ಮೈಸೂರು: ಚನ್ನಪಟ್ಟಣ ಉಪ ಚುನಾವಣೆಯಲ್ಲಿ (Channapatna By_election) ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸ್ಪರ್ಧಿಸಲು ತಯಾರಿಲ್ಲ ಎಂದು ಮಾಜಿ ಸಚಿವ ಸಾರಾ ಮಹೇಶ್ (Sa Ra Mahesh) ಹೇಳಿದ್ದಾರೆ.
ಮೈಸೂರಿನಲ್ಲಿ `ಪಬ್ಲಿಕ್ ಟಿವಿ’ ಜೊತೆ ಅವರು ಮಾತನಾಡಿದ್ದಾರೆ. ಈ ವೇಳೆ, ನಾನು ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ನಿಖಿಲ್ ಸ್ಪಷ್ಟಪಡಿಸಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅಭಿಪ್ರಾಯ ಕೂಡ ಇದೇ ಆಗಿದೆ ಎಂದು ತಿಳಿಸಿದ್ದಾರೆ.
ನಿಖಿಲ್ ಮೇಲೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡವಿದೆ. ಆದರೆ ಅವರು ಯಾವ ಒತ್ತಡಕ್ಕೂ ಮಣಿಯುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸುವುದಾಗಿ ಸಿ.ಪಿ ಯೋಗೇಶ್ವರ್ ಘೋಷಿಸಿಕೊಂಡಿದ್ದಾರೆ. ಪಕ್ಷ ಟಿಕೆಟ್ ನೀಡದಿದ್ದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಅವರು ಹೇಳಿದ್ದಾರೆ. ಇದರ ಬೆನ್ನಲ್ಲೇ ಮೈತ್ರಿ ಪಕ್ಷಗಳಲ್ಲಿ ಚರ್ಚೆಗಳು ನಡೆದಿದ್ದವು. ಈ ವಿಚಾರ ಮೈಸೂರು ಚಲೋ ಪಾದಯಾತ್ರೆ ವೇಳೆ ಸಹ ಸುದ್ದು ಮಾಡಿತ್ತು. ಈ ವೇಳೆ ನಾವು ಟಿಕೆಟ್ ಹಂಚಿಕೆಗೆ ಸೇರಿಲ್ಲ ಎಂದು ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿದ್ದರು.
ಈ ಯೋಧ ಕೆ.ಆರ್.ನಗರದ ಕ್ಷೇತ್ರದ ಮತದಾರ ಎಂಬುದು ಪೋಸ್ಟ್‌ನಿಂದ ತಿಳಿದುಬಂದಿದೆ. ಕರ್ತವ್ಯದ ಹಿನ್ನಲೆಯಲ್ಲಿ ಹೊರ ರಾಜ್ಯದಿಂದ ಅಂಚೆ ಮತದಾನ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಯೋಧ ಯಾರು ಮತ್ತು ಎಲ್ಲಿಂದ ಮತ ಹಾಕಿದ್ದಾರೆ ಎಂಬುದನ್ನ ಚುನಾವಣಾಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ.
ಇದೇ ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಿರಿಯರು, ಬೇರೆ ಬೇರೆ ಕಡೆಯಿರುವ ಸರ್ಕಾರಿ ನೌಕರರು ತಾವು ಇರುವಲ್ಲಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಹೊಯ್ಸಳರ ನಾಡಲ್ಲಿ ತ್ರಿಕೋನ ಸ್ಪರ್ಧೆ – ಯಾರಾಗ್ತಾರೆ ಸಾಮ್ರಾಟ?
ಕೆ.ಆರ್.ನಗರ ಕ್ಷೇತ್ರದಲ್ಲಿ ಶಾಸಕ ಸಾ.ರಾ.ಮಹೇಶ್ (Sa.Ra.Mahesh) (ಜೆಡಿಎಸ್), ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್ (ಕಾಂಗ್ರೆಸ್), ಹೊಸಹಳ್ಳಿ ವೆಂಕಟೇಶ್ (ಬಿಜೆಪಿ) ಕಣದಲ್ಲಿದ್ದಾರೆ.
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri), ಐಪಿಎಸ್ ಅಧಿಕಾರಿ ಡಿ. ರೂಪಾ (D Roopa) ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
`ತಡೆಯಾಜ್ಞೆ ಇದ್ದರೂ, ರೂಪಾ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಹಾಕುತ್ತಲೇ ಇದ್ದಾರೆ. ಅವಹೇಳನ ಬರವಣಿಗೆ ಪೋಸ್ಟ್ ಮಾಡುತ್ತಿದ್ದಾರೆ. ಕೆಲವೊಮ್ಮೆ ಮಾತನಾಡಿದ್ರೆ ಪರವಾಗಿಲ್ಲ, ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಯಡಿಯೂರಪ್ಪರಿಗೆ ಕಣ್ಣೀರು ಹಾಕಿಸಿದ ಬಗ್ಗೆ ಮೋದಿ ಉತ್ತರ ಕೊಡಲಿ- ಡಿಕೆಶಿ
ಚಾಮರಾಜನಗರದ ಅಮ್ಲಜನಕ ಸಿಲಿಂಡರ್ ದುರಂತ ಪ್ರಕರಣದಲ್ಲಿ ಈಗಾಗಲೇ ಸರ್ಕಾರ ತನಿಖೆ ನಡೆಸಿದೆ. ಸರ್ಕಾರ ವರದಿ ನೀಡಿದ್ದರೂ ಉದ್ದೇಶ ಪೂರ್ವಕವಾಗಿ ಅವಮಾನ ಮಾಡುತ್ತಿದ್ದಾರೆ ಎಂದು ಜಡ್ಜ್ ಗಮನಕ್ಕೆ ತಂದರು.
ರೋಹಿಣಿ ಹೇಳಿಕೆ ಆಧರಿಸಿ, ಡಿ.ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ಕೋರ್ಟ್ ಮಾರ್ಚ್ 3ಕ್ಕೆ ವಿಚಾರಣೆ ಮುಂದೂಡಿದೆ.
ಬೆಂಗಳೂರು/ಮೈಸೂರು: ಕಳೆದ ಮೂರು ದಿನಗಳ ಹಿಂದೆಯಷ್ಟೇ ಸಿಟಿ ಸಿವಿಲ್ ಕೋರ್ಟ್ (City Civil Court) ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ಮಾತನಾಡದಂತೆ ಎಚ್ಚರಿಕೆ ಕೊಟ್ಟಿತ್ತು. ಇದಾದ ಬಳಿಕವೂ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ (D Roopa), ಸಿಂಧೂರಿ ವಿರುದ್ಧ ಗುಡುಗಿದ್ದಾರೆ.
ಮೈಸೂರು ಎಟಿಐ (Mysuru ATI) ನಿಂದ ರೋಹಿಣಿ ಸಿಂಧೂರಿ ಅವರು ಸರ್ಕಾರಿ ಸಾಮಾನುಗಳನ್ನ ತಗೆದುಕೊಂಡು ಹೋದದ್ದು, ಅವುಗಳು ಡಿಸಿ ಮನೆಯಲ್ಲಿ ಕೂಡ ಇಲ್ಲ ಎಲ್ಲಿ ಹೋದವು? ಸಿಂಧೂರಿ ಅವರಿಗೆ ನೋಟಿಸ್ ಜಾರಿ ಮಾಡಿದ್ದು ವರದಿಯಾಗಿದೆ. ಇದರ ಮೇಲೆ ಕ್ರಮ ಆಯಿತೇ? ಸರ್ಕಾರಿ ವಸ್ತು 50 ರೂಪಾಯಿ ಇರಲಿ 50 ಕೋಟಿ ಇರಲಿ ತಪ್ಪು ತಪ್ಪೇ. 1,000 ರೂ. ಲಂಚ ತಗೆದುಕೊಂಡವರೂ ಕೂಡ ಲೋಕಾಯುಕ್ತ ವಿಚಾರಣೆಗೆ ಒಳಗಾಗಿದ್ದಾರೆ. ಕಾನೂನು ಡಿಸಿಗೂ ಗುಮಾಸ್ತನಿಗೂ ಒಂದೇ ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ (D Roopa) ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ (Vandita Sharma) ಅವರಿಗೆ ದೂರು ಸಲ್ಲಿಸಿದ್ದಾರೆ.
ರೋಹಿಣಿ ವಿರುದ್ಧ ಇರುವ ಆರೋಪ ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಲಿಖಿತ ದೂರು ಸಲ್ಲಿಸಿದ್ದಾರೆ. ಬಳಿಕ ಮುಖ್ಯ ಕಾರ್ಯದರ್ಶಿಗಳು ದೂರು ಸ್ವೀಕರಿಸಿದ್ದು, ತನಿಖೆ ಮಾಡ್ತಾರೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಹೊರಟುಹೋಗಿದ್ದಾರೆ.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ರೂಪಾ ಮೌದ್ಗಿಲ್, ಮೈಸೂರಿನ (Mysuru) ಹೆರಿಟೇಜ್ ಬಿಲ್ಡಿಂಗ್ ನವೀಕರಣಕ್ಕೆ ಸಂಬಂಧಿಸಿದ ದಾಖಲೆ, ವಾಟ್ಸಪ್ ಚಾಟ್‌ಗಳ ಸಮೇತ ದೂರು ನೀಡಿದ್ದೇನೆ. ಜೊತೆಗೆ ರವಿಶಂಕರ್ ನಡೆಸಿರೋ ತನಿಖೆಯ ಬಗ್ಗೆಯೂ ಉಲ್ಲೇಖಿಸಿದ್ದೇನೆ ಎಂದು ಹೇಳಿದ್ದರು.
ಸಿಂಧೂರಿ ಅವರು ಇಲ್ಲಿ ಅತ್ತೆ ಮನೆಯಲ್ಲಿ ಇದ್ದೀನಿ ಅಂತಾ ಹೇಳಿದ್ದಾರೆ. ಹಾಗಾದ್ರೆ 6 ಲಕ್ಷದ ಫರ್ನಿಚರ್ ಯಾರಿಗಾಗಿ ಖರೀದಿ ಮಾಡಿದ್ದಾರೆ? ಯಾಕಾಗಿ ಖರೀದಿ ಮಾಡಿದ್ದಾರೆ? ಲೆಕ್ಕ ಕೊಡಲಿ ಎಂದು ಸವಾಲ್ ಹಾಕಿದ್ದರು.
ಈ ಹಿಂದೆಯೂ ರೋಹಿಣಿ ಸಿಂಧೂರಿ ವಿರುದ್ಧ ಲೋಕಾಯುಕ್ತದಲ್ಲಿ (Karnataka Lokayukta) ದೂರು ದಾಖಲಾಗಿತ್ತು. ಅದನ್ನು ಮರುತನಿಖೆಗೆ ಒಳಪಡಿಸುವಂತೆ ಮನವಿ ಮಾಡ್ತೀನಿ. ರೋಹಿಣಿ ಸಿಂಧೂರಿ ತಮ್ಮ ಆಸ್ತಿ ಪತ್ರದಲ್ಲಿ ಜಾಲಹಳ್ಳಿ ಮನೆಯ ಬಗ್ಗೆ ಉಲ್ಲೇಖಿಸಿಲ್ಲ. ಅದರ ತನಿಖೆಗೂ ಮನವಿ ಮಾಡ್ತೀನಿ ಎಂದು ತಿಳಿಸಿದ್ದರು.
LIVE TV
[brid partner=56869869 player=32851 video=960834 autoplay=true]
ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ (D Roopa) ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಕಿತ್ತಾಟದ ನಡುವೆ ಇದೀಗ ರೋಹಿಣಿ ಪತಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
`ನನ್ನ ಪತ್ನಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಡಿ. ರೂಪಾ ಮೌದ್ಗಿಲ್, ಸಿಂಧೂರಿ ಅವರ ತೇಜೋವಧೆ ಮಾಡಿದ್ದಾರೆ’ ಎಂದು ಆರೋಪಿಸಿ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ (Sudhir Reddy) ದೂರು ನೀಡಿದ್ದಾರೆ. ಇದನ್ನೂ ಓದಿ: ರೋಹಿಣಿ ಬಗ್ಗೆ ಮಾತನಾಡೋದಕ್ಕೆ ರೂಪಾ ಯಾರು?: ಸುಧೀರ್ ರೆಡ್ಡಿ ಆಕ್ರೋಶ
ನನ್ನ ಧರ್ಮಪತ್ನಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನ ರೂಪಾ ಅವರು ಸಾಮಾಜಿಕ ಜಾಲಾತಾಣದಲ್ಲಿ (Social Media) ಹಾಕಿ ಸಿಂಧೂರಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ರೂಪಾ ಅವರು ವೈಯಕ್ತಿಕ ಫೋಟೋಗಳನ್ನ ಹಂಚಿಕೊಂಡಿರೋದು ನೋಡಿದ್ರೆ ಅವರೇ ಹ್ಯಾಕ್ ಮಾಡಿರುವ ಅನುಮಾನ ಗೋಚರಿಸುತ್ತಿದೆ. ಆದ್ದರಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡುತ್ತಿರುವ ರೂಪಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಫೋಟೋಗಳು ಸಿಕ್ಕಿದ್ದರ ಹಿಂದಿನ ಸತ್ಯಾಸತ್ಯತೆಯನ್ನ ತನಿಖೆ ಮೂಲಕ ಬಹಿರಂಗಪಡಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
– ಅಧಿಕಾರಿಯಾಗಿ ರಾಜಕಾರಣಿಗಳ ಜೊತೆ ಸಂಧಾನ ಏಕೆ? – ಕನ್ನಡದ ಹುಡುಗಿ ಶಿಲ್ಪಾನಾಗ್ (ಐಎಎಸ್) ಜೊತೆ ಜಗಳ ಯಾಕೆ? – ರೋಹಿಣಿ ಸಿಂಧೂರಿ ಮೈಸೂರು ಡಿಸಿಯಾಗಿ ಹೋಗಿದ್ದು ಹೇಗೆ?
ಮೈಸೂರು/ಬೆಂಗಳೂರು: ಐಎಎಸ್ ವರ್ಸಸ್ ಐಪಿಎಸ್ ಅಧಿಕಾರಿಗಳ ನಡುವಿನ ಕಿತ್ತಾಟ ತಾರಕಕ್ಕೇರಿದ್ದು, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ಐಜಿಪಿ ಡಿ. ರೂಪಾ (D Roopa) ಸರಣಿ ಆರೋಪಗಳನ್ನ ಮಾಡಿದ್ದಾರೆ.
`ಮಾಜಿ ಸಚಿವ ಸಾ.ರಾ ಮಹೇಶ್ (Sa Ra Mahesh) ಜೊತೆ ರೋಹಿಣಿ ಸಿಂಧೂರಿ ಸಂಧಾನ’ ಶೀರ್ಷಿಕೆಯ ಯುಟ್ಯೂಬ್ ವೀಡಿಯೋ ಲಿಂಕ್‌ವೊಂದನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿರುವ ರೂಪಾ ಅವರು 19 ಸರಣಿ ಆರೋಪಗಳನ್ನ ಮಾಡಿದ್ದಾರೆ. ರೋಹಿಣಿ ಮಾಡಿರೊ ಅಕ್ರಮ ಕಾರ್ಯಕ್ಕೆ ನನ್ನ ಬಳಿ ಸಾಕ್ಷಿಗಳು ಇವೆ. ಅನೇಕ ಹಿರಿಯ ಐಎಎಸ್ ಅಧಿಕಾರಿಗಳಿಗೆ ಈಕೆಯ ಆಕ್ಷೇಪಾರ್ಹ ಚಿತ್ರ ಕಳಿಸಿದ್ದಾರೆ. ಈಗಲೂ ನನ್ನ ಬಳಿ ಆ ಫೋಟೊಗಳಿವೆ. ಚಾಮರಾಜನಗರಲ್ಲಿ ಆಕ್ಸಿಜನ್ ದುರಂತದಿಂದ 24 ಜನ ಸತ್ತಾಗ ಈಕೆಯ ಮೇಲೆ ತನಿಖೆ ನಡೆಸದೆ ಪಾರಾದ್ರು. ಕನ್ನಡದ ಹುಡುಗಿ ಐಎಎಸ್ ಶಿಲ್ಪಾನಾಗ್ ವಿರುದ್ಧ ಜಗಳ, ರಂಪ ಏತಕ್ಕೆ ಮಾಡಿದ್ರು? ಅಧಿಕಾರಿಯಾಗಿ ರಾಜಕಾರಣಿಗಳ ಜೊತೆ ಸಂಧಾನ ಏಕೆ ಎಂದೆಲ್ಲಾ ಪ್ರಶ್ನಿಸಿದ್ದಾರೆ.
ಫೇಸ್‌ಬುಕ್ ಪುಟದಲ್ಲಿ ರೂಪಾ ಆರೋಪಗಳೇನು? ಇಂದಿನ ಸುದ್ದಿ, ಎಲ್ಲಾ ಕಡೆ viral ಆಗಿರೋದು, ರೋಹಿಣಿ ಸಿಂಧೂರಿ , ಸಾ.ರಾ. ಮಹೇಶ್, ಮಾನ್ಯ ಎಂಎಲ್ಎ ಅವರ ಬಳಿ ಸಂಧಾನಕ್ಕೆ ಹೋಗಿದ್ದರು ಅಂತ. ಸಂಧಾನಕ್ಕೆ ಹೋಗುವುದು ಅಂದರೆ ಅರ್ಥ ಏನು? ಯಾವ ಐಎಎಸ್ ಅಧಿಕಾರಿ ಕೂಡ ಎಂಎಲ್ಎ ಅಥವಾ ರಾಜಕೀಯ ವ್ಯಕ್ತಿಗಳ ಜೊತೆ, ತಾವು ನಿರ್ವಹಿಸಿದ ಕರ್ತವ್ಯ ನಿಮಿತ್ತ ಸಂಧಾನಕ್ಕೆ ಹೋಗಿದ್ದು ನಾನು ಇದೇ ಮೊದಲು ಕೇಳಿದ್ದು. ಹಾಗಾದರೆ, ರೋಹಿಣಿ ಸಿಂಧೂರಿ ಸಂಧಾನಕ್ಕೆ ಹೋಗಿದ್ದು ಯಾಕೆ? ಆಕೆ ಏನನ್ನು ಮುಚ್ಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ? ತಮ್ಮ ಕರ್ತವ್ಯ ಲೋಪದ ಬಗ್ಗೆಯೋ, ತಮ್ಮ ಭ್ರಷ್ಟಾಚಾರ ಬಗ್ಗೆಯೋ ಏನು?
1. ಡಿಕೆ Ravi ias, ಸಂಭಾವಿತ ವ್ಯಕ್ತಿ. ಸಿಬಿಐ ರಿಪೋರ್ಟ್ ನಲ್ಲಿ ಅವರ ಚಾಟ್ಸ್ ಬಗ್ಗೆ ಉಲ್ಲೇಖ ಇದ್ದು, ರವಿ ಅವರು ಎಂದಾದರೂ limit cross ಮಾಡಿದ ತಕ್ಷಣವೇ ಅವರನ್ನು ಬ್ಲಾಕ್ ಮಾಡಬಹುದಿತ್ತು. ಪರ್ಮನೆಂಟ್ ಆಗಿ ಬ್ಲಾಕ್ ಮಾಡಲಿಲ್ಲ ಈಕೆ. ಬ್ಲಾಕ್ ಮಾಡದೆ ಇದ್ದದ್ದು ಉತ್ತೇಜನ ಕೊಡುವ ಹಾಗೆ ಎಂಬಂತೆಯೇ ಕಾಣುತ್ತದೆ ಎಂಬುದು ಅನೇಕರ ಅಭಿಪ್ರಾಯ.
3. ಚಾಮರಾಜನಗರದಲ್ಲಿ 24 ಜನರು Oxygen ಇಲ್ಲದೇ ಸತ್ತಾಗ, ಆಪಾದನೆಗಳು ಇವರ ಮೇಲೇ ನೇರವಾಗಿ ಬಂತು. ಅದರಿಂದ ಹೇಗೋ ಪಾರಾದರು.
4. ಕನ್ನಡದ ಹುಡುಗಿ ಶಿಲ್ಪಾ ನಾಗ್ ಐಎಎಸ್. ಅವರ ಜೊತೆ ಜಗಳ, ರಂಪ. ಏತಕ್ಕಾಗಿ? ಅಲ್ಲಿ ಯಾವುದೇ ಮೌಲ್ಯಾಧಾರಿತ ವಸ್ತು ವಿಷಯ ಇರಲಿಲ್ಲ. ಕೋಳಿ ಜಗಳ. ಶಿಲ್ಪಾ ಗೆ ಹೆಚ್ಚು ಕೆಲಸ ಮಾಡಿದ್ದು, ಹೆಚ್ಚು ಅವರ ಬಗ್ಗೆ ಪಾಸಿಟಿವ್ ಆಗಿ ಬರೆಯಲಾಯಿತು. ಅದನ್ನು ಸಹಿಸಿಕೊಳ್ಳಲಾಗದೆ ಶಿಲ್ಪಾ ಗೆ harrassment ಮಾಡಿದರು ಎಂದು ಕೆಲವರು ಹೇಳಿದರು. ಕಡೆಗೆ ಮೈಸೂರಲ್ಲಿ ಗೌಡ, journalists Shilpa nag ಅವರಿಗೆ ಜಾತಿ ಬೆಂಬಲ ನೀಡುತ್ತಿದ್ದಾರೆ ಎಂಬ ಮಟ್ಟಿಗೆ ಸ್ವತಃ ಇಲ್ಲದ ಜಾತೀಯತೆ ಮೈಸೂರಿನ ಜರ್ನಲಿಸ್ಟ್‌ಗಳಲ್ಲಿ ಬಿತ್ತಿದರು ಈಕೆ ಎಂದು ಅನೇಕರು ಹೇಳುತ್ತಾರೆ.
5. ಹರ್ಷ ಗುಪ್ತ ಐಎಎಸ್ ಅತ್ಯಂತ ಪ್ರಾಮಾಣಿಕ ಅಧಿಕಾರಿ. ಅವರ ಜೊತೆ ಜಗಳ. ಎಲ್ಲಾ ಐಎಎಸ್ ಅಧಿಕಾರಿಗಳಿಗೆ ಈ ವಿಷಯ ಗೊತ್ತಿದೆ.
6. ಮಣಿವಣ್ಣನ್ ಐಎಎಸ್ ಜೊತೆ ಲೇಬರ್/ ಕಾರ್ಮಿಕ ಇಲಾಖೆಯಲ್ಲಿ ಇದ್ದಾಗ ಜಗಳ ಮಾಡಿದ್ದು ಜಗಜನಿತ. ಮಣಿವಣ್ಣನ್ ಒಂದು ರೀತಿ ಅಜಾತಶತ್ರು. ಅಂಥದರಲ್ಲಿ…ಅವರ ಜೊತೆ ಜಗಳ.
7. ಡಿಕೆ ರವಿ ತೀರಿದ ಕೆಲ ತಿಂಗಳು ಮುಂಚೆ ಕನ್ನಡದ ಹುಡುಗ, N ಹರೀಶ್ ಐಪಿಎಸ್, ಈಕೆಯ batchmate. ಮದ್ವೆ ಆಗಿರಲಿಲ್ಲ. ಆತ ಈಕೆಗೆ ಕಾದು ಕಾದು ಆತ ಆತ್ಮಹತ್ಯೆ ಮಾಡಿಕೊಂಡದ್ದು ಎಂದು ಹಲವರು ಹೇಳಿದರೂ ನಾನು ಅದನ್ನು ನಂಬಲಿಲ್ಲ, ಈಗೂ ನಂಬಿಲ್ಲ.
8. ಸಾ.ರಾ.mahesh, ಎಂಎಲ್ಎ ಅವರ ಮೇಲೆ ಅನೇಕ ಆಪಾದನೆಗಳನ್ನು ಮಾಡಿದ ಈಕೆ ಒಂದನ್ನೂ prove ಮಾಡಲಿಲ್ಲ. ಅದಕ್ಕೇ ಸಂಧಾನಕ್ಕೆ ಹೋದರಾ?
9. ಮೈಸೂರು ಎಂಪಿ ಪ್ರತಾಪ್ ಸಿಂಹ ಮೇಲೆ ಕೂಡ ಅನೇಕರ ಬಳಿ ಈಕೆ prove ಮಾಡಲಾರದ allegations ಮಾಡಿದರು. ಅಂದರೆ, ಪ್ರತಾಪ್ ಸಿಂಹ ಅವರು private clinics ಗೆ Oxygen ಕೇಳುತ್ತಾ ತಮ್ಮ ಸ್ವಂತ ಲಾಭಕ್ಕೆ ನಿಂತಿದ್ದಾರೆ ಎಂಬ ನಿರಾಧಾರ ಆರೋಪ ಮಾಡಿದರು. ನಿಜ ಇದ್ದಿದ್ದೇ ಆದರೆ ಅದನ್ನು prove ಯಾಕೆ ಮಾಡಲಿಲ್ಲ?
10. ಹಾಸನದಲ್ಲಿ ತನ್ನನ್ನು ಒಂದು ವರ್ಷದ ಒಳಗೆ ಎತ್ತಂಗಡಿ ಮಾಡಿದ ಸರ್ಕಾರದ ವಿರುದ್ಧ CAT/ Central administrative tribunal, ಇಲ್ಲಿ ದಾವೆ ಹೂಡಿದರು. ಆ ದಾವೆಗೆ application ಬರೆದು ಕೊಟ್ಟಿದ್ದೇ ನನ್ನ ಪತಿ, Munish moudgil ias. ನನ್ನೆದುರಿಗೆ ಬರೆದು ಆಕೆಗೆ, ಆಕೆಯ ತಂದೆಗೆ, ಲಾಯರ್ ಗೆ ಕಳಿಸಿದ್ದರು. ಆದರೆ ಈಕೆ, ಮೈಸೂರು ಡಿಸಿ ಆಗಿ ಹೋದದ್ದು ಹೇಗೆ? ತನಗಿಂತ ಕೇವಲ 29 ದಿನ ಮುಂಚೆ ಮೈಸೂರಿಗೆ ಡಿಸಿ ಎಂದು transfer ಆಗಿದ್ದ ಕನ್ನಡ ಹುಡುಗ ಶರತ್ ಅವರನ್ನು ಒಕ್ಕಲೆಬ್ಬಿಸಿದ್ದು ನ್ಯಾಯವೇ? ತನ್ನಂತೆ ಪರರು ಎಂಬ ಭಾವನೆ ಇಲ್ಲವೇಕೆ? 29 ದಿನದಲ್ಲಿ ಯಾವುದೇ ಕಳಂಕ, ಆರೋಪ ಇಲ್ಲದ ಶರತ್ ರನ್ನು replace ಮಾಡಿದ್ದು ಯಾವ high level influence ನಿಂದಾ?
11. Dr Ravishankar IAS ಈಕೆಯ ಮೇಲೆ ಪ್ರಿಲಿಮಿನರಿ inquiry ಯಲ್ಲಿ ತಪ್ಪುಮಾಡಿರುವುದು ಸಾಬೀತಾಗಿದೆ. ಮೈಸೂರಿನ ಡಿಸಿ ಮನೆ, ಹೆರಿಟೇಜ್ building ಅಂತಾ ಇದ್ದರೂ ಅಲ್ಲಿ ಟೈಲ್ಸ್ ಹಾಕಿದ್ದು, ಸ್ವಿಮ್ಮಿಂಗ್ ಪೂಲ್ ಮಾಡಿದ್ದು. ಮನುಷ್ಯತ್ವ ಇರೋರು covid ಸಮಯದಲ್ಲಿ ಜನ ಸಾಯುತ್ತಿರುವಾಗ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ತಾರ? John was fiddling when Rome was burning ಅಂದ ಹಾಗೆ. Marie Antoinette ಎಂಬ ರಾಣಿ , ಜನರು bread ಇಲ್ಲದೆ ಸಾಯ್ತಿದ್ದಾರೆ ಅಂತ ಕೇಳಿಸಿಕೊಂಡಾಗ, bread ಇಲ್ಲದೆ ಇದ್ದರೆ ಏನು, ಜನರು cake ತಿನ್ನಲಿ ಅಂದಳಂತೆ. ಆ ರಾಣಿಯ ನೆನಪಾಯ್ತು.
12. ಹಿಂದೆ ನನಗೆ ಒಬ್ಬರು whatsapp ಮೆಸೇಜ್ ಮಾಡಿ ತಾವು ಇವರ ಪರವಾಗಿ ನಡೆಸುವ social media handling agency ಒಂದರಲ್ಲಿ ಕೆಲಸ ಮಾಡಿದ್ದು, ಈಗ ಆ ಕೆಲಸ ಬಿಟ್ಟಿದ್ದೇನೆ ಎಂದು ಹೇಳುತ್ತಾ, ಹೇಗೆ ಅಲ್ಲಿ ಈಕೆಯ ಪರವಾಗಿ ಸುದ್ದಿ, photos ,videos create ಮಾಡುತ್ತಾರೆ, ಹೇಗೆ ಈಕೆಯ ವಿರುದ್ಧ ಇರುವವರ ಟ್ರೋಲ್ ಮಾಡುವ content ಹಾಗೂ ಹ್ಯಾಂಡಲ್ ಗಳು ತಯಾರಾಗುತ್ತವೆ ಎಂಬುದು ಹೇಳಿದ್ದರು. ನಾನು ಅದನ್ನು ಫೇಸ್‌ಬುಕ್‌ನಲ್ಲಿಯೂ ಹಾಕಿದ್ದೆ.
13. ಈಕೆಯ ಮೇಲೆ ಅಗ್ಗದ ಬ್ಯಾಗ್ ಗಳನ್ನೂ ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡಿರುವ ಕಂಪ್ಲೇಂಟ್ ಲೋಕಾಯುಕ್ತದಲ್ಲಿ register ಆಗಿದ್ದು, ಅದರ ತನಿಖೆ ಕೈಗೆತ್ತಿಕೊಳ್ಳಲು ಲೋಕಾಯುಕ್ತ ಈಗಾಗಲೇ ಸರ್ಕಾರಕ್ಕೆ ಬರೆದಿದೆ. ಆದರೂ ಸರ್ಕಾರ ಮಟ್ಟದಲ್ಲಿ ಕಾರಣ ಕೊಡದೆ ಆಕೆಯನ್ನು ತನಿಖೆಗೆ ಒಳಪಡಿಸಲು ಅನುಮತಿ reject/ ನಿರಾಕರಣೆ ಮಾಡಲಾಗಿದೆ. ಅದರ copy ನನ್ನ ಬಳಿ ಇದೆ. ಸಾಮಾನ್ಯವಾಗಿ ಅಧಿಕಾರಿಗಳಿಗೆ ಈ ರೀತಿಯ support ಇರುತ್ತದೆಯೇ?
14. ಈಕೆ ಕೆಲವು ಐಎಎಸ್ ಅಧಿಕಾರಿಗಳಿಗೆ, ಒಂದಲ್ಲ, ಎರಡಲ್ಲ, ಅನೇಕರಿಗೆ ತನ್ನ not so decent ಚಿತ್ರಗಳನ್ನು ಕಳಿಸಿರುವ ಹಾಗೂ ಅವರನ್ನು ಉತ್ತೇಜಿಸುವ ಕಾರ್ಯ ಮಾಡಿರುವ ಆಪಾದನೆ ಇದೆ. ಆ ಪಿಕ್ಸ್ ಗಳು ನನಗೆ ಸಿಕ್ಕಿವೆ. ಇದು private vishaya ಆಗುವುದಿಲ್ಲ. All India service conduct rules ಪ್ರಕಾರ ಹಿರಿಯ ಅಧಿಕಾರಿಗಳು ಈ ರೀತಿಯ ಪಿಕ್ಸ್ , ಸಂಭಾಷಣೆ ಮಾಡುವುದು ಅಪರಾಧ. ಈ ಆಪಾದನೆಗಳನ್ನು ಸರ್ಕಾರ ತನಿಖೆ ಮಾಡುವುದೇ, ನೋಡಬೇಕಿದೆ. ಏಕೆಂದರೆ ಸತ್ಯಾಸತ್ಯತೆ ಹೊರ ಬರಬೇಕಿದೆ.
15. ಮೊನ್ನೆ ಇವರ ಬಾವ ಮಧುಸೂಧನ್ ರೆಡ್ಡಿ ಅವರು, lucky Ali ಎಂಬ ಗಾಯಕರ ಜಾಗಕ್ಕೆ 20 – 30 ಜನ ಕರೆದುಕೊಂಡು ಹೋಗಿ ರೌಡಿಸಂ ಮಾಡಿರುವ ವಿಷಯ ಮಾಧ್ಯಮಗಳಲ್ಲಿ ಬಂತು. ಈಕೆಯು ತನ್ನ ಐಎಎಸ್ ಪ್ರಭಾವ ಬಳಸಿ ದುರುಪಯೋಗ ಮಾಡಿಕೊಂಡು ಇರುವುದಾಗಿ lucky Ali ಆರೋಪ ಮಾಡಿದರು. ವ್ಯಾಜ್ಯದ ಜಮೀನಿಗೆ 20-30 ಜನ ಕರೆದುಕೊಂಡು ಹೋಗಿ ಕಾನೂನು ಕೈಗೆ ತೆಗೆದುಕೊಳ್ಳಬಹುದು? ಈ ರೀತಿಯ ಬಂಡ ಧೈರ್ಯ ಎಲ್ಲಿಂದ ಬರುತ್ತದೆ? ಐಎಎಸ್ ಅಧಿಕಾರದಿಂದ?
16. ಇವರ ಗಂಡ , ಹಾಗೂ ಇವರ ಮಾವನವರು ( ಈಗ ತೀರಿ ಹೋಗಿದ್ದಾರಂತೆ) real estate ಬ್ಯುಸಿನೆಸ್ ನಡೆಸುತ್ತಾರೆ. ಅನೇಕ ಬಾರಿ ಸರ್ವೇ ಹಾಗೂ ಭೂ ದಾಖಲೆ ಕಚೇರಿಯ ಮೂಲಕ ತನ್ನ family business ಗೆ ಅಗತ್ಯ ಇರುವ ಅನೇಕ land related ಮಾಹಿತಿ , ಅಂದರೆ, ಒಂದು ಭೂಮಿಯ ಫೋಡಿ, ಇನ್ನೊಂದರ ಬಗ್ಗೆ ಅದು ವ್ಯಾಜ್ಯ ಇರುವ ಭೂಮಿಯೇ ಅಥವಾ ಖರೀದಿಸಲು ಯೋಗ್ಯವೇ ಎಂಬಂತಹ ಮಾಹಿತಿಗಳನ್ನು ತಮ್ಮ ಐಎಎಸ್ ಸ್ಥಾನ ಅಧಿಕಾರದಿಂದ ಪಡೆದು ಕೊಂಡಿರುವ ಮಾಹಿತಿ ದಾಖಲೆ ಸಮೇತ ಇದ್ದು, ಇದರ ಮೇಲೆ ಕ್ರಮ ಆಗುತ್ತದೆಯೇ? ನೋಡಬೇಕು.
17. ಅನೇಕ ಬಾರಿ ಸರ್ಕಾರ ಅಧಿಕಾರಿಗಳನ್ನು transfer ಮಾಡಿದಾಗ ಆ ಜಾಗದಲ್ಲಿ ಇದ್ದವರು ಕ್ಯಾಟ್/ಕೋರ್ಟ್ ಗೆ ಹೋಗುವುದು ಸಹಜ. ನಾನು 3 ವರ್ಷ ದೂರದ ಯಾದಗಿರಿಯಲ್ಲಿ ಕೆಲಸ ಮಾಡಿ ( senior most sp in the state, 2013 ರಲ್ಲೀ ನಾನು) ಬೆಂಗಳೂರಿಗೆ ವರ್ಗವಾದಾಗ, ಆ ಜಾಗದಲ್ಲಿ ಇದ್ದ ಅಧಿಕಾರಿ, ಪವಾರ್, ನನ್ನ ವರ್ಗಾವಣೆ ಪ್ರಶ್ನಿಸಿ ಕ್ಯಾಟ್ ಗೆ ಹೋದರು. ಆದರೆ, ರೋಹಿಣಿ ಸಿಂಧೂರಿಗೆ ಸಾಕ್ಷಾತ್ ಅಡ್ವೊಕೇಟ್ ಜನರಲ್ ಅವರೇ ಬಂದು ವಾದ ಮಾಡಿದರಲ್ಲ, ಮೈಸೂರು ಡಿಸಿ ವರ್ಗಾವಣೆ ವಿಷಯದಲ್ಲಿ, ಆ ಸೌಲಭ್ಯ ನನಗೇಕೆ ಸಿಗಲಿಲ್ಲ? ನನ್ನಂತಹ ಕನ್ನಡಿಗ ಅಧಿಕಾರಿಗಳು, ಹೇಗೆ ನಡೆಸಿಕೊಂಡರೂ ಸುಮ್ಮನೆ ಇರ್ತಾರೆ ಅಂತಲೇ? ಸ್ವತಃ ಅಡ್ವೊಕೇಟ್ ಜನರಲ್ ಹಾಜರಾಗಿ ವಾದ ಮಾಡಿದ್ದು ಈಕೆಗಲ್ಲದೇ ಮತ್ಯಾವ ಅಧಿಕಾರಿಗೂ ಈ ಸೌಲಭ್ಯ ಸಿಕ್ಕಿಲ್ಲ. ಯಾಕೆ ಈ ಮಲತಾಯಿ ಧೋರಣೆ?
18. ಈಕೆ ಪ್ರೊಬೇಷನರಿ ಅಂತ ಇದ್ದಾಗ, ಅಲ್ಲಿಯ ಡಿಸಿ ಹಾಗೂ ಅವರ ಪತ್ನಿ ನೆರೆಯ ಜಿಲ್ಲೆಯ ಡಿಸಿ, ಇವರಿಬ್ಬರ ಸಂಸಾರದಲ್ಲಿ ಹುಳಿ ಬಿದ್ದು ಅವರು ಬೇರ್ಪಟ್ಟಿದ್ದಾರೀಗ ಹಾಗೂ ಇದು ಈಕೆಯ ದೆಸೆಯಿಂದ ಎಂಬ ಮಾತು ಅನೇಕರ ಬಾಯಲ್ಲಿ ಕೇಳಿದ್ದೇನೆ.
19. ಜಾಲಹಳ್ಳಿ ಯಲ್ಲಿ ಈಕೆಯ( ಪತಿಯದ್ದು ಇದ್ದರೂ ಈಕೆಯದೂ ಆಗುತ್ತದೆ) ದೊಡ್ಡ ಮನೆ ಒಂದು ಕಟ್ಟುತ್ತಿದ್ದು, ಐಎಎಸ್ ಅಧಿಕಾರಿ ಸಲ್ಲಿಸಬೇಕಾದ immovable property returns ನಲ್ಲಿ ಈ ಮನೆಯ ಉಲ್ಲೇಖ ಇರದೆ, ಬೇರೆಲ್ಲಾ ಲಂಗು ಲೊಟ್ಟು property ಬಗ್ಗೆ ವರದಿ ಕೊಟ್ಟಿದ್ದಾರೆ. ಆ ಮನೆಗೆ ಕೋಟಿಗಟ್ಟಲೆ ಇಟಲಿ ಫರ್ನೀಚರ್, 26 ಲಕ್ಷದ ಜರ್ಮನ್ appliances ( ಅದನ್ನು duty free ಮಾಡಿಸಿಕೊಳ್ಳುವ ಬಗ್ಗೆ ಚರ್ಚೆ ಇರುವ, 6 lakhs ಕೇವಲ ಬಾಗಿಲಿನ hinges ಗೆ ಖರ್ಚು ಮಾಡಿರುವ ಬಗ್ಗೆ ಈಕೆ ಮಾಡಿರುವ ಚಾಟ್ ಗಳ ಮಾಹಿತಿ ಸರ್ಕಾರಕ್ಕೆ ಸಿಕ್ಕಿದೆ. ಇದರ ಮೇಲೆ ಕೂಲಂಕಷ ತನಿಖೆ ಆಗುವ ಹಾಗೆ ನೋಡಬೇಕಿದೆ. ಇಷ್ಟೆಲ್ಲಾ ಆದ್ರೂ, ಯಾರು ಪ್ರತಿ ಬಾರಿ ಈಕೆಯನ್ನು ತನಿಖೆಗೂ ಒಳಪಡಿಸದೇ ಬಚಾವ್ ಮಾಡುತ್ತಾ ಇರುವುದು. ಈಕೆ ಯಾವುದೇ ಶಿಕ್ಷೆಯಿಲ್ಲದೆ ಪ್ರತಿ ಬಾರಿ ಬಚಾವ್ ಆಗಿರುವುದೇ? ಅಥವಾ ಕಿಂದರಿ ಜೋಗಿ ಮಾಡಿದ ರೀತಿಯಲ್ಲಿ ಸರ್ಕಾರದಲ್ಲಿ ಇರುವ ಪ್ರಭಾವಿಗಳು ಕಿಂದರಿ ಜೋಗಿಯ ಪಾಶಕ್ಕೆ ಸಿಲುಕಿದರೆ?
