Tag: Sa.Ra Govindu

  • ನಾನು ಸತ್ತರೆ ನಂದಕಿಶೋರ್, ಸಾರಾ ಗೋವಿಂದು ಕಾರಣ – ವೀಡಿಯೋ ಹರಿಬಿಟ್ಟ ಶಬರೀಶ್ ಶೆಟ್ಟಿ

    ನಾನು ಸತ್ತರೆ ನಂದಕಿಶೋರ್, ಸಾರಾ ಗೋವಿಂದು ಕಾರಣ – ವೀಡಿಯೋ ಹರಿಬಿಟ್ಟ ಶಬರೀಶ್ ಶೆಟ್ಟಿ

    ಸ್ಯಾಂಡಲ್‍ವುಡ್‍ನ (Sandalwood) ಯುವನಟ ಶಬರೀಶ್ ಶೆಟ್ಟಿ ಆಘಾತಕಾರಿ ವೀಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಸಹಾಯಕತೆಯಿಂದ ವೀಡಿಯೋ ಮಾಡಿ ನಾನು ಸತ್ತರೆ ಅದಕ್ಕೆ ಕಾರಣ ನಿರ್ದೇಶಕ ನಂದಕೀಶೋರ್ (Nanda Kishore) ಹಾಗೂ ಸಾರಾ ಗೋವಿಂದು (Sa Ra Govindu) ಎಂದಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ನಿರ್ದೇಶಕ ನಂದಕೀಶೋರ್ ಮೇಲೆ 22 ಲಕ್ಷ ರೂ. ವಂಚಿಸಿದ ಆರೋಪ ಮಾಡಿದ್ದರು.

    ನಿರ್ದೇಶಕ ನಂದಕೀಶೋರ್ ಮೇಲೆ ವಂಚನೆ ಆರೋಪ (Fraud Case) ಮಾಡಿದ್ದ ನಟ ಶಬರೀಶ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದರು. ಬಳಿಕ ಫಿಲ್ಮ್ ಚೇಂಬರ್ ವತಿಯಿಂದ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಯುವನಟ ಶಬರೀಶ್‍ಗೆ ಕರೆಮಾಡಿ ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ ಹಣ ವಾಪಸ್ ಕೊಡಿಸುತ್ತೇನೆ ದುಡಕಬೇಡ ಎಂದಿದ್ದರಂತೆ. ಸಾರಾ ಗೋವಿಂದು ಕೊಟ್ಟ ಸಮಯ ಮುಗಿದ ಬಳಿಕ ಶಬರೀಶ್ ಕರೆ ಮಾಡಿ ವಿಚಾರಿಸಿದಾಗ ಏನ್ ಬೇಕಾದ್ರೂ ಮಾಡಿಕೊಳ್ಳಿ ಎಂಬ ಉತ್ತರ ಬಂದಿದ್ದಕ್ಕೆ ನೊಂದ ಯುವನಟ ಇದೀಗ ವೀಡಿಯೋ ರೆಕಾರ್ಡ್ ಮಾಡಿ ನಡೆದಿರುವ ಘಟನೆ ವಿವರಿಸಿದ್ದಾರೆ. ಇದನ್ನೂ ಓದಿ: ರೆಟ್ರೋ ಲುಕ್‌ನಲ್ಲಿ ಮಿಂಚಿದ ಶಿವಣ್ಣ, ಡಾಲಿ

    ನಿರ್ದೇಶಕ ನಂದಕಿಶೋರ್ ಮೇಲೆ 22 ಲಕ್ಷ ರೂ. ವಂಚನೆ ಆರೋಪ ಮಾಡಿದ್ದ ಶಬರೀಶ್ ಶೆಟ್ಟಿ. ಫಿಲ್ಮ್ ಚೇಂಬರ್‍ಗೆ ದೂರು ಕೊಟ್ಟಿದ್ದರು. ಬಳಿಕ ಸಾಲಪಡೆದ ನಂದಕಿಶೋರ್ ಸಂಪರ್ಕ ಮಾಡಲು ಆಗದೆ ಅಸಹಾಯಕರಾಗಿದ್ದೇನೆ ಎಂದಿದ್ದಾರೆ. ಬಳಿಕ ಶಬರೀಶ್‍ಗೆ ಕರೆ ಮಾಡಿದ್ದ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ, ನಂದಕಿಶೋರ್ ಪರವಾಗಿ ಸಂಧಾನ ಮಾಡೋದಾಗಿ ಹೇಳಿದ್ದರಂತೆ. ಸಾರಾ ಗೋವಿಂದ್ ಮಾತು ಕೇಳಿ ಪೊಲೀಸರಿಗೆ ದೂರು ಕೊಡುವ ನಿರ್ಧಾರವನ್ನ ಕೈ ಬಿಟ್ಟಿದ್ದ ಅವರು, 2 ತಿಂಗಳಾದ್ರೂ ಸಂಧಾನ ಆಗದೇ ಇದ್ದಾಗ ಮತ್ತೆ ಸಾರಾ ಗೋವಿಂದ್‍ಗೆ ಕರೆ ಮಾಡಿದ್ದಾರೆ. ಈ ವೇಳೆ ನಿನ್ನ ಕೈಯಿಂದ ಏನ್ ಮಾಡೋಕೆ ಆಗತ್ತೋ ಮಾಡ್ಕೋ ಅಂದ್ರಂತೆ. ಇತ್ತ ಹಣವೂ ಬಾರದೇ, ಅತ್ತ ಸಂಧಾನವೂ ನಡೆಯದೇ ಆತ್ಮಹತ್ಯೆಯ ಬೆದರಿಕೆ ಹಾಕಿದ್ದಾರೆ.

    ನಾನೇನಾದರೂ ಸೂಸೈಡ್ ಮಾಡಿಕೊಂಡರೆ ಅದಕ್ಕೇ ನೇರ ಹೊಣೆ ನಂದಕಿಶೋರ್ ಮತ್ತು ಸಾರಾ ಗೋವಿಂದ್ ಎಂದು ಆರೋಪಿಸಿ ವೀಡಿಯೋ ಮಾಡಿ ಹರಿಬಿಟ್ಟಿದ್ದಾರೆ ಶಬರೀಶ್ ಶೆಟ್ಟಿ. ಇದನ್ನೂ ಓದಿ: ಕೋರ್ಟ್ ಆದೇಶಿಸಿದ್ರೂ ಹಾಸಿಗೆ, ದಿಂಬು ಒದಗಿಸಿಲ್ಲ – ಮತ್ತೆ ಅರ್ಜಿ ಸಲ್ಲಿಸಿದ ದರ್ಶನ್ ಪರ ವಕೀಲರು

  • ಬಹಿರಂಗವಾಗಿ ಕ್ಷಮೆ ಕೇಳದಿದ್ರೆ ಕಮಲ್ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಕೊಡಲ್ಲ: ಸಾರಾ ಗೋವಿಂದು

    ಬಹಿರಂಗವಾಗಿ ಕ್ಷಮೆ ಕೇಳದಿದ್ರೆ ಕಮಲ್ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಕೊಡಲ್ಲ: ಸಾರಾ ಗೋವಿಂದು

    – ಕ್ಷಮೇ ಕೇಳಿಸುವ ಪ್ರಯತ್ನ ಮಾಡ್ತೀವಿ ಎಂದ ಫಿಲ್ಮ್‌ ಚೇಂಬರ್‌ ಅಧ್ಯಕ್ಷ ನರಸಿಂಹಲು

    ಬೆಂಗಳೂರು: ನಟ ಕಮಲ್ ಹಾಸನ್ (Kamal Haasan) ಕೊಟ್ಟ ಉದ್ಧಟತನದ ಹೇಳಿಕೆ ಇಡೀ ರಾಜ್ಯದ ಜನರ ಆಕ್ರೋಶ ಕಟ್ಟೆಯೊಡೆಯುವಂತೆ ಮಾಡಿದೆ. ರಾಜ್ಯದಲ್ಲಿ ಕಮಲ್‌ ಸಿನಿಮಾಗಳನ್ನ ಬ್ಯಾನ್‌ ಮಾಡುವಂತೆ ಕನ್ನಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಈ ನಡುವೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber) ಸಭೆ ನಡೆಸಿದ್ದು, ಕ್ಷಮೆ ಕೇಳಿಸುವ ಪ್ರಯತ್ನ ಮಾಡುವುದಾಗಿ ಹೇಳಿದೆ.

    ಸಭೆಯಲ್ಲಿ ನಿರ್ಮಾಪಕ ಸಾರಾ ಗೋವಿಂದು ಮಾತನಾಡಿ, ಕಮಲ್ ಹಾಸನ್ ಬಗ್ಗೆ ನಮಗೆ ಯಾರಿಗೂ ಕನಿಕರ ಇಲ್ಲ. ಇವತ್ತು ಅಥವಾ ನಾಳೆ ಒಳಗೆ ಕಮಲ್ ಹಾಸನ್ ಕ್ಷಮೆ ಕೇಳದೇ ಇದ್ರೆ ಖಂಡನೆ ಮಾಡ್ತೀವಿ. ಕಮಲ್ ಹಾಸನ್ ಬಹಿರಂಗವಾಗಿ ಕ್ಷಮೆ ಕೇಳದೇ ಇದ್ರೆ ಯಾವುದೇ ಕಾರಣಕ್ಕೂ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಮಾಡಿಕೊಡಲ್ಲ ಅಂತ ಎಚ್ಚೆರಿಕೆ ನೀಡಿದ್ದಾರೆ. ಇದನ್ನೂ ಓದಿ: ರಾಮಾಯಣ ಸಿನಿಮಾದ ಯಶ್ ಪಾತ್ರದ ಮೊದಲ ಆಕ್ಷನ್ ಸೀಕ್ವೆನ್ಸ್ ಲುಕ್ ರಿವಿಲ್

    ಇನ್ನೂ ಫಿಲ್ಮ್‌ ಚೇಂಬರ್‌ ಅಧ್ಯಕ್ಷ ನರಸಿಂಹಲು ಮಾತನಾಡಿ, ಕನ್ನಡ ರಕ್ಷಣಾ ವೇದಿಕೆಯವರು, ಹಲವಾರು ಸಂಘ ಸಂಸ್ಥೆಗಳು ಖಂಡಿಸಿದ್ದಾರೆ. ಸಿನಿಮಾ ಬ್ಯಾನ್ ಮಾಡ್ಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಕಮಲ್ ಹಾಸನ್ ಕ್ಷಮೆ ಕೇಳ್ಬೇಕು ಅಂತಾ ಒತ್ತಾಯಿಸಿದ್ದಾರೆ. ಕಮಲ್ ಹಾಸನ್ ಮಾಡಿರುವ ತಪ್ಪನ್ನ ಮನವರಿಕೆ ಮಾಡಿಸಿ ಕ್ಷಮೆ ಕೇಳಿಸುವ ಪ್ರಯತ್ನ ಮಾಡ್ತೀವಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರಗಳನ್ನ ನಿರ್ಬಂಧಿಸಿ: ಶಿವರಾಜ್ ತಂಗಡಗಿ ಪತ್ರ

    ಫಿಲ್ಮ್‌ ಚೇಂಬರ್‌ ಮುತ್ತಿಗೆಗೆ ಯತ್ನ:
    ಕಮಲ್‌ ಹಾಸನ್‌ ಚಲನಚಿತ್ರಗಳನ್ನ ಬ್ಯಾನ್‌ಗೆ ಒತ್ತಾಯ ಹೆಚ್ಚಾದಂತೆ ಕರ್ನಾಟಕ ಸಿನಿಮಾ ವಿತರಕ ಕಮಲಾಕರ್ ಅವರ ನೇತೃತ್ವದಲ್ಲಿಂದು ಸಭೆ ನಡೆಸಲಾಯಿತು. ಸಭೆಯಲ್ಲಿ ಫಿಲ್ಮ್‌ ಚೇಂಬರ್‌ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದು, ಥಾಮಸ್ ಡಿಸೋಜಾ ಭಾಗಿ, ಪ್ರದರ್ಶಕ ವಲಯದ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ನಿರ್ಮಾಪಕರು ಭಾಗಿಯಾಗಿದ್ದರು. ಸಭೆ ನಡೆಯುತ್ತಿದ್ದಾಗಲೇ ಕೆಲ ಕನ್ನಡಪರ ಹೋರಾಟಗಾರರು ಮುತ್ತಿಗೆಗೆ ಉತ್ನಿಸಿದ ಘಟನೆಯೂ ನಡೆಯಿತು. ಇದನ್ನೂ ಓದಿ: ಕಮಲ್ ಹಾಸನ್ `ಕನ್ನಡ’ ವಿವಾದ – ಸಾಕು ಸರ್ ಎಂದ ನ್ಯಾಚುರಲ್ ಸ್ಟಾರ್

  • ಕನ್ನಡಿಗರೇನು ಭಯೋತ್ಪಾದಕರಾ?: ಸೋನು ನಿಗಮ್ ಹೇಳಿಕೆಗೆ ಸಾರಾ ಗೋವಿಂದು ಕಿಡಿ

    ಕನ್ನಡಿಗರೇನು ಭಯೋತ್ಪಾದಕರಾ?: ಸೋನು ನಿಗಮ್ ಹೇಳಿಕೆಗೆ ಸಾರಾ ಗೋವಿಂದು ಕಿಡಿ

    ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಆಯ್ತು ಎಂದ ಸೋನು ನಿಗಮ್ (Sonu Nigam) ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರು ಕನ್ನಡ ಸಾಂಗ್ ಹಾಡಿ ಎಂದು ಹೇಳಿದ್ದೆ ತಪ್ಪಾ? ಎಂದು ಸೋನು ನಿಗಮ್ ಆಡಿರುವ ಮಾತಿಗೆ ಕನ್ನಡಪರ ಹೋರಾಟಗಾರ ಸಾರಾ ಗೋವಿಂದು (Sa Ra Govindu) ಕಿಡಿಕಾರಿದ್ದಾರೆ. ಇದನ್ನೂ ಓದಿ:ಕನ್ನಡಿಗರಲ್ಲಿ ಕ್ಷಮೆಯಾಚಿಸಿ: ಸೋನು ನಿಗಮ್ ವಿವಾದಾತ್ಮಕ ಹೇಳಿಕೆಗೆ ಕನ್ನಡ ನಿರ್ಮಾಪಕನ ಆಕ್ರೋಶ

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಸಾರಾ ಗೋವಿಂದು, ಸೋನು ನಿಗಮ್ ಅದ್ಭುತ ಗಾಯಕ ಅದರಲ್ಲಿ ಎರಡು ಮಾತಿಲ್ಲ. ಅಷ್ಟೇ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಈ ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು. ಕರ್ನಾಟಕದಲ್ಲಿ ಕನ್ನಡಿಗರು ಕನ್ನಡ ಸಾಂಗ್ ಹಾಡಿ ಎಂದು ಹೇಳಿದ್ದೆ ತಪ್ಪಾ? ಎಂದು ಪ್ರಶ್ನಿಸಿದ್ದಾರೆ. ಪಹಲ್ಗಾಮ್ ದಾಳಿಗೆ ಯಾಕೆ ಹೋಲಿಸಿದ್ರಿ ಅನ್ನೋದು ಅರ್ಥವಾಗಲಿಲ್ಲ. ಕನ್ನಡಿಗರೇನು ಭಯೋತ್ಪಾದಕರಾ? ಇಂತಹ ಉದ್ಧಟತನದ ಮಾತುಗಳನ್ನು ಆಡೋದು ಬೇಡ. ನೀವು ಕೂಡಲೇ ಕನ್ನಡಿಗರಿಗೆ ಕ್ಷಮೆ ಕೇಳಬೇಕು. ಕ್ಷಮೆ ಕೇಳಲ್ಲಿ ಅಂದರೆ ಕನ್ನಡ ಚಿತ್ರರಂಗದಲ್ಲಿ ಹಾಗೂ ಕರ್ನಾಟಕದಲ್ಲಿ ಯಾವುದೇ ಕಾರ್ಯಕ್ರಮ ಮಾಡೋಕೆ ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮತ್ತೆ ಚರ್ಚೆಗೆ ಗ್ರಾಸವಾಯ್ತು ಕಾರ್ತಿಕ್‌ ಆರ್ಯನ್‌, ಶ್ರೀಲೀಲಾ ಡೇಟಿಂಗ್ ವಿಚಾರ- ವಿಡಿಯೋ ವೈರಲ್

    ಒಬ್ಬ ಜವಾಬ್ದಾರಿಯುತ ವ್ಯಕ್ತಿ ಹೀಗೆ ಮಾತನಾಡಿದಾಗ ಚಲನಚಿತ್ರ ವಾಣಿಜ್ಯ ಮಂಡಳಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಸೋನು ನಿಗಮ್‌ಗೆ ಯಾವುದೇ ಕನ್ನಡ ಸಿನಿಮಾಗಳಲ್ಲಿ ಹಾಡಲು ಅವಕಾಶ ನೀಡಬಾರದು. ಮೊದಲು ಅವರು ಕ್ಷಮೆಯಾಚಿಸಬೇಕು ಎಂದು ಈ ಮೂಲಕ ಎಚ್ಚರಿಕೆ ನೀಡುತ್ತೇವೆ. ಅವರ ಕ್ಷಮೆಗಾಗಿ ಕಾದುನೋಡುತ್ತೇವೆ. ಇಲ್ಲಾಂದ್ರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಗಾಯಕನಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

    ನಿನ್ನೆ (ಮೇ.1) ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿದನು. ಅದಕ್ಕೆ ಸೋನು ನಿಗಮ್ ತಮ್ಮ ಹಾಡನ್ನು ಅರ್ಧಕ್ಕೆ ನಿಲ್ಲಿಸಿ, ತಮಗೆ ಕನ್ನಡ ಮೇಲಿರುವ ಪ್ರೀತಿ, ಇಲ್ಲಿನ ಜನರ ಮೇಲಿರುವ ಗೌರವದ ಬಗ್ಗೆ ಹೇಳಿಕೊಂಡರು.

    ನನ್ನ ವೃತ್ತಿಜೀವನದಲ್ಲಿ ನಾನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ಆ ಪೈಕಿ ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದಲ್ಲಿವೆ. ನಾನು ಕರ್ನಾಟಕಕ್ಕೆ ಬಂದಾಗಲೆಲ್ಲಾ ತುಂಬಾ ಪ್ರೀತಿ, ಗೌರವದಿಂದ ಬರುತ್ತೇನೆ. ನೀವೆಲ್ಲ ನನ್ನನ್ನು ನಿಮ್ಮ ಕುಟುಂಬದವರಂತೆ ನೋಡಿಕೊಂಡಿದ್ದೀರಿ. ಪ್ರತಿ ಬಾರಿ ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದಾಗಲೂ, ಯಾರಾದರೂ ಕನ್ನಡ ಎಂದು ಕೂಗಿದಾಗ ಅವರಿಗಾಗಿ ಒಂದು ಸಾಲು ಕನ್ನಡ ಹಾಡನ್ನಾದರೂ ಹಾಡಿರುತ್ತೇನೆ. ಆ ಹುಡುಗನ ವಯಸ್ಸಿಗಿಂತ ಮೊದಲಿನಿಂದಲೂ ನಾನು ಕನ್ನಡ ಹಾಡು ಹಾಡುತ್ತಿದ್ದೇನೆ. ಆದರೆ ಕನ್ನಡ, ಕನ್ನಡ ಎಂದು ಕಿರುಚಿಕೊಂಡು ಆ ಹುಡುಗ ಹೇಳಿದ್ದು ನನಗೆ ಇಷ್ಟವಾಗಲಿಲ್ಲ. ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡರು.

    ಸೋನು ನಿಗಮ್ ಮಾತಿಗೆ ಕನ್ನಡಪರ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಕನ್ನಡ ಹಾಡುವಂತೆ ಹೇಳಿದ್ದಕ್ಕೂ, ಭಯೋತ್ಪಾದಕರ ದಾಳಿಗೂ ಏನು ಸಂಬಂಧ? ಎಂದು ಆಕ್ರೋಶ ಹೊರಹಾಕಿದ್ದಾರೆ. ಸೋನು ನಿಗಮ್‌ರನ್ನು ಕನ್ನಡ ಚಿತ್ರೋದ್ಯಮದಿಂದ ದೂರ ಇಡಿ ಹಾಗೂ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

  • ಚಿತ್ರರಂಗ ಗೋಕಾಕ್ ಚಳವಳಿ ಮಾಡಿ ಸರ್ಕಾರವನ್ನೇ ಬೀಳಿಸಿತ್ತು: ಸಾರಾ ಗೋವಿಂದು ಎಚ್ಚರಿಕೆ

    ಚಿತ್ರರಂಗ ಗೋಕಾಕ್ ಚಳವಳಿ ಮಾಡಿ ಸರ್ಕಾರವನ್ನೇ ಬೀಳಿಸಿತ್ತು: ಸಾರಾ ಗೋವಿಂದು ಎಚ್ಚರಿಕೆ

    ಬೆಂಗಳೂರು: ಡಿಸಿಎಂ ವಾರ್ನಿಂಗ್ ಮಾಡೋದು ಸರಿಯಲ್ಲ. ಗೋಕಾಕ್ ಚಳವಳಿ ಮಾಡಿ ಚಿತ್ರರಂಗ ಸರ್ಕಾರವನ್ನೇ ಬೀಳಿಸಿತ್ತು ಎಂದು ನಿರ್ಮಾಪಕ ಸಾರಾ ಗೋವಿಂದು (Sa Ra Govindu) ಹೇಳಿದರು.

    ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಭಾಷೆಗೆ ಅನ್ಯಾಯವಾದಾಗ ಸ್ಪಂದಿಸುವುದು ನಮ್ಮ ಕರ್ತವ್ಯವಾಗಿದೆ. ಮಾತು ಅತಿರೇಕಕ್ಕೆ ಹೋಗಬಾರದು. ಕಲಾವಿದರಿಗೆ ಗೌರವ ಕೊಡಬೇಕು. ನಿಮ್ಮ ಮಾತಿನ ನೋವು ನಮಗೆ ಅರ್ಥವಾಗುತ್ತದೆ. ಆದರೆ ನಾವು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮಹದಾಯಿ, ಕಳಸ ಬಂಡೂರಿ ವಿಚಾರಕ್ಕೆ ಬಂದಾಗ ನಾವು ಹೋರಾಟ ಮಾಡಿದ್ದೇವೆ ಎಂದರು. ಇದನ್ನೂ ಓದಿ: ‘ಅರಗಿಣಿ ಮೇಲೆ ‘ವಿದ್ಯಾಪತಿ’ಗೆ ಲವ್- ನಾಗಭೂಷಣ್‌, ಮಲೈಕಾ ರೊಮ್ಯಾಂಟಿಕ್‌ ಸಾಂಗ್‌ ಔಟ್

    ಕನ್ನಡ ಪರ ಸಂಘಟನೆಗಳು ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿತ್ತು. ರಾಜಭವನ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಹಿನ್ನೆಲೆ ರಾಜಭವನಕ್ಕೆ ಮುತ್ತಿಗೆ ಹಾಕಲು ಬಂದ ಕನ್ನಡಪರ ಸಂಘಟನೆಗಳಿಗೆ ಪೊಲೀಸರು ಅವಕಾಶ ನೀಡಲಿಲ್ಲ.  ಇದನ್ನೂ ಓದಿ: ಡಿಕೆಶಿ ಲೂಸ್ ಲೂಸಾಗಿ ಮಾತನಾಡಿರಬಹುದು – ಸಿ.ಟಿ.ರವಿ ಟಕ್ಕರ್

    ಈ ವೇಳೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಪ್ರತಿಕ್ರಿಯಿಸಿ, ಎಂಇಎಸ್ ನಿಷೇಧ, ಮೇಕೆದಾಟು, ಕಳಸಬಂಡೂರಿ ಯೋಜನೆ ಅನುಷ್ಠಾನ, ಕನ್ನಡಿಗರರಿಗೆ ಉದ್ಯೋಗ, ಬೆಳಗಾವಿಯಲ್ಲಿ ಹಲ್ಲೆ ಪ್ರಕರಣ ಇವೆಲ್ಲದರ ವಿರುದ್ಧ ಕನ್ನಡಿಗರ ಸಮರ. ಹೀಗಾಗಿಯೇ ಅಖಂಡ ಕರ್ನಾಟಕ ಬಂದ್ ಕರೆದಿದ್ದೇವೆ. ಮೆಟ್ರೋ ದರ ಏರಿಕೆಯನ್ನು ಸೇರಿಸಿದ್ದೇವೆ. ಬಂದ್ ದಿನ ಮೆಟ್ರೋ ಓಡಬಾರದು. ಗ್ರೇಟರ್ ಬೆಂಗಳೂರು ಮಾಡಿ ತಮಿಳು, ತೆಲುಗು, ಪಂಜಾಬಿಗೊಂದು ಬೆಂಗಳೂರನ್ನು ಕೊಡಲು ನಿರ್ಧರಿಸಿದ್ದಾರೆ ಎಂದು ಕಿಡಿಕಾರಿದರು.

    22 ರಂದು ಮಾರ್ಚ್ ಬಂದ್ ಆಗೇ ಆಗುತ್ತದೆ. ಬಂದ್ ದಿನಾಂಕ ಬದಲಾವಣೆ ಮಾಡಲ್ಲ. ಒಂದು ದಿನ ಕರ್ನಾಟಕಕ್ಕೆ ತ್ಯಾಗ ಮಾಡಿ. ಸಾರಿಗೆ ಸಚಿವರೇ ನೀವಾಗಿ ನೀವೇ ಬಸ್ ನಿಲ್ಲಿಸಬೇಕು. ಪರೀಕ್ಷೆ, ದೇವಸ್ಥಾನ ಅಂತೆಲ್ಲ ನೋಡೋಕೆ ಆಗಲ್ಲ. ಪರೀಕ್ಷೆಯನ್ನು ಮುಂದೂಡಲಿ ಅದು ಅವರ ಕರ್ತವ್ಯ ಎಂದರು. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಕರ್ನಾಟಕ ಎಲ್ಲಿದೆ ಗೊತ್ತಿಲ್ಲ ಅಂದಿದ್ರು – ಶಾಸಕ‌ ರವಿ ಗಣಿಗ ನಿಗಿನಿಗಿ ಕೆಂಡ

  • ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಟಿಕೆಟ್‌ ದರ 200 ರೂ.ಗೆ ನಿಗದಿಪಡಿಸುವಂತೆ ಸಿಎಂಗೆ ಮನವಿ

    ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಟಿಕೆಟ್‌ ದರ 200 ರೂ.ಗೆ ನಿಗದಿಪಡಿಸುವಂತೆ ಸಿಎಂಗೆ ಮನವಿ

    ಬೆಂಗಳೂರು: ಎಲ್ಲಾ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ (Multiplex Theatre) ಟಿಕೆಟ್‌ ದರ 200 ರೂ.ಗೆ ನಿಗದಿಪಡಿಸಿ ಸರ್ಕಾರದಿಂದ ಆದೇ ಹೊರಡಿಸುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಮನವಿ ಸಲ್ಲಿಸಿದೆ.

    ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್, ಸಾ.ರಾ ಗೋವಿಂದು ನೇತೃತ್ವದ ನಿಯೋಗ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ, ಟಿಕೆಟ್‌ ದರ (Cinema Ticket Price) 200 ರೂ.ಗೆ ನಿಗದಿಪಡಿಸುವಂತೆ ಮನವಿ ಮಾಡಿದೆ. ಇದನ್ನೂ ಓದಿ: ಬೆಂಗಳೂರು ಅಭಿವೃದ್ಧಿಗೆ 7,000 ಕೋಟಿ ನೆರವು ನೀಡಲು ವಿಶ್ವಬ್ಯಾಂಕ್‌ ಒಪ್ಪಿದೆ: ಸಿಎಂ

    ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಾ.ರಾ ಗೋವಿಂದು, ಇತ್ತೀಚೆಗೆ ಮಲ್ಟಿಪ್ಲೆಕ್ಸ್ ಸೇರಿದಂತೆ ಚಿತ್ರಮಂದಿರಗಳಲ್ಲಿ ಪ್ರವೇಶ ದರ ದುಬಾರಿಯಾಗಿದ್ದು, ಸಾವಿರದಿಂದ ಒಂದೂವರೆ ಸಾವಿರ ರೂಪಾಯಿವರೆಗೂ ಟಿಕೆಟ್ ದರ ನಿಗದಿಪಡಿಸಲಾಗುತ್ತಿದೆ. ಇದರಿಂದ ಕನ್ನಡ ಪ್ರೇಕ್ಷಕರಿಗೆ ಹೊರೆಯಾಗಿರುತ್ತದೆ. ಹಾಗಾಗಿ ಟಿಕೆಟ್‌ ದರ 200 ರೂ. ಮೀರದಂತೆ ನಿಗದಿಪಡಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಇದೇ ರೀತಿ ಮನವೊಗೆ ವಾರ್ತಾ ಇಲಾಖೆಯ ಮೂಲಕ ಆದೇಶ ಹೊರಡಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಧಿಕಾರ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತೆರವುಗೊಳಿಸಿ ಸರ್ಕಾರ ಟಿಕೆಟ್‌ ದರ ನಿಗದಿಪಡಿಸಬೇಕೆಂದು ಮನವಿ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ದೀಪಾವಳಿಗೆ ಪಟಾಕಿ ಸಿಡಿಸಲು ಸಮಯ ನಿಗದಿ – ಹಸಿರು ಪಟಾಕಿಗೆ ಮಾತ್ರ ಅವಕಾಶ ಎಂದ ಸಿಎಂ

    ದುಬಾರಿ ಪ್ರವೇಶದರದಿಂದ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಲು ಪ್ರೇಕ್ಷಕರು ಗಣನೀಯ ಪ್ರಮಾಣದಲ್ಲಿ ಕುಂಠಿತಗೊಂಡು ಚಿತ್ರ ನಿರ್ಮಾಣಕ್ಕೆ ಹಾಕಿದ ಬಂಡವಾಳ ವಾಪಸ್ ಪಡೆಯಲು ಕಷ್ಟಸಾಧ್ಯವಾಗುತ್ತಿದೆ. ಹಾಗಾಗಿ ಕೂಡಲೇ 200 ರೂ. ಮೀರದಂತೆ ಪ್ರವೇಶದರ ನಿಗದಿಪಡಿಸಲು ಕೋರಿದ್ದೇವೆ. ಈಗಾಗಲೇ ನೆರೆರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ ಮತ್ತು ಚೆನ್ನೈ ಮಲ್ಟಿಪ್ಲೆಕ್ಸ್‌ಗಳಲ್ಲಿ 150 ರೂ. ನಿಂದ 200 ರೂ. ಪ್ರವೇಶದರ ನಿಗದಿಪಡಿಸಲಾಗಿದೆ. ನಮ್ಮಲ್ಲೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ 150 ರೂ.ನಿಂದ 200 ರೂ.ಗೆ ಟಿಕೆಟ್‌ ದರ ನಿಗದಿ ಮಾಡಿ ಸರ್ಕಾರದಿಂದಲೇ ಆದೇಶ ಹೊರಡಿಸುವಂತೆ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿಸಿದ್ದಾರೆ.

  • ಫಿಲ್ಮ್‌ ಚೇಂಬರ್‌ನಿಂದ ರೇಣುಕಾಸ್ವಾಮಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ – ಶಾಶ್ವತ ಪರಿಹಾರದ ಭರವಸೆ!

    ಫಿಲ್ಮ್‌ ಚೇಂಬರ್‌ನಿಂದ ರೇಣುಕಾಸ್ವಾಮಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ – ಶಾಶ್ವತ ಪರಿಹಾರದ ಭರವಸೆ!

    – ಯುವ ನಟರಿಂದ ಚಿತ್ರರಂಗ ದಾರಿ ತಪ್ಪುತ್ತಿದೆ ಎಂದ ಸಾ.ರಾ ಗೋವಿಂದು
    – ದರ್ಶನ್ ಬ್ಯಾನ್ ಬಗ್ಗೆ ಫಿಲ್ಮ್ ಚೆಂಬರ್ ಹೇಳಿದ್ದೇನು?

    ಚಿತ್ರದುರ್ಗ: ದರ್ಶನ್ ಗ್ಯಾಂಗ್‌ನಿಂದ ಹತ್ಯೆಗೀಡಾದ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಅವರ ನಿವಾಸಕ್ಕಿಂದು ಫಿಲ್ಮ್ ಚೆಂಬರ್ (Karnataka Film Chamber) ತಂಡ ಭೇಟಿ ನೀಡಿತ್ತು. ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಧೈರ್ಯತುಂಬಿ, ವಾಣಿಜ್ಯ ಮಂಡಳಿಯಿಂದ 5 ಲಕ್ಷ ರೂ. ಪರಿಹಾರ ನೀಡಲಾಯಿತು. ಮುಂದೆ ಕುಟುಂಬಕ್ಕೆ ಯಾವ ರೀತಿ ಸಹಾಯ ಮಾಡಬೇಕು ಅನ್ನೋದನ್ನ ನೋಡಿಕೊಂಡು ಶಾಶ್ವತ ಪರಿಹಾರ ಕೊಡಿಸುವ ಭರವಸೆಯನ್ನೂ ಚೇಂಬರ್‌ ಅಧ್ಯಕ್ಷರು ನೀಡಿದರು.

    ಬಳಿಕ ಫಿಲ್ಮ್ ಚೇಂಬರ್‌ನಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು (Sa Ra Govindu), ತಪ್ಪು ಮಾಡುವುದು ಮನುಷ್ಯನ ಸಹಜ ಗುಣ ಆದ್ರೆ ಈ ರೀತಿ ಮಾಡಬಾರದಿತ್ತು. ಇದಕ್ಕೆ ಚಿತ್ರರಂಗ ಹೊಣೆ ಅಲ್ಲ ಅವರೊಬ್ಬರಿಂದ ನಾವೆಲ್ಲ ತಲೆ ತಗ್ಗಿಸುವ ಕೆಲಸವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಯುವ ನಟರಿಂದ ಚಿತ್ರರಂಗ ದಾರಿ ತಪ್ಪುತ್ತಿದೆ:
    ಜನರು ಸಿನಿಮಾ ಅಂದ್ರೆ ಅದಕ್ಕೆ ಕೂಡುವ ಗೌರವವೇ ಬೇರೆ ಇತ್ತು. ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್ ಅವರ ಹೆಸರಿಗೂ ಅಷ್ಟೇ ಗೌರವ ಕೊಡುತ್ತಿದ್ದರು. ಆದ್ರೆ ಇತ್ತೀಚೆಗೆ ಯುವ ನಟರಿಂದ ಚಿತ್ರರಂಗ ದಾರಿ ತಪ್ಪುತ್ತಿದೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡಿಸುತ್ತಿದೆ ಎಂದು ಶ್ಲಾಘಿಸಿದರು. ನಾವು ಯಾರ ಪರವಾಗಿಯೂ ಬಂದಿಲ್ಲ. ನೊಂದ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಂದಿದ್ದೇವೆ. ಆ ತಾಯಿಯನ್ನ ನೋಡಿದ್ರೆ ಹೊಟ್ಟೆ ಉರಿಯುತ್ತೆ. ಆ ತಾಯಿ ಕೇಳಿಕೊಳ್ಳುತ್ತಿರೋದು ಒಂದೇ ತಪ್ಪು ಮಾಡಿವರಿಗೆ ಶಿಕ್ಷೆ ನೀಡಬೇಕು ಅಂತ. ಖಂಡಿತ ಅದು ಆಗುತ್ತದೆ ಎಂದರು.

    ಫಿಲ್ಮ್ ಚೆಂಬರ್ ಅಧ್ಯಕ್ಷ ಎನ್.ಎಂ ಸುರೇಶ್ (NM Suresh) ಮಾತನಾಡಿ, ಯಾರೇ ಮಾಡಿದ್ರೂ ತಪ್ಪು ತಪ್ಪೆ. ವಾಣಿಜ್ಯ ಮಂಡಳಿ ಇಂತಹ ತಪ್ಪುಗಳನ್ನು ಖಂಡಿಸಿದೆ. ಮೃತನ ತಂದೆ-ತಾಯಿ ಕಣ್ಣಿರು ನೋಡಿ ನಮಗೂ ಕಣ್ಣಿರು ಬಂತು ಎಂದು ಭಾವುಕರಾದರು.

    ಇದೇ ವೇಳೆ ದರ್ಶನ್ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ನಿರ್ಧಾರ ನಾವು ಮಾಡೊಕೆ ಆಗಲ್ಲ. ಕಲಾವಿದರ ಸಂಘ ನಿರ್ಮಾಪಕರ ಸಂಘ ಕೂಡ ಇದೆ. ಅಲ್ಲಿ ಸಭೆ ಮಾಡಿದ ನಂತರ ನಿರ್ಧಾರ ಮಾಡುತ್ತೆ. ಈ ಹಿಂದೆಯೂ ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಅಂಬರೀಶ್‌ ಅವರಿಗೂ ಫ್ಯಾನ್ಸ್ ಇದ್ದರು. ಆದ್ರೆ ಇತ್ತೀಚಿನ ಫ್ಯಾನ್ಸ್ ಪ್ರಚೋದನೆ ಒಳಗಾಗುತ್ತಿದ್ದಾರೆ. ಪ್ರಚೋದನೆಗೆ ಒಳಗಾಗಿಗೇ ಈ ರೀತಿ ಘಟನೆ ನಡೆದಿದೆ. ಅಭಿಮಾನಿಗಳು ಸಹ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದರು.

  • ಕರ್ನಾಟಕದವರು ಸತ್ತಿಲ್ಲ, ಬದುಕಿದ್ದೇವೆ- ಕಾವೇರಿ ಪರ ಧ್ವನಿಯೆತ್ತಿದ ಸಾ ರಾ ಗೋವಿಂದು

    ಕರ್ನಾಟಕದವರು ಸತ್ತಿಲ್ಲ, ಬದುಕಿದ್ದೇವೆ- ಕಾವೇರಿ ಪರ ಧ್ವನಿಯೆತ್ತಿದ ಸಾ ರಾ ಗೋವಿಂದು

    ರ್ನಾಟಕದಲ್ಲಿ ಕಾವೇರಿದ ಕಾವೇರಿ ಹೋರಾಟ (Cauvery Protest)  ಈ ಬೆನ್ನಲ್ಲೇ ಸೆ.29ರ ಬಂದ್ ಚರ್ಚಿಸಲು ಫಿಲ್ಮ್ ಚೇಂಬರ್‌ಗೆ ಕನ್ನಡ ಪರ ಹೋರಾಟಗಾರ ಸಾ ರಾ ಗೋವಿಂದು (Sa Ra Govindu) ಆಗಮಿಸಿ, ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

    ಫಿಲ್ಮ್ ಚೇಂಬರ್ ಬಗ್ಗೆ ಮಾತನಾಡಿ, ಕಾವೇರಿ ಮಹದಾಯಿ ಮತ್ತು ಮೇಕೆದಾಟು ಯೋಜನೆಗಾಗಿ ಹಿಂದಿನಿಂದಲೂ ದೊಡ್ಡ ಹೋರಾಟ ಮಾಡಿದ್ದೇವೆ. ಅಕ್ಟೋಬರ್, ನವೆಂಬರ್ ಬಂದರೆ ಸಾಕು ಬರೀ ಹೋರಾಟದ ಕೆಲಸ ಆಗಿದೆ. ಈ ವರ್ಷ ಮಳೆಗಾಲ ಇಲ್ಲ ಅಂತ ತಮಿಳುನಾಡಿನವರು ಅರ್ಥ ಮಾಡಿಕೊಳ್ಳಬೇಕು ಎಂದು ಸಾ ರಾ ಗೋವಿಂದು ಮಾತನಾಡಿದರು. ಇದನ್ನೂ ಓದಿ:‘ಗರಡಿ’ ಟೈಟಲ್ ಟ್ರ್ಯಾಕ್ ರಿಲೀಸ್: ಯೋಗರಾಜ್ ಭಟ್ ಸಾಹಿತ್ಯ, ಹರಿಕೃಷ್ಣ ಸಂಗೀತ

    ನಮ್ಮ ಸರ್ಕಾರ ಕೂಡ ತಮಿಳುನಾಡಿಗೆ ನೀರು ಬಿಟ್ಟು ರೈತರಿಗೆ ಅನ್ಯಾಯ ಮಾಡ್ತಿದ್ದಾರೆ ಎಂದು ಗೋವಿಂದು ಖಡಕ್ ಆಗಿ ಮಾತನಾಡಿದರು. ಇದು ನಮ್ಮ ನಾಡಿನ ಪ್ರಶ್ನೆ ಮತ್ತು ರೈತರ ಪ್ರಶ್ನೆಯಾಗಿದೆ. ಕರ್ನಾಟಕದವರು ಸತ್ತಿಲ್ಲ ಇನ್ನೂ ಬದುಕಿದ್ದೇವೆ.

    ಮೋದಿಯವರು ಕಾವೇರಿ ವಿಚಾರದಲ್ಲಿ ಸೇರಿಕೊಂಡಿದ್ದಾರೆ. ಕಾವೇರಿ ಪ್ರಾಧಿಕಾರಕ್ಕೆ ನೀರು ಬಿಡಿ ಅಂತ ಹೇಳಿದ್ದಾರೆ ಎಂದು ನೇರವಾಗಿ ಕುಟುಕಿದ್ದಾರೆ. ಹಾಗಾಗಿಯೇ ಈ ರಾಜ್ಯದ ಜನ ಈ ಬಾರಿ ಬಿಜೆಪಿ ಕೈ ಹಿಡಿದಿಲ್ಲ ಅನ್ಮೋದು. ಈಗ ಕಾವೇರಿ ಪ್ರಾಧಿಕಾರವನ್ನ ಕರ್ನಾಟಕದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಈ ವಿಚಾರದಲ್ಲಿ ಮೋದಿ, ಅಮಿತ್ ಶಾ ಎಲ್ಲರೂ ಇದ್ದಾರೆ ಎಂದು ಗೋವಿಂದು ವಿರೋಧಿಸಿದ್ದಾರೆ.

    ರಾಜಕೀಯ ಅಧಿಕಾರಕ್ಕಾಗಿ ಇಂತಹ ಕೆಲಸ ಮಾಡಬೇಡಿ. ಮೋದಿಯವರೇ ನೀವು ಇದೇ ತರ ಆಟ ಆಡಿದರೆ, ನಿಮ್ಮ ಪಕ್ಷ ನಾಶ ಆಗುತ್ತೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದು ರೈತರ ಕನ್ನಡಿಗರ ಶಾಪ ನೆನಪಿಟ್ಟುಕೊಳ್ಳಿ ಎಂದು ಮಾತನಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮರಾಠ ಅಭಿವೃದ್ಧಿಗೆ 50 ಕೋಟಿ – ಸರ್ಕಾರದ ನಿರ್ಧಾರಕ್ಕೆ ಸಾ.ರಾ ಗೋವಿಂದ್ ವಿರೋಧ

    ಮರಾಠ ಅಭಿವೃದ್ಧಿಗೆ 50 ಕೋಟಿ – ಸರ್ಕಾರದ ನಿರ್ಧಾರಕ್ಕೆ ಸಾ.ರಾ ಗೋವಿಂದ್ ವಿರೋಧ

    – ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ, ಪ್ರತಿಭಟನೆ ಮಾಡ್ತೇವೆ

    ಬೆಂಗಳೂರು: ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ 50 ಕೋಟಿ ರೂಪಾಯಿ ಅನುದಾನ ನೀಡಿರುವುದನ್ನು ನಾನು ವಿರೋಧಿಸುತ್ತೇನೆ ಎಂದು ಸಾ.ರಾ ಗೋವಿಂದ್ ಅವರು ಹೇಳಿದ್ದಾರೆ.

    ಇಂದು ನಗರದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಸಿಎಂ ನಿರ್ಧಾರವನ್ನು ಖಂಡಿಸಿ ನಾಡಿದ್ದು ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ಮಾಡುತ್ತೇವೆ. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ, ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿ ಎಂದು ಮನವಿ ಮಾಡಿದರು.

    ಬೇರೆ ರಾಜ್ಯಗಳಲ್ಲಿ ಭಾಷೆಯನ್ನು ಅಭಿವೃದ್ಧಿ ಮಾಡುವ ಕೆಲಸವಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಆಗಲೇ ಇಲ್ಲ. ಮರಾಠಿ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂಪಾಯಿ ಕೊಟ್ಟಿದ್ದಾರೆ. 2020-21ರಲ್ಲಿ ಕನ್ನಡ ಅನುಷ್ಟಾನ ಮತ್ತು ಅಭಿವೃದ್ಧಿಗಾಗಿ ಪ್ರಯತ್ನ ಮಾಡೋಣ ಅಂತ ಸಿಎಂ ಹೇಳಿದ್ದರು, ಆದರೆ ಇಲ್ಲಿಯವರೆಗೆ 2 ಕೋಟಿ ಕೇಳಿದರೂ ಕನ್ನಡ ಅಭಿವೃದ್ಧಿಗೆ ಕೊಡುವುದಕ್ಕೆ ಆಗಲಿಲ್ಲ. ಆದರೆ ಮರಾಠ ಅಭಿವೃದ್ಧಿಗೆ 50 ಕೋಟಿ ಕೊಟ್ಟಿದ್ದಾರೆ ಎಂದು ಗುಡುಗಿದರು.

    ನಿಮ್ಮ ಈ ನಿರ್ಧಾರಕ್ಕೆ ಸಲಹೆ ಕೊಟ್ಟವರು ಯಾರು? ಮರಾಠಿಗರು ನವೆಂಬರ್ 1ಕ್ಕೆ ಕರಾಳ ದಿನ ಆಚರಣೆ ಮಾಡುತ್ತಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ನೀಡುವ ಮೂಲಕ ಕನ್ನಡ ಪ್ರಾಧಿಕಾರವನ್ನು ಮುಚ್ಚುತ್ತಿರಾ? ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದು ಮಾಡಿ. ಕನ್ನಡ ಪರ ಹೋರಾಟಗಾರನಾಗಿ ನಾನು ವಿರೋಧ ಮಾಡುತ್ತೇನೆ ಎಂದು ಹೇಳಿದರು.

    ಬೆಳಗಾವಿ ಬಸವ ಕಲ್ಯಾಣ ಉಪ ಚುನಾವಣೆ ಘೋಷಣೆಗೂ ಮುನ್ನವೇ, ಮರಾಠ ಸಮುದಾಯ ಓಲೈಸುವ ಸಲುವಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಸಿಎಂ ಬಿಎಸ್‍ವೈ ಆದೇಶ ಹೊರಡಿಸಿದ್ದರು. ಅಲ್ಲದೇ 50 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ.

