‘ಬಿಗ್ ಬಾಸ್’ ಬೆಡಗಿ (Bigg Boss Kannada 9) ಸಾನ್ಯ ಅಯ್ಯರ್ (Saanya Iyer) ಸದಾ ಒಂದಲ್ಲಾ ಒಂದು ಗ್ಲ್ಯಾಮರಸ್ ಫೋಟೋಶೂಟ್‌ನಿಂದ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಹಾಟ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಇದನ್ನೂ ಓದಿ:ಸದ್ಯದಲ್ಲೇ ನನ್ನ ನಿಶ್ಚಿತಾರ್ಥ: ಮದುವೆಯಾಗಲಿರುವ ಹುಡುಗನ ಬಗ್ಗೆ ಸೋನು ಓಪನ್ ಟಾಕ್
ಗುರುತೇ ಸಿಗದಷ್ಟು ಹೊಸ ಲುಕ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಮಿನಿ ಸ್ಕರ್ಟ್- ಶಾರ್ಟ್ಸ್ ಧರಿಸಿ, ಅದರ ಮೇಲೋಂದು ನ್ಯೂಡ್ ಕಲರ್ ಕ್ರಾಪ್ ಟಾಪ್ ಧರಿಸಿದ್ದಾರೆ. ಅದಕ್ಕೆ ಮ್ಯಾಚ್ ಆಗುವಂತೆ ಫ್ರಂಟ್ ಕಟ್ ಮಾಡಿರೋ ಹೇರ್ ಸ್ಟೈಲ್ ಮಾಡಿಸಿಕೊಂಡು, ಹೈ ಪಾನಿಟೇಲ್ ಕಟ್ಟಿ, ಕಣ್ಣಿಗೊಂದು ದೊಡ್ಡದಾದ ಕನ್ನಡಕ ಹಾಕಿದ್ದಾರೆ.
ಈ ಫೋಟೋಶೂಟ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಸಾನ್ಯ ಲುಕ್‌ಗೆ ‘ಬಿಗ್ ಬಾಸ್ ಕನ್ನಡ 9’ರ (Bigg Boss Kannada 9) ವಿನ್ನರ್ ರೂಪೇಶ್ ಶೆಟ್ಟಿ ಹಾರ್ಟ್ ಇಮೋಜಿ ಹಾಕಿದ್ದಾರೆ. ಇನ್ನೂ ಕೆಲ ನೆಟ್ಟಿಗರು ನಟಿಯನ್ನು ಮಾಜಿ ನೀಲಿ ತಾರೆ ಮಿಯಾ ಖಲೀಫಾರನ್ನು ಹೊಲಿಸಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:10 ದಿನಗಳಲ್ಲಿ 300 ಕೋಟಿ ರೂ. ಕ್ಲಬ್ ಸೇರಿದ ‘ಸಿಂಗಂ ಅಗೇನ್’ ಸಿನಿಮಾ
ಅಂದಹಾಗೆ, ‘ಪುಟ್ಟಗೌರಿ ಮದುವೆ’ ಸೀರಿಯಲ್ ಸೇರಿದಂತೆ ಅನೇಕ ಪ್ರಾಜೆಕ್ಟ್‌ಗಳಲ್ಲಿ ಬಾಲನಟಿಯಾಗಿ ಸಾನ್ಯ ಕೆಲಸ ಮಾಡಿದರು. ಆ ನಂತರ ‘ಬಿಗ್ ಬಾಸ್ ಕನ್ನಡ 9’ರಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು.
ಈ ವರ್ಷ ಸಮರ್ಜಿತ್ ಲಂಕೇಶ್‌ಗೆ ನಾಯಕಿಯಾಗಿ ಗೌರಿ ಸಿನಿಮಾದಲ್ಲಿ ಸಾನ್ಯ ಅಯ್ಯರ್ ನಟಿಸಿದರು. ಈ ಚಿತ್ರವನ್ನು ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿದರು. ಈ ಚಿತ್ರಕ್ಕೆ ಅಭಿಮಾನಿಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಇಂದ್ರಜಿತ್ ಲಂಕೇಶ್ (Indrajit Lankesh) ನಿರ್ದೇಶನದಲ್ಲಿ ಧ್ಯಾನ್ ಮತ್ತು ಸದಾ ನಟಿಸಿದ್ದ ಸೂಪರ್ ಹಿಟ್ ‘ಮೊನಾಲಿಸಾ’ (Monalisa) ಚಿತ್ರ ತೆರೆಕಂಡು ಇಪ್ಪತ್ತು ವರ್ಷಗಳಾಗಿದೆ. ಚಿತ್ರತಂಡದ ಸದಸ್ಯರೊಡನೆ ಕೇಕ್ ಕಟ್ ಮಾಡುವ ಮೂಲಕ ‘ಮೊನಾಲಿಸಾ’ ಚಿತ್ರದ 20 ವರ್ಷಗಳ ಸಂಭ್ರಮವನ್ನು ಆಚರಿಸಲಾಯಿತು. ನಿರ್ದೇಶಕ ಇಂದ್ರಜಿತ್ ಲಂಕೇಶ್, ನಾಯಕ ಧ್ಯಾನ್ (Dhyan), ನಾಯಕಿ ಸದಾ (Sadha), ನಟ ಶರಣ್, ಸಂಭಾಷಣೆ ಬರೆದಿದ್ದ ಬಿ.ಎ.ಮಧು, ಸ್ಥಿರ ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್, ಡಿಸೈನರ್ ಮಣಿ ಸೇರಿದಂತೆ ಮೊನಾಲಿಸಾ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಈ ಸಂಭ್ರಮದ ಸಂಧರ್ಭದಲ್ಲಿ ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಅವರ ಮಗ ಸಮರ್ಜಿತ್ ಲಂಕೇಶ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ‘ಗೌರಿ’ ಚಿತ್ರದ ಮುದ್ದಾದ ಹಾಡು ಸೇರಿದಂತೆ ಎರಡು ಹಾಡುಗಳು ಬಿಡುಗಡೆಯಾಯಿತು. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ‘ಗೌರಿ’ ಹಾಡನ್ನು ಬಿಡುಗಡೆ ಮಾಡಿದರು. ಇಂದಿರಾ ಲಂಕೇಶ್ ಅವರು ಉಪಸ್ಥಿತರಿದ್ದರು. ಈ ಹಾಡನ್ನು ಇಂದ್ರಜಿತ್ ಅವರ ಸಹೋದರಿ ಗೌರಿ ಲಂಕೇಶ್ ಅವರಿಗೆ ಅರ್ಪಿಸಲಾಗಿದೆ. ಮದ್ದಾದ ಹಾಡನ್ನು ಮೊನಾಲಿಸಾ ಚಿತ್ರದ ನಾಯಕ ಧ್ಯಾನ್, ನಾಯಕಿ ಸದಾ ಹಾಗೂ ‘ಗೌರಿ’ ಚಿತ್ರದ ಜೋಡಿ ಸಮರ್ಜಿತ್ ಹಾಗೂ ಸಾನ್ಯ ಅಯ್ಯರ್ (Saanya Iyer) ಸೇರಿ ಬಿಡುಗಡೆ ಮಾಡಿದರು. ‘ಗೌರಿ’ ಹಾಡನ್ನು ಕೆ.ಕಲ್ಯಾಣ್ ಹಾಗೂ ‘ಮುದ್ದಾದ’ ಹಾಡನ್ನು ಕವಿರಾಜ್ ಬರೆದಿದ್ದಾರೆ. ಆನಂದ್ ಆಡಿಯೋ ಮೂಲಕ ಹಾಡುಗಳು ಬಿಡುಗಡೆಯಾಗಿದೆ. ಇದನ್ನೂ ಓದಿ:ಜುಲೈ19ರಂದು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಬಿಡುಗಡೆ-ದುಬೈನಲ್ಲಿ ಪ್ರೀಮಿಯರ್ ಶೋಗೆ ಮೆಚ್ಚುಗೆ