LIVE TV
[brid partner=56869869 player=32851 video=960834 autoplay=true]
ಮೈಸೂರು: ಐಎಎಸ್ (IAS) ಅಧಿಕಾರಿ ರೋಹಿಣಿ ಸಿಂಧೂರಿ (Rohini sindhuri) ವಿರುದ್ಧ ಜೆಡಿಎಸ್ ಶಾಸಕ ಸಾ.ರಾ ಮಹೇಶ್ (Sa Ra Mahesh) ಅವರಿಂದು 1 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಅಲ್ಲದೇ ನಾನು ಬೇಕಿದ್ದರೆ ರಾಜಕಾರಣ (Politics) ಬಿಡುತ್ತೇನೆಯೇ ಹೊರತು ಇಂತಹ ಗೋಮುಖಗಳ ಮುಖವಾಡ ಕಳಚುವುದನ್ನು ಬಿಡುವುದಿಲ್ಲ. ಕಷ್ಟಪಟ್ಟು ಬೆಳೆದ ನನಗೆ ತಮ್ಮ ತಪ್ಪು ಮುಚ್ಚಿಕೊಳ್ಳಲು ಕೆಸರು ಎರಚಿದರು. ನನಗೆ ಆದ ಅನ್ಯಾಯದ ವಿರುದ್ಧ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ. ರಾಜಕಾರಣದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಆದರೆ ಎಲ್ಲರೂ ಭ್ರಷ್ಟರಲ್ಲ. ಇವರು ಎಲ್ಲರನ್ನೂ ಭ್ರಷ್ಟರೆಂದು ಬಿಂಬಿಸಲು ಯತ್ನಿಸುತ್ತಾರೆ. ಇಂಥವರ ಮುಖವಾಡ ಕಳಚುತ್ತೇನೆ ಎಂದು ಸವಾಲು ಹಾಕಿದ್ದಾರೆ.
ನಂತರ ಸಾರಾ ಮಹೇಶ್ ಅವರ ಪರ ವಕೀಲ (Lawyer) ಅರುಣ್ ಕುಮಾರ್ ಮಾತನಾಡಿ, ಮಾನನಷ್ಟ ಮೊಕದ್ದಮೆ ಹೂಡುವ ಮುನ್ನಾ ರೋಹಿಣಿ ಸಿಂಧೂರಿ ಅವರಿಗೆ ಲೀಗಲ್ ನೋಟಿಸ್ ಕೊಟ್ಟಿದ್ದೆವು. ನೋಟಿಸ್‌ಗೆ ರೋಹಿಣಿ ಸಿಂಧೂರಿ ಅವರು ಉತ್ತರ ಕೊಟ್ಟಿದ್ದು, ಸಾರಾ ಮಹೇಶ್ ವಿರುದ್ಧ ಮಾತನಾಡಿರೋ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಇದು ಖಾಸಗಿ ಸಂಭಾಷಣೆ ಎಂದು ಹೇಳಿದ್ದಾರೆ. ಇದೇ ಉತ್ತರದ ಆಧಾರದ ಮೇಲೆ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ ಎಂದು ತಿಳಿಸಿದ್ದಾರೆ.
2ನೇ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ (District Session Court) ರೋಹಿಣಿ ಸಿಂಧೂರಿ ಅವರಿಗೆ ನೋಟಿಸ್ ಜಾರಿಯಾಗಿದೆ. ಅಕ್ಟೋಬರ್ 20 ರೊಳಗೆ ರೋಹಿಣಿ ಸಿಂಧೂರಿ ಉತ್ತರ ಕೊಡಬೇಕು ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮೈಸೂರು: ಹೆಚ್ಚು ಸಾಲ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಭಾರತ ರತ್ನ ನೀಡಲಿ ಎಂದು ಜೆಡಿಎಸ್ ಶಾಸಕ ಸಾ.ರಾ ಮಹೇಶ್ ವ್ಯಂಗ್ಯವಾಡಿದರು.
ಕೆ ಆರ್ ನಗರದ ಜೆಡಿಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವರು ರಾಜ್ಯದ ಸಿಎಂ ಆಗಿದ್ದರು. ನಮ್ಮ ಪಕ್ಷದಿಂದಲೇ ಹೊರ ಹೋದ ಹಿರಿಯ ನಾಯಕರೊಬ್ಬರು ನಮಗೆ ಬೆಂಬಲ ನೀಡಲಿಲ್ಲ. ನಮ್ಮ ಮನೆಯಲ್ಲಿಯೇ ತಿಂದು ಮೈ ಬೆಳೆಸಿ ಈಗ ನಮಗೇನೇ ತಿರುಗಿ ನಿಂತಿದ್ದಾರೆ. ಸಿದ್ದರಾಮಯ್ಯ ಅವರು ಬಿಜೆಪಿ ಗೆದ್ದರು ಪರವಾಗಿಲ್ಲ ಜೆಡಿಎಸ್ ಗೆಲ್ಲಬಾರದು ಅಂದಿದ್ದರು. ಆದರೆ ನಮ್ಮ ರಾಜ್ಯದ ಜನ ತುಂಬಾ ಹುಷಾರ್ ಇದ್ದಾರೆ. ಯಾರನ್ನು ಗೆಲ್ಲಿಸಬೇಕು. ಯಾರನ್ನು ಬೀಡಬೇಕು ಅನ್ನುವುದು ಜನತೆಗೆ ತುಂಬಾ ಚೆನ್ನಾಗಿ ಗೋತ್ತಿದೆ ಎಂದರು. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ
ಯಾರು ಮಾಡದಷ್ಟು ಸಾಲ ಸಿದ್ದರಾಮಯ್ಯ ಮಾಡಿದ್ದಾರೆ. ಅವರು 2 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಹೇಳಿದರು. ರಾಜ್ಯದ ಬಜೆಟ್‍ನಷ್ಟೇ ಅವರು ಸಾಲ ಮಾಡಿದ್ದಾರೆ. ಆದರೂ ಜೆಡಿಎಸ್ ಬಗ್ಗೆ ಅವರು ಮಾತನಾಡುತ್ತಾರೆ. ಇನ್ನು ಮುಂದೆಯಾದರೂ ಅವರು ಜೆಡಿಎಸ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು. ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ವಿಜೇತ ನಟ ವಿಲಿಯಂ ಹರ್ಟ್ ಇನ್ನಿಲ್ಲ