Tag: sabakki Payasa

  • ಹಬ್ಬಕ್ಕಾಗಿ ಗಸಗಸೆ, ಸಬ್ಬಕ್ಕಿ ಪಾಯಸ ಮಾಡಿ

    ಹಬ್ಬಕ್ಕಾಗಿ ಗಸಗಸೆ, ಸಬ್ಬಕ್ಕಿ ಪಾಯಸ ಮಾಡಿ

    ಹಬ್ಬಗಳು ಬಂದರೆ ಸಿಹಿ ಮಾಡಬೇಕು. ಇಂದಿನ ದಿನ ಸಿಹಿ ತಿನಿಸುಗಳನ್ನು ಎಷ್ಟೆ ಮಾಡಿದ್ರೂ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಗಸಗಸೆ ಪಾಯಸ ಅಂದರೆ ತುಂಬಾ ಇಷ್ಟ.. ಆದ್ದರಿಂದ ನಿಮಗಾಗಿ ಸಿಂಪಲ್ ಆಗಿ ಗಸಗಸೆ ಪಾಯಸ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಸಾಮಾಗ್ರಿಗಳು
    1. ಕೊಬ್ಬರಿ ತುರಿ – 1 ಕಪ್
    2. ಗಸಗಸೆ- 50 ಗ್ರಾಂ
    3. ಬೆಲ್ಲ – 3 ಅಚ್ಚು
    4. ಏಲಕ್ಕಿ – 2-3
    5. ಗೋಡಂಬಿ – ದ್ರಾಕ್ಷಿ – 50 ಗ್ರಾಂ
    6. ಶ್ಯಾವಿಗೆ – 100 ಗ್ರಾಂ
    7. ಕಡ್ಲೆಬೇಳೆ – ಸ್ವಲ್ಪ
    8. ಹೆಸರು ಬೇಳೆ – 50 ಗ್ರಾಂ.
    9. ತುಪ್ಪ – 2-3 ಚಮಚ

    ಮಾಡುವ ವಿಧಾನ
    * ಮೊದಲಿಗೆ ಬೆಲ್ಲವನ್ನು ನೀರಿನಲ್ಲಿ ಕರಗಿಸಿ ಸೋಸಿಕೊಳ್ಳಿ.
    * ಶ್ಯಾವಿಗೆ, ಗಸಗಸೆಯನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ.
    * ಇತ್ತ ತುಪ್ಪದಲ್ಲಿ ಗೋಡಂಬಿ ಹಾಗೂ ದ್ರಾಕ್ಷಿಯನ್ನು ಹುರಿದಿಟ್ಟುಕೊಳ್ಳಿ
    * ಒಂದು ಮಿಕ್ಸಿ ಜಾರಿಗೆ ಕೊಬ್ಬರಿ ತುರಿ, ಹುರಿದ ಗಸಗಸೆ, ಏಲಕ್ಕಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
    * ದೊಡ್ಡದಾದ ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಹೆಸರು ಬೇಳೆ, ಕಡ್ಲೆಬೇಳೆ ನೀರು ಹಾಕಿ ಕುದಿಸಿ.
    * ಸ್ವಲ್ಪ ಬೆಂದ ಬಳಿಕ ಅದಕ್ಕೆ ಸೋಸಿದ ಬೆಲ್ಲದ ನೀರು, ರುಬ್ಬಿದ ಮಿಶ್ರಣವನ್ನು ಹಾಕಿ ಕುದಿಸಿ.
    * ಒಂದು ಕುದಿ ಬಂದ ಮೇಲೆ ಅದಕ್ಕೆ ಹುರಿದ ಶ್ಯಾವಿಗೆ, ಗೋಡಂಬಿ, ದ್ರಾಕ್ಷಿ ಹಾಕಿ. 2-3 ನಿಮಿಷ ಕುದಿಸಿ ತಟ್ಟೆ ಮುಚ್ಚಿ.
    * ಈಗ ತುಪ್ಪ ಹಾಕಿಕೊಂಡು ಪಾಯಸವನ್ನು ಸವಿಯಿರಿ.

    ಸಬ್ಬಕ್ಕಿ ಪಾಯಸಕ್ಕೆ ಬೇಕಾಗುವ ಸಾಮಾಗ್ರಿಗಳು
    1. ಸಬ್ಬಕ್ಕಿ – 1 ಕಪ್
    2. ಹಾಲು – ಅರ್ಧ ಲೀಟರ್
    3. ಸಕ್ಕರೆ – 4 ಚಮಚ
    4. ಏಲಕ್ಕಿ ಪುಡಿ – 1 ಚಮಚ
    5. ಗೋಡಂಬಿ – 10
    6. ದ್ರಾಕ್ಷಿ – 10
    7. ತುಪ್ಪ – ಒಂದು ಚಮಚ

    ಮಾಡುವ ವಿಧಾನ
    * ಮೊದಲಿಗೆ ಒಂದು ಕಪ್ ಸಬ್ಬಕ್ಕಿಗೆ ಅರ್ಧ ಕಪ್ ನೀರು ಸೇರಸಿ, 2-3 ಗಂಟೆ ನೆನೆಸಿ.
    * ಇತ್ತ ಒಂದು ಚಮಚ ತುಪ್ಪ ಹಾಕಿ ಗೋಡಂಬಿಯನ್ನ ಹುರಿದಿಟ್ಟುಕೊಳ್ಳಿ
    * ಈಗ ಒಂದು ಬೌಲಿಗೆ ಹಾಲು ಹಾಕಿ ಕುದಿಸಿರಿ.
    * ಹಾಲು ಬಿಸಿಯಾಗುತ್ತಲೆ ನೆನೆಸಿದ ಸಬ್ಬಕ್ಕಿಯನ್ನು ಹಾಕಿ, ತಿರುಗಿಸುತ್ತೀರಿ.
    * ಸಬ್ಬಕ್ಕಿ ತಳ ಹಿಡಿಯದಂತೆ ತಿರುವುತ್ತಾ, 4-5 ನಿಮಿಷ ಬೇಯಿಸಿಕೊಳ್ಳಿ.
    * ಸಬ್ಬಕ್ಕಿ ಚೆನ್ನಾಗಿ ಬೆಂದ ನಂತರ ಸಕ್ಕರೆಯನ್ನು ಹಾಕಿ.
    * ಸಕ್ಕರೆ ಕರಗುತ್ತಲೆ ಏಲಕ್ಕಿ ಪುಡಿಯನ್ನು ಹಾಕಿ.
    * ಈಗ ಹುರಿದಿಟ್ಟುಕೊಂಡಿದ್ದ ಗೋಡಂಬಿಯನ್ನು ಹಾಕಿ
    * ದ್ರಾಕ್ಷಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ರುಚಿರುಚಿಯಾದ ಸಬ್ಬಕ್ಕಿ ಪಾಯಸ ಸವಿಯಲು ಸಿದ್ಧ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv