Tag: Saba Azad

  • ಗರ್ಲ್‌ಫ್ರೆಂಡ್ ಸಬಾ ಜೊತೆ ವಾಸಿಸಲು ದುಬಾರಿ ಮನೆ ಖರೀದಿಸಿದ ಹೃತಿಕ್ ರೋಷನ್

    ಗರ್ಲ್‌ಫ್ರೆಂಡ್ ಸಬಾ ಜೊತೆ ವಾಸಿಸಲು ದುಬಾರಿ ಮನೆ ಖರೀದಿಸಿದ ಹೃತಿಕ್ ರೋಷನ್

    ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಸದ್ಯ ‘ಫೈಟರ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಿಂತ ತಮ್ಮ ಗರ್ಲ್‌ಫ್ರೆಂಡ್ ಸಬಾ ವಿಷ್ಯವಾಗಿಯೇ ಹೆಚ್ಚೆಚ್ಚು ಸುದ್ದಿಯಾಗುತ್ತಿದ್ದಾರೆ. ಗೆಳತಿ ಸಬಾ (Saba) ಜೊತೆ ವಾಸಿಸಲು ಮದುವೆಗೂ ಮುನ್ನವೇ ಐಷಾರಾಮಿ ಅಪಾರ್ಟ್‌ಮೆಂಟ್‌ವೊಂದನ್ನ ಖರೀದಿಸಿದ್ದಾರೆ.

    ಹೃತಿಕ್ ರೋಷನ್ ಅವರು ಸುಸೇನ್ ಖಾನ್‌ಗೆ 2014ರಲ್ಲಿ ಡಿವೋರ್ಸ್ ನೀಡಿದ್ದರು. ನಂತರ ಸಬಾ ಆಜಾದ್ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಈಗಾಗಲೇ ಇಬ್ಬರು ಲಿವಿನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಪ್ರೇಯಸಿ ಸಬಾಗೆ ಹೃತಿಕ್ ದುಬಾರಿ ಮನೆ ಉಡುಗೊರೆಯಾಗಿ ನೀಡಿದ್ದಾರೆ.

    ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಇಬ್ಬರೂ ಒಟ್ಟಿಗೆ ಇರಲು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರಂತೆ. ಇಬ್ಬರೂ ಇದೀಗ ಹೊಸ ಮನೆಗೆ ಸದ್ಯದಲ್ಲೇ ಶಿಫ್ಟ್ ಆಗುತ್ತಿದ್ದಾರೆ ಎನ್ನಲಾಗಿದೆ. ಮುಂಬೈನ ಜುಹು – ವರ್ಸೋವ ರಸ್ತೆಯಲ್ಲಿ ಹೃತಿಕ್ ಮತ್ತು ಸಬಾ ಹೊಸ ಮನೆ ಇದ್ದು 3 ಫ್ಲೋರ್ ಇರುವ ಅಪಾರ್ಟ್‌ಮೆಂಟ್ ಇದಾಗಿದೆ. ಬರೋಬ್ಬರಿ 100 ಕೋಟಿ ರೂಪಾಯಿಗೆ ಈ ಹೊಸ ಮನೆ ಖರೀದಿ ಮಾಡಿದ್ದಾರೆ. ಹೊಸ ಮನೆ ಸಮುದ್ರದ ಅದ್ಭುತ ನೋಟವನ್ನು ಹೊಂದಿದ್ದು 15 ಮತ್ತು 16ನೇ ಫ್ಲೋರ್ ಡ್ಯುಪ್ಲೆಕ್ಸ್ ಹಾಗೂ ಮತ್ತೊಂದು ಫ್ಲೋರ್ ಇದೆಯಂತೆ. ಇಬ್ಬರೂ ಒಟ್ಟಿಗೆ ವಾಸಿಸಲು ನಿರ್ಧರಿಸಿರುವುದು ನೋಡಿದ್ರೆ ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದನ್ನೂ ಓದಿ:ಜನಾರ್ದನ್ ರೆಡ್ಡಿಗೂ ‘ಆದಿಕೇಶವ’ ಸಿನಿಮಾ ಕಥೆಗೂ ಸಂಬಂಧ ಇದೆಯಾ?

    ಹೃತಿಕ್ ರೋಷನ್ ಕುಟುಂಬದ ಜೊತೆ ಸಬಾಗೆ ಒಳ್ಳೆಯ ಒಡನಾಟವಿದೆ. ಇಬ್ಬರ ಪ್ರೀತಿಗೆ ಕುಟುಂಬದ ಕಡೆಯಿಂದ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ವರ್ಷದ ಕೊನೆಯಲ್ಲಿ ಮದುವೆಯಾದರು ಅಚ್ಚರಿಪಡಬೇಕಿಲ್ಲ.

  • ಗರ್ಲ್‌ಫ್ರೆಂಡ್ ಜೊತೆಗಿನ ಫೋಟೋ ಹಂಚಿಕೊಂಡ ಹೃತಿಕ್ ರೋಷನ್

    ಗರ್ಲ್‌ಫ್ರೆಂಡ್ ಜೊತೆಗಿನ ಫೋಟೋ ಹಂಚಿಕೊಂಡ ಹೃತಿಕ್ ರೋಷನ್

    ಬಾಲಿವುಡ್ (Bollywood) ನಟ ಹೃತಿಕ್ ರೋಷನ್ (Hrithik Roshan) ಸದ್ಯ ತಮ್ಮ ಸಿನಿಮಾಗಿಂತ ಗರ್ಲ್‌ಫ್ರೆಂಡ್ ಸಬಾ ಆಜಾದ್ (Saba Azad) ಜೊತೆಗಿನ ರಿಲೇಷನ್‌ಶಿಪ್ ವಿಚಾರವಾಗಿಯೇ ಸುದ್ದಿ ಮಾಡ್ತಿದ್ದಾರೆ. ಇದೀಗ ಸಬಾ ಜೊತೆಗಿನ ಹೊಸ ಫೋಟೋಶೂಟ್ ಅನ್ನು ಹೃತಿಕ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಹೃತಿಕ್- ಸಬಾ ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ. ಮೊದಲ ಪತ್ನಿ ಜೊತೆ ಡಿವೋರ್ಸ್ ಆದ ಮೇಲೆ ಸಬಾ ಜೊತೆ ಹೃತಿಕ್ ಎಂಗೇಜ್ ಆಗಿದ್ದಾರೆ. ಈ ವರ್ಷವೇ ಸಬಾ-ಹೃತಿಕ್ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ ಎಂಬ ಸುದ್ದಿಯೂ ಇದೆ.

     

    View this post on Instagram

     

    A post shared by Hrithik Roshan (@hrithikroshan)

    ಇತ್ತೀಚಿನ ನೀತಾ ಮುಕೇಶ್ ಅಂಬಾನಿ ಅವರ ಖಾಸಗಿ ಕಾರ್ಯಕ್ರಮದಲ್ಲಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಈವೆಂಟ್‌ಗೆ ಹೃತಿಕ್ ಜೋಡಿ ಕೂಡ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಕ್ಲಿಕ್ಕಿಸಿದ ಫೋಟೋವನ್ನ ಸಾಮಾಜಿಕ ಜಾಲಾತಾಣದಲ್ಲಿ ನಟ ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ನಟಿ ಸಬಾ ಕೆಂಪು ಬಣ್ಣದ ಉಡುಗೆಯಲ್ಲಿ ಮಿಂಚಿದ್ರೆ, ಹೃತಿಕ್ ಕಪ್ಪು ಧಿರಿಸಿನಲ್ಲಿ ಹ್ಯಾಡ್‌ಸಮ್ ಆಗಿ ಕಾಣಿಸಿಕೊಂಡಿದ್ದಾರೆ.

  • ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ

    ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ

    ಚಿತ್ರರಂಗದಲ್ಲಿ ಗಟ್ಟಿಮೆಳದ ಸೌಂಡ್ ಜೋರಾಗಿದೆ. ಅಥಿಯಾ ಶೆಟ್ಟಿ-ರಾಹುಲ್, ಸಿದ್ ಮತ್ತು ಕಿಯಾರಾ ಜೋಡಿ ನಂತರ ಹೃತಿಕ್ ರೋಷನ್ (Hrithik Roshan) ಮತ್ತು ಸಬಾ (Saba Azad) ಮದುವೆ (Wedding) ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಇದೀಗ ಹೃತಿಕ್- ಸಬಾ ಮದುವೆಯಾಗುತ್ತಿರೋದು ನಿಜಾನಾ ಎಂಬುದರ ಬಗ್ಗೆ ಹೃತಿಕ್ ತಂದೆ (Father) ರಾಕೇಶ್ ರೋಷನ್ (Rakesh Roshan) ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ನನ್ನ ಮತ್ತು ಮಕ್ಕಳನ್ನು ಬೀದಿಗೆ ತಳ್ಳಿದ: ನವಾಜುದ್ದೀನ್ ವಿರುದ್ಧ ಪತ್ನಿ ಕಣ್ಣೀರು

    ಬಾಲಿವುಡ್‌ನ (Bollywood) ಟಾಪ್ ನಟ ಹೃತಿಕ್ ರೋಷನ್ ಇದೀಗ ಸಿನಿಮಾಗಿಂತ ಸಬಾ ಜೊತೆಗಿನ ಡೇಟಿಂಗ್ ವಿಚಾರವಾಗಿಯೇ ಸಖತ್ ಸುದ್ದಿಯಲ್ಲಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಲಿಪ್ ಕಿಸ್ ಮಾಡುತ್ತಾ, ಮುಂಬೈ ಬೀದಿಗಳಲ್ಲಿ ಕೈ ಕೈ ಹಿಡಿದು ಸುತ್ತಾಡುತ್ತಿದ್ದಾರೆ. ಬಿಟೌನ್ ಪಾರ್ಟಿಗಳಿಗೆ ಸಬಾ ಜೊತೆನೇ ಹೃತಿಕ್ ವಿಸಿಟ್ ಮಾಡ್ತಿದ್ದಾರೆ. ತನ್ನ ಗೆಳತಿ ಎಂದೇ ಹೃತಿಕ್ ಸ್ನೇಹಿತರ ಬಳಿ ಪರಿಚಯಿಸುತ್ತಿದ್ದಾರೆ.

    ಮಾಜಿ ಪತ್ನಿ ಸುಸಾನ್ ಖಾನ್ (Sussane Khan) ಜೊತೆ ಡಿವೋರ್ಸ್ (Divorce) ಬಳಿಕ ಸಬಾ ಆಜಾದ್ (Saba Azad) ಜೊತೆ ಸಾಕಷ್ಟು ಸಮಯದಿಂದ ಹೃತಿಕ್ ರೋಷನ್ ಡೇಟಿಂಗ್ ಮಾಡ್ತಿರೋದು ಗುಟ್ಟಾಗಿ ಉಳಿದಿಲ್ಲ. ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹೃತಿಕ್-ಸಬಾ ಮದುವೆ ಬಗ್ಗೆ ಚರ್ಚೆಯಾಗಿತ್ತು. ಈ ವರ್ಷ ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಹೃತಿಕ್ ತಂದೆ ನಿರ್ದೇಶಕ ರಾಕೇಶ್ ರೋಷನ್ ಸ್ಪಷ್ಟನೆ ನೀಡಿದ್ದಾರೆ.

    ಇವರಿಬ್ಬರ ಮದುವೆ ಬಗ್ಗೆ ಎಲ್ಲಾ ಮಾಧ್ಯಮಗಳಲ್ಲಿ ನ್ಯೂಸ್ ಆಗುತ್ತಿದ್ದಂತೆ ಹೃತಿಕ್ ತಂದೆಗೆ ಶುಭಾಶಯಗಳನ್ನ ತಿಳಿಸುತ್ತಿದ್ದಂತೆ ಈ ಮದುವೆಯ ಕುರಿತು ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಕೌತುಕದ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಪುತ್ರ ಹೃತಿಕ್ ರೋಷನ್ ಮತ್ತು ಸಾಬಾ ಆಜಾದ್ ಅವರ ವಿವಾಹದ ಕುರಿತು ಮಾತನಾಡಿರುವ ಅವರು, ನಮ್ಮ ಕುಟುಂಬದಲ್ಲಿ ಯಾವುದೇ ಮದುವೆಯ ಬಗ್ಗೆ ತಮಗೆ ತಿಳಿದಿಲ್ಲ ಎಂದಿದ್ದಾರೆ. ನಾನು ಮದುವೆ ಬಗ್ಗೆ ಇನ್ನೂ ಏನೂ ಕೇಳಿಲ್ಲ. ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಪರಸ್ಪರ ಅರ್ಥಮಾಡಿಕೊಳ್ಳಲು ಮತ್ತು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಬಿಟ್ಟು ನಮ್ಮ ಕುಟುಂಬದಲ್ಲಿ ಯಾವುದೇ ಮದುವೆಗಳ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದಿದ್ದಾರೆ. ಈ ಮೂಲಕ ತಮ್ಮ ಮಗನ ಮದುವೆಯ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

  • ಹೃತಿಕ್ ರೋಷನ್- ಸಬಾ ಮದುವೆ ಬಗ್ಗೆ ಇಲ್ಲಿದೆ ಬಿಗ್ ಅಪ್‌ಡೇಟ್

    ಹೃತಿಕ್ ರೋಷನ್- ಸಬಾ ಮದುವೆ ಬಗ್ಗೆ ಇಲ್ಲಿದೆ ಬಿಗ್ ಅಪ್‌ಡೇಟ್

    ಬಾಲಿವುಡ್ (Bollywood) ನಟ ಹೃತಿಕ್ ರೋಷನ್ (Hrithik Roshan) ಮತ್ತು ಸಬಾ ಅಜಾದ್ (Saba Azad) ಲವ್ ವಿಚಾರ ಇದೀಗ ಗುಟ್ಟಾಗಿಯೇನು ಉಳಿದಿಲ್ಲ. ಇತ್ತೀಚಿಗೆ ಸಾರ್ವಜನಿಕ ಸ್ಥಳದಲ್ಲಿ ಸಬಾ- ಹೃತಿಕ್ ಇಬ್ಬರು ಲಿಪ್ ಕಿಸ್ ಮಾಡಿ ಅಚ್ಚರಿ ಮೂಡಿಸಿದ್ದರು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಹೃತಿಕ್- ಸಬಾ ಬಗ್ಗೆ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ.

    ನಟ ಹೃತಿಕ್ ರೋಷನ್ ತಮ್ಮ ಮೊದಲ ಪತ್ನಿಗೆ ಡಿವೋರ್ಸ್ ಕೊಟ್ಟ ಮೇಲೆ ಸಬಾ ಜೊತೆ ಡೇಟಿಂಗ್ ಮಾಡ್ತಿದ್ದಾರೆ. ಮುಂಬೈ ಮಹಾನಗರಿಯಲ್ಲಿ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಬಿಟೌನ್ ಸ್ಟಾರ್ ಪಾರ್ಟಿಗಳಿಗೂ ಜೊತೆಯಾಗಿ ಹೋಗುತ್ತಿದ್ದಾರೆ. ಹೀಗಿರುವಾಗ ಹೃತಿಕ್ ಮದುವೆ (Wedding) ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ: ನಟ ಗೋಪಿಚಂದ್‌ಗೆ ಸ್ಯಾಂಡಲ್‌ವುಡ್‌ ನಿರ್ದೇಶಕ ಎ.ಹರ್ಷ ಆ್ಯಕ್ಷನ್ ಕಟ್

    ಈ ವರ್ಷ ನವೆಂಬರ್‌ನಲ್ಲಿ ಹೃತಿಕ್ ರೋಷನ್- ಸಬಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಟ್ವೀಟ್ ವೈರಲ್ ಆಗಿದೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಈ ಮದುವೆ ಸುದ್ದಿ ನಿಜಾನಾ ಎಂಬುದನ್ನ ಹೃತಿಕ್-ಸಬಾ ಇಬ್ಬರು ಸ್ಪಷ್ಟನೆ ನೀಡಿಲ್ಲ.

    ಹೃತಿಕ್ ರೋಷನ್ ಸದ್ಯ ʻಫೈಟರ್ʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ತೆರೆಯ ಮೇಲೆ ರೊಮ್ಯಾನ್ಸ್ ಮಾಡಲು ಈ ಜೋಡಿ ರೆಡಿಯಾಗಿದೆ.

  • ಹೃತಿಕ್ ರೋಷನ್ ಸಹೋದರಿ, ಬರ್ತ್‌ಡೇ ಪಾರ್ಟಿಯಲ್ಲಿ ಸಬಾ ಆಜಾದ್

    ಹೃತಿಕ್ ರೋಷನ್ ಸಹೋದರಿ, ಬರ್ತ್‌ಡೇ ಪಾರ್ಟಿಯಲ್ಲಿ ಸಬಾ ಆಜಾದ್

    ಬಾಲಿವುಡ್‌ನ(Bollywood) ಸೂಪರ್ ಸ್ಟಾರ್ ಹೃತಿಕ್ ರೋಷನ್(Hrithik Roshan), ಸಬಾ ಆಜಾದ್ ಜೊತೆಗಿನ ಡೇಟಿಂಗ್ ವಿಚಾರವಾಗಿ ಸದ್ದು ಮಾಡುತ್ತಿರುತ್ತಾರೆ. ಇದೀಗ ಹೃತಿಕ್ ಸಹೋದರಿಯ ಬರ್ತ್‌ಡೇ ಪಾರ್ಟಿಯಲ್ಲಿ ಸಬಾ ಕಾಣಿಸಿಕೊಂಡಿದ್ದಾರೆ. ಹೃತಿಕ್ ಸಹೋದರಿಗೆ ಶುಭ ಹಾರೈಸಿದ್ದಾರೆ.

    ಮೊದಲ ಪತ್ನಿ ಸುಸನ್ನೆ ಖಾನ್ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮೇಲೆ ಸಬಾ ಆಜಾದ್(Saba Azad) ಜೊತೆ ಹೃತಿಕ್ ರೋಷನ್ ಡೇಟಿಂಗ್‌ನಲ್ಲಿದ್ದಾರೆ. ಇದೀಗ ಹೃತಿಕ್ ಸಹೋದರ ಸಂಬಂಧಿ ಪಶ್ಮಿನಾ ರೋಷನ್ ಬರ್ತ್‌ಡೇ ಪಾರ್ಟಿಯಲ್ಲಿ ಸಭಾ ಭಾಗಿದ್ದಾರೆ. ಈ ಫೋಟೋ ಮತ್ತು ವಿಡಿಯೋ ಇದೀಗ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Pashmina Roshan (@pashminaroshan)

    ಹೃತಿಕ್ ರೋಷನ್ ಮತ್ತು ಸಬಾ ಅವರ ರಿಲೇಷನ್‌ಶಿಪ್ ವಿಚಾರ ಎಲ್ಲೂ ಅಧಿಕೃತವಾಗಿ ಹೇಳದೇ ಇದ್ದರೂ ಪ್ರತಿ ಸಮಾರಂಭದಲ್ಲೂ ಕೂಡ ಒಟ್ಟಿಗೆ ಹೈಲೈಟ್ ಆಗುತ್ತಿದ್ದಾರೆ. ಹೃತಿಕ್ ಕುಟುಂಬದ ಜೊತೆಗೂ ಸಬಾಗೆ ಒಳ್ಳೆಯ ಒಡನಾಟವಿದೆ. ಇದನ್ನೂ ಓದಿ:ಸಾನಿಯಾ, ಮಲಿಕ್ ದಾಂಪತ್ಯ ಜೀವನ ಅಂತ್ಯ? – ಹುಳಿ ಹಿಂಡಿದ ಸ್ಟಾರ್ ನಟಿ

    ಇನ್ನೂ ದೀಪಿಕಾ ಪಡುಕೋಣೆ ಜೊತೆ `ಫೈಟರ್’ ಚಿತ್ರದ ಮೂಲಕ ಹೃತಿಕ್ ರೋಷನ್ ತೆರೆಯ ಮೇಲೆ ಮಿಂಚಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗರ್ಲ್‍ಫ್ರೆಂಡ್, ಮಾಜಿ ಪತ್ನಿ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ ಹೃತಿಕ್ ರೋಷನ್

    ಗರ್ಲ್‍ಫ್ರೆಂಡ್, ಮಾಜಿ ಪತ್ನಿ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ ಹೃತಿಕ್ ರೋಷನ್

    ಬಾಲಿವುಡ್ ಕ್ರಿಶ್, ಸೂಪರ್ ಡ್ಯಾನ್ಸರ್ ಹೃತಿಕ್ ರೋಷನ್ ಗರ್ಲ್‍ಫ್ರೆಂಡ್ ಸಾಬಾ ಆಜಾದ್ ಜೊತೆ ಸುತ್ತಾಡುತ್ತಿದ್ದಾರೆ ಎಂಬ ಸುದ್ದಿ ಬಿ’ಟೌನ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಹೃತಿಕ್ ರೋಷನ್ ಗರ್ಲ್‍ಫ್ರೆಂಡ್ ಸಾಬಾ ಆಜಾದ್, ಮಾಜಿ ಪತ್ನಿ ಸುಸಾನೆ ಖಾನ್ ಅವರೊಂದಿಗೆ ಗೋವಾದಲ್ಲಿ ಪಾರ್ಟಿ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗುತ್ತಿದೆ.

    ಮಂಗಳವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಹೃತಿಕ್ ರೋಷನ್ ಮತ್ತು ಸಾಬಾ ಆಜಾದ್ ಅವರು ಕೈ-ಕೈ ಹಿಡಿದುಕೊಂಡಿರುವುದು ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಅಲ್ಲಿಂದ ಈ ಜೋಡಿ ಪಾರ್ಟಿಗೆಂದು ಗೋವಾಗೆ ಹಾರಿದ್ದರು. ಇದರಲ್ಲಿ ಮತ್ತೊಂದು ವಿಶೇಷವೆಂದರೆ ಈ ಪಾರ್ಟಿಯಲ್ಲಿ ಹೃತಿಕ್ ಅವರ ಮಾಜಿ ಪತ್ನಿ ಸುಸಾನೆ ಖಾನ್ ಅವರು ಇರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇದನ್ನೂ ಓದಿ:  ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ 

    ಹಿಂದಿನ ಗುಟ್ಟೇನು?
    ಗೋವಾದಲ್ಲಿ ಸುಸಾನೆ ಖಾನ್ ಅವರ ಹೊಸ ರೆಸ್ಟೋರೆಂಟ್ ವೆಡ್ರೊ ಉದ್ಘಾಟನೆಯ ಹಿನ್ನೆಲೆ ಅವರು ತಮ್ಮ ಆಪ್ತ ವರ್ಗವನ್ನು ಪಾರ್ಟಿಗೆ ಕರೆದಿದ್ದಾರೆ. ಈ ಹಿನ್ನೆಲೆ ಪೂಜಾ ಬೇಡಿ, ಫರಾ ಖಾನ್ ಅಲಿ, ಸುಸಾನೆ ಖಾನ್ ತನ್ನ ಬಾಯ್‍ಫ್ರೆಂಡ್ ಅಸ್ರ್ಲಾನ್ ಗೋನಿಯೊಂದಿಗೆ ಬಂದಿದ್ದರು. ಅದೇ ರೀತಿ ಈ ಪಾರ್ಟಿಗೆ ಹೃತಿಕ್ ರೋಷನ್ ಮತ್ತು ಸಾಬಾ ಆಜಾದ್ ಅವರನ್ನು ಆಹ್ವಾನಿಸಲಾಗಿತ್ತು. ನಿರ್ದೇಶಕ ಅಭಿಷೇಕ್ ಕಪೂರ್, ಫರಾ ಖಾನ್ ಅಲಿ ಅವರ ಸಹೋದರ ಜಾಯೆದ್ ಖಾನ್ ಕೂಡ ಬ್ಯಾಷ್ನಲ್ಲಿ ಉಪಸ್ಥಿತರಿದ್ದರು. ಹೊಸ ರೆಸ್ಟೋರೆಂಟ್ ಸಂಭ್ರಮಕ್ಕೆ ಬಾಲಿವುಡ್ ತಾರೆಯರು ಸೇರಿಕೊಂಡಿದ್ದಾರೆ.

    ಈ ಎಲ್ಲ ಫೋಟೋಗಳನ್ನು ಸುಸಾನೆ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಮೊದಲಬಾರಿಗೆ ಹೃತಿಕ್ ಮತ್ತು ಸಬಾ ಗಾಸಿಪ್ ನಂತರ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಮಾಜಿ ಪತ್ನಿ ಮತ್ತು ಬಾಯ್‍ಫ್ರೆಂಡ್ ಜೊತೆ ಕಾಣಿಸಿಕೊಂಡಿರುವುದು ಫುಲ್ ಸುದ್ದಿಯಾಗಿದೆ. ಇವರ ಫೋಟೋಗಳು ಸಹ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬರ್ತ್‍ಡೇ ಸ್ಪೆಷಲ್: ಕಾಶ್ಮೀರಿ ಮುಸ್ಲಿಂ ಹುಡುಗಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ

  • ಹೃತಿಕ್, ಸಬಾ ಲವ್ ಸ್ಟೋರಿ ರಿವೀಲ್

    ಹೃತಿಕ್, ಸಬಾ ಲವ್ ಸ್ಟೋರಿ ರಿವೀಲ್

    ಬಾಲಿವುಡ್ ಕ್ರಿಶ್ ಹೃತಿಕ್ ರೋಷನ್ ಮಾಡೆಲ್ ಮತ್ತು ನಟಿ ಸಬಾ ಆಜಾದ್ ಜೊತೆ ರಿಲೇಷನ್ಶಿಫ್ನಲ್ಲಿ ಇದ್ದಾರೆ ಎಂಬುದು ಬಾಲಿವುಡ್ ಅಂಗಳಲ್ಲಿ ಹಾಟ್ ಟಾಪಿಕ್ ಆಗಿತ್ತು. ಬಾಲಿವುಡ್ ನ್ಯೂ ಬರ್ಡ್ಸ್ ಗಳ ಅಪ್ಡೇಟ್ಸ್ ಬಗ್ಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಅದರಲ್ಲಿಯೂ ಇವರಿಬ್ಬರೂ ಸೋಶಿಯಲ್ ಮಿಡಿಯಾದಲ್ಲಿ ಒಬ್ಬರೊಬ್ಬರ ಪೋಸ್ಟ್‌ಗೆ ಕಾಮೆಂಟ್ ಮತ್ತು ಶೇರ್ ಮಾಡುವುದನ್ನು ನೋಡಿ ಇವರು ಪಕ್ಕ ಲವ್ ಅಲ್ಲಿ ಇದ್ದಾರೆ ಎಂಬ ಗಾಸಿಪ್ ಎಲ್ಲ ಕಡೆ ಹರಿದಾಡುತ್ತಿದೆ.

    Hrithik Roshan-Saba Azad:ಬಹಿರಂಗವಾಯ್ತಾ ಹೃತಿಕ್ ರೋಷನ್-ಸಬಾ ಆಜಾದ್ ಲವ್‌ ಮ್ಯಾಟರ್?

    ಹೃತಿಕ್ ಮತ್ತು ಸಬಾ ಈ ಗಾಸಿಪ್ ಬಗ್ಗೆ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ ಪುಣೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೃತಿಕ್ ಮತ್ತು ಸಬಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಇತ್ತೀಚೆಗೆ ಸಬಾ ಪೋಸ್ಟ್ ಶೇರ್ ಮಾಡಿದ ಹೃತಿಕ್, ಇದಕ್ಕಾಗಿ ಅಲ್ಲಿರಬೇಕೆಂದು ನಾನು ಬಯಸುತ್ತೇನೆ. ಅಸಾಧಾರಣ, ಅದ್ಭುತ ಮಹಿಳೆ ಎಂದು ಬರೆದು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ – ನಾನು ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

    ಹೊಗಳಿಕೆಗೆ ಖುಷಿಪಟ್ಟ ಸಬಾ ಹೃತಿಕ್ ಪೋಸ್ಟ್‌ನನ್ನು ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ನೀವು ಇಲ್ಲಿದ್ದರೆ ನನಗೆ ಖುಷಿ ಇರುತ್ತೆ. ನೀವು ನನ್ನ ಪ್ರೀತಿಯ ಹೃತಿಕ್ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗಳನ್ನು ನೋಡಿದರೆ ಇವರಿಬ್ಬರ ನಡುವೆ ಕೇವಲ ಸ್ನೇಹವಿಲ್ಲ ಎಂಬುದು ತಿಳಿಯುತ್ತಿದೆ. ಆದರೆ ಇದರ ಬಗ್ಗೆ ಈ ಲವ್ ಬರ್ಡ್ಸ್ ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆ ಕೊಟ್ಟಿಲ್ಲ.

     

    View this post on Instagram

     

    A post shared by Saba Azad (@sabazad)

    ಹೃತಿಕ್, ಸಬಾ ಮೇಲೆ ಹೊಗಳಿಕೆ ಮಾತುಗಳ ಕಾಮೆಂಟ್ ಮಾಡಿರುವುದು ಇದೇ ಮೊದಲೇನೂ ಅಲ್ಲ. ಮಾರ್ಚ್ 7 ರಂದು ಸಬಾ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋದಲ್ಲಿ ಸಬಾ ಹಾಲಿವುಡ್ ನಟಿ ಆಡ್ರೆ ಹೆಪ್ಬರ್ನ್ ಅವರಂತೆ ಉಡುಗೆ ಧರಿಸಿದ್ದರು. ಇದನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಈ ಪೋಸ್‌ಗೆ ಹೃತಿಕ್ ‘ಟೈಮ್ಲೆಸ್’ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆ ನನಗೆ ಸಿನಿಮಾ ಮಾಡೋ ಭಾಗ್ಯ ಸಿಗಲಿಲ್ಲ: ಉಪೇಂದ್ರ 

    ಈ ಲವ್ ಬರ್ಡ್ಸಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದು, ಇವರು ಲವ್‌ನಲ್ಲಿ ಇರುವುದನ್ನು ಪರೋಕ್ಷವಾಗಿ ಅಭಿಮಾನಿಗಳಿಗೆ ತಿಳಿಸುತ್ತಿದ್ದಾರೆ.

  • ಸದ್ಯ ಡೇಟಿಂಗ್, ಮುಂದೆ ಮದ್ವೆ, ಹೃತಿಕ್ –ಸಬಾ ಜೋಡಿ ಪ್ರೇಮ್ ಕಹಾನಿ

    ಸದ್ಯ ಡೇಟಿಂಗ್, ಮುಂದೆ ಮದ್ವೆ, ಹೃತಿಕ್ –ಸಬಾ ಜೋಡಿ ಪ್ರೇಮ್ ಕಹಾನಿ

    ಬಿಟೌನ್  ಅಂಗಳದಲ್ಲಿ ಮತ್ತೊಂದು ಜೋಡಿಯ ಪ್ರೇಮ್ ಕಹಾನಿ ಹರಿದಾಡುತ್ತಿದೆ. ಎಂಟು ವರ್ಷಗಳ ಹಿಂದೆ ಸುಸೇನ್ ಖಾನ್ ಅವರಿಂದ ಡಿವೋರ್ಸ್ ಪಡೆದಿರುವ ಹೃತಿಕ್ ರೋಷನ್, ಇದೀಗ ಮತ್ತೋರ್ವ ಹುಡುಗಿಯ ಪ್ರೇಮಬಲೆಗೆ ಸಿಲುಕಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಬರೀ ಕೇಳಿ ಬರುವುದಷ್ಟೇ ಅಲ್ಲ, ಆ ಹುಡುಗಿಯೊಂದಿಗೆ ಡೇಟಿಂಗ್ ಕೂಡ ಮಾಡುತ್ತಿದ್ದಾರೆ ಎನ್ನುವುದು ಹೃತಿಕ್ ಆತ್ಮೀಯರ ಅಭಿಪ್ರಾಯ. ಅದಕ್ಕೆ ಪೂರಕ ಎನ್ನುವಂತೆ ಹೃತಿಕ್ ಮತ್ತು ಆ ಹುಡುಗಿ ಹಲವು ರೆಸ್ಟೋರೆಂಟ್ ಗಳಲ್ಲಿ ಒಟ್ಟೊಟ್ಟಿಗೆ ಪಾರ್ಟಿ ಮಾಡುವುದು ಮತ್ತು ಹೃತಿಕ್ ಮನೆಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದು ಕಾಮನ್ ಆಗಿದೆ. ಇದನ್ನೂ ಓದಿ : ಪಂಜಾಬ್ ನಿಯೋಜಿತ ಸಿಎಂ ಭಗವಂತ್ ಮಾನ್ ನಟ ಹಾಗೂ ಕಾಮಿಡಿ ಕಲಾವಿದ

    ಹೃತಿಕ್ ಸದ್ಯ ಡೇಟಿಂಗ್ ನಲ್ಲಿರುವ ಹುಡುಗಿಯ ಹೆಸರು ಸಬಾ ಆಜಾದ್.  ಹೃತಿಕ್ ಅವರ ಮಾಜಿ ಪತ್ನಿ ಸುಸೇನ್ ಖಾನ್ ಅವರು ಖಾಸಾ ಗೆಳತಿ. ಈ ಮೂವರು ಕಾಮನ್ ಫ್ರೆಂಡ್ಸ್. ಹಾಗಾಗಿ ಸಬಾ ಮತ್ತು ಹೃತಿಕ್ ಮಧ್ಯೆ ಪ್ರೇಮದ ಹೂವು ಅರಳಿತ್ತು. ಆ ಹೂವನ್ನು ಹಾಗೆಯೇ ಕಾಪಾಡಿಕೊಂಡು ಬಂದಿದ್ದಾರಂತೆ ಹೃತಿಕ್. ಇದನ್ನೂ ಓದಿ : ಕಿಕ್ ಏರಿಸಲು ಹೊರಟಿದ್ದ ಸಮಂತಾಗೆ ‘ನೋ ನೋ’ ಅಂದ ಟ್ರೋಲಿಗರು

    ಇವರಿಬ್ಬರೂ ಡೇಟಿಂಗ್ ನಲ್ಲಿದ್ದಾರೆ ಅನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳನ್ನು ಕೊಡುತ್ತದೆ ಬಾಲಿವುಡ್. ಇಬ್ಬರೂ ಅನೇಕ ಮದುವೆಗಳಿಗೆ ಒಟ್ಟಿಗೆ ಹೋಗಿದ್ದಾರೆ. ಒಬ್ಬರಿಗೊಬ್ಬರು ಹೊಗಳಿಕೊಂಡಿರುವ ಪೋಸ್ಟ್ ಗಳು ಸೋಷಿಯಲ್ ಮೀಡಿಯಾದಲ್ಲಿವೆ. ಸ್ನೇಹಿತ ಫರ್ಹಾನ್ ಮದುವೆಗೆ ಸಬಾರನ್ನು ಕರೆದುಕೊಂಡು ಹೋಗಿದ್ದ ಹೃತಿಕ್. ಕೆಲ ತಿಂಗಳ ಹಿಂದೆ ಗೋವಾದಲ್ಲೂ ಈ ಜೋಡಿ ಕಾಣಿಸಿಕೊಂಡಿತ್ತು. ಹೀಗೆ ಅವರ ನಡುವಿನ ಪ್ರೇಮಕ್ಕೆ ನೂರಾರು ಕುರುಹುಗಳಿವೆ. ಇದನ್ನೂ ಓದಿ : ಮೆಗಾಸ್ಟಾರ್ ಚಿರಂಜೀವಿ ಹೊಸ ಚಿತ್ರದಲ್ಲಿ ಕಮಲ್ ಹಾಸನ್ ಪುತ್ರಿ ಶ್ರುತಿ

    ಹಾಗಂತ ತಾವಿಬ್ಬರೂ ಪ್ರೀತಿಸುತ್ತಿರುವುದಾಗಿಯೂ ಯಾರೂ ಹೇಳಿಲ್ಲ. ಡೇಟಿಂಗ್ ವಿಷಯದ ಬಗ್ಗೆ ಮಾತೂ ಆಡಿಲ್ಲ. ಮದುವೆಯ ಬಗ್ಗೆ ಯಾವ ಸುಳಿವೂ ಕೊಟ್ಟಿಲ್ಲ. ಆದರೂ, ರಾಶಿ ರಾಶಿ ಸುದ್ದಿಗಳು ಈ ಪ್ರೇಮಿಗಳ ವಿಷಯದಲ್ಲಿ ಕೇಳಿ ಬಂದಿದ್ದಂತೂ ಸುಳ್ಳಲ್ಲ. ಇದನ್ನೂ ಓದಿ : ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವರ್ಣರಂಜಿತ ತೆರೆ

    ಈ ಜೋಡಿಯಬಗ್ಗೆ ಈಗ ಮತ್ತೆ ಹೊಸ ಸುದ್ದಿಯೊಂದು ಬಾಲಿವುಡ್ ನಲ್ಲಿ ಹರಿದಾಡುತ್ತಿದೆ. ಇಬ್ಬರೂ ಸರಳವಾಗಿ ಹಸಮಣೆ ಏರಲಿದ್ದಾರಂತೆ. ಆ ಕುರಿತು ಎರಡೂ ಮನೆಯಲ್ಲೂ ಮಾತುಕತೆ ನಡೆದಿದೆ ಎನ್ನುವಲ್ಲಿಗೆ ಪ್ರೇಮಗೀತೆ ಮುಂದುವರೆದಿದೆ.

  • ಪಬ್ಲಿಕ್ ಪ್ಲೇಸ್‍ನಲ್ಲಿ ಗರ್ಲ್ ಫ್ರೆಂಡ್ ಜೊತೆ ಕಾಣಿಸಿಕೊಂಡ ಹೃತಿಕ್

    ಪಬ್ಲಿಕ್ ಪ್ಲೇಸ್‍ನಲ್ಲಿ ಗರ್ಲ್ ಫ್ರೆಂಡ್ ಜೊತೆ ಕಾಣಿಸಿಕೊಂಡ ಹೃತಿಕ್

    ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್, ಸಬಾ ಆಜಾದ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    Hrithik Roshan

    ಶುಕ್ರವಾರ ಮುಂಬೈನ ರೆಸ್ಟೋರೆಂಟ್‍ವೊಂದರಲ್ಲಿ ಡಿನ್ನರ್ ಮುಗಿಸಿ ಬರುತ್ತಿದ್ದ ಈ ಜೋಡಿ ಪಾಪರಾಜಿಗಳ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಹೃತಿಕ್ ಹಾಗೂ ಸಬಾ ಡೇಟ್ ಮಾಡುತ್ತಿದ್ದಾರೆ ಎಂಬ ವದಂತಿಗಳ ಮಧ್ಯೆ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿರುವುದು  ಫ್ಯಾನ್ಸ್‌ಗೆ ಮತ್ತಷ್ಟು ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ದೀಪಿಕಾ ಪಡುಕೋಣೆಯನ್ನು ಸಮರ್ಥಿಸಲು ಬಂದಿಲ್ಲ: ಕಂಗನಾ ರಣಾವತ್

    ಸಬಾ ಜೊತೆ ಸ್ವಲ್ಪ ಹೊತ್ತು ರೆಸ್ಟೋರೆಂಟ್‍ನಲ್ಲಿ ಕಾಲ ಕಳೆದ ಹೃತಿಕ್ ರೋಷನ್ ನಂತರ ಅಲ್ಲಿಂದ ಹೊರಗೆ ಬರುತ್ತಿದ್ದಂತೆ ಸಬಾ ಕೈ ಹಿಡಿದುಕೊಂಡು ಕಾರಿಗೆ ಹತ್ತಿಸಿ ಹೊರಡುತ್ತಾರೆ. ಈ ವೇಳೆ ಹೃತಿಕ್ ಬಿಳಿ ಬಣ್ಣದ ಟಿ ಶರ್ಟ್, ಚೆಕ್ಸ್ ಶರ್ಟ್ ಮತ್ತು ಕಪ್ಪು ಬಣ್ಣದ ಟೋಪಿಯನ್ನು ಧರಿಸಿದ್ದರು. ಅಲ್ಲದೇ ಸಬಾ ಬ್ಲೂ ಕಲರ್ ಡೆನಿಮ್ ಜೀನ್ಸ್ ಮತ್ತು ಸ್ವೆಟ್ ಶರ್ಟ್ ಧರಿಸಿದ್ದರು. ಜೊತೆಗೆ ಫ್ರೀ ಹೇರ್ಸ್ ಬಿಟ್ಟು ಮುಖ ಮರೆಮಾಚಿಕೊಂಡು ಕಾರಿಗೆ ಹತ್ತುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದೇ ವೇಳೆ ಕೋವಿಡ್ ಮುನ್ನೆಚ್ಚರಿಕೆಯಿಂದ ಹೃತಿಕ್ ಮತ್ತು ಸಬಾ ಇಬ್ಬರು ಫೇಸ್ ಮಾಸ್ಕ್ ಧರಿಸಿದ್ದರು.

     

    View this post on Instagram

     

    A post shared by Viral Bhayani (@viralbhayani)

    ಸದ್ಯ ಹೃತಿಕ್ ಸಬಾ ಅವರ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕ್ಯೂಟ್ ಪೇರ್, ಹೃತಿಕ್ ಸಬಾ ಕೈ ಹಿಡಿದು ಕಾಳಜಿವಹಿಸುವುದನ್ನು ನೋಡಿ ಲಕ್ಕಿ ಸಬಾ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ನಮ್ಮಲ್ಲೇ ಒಳ್ಳೊಳ್ಳೆಯ ನಟಿಯರಿದ್ದಾರೆ, ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ: ಶಿವಣ್ಣ

    ಇದೀಗ ಹೃತಿಕ್ ತಮಿಳಿನ ವಿಕ್ರಮ್ ವೇದಾ ಸಿನಿಮಾದ ಹಿಂದಿ ರಿಮೇಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ಸೈಫ್ ಅಲಿ ಖಾನ್ ಹೃತಿಕ್‍ಗೆ ಸಾಥ್ ನೀಡಿದ್ದಾರೆ. ಇನ್ನೂ ಈ ಸಿನಿಮಾ ಇದೇ 2022ರ ಸೆಪ್ಟೆಂಬರ್‍ನಲ್ಲಿ ಬಿಡುಗಡೆಗೊಳ್ಳಲಿದೆ.