿಯಿಂದ ಅನೇಕ ವಿಧವಾದ ಅಡುಗೆಗಳನ್ನ ಮಾಡಬಹುದು. ಸಾಮಾನ್ಯವಾಗಿ ಸಬ್ಬಕ್ಕಿ ಬಳಸಿ ವಡೆ, ಬೋಂಡಾ, ಕಿಚಡಿ ಮಾಡ್ತಾರೆ. ಅಲ್ಲದೆ ಸಬ್ಬಕ್ಕಿ ಪಾಯಸ ಅಂತೂ ತುಂಬಾ ಫೇಮಸ್. ಸಬ್ಬಕ್ಕಿ ತಿನ್ನೋದು ಆರೋಗ್ಯಕ್ಕೂ ಒಳ್ಳೆಯದು. ಇದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ, ರಕ್ತದೊತ್ತಡವನ್ನ ನಿಯಂತ್ರಿಸುತ್ತದೆ ಹಾಗೂ ದೇಹದ ತೂಕ ಹೆಚ್ಚಿಸಲು ಸಹಕಾರಿ.

    ಬೇಕಾಗುವ ಸಾಮಗ್ರಿಗಳು
    1. ಸಬ್ಬಕ್ಕಿ – 1/2 ಕಪ್
    2. ಸಕ್ಕರೆ – 1/2 ಕಪ್
    3. ಹಾಲು – 4 ಕಪ್
    4. ದ್ರಾಕ್ಷಿ – 10
    5. ಗೋಡಂಬಿ – 10
    6. ಏಲಕ್ಕಿ ಪುಡಿ – ಸ್ವಲ್ಪ

    ಮಾಡುವ ವಿಧಾನ
    * ಒಂದು ಪತ್ರೆಗೆ ಸಬ್ಬಕ್ಕಿ ಹಾಕಿ ಅದಕ್ಕೆ 1 ಕಪ್ ನೀರು ಹಾಕಿ 30 ನಿಮಿಷ ನೆನೆಯಲು ಬಿಡಿ.
    * ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ, ಅದಕ್ಕೆ ದ್ರಾಕ್ಷಿ ಮತ್ತು ಗೋಡಂಬಿ ಹಾಕಿ ಕರಿದು ತೆಗೆಯಿರಿ.
    * ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ಹಾಲು ಹಾಕಿ ನಂತರ ನೆನೆಸಿದ ಸಬ್ಬಕ್ಕಿ(ನೀರಿನ ಸಮೇತ) ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ. ಹಾಲು ತಳ ಹಿಡಿಯದಂತೆ ಆಗಾಗ ತಿರುವುತ್ತಾ ಇರಬೇಕು.
    * ನಂತರ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಸಬ್ಬಕ್ಕಿ ಚೆನ್ನಾಗಿ ಬೆಂದು ಹಾಲು ಗಟ್ಟಿಯಾದಾಗ ಅದಕ್ಕೆ ಕರಿದ ದ್ರಾಕ್ಷಿ, ಗೋಡಂಬಿ ಹಾಕಿ 5 ನಿಮಿಷ ಕುದಿಸಿ
    * ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿದ್ರೆ ಸಬ್ಬಕ್ಕಿ ಪಾಯಸ ರೆಡಿ.

    (ಇದಕ್ಕೆ ಸಕ್ಕರೆ ಬದಲಾಗಿ ಬೆಲ್ಲ ಕೂಡ ಹಾಕಬಹುದು- 4 ಕಪ್ ಹಾಲಿಗೆ 1 ಬೆಲ್ಲ ಅಥವಾ ನಿಮಗೆ ಎಷ್ಟು ಸಿಹಿ ಬೇಕೋ ಅದಕ್ಕನುಗುಣವಾಗಿ ಬಳಸಿ.)