Tag: sa re ga ma pa

  • ನನ್ನ ಶಿಷ್ಯ ಗೆದ್ದಿದ್ದರು ಖುಷಿಯಾಗ್ತಿತ್ತು: ಚಾಂಪಿಯನ್ ಕೀರ್ತನ್

    ನನ್ನ ಶಿಷ್ಯ ಗೆದ್ದಿದ್ದರು ಖುಷಿಯಾಗ್ತಿತ್ತು: ಚಾಂಪಿಯನ್ ಕೀರ್ತನ್

    ಬೆಂಗಳೂರು: ಎಲ್ಲರೂ ಒಂದೇ ಕುಟುಂಬದವರಂತೆ ಇದ್ದೇವು. ಹೀಗಾಗಿ ಯಾರು ಗೆದ್ದಿದ್ದರು ನನಗೆ ಖುಷಿಯಾಗುತ್ತಿತ್ತು ಎಂದು ಸರಿಗಮಪ ಸೀಸನ್ 15ರ ಚಾಂಪಿಯನ್ ಕೀರ್ತನ್ ಹೊಳ್ಳ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೀರ್ತನ್, ನಾವೆಲ್ಲರೂ ಒಂದೇ ಕುಟುಂಬದ ರೀತಿ ಇದ್ವಿ. ಇದೊಂದು ಕಾಂಪಿಟೇಷನ್ ಎಂದುಕೊಂಡಿರಲಿಲ್ಲ. ತುಂಬಾ ಖುಷಿಯಾಗುತ್ತಿದೆ. ಇಲ್ಲಿಗೆ ಬಂದು ಟ್ರೋಪಿ ತೆಗೆದುಕೊಂಡಿದ್ದು, ಇದೊಂದು ಹೊಸ ಅನುಭವಾಗಿದೆ ಎಂದು ಹೇಳಿದ್ದಾರೆ.

    ನನ್ನ ಈ ಜರ್ನಿಗೆ ಕುಟುಂಬದವರು ತುಂಬಾ ಬೆಂಬಲ ನೀಡಿದ್ದಾರೆ. ನಾನು ಮೊದಲಿಗೆ ಕ್ಲಾಸಿಕಲ್ ಸಾಂಗ್ ಮಾತ್ರ ಹಾಡುತ್ತಿದ್ದೆ. ಬಳಿಕ ಇಲ್ಲಿ ತರಬೇತಿ ಪಡೆದು ಸಿನಿಮಾ ಹಾಡುಗಳನ್ನು ಹಾಡುವುದನ್ನು ಕಲಿತಿದ್ದೇನೆ. ನೋಡೋಣ ಮುಂದೆ ಏನಾಗುತ್ತದೆ. ನನ್ನ ಸ್ನೇಹಿತರು ಕೂಡ ತುಂಬಾ ಚೆನ್ನಾಗಿ ಹಾಡಿದ್ದಾರೆ. ನನಗೆ ನಾನು ಗೆಲ್ಲುತ್ತೇನೆ ಎಂದು ವಿಶ್ವಾಸ ಕೂಡ ಇತ್ತು ಎಂದರು.

    ಇಲ್ಲಿ ಯಾರು ಮೇಲು-ಕೀಳು ಅಂತ ಇಲ್ಲ. ಎಲ್ಲರು ಒಳ್ಳೆಯ ಸಿಂಗರ್ಸ್ ಆಗಿದ್ದರು. ಯಾರು ಗೆದ್ದಿದ್ದರು ನನಗೆ ಖುಷಿಯಾಗುತ್ತಿತ್ತು. ನನ್ನ ಸ್ನೇಹಿತರು ಚೆನ್ನಾಗಿ ಹಾಡುತ್ತಿದ್ದರು. ಹನುಮಂತ ಅವರು ಯಾವಾಗಲೂ ನನ್ನನ್ನು ಗುರುಗಳು ಎಂದು ಕರೆಯುತ್ತಿದ್ದರು. ಹೀಗಾಗಿ ಅವರು ನನ್ನ ಶಿಷ್ಯರಾಗಿದ್ದರು. ಹೀಗಾಗಿ ಹನುಮಂತ ಅವರು ವಿನ್ ಆಗಿದ್ದರು ಬೇಜರಾಗುತ್ತಿರಲಿಲ್ಲ, ಖುಷಿಯಾಗುತ್ತಿತ್ತು. ಇಬ್ಬರಲ್ಲಿ ಒಬ್ಬರು ಗೆದ್ದರು ಒಂದೇ ಎಂದು ಕೀರ್ತನ್ ಸಂತಸದಿಂದ ಹೇಳಿಕೊಂಡಿದ್ದಾರೆ.

    ನಿಮ್ಮೆಲ್ಲರ ಬೆಂಬಲ ಇದ್ದರೆ ಹೀಗೆ ಬೆಳೆಯುತ್ತೇನೆ. ಇದೇ ರೀತಿಯ ವೇದಿಕೆಯಲ್ಲಿ ಮುಂದೆಯೇ ಹಾಡುತ್ತಿದ್ದೇನೆ ಎಂದು ತಮ್ಮ ಗುರಿಯ ಬಗ್ಗೆ ಕೀರ್ತನ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾದಬ್ರಹ್ಮ ಹಂಸಲೇಖಗೆ ಎದೆನೋವು, ಆಸ್ಪತ್ರೆಗೆ ದಾಖಲು

    ನಾದಬ್ರಹ್ಮ ಹಂಸಲೇಖಗೆ ಎದೆನೋವು, ಆಸ್ಪತ್ರೆಗೆ ದಾಖಲು

    ಬೆಂಗಳೂರು: ನಾದಬ್ರಹ್ಮ ಹಂಸಲೇಖ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಖಾಸಗಿ ಚಾನೆಲ್‍ನ ಕಾರ್ಯಕ್ರಮದ ವೇಳೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕನ್ನಿಂಗ್‍ಹ್ಯಾಂ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ಹಂಸಲೇಖ ಅವರನ್ನು ದಾಖಲಿಸಲಾಗಿದೆ.

    ಹಂಸಲೇಖಾ ಅವರಿಗೆ ಲಘು ಹೃದಯಾಘಾತವಾಗಿಲ್ಲ. ಗ್ಯಾಸ್ಟಿಕ್‍ನಿಂದ ಎದೆನೋವು ಕಾಣಿಸಿಕೊಂಡಿದೆ. ಅಭಿಮಾನಿಗಳು ಹೆದರುವ ಅಗತ್ಯವಿಲ್ಲ ಎಂದು ಸರಿಗಮಪ ಕಾರ್ಯಕ್ರಮ ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ.