Tag: saami sammi song

  • ಅಲ್ಲು ಅರ್ಜುನ್-ರಶ್ಮಿಕಾ ನಟನೆಯ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದ ಅನನ್ಯಾ ಪಾಂಡೆ

    ಅಲ್ಲು ಅರ್ಜುನ್-ರಶ್ಮಿಕಾ ನಟನೆಯ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದ ಅನನ್ಯಾ ಪಾಂಡೆ

    ಬಾಲಿವುಡ್ ಬ್ಯೂಟಿ ಅನನ್ಯಾ ಪಾಂಡೆ ಈಗ `ಪುಷ್ಪ’ ಹಾಡಿಗೆ ಹೆಜ್ಜೆ ಹಾಕಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ನಟನೆಯ `ಪುಷ್ಪ’ ಚಿತ್ರದ ಸಾಮಿ ಸಾಮಿ ಹಾಡಿಗೆ ʻಲೈಗರ್ʼ ಚಿತ್ರದ ನಟಿ ಅನನ್ಯಾ ಸೊಂಟ ಬಳುಕಿಸಿದ್ದಾರೆ.

    ಬಿಟೌನ್‌ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ನಟಿ ಅನನ್ಯಾ ಪಾಂಡೆ ಈಗ ದಕ್ಷಿಣದ ʻಪುಷ್ಪʼ ಚಿತ್ರದ ಹಾಡಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ನಟನೆಯ ಸೂಪರ್ ಹಿಟ್ ಸಾಂಗ್ ಸಾಮಿ ಸಾಮಿ ಹಾಡಿಗೆ ಲೈಗರ್ ನಟಿ ಅನನ್ಯಾ ಭರ್ಜರಿ ಆಗಿ ಕುಣಿದು ಕುಪ್ಪಳಿದಿದ್ದಾರೆ. ಅನನ್ಯಾ ಡ್ಯಾನ್ಸ್ ಸಾರಾ ಆಲಿ ಖಾನ್ ವಿಡಿಯೋ ಮಾಡಿ ಇಂಟರ್‌ನೆಟ್‌ನಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ:ಹೊಸಪೇಟೆಯಲ್ಲಿ ಪುನೀತ್ ಪುತ್ಥಳಿ ಅನಾವರಣಕ್ಕೆ ಕ್ಷಣಗಣನೆ

    ಅನನ್ಯಾ ಮಾಡಿರೋ ಜಬರ್‌ದಸ್ತ್ ಡ್ಯಾನ್ಸ್ ವಿಡಿಯೋಗೆ ರಶ್ಮಿಕಾ ಮಂದಣ್ಣ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಅನನ್ಯಾ ಸೊಂಟ ಬಳುಕಿಸಿರೋ ಪರಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.