ತಿರುವನಂತಪುರಂ: ಮಕರ ಸಂಕ್ರಾಂತಿಯಂದು (Makarasankranthi Festival) ಕೇರಳದ ಶಬರಿಮಲೆಯಲ್ಲಿ ಉದ್ಭವಿಸುವ ಮಕರ ಜ್ಯೋತಿಯನ್ನು (ಮಕರವಿಳಕ್ಕು) (Makara Jyothi) ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. ಐತಿಹಾಸಿಕ ಶಬರಿಮಲೆ ದೇಗುಲದಲ್ಲಿ ಮಕರಜ್ಯೋತಿ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಸಾಗರ ನೆರೆದಿತ್ತು.
ಅಯ್ಯಪ್ಪನ ಭಕ್ತಿಗೀತೆ ಗುಣಗಾನ ಮಾಡುತ್ತಾ ಲಕ್ಷಾಂತರ ಭಕ್ತರು ಮಕರ ಜ್ಯೋತಿ ದರ್ಶನ ಪಡೆದರು. ಸಂಜೆ 6.50ರ ಸುಮಾರಿಗೆ ಅಯ್ಯಪ್ಪ (Swamy Ayyappa) ದೇಗುಲದ ಎದುರಿನ ಪೊನ್ನಂಬಲಮೇಡುವಿನಲ್ಲಿ ಜ್ಯೋತಿ ದರ್ಶನವಾಯಿತು. ಇದನ್ನೂ ಓದಿ: ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣಗೆ ಶ್ರದ್ಧಾಂಜಲಿ
ಮಡಿಕೇರಿ: ಶಬರಿಮಲೆಯ (Sabarimala) ಅಯ್ಯಪ್ಪನ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ಮಡಿಕೇರಿಯ ಯುವಕನೋರ್ವ (Young Man) ಸಮುದ್ರಪಾಲಾಗಿ ಮೃತಪಟ್ಟ ಘಟನೆ ಕೇರಳ ರಾಜ್ಯದ ಕಣ್ಣೂರು ಬೀಚ್‌ನಲ್ಲಿ ನಡೆದಿದೆ.
ಮಡಿಕೇರಿ (Madikeri) ನಗರದ ಜಲಾಶಯ ಬಡಾವಣೆ ನಿವಾಸಿ ಶಶಾಂಕ್ (25) ಮೃತ ದುರ್ದೈವಿ. ಶನಿವಾರ ಮುಂಜಾನೆ ಈ ದುರ್ಘಟನೆ ನಡೆದಿದೆ. ಇಂದು ಮಕರ ಜ್ಯೋತಿ ಇರುವ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಹೆಚ್ಚಿನ ಜನ ಸೇರುತ್ತಾರೆ ಎಂದು ಶಶಾಂಕ್‌ನಿದ್ದ ತಂಡವೊಂದು ನಿನ್ನೆ ಸಂಜೆಯೇ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿತ್ತು. ಅಲ್ಲಿಂದ ಮರಳುತ್ತಿದ್ದ ಸಂದರ್ಭದಲ್ಲಿ ಕಣ್ಣೂರು ಬೀಚ್‌ಗೆ ತೆರಳಿದ್ದರು.
ಕಣ್ಣೂರು ಸಮುದ್ರಕ್ಕೆ ಬಂದು ಸಮುದ್ರದಲ್ಲಿ ಕೆಲ ಸಮಯ ಕಾಲ ಕಳೆದು ಹೋಗುವಾಗ ಮೂವರು ಯುವಕರು ಸಮುದ್ರಕ್ಕೆ ಇಳಿದಿದ್ದಾರೆ. ಬೆಳಗ್ಗೆ ಸಮಯದಲ್ಲಿ ಸಮುದ್ರ ಅಲೆಗಳು ಹೆಚ್ಚಾಗಿ ಇರುವುದರಿಂದ ಮೂವರು ಯುವಕರು ಅಲೆಗಳಿಗೆ ಸಿಲುಕಿದ್ದಾರೆ. ಈ ವೇಳೆ ಮೂವರು ಯುವಕರಲ್ಲಿ ಇಬ್ಬರು ಯುವಕರನ್ನು ಸ್ಥಳೀಯರ ನೆರವಿನಿಂದ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಭಾವುಕರಾದ ಸಚಿವ ಮುರುಗೇಶ್ ನಿರಾಣಿ
ಆದರೆ ಶಶಾಂಕ್ ಸಮುದ್ರ ಅಲೆಗೆ ಸಿಲುಕಿ ತುಂಬಾ ದೂರ ಹೋಗಿರುವುದರಿಂದ ಆತನ ರಕ್ಷಣೆ ಮಾಡಲು ಅಸಾಧ್ಯವಾಗಿತ್ತು. ಕೆಲ ಸಮಯದ ನಂತರ ಆತನ ರಕ್ಷಣೆ ಮಾಡಲು ಸ್ಥಳೀಯರು ಮುಂದಾದ ವೇಳೆ ಶಶಾಂಕ್ ಮೃತಪಟ್ಟಿದ್ದಾನೆ. ಕಣ್ಣೂರಿನಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮಡಿಕೇರಿಗೆ ಮೃತದೇಹ ತಲುಪಲಿದೆ. ಇದನ್ನೂ ಓದಿ:ಮೋದಿ, ಶಾ ಸಭೆ – ಜನವರಿ ಅಂತ್ಯಕ್ಕೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ?