  • ಚೇತನ್ ಯಾರು – ಸಾರಾ ಗೋವಿಂದು ಗರಂ

    ಚೇತನ್ ಯಾರು – ಸಾರಾ ಗೋವಿಂದು ಗರಂ

    ಬೆಂಗಳೂರು: ನಟಿ ಶೃತಿ ಹರಿಹರನ್ ಅವರಿಗೆ ಯಾವುದೇ ಅನ್ಯಾಯವಾಗಿದ್ದರೆ ನಾವು ಬೆಂಬಲಿಸುತ್ತೇವೆ. ಆದರೆ ಅದಕ್ಕೆ ಒಂದು ರೀತಿ ನೀತಿ ಎನ್ನುವುದು ಇದೆ. ಅದನ್ನು ಬಿಟ್ಟು ಪ್ರಶ್ನೆ ಮಾಡಲು ನಟ ಚೇತನ್ ಯಾರು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಪ್ರಶ್ನೆ ಮಾಡಿದ್ದಾರೆ.

    ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಕೇಳಿ ಬಂದಿರುವ ಮೀಟೂ ಆರೋಪದ ಕುರಿತು ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಲಾಯಿತು. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಾ ಗೋವಿಂದು ಅವರು, ಚಿತ್ರರಂಗದಲ್ಲಿ ಶೂಟಿಂಗ್ ಮುನ್ನ ರಿಹರ್ಸಲ್ ಮಾಡುವುದು ನಿನ್ನೆ ಮೊನ್ನೆಯಾದಲ್ಲ. ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಡಾ. ರಾಜ್ ಕುಮಾರ್ ಅವರೂ ಕೂಡ ಹದಿಮೂರು ಟೇಕ್ ಮಾಡಿರುವ ಉದಾಹರಣೆ ಇದೆ. ಅದಕ್ಕೂ ಮುನ್ನ ರಿಹರ್ಸಲ್ ಮಾಡಿರುವ ಉದಾಹರಣೆಗಳು ಸಾಕಷ್ಟಿದೆ. ಇದೆಲ್ಲವೂ ಸಿನಿಮಾಗಾಗಿ ಅಷ್ಟೇ. ಆದರೆ ನಟಿ ಶೃತಿ ಹರಿಹರನ್ ಅವರಿಗೆ ಯಾವುದೇ ಅನ್ಯಾಯವಾಗಿದ್ದರೆ ನಾವು ಬೆಂಬಲಿಸುತ್ತೇವೆ. ಆದರೆ ಅದಕ್ಕೆ ಒಂದು ರೀತಿ ನೀತಿ ಎಂಬುವುದು ಇದೆ. ಅದನ್ನು ಹಗುರವಾಗಿ ಮಾತನಾಡುವುದು ಒಳ್ಳೆಯ ಲಕ್ಷಣ ಅಲ್ಲ ಎಂದು ಗರಂ ಆದರು.

    70 ವರ್ಷ ಮಾತ್ರವಲ್ಲದೇ ಇಡೀ ಕನ್ನಡ ಚಿತ್ರರಂಗದಲ್ಲಿ ಹಲವು ನಟಿಯರು ಉದ್ಯಮವನ್ನು ಬೆಳೆಸಿದ್ದಾರೆ. ಹಾಗಾದರೆ ಅವರಿಗೆಲ್ಲ ನಾವು ಅವಮಾನ ಮಾಡಿದಂತೆ. ಅದ್ದರಿಂದ ಚೇತನ್ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಅವರ ಹೇಳಿಕೆಯನ್ನು ಬಹಿರಂಗವಾಗಿ ವಾಪಸ್ ತೆಗೆದುಕೊಳ್ಳಬೇಕು. ಸಮಾನತೆ ಎಂದರೆ ಏನು ಎನ್ನುದನ್ನು ನಾವು ಡಾ. ರಾಜ್ ಕುಮಾರ್ ಅವರಿಂದ ಕಲಿತು ಬಂದಿದ್ದೇವೆ. ಯಾರು ಸಮಸ್ಯೆ ಎದುರಿಸಿದರೂ ನಾವು ಪರಿಹಾರ ನೀಡುತ್ತೇವೆ. ನಾವು ಕೂಡ ಹೆಣ್ಣು ಮಕ್ಕಳ ಜೊತೆ ಬೆಳೆದಿದ್ದೇವೆ. ಮೂವತ್ತು ವರ್ಷ ನಾವು ರಾಜ್ ಕುಮಾರ್ ಅವರ ಜೊತೆ ಇದ್ದೇವೆ ಎಂದರು.  ಇದನ್ನು ಓದಿ: ನನ್ನ ಜೊತೆ ಅರ್ಜುನ್ ಸರ್ಜಾ ಕೆಟ್ಟದಾಗಿ ನಡೆದುಕೊಂಡಿಲ್ಲ: ನಟಿ ತಾರಾ

    ಯಾವುದೇ ನಟಿಯಾದರು ನನ್ನನ್ನು ರೆಸಾರ್ಟ್, ಡಿನ್ನರ್ ಗೆ ಕರೆದಿದ್ದಾರೆ ಎಂದು ಹೇಳುವಾಗ ದಾಖಲೆ ಇರಬೇಕು ಅಥವಾ ಆ ಕೂಡಲೇ ಸಿನಿಮಾದಿಂದ ಹೊರ ಬರಬೇಕಾಗಿತ್ತು. ಆಗ ನೀವು ಒಬ್ಬ ಉತ್ತಮ ನಟಿ ಎಂದು ಯಾರು ಕೂಡ ಪ್ರಶ್ನೆ ಮಾಡುವಂತಹ ಸಂದರ್ಭವೇ ಬರುತ್ತಿರಲಿಲ್ಲ. ಅರ್ಜುನ್ ಸರ್ಜಾ ಅವರನ್ನು ಚಿಕ್ಕಂದಿನಿಂದ ನಾವು ನೋಡಿದ್ದೇವೆ. ಸಾಕಷ್ಟು ನಟಿಯರ ಜೊತೆ ಕೆಲಸ ಮಾಡಿದ್ದಾರೆ. ಅಲ್ಲದೇ ತಮಿಳು, ತೆಲುಗು ರಂಗದಲ್ಲಿ 150 ಕ್ಕೂ ಸಿನಿಮಾ ಮಾಡುವ ಅವಕಾಶ ಕನ್ನಡಿಗನಿಗೆ ಸುಮ್ಮನೆ ಬರಲ್ಲ. ಶೃತಿ ಅವರ ಆರೋಪಕ್ಕೆ ಒಂದು ಸಮಿತಿ ನೇಮಿಸಿ ಸಮಸ್ಯೆ ಬರೆಹರಿಸುವ ಕಾರ್ಯ ಮಾಡುತ್ತೇವೆ. ಆದರೆ ಅವರು ಕೋರ್ಟ್ ಗೆ ಹೋಗುವುದಾಗಿ ತಿಳಿಸಿದ್ದಾರೆ. ಒಂದೊಮ್ಮೆ ಕೋರ್ಟ್ ಹೋಗುವ ನಿರ್ಧರವಿದ್ದರೆ ಸುಮ್ಮನೆ ಮಾಧ್ಯಮಗಳನ್ನು ಕರೆದು ಸುದ್ದಿಗೋಷ್ಠಿ ನಡೆಸುವ ಅವಕಶ್ಯಕತೆ ಏನಿದೆ ಎಂದು ಪ್ರಶ್ನೆ ಮಾಡಿದರು. ಇದನ್ನು ಓದಿ: ಸರ್ಜಾ ವಿರುದ್ಧ ಸೇಡಿಗಾಗಿ ಶೃತಿ ಹರಿಹರನ್ ಪರ ನಿಂತ್ರಾ ನಟ ಚೇತನ್?