ಹಾಡು ಬಿಡುಗಡೆ ಮಾಡಿ ಮಾತನಾಡಿದ ಹಂಸಲೇಖ ಅವರು, ಸಂಗೀತ ಎಂದರೆ ಸಿನಿಮಾ. ಸಿನಿಮಾ ಎಂದರೆ ಸಂಗೀತ. ಸಂಗೀತವಿಲ್ಲದ ಸಿನಿಮಾವನ್ನು ಊಹಿಸಿಕೊಳ್ಳಲು ಅಸಾಧ್ಯ. ಸ್ಟೈಲೀಶ್ ಚಿತ್ರಗಳಿಗೆ ಹೆಸರಾದ ಇಂದ್ರಜಿತ್ ಅವರು ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ತಮ್ಮ ನಿರ್ದೇಶನದಲ್ಲೇ ಮಗನನ್ನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸುತ್ತಿದ್ದಾರೆ. ಇಂದು ನನ್ನಿಂದ ಬಿಡುಗಡೆಯಾದ ಹಾಡನ್ನು ಗೌರಿ ಲಂಕೇಶ್ ಅವರಿಗೆ ಅರ್ಪಿಸಿದ್ದಾರೆ. ‘ಗೌರಿ’ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
ನಿರ್ದೇಶಕ, ನಿರ್ಮಾಪಕ ಇಂದ್ರಜಿತ್ ಲಂಕೇಶ್ ಮಾತನಾಡಿ, ‘ಗೌರಿ’ ಚಿತ್ರದಲ್ಲಿ ಏಳು ಹಾಡುಗಳಿದೆ. ಇದೊಂದು ಸಂಗೀತ ಪ್ರಧಾನ ಚಿತ್ರವಾಗಿರುವುದರಿಂದ ಹಂಸಲೇಖ ಅವರಿಂದಲೇ ಹಾಡು ಬಿಡುಗಡೆ ಮಾಡಿಸಬೇಕೆಂಬ ಹಂಬಲ ನನ್ನಗಿತ್ತು. ಹಾಡು ಬಿಡುಗಡೆ ಮಾಡಿಕೊಟ್ಟ ಅವರಿಗೆ ವಂದನೆ. ಇಂದು ಎರಡು ಹಾಡುಗಳನ್ನು ಬಿಡುಗಡೆ ಮಾಡಿದ್ದು, ‘ಮುದ್ದಾದ’ ಹಾಡನ್ನು ಕವಿರಾಜ್ ಅವರು ಬರೆದಿದ್ದು, ನಿಹಾಲ್ ತವ್ರು ಹಾಡಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ. ಮತ್ತೊಂದು ಹಾಡನ್ನು ಕೆ.ಕಲ್ಯಾಣ್ ಅವರು ಬರೆದಿದ್ದು, ಆ ಹಾಡನ್ನು ನನ್ನ ಅಕ್ಕ ಗೌರಿ ಲಂಕೇಶ್ ಅವರಿಗೆ ಅರ್ಪಣೆ ಮಾಡಲಾಗಿದೆ. ಇನ್ನು ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು ಪ್ರಮಾಣ ಪತ್ರ ನೀಡಿದೆ. ಗಂಗಾಧರ್ ಮೈಸೂರು ಭಾಗದ ವಿತರಕರು. ಮೈಸೂರು ಒಂದನ್ನು ಬಿಟ್ಟು ವಿಶಾಲ ಕರ್ನಾಟಕಕ್ಕೆ ಜಯಣ್ಣ ಫಿಲಂಸ್ ಅವರು ವಿತರಣೆ ಮಾಡುತ್ತಿದ್ದಾರೆ. ಡಬ್ಬಿಂಗ್ ರೈಟ್ಸ್ ಕೂಡ ಮಾರಾಟವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟೀಸರ್ ಮೂಲಕ ನಮ್ಮ ಚಿತ್ರ ಗೆದ್ದಿದೆ. ಇನ್ನೇನಿದ್ದರೂ ನಿರ್ದೇಶಕನಾಗಿ ನಾನು ಗೆಲ್ಲಬೇಕು ಎಂದರು.
ನನ್ನ ಬಹು ದಿನಗಳ ಕನಸು ನನಸ್ಸಾಗುವ ಸಮಯ ಸಮೀಪಿಸಿದೆ. ಮೊದಲು ನಾನು ನನ್ನ ಅಪ್ಪನಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ಹೇಳುತ್ತೇನೆ ಎಂದರು ನಾಯಕ ಸಮರ್ಜಿತ್ ಲಂಕೇಶ್. ಇಷ್ಟು ದಿಗ್ಗಜ್ಜರ ನಡುವೆ ನಮ್ಮ ಚಿತ್ರದ ಹಾಡು ಬಿಡುಗಡೆಯಾಗಿದು ಖುಷಿಯಾಗಿದೆ ಎಂದರು ನಾಯಕಿ ಸಾನ್ಯಾ ಅಯ್ಯರ್. ‘ಗೌರಿ’ ಚಿತ್ರದ ಛಾಯಾಗ್ರಾಹಕ ಕೆ.ಕೆ, ಗೀತರಚನೆ ಮಾಡಿರುವ ಕೆ.ಕಲ್ಯಾಣ್, ಕವಿರಾಜ್ ಚಿತ್ರದ ಕುರಿತು ಮಾತನಾಡಿದರು.
‘ಮೊನಾಲಿಸಾ’ ಚಿತ್ರದ ಬಗ್ಗೆ ನಾಯಕ ಧ್ಯಾನ್, ನಾಯಕಿ ಸದಾ, ಸಂಭಾಷಣೆ ಬರೆದಿರುವ ಬಿ.ಎ.ಮಧು ಮುಂತಾದವರು ಅನುಭವಗಳನ್ನು ಹಂಚಿಕೊಂಡರು.
ಇಂದ್ರಜಿತ್ ಲಂಕೇಶ್ (Indrajit Lankesh) ನಿರ್ದೇಶಿಸಿರುವ ‘ಗೌರಿ’ (Gowri Film) ಸಿನಿಮಾ 100 ದಿನಗಳ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ ಎಂದು ಗೌರಿ ಚಿತ್ರದ ನಟ ಸಮರ್ಜಿತ್ ಲಂಕೇಶ್ ತಿಳಿಸಿದ್ದಾರೆ. ಇದನ್ನೂ ಓದಿ:‘ಸೀತಾರಾಮ’ ನಟಿಗೆ ಕಿಡಿಗೇಡಿಗಳ ಕಾಟ- ವೈರಲ್ ಆಗ್ತಿದೆ ಡೀಪ್ ಫೇಕ್ ಫೋಟೋ
ಮಂಡ್ಯದಲ್ಲಿ ಸಮರ್ಜಿತ್ ಮಾತನಾಡಿ, ನೈಜ ಘಟನೆ ಆಧಾರಿತ ಕಥೆ ಇರುವ ಈ ಚಿತ್ರವನ್ನು ನಮ್ಮ ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು, ಈ ಹಾಡುಗಳಲ್ಲಿ ಕೆಲವು ಹಾಡುಗಳು ಸೂಪರ್ ಹಿಟ್ ಆಗಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ನಮ್ಮ ಚಟ ಚಟ್ಟ ಹತ್ತಿಸುವವರೆಗೂ ಇರಬಾರದು- ದರ್ಶನ್‌ಗೆ ಉಮಾಪತಿ ಟಾಂಗ್
ತಮ್ಮ ಜೊತೆ ಸಾನ್ಯಾ ಅಯ್ಯರ್ (Saanya Iyer) ಅವರು ನಾಯಕಿಯಾಗಿ ಪರಿಚಯ ಆಗುತ್ತಿದ್ದಾರೆ. ಈ ಚಿತ್ರ ಬಹುತಾರಾಗಣವನ್ನು ಒಳಗೊಂಡಿದ್ದು ಬಿಗ್ ಬಜೆಟ್ ಚಿತ್ರವಾಗಿದೆ ಎಂದರು. ಚಿತ್ರದಲ್ಲಿ 80 ಕಲಾವಿದರು ನಟಿಸಿದ್ದು, ರಮಣೀಯ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಾಡುಗಳು ಉತ್ತಮವಾಗಿ ಮೂಡಿ ಬಂದಿದೆ. ಐದು ಮಂದಿ ಸಂಗೀತ ನಿರ್ದೇಶಕರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲಿಯೇ ಸಿನಿಮಾ ಬಿಡುಗಡೆಯಾಗಲಿದ್ದು, ಜನತೆ ಈ ಚಿತ್ರವನ್ನು ವೀಕ್ಷಿಸುವ ಮೂಲಕ ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದಾರೆ ಇಂದ್ರಜಿತ್ ಪುತ್ರ. ಕಿರುತೆರೆಯ ಪುಟ್ಟ ಗೌರಿ ಜೊತೆ ಸಮರ್ಜಿತ್ ಅದೃಷ್ಟ ಪರೀಕ್ಷೆಗಿಳಿದಿದ್ದು, ಗೆದ್ದು ಬೀಗುತ್ತಾರಾ ಕಾಯಬೇಕಿದೆ.
ಸ್ಯಾಂಡಲ್‌ವುಡ್ (Sandalwood) ನಟಿ ಸಾನ್ಯ ಅಯ್ಯರ್ (Saanya Iyer) ವಧುವಿನಂತೆ ಬ್ರೇಡಲ್ ಲುಕ್‌ನಲ್ಲಿ ಮಿಂಚಿದ್ದಾರೆ. ರಾಯಲ್ ಲುಕ್‌ನಲ್ಲಿ ಕಂಗೊಳಿಸುತ್ತಿರುವ ಸಾನ್ಯರನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟಿಯ ಸುಂದರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ಕೆಂಪು ಬಣ್ಣದ ಧಿರಿಸಿನಲ್ಲಿ ಸಾನ್ಯ ವಧುವಿನಂತೆಯೇ ಕಂಗೊಳಿಸಿದ್ದಾರೆ. ಕ್ಯಾಮೆರಾಗೆ ಮಸ್ತ್ ಆಗಿ ಪೋಸ್ ಕೊಟ್ಟಿದ್ದು, ‘ರಾಣಿ ರಾಣಿ ನಿನ್ನ ಕಂಡಾಗ ನನ್ನ ಮರೆತೇ ನಾನೀಗ’ ಎಂದು ಸಾನ್ಯ ಸೌಂದರ್ಯವನ್ನು ನೆಟ್ಟಿಗನೊಬ್ಬ ಬಣ್ಣಿಸಿದ್ದಾರೆ. ಸಾನ್ಯ ಲುಕ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ:ಸೆಲೆಬ್ರಿಟಿಯ ಬದುಕನ್ನು ಜೈಲುವಾಸಕ್ಕೆ ಹೋಲಿಸಿದ ನಟ ಜಗ್ಗೇಶ್
‘ಬಿಗ್ ಬಾಸ್’ (Bigg Boss Kannada 9) ಶೋ ನಂತರ ‘ಗೌರಿ’ ಚಿತ್ರದ ಮೂಲಕ ಸಾನ್ಯ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಸಮರ್ಜಿತ್ ಲಂಕೇಶ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ಇಂದ್ರಜಿತ್ ಲಂಕೇಶ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಇತ್ತೀಚೆಗೆ ‘ಗೌರಿ’ (Gowri Film) ಸಿನಿಮಾದ ಮೊದಲ ಟೀಸರ್ ಆಗಿ ಧೂಳೆಬ್ಬಿಸಿತ್ತು. ಹೊಸ ಪ್ರತಿಭೆ ಸಮರ್ಜಿತ್ ಮಾಸ್ ಎಂಟ್ರಿಗೆ ಫಿದಾ ಆಗಿದ್ದರು. ಇದನ್ನೂ ಓದಿ:ನಿರ್ಮಾಣ ಸಂಸ್ಥೆ ಆರಂಭಿಸಿದ ‘ಜೈಲರ್’ ಡೈರೆಕ್ಟರ್
ಈ ಸಿನಿಮಾ ಜೊತೆಗೆ ಹೊಸ ಬಗೆಯ ಕಥೆಗಳನ್ನು ಕೇಳ್ತಿದ್ದಾರೆ. ಸದ್ಯದಲ್ಲೇ ಹೊಸ ಚಿತ್ರದ ಬಗ್ಗೆ ಮಾಹಿತಿ ಹೊರಬೀಳಲಿದೆ.
ಬಿಗ್ ಬಾಸ್ ಸೀಸನ್ 9ರ (Bigg Boss Kannada 9) ವಿನ್ನರ್ ರೂಪೇಶ್ ಶೆಟ್ಟಿ (Roopesh Shetty) ಮತ್ತು ಸಾನ್ಯ ಅಯ್ಯರ್ (Saanya Iyer) ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಬಹುದಿನಗಳ ನಂತರ ದೊಡ್ಮನೆಯ ಪ್ರೇಮ ಪಕ್ಷಿಗಳು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ರೂಪೇಶ್ ಶೆಟ್ಟಿ ಜೊತೆಗಿನ ಸಾನ್ಯ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ಕಾರ್ಯಕ್ರಮವೊಂದರಲ್ಲಿ ಇಬ್ಬರು ಕ್ಯಾಮೆರಾ ಕಣ್ಣಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಸಾನ್ಯ ಪಿಂಕ್ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಕೆಂಪು ಬಣ್ಣದ ಉಡುಗೆಯಲ್ಲಿ ರೂಪೇಶ್ ಹೈಲೆಟ್ ಆಗಿದ್ದಾರೆ.
ಬಿಗ್ ಬಾಸ್ ಸೀಸನ್ 9ರಲ್ಲಿ ರೂಪೇಶ್ ಮತ್ತು ಸಾನ್ಯ ಲವ್ವಿ ಡವ್ವಿ ಜೋರಾಗಿತ್ತು. ಇಬ್ಬರು ಪ್ರೇಮಿಗಳಂದೇ ಹೈಲೆಟ್ ಆಗಿದ್ದರು. ದೊಡ್ಮನೆಯಲ್ಲಿ ರೂಪೇಶ್ ಮತ್ತು ಸಾನ್ಯ ಒಡನಾಟ ಚೆನ್ನಾಗಿತ್ತು. ಇದನ್ನೂ ಓದಿ:ಆಪ್ತ ಸಹಾಯಕನ ಮನೆಗೆ ಯಶ್ ಸರ್ಪ್ರೈಸ್ ಎಂಟ್ರಿ
ದೊಡ್ಮನೆ ಆಟ ಮುಗಿದ ಮೇಲೆ ಸಾನ್ಯ ಮತ್ತು ರೂಪೇಶ್ ಇಬ್ಬರು ಕೂಡ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾನ್ಯ ‘ಗೌರಿ’ (Gowri) ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಂದ್ರಜಿತ್ ಲಂಕೇಶ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿ ಸಾನ್ಯ ಅಯ್ಯರ್ (Saanya Iyer) ಅವರು ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಸ್ಟೈಲೀಶ್ ಆಗಿ ಸಾನ್ಯ ಕಂಗೊಳಿಸಿದ್ದಾರೆ. ಹೊಸ ಲುಕ್‌ನಲ್ಲಿ ನಟಿ ಮಿಂಚಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಹಸಿರು ಬಣ್ಣದ ಗೌನ್‌ನಲ್ಲಿ ಸಾನ್ಯ ಅಯ್ಯರ್ ಮಿಂಚಿದ್ದಾರೆ. ಫಿಶ್ ಕಟ್‌ನಂತಿರೋ ಡ್ರೆಸ್ ಧರಿಸಿ ಸಾನ್ಯ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಾನ್ಯ ಡ್ರೆಸ್ ಅದಕ್ಕೆ ತಕ್ಕಂತಹ ಮೇಕಪ್ ಇವೆಲ್ಲವೂ ಅಭಿಮಾನಿಗಳಿಗೆ ಇಷ್ಟವಾಗಿದೆ. ಸಾನ್ಯರ ನ್ಯೂ ಲುಕ್ ನೋಡಿ ಕನ್ನಡ ಚಿತ್ರರಂಗದಲ್ಲಿ ಮುಂದೆ ಮೆರೆಯುವ ನಟಿ ಎಂದು ಫ್ಯಾನ್ಸ್ ಹಾಡಿ ಹೊಗಳಿದ್ದಾರೆ.
ಕಳೆದ ವರ್ಷ ಸಾನ್ಯ, ಬಿಗ್ ಬಾಸ್ ಒಟಿಟಿ ಸೀಸನ್ 1 ಮತ್ತು ಟಿವಿ ಬಿಗ್ ಬಾಸ್‌ನಲ್ಲಿ (Bigg Boss Kannada 9) ಕಾಣಿಸಿಕೊಳ್ಳುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಸಿನಿಮಾ ನಾಯಕಿಯಾಗಬೇಕು ಎಂದು ಕನಸು ಕಂಡಿದ್ದ ನಟಿ ಇದೀಗ ಅದೇ ಹಾದಿಯಲ್ಲಿ ಹೆಜ್ಜೆ ಇಡ್ತಿದ್ದಾರೆ. ಇದನ್ನೂ ಓದಿ:ಏಳಿಗೆ ಸಹಿಸಲಾರದವರಿಗೆ ದರ್ಶನ್ ಹೇಳಿದ್ದೇನು?
ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ (Gowri) ಸಿನಿಮಾದಲ್ಲಿ ಸಾನ್ಯ ಅಯ್ಯರ್ ನಾಯಕಿಯಾಗಿ ನಟಿಸುತ್ತಿದ್ದಾರೆ.
‘ಬಿಗ್ ಬಾಸ್’ ಬೆಡಗಿ ಸಾನ್ಯ ಅಯ್ಯರ್ (Saanya Iyer) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಪಡ್ಡೆಹುಡುಗರನ್ನ ಅಟ್ರ್ಯಾಕ್ಟ್ ಮಾಡುತ್ತಿರುತ್ತಾರೆ. ಇದೀಗ ಬಾತ್ ಟಬ್‌ನಲ್ಲಿ ಕುಳಿತು ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಸಾನ್ಯ ನೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಕಪ್ಪು ಬಣ್ಣದ ತುಂಡು ಬಟ್ಟೆ ಧರಿಸಿ ಹಿಂದೆ ಜರಿಯಂತೆ ಕಲರ್‌ಫುಲ್ ಡ್ರೆಸ್ ತೊಟ್ಟು ಸಾನ್ಯ ಮಿಂಚಿದ್ದಾರೆ. ತಲೆಗೆ ಕಡ್ಡಿಯ ಕಿರೀಟ ಧರಿಸಿ ಮುದ್ದು ಮುದ್ದಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಬಾತ್ ಟಬ್‌ನಲ್ಲಿ ಮಲಗಿ ನಾನಾ ರೀತಿಯ ಪೋಸ್ ನೀಡಿದ್ದಾರೆ.
ಕಳೆದ ವರ್ಷ ‘ಬಿಗ್ ಬಾಸ್’ ಸೀಸನ್ 9ರಲ್ಲಿ (Bigg Boss Kannada 9) ಸಾನ್ಯ ಅಯ್ಯರ್ ಸ್ಪರ್ಧಿಯಾಗಿದ್ದರು. 80ಕ್ಕೂ ಹೆಚ್ಚು ದಿನಗಳವರೆಗೂ ಸಾನ್ಯ ಆಟ ಆಡಿ ಎಲಿಮಿನೇಟ್ ಆಗಿದ್ದರು. ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಸ್ನೇಹದ ವಿಚಾರವಾಗಿ ಸಖತ್ ಸುದ್ದಿಯಾಗಿದ್ದರು.
ಇದೀಗ ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ (Gowri) ಚಿತ್ರದಲ್ಲಿ ಸಾನ್ಯ ಅಯ್ಯರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಚೊಚ್ಚಲ ಸಿನಿಮಾದಲ್ಲೇ ಪಾತ್ರಕ್ಕೆ ಬಹಳಷ್ಟು ಪ್ರಾಮುಖ್ಯತೆ ಇರುವ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಗೌರಿ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ‘ಗೌರಿ’ ಸಿನಿಮಾ ಜೊತೆ ಜೊತೆಗೆ ಹೊಸ ಬಗೆಯ ಕಥೆಗಳನ್ನ ನಟಿ ಕೇಳುತ್ತಿದ್ದಾರೆ.
ಬಿಗ್ ಬಾಸ್ ಬೆಡಗಿ ಸಾನ್ಯ ಅಯ್ಯರ್ (Saanya Iyer) ಹೀರೋಯಿನ್ ಆಗಿ ‘ಗೌರಿ’ (Gowri) ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ. ಇದೇ ಖುಷಿಯಲ್ಲಿ ಬಿಗ್ ಬಾಸ್ ಸ್ನೇಹಿತರು, ಆಪ್ತರ ಜೊತೆ ಗ್ರ್ಯಾಂಡ್ ಆಗಿ ಸಾನ್ಯ ಬರ್ತ್‌ಡೇ ಪಾರ್ಟಿ ಮಾಡಿದ್ದಾರೆ. ಪಾರ್ಟಿಯಲ್ಲಿ ರೂಪೇಶ್ ಶೆಟ್ಟಿ (Roopesh Shetty) ಕೂಡ ಪಾಲ್ಗೊಂಡಿದ್ದಾರೆ. ಈ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಈ ಜೋಡಿಗೆ ಫ್ಯಾನ್ಸ್ ವಿಶೇಷ ಬೇಡಿಕೆಯೊಂದನ್ನ ಇಟ್ಟಿದ್ದಾರೆ.
ಸೆ.21ರಂದು ಸಾನ್ಯ ಅಯ್ಯರ್ ಜನ್ಮದಿನದಂದು ಸೀಸನ್ 9ರ ಬಿಗ್ ಬಾಸ್ ಸ್ಪರ್ಧಿಗಳು, ಗೌರಿ ಚಿತ್ರತಂಡದ ಜೊತೆ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದು, ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಕೂಡ ಭಾಗಿಯಾಗಿ ಸಾನ್ಯಗೆ ವಿಶ್ ಮಾಡಿದ್ದಾರೆ. ಬಳಿಕ ಕ್ಯಾಮೆರಾಗೆ ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಜೋಡಿಯ ಫೋಟೋ ನೋಡ್ತಿದ್ದಂತೆ ನಿಮ್ಮಿಬ್ಬರ ಮದುವೆ ಯಾವಾಗ? ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಇಬ್ಬರ ಕಡೆಯಿಂದಲೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.