Live Tv
[brid partner=56869869 player=32851 video=960834 autoplay=true]
ಧಾರವಾಡ: ಸ್ವಾಮಿ ಅಯ್ಯಪ್ಪನ (Ayappa) ದರ್ಶನಕ್ಕೆಂದು ಕೇರಳಕ್ಕೆ ತೆರಳಿದ್ದ ಧಾರವಾಡದ (Dharwada) ಹತ್ತರ ಹರೆಯದ ಬಾಲಕನೋರ್ವ (Boy) ರಸ್ತೆ ಅಪಘಾತದಲ್ಲಿ (Accident) ಸಾವನ್ನಪ್ಪಿದ್ದಾನೆ.
ಧಾರವಾಡ ಸೈದಾಪುರದ ಸುಮಿತ್ ಪಾಂಡೆ (10) ಅಪಘಾತದಲ್ಲಿ ಮೃತಪಟ್ಟ ಬಾಲಕ. ಜ.1 ರಂದು ಸೈದಾಪುರದಿಂದ ಶಬರಿಮಲೆಗೆ ಟಾಟಾ ಏಸ್ ವಾಹನದಲ್ಲಿ ಅಯ್ಯಪ್ಪ ಮಾಲೆಧಾರಿಗಳು ತೆರಳಿದ್ದರು. ದೇವರ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಕೇರಳದ ಮನಪುರಂನ ಯಡಪ್ಪಾಲ ಎಂಬಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸುಮಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿದೆ. ಇದನ್ನೂ ಓದಿ: ಸಾಲದ ಹಣಕ್ಕಾಗಿ ಚಿತ್ರಹಿಂಸೆ, ಕಿಡ್ನಾಪ್, ಕೊಲೆ – 9 ತಿಂಗಳ ಬಳಿಕ ಚಾರ್ಮಾಡಿಯಲ್ಲಿ ಯುವಕನ ಶವಕ್ಕಾಗಿ ಶೋಧ
ಚೆನ್ನೈ: ರಸ್ತೆ ಅಪಘಾತದಲ್ಲಿ (Road Accident) ಶಬರಿಮಲೆಯಿಂದ (Sabarimala) ಹಿಂದಿರುಗುತ್ತಿದ್ದ 8 ಮಂದಿ ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ತೇಣಿ ಜಿಲ್ಲೆಯ ಕುಮುಲಿ ಮೌಂಟೇನ್ ಪಾಸ್‍ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಪರಿಣಾಮ ಕಾರು 40 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ 8 ಭಕ್ತರು (Pilgrims) ಸಾವನ್ನಪ್ಪಿದ್ದಾರೆ. ಇನ್ನುಳಿದ ಮಗು ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರಿನಲ್ಲಿದ್ದ ಇಬ್ಬರನ್ನು ರಕ್ಷಿಸಿ ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತಪಟ್ಟ ಎಲ್ಲಾ ಪ್ರಯಾಣಿಕರು ಥೇಣು ಆಂಡಿಪೆಟ್ಟಿಯ ಮೂಲದವರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಕೋವಿಡ್ ಮಾರ್ಗಸೂಚಿ ಪ್ರಕಟ
Deeply Saddened by the demise of Sabarimala pilgrims in an accident in Idukki.
Heartfelt condolences to the families of the bereaved. Praying for the speedy and full recovery of the injured.
ಧಾರವಾಡ: ಶಬರಿಮಲೆಗೆ(Sabarimala) ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಿಂದ ಪಾದಯಾತ್ರೆಗೆ ಹೊರಟ ಮೂವರು ಭಕ್ತರ(Devotees) ಜೊತೆ ಒಂದು ಶ್ವಾನ ಕೂಡಾ ಸೇರಿಕೊಂಡಿದೆ.
ನವೆಂಬರ್ 20 ರಂದು ಗ್ರಾಮದಿಂದ ಹೊರಟ ಮಂಜು ಕಮ್ಮಾರ, ರವಿ ಹಾಗೂ ನಾಗನಗೌಡ ಅವರಿಗೆ ಶ್ವಾನ ಧಾರವಾಡ ಬೈಪಾಸ್ ರಸ್ತೆಯಲ್ಲಿ ಸಿಕ್ಕಿದೆ. ಈ ಮೂವರು ಊಟಕ್ಕೆ ಕುಳಿತಾಗ ಶ್ವಾನಕ್ಕೂ ಆಹಾರ ಹಾಕಿದ್ದಾರೆ. ನಂತರ ಇವರು ಅಲ್ಲಿಂದ ಪಾದಯಾತ್ರೆ(Padayatra) ಮುಂದುವರಿಸಿದಾಗ ಅವರ ಹಿಂದೆಯೇ ಶ್ವಾನ ಹೆಜ್ಜೆ ಹಾಕಿದೆ. ಇದನ್ನೂ ಓದಿ: ತನ್ನ ಕೂದಲನ್ನೇ ತಿಂದ ಬಾಲಕಿ – ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ದಂಗಾದ ವೈದ್ಯರು
ಮೂವರು ಭಕ್ತರು ಉತ್ತರ ಕನ್ನಡ ಜಿಲ್ಲೆ ದಾಟಿ ಮುಂದಕ್ಕೆ ಹೊರಟಿದ್ದಾರೆ. ಶ್ವಾನವನ್ನು ವಾಪಸ್ ಒಡಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದು ನಾಯಿ ಇವರ ಜೊತೆ ಹೆಜ್ಜೆ ಹಾಕುವುದನ್ನು ಮಾತ್ರ ಬಿಡಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಇವರೆಲ್ಲರೂ ಶ್ವಾನವನ್ನು ಶಬರಿಮಲೆಯವರೆಗೆ ಕರೆದುಕೊಂಡು ಹೋಗುವ ನಿರ್ಧಾರ ಮಾಡಿದ್ದಾರೆ.
ಈಗಾಗಲೇ ರಾಜ್ಯದಲ್ಲಿ 500 ಕಿಲೋ ಮೀಟರ್ ಪಾದಯಾತ್ರೆ ಪೂರ್ಣಗೊಂಡಿದ್ದು, ಕರ್ನಾಟಕ ದಾಟಿದ ಮೇಲೆ ಕೇರಳಕ್ಕೆ ಹೋಗಬೇಕಿದೆ. ಅಲ್ಲಿಯವರೆಗೆ ಹೋಗಲು ಇನ್ನು 500 ಕಿಲೋ ಮೀಟರ್ ಯಾತ್ರೆ ಮಾಡಬೇಕಿದೆ.
Live Tv
[brid partner=56869869 player=32851 video=960834 autoplay=true]
ತಿರುವನಂತಪುರಂ: ಶಬರಿಮಲೆ (Sabarimala) ಅಯ್ಯಪ ದೇಗುಲ ತೆರೆಯುತ್ತಿದ್ದಂತೆಯೇ ಪೊಲೀಸರ ಕೈಪಿಡಿಯೊಂದು ವಿವಾದ ಸೃಷ್ಟಿಸಿದೆ.
ಹೌದು, ಶಬರಿಮಲೆ ದೇವಾಲಯದ ಭದ್ರತೆಗೆ ನಿಯೋಜಿಸಲ್ಪಟ್ಟ ಪೊಲೀಸ್ ಸಿಬ್ಬಂದಿಗೆ ನೀಡಲಾಗಿದ್ದ ಕೈಪಿಡಿಯನ್ನು ಹಿಂದಕ್ಕೆ ಪಡೆದು ಪರಿಷ್ಕೃತ ಕೈಪಿಡಿಯನ್ನು ನೀಡಲು ಕೇರಳ ಸರ್ಕಾರ (Kerala government) ನಿರ್ಧರಿಸಿದೆ. ಈಗ ಹಿಂತೆಗೆದುಕೊಂಡಿರುವ ಕೈಪಿಡಿಯಲ್ಲಿ 2018ರಲ್ಲಿ ಸುಪ್ರೀಂ ಕೋರ್ಟ್ (Supreme Court) ನೀಡಿದ್ದ ತೀರ್ಪಿನ ಪ್ರಕಾರ ಶಬರಿಮಲೆಗೆ ಎಲ್ಲಾ ಭಕ್ತರಿಗೆ ಪ್ರವೇಶಕ್ಕೆ ಅವಕಾಶವಿದೆ ಎಂದು ಬರೆಯಲಾಗಿದೆ.
2018ರಲ್ಲಿ ಸರ್ವೋಚ್ಚ ನ್ಯಾಯಾಲಯವು 10ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ತೆಗೆದು ಹಾಕಿತ್ತು. ಋತುಮತಿ ಆಗುವ ವಯಸ್ಸಿನ ಮಹಿಳೆಯರು ದೇವಾಲಯ ಪ್ರವೇಶಿಸಬಹುದು ಎಂದು ಹೇಳಿತ್ತು. ಈಗ ಕೂಡ ಇದೇ ಆದೇಶವನ್ನು ಪರೋಕ್ಷವಾಗಿ ಕೈಪಿಡಿಯಲ್ಲಿ ಉಲ್ಲೇಖಿಸಿ, ಎಲ್ಲ ಭಕ್ತರಿಗೂ ದೇವಾಲಯ ಪ್ರವೇಶಕ್ಕೆ ಅನುಮತಿಸಲಾಗಿದೆ ಎಂದು ಬರೆಯಲಾಗಿದೆ. ಇದನ್ನೂ ಓದಿ: ಅಮೆರಿಕ ಹೌಸ್ ಸ್ಪೀಕರ್ ಆಗಿ ಐತಿಹಾಸಿಕ ಅವಧಿ ಕೊನೆಗೊಳಿಸಿದ ನ್ಯಾನ್ಸಿ ಪೆಲೋಸಿ
ಆದರೆ ದೇವಾಲಯವು ತನ್ನ ಪ್ರಾಚೀನ ಸಂಪ್ರದಾಯದ ಪ್ರಕಾರ 10-50 ವಯಸ್ಸಿನ ಮಹಿಳೆಯರಿಗೆ ಪ್ರವೇಶವನ್ನು ನಿರ್ಬಂಧಿಸಿದೆ. ಏಕೆಂದರೆ ಅಯಪ್ಪ ಸ್ವಾಮಿ ಶಾಶ್ವತ ಬ್ರಹ್ಮಚಾರಿ ಎಂದು ಪರಿಗಣಿಸಲಾಗಿದೆ. ಹೀಗಾಗಿ ಕೋರ್ಟ್ ಈ ಆದೇಶ ನೀಡಿದ್ದರೂ ಭಕ್ತರ ಭಾವನೆ ಪರಿಗಣಿಸಿ ಅದರ ಜಾರಿಗೆ ಸರ್ಕಾರ ಮುಂದಾಗಿರಲಿಲ್ಲ. ಈ ನಡುವೆ ಕೈಪಿಡಿಯಲ್ಲಿ ಮತ್ತೆ ಈಗ ತೀರ್ಪಿನ ವಿಚಾರ ಕೆದಕಿರುವುದಕ್ಕೆ ಬಿಜೆಪಿ, ಈ ಕೈಪಿಡಿಯಲ್ಲಿನ ಮಾರ್ಗಸೂಚಿಗಳ ಹಿಂದೆ ದುರುದ್ಧೇಶವಿದೆ. ಕೂಡಲೇ ಇದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿದ ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್ ಅವರು, ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿದೆ, ಅಲ್ಲೇ ನಿರ್ಧಾರ ತೆಗೆದುಕೊಳ್ಳಬೇಕು, ಸರ್ಕಾರ ಯಾವುದೇ ಹೊಸ ನಿರ್ಧಾರ ಕೈಗೊಂಡಿಲ್ಲ, ಕಳೆದ ವರ್ಷ ಮಾಡಿದ್ದನ್ನೇ ಅನುಸರಿಸುತ್ತೇವೆ. ಇದು ಮೊದಲೇ ಮುದ್ರಣಗೊಂಡ ಹಳೆಯ ಕೈಪಿಡಿ. ಪ್ರಮಾದವಶಾತ್ ವಿತರಣೆ ಆಗಿದೆ. ಕೈಪಿಡಿ ಹಿಂಪಡೆಯಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನವೆಂಬರ್ ಅಂತ್ಯಕ್ಕೆ ಶ್ರೀರಂಗಪಟ್ಟಣ-ಮದ್ದೂರು ಬೈಪಾಸ್ ಓಪನ್
Live Tv
[brid partner=56869869 player=32851 video=960834 autoplay=true]
– ಮಂತ್ರಾಯಲದ ಕರ್ನಾಟಕ ಛತ್ರದ ಅಭಿವೃದ್ದಿಗೆ 4 ಕೋಟಿ ರೂ. ಅನುದಾನ – ಮಹಾರಾಷ್ಟ್ರ ರಾಜ್ಯದ ಪಂಡರಾಪುರದಲ್ಲಿರುವ ಕರ್ನಾಟಕ ಛತ್ರಕ್ಕಾಗಿ 3 ಕೋಟಿ
ಬೆಂಗಳೂರು: ಹೊರ ರಾಜ್ಯದ ಯಾತ್ರಾಸ್ಥಳಗಳಿಗೆ ರಾಜ್ಯದಿಂದ ತೆರಳುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಛತ್ರ ನಿರ್ಮಾಣ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ, ರಾಜ್ಯದ ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸೌಕರ್ಯಗಳನ್ನು ಅಭಿವೃದ್ದಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ – ಯಂಗ್ ಇಂಡಿಯಾ ಕಚೇರಿ ಸೀಲ್ ಮಾಡಿದ ED
ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ರಾಜ್ಯದಲ್ಲಿನ ವಿವಿಧ ದೇವಸ್ಥಾನಗಳು, ಮಠಗಳು ಹಾಗೂ ಹೊರ ರಾಜ್ಯಗಳಲ್ಲಿರುವ ಕರ್ನಾಟಕ ಛತ್ರಗಳ ಅಭಿವೃದ್ದಿಗಾಗಿ ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಅನುದಾನವನ್ನು ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹೊರ ರಾಜ್ಯದ ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳಗಳಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಛತ್ರಗಳ ನಿರ್ಮಾಣ ಹಾಗೂ ಅಭಿವೃದ್ದಿಗೂ ವಿಶೇಷ ಆದ್ಯತೆಯನ್ನು ನೀಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಬಸವರಾಜ ಬೊಮ್ಮಾಯಿ ಶಬರಿಮಲೆ, ಮಂತ್ರಾಲಯ ಹಾಗೂ ಪಂಡರಾಪುರದ ಕರ್ನಾಟಕ ಛತ್ರಗಳ ನಿರ್ಮಾಣ ಮತ್ತು ಅಭಿವೃದ್ದಿಗೆ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದರು. ಈ ಸಂಬಂಧ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ. ಅತಿ ಹೆಚ್ಚು ಅನುದಾನ ನೀಡುವ ಮೂಲಕ ಇಲಾಖೆಯ ಅಭಿವೃದ್ದಿಗೆ ಹೆಚ್ಚಿನ ಸಹಕಾರ ನೀಡುತ್ತಿರುವುದಕ್ಕೆ ನಾನು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆ.5 ರಿಂದ 15 ರವರೆಗೆ ASI ಪ್ರವಾಸಿ ತಾಣಗಳ ಪ್ರವೇಶ ಉಚಿತ
ತಿರುಮಲದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ 232 ಕೋಟಿ ರೂ. ಬೃಹತ್ ಅನುದಾನವನ್ನು ಕಳೆದ ವರ್ಷ ನೀಡಲಾಗಿತ್ತು. ಕರ್ನಾಟಕ ಭವನದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆಂಧ್ರಪದ್ರೆಶದ ಶ್ರೀಶೈಲದಲ್ಲಿರುವ ನೂತನ ಕರ್ನಾಟಕ ಛತ್ರದ ನಿರ್ಮಾಣಕ್ಕಾಗಿ 85 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ಈಗಾಗಲೇ ಮಂಜೂರು ಮಾಡಿದ್ದು, ಸದ್ಯದಲ್ಲಿಯೇ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ತಿರುವನಂತಪುರಂ: ಶಬರಿಮಲೆ ಯಾತ್ರಾರ್ಥಿಗಳಿಗೆ ಬಂಪರ್ ಆಫರ್ ಸಿಕ್ಕಿದ್ದು, ಚೆನ್ನೈನಿಂದ ಚಿಂಗವನಂಗೆ ರೈಲು ಸೇವೆ ನೀಡಲಾಗುವುದು ಎಂದು ಸೌತ್ ಸ್ಟಾರ್ ರೈಲಿನ ಯೋಜನಾ ಅಧಿಕಾರಿ ಎಸ್.ರವಿಶಂಕರ್ ಮಾಹಿತಿ ನೀಡಿದ್ದಾರೆ.
ಸೌತ್ ಸ್ಟಾರ್ ರೈಲಿನ ಯೋಜನಾ ಅಧಿಕಾರಿ ಎಸ್.ರವಿಶಂಕರ್ ಈ ಕುರಿತು ಮಾತನಾಡಿದ್ದು, ತೀರ್ಥಯಾತ್ರಾ ಕಾಲದಲ್ಲಿ ಶಬರಿಮಲೆ ಯಾತ್ರಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ಭಾರತೀಯ ರೈಲ್ವೆಯ ಭಾರತ್ ಗೌರವ್ ರೈಲುಗಳು ಚೆನ್ನೈನಿಂದ ಕೇರಳದ ಕೊಟ್ಟಾಯಂನ ಚಿಂಗವನಂ ರೈಲು ನಿಲ್ದಾಣಕ್ಕೆ ಸೇವೆಗಳನ್ನು ನೀಡಲಾಗುವುದು ಎಂದು ವಿವರಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಭಾರತೀಯ ದಕ್ಷಿಣ ರೈಲ್ವೇ ವಲಯದಿಂದ ಏರ್ಪಡಿಸಲಾಗುವ ರೈಲು ಸೇವೆಗಳು ಆಗಸ್ಟ್ 18, ಸೆಪ್ಟೆಂಬರ್ 17, ಅಕ್ಟೋಬರ್ 20, ನವೆಂಬರ್ 17, ಡಿಸೆಂಬರ್ 1 ಮತ್ತು 15 ರಂದು ಚಾಲ್ತಿಯಲ್ಲಿ ಇರುತ್ತೆ. ಭಾರತ್ ಗೌರವ್ ರೈಲಿನ ದರವು ತತ್ಕಾಲ್ ಟಿಕೆಟ್‍ಗಿಂತ ಶೇಕಡಾ 20 ರಷ್ಟು ಹೆಚ್ಚಾಗಿರುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ಕಡ್ಲೆಪುರಿ ತಿನ್ನುವುದನ್ನು ನಿಲ್ಲಿಸುತ್ತಾರೆಯೇ?: GST ವಿರುದ್ಧ ಬ್ಯಾನರ್ಜಿ ವಾಗ್ದಾಳಿ
ಭಾರತ್ ಗೌರವ್ ರೈಲು
ನವೆಂಬರ್ 2021 ರಲ್ಲಿ, ಭಾರತೀಯ ರೈಲ್ವೆಯು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಸ್ಥಳಗಳನ್ನು ಪ್ರದರ್ಶಿಸಲು ಥೀಮ್ ಆಧಾರಿತ ಭಾರತ್ ಗೌರವ್ ರೈಲುಗಳನ್ನು ಓಡಿಸಲು ಖಾಸಗಿ ಕಂಪನಿಗೆ ಅವಕಾಶ ಮಾಡಿಕೊಟ್ಟಿತು. ಈ ಯೋಜನೆಯು ಐಆರ್‌ಸಿಟಿಸಿಯ ಥೀಮ್-ಆಧಾರಿತ ಪ್ರವಾಸಿ ರೈಲುಗಳಂತೆಯೇ ಇದೆ. ರಾಮಾಯಣ ಎಕ್ಸ್‌ಪ್ರೆಸ್‌ನಂತೆ, ಇದು ಭಾರತ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಶೀರೂರು ಮಠ, ಶಬರಿ ಮಲೆ, ತ್ರಿವಳಿ ತಲಾಕ್ ಪ್ರಕರಣವನ್ನು ಪ್ರಸ್ತಾಪಿಸಿ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದಾರೆ.
ಹಿಜಬ್ ವಿವಾದ ಸಂಬಂಧ ಏಳನೇ ದಿನದ ವಿಚಾರಣೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ,ನ್ಯಾ.ಕೃಷ್ಣ ದೀಕ್ಷಿತ್, ನ್ಯಾ. ಖಾಜಿ ಜೈಬುನ್ನೀಸಾ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು.
ಇವತ್ತು ಕೂಡ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ವಾದ ಮಂಡನೆ ಮಾಡಿದರು. ಶಿಕ್ಷಣ ಸಂಸ್ಥೆಗಳು ಹಿಜಬ್‍ಗೆ ಅನುಮತಿ ನೀಡಿದರೆ ನಿಮ್ಮ ಅಭ್ಯಂತರವಿಲ್ಲವೇ? ಹಿಜಬ್ ಬಗ್ಗೆ ಸರ್ಕಾರದ ನಿಲುವೇನು ಎಂದು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೂರ್ಣ ಪೀಠ ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ಎಜಿ ನಾವದಗಿ, ಸರ್ಕಾರ ಹಿಜಬ್‍ಗೆ ನಿರ್ಬಂಧ ಹೇರಿಲ್ಲ. ಈ ವಿಚಾರದಲ್ಲಿ ಮೂಗು ತೂರಿಸಿಲ್ಲ. ಕಾಲೇಜಿನಲ್ಲಿ ಸಮಾನತೆ ಸ್ಥಾಪಿಸುವುದು ಕರ್ನಾಟಕ ಶಿಕ್ಷಣ ಕಾಯ್ದೆಯ ಪ್ರಮುಖ ಧ್ಯೇಯವಾಗಿದೆ. ಇಲ್ಲಿ ನಾವು ನಿರ್ಬಂಧಿಸಿಯೇ ಇಲ್ಲ, ಅದು ಕಾಲೇಜು ಅಭಿವೃದ್ಧಿ ಸಮಿತಿ(ಸಿಡಿಸಿ) ನಿರ್ಧಾರಕ್ಕೆ ಬಿಟ್ಟಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ನ್ಯಾಯಪೀಠ, ಸಿಡಿಸಿಗಳು ಶಾಸನಬದ್ಧ ಮಂಡಳಿಗಳಿಲ್ಲ. ಸಿಡಿಸಿ ಸಮವಸ್ತ್ರ ನಿರ್ಧರಿಸುತ್ತದೆ ಎಂದು ನೀವು ಹೇಳುತ್ತಿದ್ದೀರಿ. ಅವರು ಏನು ಮಾಡಿದ್ದಾರೆ ಎಂಬುದನ್ನು ನಾವು ಪರಿಶೀಲಿಸಬೇಕೇ? ಸಿಡಿಸಿಗಳು ಶಾಸನಬದ್ಧ ಸಂಸ್ಥೆಗಳಲ್ಲವಾದ್ದರಿಂದ ನ್ಯಾಯಾಲಯದ ಆದೇಶದಿಂದ ಅವುಗಳನ್ನು ನಿಯಂತ್ರಿಸಬಹುದೇ ಎಂದು ಪ್ರಶ್ನಿಸಿತು. ಇದನ್ನೂ ಓದಿ: ಹಿಜಬ್ ವಿವಾದದ ನಡುವೆ ಮೈಸೂರು ಪ್ಯಾಲೇಸ್‍ನಲ್ಲಿ ನಮಾಜ್
ಧಾರ್ಮಿಕ ಸಂಕೇತಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ಬಳಕೆ ಮಾಡಬಾರದು ಎಂಬುದು ಸರ್ಕಾರದ ನಿಲುವು. ಆದರೆ ಯಾವುದನ್ನು ಧಾರ್ಮಿಕ ಸಂಕೇತ ಎಂದು ಪರಿಗಣಿಸಬೇಕು. ಯಾವುದನ್ನು ಪರಿಗಣಿಸಬಾರದು ಎಂಬುದನ್ನು ಶಿಕ್ಷಣ ಸಂಸ್ಥೆಗಳಿಗೆ ಬಿಡಲಾಗಿದೆ ಎಂದು ನಾವದಗಿ ಉತ್ತರಿಸಿದರು.
ನಮ್ಮ ಪ್ರಕಾರ ಹಿಜಬ್ ಮುಸ್ಲಿಮ್ ಧರ್ಮದ ಮೂಲಭೂತ ಆಚರಣೆ ಅಲ್ಲ. ಸಮವಸ್ತ್ರಕ್ಕೆ ಧಾರ್ಮಿಕತೆಯನ್ನು ಬೆರೆಸುವುದು ಸರಿಯಲ್ಲ ಎಂದು ನಾವದಗಿ ಮತ್ತೊಮ್ಮೆ ಅಭಿಪ್ರಾಯಪಟ್ಟರು. ಧಾರ್ಮಿಕ ಕಟ್ಟುಪಾಡುಗಳನ್ನು ಪಾಲಿಸದಿದ್ದರೆ ಇಡೀ ಧರ್ಮವೇ ನಾಶವಾಗುತ್ತಾ? ಸಂಪೂರ್ಣ ವಿವಾದವೇ ಹಿಜಬ್ ಕುರಿತಾಗಿ ಉದ್ಭವಿಸಿದೆ. ಹಿಜಬ್ ಅತ್ಯಗತ್ಯ ಧಾರ್ಮಿಕ ಆಚರಣೆಯೇ ಎಂಬುದನ್ನು ನಿರ್ಧರಿಸಬೇಕು. . ಹೀಗಾಗಿ ಹೈಕೋರ್ಟ್ ಈ ಬಗ್ಗೆ ತೀರ್ಮಾನ ನೀಡುವ ಅಗತ್ಯವಿದೆ ಎಂದು ಎಜಿ ನಾವದಗಿ ವಾದಿಸಿದರು. ಇದನ್ನೂ ಓದಿ: UAEನಿಂದ ಗೋಲ್ಡನ್ ವೀಸಾ ಪಡೆದ ಪ್ರಣಿತಾ!
ಧಾರ್ಮಿಕ ಆಚರಣೆ, ಆತ್ಮಸಾಕ್ಷಿಯ ಆಚರಣೆಯಾಗುವುದೇ ಎಂದು ಸರ್ಕಾರಕ್ಕೆ ಪೂರ್ಣ ಪೀಠ ಪ್ರಶ್ನೆ ಮಾಡಿತು. ಇದೇ ಸಂದರ್ಭದಲ್ಲಿ ಸಾರಸ್ವತ ಬ್ರಾಹ್ಮಣರ ಪೂಜೆ ಹಕ್ಕಿಗೆ ಸಂಬಂಧಿಸಿ ವೆಂಕಟ ಸ್ವಾಮಿ ಪ್ರಕರಣವನ್ನು, ಶೀರೂರು ಮಠ ಪ್ರಕರಣವನ್ನು, ಶಬರಿ ಮಲೆ ಪ್ರಕರಣವನ್ನು ಅಡ್ವೋಕೇಟ್ ಜನರಲ್ ಪ್ರಸ್ತಾಪಿಸಿ ಈ ಹಿಂದೆ ನ್ಯಾಯಾಲಯಗಳು ಧಾರ್ಮಿಕ ಹಕ್ಕು ವಿಚಾರಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು.
ಶಬರಿಮಲೆ ತೀರ್ಪಿನಲ್ಲಿ ನ್ಯಾ. ಡಿ ವೈ ಚಂದ್ರಚೂಡ್ ಅವರು ಇಂಥ ಪ್ರಕರಣಗಳಲ್ಲಿ ನ್ಯಾಯಾಲಯಗಳಿಗೆ ಪ್ರಮುಖ ಸ್ಥಾನವಿದೆ ಎಂದು ತೀರ್ಪು ನೀಡಿದ ವಿಚಾರವನ್ನು ಪ್ರಸ್ತಾಪಿಸಿದರು. ಭಗವದ್ಗೀತೆ, ಬೈಬಲ್, ಕುರಾನ್‌ನಲ್ಲಿ ಬಹಳಷ್ಟು ವಿಚಾರಗಳಿವೆ. ಆದರೆ, ಅವುಗಳನ್ನು ಶೈಕ್ಷಣಿಕ ಸಂಸ್ಥೆಗಳಿಂದ ಹೊರಗಿಡಬೇಕು ಎಂದು ಹೇಳಲಾಗಿದೆ.ಈ ಕಾರಣಕ್ಕೆ ಸಂವಿಧಾನ ರಚನಕಾರರು ಪ್ರಜ್ಞಾಪೂರ್ವಕವಾಗಿ ಅವುಗಳನ್ನು ಹೊರಗಿಟ್ಟಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.
ಜಾವೇದ್ ಪ್ರಕರಣವನ್ನು ಪ್ರಸ್ತಾಪಿಸಿದ ಎಜಿ, ಇಸ್ಲಾಮ್‌ನಲ್ಲಿ ಬಹು ಪತ್ನಿತ್ವಕ್ಕೆ ರಕ್ಷಣೆ ಇದ್ದು, ಅದಕ್ಕೆ ವಿರುದ್ಧವಾದ ಕಾನೂನು ನಿಲ್ಲುವುದಿಲ್ಲ ಎಂದು ವಾದಿಸಲಾಗಿತ್ತು. ಆದರೆ ಈ ವಾದವನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಶಾಹೀರಾ ಬಾನು ಪ್ರಕರಣವನ್ನು ಉಲ್ಲೇಖಿಸಿ ತ್ರಿವಳಿ ತಲಾಖ್ ಹೇಳುವುದನ್ನು ಕೋರ್ಟ್ ವಜಾ ಮಾಡಿತ್ತು ಎಂದು ವಾದಿಸಿದರು. ಅಂತಿಮವಾಗಿ ವಿಚಾರಣೆಯನ್ನು ಕೋರ್ಟ್ ಮಂಗಳವಾರ ಮಧ್ಯಾಹ್ನ 2:30ಕ್ಕೆಮುಂದೂಡಿತು.
ತಿರುವನಂತಪುರಂ: ಶಬರಿಮಲೆ ದೇವರ ದರ್ಶನಕ್ಕೆ ತೆರಳಿದ ಕರ್ನಾಟಕದ ಟಿಟಿ ವಾಹವೊಂದು ಭೀಕರ ಅಪಘಾತಕ್ಕಿಡಾಗಿ ಮೂವರು ಮರಣ ಹೊಂದಿರುವ ಘಟನೆ ಕೇರಳದ ಕೋಝಿಕ್ಕೋಡ್‍ನ ಪುರಕ್ಕಾಟ್ಟಿರಿಯಲ್ಲಿ ನಡೆದಿದೆ.
ಕರ್ನಾಟಕ ಮೂಲದ ಭಕ್ತರು ಟಿಟಿ ವಾಹನದಲ್ಲಿ ಶಬರಿ ಮಲೆಗೆ ತೆರಳುತ್ತಿದ್ದಾಗ ಪುರಕ್ಕಾಟ್ಟಿರಿಯ ಪುಲದಿಕುನ್ನು ಬೈಪಾಸ್ ಬಳಿ ಟಿಪ್ಪರ್ ಲಾರಿ ಮತ್ತು ಟಿಟಿ ನಡುವೆ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮರಣ ಹೊಂದಿದ್ದು 11 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: 7 ರಾಜ್ಯಗಳಲ್ಲಿ 14 ಮಹಿಳೆಯರನ್ನು ಮದುವೆಯಾಗಿದ್ದ ಭೂಪ ಅರೆಸ್ಟ್