    ಈ ಹಿಂದೆಯೂ ಸಿನಿಮಾ ಕುರಿತು ಸಮಸ್ಯೆಗಳನ್ನು ನಮ್ಮಲ್ಲಿ ಚರ್ಚೆ ನಡೆಸಿ ಪರಿಹಾರ ನೀಡಿದ್ದೇವೆ. ಈ ಸಮಸ್ಯೆಯೂ ಕೂಡ ಚರ್ಚೆ ನಡೆಸಿ ಬರೆಹರಿಸುತ್ತೇವೆ. ಸಮಸ್ಯೆಯನ್ನು ಬಹಿರಂಗವಾಗಿ ಚರ್ಚೆ ಮಾಡುವುದು ಬೇಡ. ಯಾರು ಸಮಸ್ಯೆ ಎದರುಸಿದ್ದರೂ ನೇರ ಇಲ್ಲಿಗೆ ಬನ್ನಿ. ಸಮಸ್ಯೆ ಬಗ್ಗೆ ಚರ್ಚೆ ಮಾಡೋಣ. ಆದರೆ ಕೋರ್ಟ್ ನಲ್ಲಿ ದೂರು ದಾಖಲಿಸುವುದಾದರೆ ನಮಗೆ ತೊಂದರೆ ಇಲ್ಲ. ಆದರೆ ಸದ್ಯ ಅರ್ಜುನ್ ಸರ್ಜಾ ಅವರಿಂದ ದೂರು ಬಂದಿರುವುರಿಂದ ಇಲ್ಲಿ ಚರ್ಚೆ ನಡೆಸಿದ್ದೇವೆ ಎಂದರು.  ಇದನ್ನು ಓದಿ: ಶೃತಿ ಹರಿಹರನ್ #MeToo ಹಿಂದಿನ ಅಸಲಿ ಕಹಾನಿ ಬಿಚ್ಚಿಟ್ಟ ಭಾಮಾ ಹರೀಶ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲಕ್ಷ್ಮೀ ಹೆಬ್ಬಾಳ್ಕರ್ ಕನ್ನಡಿಗರ ಪಾಲಿಗೆ ಪಿಶಾಚಿ, ದೆವ್ವ: ವಾಟಾಳ್ ನಾಗರಾಜ್

    ಲಕ್ಷ್ಮೀ ಹೆಬ್ಬಾಳ್ಕರ್ ಕನ್ನಡಿಗರ ಪಾಲಿಗೆ ಪಿಶಾಚಿ, ದೆವ್ವ: ವಾಟಾಳ್ ನಾಗರಾಜ್

    ಬೆಂಗಳೂರು: ಲಕ್ಷ್ಮಿ ಹೆಬ್ಬಾಳ್ಕರ್ ಕೆಟ್ಟ ಮಹಿಳೆಯಾಗಿದ್ದು, ಕನ್ನಡಿಗರ ಪಾಲಿಗೆ ಪಿಶಾಚಿ ಮತ್ತು ದೆವ್ವ ಎಂದು ವಾಟಾಳ್ ನಾಗರಾಜ್ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಮಹಾರಾಷ್ಟ್ರಕ್ಕೆ ಜೈ ಎನ್ನುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕನ್ನಡ ಒಕ್ಕೂಟ, ಪ್ರವೀಣ್ ಶೆಟ್ಟಿ ಬಣ, ಕರವೇ ಕಾರ್ಯಕರ್ತರು, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನಗರದ ಮೌರ್ಯ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಮತ್ತು ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್‍ಗೆ ಇಪ್ಪತ್ತೆಂಟು ಗಂಟೆಗಳ ಕಾಲ ಗಡುವು ನೀಡುತ್ತೇವೆ. ಹೆಬ್ಬಾಳ್ಕರ್ ಅವರನ್ನು ಮಹಿಳಾ ಅಧ್ಯಕ್ಷ ಗಿರಿಯಿಂದ ಕೆಳಗಿಳಿಸಿ ಇಲ್ಲದಿದ್ದರೆ ನಾವು ಬೆಳಗಾವಿಯಿಂದ ಗಡಿಪಾರು ಮಾಡುವುದ್ದಕ್ಕೆ ಜಿಲ್ಲಾಡಳಿತಕ್ಕೆ ಹೇಳುತ್ತೇವೆ ಎಂದು ಆಗ್ರಹಿಸಿದರು.

     

    ಒಂದು ವೇಳೆ ಹುದ್ದೆಯಿಂದ ಕೆಳಗಡೆ ಇಳಿಸದೇ ಇದ್ದಲ್ಲಿ, ಬೆಳಗಾವಿಯ ಕಿತ್ತೂರು ಚೆನ್ನಮ್ಮ ಸರ್ಕಲ್‍ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಆಕೆಗೆ ತಲೆ ಸರಿಯಿಲ್ಲ ಆಕೆಯನ್ನು ನಿಮ್ಹಾನ್ಸ್‍ಗೆ ಸೇರಿಸಬೇಕು ಎಂದು ವಾಟಾಳ್ ನಾಗರಾಜ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ ಗೋವಿಂದು ಮಾತನಾಡಿ, ಲಕ್ಷ್ಮೀ ಹೆಬ್ಬಾಳ್ಕರ್‍ಗೆ ನಾಚಿಕೆಯಾಗಬೇಕು. ಕನ್ನಡಿಗರ ಮಾನ ಮರ್ಯಾದೆ ಹರಾಜು ಹಾಕಿದ್ದಾರೆ. ಅವರ ನಾಟಕದ ಕ್ಷಮೆ ನಮಗೆ ಬೇಕಾಗಿಲ್ಲ, ಅದನ್ನು ನಾವು ಒಪ್ಪಿಕೊಳ್ಳುವುದ್ದಿಲ್ಲ. ಲಕ್ಷ್ಮೀ ಅವರನ್ನು ಗಡಿಪಾರು ಮಾಡಲಿ ಮತ್ತು ಅವರ ರಾಜೀನಾಮೆ ಪಡೆದುಕೊಳ್ಳಬೇಕು. ಮುಖ್ಯಮಂತ್ರಿಗಳೇ, ಪರಮೇಶ್ವರ್, ದಿನೇಶ್ ಗುಂಡುರಾವ್ ಹೆಬ್ಬಾಳ್ಕರ್ ವಿರುದ್ಧ ಏನ್ ಕ್ರಮ ಕೈಗೊಳ್ಳುತ್ತೀರಾ ಎಂದು ಪ್ರಶ್ನಿಸಿ ಕಿಡಿಕಾರಿದರು.

    ಇಂಧನ ಸಚಿವ ಡಿಕೆ ಶಿವಕುಮಾರ್ ಲಕ್ಷ್ಮಿ ಅವರ ಸಮರ್ಥನೆಗೆ ಇಳಿದಿದ್ದಾರೆ. ನಿಮಗೆ ಮರಾಠಿ ಬರುತ್ತಾ? ಭಾಷೆ ಬರದೆ ಇದ್ದರೆ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತಿರಾ? ಗ್ಲಾಮರ್ ಮತ್ತು ದುಡ್ಡು ಇದೆ ಅಂತಾ ಆಟವಾಡುತ್ತಿದ್ದೀರ? ಕನ್ನಡ ಪರ ಏನು ಕೆಲಸ ಮಾಡಿದ್ದೀರಾ? ಸಂಬಾಜಿ ಪಾಟೀಲ್ ಕನ್ನಡಿಗರ ಶವ ಯಾತ್ರೆ ಮಾಡುತ್ತೀನಿ ಎಂದಾಗ ಎಲ್ಲಿ ಹೋಗಿತ್ತು ನಿಮ್ಮ ಆಕ್ರೋಶ? ಶನಿವಾರ ಬೆಳಗ್ಗೆ ಬೆಳಗಾವಿಗೆ ಹೋಗಿ ದೊಡ್ಡ ಹೋರಾಟ ಮಾಡುತ್ತೇವೆ. ಆಕೆಯನ್ನು ಪಕ್ಷದಿಂದ ಕಿತ್ತು ಹಾಕದಿದ್ದರೆ ಉಗ್ರಹೋರಾಟ ನಡೆಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.