ಬಿಗ್ ಬಾಸ್ ಒಟಿಟಿ ಮತ್ತು ಟಿವಿ ಬಿಗ್ ಬಾಸ್‌ನಲ್ಲಿ ಒಟ್ಟಿಗೆ ಸ್ಪರ್ಧಿಸಿದ ಈ ಜೋಡಿ ನಡುವೆ ಉತ್ತಮ ಒಡನಾಟವಿತ್ತು. ಪ್ರೇಮ ಪಕ್ಷಿಗಳೆಂದೇ ಬಿಂಬಿತರಾಗಿದ್ರು. ಇಬ್ಬರ ನಡುವೆ ಪ್ರೀತಿ ಇದ್ಯಾ? ಎಂದು ಕೇಳಿದ್ರೆ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದೇ ಪ್ರತಿಕ್ರಿಯೆ ನೀಡ್ತಿದ್ದರು. ಇಬ್ಬರ ಬಾಂಧವ್ಯ ತೆರೆ ಹಿಂದೆ ಕೂಡ ಉತ್ತಮವಾಗಿದ್ದು, ಇಬ್ಬರು ಮದುವೆಯಾದರೆ ಚೆಂದ ಎಂಬುದು ಅಭಿಮಾನಿಗಳ ಆಶಯ. ಅದು ನೆರವೇರುತ್ತಾ? ಕಾಯಬೇಕಿದೆ. ಇದನ್ನೂ ಓದಿ:ಲೋಕಸಭೆ ಚುನಾವಣೆಗೆ ನಟ ಕಮಲ್ ಹಾಸನ್ ಸಿದ್ಧತೆ
ಇಂದ್ರಜೀತ್ ಲಂಕೇಶ್ (Indrajit Lankesh) ನಿರ್ದೇಶನದ ಸಿನಿಮಾದಲ್ಲಿ ಸಮರ್ಜಿತ್‌ಗೆ ನಾಯಕಿಯಾಗಿ ಸಾನ್ಯ ಎಂಟ್ರಿ ಕೊಡಲಿದ್ದಾರೆ. ಸಾನ್ಯ ಬರ್ತ್‌ಡೇ ಸೆಲೆಬ್ರೇಶನ್‌ನಲ್ಲಿ ಇಂದ್ರಜಿತ್, ಸಮರ್ಜಿತ್, ಆರ್ಯವರ್ಧನ್ ಗುರೂಜಿ, ಜಯಶ್ರೀ ಆರಾಧ್ಯ, ಅನುಪಮಾ ಗೌಡ, ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಸಾನ್ಯ ಅಯ್ಯರ್ (Saanya Iyer) ಸ್ಯಾಂಡಲ್‌ವುಡ್‌ಗೆ (Sandalwood) ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾ ‘ಗೌರಿ’ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಸಿನಿಮಾ ಯಾವ ಹಂತಕ್ಕೆ ಬಂದಿದೆ ಎಂಬುದರ ಬಗ್ಗೆ ನಟಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ.
ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ (Gowri) ಸಿನಿಮಾದಲ್ಲಿ ಸಮರ್ಜಿತ್ ಲಂಕೇಶ್‌ಗೆ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಇನ್ನೂ ಕೆಲವು ದಿನಗಳ ಶೂಟಿಂಗ್ ಬಾಕಿಯಿದೆ. ಇದನ್ನೂ ಓದಿ:‘ಆದಿಪುರುಷ್’ ಸೋಲಿನ ಬಳಿಕ ಮಾಸ್ ಆಗಿ ಎಂಟ್ರಿ ಕೊಟ್ರು ಕೃತಿ ಸನೋನ್
ಈ ಚಿತ್ರದ ಮೂಲಕ ಮಗ ಸಮರ್ಜಿತ್‌ರನ್ನ ಚಿತ್ರರಂಗಕ್ಕೆ ಇಂದ್ರಜಿತ್ ಲಂಕೇಶ್ (Indrajit Lankesh) ಪರಿಚಯಿಸುತ್ತಿದ್ದಾರೆ. ಸಮರ್ಜಿತ್ ಮುಂದೆ ವಿಲನ್ ಆಗಿ ಚಂದು ಗೌಡ ಅಬ್ಬರಿಸುತ್ತಿದ್ದಾರೆ. ವಿಭಿನ್ನ ಕಥೆಯನ್ನ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪರಿಚಯಿಸಲು ಹೊರಟಿದ್ದಾರೆ.
‘ಪುಟ್ಟಗೌರಿ ಮದುವೆ’ ಮದುವೆ ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋ (Bigg Boss Kannada) ಮೂಲಕ ಕನ್ನಡಿಗರ ಮನಗೆದ್ದ ನಟಿ ಈಗ ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ಸಕಲ ತಯಾರಿ ಮಾಡಿಕೊಂಡೇ ನಟನೆಯ ಅಖಾಡಕ್ಕೆ ಸಾನ್ಯ ಇಳಿದಿದ್ದಾರೆ. ನಾಯಕಿಯಾಗಿ ಗೆದ್ದು ಬೀಗುತ್ತಾರಾ? ಕಾಯಬೇಕಿದೆ.